• English
  • Login / Register

Tata Nexon ಸಿಎನ್‌ಜಿ vs ಮಾರುತಿ Brezza CNG: ಸ್ಪೆಸಿಫಿಕೇಷನ್‌ಗಳ ಹೋಲಿಕೆ ಇಲ್ಲಿದೆ

published on ಸೆಪ್ಟೆಂಬರ್ 26, 2024 05:06 pm by dipan for ಟಾಟಾ ನೆಕ್ಸಾನ್‌

  • 9 Views
  • ಕಾಮೆಂಟ್‌ ಅನ್ನು ಬರೆಯಿರಿ

ಜನಪ್ರಿಯ ಮಾರುತಿ ಬ್ರೆಝಾ ಸಿಎನ್‌ಜಿಯೊಂದಿಗೆ ಸ್ಪರ್ಧಿಸಲು ಟಾಟಾ ನೆಕ್ಸಾನ್ ತನ್ನ ಸಿಎನ್‌ಜಿ ವರ್ಷನ್ ಅನ್ನು ಹಲವು ಫೀಚರ್‌ಗಳೊಂದಿಗೆ ಲಾಂಚ್ ಮಾಡಿದೆ

Tata Nexon CNG vs Maruti Brezza CNG: Specifications Comparison

ಟಾಟಾ ನೆಕ್ಸಾನ್ ಸಿಎನ್‌ಜಿ ಮಾರಾಟವು ಇತ್ತೀಚೆಗೆ ಪ್ರಾರಂಭವಾಗಿದ್ದು, ಇದರ ಬೆಲೆ ರೂ 8.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್-ಶೋ ರೂಂ, ಪ್ಯಾನ್-ಇಂಡಿಯಾ). ಈ ಟಾಟಾ ಸಿಎನ್‌ಜಿ ವರ್ಷನ್ ಜನಪ್ರಿಯ ಮಾರುತಿ ಬ್ರೆಜ್ಜಾ ಸಿಎನ್‌ಜಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಿದೆ. ಬನ್ನಿ, ಇಲ್ಲಿದೆ ಹೊಸ ಟಾಟಾ ನೆಕ್ಸಾನ್ ಸಿಎನ್‌ಜಿ ಮತ್ತು ಬ್ರೆಜ್ಜಾ ಸಿಎನ್‌ಜಿ ಕಾರುಗಳ ಸ್ಪೆಸಿಫಿಕೇಷನ್‌ಗಳ ಹೋಲಿಕೆ:

ಬೆಲೆಗಳು

Tata Nexon CNG

 ಮಾಡೆಲ್

 ಟಾಟಾ ನೆಕ್ಸಾನ್ ಸಿಎನ್‌ಜಿ

 ಮಾರುತಿ ಬ್ರೆಝಾ ಸಿಎನ್‌ಜಿ

 ಬೆಲೆಗಳು

 ರೂ. 8.99 ಲಕ್ಷದಿಂದ ರೂ. 14.59 ಲಕ್ಷ

 ರೂ. 9.29 ಲಕ್ಷದಿಂದ ರೂ. 12.26 ಲಕ್ಷ

 ಎಲ್ಲಾ ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ ಬೆಲೆಯಾಗಿದೆ

 ಟಾಟಾ ನೆಕ್ಸಾನ್ ಸಿಎನ್‌ಜಿ ಬೇಸ್ ಮಾಡೆಲ್ ಮಾರುತಿ ಬ್ರೆಝಾ ಸಿಎನ್‌ಜಿಯ ಬೇಸ್ ಮಾಡೆಲ್‌ಗಿಂತ ರೂ. 30,000 ಅಗ್ಗವಾಗಿದೆ. ಆದರೆ, ಬ್ರೆಝಾ (Zxi) ಟಾಪ್ ಸ್ಪೆಕ್ ಸಿಎನ್‌ಜಿ ಮಾಡೆಲ್ ನೆಕ್ಸಾನ್ ಸಿಎನ್‌ಜಿಗಿಂತ ರೂ. 2.3 ಲಕ್ಷ ಅಗ್ಗವಾಗಿದೆ.

 ಡೈಮೆನ್ಷನ್‌ಗಳು

Maruti Brezza gets LED headlights

 

 ಟಾಟಾ ನೆಕ್ಸಾನ್ ಸಿಎನ್‌ಜಿ

 ಮಾರುತಿ ಬ್ರೆಝಾ ಸಿಎನ್‌ಜಿ

 ವ್ಯತ್ಯಾಸ

 ಉದ್ದ

3,995 ಮಿ.ಮೀ

3,995 ಮಿ.ಮೀ

ಯಾವುದೇ ವ್ಯತ್ಯಾಸವಿಲ್ಲ. 

 ಅಗಲ

 1,804 ಮಿ.ಮೀ

 1,790 ಮಿ.ಮೀ

 +14 ಮಿ.ಮೀ

 ಎತ್ತರ

 1,620 ಮಿ.ಮೀ

 1,685 ಮಿ.ಮೀ

-65 ಮಿ.ಮೀ

 ವೀಲ್‌ಬೇಸ್‌

 2498 ಮಿ.ಮೀ

 2500 ಮಿ.ಮೀ

-2 ಮಿ.ಮೀ

ನೆಕ್ಸಾನ್ ಸಿಎನ್‌ಜಿ ಮತ್ತು ಬ್ರೆಝಾ ಸಿಎನ್‌ಜಿ ಎರಡೂ ಒಂದೇ ಗಾತ್ರ ಮತ್ತು ಒಂದೇ ಉದ್ದವನ್ನು ಹೊಂದಿವೆ, ಮತ್ತು ಅವುಗಳ ವೀಲ್‌ಬೇಸ್‌ನಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಆದರೆ, ಟಾಟಾ ನೆಕ್ಸಾನ್ ಸಿಎನ್‌ಜಿ ಬ್ರೆಝಾಕ್ಕಿಂತ 14 ಎಂಎಂ ಅಗಲವಿದೆ ಆದರೆ 65 ಎಂಎಂ ಚಿಕ್ಕದಾಗಿದೆ.

Tata Nexon CNG

ನೆಕ್ಸಾನ್ ಸಿಎನ್‌ಜಿಯು ಡ್ಯುಯಲ್-ಸಿಎನ್‌ಜಿ ಸಿಲಿಂಡರ್ ಸೆಟಪ್ ಅನ್ನು ಹೊಂದಿದ್ದು, ಇದು 321 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. ಮತ್ತೊಂದೆಡೆ, ಬ್ರೆಝಾ ತನ್ನ ಬೂಟ್‌ನಲ್ಲಿ ಒಂದೇ ಸಿಎನ್‌ಜಿ ಸಿಲಿಂಡರ್ ಅನ್ನು ಹೊಂದಿದ್ದು, ಅಂದರೆ ಅದು ಚಿಕ್ಕದಾದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಸಿಎನ್‌ಜಿಯ ಪ್ರತಿಯೊಂದು ವೇರಿಯಂಟ್ ವಿವರಗಳು ಇಲ್ಲಿದೆ

ಪವರ್‌ಟ್ರೇನ್

Maruti Brezza

ಟಾಟಾ ನೆಕ್ಸಾನ್ ಸಿಎನ್‌ಜಿ ಟರ್ಬೋಚಾರ್ಜ್ ಆಗಿರುವ ಎಂಜಿನ್ ಅನ್ನು ಹೊಂದಿದ್ದು, ಇದನ್ನು ಭಾರತದಲ್ಲಿ ಇರುವ ಸಿಎನ್‌ಜಿ ಕಾರಿಗೆ ಮೊದಲ ಬಾರಿಗೆ ನೀಡಲಾಗಿದೆ. ಮತ್ತು, ಬ್ರೆಝಾ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಬನ್ನಿ, ಈ ಎರಡೂ ಸಿಎನ್‌ಜಿ ಕಾರುಗಳ ವಿವರವಾದ ಸ್ಪೆಸಿಫಿಕೇಷನ್‌ಗಳನ್ನು ನೋಡೋಣ:

 

