• English
  • Login / Register

ಭಾರತದಲ್ಲಿ ಪೇಟೆಂಟ್ ಪಡೆದ Suzuki eWX ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಇದು ಮಾರುತಿ ವ್ಯಾಗನ್ R EV ಆಗಿರಬಹುದೇ?

published on ಮೇ 27, 2024 03:32 pm by shreyash

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

eWX ಅನ್ನು ಮೊದಲ ಬಾರಿಗೆ ಪರಿಕಲ್ಪನೆಯ ರೂಪದಲ್ಲಿ 2023 ರ ಜಪಾನ್ ಮೊಬಿಲಿಟಿ ಶೋನಲ್ಲಿ ಹೊಸ-ಜನ್ ಸ್ವಿಫ್ಟ್ ಜೊತೆಗೆ ಪ್ರದರ್ಶಿಸಲಾಯಿತು.

Maruti eWX

ಭಾರತೀಯ ಆಟೋಮೊಬೈಲ್‌ ಕ್ಷೇತ್ರದಲ್ಲಿ ಹೊಸ ಕ್ರಾಂತಿಗಳೇ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಇವಿ ಕಾರುಗಳದ್ದೇ ಈಗ ಕಾರುಬಾರು. ಟಾಟಾ, ಮಹೀಂದ್ರಾ, ಹ್ಯುಂಡೈ ಹೀಗೆ ಹೆಚ್ಚಿನ ಕಾರು ತಯಾರಕ ಕಂಪೆನಿಗಳು ಈಗಾಗಲೇ ಭಾರತದಲ್ಲಿ ಇವಿ ಕಾರುಗಳನ್ನು ಬಿಡುಗಡೆ ಮಾಡಿದ್ದರೂ, ಭಾರತೀಯ ಹಾಟ್‌ ಫೇವರಿಟ್‌ ಮಾರುತಿ ಸುಜುಕಿ ಇವರೆಗೆ ಯಾವುದೇ   EV ಅನ್ನು ಪರಿಚಯಿಸಿಲ್ಲ, ಆದರೆ ಈ ಕಂಪೆನಿ ಕೈಗೆಟುಕುವ ಬೆಲೆಯ ಕಾಂಪ್ಯಾಕ್ಟ್ EVಯ ತಯಾರಿಯನ್ನು ಈಗಾಗಲೇ ಪ್ರಾರಂಭಿಸಿದೆ.  ಮಾರುತಿ ಸುಜುಕಿ ಇತ್ತೀಚೆಗೆ ದೇಶದಲ್ಲಿ eWX ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ವಿನ್ಯಾಸವನ್ನು ಪೇಟೆಂಟ್ ಮಾಡಿದ್ದಾರೆ, ಇದರ ಪರಿಕಲ್ಪನೆಯನ್ನು ಈಗಾಗಲೇ 2023 ರಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾಗಿದೆ.

ಇದು ಭಾರತದಲ್ಲಿ ವ್ಯಾಗನ್ R ನ EV ಇರಬಹುದೇ?

2018ರಲ್ಲಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಹಿರಂಗಗೊಳಿಸುವ ಒಂದು ವರ್ಷದ ಮೊದಲು, ಮಾರುತಿ ಸುಜುಕಿ ಭಾರತಕ್ಕೆ ಪರೀಕ್ಷೆಗಾಗಿ ಎಲೆಕ್ಟ್ರಿಕ್ ವ್ಯಾಗನ್ ಆರ್‌ಎಸ್‌ ಅನ್ನು ತಂದಿತ್ತು. ಹಾಗೆಯೇ, ಜನಸಾಮಾನ್ಯರು ಸಾಕಷ್ಟು ನೈಜ-ಪ್ರಪಂಚದ ರೇಂಜ್‌ನೊಂದಿಗೆ ವೆಚ್ಚ-ಪರಿಣಾಮಕಾರಿ EV ಅನ್ನು ಪಡೆಯುವ ಸಮಯ ಬಹಳ ದೂರದಲ್ಲಿದೆ ಎಂದು ಈ ಕಾರು ತಯಾರಕರು ಮನಗಂಡಿದ್ದಾರೆ. ಇದರಿಂದಾಗಿ ಮಾರುತಿ ವ್ಯಾಗನ್ ಆರ್ ಇವಿ ಮೇಲಿನ ನಿರೀಕ್ಷೆಯನ್ನು ಬದಿಗಿಡಬೇಕಾಯಿತು. ಆದರೆ ತನ್ನ ತಾಯ್ನಾಡಿನಲ್ಲಿ, ಸುಜುಕಿ ಹೆಚ್ಚು ಕಾಂಪ್ಯಾಕ್ಟ್ EV ಕಾರುಗಳ ಮೇಲೆ ಕೆಲಸ ಮಾಡುತ್ತಿದೆ ಮತ್ತು ವ್ಯಾಗನ್ R ನೊಂದಿಗೆ ನಾವು ಪಡೆಯುವಂತೆಯೇ ಅದರ ಟಾಲ್‌ಬಾಯ್ ವಿನ್ಯಾಸದಿಂದಾಗಿ eWX ಅನ್ನು ಎಲೆಕ್ಟ್ರಿಕ್ ಮಿನಿವ್ಯಾಗನ್ ಎಂದು ಉಲ್ಲೇಖಿಸುತ್ತದೆ.

