Login or Register ಅತ್ಯುತ್ತಮ CarDekho experience ಗೆ
Login

ಮುಂದಿನ ಹಣಕಾಸು ವರ್ಷದ (2023-24) ಮೊದಲಾರ್ಧದಲ್ಲಿ ಟಾಟಾ ಆಲ್ಟ್ರೋಸ್ ಮತ್ತು ಪಂಚ್ ಸಿಎನ್‌ಜಿ ಬಿಡುಗಡೆ ದೃಢ

ಫೆಬ್ರವಾರಿ 03, 2023 02:29 pm rohit ಮೂಲಕ ಮಾರ್ಪಡಿಸಲಾಗಿದೆ
43 Views

ಎರಡೂ ಮಾಡೆಲ್‌ಗಳು ಸ್ಪ್ಲಿಟ್-ಸಿಲಿಂಡರ್-ಟ್ಯಾಂಕ್ ಸೆಟ್‌ಅಪ್ ಪ್ರಾರಂಭಿಸಿದ್ದು, ಅದು ಕಾಂಪ್ಯಾಕ್ಟ್ ಕಾರಿನಲ್ಲಿಯೂ ಸಹ ಬಳಕೆ ಮಾಡಬಹುದಾದ ಬೂಟ್ ಸ್ಪೇಸ್ ಅನ್ನು ನೀಡುತ್ತದೆ

  • ಟಾಟಾ ಆಟೋ ಎಕ್ಸ್‌ಪೋ 2023 ರಲ್ಲಿ ಆಲ್ಟ್ರೋಸ್ ಮತ್ತು ಪಂಚ್ ಸಿಎನ್‌ಜಿಯನ್ನು ಪ್ರದರ್ಶಿಸಿತು.

  • ಎರಡೂ ಬಳಸಬಹುದಾದ ಬೂಟ್ ಸ್ಪೇಸ್ ಅನ್ನು ಹೊಂದಿದ್ದರೂ, ಅವುಗಳ ನಿಖರವಾದ ಸಾಮರ್ಥ್ಯವೇನು ಎಂಬುದು ಇಲ್ಲಿಯವರೆಗೂ ಬಹಿರಂಗವಾಗಿಲ್ಲ.

  • ಎರಡೂ ಪ್ರಮಾಣಿತ ಆವೃತ್ತಿಗಳು ಕ್ರಮವಾಗಿ 345 ಲೀಟರ್‌ಗಳು ಮತ್ತು 366 ಲೀಟರ್‌ಗಳಷ್ಟು ಲಗೇಜ್ ಏರಿಯಾವನ್ನು ಹೊಂದಿವೆ.

  • ಎರಡೂ ಮಾಡೆಲ್‌ಗಳು ಸಿಎನ್‌ಜಿ ಮೋಡ್‌ನಲ್ಲಿ 77PS/97Nm ನ 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿವೆ.

  • ಎರಡರ ಮಧ್ಯೆ ಅಥವಾ ಹೆಚ್ಚಿನ ನಿರ್ದಿಷ್ಟತೆಯ ಟ್ರಿಮ್‌ಗಳಲ್ಲಿ ಈ ಸಿಎನ್‌ಜಿ ಆಯ್ಕೆಯನ್ನು ಟಾಟಾ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

  • ಅವುಗಳಿಗೆ ಅನುಗುಣವಾದ ಪೆಟ್ರೋಲ್ ವೇರಿಯೆಂಟ್‌ಗಳ ಮೇಲೆ ಸುಮಾರು ಒಂದು ಲಕ್ಷದ ಪ್ರೀಮಿಯಂ ಅನ್ನು ಕಮಾಂಡ್ ಮಾಡುವ ಸಾಧ್ಯತೆಯಿದೆ.

ಟಾಟಾ, ಭಾರತದಲ್ಲಿ ಕಾರುಗಳ ಮೇಲೆ ನೀಡಲಾಗುವ ಸಿಎನ್‌ಜಿ ಕಿಟ್‌ಗಳ ವಿಧದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ನೋಡುತ್ತಿದೆ. ಇದು ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಿದಂತೆ ಈ ಆಲ್ಟ್ರೋಸ್ ಮತ್ತು ಪಂಚ್‌ನಿಂದ ಆರಂಭಿಸಿ, ತನ್ನ ಮುಂಬರುವ ಸಿಎನ್‌ಜಿ ಮಾಡೆಲ್‌ಗಳಲ್ಲಿ ಸ್ಪ್ಲಿಟ್-ಸಿಲಿಂಡರ್-ಟ್ಯಾಂಕ್ ಸೆಟ್‌ಅಪ್ ಅನ್ನು ಒದಗಿಸಲಿದೆ. ಮುಂದಿನ ಹಣಕಾಸು ವರ್ಷದ (2023-24) ಮೊದಲಾರ್ಧದಲ್ಲಿ ಈ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ.

ಸಿಎನ್‌ಜಿ ಮಾಲೀಕರಿಗೆ ನಿಜವಾಗಿಯೂ ಬಳಸಬಹುದಾದ ಬೂಟ್ ಸ್ಪೇಸ್ ಅನ್ನು ಒದಗಿಸುವ ಉದ್ದೇಶದಿಂದ ಸ್ಪ್ಲಿಟ್-ಟ್ಯಾಂಕ್ ಸೆಟ್ಅಪ್ ಅನ್ನು ಅಳವಡಿಸಲಾಗಿದೆ. ಆದಾಗ್ಯೂ, ಟಾಟಾ, ಆಲ್ಟ್ರೋಸ್ ಮತ್ತು ಪಂಚ್ ಸಿಎನ್‌ಜಿಯ ನಿಖರವಾದ ಲಗೇಜ್ ಸಾಮರ್ಥ್ಯವನ್ನು ಬಹಿರಂಗಪಡಿಸಿಲ್ಲ. ಆಲ್ಟ್ರೋಸ್ ಮತ್ತು ಪಂಚ್‌ನ ಪ್ರಮಾಣಿತ ಆವೃತ್ತಿಗಳು ಕ್ರಮವಾಗಿ 345 ಲೀಟರ್‌ಗಳು ಮತ್ತು 366 ಲೀಟರ್‌ಗಳಷ್ಟು ಲಗೇಜ್ ಏರಿಯಾವನ್ನು ಹೊಂದಿವೆ.

ಆಲ್ಟ್ರೋಸ್ ಮತ್ತು ಪಂಚ್ ಎರಡೂ ಸಿಎನ್‌ಜಿ ಆಯ್ಕೆಯೊಂದಿಗೆ 1.2-ಲೀಟರ್ ಇಂಜಿನ್ ಅನ್ನು ಪಡೆದಿದ್ದು, ಅವು 77PS/95Nm ಅನ್ನು ಹೊಂದಿವೆ. ಇದರ ಪ್ರಮಾಣಿತ ಪೆಟ್ರೋಲ್ ಆಯ್ಕೆಯಲ್ಲಿ, ಅದೇ ಇಂಜಿನ್ ಔಟ್‌ಪುಟ್ 86PS/113Nm ಆಗಿದೆ. ಸಿಎನ್‌ಜಿ ವೇರಿಯೆಂಟ್‌ಗಳು ಫೈವ್-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆದರೆ, ಸಾಮಾನ್ಯ ಪೆಟ್ರೋಲ್ ಟ್ರಿಮ್‌ಗಳು ಸಹ ಆಪ್ಷನಲ್ ಫೈವ್-ಸ್ಪೀಡ್ ಎಎಂಟಿಯನ್ನು ಪಡೆಯುತ್ತವೆ

ಇದನ್ನೂ ಓದಿ: ಶೀಘ್ರದಲ್ಲೇ ADAS ಅಳವಡಿಸಿರುವ ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಬಿಡುಗಡೆ

ಆಲ್ಟ್ರೋಸ್ ಮತ್ತು ಪಂಚ್ ಇವೆರಡರ ಮಧ್ಯೆ ಅಥವಾ ಹೆಚ್ಚಿನ ನಿರ್ದಿಷ್ಟತೆಯ ಟ್ರಿಮ್‌ಗಳಲ್ಲಿ ಟಾಟಾ ಈ ಸಿಎನ್‌ಜಿ ಕಿಟ್ ಅನ್ನು ಒದಗಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಎರಡು ಟಾಟಾ ಕಾರುಗಳ ಸಿಎನ್‌ಜಿ ಟ್ರಿಮ್‌ಗಳು ಧ್ವನಿ-ಸಕ್ರಿಯಗೊಳಿಸಬಹುದಾದ ಸನ್‌ರೂಫ್, ಏಳು ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಆರು ಏರ್ ಬ್ಯಾಗ್‌ಗಳಂತಹ ಕೆಲವು ಸಾಮಾನ್ಯ ಫೀಚರ್‌ಗಳನ್ನು ಹೊಂದಿವೆ.

ಅವುಗಳು ತಮ್ಮ ಅನುಗುಣವಾದ ಪೆಟ್ರೋಲ್ ವೇರಿಯೆಂಟ್‌ಗಳಿಗಿಂತ ಸುಮಾರು ಒಂದು ಲಕ್ಷದ ಪ್ರೀಮಿಯಂ ಅನ್ನು ಕಮಾಂಡ್ ಮಾಡಲು ನಿರೀಕ್ಷಿಸಲಾಗಿದೆ. ಪ್ರಸ್ತುತ ಆಲ್ಟ್ರೋಸ್‌ನ ಬೆಲೆ ರೂ. 6.35 ಲಕ್ಷದಿಂದ ರೂ. 10.25 ಲಕ್ಷಗಳ ನಡುವೆ ಇದ್ದರೆ, ಪಂಚ್‌ನ ಪೆಟ್ರೋಲ್-ಮಾತ್ರ ವೇರಿಯೆಂಟ್‌ನ ಬೆಲೆಯ ರೇಂಜ್ ರೂ. 6 ಲಕ್ಷದಿಂದ 9.54 ಲಕ್ಷಗಳವರೆಗಿದೆ (ಎಕ್ಸ್‌-ಶೋರೂಮ್, ದೆಹಲಿ). ಆಲ್ಟ್ರೋಸ್ ಸಿಎನ್‌ಜಿಯು ಮಾರುತಿ ಬಲೆನೊ ಸಿಎನ್‌ಜಿ ಮತ್ತು ಟೊಯೋಟಾ ಗ್ಲಾಂಝಾ ಸಿಎನ್‌ಜಿ ವಿರುದ್ಧವಾಗಿ ಸ್ಪರ್ಧಿಸಲಿದೆ, ಪಂಚ್ ಸಿಎನ್‌ಜಿಯು ಸದ್ಯ ಯಾವುದೇ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ.

ಇಲ್ಲಿ ಇನ್ನಷ್ಟು ಓದಿ : ಟಾಟಾ ಆಲ್ಟ್ರೋಸ್ ಆಟೋಮ್ಯಾಟಿಕ್

Share via

Write your Comment on Tata ಆಲ್ಟ್ರೋಝ್ 2020-2023

explore similar ಕಾರುಗಳು

ಟಾಟಾ ಆಲ್ಟ್ರೋಝ್

4.61.4k ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಡೀಸಲ್23.64 ಕೆಎಂಪಿಎಲ್
ಪೆಟ್ರೋಲ್19.33 ಕೆಎಂಪಿಎಲ್
ಸಿಎನ್‌ಜಿ26.2 ಕಿಮೀ / ಕೆಜಿ

ಟಾಟಾ ಪಂಚ್‌

4.51.4k ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.99 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.23 - 10.19 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