ಇಲ್ಲಿವೆ ಟಾಟಾ SUVಯ ರೆಡ್ ಡಾರ್ಕ್ ಆವೃತ್ತಿಗಳು
ಟಾಟಾ ನೆಕ್ಸಾನ್ 2020-2023 ಗಾಗಿ ansh ಮೂಲಕ ಫೆಬ್ರವಾರಿ 23, 2023 03:05 pm ರಂದು ಪ್ರಕಟಿಸಲಾಗಿದೆ
- 63 Views
- ಕಾಮೆಂಟ್ ಅನ್ನು ಬರೆಯಿರಿ
ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯ ಈ ವಿಶೇಷ ಆವೃತ್ತಿಗಳು ಕೆಲವು ಹೆಚ್ಚುವರಿ ಫೀಚರ್‌ಗಳೊಂದಿಗೆ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್‌ನಲ್ಲಿ ರೆಡ್ ಇನ್‌ಸರ್ಟ್‌ಗಳನ್ನು ಹೊಂದಿವೆ
ಟಾಟಾ ಆಟೋ ಎಕ್ಸ್‌ಪೋ 2023 ರಲ್ಲಿ ಹ್ಯಾರಿಯರ್ ಮತ್ತು ಸಫಾರಿಯ ರೆಡ್ ಡಾರ್ಕ್ ಎಡಿಷನ್‌ಗಳನ್ನು ಅನಾವರಣಗೊಳಿಸಿದೆ ಹಾಗೂ ಈ ವಿಶೇಷ ಆವೃತ್ತಿಯು ನೆಕ್ಸಾನ್‌ನಲ್ಲಿಯೂ ಬರಲಿದೆ ಎಂದು ಈ ಕಾರುತಯಾರಕರು ಹೇಳಿದ್ದಾರೆ.
ಇತ್ತೀಚಿನ ವಿಶೇಷ ಆವೃತ್ತಿ ಟಾಟಾಗಳು ತಮ್ಮ ವಿಶಿಷ್ಟವಾದ ನೋಟದ ನವೀಕರಣ ಹಾಗೂ ಹೊಸ ಫೀಚರ್‌ಗಳೊಂದಿಗೆ ಅಂತಿಮವಾಗಿ ಬಂದಿವೆ.
ಬೆಲೆ
ರೆಡ್ ಡಾರ್ಕ್ ಆವೃತ್ತಿಗಳ ಬೆಲೆ ಈ ಕೆಳಗಿನಂತಿವೆ:
ಟಾಟಾ ನೆಕ್ಸಾನ್ |
ಟಾಟಾ ಹ್ಯಾರಿಯರ್ |
ಟಾಟಾ ಸಫಾರಿ |
XZ+ LUXS ರೆಡ್ ಡಾರ್ಕ್ ಪೆಟ್ರೋಲ್ - ರೂ 12.35 ಲಕ್ಷ |
XZ+ ರೆಡ್ ಡಾರ್ಕ್ - ರೂ 21.77 ಲಕ್ಷ |
XZ+ ರೆಡ್ ಡಾರ್ಕ್ - ರೂ 22.61 ಲಕ್ಷ / ರೂ 22.71 ಲಕ್ಷ (6S) |
XZA+ LUXS ರೆಡ್ ಡಾರ್ಕ್ ಪೆಟ್ರೋಲ್ - ರೂ 13.00 ಲಕ್ಷ |
XZA+ ರೆಡ್ ಡಾರ್ಕ್ - ರೂ 23.07 ಲಕ್ಷ |
XZA+ ರೆಡ್ ಡಾರ್ಕ್ - Rs 23.91 ಲಕ್ಷ / ರೂ 24.01 ಲಕ್ಷ (6S) |
XZ+ ರೆಡ್ ಡಾರ್ಕ್ ಡೀಸೆಲ್ - ರೂ 13.70 ಲಕ್ಷ |
XZA+(O) ರೆಡ್ ಡಾರ್ಕ್ - ರೂ 24.07 ಲಕ್ಷ |
XZA+(O) ರೆಡ್ ಡಾರ್ಕ್ - ರೂ 24.91 ಲಕ್ಷ / ರೂ 25.01 ಲಕ್ಷ (6S) |
XZA+ ರೆಡ್ ಡಾರ್ಕ್ ಡೀಸೆಲ್ - ರೂ 14.35 ಲಕ್ಷ |
ಎಲ್ಲವೂ ಎಕ್ಸ್-ಶೋರೂಂ ಬೆಲೆಗಳು
ನೆಕ್ಸಾನ್‌ನ ಈ ರೆಡ್ ಡಾರ್ಕ್ ಆವೃತ್ತಿಗಳು ಟಾಪ್ ಎಂಡ್‌ನ XZ+ LUXS ಟ್ರಿಮ್‌ಗಳನ್ನು ಆಧರಿಸಿದೆ ಮತ್ತು ಅನುಗುಣವಾದ ವೇರಿಯೆಂಟ್ ಮೇಲೆ ರೂ. 34,000 ನಷ್ಟು ಪ್ರೀಮಿಯಂ ಅನ್ನು ಹೊಂದಿದೆ. ಹ್ಯಾರಿಯರ್ ಮತ್ತು ಸಫಾರಿಗೆ ಈ ವಿಶೇಷ ಆವೃತ್ತಿಯು XZ+ ನ ನಂತರದಲ್ಲಿ ಬರುತ್ತದೆ ಹಾಗೂ ರೂ 45,000 ರಷ್ಟು ಹೆಚ್ಚಾಗುತ್ತದೆ. ಈ ರೆಡ್ ಡಾರ್ಕ್ ಆವೃತ್ತಿ ಮಾಡೆಲ್ ಅನ್ನು ರೂ. 30,000 ಕ್ಕೆ ಯಾವುದೇ ಅಧಿಕೃತ ಟಾಟಾ ಡೀಲರ್‌ಶಿಪ್‌ನಲ್ಲಿ ನೀವು ಬುಕ್ ಮಾಡಬಹುದು.