ಅವುಗಳು ಒಂದೇ ರೀತಿ ಕಾಣುವಾಗ, ಎರಡು ಗಾತ್ರದಲ್ಲಿ ಹೇಗೆ ಹೋಲಿಕೆ ಆಗುತ್ತದೆ ಎಂಬುದು ಇಲ್ಲಿದೆ:

 

ಮಾರುತಿ eWX

ಮಾರುತಿ ವ್ಯಾಗನ್‌ R

ವ್ಯತ್ಯಾಸ

ಉದ್ದ

3395 ಮಿಮೀ

3655 ಮಿಮೀ

+ 260 ಮಿಮೀ

ಅಗಲ

1475 ಮಿಮೀ

1620 ಮಿಮೀ

+ 145 ಮಿಮೀ

ಎತ್ತರ

1620 ಮಿಮೀ

1675 ಮಿಮೀ

+ 55 ಮಿಮೀ

ಆಯಾಮದಲ್ಲಿ, ಮಾರುತಿ eWX ವ್ಯಾಗನ್ R ಗಿಂತ ಚಿಕ್ಕದಾಗಿದೆ ಆದರೆ ಎಲ್ಲಾ ಗಾತ್ರಗಳಲ್ಲಿ S-ಪ್ರೆಸ್ಸೊಗಿಂತ ಚಿಕ್ಕದಾಗಿದೆ. ಆದರೆ, ಇದು ಎಮ್‌ಜಿ ಕಾಮೆಟ್ ಇವಿಗಿಂತ ದೊಡ್ಡದಾಗಿದೆ. ಆದ್ದರಿಂದ ನಮ್ಮ ಮನದಲ್ಲಿರುವ ಪ್ರಶ್ನೆಯೆಂದರೆ, eWX ಅನ್ನು ವ್ಯಾಗನ್ R ನ ಇಲೆಕ್ಟ್ರಿಕ್‌ ಎಡಿಷನ್‌ ಎಂದು ಪರಿಗಣಿಸಬಹುದೇ?

ಸ್ಥಳಾವಕಾಶದ ಪ್ರಾಯೋಗಿಕತೆಯ ವಿಷಯದಲ್ಲಿ, eWX ಎಲ್ಲಾ-ಎಲೆಕ್ಟ್ರಿಕ್ ವ್ಯಾಗನ್ R ನಿಂದ ನಿರೀಕ್ಷೆಗಳನ್ನು ಪೂರೈಸುವುದಿಲ್ಲ. ಬದಲಾಗಿ, eWX ಭಾರತೀಯ EV ಸೆಗ್ಮೆಂಟ್‌ನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ರೂಪಿಸಬೇಕಾಗುತ್ತದೆ, MG ಕಾಮೆಟ್ EV ಗಿಂತ ಮೇಲಿದ್ದರೆ, ಟಾಟಾ ಟಿಯಾಗೊ EV ಯಂತಹವುಗಳಿಗಿಂತ ಕೆಳಗಿರುತ್ತದೆ.

ಇದನ್ನು ಓದಿ: ಭಾರತದಲ್ಲಿ BMW 220i M ಸ್ಪೋರ್ಟ್ ಶ್ಯಾಡೋ ಎಡಿಷನ್‌ ಬಿಡುಗಡೆ, ಬೆಲೆಗಳು 46.90 ಲಕ್ಷ ರೂ.ನಿಂದ ಪ್ರಾರಂಭ

eWX ಕುರಿತು ಇನ್ನಷ್ಟು

Maruti eWX Front

ಭಾರತದಲ್ಲಿ ಮಾರುತಿ ಸುಜುಕಿ eWX ವಿನ್ಯಾಸದ ಪೇಟೆಂಟ್ ಅದರ ಪರಿಕಲ್ಪನೆಯ ಆವೃತ್ತಿಯಂತೆಯೇ ಕಾಣುತ್ತದೆ. ಇದು ಬಾಕ್ಸಿ ಶೈಲಿಯ ಬಾಡಿಯನ್ನು ಹೊಂದಿದೆ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಬಾಗಿದ ಆಯತಾಕಾರದ ಲೈಟಿಂಗ್‌ ಅಂಶಗಳನ್ನು ಹೊಂದಿದೆ. ಇದು ಅಲಾಯ್‌ ವೀಲ್‌ಗಳು ಸೇರಿದಂತೆ ಸುತ್ತಲೂ ಹಸಿರು ಹೈಲೈಟ್ಸ್‌ಗಳನ್ನು ಪಡೆಯುತ್ತದೆ.

ಒಳಗಿನಿಂದ ಗಮನಿಸುವಾಗ, eWX ಪರಿಕಲ್ಪನೆಯು ಸಂಯೋಜಿತ ಸ್ಕ್ರೀನ್‌ ಸೆಟಪ್‌ನೊಂದಿಗೆ ಡ್ಯುಯಲ್-ಟೋನ್ ಕಪ್ಪು ಮತ್ತು ಹಸಿರು ಡ್ಯಾಶ್‌ಬೋರ್ಡ್ ಅನ್ನು ಒಳಗೊಂಡಿದೆ. ಇದು ಹೊರಭಾಗದಲ್ಲಿ ಕಂಡುಬರುವ ಅದೇ ಆಯತಾಕಾರದ (ರೆಕ್ಟೆಂಗಲ್‌) ವಿನ್ಯಾಸವನ್ನು ಮುಂದುವರೆಸುತ್ತದೆ. ಮುಂಭಾಗದ ಆಸನಗಳ ನಡುವೆ, ಇದು ಡ್ರೈವ್ ಮೋಡ್ ಶಿಫ್ಟರ್‌ಗಾಗಿ ರೋಟರಿ ಡಯಲ್ ಅನ್ನು ಹೊಂದಿದೆ.

eWXನ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಸುಜುಕಿ ಇನ್ನೂ ಬಹಿರಂಗಪಡಿಸಿಲ್ಲವಾದರೂ, ಈ ಸಣ್ಣ EV 230 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ಹೊಂದಿರುತ್ತದೆ ಎಂದು ದೃಢಪಡಿಸಿದೆ, MG ಕಾಮೆಟ್ EV ಸಹ ಇಷ್ಟೇ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ. ಆದರೆ, ಕಾಮೆಟ್ EV ಗಿಂತ ಭಿನ್ನವಾಗಿ, eWX ಅನ್ನು ಸರಿಯಾದ ನಾಲ್ಕು-ಡೋರ್‌ ನಾಲ್ಕು-ಸೀಟರ್‌ ಆಗಿ ವಿನ್ಯಾಸಗೊಳಿಸಲಾಗಿದೆ.

ಬಿಡುಗಡೆಯ ಕುರಿತು

ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಎಸ್‌ಯುವಿಯು 2025 ರ ಆರಂಭದಲ್ಲಿ ಬಿಡುಗಡೆಯಾಗಲಿದೆ. ಮಾರುತಿಯಿಂದ ಕೈಗೆಟುಕುವ ಕಾಂಪ್ಯಾಕ್ಟ್ ಇವಿ, ಬಹುಶಃ eWX, 10 ಲಕ್ಷಕ್ಕಿಂತ ಕಡಿಮೆ ಆರಂಭಿಕ ಬೆಲೆಯೊಂದಿಗೆ (ಎಕ್ಸ್-ಶೋರೂಮ್) 2026 ಕ್ಕಿಂತ ಮೊದಲು ಬಿಡುಗಡೆಯಾಗುವ ಸಾಧ್ಯತೆಯಿಲ್ಲ.

ಇನ್ನಷ್ಟು ಓದಿ: ವ್ಯಾಗನ್ ಆರ್ ಆನ್‌ರೋಡ್‌ ಬೆಲೆ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience