ಹೊಸ ಇಂಜಿನ್‌ನೊಂದಿಗೆ ಆಗಮಿಸುತ್ತಿದೆ 2024 ಮಾರುತಿ ಸುಝುಕಿ ಸ್ವಿಫ್ಟ್, ವಿವರಗಳು ಬಹಿರಂಗ!
ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ನವೆಂಬರ್ 08, 2023 05:37 pm ರಂದು ಪ್ರಕಟಿಸಲಾಗಿದೆ
- 177 Views
- ಕಾಮೆಂಟ್ ಅನ್ನು ಬರೆಯಿರಿ
ಈ ಹೊಸ ಸ್ವಿಫ್ಟ್ ತನ್ನ ತವರುನೆಲದಲ್ಲಿ ಹೊಚ್ಚ ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಇಂಜಿನ್ ಅನ್ನು ಪಡೆಯಲಿದೆ
- ಅಕ್ಟೋಬರ್ 2023ರಲ್ಲಿ ನಡೆದ ಜಪಾನ್ ಮೊಬಿಲಿಟಿ ಶೋನಲ್ಲಿ ಸುಝುಕಿಯು ಹೊಸ ಸ್ವಿಫ್ಟ್ ಅನ್ನು ಉತ್ಪಾದನಾ ಪರಿಕಲ್ಪನೆಗೆ ನಿಕಟವಾಗಿ ಬಿಡುಗಡೆಗೊಳಿಸಿತು.
- ಈಗ, ಈ ಕಾರುತಯಾರಕರು ತಮ್ಮ ತವರು ಮಾರುಕಟ್ಟೆಯಲ್ಲಿ ಈ ಹೊಚ್ಚ ಹೊಸ ಹ್ಯಾಚ್‌ಬ್ಯಾಕ್ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.
- ಅಲ್ಲದೇ ಇತ್ತೀಚೆಗೆ ಇದು ಭಾರತದಲ್ಲೂ ಮೊದಲ ಬಾರಿಗೆ ಪರೀಕ್ಷೆ ನಡೆಸಿರುವುದು ಕಂಡುಬಂದಿದೆ.
- ಪ್ರಸ್ತುತ ಭಾರತ-ಸ್ಪೆಕ್ ಸ್ವಿಫ್ಟ್, MT ಮತ್ತು AMT ಆಯ್ಕೆಯೊಂದಿಗೆ 90PS ನ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಯೂನಿಟ್ ಅನ್ನು ಪಡೆದಿದೆ.
- ಈ ಹೊಸ ಸ್ವಿಫ್ಟ್ 9-ಇಂಚು ಟಚ್‌ಸ್ಕ್ರೀನ್, 6ರ ತನಕದ ಏರ್‌ಬ್ಯಾಗ್‌ಗಳು ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಫೀಚರ್‌ಗಳನ್ನು ಪಡೆದಿದೆ.
- ಭಾರತದಲ್ಲಿ ಇದು 2024ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಬೆಲೆಗಳು ರೂ 6 ಲಕ್ಷಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು.
ಈ ನಾಲ್ಕನೇ-ಪೀಳಿಗೆ ಮಾರುತಿ ಸುಝುಕಿ ಸ್ವಿಫ್ಟ್ ಅಕ್ಟೋಬರ್ 2023ರ ಜಪಾನ್ ಮೊಬಿಲಿಟಿ ಶೋನಲ್ಲಿ ಉತ್ಪಾದನಾ ಪರಿಕಲ್ಪನೆಗೆ ನಿಕಟವಾಗಿ ಅನಾವರಣಗೊಂಡಿತು. ಅಲ್ಲದೇ ಇತ್ತೀಚೆಗೆ ನಮ್ಮ ನೆಲದಲ್ಲೂ ಇದು ಮೊದಲ ಬಾರಿಗೆ ಪರೀಕ್ಷೆ ನಡೆಸಿರುವುದನ್ನು ಸ್ಪೈ ಮಾಡಲಾಗಿದೆ. ಈಗ, ಆಟೋ ಸಮಾರಂಭದಲ್ಲಿ ಪ್ರದರ್ಶಿಸಲಾದ ಈ ಜಪಾನ್-ಸ್ಪೆಕ್ ಹ್ಯಾಚ್‌ಬ್ಯಾಕ್‌ನ ಅಪ್‌ಡೇಟ್ ಮಾಡಲಾದ ಇಂಜಿನ್-ಗೇರ್‌ಬಾಕ್ಸ್ ಆಯ್ಕೆಗಳನ್ನು ಕಾರುತಯಾರಕರು ಅನಾವರಣಗೊಳಿಸಿದ್ದಾರೆ.
ಪರಿಚಿತ ಇಂಜಿನ್‌ಗೆ ನೀಡಲಾಗಿದೆ ಹೊಸತನ
ಹೊಸ ಸ್ವಿಫ್ಟ್ ಈಗಲೂ 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನೇ ಹೊಂದಿದ್ದರೆ, ಹಳೆಯ 4-ಸಿಲಿಂಡರ್ K-ಸರಣಿಯ ಇಂಜಿನ್‌ಗೆ ಹೋಲಿಸಿದರೆ ಇತ್ತೀಚಿನ ಪವರ್‌ಟ್ರೇನ್ ಸೆಟಪ್ 3-ಸಿಲಿಂಡರ್ Z-ಸರಣಿಯ ಯೂನಿಟ್ ಅನ್ನು ಪಡೆದಿದೆ. ಸುಝುಕಿಯ ಪ್ರಕಾರ ಕಡಿಮೆ ಸ್ಪೀಡ್‌ನಲ್ಲಿ ಹೆಚ್ಚು ಟಾರ್ಕ್ ನೀಡುವುದಕ್ಕಾಗಿ ನಾಲ್ಕರಿಂದ ಮೂರು ಸಿಲಿಂಡರ್‌ಗೆ ಇಳಿಸಲಾಗಿದೆ. ಆದರೆ, ಇದರ ನಿಖರ ಉತ್ಪಾದನಾ ಅಂಕಿಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಜಪಾನ್-ಸ್ಪೆಕ್ ಸ್ವಿಫ್ಟ್ ಅನ್ನು ಇನ್ನಷ್ಟು ಹಗುರವಾಗಿಸಲು ಮತ್ತು ಇಂಜಿನ್‌ನ ಇಂಧನ ದಕ್ಷತೆಯನ್ನು ಹೆಚ್ಚಿಸಲು CVT ಆಟೋಮ್ಯಾಟಿಕ್‌ನೊಂದಿಗೆ ಸಜ್ಜುಗೊಳಿಸಲಾಗಿದೆ.
ಭಾರತದ ಸ್ಪೆಕ್ ಸ್ವಿಫ್ಟ್‌ನ ಇಂಜಿನ್
ಉಲ್ಲೇಖಕ್ಕಾಗಿ, ಪ್ರಸ್ತುತ ಭಾರತ ಸ್ಪೆಕ್ ಮಾರುತಿ ಸ್ವಿಫ್ಟ್ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಇಂಜಿನ್‌ನಿಂದ (90PS/113Nm) ಚಾಲಿತವಾಗಿದ್ದು, ಇದನ್ನು 5-ಮ್ಯಾನುವಲ್ ಅಥವಾ 5-ಸ್ಪೀಡ್ AMT ಜೊತೆಗೆ ಜೋಡಿಸಲಾಗಿದೆ. ಮಾರುತಿಯು ಭಾರತಕ್ಕಾಗಿ ಸಿದ್ಧಪಡಿಸಿರುವ ಹೊಸ ಸ್ವಿಫ್ಟ್‌ನ ನವೀನ ಇಂಜಿನ್‌ಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಬಹುದೆಂಬುದು ನಮ್ಮ ನಿರೀಕ್ಷೆಯಾಗಿದೆ.
ಜಪಾನ್‌ನಲ್ಲಿ, ನಾಲ್ಕನೇ ಪೀಳಿಗೆ ಸುಝುಕಿ ಸ್ವಿಫ್ಟ್‌ಗೆ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆ ಮತ್ತು ಆಲ್-ವ್ಹೀಲ್-ಡ್ರೈವ್ ಸೆಟಪ್ ಅನ್ನೂ ನೀಡಲಾಗಿದ್ದು, ಇವೆರಡನ್ನೂ ಭಾರತ-ಸ್ಪೆಕ್ ಹ್ಯಾಚ್‌ಬ್ಯಾಕ್‌ನಲ್ಲಿ ನಿರೀಕ್ಷಿಸಲಾಗುವುದಿಲ್ಲ.
ಇತರ ಅಪ್‌ಡೇಟ್‌ಗಳ ವಿವರ
ಭಾರತಕ್ಕಾಗಿ ತಯಾರಿಸಲಾದ ನಾಲ್ಕನೇ-ಪೀಳಿಗೆ ಸ್ವಿಫ್ಟ್‌ನ ನೋಟವು ಜೇನುಎರಿಯ ಮಾದರಿಯಲ್ಲಿದ್ದು, ಸಂಪೂರ್ಣ- LED ಲೈಟಿಂಗ್ ಮತ್ತು ಹೊಸ ಅಲಾಯ್‌ವ್ಹೀಲ್‌ಗಳನ್ನು ಹೊಂದಿರಲಿದೆ. ಈ ಎಲ್ಲಾ ವಿವರಗಳನ್ನು, ಜಪಾನ್ ಮಾಡೆಲ್‌ನಲ್ಲೂ ಕಾಣಬಹುದಾಗಿದೆ. ಒಳಗೆ, ಜಪಾನ್-ಸ್ಪೆಕ್ ಸ್ವಿಫ್ಟ್‌ನಂತೆಯೇ ಬ್ಲ್ಯಾಕ್ ಮತ್ತು ಬೀಜ್ ಡ್ಯಾಶ್‌ಬೋರ್ಡ್ ಹೊಂದಿರಲಿದೆ. ಬಲೆನೋ ಮತ್ತು ಗ್ರ್ಯಾಂಡ್ ವಿಟಾರಾ ಹೊಂದಿರುವಂಥ ಸ್ಟೀರಿಂಗ್ ವ್ಹೀಲ್, ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನೂ ಇದರಲ್ಲಿ ಕಾಣಬಹುದು.
ಈ ಹೊಸ ಸ್ವಿಫ್ಟ್ 9-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್ ಸ್ಟಾಪ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), 360-ಡಿಗ್ರಿ ಕ್ಯಾಮರಾ ಸೆಟಪ್ ಮತ್ತು ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಹೊಂದಿದೆ. ಭಾರತ ಸ್ಪೆಕ್ ಮಾಡೆಲ್‌ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಡಾಪ್ಟಿವ್ ಹೈ ಬೀಮ್ ಸಿಸ್ಟಮ್ ಮತ್ತು ಲೇನ್ ಅಸಿಸ್ಟ್‌ಗಳು ಇರುವ ಸಾಧ್ಯತೆ ಇಲ್ಲವಾದರೂ ಸ್ಪೈ ಮಾಡಲಾದ ಪರೀಕ್ಷಾರ್ಥ ಕಾರುಗಳು ಬ್ಲೈಂಡ್ ಮಾನಿಟರ್ ಸ್ಪಾಟಿಂಗ್‌ನಿಂದ ಸಜ್ಜುಗೊಂಡಿದ್ದವು.
ಬಿಡುಗಡೆ ಮತ್ತು ಬೆಲೆ
ಈ ಹೊಸ ಮಾರುತಿ ಸುಝುಕಿ ಸ್ವಿಫ್ಟ್ ಭಾರತಕ್ಕೆ ಆರಂಭಿಕ ಬೆಲೆ ರೂ 6 ಲಕ್ಷದೊಂದಿಗೆ (ಎಕ್ಸ್-ಶೋರೂಂ) 2024ರ ಮೊದಲಾರ್ಧದಲ್ಲಿ ಆಗಮಿಸಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದು ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್‌ಗೆ ನೇರ ಪ್ರತಿಸ್ಪರ್ಧಿಯಾದರೆ, ರೆನಾಲ್ಟ್ ಟ್ರೈಬರ್ ಸಬ್-4m ಕ್ರಾಸ್ ಓವರ್ MPV ಅದೇ ಬೆಲೆಗೆ ಪರ್ಯಾಯವಾಗಲಿದೆ.
ಇನ್ನಷ್ಟು ಓದಿ : ಮಾರುತಿ ಸ್ವಿಫ್ಟ್ AMT