ಹೊರಭಾಗದಲ್ಲಿ ಹೊಸತೇನಿದೆ
ಮೋಟರ್ ಶೋನಲ್ಲಿ ತೋರಿಸಿದಂತೆ, ಹ್ಯಾರಿಯರ್ ಮತ್ತು ಸಫಾರಿಯ ಗ್ರಿಲ್‌ಗಳಲ್ಲಿ ಕೆಂಪು ಬಣ್ಣ ಅಂತಃಕ್ಷಿಪ್ತವಾಗಿದೆ, ಕೆಂಪು ಬಣ್ಣರದ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಫ್ರಂಟ್ ಫೆಂಡರ್‌ನಲ್ಲಿ #ಡಾರ್ಕ್ ಬ್ಯಾಡ್ಜಿಂಗ್ ಕೆಂಪು ಬಣ್ಣದಲ್ಲಿದೆ. ಆ 18-ಇಂಚಿನ ಅಲಾಯ್‌ಗಳನ್ನು ಚಾರ್ಕೋಲ್ ಬ್ಲ್ಯಾಕ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಈ ಕಾರುತಯಾರಕರು ನೆಕ್ಸಾನ್‌ಗೂ ಇದನ್ನೇ ನೀಡಿದ್ದಾರೆ ಆದರೆ 16-ಇಂಚು ವ್ಹೀಲ್‌ಗಳು ಇನ್ನೂ ಬ್ಲ್ಯಾಕ್‌ಸ್ಟೋನ್ ಬಣ್ಣದ್ದಾಗಿದ್ದು ರೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿರುವುದಿಲ್ಲ. ಕ್ಯಾಬಿನ್‌ನಲ್ಲಿ ಈ ಕೆಂಪು ಸ್ಪರ್ಷವು ಹೆಚ್ಚು ಕಮ್ಮಿ ಎಲ್ಲಾ ಭಾಗಗಳಲ್ಲಿ ಇವೆ ಮತ್ತು ಈಗ ಬ್ಲ್ಯಾಕ್ ಡ್ಯಾಶ್‌ಬೋರ್ಡ್ ಮತ್ತು ರೆಡ್ ಇನ್‌ಸರ್ಟ್‌ಗಳೊಂದಿಗೆ ಕಾರ್ನೇಲಿಯನ್ ರೆಡ್ ಥೀಮ್ ಅನ್ನು ಹೊಂದಿದೆ.
ಹೊಸ ಫೀಚರ್‌ಗಳು
ದೊಡ್ಡ SUVಗಳು ಫೀಚರ್ ನವೀಕರಣಗಳನ್ನೂ ಪಡೆದಿದ್ದು, ಇದು ಏಳು ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಒಂದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಡಿಸ್‌ಪ್ಲೇ, ರೆಡ್ ಆ್ಯಂಬಿಯೆಂಟ್ ಲೈಟಿಂಗ್, ಮೆಮೊರಿ ಮತ್ತು ವೆಲ್‌ಕಮ್ ಫಂಕ್ಷನ್‌ನೊಂದಿಗೆ ಸಿಕ್ಸ್ ವೇ ಪವರ್ಡ್ ಡ್ರೈವರ್ ಸೀಟ್, ಒಂದು 360- ಕ್ಯಾಮರಾ ಮತ್ತು ADAS ಫೀಚರ್‌ಗಳನ್ನು ಒಳಗೊಂಡಿದೆ. ಸಫಾರಿಯು ಫೋರ್-ವೇ ಪವರ್- ಅಡ್ಜಸ್ಟಿಬಲ್ ಕೋ-ಡ್ರೈವರ್ ಸೀಟ್‌ನೊಂದಿಗೆ ಇನ್ನೂ ಹೆಚ್ಚು ಫೀಚರ್‌ಗಳನ್ನು ಒಳಗೊಂಡಿದ್ದು, ಈಗ ಇಲೆಕ್ಟ್ರಿಕ್ ಬಾಸ್ ಮೋಡ್ (ಸೀಟ್ ಮುಂದಕ್ಕೆ ಸ್ಲೈಡ್ ಆದಂತೆ ಹಿಂಬದಿ ಪ್ರಯಾಣಿಕರ ಲೆಗ್ ರೂಂ ತೆರೆದುಕೊಳ್ಳುತ್ತದೆ) ಅಲ್ಲದೇ ಪನೋರಮಿಕ್ ಸನ್‌ರೂಫ್‌ಗೆ ಮೂಡ್ ಲೈಟಿಂಗ್ ಅನ್ನೂ ಪಡೆದಿದೆ.
ಈ ರೆಡ್-ಡಾರ್ಕ್ ಆವೃತ್ತಿಯಲ್ಲಿ ಸಬ್-ಫೋರ್-ಮೀಟರ್ ನೆಕ್ಸಾನ್ ಯಾವುದೇ ಫೀಚರ್ ನವೀಕರಣಗಳನ್ನು ಹೊಂದಿರುವುದಿಲ್ಲ.
ಅದೇ ಪವರ್‌ಟ್ರೇನ್‌ಗಳು
ನಿರ್ದಿಷ್ಟತೆಗಳು |
ಹ್ಯಾರಿಯರ್/ ಸಫಾರಿ |
ನೆಕ್ಸಾನ್ |
|
ಇಂಜಿನ್ |
2.0-ಲೀಟರ್ ಡೀಸೆಲ್ |
1.2-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
170PS |
120PS |
110PS |
ಟಾರ್ಕ್ |
350Nm |
170Nm |
260Nm |
ಟ್ರಾನ್ಸ್‌ಮಿಶನ್ |
6-ಸ್ಪೀಡ್ MT / 6- ಸ್ಪೀಡ್ AT |
6- ಸ್ಪೀಡ್ MT / 6- ಸ್ಪೀಡ್ AMT |
6- ಸ್ಪೀಡ್ MT / 6- ಸ್ಪೀಡ್ AMT |
ಎಲ್ಲಾ ಮೂರು SUVಗಳು ಒಂದೇ ರೀತಿಯ ಇಂಜಿನ್‌ಗಳನ್ನು ಹೊಂದಿದ್ದು ಅವುಗಳ ಔಟ್‌ಪುಟ್‌ನಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಹ್ಯಾರಿಯರ್ ಮತ್ತು ಸಫಾರಿ 2.0-ಲೀಟರ್ ಡೀಸೆಲ್ ಇಂಜಿನ್ ಅನ್ನೇ ಬಳಸುತ್ತವೆ ಮತ್ತು ನೆಕ್ಸಾನ್ 1.2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಮತ್ತು 1.5-ಲೀಟರ್ ಡೀಸೆಲ್ ಯೂನಿಟ್ ಅನ್ನೇ ನೀಡುತ್ತದೆ. ಈ ಇಂಜಿನ್‌ಗಳು ಮುಂಬರುವ ಎಮಿಶನ್ ಮಾನದಂಡಗಳಿಗೆ ಅನುಗುಣವಾಗಿರುತ್ತವೆ.
ಪ್ರತಿಸ್ಪರ್ಧಿಗಳು
ಈ ವಿಶೇಷ ಆವೃತ್ತಿಗಳಿಗೆ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ ಆದರೆ ಈಗಾಗಲೇ ಇರುವ ಸ್ಪರ್ಧಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ನೆಕ್ಸಾನ್‌ನ ಪ್ರತಿಸ್ಪರ್ಧಿಗಳೆಂದರೆ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಹಾಗೂ ಮಾರುತಿ ಬ್ರೆಝಾ. ಹ್ಯಾರಿಯರ್ ಮತ್ತು ಸಫಾರಿಗಳಿಗೆ ಮಹೀಂದ್ರಾ XUV700, MG ಹೆಕ್ಟರ್/ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಝಾರ್ ಪ್ರತಿಸ್ಪರ್ಧಿಗಳಾಗಿವೆ.
ಇದನ್ನೂ ಓದಿ: ಟಾಟಾದ ICE ಲೈನ್ಅಪ್ ಈಗ ಪೂರೈಸುತ್ತದೆ BS6 ಹಂತ II ಎಮಿಷನ್ ಮಾನದಂಡಗಳು
ಇನ್ನಷ್ಟು ಓದಿ : ನೆಕ್ಸಾನ್ AMT
0 out of 0 found this helpful