ರೇಸ್ ಟ್ರ್ಯಾಕ್‌ನಲ್ಲಿ Hyundai i20 N Line ಮತ್ತು Maruti Fronx ಅನ್ನು ಹಿಂದಿಕ್ಕಿದ Tata Altroz Racer
ಟಾಟಾ ಆಲ್ಟ್ರೋಜ್ ರೇಸರ್ ಗಾಗಿ samarth ಮೂಲಕ ಜುಲೈ 04, 2024 07:11 am ರಂದು ಪ್ರಕಟಿಸಲಾಗಿದೆ
- 84 Views
- ಕಾಮೆಂಟ್ ಅನ್ನು ಬರೆಯಿರಿ
ಇದು 2 ಸೆಕೆಂಡುಗಳಿಗಿಂತ ಹೆಚ್ಚಿನ ಮುನ್ನಡೆಯೊಂದಿಗೆ i20 ಎನ್ ಲೈನ್ ಅನ್ನು ಸೋಲಿಸುವ ಮೂಲಕ ಅತ್ಯಂತ ವೇಗದ ಭಾರತೀಯ ಹ್ಯಾಚ್‌ಬ್ಯಾಕ್ ಆಗಿದೆ
- ಟಾಟಾ ಆಲ್ಟ್ರೋಜ್, ಹ್ಯುಂಡೈ ಐ20 ಎನ್‌ಲೈನ್ ಮತ್ತು ಮಾರುತಿ ಫ್ರಾಂಕ್ಸ್ ಟರ್ಬೊಗಳನ್ನು ನರೇನ್ ಕಾರ್ತಿಕೇಯನ್ ಅವರು CoASTT ರೇಸ್ ಟ್ರ್ಯಾಕ್‌ನಲ್ಲಿ ಪರೀಕ್ಷಿಸಿದರು.
- ಆಲ್ಟ್ರೋಜ್ ರೇಸರ್ ಲ್ಯಾಪ್ ಅನ್ನು ಪೂರ್ಣಗೊಳಿಸಲು ಕಡಿಮೆ ಸಮಯವನ್ನು ತೆಗೆದುಕೊಂಡಿತು: ಕೇವಲ 2 ನಿಮಿಷ 21.74 ಸೆಕೆಂಡುಗಳು.
- ಟಾಟಾದ ಈ ಹ್ಯಾಚ್‌ಬ್ಯಾಕ್ ಅನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ "ವೇಗದ ಭಾರತೀಯ ಹ್ಯಾಚ್‌ಬ್ಯಾಕ್" ಎಂದು ಗುರುತಿಸಿದೆ.
- ಆಲ್ಟ್ರೋಜ್ ರೇಸರ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುತ್ತದೆ, ಆದರೆ i20 ಎನ್ ಲೈನ್ ಮತ್ತು ಫ್ರಾಂಕ್ಸ್ ಟರ್ಬೊಗಳು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ.
ಇತ್ತೀಚೆಗೆ ಭಾರತದ ಮೊಟ್ಟಮೊದಲ ಫಾರ್ಮುಲಾ ರೇಸರ್ ನರೇನ್ ಕಾರ್ತಿಕೇಯನ್ ಅವರು, ಆಲ್ಟ್ರೋಜ್ ರೇಸರ್ ಅನ್ನು ಅದರ ಅತ್ಯಂತ ಸೂಕ್ತವಾದ ಪ್ರತಿಸ್ಪರ್ಧಿಯಾದ ಹ್ಯುಂಡೈ i20 N ಲೈನ್, ಜೊತೆಗೆ ಮಾರುತಿ ಫ್ರಾಂಕ್ಸ್‌ನ ಟರ್ಬೊ ಆವೃತ್ತಿಯ ವೇಗ ಪರೀಕ್ಷೆಯನ್ನು ತಮಿಳುನಾಡಿನ ಕೊಯಮತ್ತೂರಿನ CoASTT ರೇಸಿಂಗ್ ಟ್ರ್ಯಾಕ್‌ನಲ್ಲಿ ಪರೀಕ್ಷಿಸಿದರು. ಈ ಪರೀಕ್ಷೆಯಲ್ಲಿ, ಎಲ್ಲಾ ಮೂರು ಕಾರುಗಳ ಲ್ಯಾಪ್ ಸಮಯವನ್ನು ದಾಖಲಿಸಲಾಗಿದೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ಹೇಗೆ ಪ್ರದರ್ಶನ ನೀಡಿದೆ ಎಂಬುವುದು ಇಲ್ಲಿದೆ.
ಲ್ಯಾಪ್‌ನ ಸಮಯ
ಮೊಡೆಲ್ |
ದಾಖಲಾದ ಸಮಯ |
ಟಾಟಾ ಆಲ್ಟ್ರೋಜ್ ರೇಸರ್ |
2.21.74 |
ಫ್ರಾಂಕ್ಸ್ ಟರ್ಬೋ |
2.22.72 |
ಐ20 ಎನ್ ಲೈನ್ |
2.23.96 |
ಟಾಟಾ ಆಲ್ಟ್ರೋಜ್ ರೇಸರ್ 2 ನಿಮಿಷ ಮತ್ತು 21.74 ಸೆಕೆಂಡುಗಳ ಲ್ಯಾಪ್ ಸಮಯದೊಂದಿಗೆ ಅತ್ಯಂತ ವೇಗದ ಮೊಡೆಲ್‌ಆಗಿ ಹೊರಹೊಮ್ಮಿತು. ಮಾರುತಿ ಫ್ರಾಂಕ್ಸ್ ಟರ್ಬೊ ಕೇವಲ 1.04 ಸೆಕೆಂಡ್‌ಗಳ ಹಿನ್ನಡೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಅಲ್ಟ್ರೋಜ್ ರೇಸರ್‌ಗಿಂತ 2.22 ಸೆಕೆಂಡ್‌ಗಳನ್ನು ಹೆಚ್ಚು ತೆಗೆದುಕೊಂಡು ಹುಂಡೈ ಐ20 ಎನ್ ಲೈನ್ ಕೊನೆಯ ಸ್ಥಾನದಲ್ಲಿದೆ. ಈ ಸಮಯದೊಂದಿಗೆ, ಟಾಟಾದ ಹ್ಯಾಚ್‌ಬ್ಯಾಕ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ "ವೇಗದ ಭಾರತೀಯ ಹ್ಯಾಚ್‌ಬ್ಯಾಕ್" ಎಂಬ ಮನ್ನಣೆಯನ್ನು ಪಡೆದಿದೆ.
ಇದನ್ನೂ ಸಹ ಓದಿ: Tata Altroz Racer: ಈ 15 ಚಿತ್ರಗಳಲ್ಲಿದೆ ಹೊಸ ಸ್ಪೋರ್ಟಿ ಎಡಿಷನ್‌ನ ಎಲ್ಲಾ ವಿವರಗಳು
ಪವರ್‌ಟ್ರೈನ್
ಈ ಕಾರುಗಳ ಪವರ್‌ಟ್ರೇನ್‌ಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ:
ಮೊಡೆಲ್‌ಗಳು |
ಟಾಟಾ ಆಲ್ಟ್ರೋಜ್ ರೇಸರ್ |
ಹ್ಯುಂಡೈ ಐ20 ಎನ್ ಲೈನ್ |
ಮಾರುತಿ ಫ್ರಾಂಕ್ಸ್ |
ಎಂಜಿನ್ |
1.2-ಲೀಟರ್ ಟರ್ಬೋ ಪೆಟ್ರೋಲ್ |
1-ಲೀಟರ್ ಟರ್ಬೋ ಪೆಟ್ರೋಲ್ |
1-ಲೀಟರ್ ಟರ್ಬೋ ಪೆಟ್ರೋಲ್ |
ಪವರ್ |
120 ಪಿಎಸ್ |
120 ಪಿಎಸ್ |
100 ಪಿಎಸ್ |
ಟಾರ್ಕ್ |
170 ಎನ್‌ಎಮ್ |
172 ಎನ್‌ಎಮ್ |
148 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್ |
6-ಸ್ಪೀಡ್ ಮ್ಯಾನುಯಲ್, 7-ಸ್ಪೀಡ್ ಡಿಸಿಟಿ* |
5-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ್ |
*ಡಿಸಿಟಿ- ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಆಲ್ಟ್ರೋಜ್ ರೇಸರ್ ಮತ್ತು i20 ಎನ್ ಲೈನ್‌ನ ಔಟ್‌ಪುಟ್ ಅಂಕಿಅಂಶಗಳು ಒಂದೇ ಆಗಿರುತ್ತವೆ, ಆದರೆ ಎರಡನೆಯದು ಚಿಕ್ಕ ಎಂಜಿನ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಪಡೆಯುತ್ತದೆ. ಮತ್ತೊಂದೆಡೆ, ಫ್ರಾಂಕ್ಸ್ ಚಿಕ್ಕ ಎಂಜಿನ್ ಮತ್ತು ಕಡಿಮೆ ಪವರ್ ಉತ್ಪಾದನೆಯೊಂದಿಗೆ ರೇಸ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಈ ಮೂರು ಕಾರುಗಳು ಸಾಧಿಸಿದ ಲ್ಯಾಪ್ ಸಮಯಗಳು ಅವುಗಳ ಪವರ್‌ಟ್ರೇನ್‌ನ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಜೊತೆಗೆ ಅವುಗಳ ನಿರ್ವಹಣೆ ಸಾಮರ್ಥ್ಯಗಳ ಮೇಲೂ ಅವಲಂಬಿತವಾಗಿವೆ.
ಬೆಲೆ
ಟಾಟಾ ಆಲ್ಟ್ರೋಜ್ ರೇಸರ್ |
ಹ್ಯುಂಡೈ ಐ20 ಎನ್ ಲೈನ್ |
ಮಾರುತಿ ಫ್ರಾಂಕ್ಸ್ |
9.49 ಲಕ್ಷದಿಂದ 10.99 ಲಕ್ಷ ರೂ |
9.99 ಲಕ್ಷದಿಂದ 12.52 ಲಕ್ಷ ರೂ |
9.73 ಲಕ್ಷ ರೂ.ನಿಂದ 13.04 ಲಕ್ಷ ರೂ.(ಟರ್ಬೊ-ಪೆಟ್ರೋಲ್) |
ಆಲ್ಟ್ರೊಜ್ ರೇಸರ್ ಅತ್ಯಂತ ಕೈಗೆಟುಕುವ ಹ್ಯಾಚ್‌ಬ್ಯಾಕ್ ಆಗಿದ್ದು, ಇದು ಫ್ರಾಂಕ್ಸ್‌ನ ಪ್ರವೇಶ ಮಟ್ಟದ ಟರ್ಬೊ-ಪೆಟ್ರೋಲ್ ಆವೃತ್ತಿಗಿಂತ 24,000 ರೂ.ಮತ್ತು ಐ20 ಎನ್ ಲೈನ್‌ನ ಬೇಸ್-ಸ್ಪೆಕ್ ಎನ್6 ಆವೃತ್ತಿಗಿಂತ 50,000 ರೂ. ರಷ್ಟು ಕಡಿಮೆ ಬೆಲೆಯನ್ನು ಹೊಂದಿದೆ.
ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಟಾಟಾ ಆಲ್ಟ್ರೋಜ್ ರೇಸರ್ ಆನ್‌ರೋಡ್ ಬೆಲೆ