ಟಾಟಾ ನೆಕ್ಸಾನ್ ಸಿಎನ್‌ಜಿ

ಮಾರುತಿ ಬ್ರೆಝಾ ಸಿಎನ್‌ಜಿ

ಇಂಜಿನ್

1.2-ಲೀಟರ್ ಟರ್ಬೊ-ಪೆಟ್ರೋಲ್ ಸಿಎನ್‌ಜಿ

1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ CNG

ಪವರ್

100 PS

88 PS

ಟಾರ್ಕ್

170 Nm

121.5 Nm

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮಾನ್ಯುಯಲ್

5-ಸ್ಪೀಡ್ ಮಾನ್ಯುಯಲ್

ಕ್ಲೇಮ್ ಮಾಡಿರುವ ಮೈಲೇಜ್

ಪ್ರತಿ ಕೆಜಿಗೆ 24 ಕಿ.ಮೀ

ಪ್ರತಿ ಕೆಜಿಗೆ 25.51 ಕಿ.ಮೀ

ಪವರ್‌ಟ್ರೇನ್ ಅನ್ನು ನೋಡಿದಾಗ ಟಾಟಾ ನೆಕ್ಸಾನ್ ಸಿಎನ್‌ಜಿ ಬ್ರೆಜ್ಜಾ ಸಿಎನ್‌ಜಿಯನ್ನು ಮೀರಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಮತ್ತೊಂದೆಡೆ ಮಾರುತಿ ಎಸ್‌ಯುವಿ 5-ಸ್ಪೀಡ್ MT ಯೊಂದಿಗೆ ಬರುತ್ತದೆ. ಆದರೆ, ಮಾರುತಿ ಬ್ರೆಝಾ ಸಿಎನ್‌ಜಿ ಉತ್ತಮವಾದ ಮೈಲೇಜ್ ಅನ್ನು ಹೊಂದಿದೆ.

ಫೀಚರ್‌ಗಳು

Tata Nexon 10.25-inch Touchscreen Infotainment System

ಫೀಚರ್‌ಗಳು

ಟಾಟಾ ನೆಕ್ಸಾನ್ ಸಿಎನ್‌ಜಿ

ಮಾರುತಿ ಬ್ರೆಝಾ ಸಿಎನ್‌ಜಿ

 ಹೊರಭಾಗ

  • ಆಟೋ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಕಾರ್ನರಿಂಗ್ ಫಂಕ್ಷನ್‌ನೊಂದಿಗೆ LED ಫ್ರಂಟ್ ಫಾಗ್ ಲ್ಯಾಂಪ್‌ಗಳು

  • LED ಟೈಲ್ ಲೈಟ್‌ಗಳು

  • ಮುಂಭಾಗದ LED DRLಗಳು ಮತ್ತು ಟೈಲ್ ಲೈಟ್‌ಗಳಲ್ಲಿ ವೆಲ್ಕಮ್ ಮತ್ತು ಗುಡ್ ಬೈ ಅನಿಮೇಷನ್‌ಗಳು

  • ORVM ಗಳಲ್ಲಿ ಇಂಡಿಕೇಟರ್‌ಗಳು (ಹೊರಗಿನ ರಿಯರ್ ವ್ಯೂ ಮಿರರ್‌ಗಳು)

  • ಏರೋಡೈನಾಮಿಕ್ ಇನ್ಸರ್ಟ್‌ನೊಂದಿಗೆ 16-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ಸ್ 

  • ಶಾರ್ಕ್ ಫಿನ್ ಆಂಟೆನಾ

  • ರೂಫ್ ರೈಲ್ಸ್

  • ಆಟೋ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • LED ಫ್ರಂಟ್ ಫಾಗ್ ಲ್ಯಾಂಪ್‌ಗಳು

  • LED DRLಗಳು

  • LED ಟೈಲ್ ಲೈಟ್‌ಗಳು

  • ORVMಗಳಲ್ಲಿ ಇಂಡಿಕೇಟರ್‌ಗಳು

  • ಬ್ಲಾಕ್ 16-ಇಂಚಿನ ಅಲೊಯ್ ವೀಲ್ಸ್ 

  • ರೂಫ್ ರೈಲ್ಸ್

  • ಶಾರ್ಕ್ ಫಿನ್ ಆಂಟೆನಾ

 ಒಳಭಾಗ

  • ಇಲ್ಯೂಮಿನೇಟ್ ಆಗುವ ಟಾಟಾ ಲೋಗೋದೊಂದಿಗೆ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್

  • ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ

  • ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್

  • ಡ್ಯುಯಲ್-ಟೋನ್ ಕ್ಯಾಬಿನ್

  • ಆಂಬಿಯೆಂಟ್ ಲೈಟಿಂಗ್

  • ಸ್ಟೋರೇಜ್‌ನೊಂದಿಗೆ ಮುಂಭಾಗದ ಆರ್ಮ್‌ರೆಸ್ಟ್

  • ಕಪ್ ಹೋಲ್ಡರ್‌ಗಳೊಂದಿಗೆ ಹಿಂಭಾಗದ ಸೆಂಟರ್ ಆರ್ಮ್‌ರೆಸ್ಟ್

  • ಡ್ಯುಯಲ್-ಟೋನ್ ಕ್ಯಾಬಿನ್

  • ಕ್ರೋಮ್ ಒಳಗೆ ಭಾಗದ ಡೋರ್ ಹ್ಯಾಂಡಲ್‌ಗಳು 

  • ಡೋರ್ ಪ್ಯಾಡ್‌ಗಳಲ್ಲಿ ಫ್ಯಾಬ್ರಿಕ್ ಇನ್ಸರ್ಟ್‌ಗಳು

  • ಸೆಮಿ-ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ

  • ಬೂಟ್ ಲ್ಯಾಂಪ್

  • ಫುಟ್‌ವೆಲ್ ಇಲ್ಯೂಮಿನೇಷನ್

  • ಹಿಂಭಾಗದ ಪಾರ್ಸೆಲ್ ಟ್ರೇ

  • ಸನ್‌ಗ್ಲಾಸ್ ಹೋಲ್ಡರ್

  • ಕಪ್‌ಹೋಲ್ಡರ್‌ನೊಂದಿಗೆ ಹಿಂಭಾಗದ ಸೆಂಟರ್ ಆರ್ಮ್‌ರೆಸ್ಟ್

 ಸೌಕರ್ಯ ಮತ್ತು ಅನುಕೂಲತೆ

  • ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ AC

  • ವೈರ್‌ಲೆಸ್ ಫೋನ್ ಚಾರ್ಜರ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು

  • ಕ್ರೂಸ್ ಕಂಟ್ರೋಲ್

  • ಆಟೋ ಡಿಮಿಂಗ್ IRVM (ಒಳಭಾಗದ ರಿಯರ್ ವ್ಯೂ ಮಿರರ್)

  • ಟಿಲ್ಟ್-ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್

  • ಆಟೋ ಫೋಲ್ಡಿಂಗ್ ORVM ಗಳು

  • 60:40 ಸ್ಪ್ಲಿಟ್-ಫೋಲ್ಡಿಂಗ್ ಹಿಂದಿನ ಸೀಟುಗಳು

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು

  • ಪನೋರಮಿಕ್ ಸನ್‌ರೂಫ್

  • ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ORVM ಗಳು

  • ಕೂಲ್ಡ್ ಗ್ಲೋವ್ ಬಾಕ್ಸ್

  • ಸಿಂಗಲ್ ಪೇನ್ ಸನ್‌ರೂಫ್

  • ಕ್ರೂಸ್ ಕಂಟ್ರೋಲ್

  • ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್

  • ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ORVMಗಳು

  • ಡ್ರೈವರ್-ಸೈಡ್ ವಿಂಡೋ ಆಟೋ ಅಪ್/ಡೌನ್

  • ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ AC

  • ಕೀಲೆಸ್ ಎಂಟ್ರಿ

  • ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್

  • ಮುಂಭಾಗದಲ್ಲಿ 12V ಪವರ್ ಸಾಕೆಟ್

  • 60:40 ಸ್ಪ್ಲಿಟ್-ಫೋಲ್ಡಿಂಗ್ ಹಿಂದಿನ ಸೀಟುಗಳು

  • MID ಜೊತೆ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (ಮಲ್ಟಿ-ಇನ್ಫೋರ್ಮೇಷನ್ ಡಿಸ್ಪ್ಲೇ)

  • ಡೇ/ನೈಟ್ IRVM

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವ್ ಸೀಟ್

 ಇನ್ಫೋಟೈನ್ಮೆಂಟ್

  • 10.25-ಇಂಚಿನ ಟಚ್‌ಸ್ಕ್ರೀನ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

  • 8-ಸ್ಪೀಕರ್ ಸೌಂಡ್ ಸಿಸ್ಟಮ್

  • ಕನೆಕ್ಟೆಡ್ ಕಾರ್ ತಂತ್ರಜ್ಞಾನ

  • 7-ಇಂಚಿನ ಟಚ್‌ಸ್ಕ್ರೀನ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

  • 6-ಸ್ಪೀಕರ್ ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್

 ಸುರಕ್ಷತೆ

  • 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ)

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ISOFIX ಚೈಲ್ಡ್ ಸೀಟ್ ಮೌಂಟ್‌ಗಳು

  • ಹಿಲ್ ಹೋಲ್ಡ್ ಅಸಿಸ್ಟ್

  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

  • 360-ಡಿಗ್ರಿ ಕ್ಯಾಮೆರಾ

  • ಬ್ಲೈಂಡ್ ವ್ಯೂ ಮಾನಿಟರ್

  • ಎಲ್ಲಾ ಸೀಟುಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್

  • ಹಿಂಭಾಗದ ವೈಪರ್ ಮತ್ತು ವಾಷರ್

  • ರೈನ್ ಸೆನ್ಸಿಂಗ್ ವೈಪರ್‌ಗಳು

  • 2 ಏರ್‌ಬ್ಯಾಗ್‌ಗಳು

  • ESC

  • ಹಿಲ್ ಹೋಲ್ಡ್ ಅಸಿಸ್ಟ್

  • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್‌ಗಳು

  • ಎಲ್ಲಾ ಸೀಟುಗಳಿಗೆ ಸೀಟ್ ಬೆಲ್ಟ್ ರಿಮೈಂಡರ್

  • ಹಿಂಭಾಗದ ಡಿಫಾಗರ್

  • ISOFIX ಚೈಲ್ಡ್ ಸೀಟ್ ಮೌಂಟ್‌ಗಳು

  • ಹಿಂಭಾಗದ ವೈಪರ್ ಮತ್ತು ವಾಷರ್

Maruti Brezza interior

  •  ಎರಡೂ CNG ಕಾರುಗಳು ಫುಲ್ LED ಲೈಟಿಂಗ್ ಸೆಟಪ್‌ನೊಂದಿಗೆ ಬರುತ್ತವೆ. ಆದರೆ, ನೆಕ್ಸಾನ್‌ನ LED DRL ಗಳು ಮತ್ತು ಟೈಲ್ ಲೈಟ್‌ಗಳು ವೆಲ್ಕಮ್ ಮತ್ತು ಗುಡ್ ಬೈ ಅನಿಮೇಷನ್ ಅನ್ನು ಪಡೆಯುತ್ತವೆ. ಎರಡೂ ಎಸ್‌ಯುವಿಗಳು 16-ಇಂಚಿನ ಅಲೊಯ್ ವೀಲ್ಸ್‌ನೊಂದಿಗೆ ಬರುತ್ತವೆ, ಮತ್ತು ನೆಕ್ಸಾನ್‌ನಲ್ಲಿ ಇದನ್ನು ಡ್ಯುಯಲ್-ಟೋನ್ ಮತ್ತು ಬ್ರೆಝಾದಲ್ಲಿ ಬ್ಲ್ಯಾಕ್-ಔಟ್ ಆಗಿ ನೀಡಲಾಗಿದೆ.

  •  ಕ್ಯಾಬಿನ್ ಒಳಗೆ, ನೆಕ್ಸಾನ್ ಸಿಎನ್‌ಜಿ ಲೆಥೆರೆಟ್ ಸೀಟ್ ಅಪ್ಹೋಲ್‌ಸ್ಟರಿ ಮತ್ತು ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್‌ನೊಂದಿಗೆ ಹೆಚ್ಚು ಆಧುನಿಕವಾಗಿ ಕಾಣುತ್ತದೆ. ಮತ್ತೊಂದೆಡೆ, ಬ್ರೆಝಾ ಸಿಎನ್‌ಜಿ ಸೆಮಿ-ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯನ್ನು ಪಡೆಯುತ್ತದೆ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಕೆಲವು ಫ್ಯಾಬ್ರಿಕ್ ಮೆಟಿರಿಯಲ್ ಅನ್ನು ನೀಡಲಾಗಿದೆ.

  •  ಬ್ರೆಝಾ ಸಿಎನ್‌ಜಿ ಸಿಂಗಲ್-ಪೇನ್ ಸನ್‌ರೂಫ್ ಮತ್ತು ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ, ಮತ್ತು ನೆಕ್ಸಾನ್‌ನಲ್ಲಿ ಸಿಎನ್‌ಜಿ ಪನರೋಮಿಕ್ ಸನ್‌ರೂಫ್ ಮತ್ತು ಫುಲ್-ಡಿಜಿಟಲ್ ಡ್ರೈವರ್‌ ಡಿಸ್ಪ್ಲೇಯನ್ನು ನೀಡಲಾಗಿದೆ.

  •  ನೆಕ್ಸಾನ್ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ, ಮತ್ತು ಬ್ರೆಝಾ 7-ಇಂಚಿನ ಯೂನಿಟ್ ಅನ್ನು ಪಡೆಯುತ್ತದೆ. ನೆಕ್ಸಾನ್ ಸಿಎನ್‌ಜಿ 8-ಸ್ಪೀಕರ್ ಸೌಂಡ್ ಸಿಸ್ಟಮ್‌ ಅನ್ನು ಪಡೆದರೆ ಬ್ರೆಝಾ 6-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

  •  ಎರಡೂ ಕಾರುಗಳು ಒಂದೇ ರೀತಿಯ ಫೀಚರ್‌ಗಳನ್ನು ಹೊಂದಿವೆ, ಆದರೆ ನೆಕ್ಸಾನ್ ನಾಲ್ಕು ಹೆಚ್ಚುವರಿ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಕೂಡ ಒಳಗೊಂಡಿದೆ.

 ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಇವಿ ಪಡೆಯಲಿದೆ ಹೆಚ್ಚಿನ ರೇಂಜ್ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಹೊಸ ಫೀಚರ್‌ಗಳು, ದೊಡ್ಡ ಬ್ಯಾಟರಿ ಪ್ಯಾಕ್ ಕೂಡ ಆಗಲಿದೆ ಸೇರ್ಪಡೆ

 ಯಾವ ಸಿಎನ್‌ಜಿ ಎಸ್‌ಯುವಿ ಅನ್ನು ನೀವು ಆಯ್ಕೆ ಮಾಡಬೇಕು?

 ಮಾರುತಿ ಬ್ರೆಝಾ ಸಿಎನ್‌ಜಿ ಈಗಾಗಲೇ ಕೆಲ ಸಮಯದಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಟಾಟಾ ನೆಕ್ಸಾನ್ ಸಿಎನ್‌ಜಿ ಹೊಸ ಸೇರ್ಪಡೆಯಾಗಿದೆ. ಅಲ್ಲದೆ, ನೆಕ್ಸಾನ್ ಸಿಎನ್‌ಜಿಯು ಟಾಟಾದ ಡ್ಯುಯಲ್-ಸಿಎನ್‌ಜಿ ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದ್ದು, ಇಲ್ಲಿ ಬೂಟ್ ಸ್ಪೇಸ್ ಜಾಸ್ತಿಯಿದೆ, ಹಾಗಾಗಿ ಬ್ರೆಝಾ ಸಿಎನ್‌ಜಿಗಿಂತ ಇದು ಹೆಚ್ಚು ಉಪಯುಕ್ತವಾಗಿದೆ. ಆದರೆ, ಸಣ್ಣ ಟ್ರಿಪ್‌ಗಳಿಗೆ ಬ್ರೆಝಾದಲ್ಲಿರುವ ಬೂಟ್ ಸ್ಪೇಸ್ ಸಾಕಾಗುತ್ತದೆ.

Maruti Brezza CNG

 ಬ್ರೆಝಾ ಸಿಎನ್‌ಜಿ ಬೆಲೆಯ ವಿಷಯದಲ್ಲಿ ಮೇಲುಗೈ ಸಾಧಿಸುತ್ತದೆ. ಇದರ ಬೇಸ್ ಮಾಡೆಲ್ ಸ್ವಲ್ಪ ದುಬಾರಿಯಾಗಿರಬಹುದು, ಆದರೆ ಟಾಪ್-ಎಂಡ್ ವರ್ಷನ್ ಟಾಟಾ ಎಸ್‌ಯುವಿಗಿಂತ ರೂ. 2.33 ಲಕ್ಷ ಅಗ್ಗವಾಗಿದೆ. ನಾವು ಬೇರೆ ಮಾಡೆಲ್‌ಗಳನ್ನು ಹೋಲಿಸಿದಾಗ, ಟಾಪ್ ಸ್ಪೆಕ್ ಬ್ರೆಝಾ Zxi ಸಿಎನ್‌ಜಿ ಬೆಲೆಯು ಟಾಪ್ ಗಿಂತ ಒಂದು ಮಟ್ಟ ಕೆಳಗಿರುವ ಆದರೆ ಬ್ರೆಝಾದಲ್ಲಿರುವ ಎಲ್ಲಾ ಫೀಚರ್‌ಗಳನ್ನು ಹೊಂದಿರುವ ಕ್ರಿಯೇಟಿವ್ ಪ್ಲಸ್ ವೇರಿಯಂಟ್ ಅನ್ನು ಹೋಲುತ್ತದೆ. ಈ ಮಾರುತಿ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ನೆಕ್ಸಾನ್ ಸಿಎನ್‌ಜಿಗಿಂತ ಉತ್ತಮ ಮೈಲೇಜ್ ಅನ್ನು ನೀಡುತ್ತದೆ.

Tata Nexon CNG

 ಟಾಟಾ ನೆಕ್ಸಾನ್ ಸಿಎನ್‌ಜಿ ಇಲ್ಲಿ ಉತ್ತಮ ಆಯ್ಕೆಯಾಗಿದೆ ಎಂದು ನಾವು ನಂಬುತ್ತೇವೆ. ಇದು ಹೆಚ್ಚು ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ, ಬ್ರೆಝಾ ಸಿಎನ್‌ಜಿ ಗೆ ಸಮಾನವಾದ ಮೈಲೇಜ್ ಅನ್ನು ನೀಡುತ್ತದೆ ಮತ್ತು ಫೀಚರ್ ಗಳನ್ನು ಕೂಡ ಲೋಡ್ ಮಾಡಲಾಗಿದೆ. ಇದು ದೊಡ್ಡದಾದ ಬೂಟ್ ಸ್ಪೇಸ್ ಮತ್ತು ಹೆಚ್ಚು ಆಧುನಿಕ ಡಿಸೈನ್ ಅನ್ನು ಹೊಂದಿದೆ. ನೆಕ್ಸಾನ್ ನ ಸುರಕ್ಷತಾ ಫೀಚರ್‌ಗಳು ಬ್ರೆಝಾ ಸಿಎನ್‌ಜಿ ಗೆ ಹೋಲಿಸಿದರೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ.

 ಆದರೆ, ನೀವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎರಡೂ ಸಿಎನ್‌ಜಿ ವಾಹನಗಳನ್ನು ಟೆಸ್ಟ್ ಮಾಡುವುದು ಉತ್ತಮ.

 ಮೇಲಿನಿಂದ ನೋಡಿದರೆ, ಈ ಎರಡು ಸಿಎನ್‌ಜಿ ಕೊಡುಗೆಗಳಲ್ಲಿ ಯಾವುದು ಉತ್ತಮವಾಗಿದೆ ಎಂದು ನಿಮಗೆ ಅನಿಸುತ್ತದೆ? ಕೆಳಗೆ ಕಾಮೆಂಟ್‌ ಮಾಡುವ ಮೂಲಕ ನಮಗೆ ತಿಳಿಸಿ.

 ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು  ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: ನೆಕ್ಸಾನ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience