Tata Altroz Racerನ ಎಂಟ್ರಿ-ಲೆವೆಲ್ R1 ವೇರಿಯಂಟ್ ನ 7 ಚಿತ್ರಗಳು ನಿಮಗಾಗಿ
ಎಂಟ್ರಿ-ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಆಲ್ಟ್ರೋಜ್ R1 10.25-ಇಂಚಿನ ಟಚ್‌ಸ್ಕ್ರೀನ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ AC ಮತ್ತು ಆರು ಏರ್‌ಬ್ಯಾಗ್‌ಗಳಂತಹ ಫೀಚರ್ ಗಳನ್ನು ಪಡೆಯುತ್ತದೆ.
ಹ್ಯುಂಡೈ i20 N ಲೈನ್‌ಗೆ ನೇರ ಪ್ರತಿಸ್ಪರ್ಧಿಯಾಗಿ ಟಾಟಾ ಆಲ್ಟ್ರೋಜ್ ರೇಸರ್ ಈಗ ಭಾರತದ ಮಾರುಕಟ್ಟೆಗೆ ಬಂದಿದೆ. ಇದು ಹೆಚ್ಚು ಶಕ್ತಿಶಾಲಿಯಾಗಿರುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ ಮತ್ತು ಹೊಸ ಸ್ಟೈಲ್ ಗಳು ಮತ್ತು ಫೀಚರ್ ಗಳನ್ನು ಪಡೆಯುತ್ತದೆ. ಟಾಟಾ ತನ್ನ ಆಲ್ಟ್ರೊಜ್‌ನ ಸ್ಪೋರ್ಟಿಯರ್ ವರ್ಷನ್ ಅನ್ನು R1, R2 ಮತ್ತು R3 ಎಂಬ ಮೂರು ವಿಧಗಳಲ್ಲಿ ನೀಡುತ್ತಿದೆ. ಬನ್ನಿ, ಈ ಹ್ಯಾಚ್‌ಬ್ಯಾಕ್‌ನ ಎಂಟ್ರಿ ಲೆವೆಲ್ R1 ವೇರಿಯಂಟ್ ನ ಚಿತ್ರಗಳನ್ನು ನೋಡೋಣ
ಮುಂಭಾಗ
ಆಲ್ಟ್ರೋಜ್ ರೇಸರ್‌ನ ಎಂಟ್ರಿ ಲೆವೆಲ್ R1 ವರ್ಷನ್ ಅದರ ಟಾಪ್-ಸ್ಪೆಕ್ ಮಾಡೆಲ್ ಗಳಂತೆಯೇ ಕಾಣುತ್ತದೆ. ಇದು ಅದೇ ರೀತಿಯ ಫ್ರಂಟ್ ಫಾಗ್ ಲ್ಯಾಂಪ್ ಗಳು ಮತ್ತು LED DRL ಗಳ ಜೊತೆಗೆ ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಇದು ಆಲ್ಟ್ರೊಜ್ ರೇಸರ್‌ನ ಎಂಟ್ರಿ ಲೆವೆಲ್ ವೇರಿಯಂಟ್ ಆಗಿರುವ ಕಾರಣ, 360-ಡಿಗ್ರಿ ಕ್ಯಾಮೆರಾ ಸೆಟಪ್‌ಗಾಗಿ ಫ್ರಂಟ್-ಗ್ರಿಲ್ ಮೌಂಟೆಡ್ ಕ್ಯಾಮೆರಾವನ್ನು ಮಾತ್ರ ಪಡೆಯುವುದಿಲ್ಲ.
ಸೈಡ್
ಸೈಡ್ ನಲ್ಲಿ ಎಲ್ಲಾ ಮೂರು ಪಿಲ್ಲರ್ ಗಳು ಮತ್ತು ವಿಂಡೋ ಲೈನ್ ಅನ್ನು ಬ್ಲಾಕ್ ಮಾಡಲಾಗಿದೆ. ಇದು ಈ ಹ್ಯಾಚ್‌ಬ್ಯಾಕ್‌ನ ಟಾಪ್-ಸ್ಪೆಕ್ R2 ಮತ್ತು R3 ವೇರಿಯಂಟ್ ಗಳಲ್ಲಿ ಕಂಡುಬರುವ 16-ಇಂಚಿನ ಬ್ಲ್ಯಾಕ್ಡ್-ಔಟ್ ಅಲೊಯ್ ವೀಲ್ಸ್ ಮತ್ತು ಬ್ಲ್ಯಾಕ್ಡ್-ಔಟ್ OVRM ಗಳನ್ನು (ಹೊರಗಿನ ರಿಯರ್ ವ್ಯೂ ಮಿರರ್) ಪಡೆಯುತ್ತದೆ. ರೆಗ್ಯುಲರ್ ಆಲ್ಟ್ರೋಜ್ ನಿಂದ ಭಿನ್ನವಾಗಿ ಕಾಣಲು, ಮುಂಭಾಗದ ಫೆಂಡರ್‌ಗಳಲ್ಲಿ 'ರೇಸರ್' ಬ್ಯಾಡ್ಜ್ ಅನ್ನು ನೀಡಲಾಗಿದೆ.
ಇದನ್ನು ಕೂಡ ಓದಿ: ಟಾಟಾ ಆಲ್ಟ್ರೋಜ್ ರೇಸರ್ R1 ವರ್ಸಸ್ ಹುಂಡೈ i20 N ಲೈನ್ N6: ಸ್ಪೆಸಿಫಿಕೇಷನ್ ಗಳ ಹೋಲಿಕೆ
ಇದು ಬ್ಲಾಕ್-ಹುಡ್ ನೊಂದಿಗೆ ಹುಡ್‌ನಿಂದ ರೂಫ್ ನ ಕೊನೆಯವರೆಗೆ ಡ್ಯುಯಲ್ ವೈಟ್ ಸ್ಟ್ರೈಪ್‌ಗಳನ್ನು ಹೊಂದಿದೆ.
ಹಿಂಭಾಗ
ಎಂಟ್ರಿ ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಆಲ್ಟ್ರೋಜ್ ರೇಸರ್ R1 ರಿಯರ್ ಡಿಫಾಗರ್ ಮತ್ತು ವಾಷರ್‌ನೊಂದಿಗೆ ರಿಯರ್ ವೈಪರ್‌ನೊಂದಿಗೆ ಬರುತ್ತದೆ. ಇದು ಹ್ಯಾಚ್‌ಬ್ಯಾಕ್‌ನ 'ರೇಸರ್' ವರ್ಷನ್ ನಲ್ಲಿ ಮಾತ್ರ ಇರುವ ಉದ್ದವಾದ ರೂಫ್ ಸ್ಪಾಯ್ಲರ್ ಅನ್ನು ಕೂಡ ಪಡೆಯುತ್ತದೆ. ಇದು ಹ್ಯಾಚ್‌ಬ್ಯಾಕ್‌ನ ಸಾಮಾನ್ಯ ವರ್ಷನ್ ಗೆ ಹೋಲಿಸಿದರೆ ಸ್ಪೋರ್ಟಿಯರ್ ಸೌಂಡ್ ನೀಡುವ ಡ್ಯುಯಲ್ ಟಿಪ್ ಎಕ್ಸಾಸ್ಟ್ ಅನ್ನು ಕೂಡ ಹೊಂದಿದೆ.
ಆಲ್ಟ್ರೋಜ್ ರೇಸರ್ ಟೈಲ್‌ಗೇಟ್‌ನಲ್ಲಿ 'i-Turbo+' ಬ್ಯಾಡ್ಜ್ ಅನ್ನು ಹೊಂದಿದೆ, ಇದು ಹಿಂದಿನ ಆಲ್ಟ್ರೋಜ್ i-Turbo ಗೆ ಹೋಲಿಸಿದರೆ ಹೆಚ್ಚು ಶಕ್ತಿಶಾಲಿ ವರ್ಷನ್ ಆಗಿದೆ ಎಂದು ತೋರಿಸುತ್ತದೆ.
ಒಳಭಾಗ
ಹಕ್ಕು ನಿರಾಕರಣೆ: ಚಿತ್ರದಲ್ಲಿ ತೋರಿಸಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಟಾಟಾ ಆಲ್ಟ್ರೋಜ್ ರೇಸರ್‌ನ ಮಿಡ್-ಸ್ಪೆಕ್ R2 ಮತ್ತು ಟಾಪ್-ಸ್ಪೆಕ್ R3 ವೇರಿಯಂಟ್ ಗಳೊಂದಿಗೆ ಮಾತ್ರ ನೀಡಲಾಗುತ್ತದೆ. ಇದು ಎಂಟ್ರಿ ಲೆವೆಲ್ R1 ವೇರಿಯಂಟ್ ನಲ್ಲಿ ಲಭ್ಯವಿಲ್ಲ.
ಆಲ್ಟ್ರೋಜ್ ರೇಸರ್‌ನ ಎಂಟ್ರಿ ಲೆವೆಲ್ R1 ವರ್ಷನ್ ನ ಕ್ಯಾಬಿನ್ ಅದರ ಟಾಪ್-ಸ್ಪೆಕ್ ಮಾಡೆಲ್ ಅನ್ನು ಬಹುತೇಕ ಹೋಲುತ್ತದೆ. ಆಲ್ಟ್ರೋಜ್ ರೇಸರ್ R1 ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಪೋರ್ಟ್ ಮಾಡುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಫೀಚರ್ ಅನ್ನು ಒಳಗೊಂಡಿದೆ.
ಇದು ರಿಯರ್ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ AC, ಕ್ರೂಸ್ ಕಂಟ್ರೋಲ್, 8-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಆರೆಂಜ್ ಥೀಮ್ ಇರುವ ಆಂಬಿಯೆಂಟ್ ಲೈಟಿಂಗ್‌ನಂತಹ ಫೀಚರ್ ಗಳನ್ನು ಹೊಂದಿದೆ. ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು EBD ಜೊತೆಗೆ ABS ಅನ್ನು ಒಳಗೊಂಡಿದೆ.
ಆದರೆ, ಈ ವೇರಿಯಂಟ್ ವೈರ್‌ಲೆಸ್ ಫೋನ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್, ಸನ್‌ರೂಫ್, ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ಫೀಚರ್ ಗಳನ್ನು ಪಡೆಯುವುದಿಲ್ಲ.
ಇದು ಆಲ್ಟ್ರೋಜ್ ರೇಸರ್‌ನ ಎಂಟ್ರಿ ಲೆವೆಲ್ ಮಾಡೆಲ್ ಆಗಿದ್ದರೂ ಕೂಡ, ಲೆಥೆರೆಟ್ ಸೀಟ್‌ಗಳು, ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್ ಮತ್ತು ಫ್ರಂಟ್ ಸ್ಲೈಡಿಂಗ್ ಆರ್ಮ್‌ರೆಸ್ಟ್ ಅನ್ನು ಪಡೆಯುತ್ತದೆ. ಆದರೆ, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳನ್ನು ಹೊಂದಿಲ್ಲ, ಇದು ಸಂಪೂರ್ಣವಾಗಿ ಲೋಡ್ ಮಾಡಲಾದ R3 ವರ್ಷನ್ ನಲ್ಲಿ ಮಾತ್ರ ಲಭ್ಯವಿದೆ.
ಪವರ್‌ಟ್ರೇನ್
ಟಾಟಾ ಆಲ್ಟ್ರೋಜ್ ರೇಸರ್ ಟಾಟಾ ನೆಕ್ಸಾನ್‌ನಲ್ಲಿರುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ಇದು 120 PS ಮತ್ತು 170 Nm ಉತ್ಪಾದನೆ ಮಾಡುತ್ತದೆ, ಮತ್ತು ಕೇವಲ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ನೊಂದಿಗೆ ಮಾತ್ರ ಬರುತ್ತದೆ. ಟಾಟಾ ಭವಿಷ್ಯದಲ್ಲಿ ಆಲ್ಟ್ರೋಜ್ ರೇಸರ್‌ಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಬಹುದು.
ಬೆಲೆ
ಆಲ್ಟ್ರೋಜ್ ರೇಸರ್‌ನ ಎಂಟ್ರಿ ಲೆವೆಲ್ R1 ವೇರಿಯಂಟ್ ಬೆಲೆಯು ರೂ.10.49 ಲಕ್ಷ ಇದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ). ಇದು ಹ್ಯುಂಡೈ i20 N ಲೈನ್‌ನ N6 ವೇರಿಯಂಟ್ ಗೆ ನೇರ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ: ಟಾಟಾ ಆಲ್ಟ್ರೋಜ್ ರೇಸರ್ ಆನ್ ರೋಡ್ ಬೆಲೆ