Maruti Jimny: ಭಾರತದಲ್ಲಿರುವ ಆವೃತ್ತಿಗಿಂತ ಹೆಚ್ಚಿನ ಬಣ್ಣಗಳನ್ನು ಪಡೆಯಲಿರುವ ದಕ್ಷಿಣ ಆಫ್ರಿಕಾದ 5-ಡೋರ್‌ ಜಿಮ್ನಿ

published on ನವೆಂಬರ್ 20, 2023 07:56 am by ansh for ಮಾರುತಿ ಜಿಮ್ನಿ

  • 40 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತದ ಹೊರಗಡೆ 5 ಬಾಗಿಲುಗಳ ಸುಜುಕಿ ಜಿಮ್ನಿಯನ್ನು ಪಡೆದ ದೇಶಗಳ ಪೈಕಿ ದಕ್ಷಿಣ ಆಫ್ರಿಕಾವು ಮೊದಲ ಮಾರುಕಟ್ಟೆ ಎನಿಸಿದೆ

Suzuki Jimny 5-door

  • ಈ ಘಟಕಗಳನ್ನು ಭಾರತದಿಂದಲೇ ರಫ್ತು ಮಾಡಿದ್ದರೂ, ಇವು ಬಣ್ಣಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ಹೊಂದಿವೆ.
  • ಸಿಲ್ಕಿ ಸಿಲ್ವರ್‌ ಮೆಟಾಲಿಕ್‌, ಜಂಗಲ್‌ ಗ್ರೀನ್‌ ಮತ್ತು ಶಿಫಾನ್‌ ಐವರಿ ಮೆಟಾಲಿಕ್‌ ಡ್ಯುವಲ್‌ ಟೋನ್‌ ಗಳು ಈ 3 ಹೆಚ್ಚುವರಿ ಬಣ್ಣಗಳೆನಿಸಿವೆ.
  • ಇದು ಭಾರತೀಯ ಆವೃತ್ತಿಯನ್ನು ಹೊಂದಿರುವ ಅದೇ 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಅನ್ನು ಪಡೆದಿದ್ದರೂ ಕಡಿಮೆ ಔಟ್ಪುಟ್‌ ಅನ್ನು ಹೊಂದಿರಲಿದೆ.
  • 9 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್ ಸಿಸ್ಟಂ, ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್, 6ರ ತನಕ ಏರ್‌ ಬ್ಯಾಗುಗಳು ಮತ್ತು ರಿಯರ್‌ ವ್ಯೂ ಕ್ಯಾಮರಾವನ್ನು ಹೊಂದಿದೆ.

ಭಾರತದಲ್ಲಿ ನಿರ್ಮಿಸಲಾಗಿರುವ ಮಾರುತಿ ಜಿಮ್ನಿ 5 ಬಾಗಿಲುಗಳ ವಾಹನವನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಾಗಿದ್ದು ಇದು ಅದೇ ಎಂಜಿನ್‌ ಆಯ್ಕೆ ಮತ್ತು ವೈಶಿಷ್ಟ್ಯಗಳು ಹಾಗೂ ಹೆಚ್ಚು ದುಬಾರಿ ಬೆಲೆಯೊಂದಿಗೆ ದೊರೆಯುತ್ತಿದೆ. ಈ ಉದ್ದನೆಯ ಆಫ್‌ ರೋಡರ್‌ ವಾಹನದ ಹೆಚ್ಚಿನ ವೈಶಿಷ್ಟ್ಯಗಳು ಭಾರತೀಯ ಆವೃತ್ತಿಯಲ್ಲಿ ಕಾಣ ಸಿಕ್ಕರೂ, ದಕ್ಷಿಣ ಆಫ್ರಿಕಾದಲ್ಲಿ ಇದು ಹೆಚ್ಚಿನ ಬಣ್ಣಗಳನ್ನು ಹೊಂದಿದೆ. ಇವುಗಳನ್ನು ನೀವು ಇಲ್ಲಿ ನೋಡಬಹುದು.

 

ಬಣ್ಣಗಳು

 ಇದು 6 ಮೋನೋಟೋನ್‌ ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ

Suzuki Jimny 5-door Monotone Exterior Colours

  • ಸೆಲೆಸ್ಟಿಯಲ್‌ ಬ್ಲೂ ಪರ್ಲ್‌ ಮೆಟಾಲಿಕ್‌ (ಭಾರತದ ಜಿಮ್ನಿಯಲ್ಲಿ ನೆಕ್ಸಾ ಬ್ಲೂ ಎಂಬ ಹೆಸರಿನಲ್ಲಿ ದೊರೆಯುತ್ತದೆ)
  • ಆರ್ಕಟಿಕ್‌ ವೈಟ್‌ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಸಿಲ್ಕಿ ಸಿಲ್ವರ್‌ ಮೆಟಾಲಿಕ್‌ (ಹೊಸತು)
  • ಬ್ಲೂಯಿಶ್‌ ಬ್ಲ್ಯಾಕ್ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಗ್ರಾನೈಟ್‌ ಗ್ರೇ ಮೆಟಾಲಿಕ್ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಜಂಗಲ್‌ ಗ್ರೀನ್‌ (ಹೊಸತು)
  • ಈ ಬಣ್ಣವು (ಜಂಗಲ್ ಗ್ರೀನ್) ಭಾರತದಲ್ಲಿ ಮಿಲಿಟರಿ ವಾಹನಗಳಿಗೆ ಬಳಸುವ ಹಸಿರು ಛಾಯೆಗೆ ಸ್ವಲ್ಪ ಹತ್ತಿರದಲ್ಲಿದೆ ಎಂದು ನಾವು ನಂಬುತ್ತೆವೆ. ಮತ್ತು ಆದ್ದರಿಂದ ಇದನ್ನು ನಮಗೆ ಇನ್ನೂ ನೀಡಲಾಗುತ್ತಿಲ್ಲ.

ಅಲ್ಲದೆ 3 ಡ್ಯುವಲ್‌ ಟೋನ್‌ ಛಾಯೆಗಳು ದೊರೆಯುತ್ತಿವೆ.

Suzuki Jimny 5-door Dual-tone Exterior Colours

  •  ಸಿಜ್ಲಿಂಗ್‌ ರೆಡ್‌ ಮೆಟಾಲಿಕ್‌ + ಬ್ಲೂಯಿಶ್‌ ಬ್ಲ್ಯಾಕ್ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಕೈನೆಟಿಕ್‌ ಯೆಲೊ + ಬ್ಲೂಯಿಶ್‌ ಬ್ಲ್ಯಾಕ್ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಶಿಫಾನ್‌ ಐವರಿ ಮೆಟಾಲಿಕ್‌ + ಬ್ಲೂಯಿಶ್‌ ಬ್ಲ್ಯಾಕ್‌ ಪರ್ಲ್‌ (ಹೊಸತು)
  • ಬೆಳ್ಳಿ ಅಥವಾ ಬೂದು ಬಣ್ಣಕ್ಕಿಂತ ಭಿನ್ನವಾಗಿದ್ದು ಎದ್ದು ಕಾಣುವ ಸರಳ ಮತ್ತು ಗಂಭೀರ ಛಾಯೆಯು (ಶಿಫಾನ್‌ ಐವರಿ ಮೆಟಾಲಿಕ್)‌ ಇಲ್ಲಿ ದೊರೆಯುತ್ತಿಲ್ಲ. ಅಲ್ಲದೆ ಇದು ಭಾರತೀಯ ಗ್ರಾಹಕರ ಪೈಕಿ ಹೆಚ್ಚು ಜನಪ್ರಿಯತೆಯನ್ನು ಹೊಂದಿಲ್ಲ.
  • ರೆಡ್‌ ಮೆಟಾಲಿಕ್‌ ಬಣ್ಣದ ಆಯ್ಕೆಯು ದಕ್ಷಿಣ ಆಫ್ರಿಕಾದಲ್ಲಿ ಡ್ಯುವಲ್‌ ಟೋನ್‌ ಛಾಯೆಯಲ್ಲಿ ದೊರೆಯುತ್ತಿದ್ದ, ಇದನ್ನು ಮೋನೋಟೋನ್‌ ಛಾಯೆಯಲ್ಲಿಯೂ ನೀಡಲಾಗುತ್ತಿದೆ.

 ಇದನ್ನು ಸಹ ಓದಿರಿ: ಹೊಸ ಸುಜುಕಿ ಸ್ವಿಫ್ಟ್‌ ಕಾರಿನ ಬಣ್ಣಗಳ ವಿವರ ಬಹಿರಂಗ! ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಸ್ವಿಫ್ಟ್‌ ಕಾರನ್ನು ನೀವು ಯಾವ ಬಣ್ಣದಲ್ಲಿ ನೋಡಲು ಇಷ್ಟಪಡುತ್ತೀರಿ?

 

ಪವರ್‌ ಟ್ರೇನ್

Suzuki Jimny 5-door Low Range Transfer Case

 ದಕ್ಷಿಣ ಆಫ್ರಿಕಾದ ರಸ್ತೆಗಳಲ್ಲಿ ಓಡಾಡಲಿರುವ 5 ಬಾಗಿಲುಗಳ ಜಿಮ್ನಿಯು 1.5 ಲೀಟರ್‌ ಗಳ ಪೆಟ್ರೋಲ್‌ ಎಂಜಿನ್‌ ಅನ್ನೇ ಬಳಸಲಿದ್ದು, 102 PS ಮತ್ತು 130 Nm ನಷ್ಟು ಕಡಿಮೆ ಔಟ್ಪುಟ್‌ ಅನ್ನು ನೀಡಲಿದೆ. ಅಲ್ಲದೆ ಅವುಗಳ ಟ್ರಾನ್ಸ್‌ ಮಿಶನ್‌ ಆಯ್ಕೆಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ: 5-ಸ್ಪೀಡ್‌ ಮ್ಯಾನುವಲ್‌ ಮತ್ತು 4-ಸ್ಪೀಡ್‌ ಅಟೋಮ್ಯಾಟಿಕ್.

ಇದನ್ನು ಸಹ ಓದಿರಿ: ಹೊಸ ಎಂಜಿನ್‌ ಪಡೆದ 2024 ಮಾರುತಿ ಸುಜುಕಿ ಸ್ವಿಫ್ಟ್‌ ಕಾರು, ವಿವರಗಳು ಬಹಿರಂಗ!

ಅಲ್ಲದೆ ಭಾರತೀಯ ಆವೃತ್ತಿಯಂತೆ, ದಕ್ಷಿಣ ಆಫ್ರಿಕಾದ 5 ಬಾಗಿಲುಗಳ ಸುಜುಕಿ ಜಿಮ್ನಯಿ ಕಡಿಮೆ ಶ್ರೇಣಿಯ ಟ್ರಾನ್ಸ್‌ ಫರ್‌ ಕೇಸ್‌ ಜೊತೆಗೆ ಪ್ರಮಾಣಿತ ಫೋರ್‌ ವೀಲ್‌ ಡ್ರೈವ್‌ ಅನ್ನು ಪಡೆಯಲಿದ್ದು,  210 mm ನಷ್ಟು ಗ್ರೌಂಡ್‌ ಕ್ಲಿಯರೆನ್ಸ್‌ ಅನ್ನು ಪಡೆಯಲಿದೆ.

ಗುಣಲಕ್ಷಣಗಳು ಮತ್ತು ಸುರಕ್ಷತೆ

Suzuki Jimny 5-door Dashboard

 ಭಾರತೀಯ ಮಾದರಿಯು ಹೊಂದಿರುವ ವಿಶೇಷತೆಗಳನ್ನೇ ಇದು ಹೊಂದಿರಲಿದೆ. ಇದು ವೈರ್‌ ಲೆಸ್‌ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇ ಜೊತೆಗೆ 9 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, ಕ್ರೂಸ್‌ ಕಂಟ್ರೋಲ್‌, ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, 6ರ ತನಕದ ಏರ್‌ ಬ್ಯಾಗ್‌ ಗಳು (ಭಾರತೀಯ ಆವೃತ್ತಿಯಲ್ಲಿ 6 ಏರ್‌ ಬ್ಯಾಗ್‌ ಗಳು ಪ್ರಮಾಣಿತವೆನಿಸಿವೆ), EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್‌ ಹೋಲ್ಡ್‌ ಮತ್ತು ಡೆಸೆಂಟ್‌ ಕಂಟ್ರೋಲ್‌ ಹಾಗೂ ರಿಯರ್‌ ವ್ಯೂ ಕ್ಯಾಮೆರಾವನ್ನು ಹೊಂದಿರಲಿದೆ.

 ಭಾರತದಲ್ಲಿ ಮುಂಬರುವ ಕಾರುಗಳು 

 

ಬೆಲೆಗಳು

Suzuki Jimny 5-door

 ದಕ್ಷಿಣ ಆಫ್ರಿಕಾದ 5 ಬಾಗಿಲುಗಳ ಸುಜುಕಿ ಜಿಮ್ನಿಯು R4,29,900 ರಿಂದ R4,79,900 (ಎಕ್ಸ್-ಶೋರೂಂ) ತನಕದ ಬೆಲೆಯನ್ನು ಹೊಂದಿದ್ದು, ಭಾರತೀಯ ರೂಪಾಯಿಗೆ ಇದನ್ನು ಪರಿವರ್ತಿಸಿದಾಗ ಇದು ರೂ. 19.65 ಲಕ್ಷದಿಂದ ರೂ. 21.93 ಲಕ್ಷದ ನಡುವೆ ಬರುತ್ತದೆ. ಭಾರತದಲ್ಲಿರುವ ಮಾರುತಿ ಜಿಮ್ನಿ 5 ಬಾಗಿಲುಗಳ ವಾಹನವು ರೂ. 12.74 ಲಕ್ಷದಿಂದ ರೂ. 15.05 ಲಕ್ಷದ ತನಕ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು,  ಮಹೀಂದ್ರಾ ಥಾರ್ ಮತ್ತು ಫೋರ್ಸ್‌ ಗೂರ್ಖಾಗಳಿಗೆ ಪ್ರತಿಸ್ಪರ್ಧಿ ಎನಿಸಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಜಿಮ್ನಿ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಜಿಮ್ನಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience