ಈ ಮಾರ್ಚ್‌ನಲ್ಲಿ Honda ಕಾರುಗಳ ಖರೀದಿಯ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಉಳಿಸಿ
ಹೋಂಡಾ ಎಲಿವೇಟ್ ಕೂಡ ಸೀಮಿತ ಅವಧಿಯ ಕ್ಯಾಶ್ ಡಿಸ್ಕೌಂಟ್ ಅನ್ನು ಪಡೆದಿದೆ
-
ಹೋಂಡಾ ಸಿಟಿಯ ಖರೀದಿಯೊಂದಿಗೆ ಗರಿಷ್ಠ ರೂ 1 ಲಕ್ಷದವರೆಗಿನ ಕೊಡುಗೆಗಳನ್ನು ನೀಡಲಾಗುತ್ತಿದೆ.
-
ಅಮೇಜ್ ಅನ್ನು ರೂ. 94,000 ಗಿಂತ ಹೆಚ್ಚಿನ ರಿಯಾಯಿತಿಯೊಂದಿಗೆ ಪಡೆಯಬಹುದು.
-
ಹೋಂಡಾದ ಕಾಂಪ್ಯಾಕ್ಟ್ SUV ಆಗಿರುವ ಎಲಿವೇಟ್, ರೂ 50,000 ವರೆಗಿನ ಸೀಮಿತ ಸಮಯದ ಕೊಡುಗೆಯೊಂದಿಗೆ ಬರುತ್ತಿದೆ.
-
ಹೋಂಡಾ ತನ್ನ ಸಿಟಿ ಮತ್ತು ಎಲಿವೇಟ್ ವಿಶೇಷ ಎಡಿಷನ್ ಗಳಲ್ಲಿ ಗರಿಷ್ಠ ರಿಯಾಯಿತಿಗಳನ್ನು ನೀಡುತ್ತಿದೆ.
-
ಎಲ್ಲಾ ಕೊಡುಗೆಗಳು ಮಾರ್ಚ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ನೀವು ಈ ಮಾರ್ಚ್ ತಿಂಗಳಿನಲ್ಲಿ ಹೋಂಡಾ ಕಾರನ್ನು ಖರೀದಿಸಲು ನೋಡುತ್ತಿದ್ದರೆ, ಹೋಂಡಾ ತನ್ನ ಸಿಟಿ ಹೈಬ್ರಿಡ್ ಅನ್ನು ಹೊರತುಪಡಿಸಿ - ಉಳಿದೆಲ್ಲ ಮಾಡೆಲ್ ಗಳಾದ ಹೋಂಡಾ ಸಿಟಿ, ಹೋಂಡಾ ಅಮೇಜ್ ಮತ್ತು ಹೋಂಡಾ ಎಲಿವೇಟ್ ಮೇಲೆ ಕೊಡುಗೆಗಳನ್ನು ನೀಡುತ್ತಿದೆ. ಕೊಡುಗೆಗಳಲ್ಲಿ ಕ್ಯಾಶ್ ಡಿಸ್ಕೌಂಟ್ ಗಳು ಮತ್ತು ವಿನಿಮಯ ಮತ್ತು ಲಾಯಲ್ಟಿ ಬೋನಸ್‌ಗಳು ಸೇರಿವೆ. ಮಾಡೆಲ್-ವಾರು ಆಫರ್ ವಿವರಗಳು ಇಲ್ಲಿವೆ.
ಹೋಂಡಾ ಸಿಟಿ
ಕೊಡುಗೆಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
ರೂ. 30,000 ವರೆಗೆ |
ಉಚಿತ ಆಕ್ಸೆಸರಿಗಳು (ಐಚ್ಛಿಕ) |
ರೂ. 32,916 ವರೆಗೆ |
ವಿನಿಮಯ ಬೋನಸ್ |
ರೂ. 15,000 ವರೆಗೆ |
ಹೋಂಡಾ ಕಾರ್ ವಿನಿಮಯ ಬೋನಸ್ |
ರೂ. 6,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 4,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ರೂ. 8,000 ವರೆಗೆ |
ಸ್ಪೆಷಲ್ ಕಾರ್ಪೊರೇಟ್ ಡಿಸ್ಕೌಂಟ್ |
ರೂ. 20,000 ವರೆಗೆ |
ಎಲೆಗೆಂಟ್ ಎಡಿಷನ್ ಗೆ ವಿಶೇಷ ಪ್ರಯೋಜನ |
ರೂ. 36,500 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ.1.212 ಲಕ್ಷದವರೆಗೆ |
-
ಗ್ರಾಹಕರು ಹೋಂಡಾ ಸಿಟಿಯೊಂದಿಗೆ ಕ್ಯಾಶ್ ಡಿಸ್ಕೌಂಟ್ ಅಥವಾ ಉಚಿತ ಆಕ್ಸೆಸರಿಗಳ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಮೇಲೆ ಪಟ್ಟಿ ಮಾಡಲಾದ ಪ್ರಯೋಜನಗಳು ಹೋಂಡಾ ಸೆಡಾನ್‌ನ ಎಲ್ಲಾ ವೇರಿಯಂಟ್ ಗಳ ಮೇಲೆ ಲಭ್ಯವಿದೆ.
-
ಅಸ್ತಿತ್ವದಲ್ಲಿರುವ ಹೋಂಡಾ ಗ್ರಾಹಕರು ರೂ. 4,000 ಲಾಯಲ್ಟಿ ಬೋನಸ್ ಜೊತೆಗೆ ರೂ. 6,000 ಹೆಚ್ಚುವರಿ ವಿನಿಮಯ ಬೋನಸ್ ಅನ್ನು ಕೂಡ ಪಡೆಯಬಹುದು.
-
ಸಿಟಿಯೊಂದಿಗೆ ರೂ. 8,000 ಸ್ಟಾಂಡರ್ಡ್ ಕಾರ್ಪೊರೇಟ್ ರಿಯಾಯಿತಿಯ ಮೇಲೆ ಹೆಚ್ಚುವರಿ ಕಾರ್ಪೊರೇಟ್ ರಿಯಾಯಿತಿಯನ್ನು ಕೂಡ ನೀಡಲಾಗುತ್ತಿದೆ.
-
ಹೋಂಡಾ ತನ್ನ ಸಿಟಿಯ ಎಲೆಗೆಂಟ್ ಎಡಿಷನ್ ಮೇಲೆ ರೂ. 36,500 ವಿಶೇಷ ರಿಯಾಯಿತಿಯನ್ನು ಕೂಡ ನೀಡುತ್ತಿದೆ.
-
VX ಮತ್ತು ZX ವೇರಿಯಂಟ್ ಗಳನ್ನು ಖರೀದಿರುವ ಗ್ರಾಹಕರು ರೂ. 13651 ಬೆಲೆ ಮೌಲ್ಯದ ನಾಲ್ಕನೇ ಮತ್ತು ಐದನೇ ವರ್ಷಕ್ಕೆ ವಿಸ್ತೃತ ವಾರಂಟಿಯನ್ನು ಪಡೆಯುತ್ತಾರೆ.
-
ಸಿಟಿ ಬೆಲೆಯು ರೂ.11.71 ಲಕ್ಷದಿಂದ ರೂ.16.19 ಲಕ್ಷದವರೆಗೆ ಇದೆ
ಇದನ್ನು ಕೂಡ ಓದಿ: MG ಕಾಮೆಟ್ EV ಮತ್ತು ZS EV ಗಳಿಗೆ ವೇರಿಯಂಟ್ ಅಪ್ಡೇಟ್, ಹೊಸ ಫೀಚರ್ ಗಳು ಮತ್ತು ರಿವೈಸ್ ಆಗಿರುವ ಬೆಲೆಗಳನ್ನು ಪಡೆದಿವೆ.
ಹೋಂಡಾ ಅಮೇಜ್
ಕೊಡುಗೆಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
ರೂ. 35,000 ವರೆಗೆ |
ಉಚಿತ ಆಕ್ಸೆಸರಿಗಳು (ಐಚ್ಛಿಕ) |
ರೂ. 41,643 ವರೆಗೆ |
ವಿನಿಮಯ ಬೋನಸ್ |
ರೂ. 10,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 4,000 ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
ರೂ. 6,000 ವರೆಗೆ |
ಸ್ಪೆಷಲ್ ಕಾರ್ಪೊರೇಟ್ ಡಿಸ್ಕೌಂಟ್ |
ರೂ. 20,000 ವರೆಗೆ |
ಎಲೈಟ್ ಎಡಿಷನ್ ಗೆ ವಿಶೇಷ ಪ್ರಯೋಜನ |
ರೂ. 30,000 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ. 94,346 ವರೆಗೆ |
-
ಹೋಂಡಾ ಅಮೇಜ್‌ನಲ್ಲಿ, ಗ್ರಾಹಕರು ಕ್ಯಾಶ್ ಡಿಸ್ಕೌಂಟ್ ಅಥವಾ ಉಚಿತ ಆಕ್ಸೆಸರಿ ಗಳ ನಡುವೆ ಆಯ್ಕೆ ಮಾಡಿಕೊಳ್ಳಬಹುದು.
-
ಮೇಲೆ ತಿಳಿಸಲಾದ ಕ್ಯಾಶ್ ಡಿಸ್ಕೌಂಟ್ ಮತ್ತು ಐಚ್ಛಿಕ ಉಚಿತ ಆಕ್ಸೆಸರಿಗಳ ಕೊಡುಗೆಯು ಅಮೇಜ್‌ನ ಮಿಡ್-ಸ್ಪೆಕ್ S ವೇರಿಯಂಟ್ ನಲ್ಲಿ ಮಾತ್ರ ಲಭ್ಯವಿದೆ.
-
ಟಾಪ್-ಸ್ಪೆಕ್ VX ವೇರಿಯಂಟ್ ಮತ್ತು ಎಲೈಟ್ ಎಡಿಷನ್ ಗೆ, ಕ್ಯಾಶ್ ಡಿಸ್ಕೌಂಟ್ ರೂ 20,000 ಕ್ಕೆ ಬಂದಿಳಿಯುತ್ತದೆ, ಹಾಗೆಯೇ ಉಚಿತ ಆಕ್ಸೆಸರಿಗಳ ಕೊಡುಗೆ ರೂ. 24,346 ಕ್ಕೆ ಇಳಿಯುತ್ತದೆ.
-
ಅಮೇಜ್‌ನ ಎಲೈಟ್ ಎಡಿಷನ್ ರೂ. 30,000 ವಿಶೇಷ ರಿಯಾಯಿತಿಯೊಂದಿಗೆ ಬರುತ್ತದೆ. ಹಾಗೆ ನೋಡಿದರೆ, ಇದು ಮಾರ್ಚ್ 2024 ರಲ್ಲಿ ಹೊಸ ಅಮೇಜ್ ಖರೀದಿಯ ಮೇಲೆ ನೀವು ಪಡೆಯಬಹುದಾದ ಅತ್ಯಧಿಕ ಉಳಿತಾಯವಾಗಿದೆ.
-
ಅಮೇಜ್‌ನ ಬೇಸ್-ಸ್ಪೆಕ್ E ವೇರಿಯಂಟ್ ನೊಂದಿಗೆ, ಗ್ರಾಹಕರು ರೂ 10,000 ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 12,349 ಮೌಲ್ಯದ ಆಕ್ಸೆಸರಿಗಳನ್ನು ಪಡೆಯಬಹುದು.
-
ಹೋಂಡಾ ಅಮೇಜ್ ಬೆಲೆಯು ರೂ.7.16 ಲಕ್ಷ ಮತ್ತು ರೂ.9.92 ಲಕ್ಷದ ನಡುವೆ ಇದೆ.
ಇದನ್ನು ಕೂಡ ಓದಿ: MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಬೆಲೆಯನ್ನು ರಿವೈಸ್ ಮಾಡಲಾಗಿದೆ, ಈಗ ರೂ. 13.99 ಲಕ್ಷದಿಂದ ಪ್ರಾರಂಭವಾಗುತ್ತದೆ
ಹೋಂಡಾ ಎಲಿವೇಟ್
ಕೊಡುಗೆಗಳು |
ಮೊತ್ತ |
ಸೀಮಿತ ಅವಧಿಯ ಸೆಲಿಬ್ರೇಶನ್ ಕೊಡುಗೆ |
ರೂ. 50,000 |
-
ಎಲಿವೇಟ್ ಕಾಂಪ್ಯಾಕ್ಟ್ SUV ಮೇಲೆ ರೂ 50,000 ಸೀಮಿತ ಅವಧಿಯ ಸೆಲಿಬ್ರೇಶನ್ ರಿಯಾಯಿತಿಯನ್ನು ಮಾತ್ರ ನೀಡಲಾಗಿದೆ.
-
SUV ಯ ಖರೀದಿಗೆ ಯಾವುದೇ ಹೆಚ್ಚುವರಿ ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು ಲಾಯಲ್ಟಿ ಬೋನಸ್ ಅನ್ನು ನೀಡಲಾಗುತ್ತಿಲ್ಲ.
-
ಹೋಂಡಾ ಎಲಿವೇಟ್‌ನ ಬೆಲೆಗಳು ರೂ.11.58 ಲಕ್ಷದಿಂದ ರೂ.16.20 ಲಕ್ಷದವರೆಗೆ ಇದೆ
ಟಿಪ್ಪಣಿಗಳು
-
ಮೇಲೆ ತಿಳಿಸಲಾದ ರಿಯಾಯಿತಿಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಮೇಲೆ ನೀಡಲಾದ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ.
ಇನ್ನಷ್ಟು ಓದಿ: ಹೋಂಡಾ ಸಿಟಿ ಆನ್ ರೋಡ್ ಬೆಲೆ