• English
  • Login / Register

Tata Harrier EV ಪೇಟೆಂಟ್ ಚಿತ್ರ ಆನ್‌ಲೈನ್‌ನಲ್ಲಿ ಲೀಕ್; 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ

ಟಾಟಾ ಹ್ಯಾರಿಯರ್ ಇವಿ ಗಾಗಿ rohit ಮೂಲಕ ಜನವರಿ 24, 2024 07:29 pm ರಂದು ಪ್ರಕಟಿಸಲಾಗಿದೆ

  • 58 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯಾರಿಯರ್ EVಯ ಪೇಟೆಂಟ್ ಚಿತ್ರವು ಆಟೋ ಎಕ್ಸ್‌ಪೋ 2023 ನಲ್ಲಿ ಪ್ರದರ್ಶಿಸಿದ ಕಾನ್ಸೆಪ್ಟ್  ಅಂಶಗಳನ್ನು ಬಹುತೇಕ ಹೋಲುತ್ತದೆ.

Tata Harrier EV

  • ಟಾಟಾ ತನ್ನ ಹ್ಯಾರಿಯರ್ EV ಅನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಕಾನ್ಸೆಪ್ಟ್ ಆಗಿ ಪರಿಚಯಿಸಿತು.
  • ಇದು 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಮತ್ತು ಬೆಲೆಗಳು ರೂ 30 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
  • ಪೇಟೆಂಟ್ ಚಿತ್ರವು ಫೇಸ್‌ಲಿಫ್ಟ್ ಆಗಿರುವ SUVಯಲ್ಲಿ ಇರುವಂತಹ ಅದೇ ಕನೆಕ್ಟೆಡ್ LED ಟೈಲ್‌ಲೈಟ್‌ಗಳನ್ನು ತೋರಿಸುತ್ತದೆ, ಆದರೆ ಹೊಚ್ಚ ಹೊಸ ಅಲಾಯ್ ವೀಲ್ಸ್ ಸೆಟ್ ಗಳನ್ನು ನೀಡಲಾಗಿದೆ.
  • ಇದು ಮಲ್ಟಿಪಲ್ ಬ್ಯಾಟರಿ ಪ್ಯಾಕ್‌ಗಳು ಮತ್ತು AWD ಆಯ್ಕೆಯೊಂದಿಗೆ ಬರುವ ನಿರೀಕ್ಷೆಯಿದೆ.

 ಟಾಟಾ ಹ್ಯಾರಿಯರ್ EV ಯ ಬಗ್ಗೆ ಮೊದಲ ಮಾಹಿತಿಯು ನಮಗೆ ಆಟೋ ಎಕ್ಸ್‌ಪೋ 2023 ರಲ್ಲಿ ಸಿಕ್ಕಿತು. ಅಲ್ಲಿ ಇದನ್ನು ಕಾನ್ಸೆಪ್ಟ್ ಆಗಿ ತೋರಿಸಲಾಗಿತ್ತು ಮತ್ತು ಪ್ರೊಡಕ್ಷನ್ ಅನ್ನು ದೃಢಪಡಿಸಲಾಗಿತ್ತು. ಈಗ 2024 ರ ಆರಂಭದಲ್ಲಿ ಅದರ ಡಿಸೈನ್ ಅನ್ನು ಪೇಟೆಂಟ್ ಮಾಡಲಾಗಿದೆ, ಮತ್ತು ಅದರ ಲೀಕ್ ಆಗಿರುವ ಆನ್‌ಲೈನ್‌ ಚಿತ್ರವು ಎಲೆಕ್ಟ್ರಿಕ್ SUV ಯ ಪ್ರೊಡಕ್ಷನ್-ಸ್ಪೆಕ್ ವಿವರಗಳನ್ನು ತೋರಿಸುತ್ತದೆ.

 ಪೇಟೆಂಟ್ ಅಪ್ಲಿಕೇಶನ್ ಏನನ್ನು ತೋರಿಸುತ್ತದೆ?

Tata Harrier EV design patented

 ಟ್ರೇಡ್‌ಮಾರ್ಕ್ ಮಾಡಲಾದ ಚಿತ್ರವು ಹ್ಯಾರಿಯರ್ EV SUV ಯ ಹಿಂಭಾಗವನ್ನು ತೋರಿಸುತ್ತದೆ. ಇದು ಆಟೋ ಎಕ್ಸ್‌ಪೋ 2023 ನಲ್ಲಿ ಪ್ರದರ್ಶಿಸಲಾದ ಇತ್ತೀಚೆಗೆ ಫೇಸ್‌ಲಿಫ್ಟ್ ಆಗಿರುವ ವರ್ಷನ್ ಅನ್ನು ಆಧರಿಸಿದೆ. ಆಟೋ ಶೋನಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ವರ್ಷನ್ ಗೆ ಹೋಲಿಸಿದರೆ ಚಿತ್ರವು ಹೊಚ್ಚ ಹೊಸ ಅಲಾಯ್ ವೀಲ್ಸ್ ಅನ್ನು ತೋರಿಸುತ್ತದೆ. ಟೈಲ್‌ಗೇಟ್‌ನಲ್ಲಿ 'ಹ್ಯಾರಿಯರ್ EV' ಬ್ಯಾಡ್ಜ್ ಇಲ್ಲದಿದ್ದರೂ ಕೂಡ, ಇದು ಟಾಟಾದ ಆಧುನಿಕ EV ಗಳಲ್ಲಿ ಬರುವ '.ev' ಮಾನಿಕರ್ ಅನ್ನು ಮುಂಭಾಗದ ಡೋರ್ ನ ಕೆಳಗಿನ ಭಾಗದಲ್ಲಿ ಹೊಂದಿದೆ.

Tata Harrier EV concept at Auto Expo 2023

 ಹಿಂಭಾಗವು 2023 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ ಹ್ಯಾರಿಯರ್‌ನ ಫೇಸ್‌ಲಿಫ್ಟ್ ಆಗಿರುವ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ವರ್ಷನ್ ಗೆ ಹೋಲುತ್ತದೆ ಮತ್ತು ಹೆಚ್ಚು ಕಡಿಮೆ ಅದೇ ಫೀಚರ್ ಗಳನ್ನು (ಇಲ್ಲಿ ಕಾಣುತ್ತಿರುವ ಪನೋರಮಿಕ್ ಸನ್‌ರೂಫ್ ಸೇರಿದಂತೆ) ಪಡೆಯುವ ಸಾಧ್ಯತೆಯಿದೆ. ಆದರೆ, ಹ್ಯಾರಿಯರ್ EV ಯ ಮುಂಭಾಗವು ಅದರ ಡೀಸೆಲ್-ಚಾಲಿತ ವರ್ಷನ್ ಗಿಂತ ಸ್ವಲ್ಪ ಭಿನ್ನವಾಗಿರಬಹುದು ಎಂದು ನಾವು ನಿರೀಕ್ಷಿಸಬಹುದು.

 ಎಲೆಕ್ಟ್ರಿಕ್ ಪವರ್‌ಟ್ರೇನ್‌ನ ವಿವರಗಳು

 ನಿಖರವಾದ ಪವರ್‌ಟ್ರೇನ್ ವಿವರಗಳು ಇನ್ನೂ ಹೊರಬಂದಿಲ್ಲವಾದರೂ, ಟಾಟಾ ಇದನ್ನು ಮಲ್ಟಿ ಬ್ಯಾಟರಿ ಪ್ಯಾಕ್‌ಗಳು ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳ ಆಯ್ಕೆಯೊಂದಿಗೆ ನೀಡಬಹುದು ಎಂದು ನಾವು ಅಂದುಕೊಡಿದ್ದೇವೆ. ಇದು 500 ಕಿ.ಮೀ ಗಿಂತಲೂ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ಹೊಂದಬಹುದು ಮತ್ತು ಆಲ್-ವೀಲ್ ಡ್ರೈವ್‌ಟ್ರೇನ್ (AWD) ಆಯ್ಕೆಯೊಂದಿಗೆ ಬರಬಹುದು.

ಇದನ್ನು ಕೂಡ ಓದಿ: 2025 ರ ಅಂತ್ಯದ ವೇಳೆಗೆ ಲಾಂಚ್ ಆಗಲಿರುವ ಎಲ್ಲಾ ಟಾಟಾ EVಗಳ ಪಟ್ಟಿ ಇಲ್ಲಿವೆ

 ಯಾವಾಗ ಬಿಡುಗಡೆ ? ಬೆಲೆ ಎಷ್ಟಿರಬಹುದು ?

Tata Harrier EV​​​​​​​

ಟಾಟಾ ಹ್ಯಾರಿಯರ್ EV 2024 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಮತ್ತು ಇದರ ಬೆಲೆಯು ರೂ 30 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋ ರೂಂ). ಇದರ ನೇರ ಪ್ರತಿಸ್ಪರ್ಧಿಯು ಮಹೀಂದ್ರಾ XUV.e8 ಆಗಿದೆ ಆದರೆ ಇದು ಪ್ರೀಮಿಯಂ ಕೊಡುಗೆಯಾಗಿದೆ ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು MG ZS EV ಗೆ ಪರ್ಯಾಯ ಆಯ್ಕೆಯಾಗಿದೆ.

ಇನ್ನಷ್ಟು ಓದಿ: ಟಾಟಾ ಹ್ಯಾರಿಯರ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಹ್ಯಾರಿಯರ್ EV

Read Full News

explore ಇನ್ನಷ್ಟು on ಟಾಟಾ ಹ್ಯಾರಿಯರ್ ಇವಿ

space Image

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience