Login or Register ಅತ್ಯುತ್ತಮ CarDekho experience ಗೆ
Login

ಈ 20 ಚಿತ್ರಗಳಲ್ಲಿ ಪಡೆಯಿರಿ ಮಾರುತಿ ಜಿಮ್ನಿಯ ವಿಸ್ತೃತ ನೋಟ

modified on ಜನವರಿ 18, 2023 04:04 pm by rohit for ಮಾರುತಿ ಜಿಮ್ನಿ

ಲಾಂಗರ್-ವ್ಹೀಲ್‌ಬೇಸ್ ಜಿಮ್ನಿಯು ಅದರ ಚಿಕ್ಕ ಮಾಡೆಲ್‌ನಂತೆ ಕಾಣುತ್ತದೆಯಾದರೂ, ಹೆಚ್ಚುವರಿ ಎರಡು ಡೋರ್‌ಗಳೊಂದಿಗೆ ಬಂದಿದೆ

ಆಟೋ ಎಕ್ಸ್‌ಪೋ 2023 ರ ಎರಡನೇ ದಿನದಂದು ಮಾರುತಿಯ ಏನನ್ನು ಅನಾವರಣಗೊಳಿಸುತ್ತದೆ ಎಂಬುದು ಅನೇಕ ಭಾರತೀಯರಿಗೆ ಕುತೂಹಲದ ಕ್ಷಣವಾಗಿತ್ತು, ಏಕೆಂದರೆ ಇದು ‘ಫ್ರಾಂಕ್ಸ್’ ಎಂಬ ಹೊಸ ಕ್ರಾಸ್‌ಓವರ್ ಜೊತೆಗೆ ಫೈವ್-ಡೋರ್ ಜಿಮ್ನಿಯನ್ನು ಪ್ರದರ್ಶಿಸಿತು. ಇದು ಅದರ ಥ್ರೀ-ಡೋರ್ ಆವೃತ್ತಿಗೆ ಸಾಮ್ಯತೆಯನ್ನು ಹೊಂದಿದಂತೆ ಕಂಡರೂ, ಉದ್ದವಾದ ಜಿಮ್ನಿಯು ಹಿಂದಿನದಕ್ಕಿಂತ ಸ್ವಲ್ಪ ವ್ಯತ್ಯಾಸವನ್ನು ಹೊಂದಿದೆ ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ.

ಕೆಳಗೆ ನೀಡಲಾದ ಗ್ಯಾಲರಿಯಿಂದ ಫೈವ್-ಡೋರ್ ಜಿಮ್ನಿಯ ಒಳಭಾಗ ಮತ್ತು ಹೊರಭಾಗಗಳನ್ನು ಸ್ವಲ್ಪ ಅನ್ವೇಷಿಸೋಣ:

ಫ್ರಂಟ್/ ಮುಂಭಾಗ

ಜಿಮ್ನಿಯನ್ನು ಗುರುತಿಸಲು ಎಸ್‌ಯುವಿಯ ಮುಂಭಾಗದ ಫ್ಯಾಸಿಯಾದ ಒಂದು ನೋಟವು ಸಾಲದು, ಏಕೆಂದರೆ ಇದು ಇನ್ನೂ ಥ್ರೀ-ಡೋರ್ ಎಡಿಷನ್ ಅನ್ನು ಹೋಲುತ್ತದೆ.

ಇದು ಮಧ್ಯದಲ್ಲಿ ಸುಝುಕಿ ಲೋಗೋದೊಂದಿಗೆ ಐಕಾನಿಕ್ ಫೈವ್-ಸ್ಲಾಟ್ ಗ್ರಿಲ್‌ ಅನ್ನು ಹೊಂದಿದೆ, ಆದರೂ ಮಾರುತಿ ಚಿಕ್ಕ ಜಿಮ್ನಿಯ ಆಲ್-ಬ್ಲ್ಯಾಕ್ ಗ್ರಿಲ್‌ಗಿಂತ ಭಿನ್ನವಾಗಿ ತೋರಲು ಕ್ರೋಮ್ ಇನ್ಸರ್ಟ್‌ಗಳನ್ನು (ಈಗ ಅದು ಹ್ಯಾಮರ್‌ನಂತೆ ತೋರುತ್ತದೆ) ನೀಡಿದೆ.

ಜಿಮ್ನಿಯು ವೃತ್ತಾಕಾರದ ಹೆಡ್‌ಲೈಟ್ ಕ್ಲಸ್ಟರ್‌ಗಳನ್ನು (ಎಲ್ಇಡಿ ಪ್ರೊಜೆಕ್ಟರ್ ಯೂನಿಟ್‌ಗಳು) ಒಳಗಡೆ ಇರಿಸಲಾಗಿರುವ ಸಣ್ಣ ಎಲ್‌ಇಡಿ ಡಿಆರ್‌ಎಲ್ ಮತ್ತು ಮುಂಭಾಗದ ಫೆಂಡರ್‌ಗಳಿಗೆ ಹತ್ತಿರವಿರುವ ಇಂಡಿಕೇಟರ್ ಲೈಟ್‌ಗಳನ್ನು ಹೊಂದಿದೆ. ಇದರ ಮುಂಭಾಗದ ಬಂಪರ್ ಫಾಗ್ ಲ್ಯಾಂಪ್‌ಗಳನ್ನು ಹೊಂದಿರುವ ಏರ್ ಡ್ಯಾಮ್ ಮೇಲೆ ಜಾಲರಿ ಮತ್ತು ರಗಡ್ ಅಪೀಲ್ ಅನ್ನು ಹೊಂದಿದೆ.

ಫೈವ್-ಡೋರ್ ಜಿಮ್ನಿ ಕೂಡಾ ಹೆಡ್‌ಲೈಟ್ ವಾಷರ್‌ಗಳನ್ನು ಹೊಂದಿದ್ದು ಇದು ಭಾರತದಲ್ಲಿ ಮೊದಲ ಸೆಗ್ಮೆಂಟ್ ಆಗಿದೆ.

ಸೈಡ್/ ಪಾರ್ಶ್ವ

ಇಲ್ಲಿ ನೀವು ಚಿಕ್ಕ ಮತ್ತು ಉದ್ದವಾದ ವ್ಹೀಲ್‌ಬೇಸ್‌ ಜಿಮ್ನಿಯ ನಡುವಿನ ದೊಡ್ಡ ಬದಲಾವಣೆಯನ್ನು ಗಮನಿಸಬಹುದು. ಗ್ರೌಂಡ್ ಕ್ಲಿಯರೆನ್ಸ್ 210mm ಇದ್ದು, ಇದು ಬದಲಾಗದೇ ಉಳಿದಿದೆ.

ಮಾರುತಿ ಸುಝುಕಿ ಜಿಮ್ನಿಯ ಉದ್ದವನ್ನು ಹೆಚ್ಚಿಸಿದೆ ಎಂಬುದನ್ನು ಇದರ ವ್ಹೀಲ್‌ಬೇಸ್‌ನಿಂದ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಇದು ಎರಡು ಹೆಚ್ಚುವರಿ ಬಾಗಿಲುಗಳು ಮತ್ತು ರಿಯರ್ ಕ್ವಾರ್ಟ್ರರ್ ಗ್ಲಾಸ್ ಪ್ಯಾನಲ್‌ ಅನ್ನು ಹೊಂದಿದ್ದು, ಇದು ಅದರ ಚಿಕ್ಕ ಆವೃತ್ತಿಯಲ್ಲಿ ಕಾಣಸಿಗುವುದಿಲ್ಲ. ಇದು ಮುಂಭಾಗದ ವಿಂಡೋಲೈನ್ ಅಲ್ಲಿ ಕಿಂಕ್ ಅನ್ನು ಪಡೆದಿದೆ ಮತ್ತು ಮುಂಭಾಗದ ಫೆಂಡರ್ ಇಂಡಿಕೇಟರ್‌ಗಳು ಮತ್ತು ಥ್ರೀ-ಡೋರ್ ಮಾಡೆಲ್‌ನಲ್ಲಿ ಕಂಡುಬರುವಂತೆ ಸ್ಕ್ವಾರಿಶ್ ORVM (ಹೊರಗಿನ ರಿಯರ್‌ವ್ಯೂ ಕನ್ನಡಿ) ಯೂನಿಟ್‌ಗಳನ್ನು ಇದು ಹೊಂದಿದೆ.

ಫೈವ್-ಡೋರ್ ಜಿಮ್ನಿ15-ಇಂಚಿನ ಅಲೋಯ್ ವ್ಹೀಲ್‌ಗಳನ್ನು ಹೊಂದಿರುವ ಚೌಕಾಕಾರದ ವ್ಹೀಲ್ ಆರ್ಚ್‌ಗಳನ್ನು ಒಳಗೊಂಡಿದೆ. ಮಾರುತಿ ಸುಝುಕಿಯು ತನ್ನ ಸಣ್ಣ ಆವೃತ್ತಿಯಲ್ಲಿರುವಂತೆಯೇ ಲಾಂಗ್-ವ್ಹೀಲ್‌ಬೇಸ್ ಜಿಮ್ನಿಯಲ್ಲಿಯೂ ಅದೇ ರೀತಿಯ ವ್ಹೀಲ್ ಡಿಸೈನ್ ಅನ್ನು ನೀಡಲು ನಿರ್ಧರಿಸಿದೆ.

ರಿಯರ್

ಥ್ರೀ-ಡೋರ್ ಜಿಮ್ನಿಯ ಹಿಂಭಾಗದಂತೆಯೇ ಫೈವ್-ಡೋರ್ ಜಿಮ್ನಿಯ ಹಿಂಭಾಗವನ್ನು ತಯಾರಿಸಿರುವುದರಿಂದ ಅವುಗಳನ್ನು ಗುರುತಿಸಲು ನೀವು ಹೆಣಗಾಡಬಹುದು, ಏಕೆಂದರೆ ಟೈಲ್-ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್ ಸೇರಿದಂತೆ ಎರಡೂ ಬಹುತೇಕ ಒಂದೇ ರೀತಿಯ ಹಿಂಭಾಗದ ನೋಟವನ್ನು ಹೊಂದಿವೆ.

ಅಂದರೆ, ಟೈಲ್-ಗೇಟ್‌ನ ಕೆಳಗಿನ ಎಡಭಾಗದಲ್ಲಿರುವ ‘ಸುಝುಕಿ’ ಮಾನಿಕರ್ ಬದಲಿಗೆ ಫೈವ್-ಡೋರ್ ‘ಜಿಮ್ನಿ’ ಬ್ಯಾಡ್ಜಿಂಗ್ ಅನ್ನು ಪಡೆದಿದ್ದು, ‘ಆಲ್‌ಗ್ರಿಪ್’ ಹೆಸರಿನ ಟ್ಯಾಗ್ ಅನ್ನು ಹಾಗೆಯೇ ಮುಂದುವರಿಸಲಾಗಿದೆ. ಇದು ರೂಫ್ ಮೌಂಟರ್ ವಾಷರ್ ಅನ್ನು ಹೊಂದಿದೆ ಜೊತೆಗೆ ವೈಪರ್ ಅನ್ನು ಸ್ಪೇರ್ ವ್ಹೀಲ್‌ನ ಹಿಂಭಾಗದಲ್ಲಿ ಇರಿಸಲಾಗಿದೆ.

ಥ್ರೀ-ಡೋರ್ ಮಾಡೆಲ್‌ನಲ್ಲಿ ಕಾಣದೇ ಇರುವ ಟೈಲ್-ಗೇಟ್ ಆ್ಯಕ್ಸೆಸ್ ಸೆನ್ಸಾರ್ ಅನ್ನು ಇಂಡಿಯಾ-ಸ್ಪೆಕ್ ಜಿಮ್ನಿ ಎಸ್‌ಯುವಿಯಲ್ಲಿ ಕಾಣಬಹುದಾಗಿದೆ.

ಟೈಲ್‌ಲೈಟ್‌ಗಳನ್ನು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೋ ಹುಕ್‌ಗಳ ಜೊತೆಗೆ ಹಿಂಭಾಗದ ಬಂಪರ್‌ನಲ್ಲಿ ಇರಿಸಲಾಗಿದೆ.

ಎರಡನೇ ಸಾಲನ್ನು ಮೇಲಕ್ಕೆ ಎರಿಸಿದಾಗ 208 ಲೀಟರ್‌ನ ಬೂಟ್ ಸ್ಪೇಸ್ ಅನ್ನು ಪಡೆಯಬಹುದಾಗಿದೆ. ಇದನ್ನು ನೀವು ಮಡಿಚಿದಾಗ 332 ಲೀಟರ್‌ನ ಲಗೇಜ್ ಸ್ಟೊರೇಜ್ ಜಾಗವನ್ನು ನೀವು ನೋಡಬಹುದು.

ಸಂಬಂಧಿತ: ಆಟೋ ಎಕ್ಸ್‌ಪೋ 2023 ರಲ್ಲಿ ಮಾರುತಿಯ ಸಂಪೂರ್ಣ ಆ್ಯಕ್ಸೆಸರೈಸ್ಡ್ ಜಿಮ್ನಿಯ ಪ್ರದರ್ಶನ

ಕ್ಯಾಬಿನ್

ಮಾರುತಿಯ ಥ್ರೀ-ಡೋರ್ ಜಿಮ್ನಿಯ ಒಳಭಾಗದ ವಿನ್ಯಾಸಕ್ಕೆ ಮತ್ತು ಲಾಂಗ್-ವ್ಹೀಲ್‌ಬೇಸ್ ಮಾಡೆಲ್‌ಗೆ ಹೆಚ್ಚಿನ ಬದಲಾವಣೆಯನ್ನು ಮಾಡಿಲ್ಲ. ಇದು ಬ್ರಷ್ ಸಿಲ್ವರ್ ಆ್ಯಕ್ಸೆಂಟ್‌ಗಳು ಡ್ಯಾಶ್‌ಬೋರ್ಡ್‌ನ ಕೋ-ಡ್ರೈವರ್ ಭಾಗದಲ್ಲಿ ಗ್ರ್ಯಾಬ್ ಹ್ಯಾಂಡಲ್‌ನೊಂದಿಗೆ ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಥೀಮ್ ಅನ್ನು ಮುಂದುವರಿಸಿದೆ.

ಇಂಡಿಯಾ-ಸ್ಪೆಕ್ ಎಸ್‌ಯುವಿಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜಿಮ್ನಿಯಲ್ಲಿ ಕಾಣಸಿಗುವಂತೆಯೇ ಲೆದರ್- ರ್‍ಯಾಪ್ (ಟಾಪ್-ಸ್ಪೆಕ್ ಆಲ್ಫಾ ಟ್ರಿಮ್‌ನಲ್ಲಿ) ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

ಬೇಸಿಕ್ ಅನಲಾಗ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡಾ ಥ್ರೀ-ಡೋರ್ ಜಿಮ್ನಿಯಂತೆಯೇ ಇದ್ದು, ಅದು ಮಧ್ಯದಲ್ಲಿ ಸಣ್ಣ, ಲಂಬ ಮತ್ತು ಬಣ್ಣದಿಂದ ಕೂಡಿದ MID ಅನ್ನು ಹೊಂದಿದೆ.

ಒಂದು ಪ್ರಮುಖ ಬದಲಾವಣೆಯೆಂದರೆ, ಇಂಡಿಯಾ-ಸ್ಪೆಕ್ ಜಿಮ್ನಿಯ ಆಲ್ಫಾ ಟ್ರಿಮ್ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಯೂನಿಟ್ ಅನ್ನು ಹೊಂದಿದ್ದು ಅದನ್ನು ಹೊಸ ಬಲೆನೋ ಮತ್ತು ಬ್ರೆಝಾದೊಂದಿಗೆ ನೀಡಲಾಗುತ್ತದೆ. ಆದರೆ ನೀವು ಎಂಟ್ರಿ-ಲೆವಲ್ ಝೆಟಾ ಟ್ರಿಮ್ ಅನ್ನು ಆಯ್ದುಕೊಂಡರೆ, ಚಿಕ್ಕದಾದ ಏಳು-ಇಂಚಿನ ಡಿಸ್‌ಪ್ಲೇಯನ್ನು ಪಡೆಯಬಹುದು. ಆದಾಗ್ಯೂ ಒಳ್ಳೆಯ ವಿಷಯವೇನೆಂದರೆ, ನೀವು ಯಾವುದೇ ವೇರಿಯೆಂಟ್ ಅನ್ನು ಆಯ್ದುಕೊಂಡರೂ ಎಸ್‌ಯುವಿಯು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇಯನ್ನು ಪ್ರಮಾಣಿತವಾಗಿ ಪಡೆಯಬಹುದು.

ಕ್ಲೈಮೇಟ್ ಕಂಟ್ರೋಲ್‌ಗಳು ಮೂರು ಡಯಲ್‌ನೊಂದಿಗೆ ಒಂದೇ ರೀತಿಯದಾಗಿದ್ದು ಮಧ್ಯದ ಭಾಗವು ಡಿಜಿಟಲ್ ತಾಪಮಾನ ರೀಡ್‌ಔಟ್ ಅನ್ನು ಒಳಗೊಂಡಿದೆ. ಅದರ ಕೆಳಗೆ ನೀವು ಪವರ್ ವಿಂಡೋಸ್ ಲಾಕ್‌ನ ಸ್ವಿಚ್‌ಗಳು ಮತ್ತು ಡ್ರೈವರ್-ಸೈಡ್ ಕಿಟಕಿಯ ಆಟೋ ಅಪ್/ಡೌನ್, ಟ್ರ್ಯಾಕ್ಷನ್ ಕಂಟ್ರೋಲ್, ಹಿಲ್-ಡಿಸೆಂಟ್ ಕಂಟ್ರೋಲ್, ಯುಎಸ್‌ಬಿ ಮತ್ತು 12V ಸಾಕೆಟ್‌ಗಳು, ಮತ್ತು ಕ್ಯೂಬಿ ಹೋಲ್ ಅನ್ನು ಪಡೆಯುತ್ತೀರಿ.

ನಂತರ ಎರಡು ಗೇರ್ ಲಿವರ್‌ಗಳಿವೆ: ಫೈವ್-ಸ್ಪೀಡ್ ಮ್ಯಾನ್ಯುವಲ್ ಅಥವಾ ಫೋರ್-ಸ್ಪೀಡ್ ಆಟೋಮ್ಯಾಟಿಕ್ ಸ್ಟಿಕ್, ಮತ್ತು 4x4 ಲೋ-ರೇಂಜ್ ಟ್ರಾನ್ಸ್‌ಫರ್ ಕೇಸ್. ಆ ಹೆಚ್ಚುವರಿ ಶಿಫ್ಟರ್ ಅನ್ನು ಮಾರುತಿ ಜಿಮ್ನಿಯ ಫೀಚರ್ ಲಿಸ್ಟ್‌ನಲ್ಲಿ ಆಲ್‌ಗ್ರಿಪ್ ಪ್ರೊ ಎಂದು ಕರೆಯಲಾಗಿದೆ.

ಎಸ್‌ಯುವಿಯು ಫ್ಯಾಬ್ರಿಕ್ ಸೀಟ್‌ಗಳನ್ನು ಹೊಂದಿದ್ದು, ಮುಂದಿನ ಸಾಲಿನ ಸೀಟುಗಳನ್ನು ಸಂಪೂರ್ಣ ಕೆಳಮುಖವಾಗಿ ಬಾಗಿಸಬಹುದು (ಒರಗಿಕೊಳ್ಳಲು ಸಾಧ್ಯವಾಗುತ್ತದೆ) ಇದು ಯಾವುದೇ ಕ್ಯಾಂಪ್‌ಗೆ ಅಥವಾ ಅಡ್ವೆಂಚರ್‌ಗೆ ಕೊಂಡೊಯ್ಯುವಾಗ ಸೂಕ್ತವಾಗಿರುತ್ತದೆ.

ಇದು ಎರಡನೇ ಸಾಲಿನಲ್ಲಿದೆ, ಆದರೂ ಫೈವ್-ಡೋರ್ ಜಿಮ್ನಿಯು ತನ್ನ ಥ್ರೀ-ಡೋರ್ ಆವೃತ್ತಿಗಿಂತ ಹೆಚ್ಚಿನ ಪ್ರಯೋಜನವನ್ನು ಪಡೆದಿದೆ. ವಿಸ್ತೃತ ವ್ಹೀಲ್‌ಬೇಸ್‌ನಿಂದಾಗಿ ಇಲ್ಲಿ ಆಸೀನರಾಗುವವರು ಹೆಚ್ಚಿನ ಲೆಗ್‌ರೂಂ ಅನ್ನು ಪಡೆಯಬಹುದಾಗಿದೆ. ಆದಾಗ್ಯೂ, ಹೆಚ್ಚುವರಿ ಬಾಗಿಲುಗಳು ಮತ್ತು ಹೆಚ್ಚುವರಿ ಸ್ಥಳಾವಕಾಶದೊಂದಿಗೆ ಜಿಮ್ನಿಯು ಅಧಿಕೃತವಾಗಿ ನಾಲ್ಕು ಆಸನಗಳನ್ನು ಹೊಂದಿದೆ ಮತ್ತು ಯಾವುದೇ ಆರ್ಮ್‌ರೆಸ್ಟ್, ರಿಯರ್ ಎಸಿ ವೆಂಟ್‌ಗಳು ಅಥವಾ USB ಸಾಕೆಟ್‌ಗಳನ್ನು ಹೊಂದಿಲ್ಲ.

ಸಂಬಂಧಿತ: ಜಿಮ್ನಿಯ ಈ ಏಳು ರೋಮಾಂಚಕ ಬಣ್ಣಗಳಲ್ಲಿ ನಿಮ್ಮ ಆಯ್ಕೆ ಯಾವುದು?

ಇಂಡಿಯಾ-ಸ್ಪೆಕ್ ಜಿಮ್ನಿಯ ಬಿಡುಗಡೆಯು ಮಾರ್ಚ್‌ನಲ್ಲಿ ನಡೆಯಲಿದ್ದರೂ, ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಆದ್ದರಿಂದ ಮಾರುತಿ ಎಸ್‌ಯುವಿಯ ಬಗ್ಗೆ ಆಳವಾದ ವಿಮರ್ಶೆ ಪಡೆಯಲು ಯಾವಾಗಲೂ ಕಾರ್‌ದೇಖೋ ಗೆ ಭೇಟಿ ನೀಡುತ್ತಿರಿ.

r
ಅವರಿಂದ ಪ್ರಕಟಿಸಲಾಗಿದೆ

rohit

  • 71 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಜಿಮ್ನಿ

H
h devkumar
Jan 18, 2023, 9:27:41 AM

what may be the approx. price of m jiimmy

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