Tata Nexon Dark ವರ್ಸಸ್‌ Hyundai Venue Knight ಎಡಿಷನ್‌: ವಿನ್ಯಾಸದಲ್ಲಿನ ವ್ಯತ್ಯಾಸಗಳ ವಿವರ

published on ಮಾರ್ಚ್‌ 07, 2024 05:26 pm by rohit for ಟಾಟಾ ನೆಕ್ಸ್ಂನ್‌

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಇವೆರಡೂ ಬ್ಲ್ಯಾಕ್-ಔಟ್ ಸಬ್‌ಕಾಂಪ್ಯಾಕ್ಟ್ SUVಗಳಾಗಿವೆ ಆದರೆ ವೆನ್ಯೂವಿನ ವಿಶೇಷ ಆವೃತ್ತಿಯು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ

Tata Nexon Dark vs Hyundai Venue Knight Edition

2023ರ ಸೆಪ್ಟೆಂಬರ್‌ನಲ್ಲಿ ತನ್ನ ಎರಡನೇ ಪ್ರಮುಖ ಮಿಡ್‌ಲೈಫ್ ರಿಫ್ರೆಶ್ ಪಡೆದ ನಂತರ ಟಾಟಾ ನೆಕ್ಸಾನ್ ಈಗ ಮತ್ತೊಮ್ಮೆ ಡಾರ್ಕ್ ಎಡಿಷನ್‌ ಅನ್ನು ಪಡೆಯುತ್ತದೆ. ಆದಾಗಿಯೂ, ನೆಕ್ಸಾನ್ ಭಾರತದಲ್ಲಿ ಕಂಪೆನಿಯಿಂದಲೇ ಸಂಪೂರ್ಣ ಕಪ್ಪು ಟ್ರೀಟ್‌ಮೆಂಟ್‌ ನೀಡುವ ಏಕೈಕ ಸಬ್‌-4ಮೀ ಎಸ್‌ಯುವಿ ಅಲ್ಲ. ಆಗಸ್ಟ್ 2023 ರಲ್ಲಿ, ಹ್ಯುಂಡೈ ವೆನ್ಯೂ ಅನ್ನು 'ನೈಟ್ ಎಡಿಷನ್‌' ರೂಪದಲ್ಲಿ ಪರಿಚಯಿಸಲಾಯಿತು, ಇದು ಸಹ ಬ್ಲ್ಯಾಕ್-ಔಟ್ ಆವೃತ್ತಿಯಾಗಿದೆ.

ಎರಡೂ ಹೆಚ್ಚು ಭವ್ಯವಾದ ರೋಡ್‌ ಪ್ರೆಸೆನ್ಸ್‌ ಅನ್ನು ಹೊಂದಿವೆ, ಆದರೆ ಈ ಎರಡು ಬ್ಲ್ಯಾಕ್-ಔಟ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ದೃಷ್ಟಿಗೋಚರವಾಗಿ ಹೇಗೆ ಪ್ರತ್ಯೇಕಿಸಲಾಗಿದೆ ಎಂಬುದನ್ನು ನೋಡೋಣ:

ಮುಂಭಾಗ

Tata Nexon Dark
Hyundai Venue Knight Edition

ಫೇಸ್‌ಲಿಫ್ಟೆಡ್ ಸ್ಟೈಲಿಂಗ್‌ನೊಂದಿಗೆ, ನೆಕ್ಸಾನ್ ಡಾರ್ಕ್ ಸ್ಪ್ಲಿಟ್-ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಅನ್ನು ಹೊಂದಿದೆ. ಬಂಪರ್‌ನಲ್ಲಿ ಅದರ ಎಲ್ಲಾ ಕ್ರೋಮ್ ಗಾರ್ನಿಶ್‌ಗಳಿಗೆ ಕಪ್ಪು ಟ್ರೀಟ್‌ಮೆಂಟ್ ನೀಡಲಾಗಿದೆ ಆದರೆ ಸಿಲ್ವರ್ ಸ್ಕಿಡ್ ಪ್ಲೇಟ್ ಸಹ ಈಗ ಕಪ್ಪು ಆಗಿದೆ. ವೆನ್ಯೂವಿನ ಫೇಸಿಯಾದಲ್ಲಿ, ನೀವು ಗ್ರಿಲ್ ಮತ್ತು ಡಾರ್ಕ್‌ ಕಪ್ಪು ಕಲರ್‌ನಲ್ಲಿ ಫಿನಿಶ್‌ ಮಾಡಿರುವ 'ಹ್ಯುಂಡೈ' ಲೋಗೋವನ್ನು ಗಮನಿಸಬಹುದು. ಇದು ಹೆಡ್‌ಲೈಟ್‌ಗಳಲ್ಲಿ ಹೊಗೆಯಾಡಿಸಿದ ಎಫೆಕ್ಟ್‌ ಅನ್ನು ಹೊಂದಿದೆ, ಬಂಪರ್‌ನಲ್ಲಿ ಹಿತ್ತಾಳೆಯ ಇನ್ಸರ್ಟ್‌ಗಳು ಮತ್ತು ಸ್ಕಿಡ್ ಪ್ಲೇಟ್‌ಗೆ ಕಪ್ಪು ಫಿನಿಶ್‌ಅನ್ನು ಸಹ ಹೊಂದಿದೆ.

ಸೈಡ್‌

Tata Nexon Dark black alloy wheel
Hyundai Venue Knight Edition black alloy wheel

ಪ್ರೊಫೈಲ್‌ನಲ್ಲಿ, ಟಾಟಾ ಎಸ್‌ಯುವಿಯು 16-ಇಂಚಿನ ಕಪ್ಪು ಅಲಾಯ್‌ ವೀಲ್‌ಗಳು, ಕಪ್ಪು-ಔಟ್ ಒಆರ್‌ವಿಎಮ್‌ ಹೌಸಿಂಗ್‌ಗಳು ಮತ್ತು ಮುಂಭಾಗದ ಫೆಂಡರ್‌ಗಳಲ್ಲಿ '#ಡಾರ್ಕ್' ಬ್ಯಾಡ್ಜ್‌ಗಳೊಂದಿಗೆ ಕಂಡುಬರುತ್ತದೆ. ಮತ್ತೊಂದೆಡೆ, ವೆನ್ಯೂ ನೈಟ್ ಆವೃತ್ತಿಯು ಅಲಾಯ್‌ ವೀಲ್‌ಗಳಿಗೆ ಕಪ್ಪು ಫಿನಿಶ್‌ನೊಂದಿಗೆ (ಹಿತ್ತಾಳೆಯ ಇನ್ಸಾರ್ಟ್‌ನೊಂದಿಗೆ) ಮತ್ತು ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, ರೂಫ್ ರೈಲ್‌ಗಳು ಮತ್ತು ಒಆರ್‌ವಿಎಮ್‌ಗಳೊಂದಿಗೆ ಬರುತ್ತದೆ.

ಹಿಂಬದಿ

Tata Nexon Dark rear
Hyundai Venue Knight Edition rear

 

ನೆಕ್ಸಾನ್ ಡಾರ್ಕ್ ಆವೃತ್ತಿಯ ಹಿಂಭಾಗದಲ್ಲಿ 'ನೆಕ್ಸಾನ್' ಮಾನಿಕರ್ ಮತ್ತು ಎರಡೂ ಬಂಪರ್‌ಗಳು ಬ್ಲ್ಯಾಕ್‌ ಕಲರ್‌ನಲ್ಲಿ ಫಿನಿಶ್‌ ಮಾಡಲಾಗಿದೆ. ಹ್ಯುಂಡೈ ಸಹ ತನ್ನ ಲೋಗೋ ಮತ್ತು ಎಸ್‌ಯುವಿಯ ಹಿಂಭಾಗದಲ್ಲಿ 'ನೈಟ್' ಲಾಂಛನದೊಂದಿಗೆ 'ವೆನ್ಯೂ' ಬ್ಯಾಡ್ಜ್‌ಗೆ ಇದೇ ರೀತಿಯ ಫಿನಿಶ್‌ ಅನ್ನು ಅನ್ವಯಿಸಿದೆ. ಹ್ಯುಂಡೈನ ಈ ಎಸ್‌ಯುವಿಯ ಬಂಪರ್‌ನಲ್ಲಿ ಹಿತ್ತಾಳೆಯ ಎಕ್ಸೆಂಟ್‌ ಅನ್ನು ಸಹ ಹೊಂದಿದೆ.

ಸಂಬಂಧಿತ: ಹ್ಯುಂಡೈ ಅನ್ನು ಮತ್ತೊಮ್ಮೆ ಸೋಲಿಸಿದ ಟಾಟಾ, 2024ರ ಫೆಬ್ರವರಿಯಲ್ಲಿ ಮಾರಾಟದಲ್ಲಿ ಮುನ್ನಡೆ

ಕ್ಯಾಬಿನ್‌

Tata Nexon Dark interior
Hyundai Venue Knight Edition cabin

 

ಇಲ್ಲಿರುವ ಎರಡೂ ಎಸ್‌ಯುವಿಗಳು ತಮ್ಮ ವಿಶೇಷ ಆವೃತ್ತಿಗಳ ಒಟ್ಟಾರೆ ತಮ್ಮ ಪಾತ್ರದೊಳಗೆ ಹೋಗಲು ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತವೆ. ನೆಕ್ಸಾನ್ ಕಾರು ತಯಾರಕರ ಟ್ರೈ-ಆರೋ ಪ್ಯಾಟರ್ನ್‌ನೊಂದಿಗೆ ಕಪ್ಪು ಲೆಥೆರೆಟ್ ಆಪ್ಹೊಲ್ಸ್‌ಟೆರಿ ಮತ್ತು ಹೆಡ್‌ರೆಸ್ಟ್‌ಗಳಲ್ಲಿ 'ಡಾರ್ಕ್' ಬ್ರ್ಯಾಂಡಿಂಗ್ ಅನ್ನು ಪಡೆಯುತ್ತದೆ. ವೆನ್ಯೂ ನೈಟ್ ಆವೃತ್ತಿಯಲ್ಲಿ, ಹಿತ್ತಾಳೆಯ ಎಕ್ಸೆಂಟ್‌ಗಳೊಂದಿಗೆ ಕಪ್ಪು ಸೀಟ್ ಅಪ್ಹೋಲ್ಸ್‌ಟೆರಿ ಸೇರಿದಂತೆ ಕ್ಯಾಬಿನ್ ಸುತ್ತಲೂ ಹಿತ್ತಾಳೆಯ ಬಣ್ಣದ ಇನ್ಸರ್ಟ್‌ಗಳನ್ನು ನೀವು ಪಡೆಯುತ್ತೀರಿ. ಒಳಗೆ ಸ್ಪೋರ್ಟಿಯರ್ ಮತ್ತು ಪ್ರೀಮಿಯಂ ಲುಕ್‌ಗಾಗಿ, ಪೆಡಲ್‌ಗಳು ಮೆಟಲ್ ಫಿನಿಶ್ ಅನ್ನು ಪಡೆಯುತ್ತವೆ ಮತ್ತು ಇದು 3D ಡಿಸೈನರ್ ಮ್ಯಾಟ್‌ಗಳನ್ನು ಪಡೆಯುತ್ತದೆ.

ವೈಶಿಷ್ಟ್ಯಗಳ ಪಟ್ಟಿಗಳು

Tata Nexon Dark sunroof
Hyundai Venue Knight Edition dual-camera dashcam

 

ಟಾಟಾ ನೆಕ್ಸಾನ್ ಡಾರ್ಕ್ ಆವೃತ್ತಿಯನ್ನು ಅನ್ನು ಅದರ ರೆಗುಲರ್‌ ಮೊಡೆಲ್‌ನಂತೆ ಅದೇ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಿದೆ. ಇದು ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳನ್ನು ಪಡೆಯುತ್ತದೆ (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್ ಮಾಹಿತಿಗಾಗಿ). ಇತರ ವೈಶಿಷ್ಟ್ಯಗಳೆಂದರೆ ಸನ್‌ರೂಫ್, ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಆಗಿದೆ. ಇದರ ಸುರಕ್ಷತಾ ಕ್ರಮಗಳು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.

ವೆನ್ಯೂ ನೈಟ್ ಆವೃತ್ತಿಯು 8-ಇಂಚಿನ ಟಚ್‌ಸ್ಕ್ರೀನ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ-ಡಿಮ್ಮಿಂಗ್ ಐಆರ್‌ವಿಎಮ್‌ ಮತ್ತು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್‌ನಂತಹ ಸೌಕರ್ಯಗಳೊಂದಿಗೆ ಲೋಡ್ ಆಗಿದೆ, ಇದರರಲ್ಲಿ ಎರಡನೆಯದ್ದು, ಎರಡು ವಿಶೇಷ ಆವೃತ್ತಿಯಲ್ಲಿ ಹೊಸ ಸೇರ್ಪಡೆಗಳಾಗಿವೆ. ಆರು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಹುಂಡೈ ಇದನ್ನು ನೀಡುತ್ತಿದೆ.

ಇದನ್ನು ಸಹ ಓದಿ: ಇವುಗಳು ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಕಾರುಗಳು

ಪವರ್‌ಟ್ರೇನ್‌ ಆಯ್ಕೆಗಳ ವಿವರ

ನೆಕ್ಸಾನ್‌ ಡಾರ್ಕ್

ವಿಶೇಷತೆಗಳು

1.2-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

120 ಪಿಎಸ್

115 ಪಿಎಸ್

ಟಾರ್ಕ್

170 ಎನ್ಎಂ

260 ಎನ್ಎಂ

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುಯಲ್‌, 6-ಸ್ಪೀಡ್‌ AMT, 7-ಸ್ಪೀಡ್‌ DCT*

6- ಸ್ಪೀಡ್‌ ಮ್ಯಾನುಯಲ್‌, 6-ಸ್ಪೀಡ್‌ AMT

*DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌

ವೆನ್ಯೂ ನೈಟ್‌ ಎಡಿಷನ್‌

ವಿಶೇಷತೆಗಳು

1.2-ಲೀಟರ್‌ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್‌

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

83 ಪಿಎಸ್

120 ಪಿಎಸ್

ಟಾರ್ಕ್

114 ಎನ್ಎಂ

172 ಎನ್ಎಂ

ಗೇರ್‌ಬಾಕ್ಸ್‌

5-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ iMT*, 7-ಸ್ಪೀಡ್ DCT

*iMT - ಇಂಟಲಿಜೆಂಟ್ ಮಾನ್ಯುಯಲ್ ಟ್ರಾನ್ಸ್‌ಮಿಷನ್‌

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಟಾಟಾ ನೆಕ್ಸಾನ್ ಡಾರ್ಕ್‌ನ ಎಕ್ಸ್‌ಶೋರೂಮ್‌ ಬೆಲೆಯು  11.45 ಲಕ್ಷ ರೂ.ನಿಂದ 13.85 ಲಕ್ಷ ರೂ. ವರೆಗೆ ಇರಲಿದ್ದು, ಆದರೆ ಹ್ಯುಂಡೈ ವೆನ್ಯೂ ನೈಟ್ ಆವೃತ್ತಿಯ ಬೆಲೆ 10.13 ಲಕ್ಷ ರೂ.ನಿಂದ 13.48 ಲಕ್ಷ ರೂ.ವರೆಗೆ ಇರುತ್ತದೆ. ಇವುಗಳಿಗೆ ಇರುವ ನೇರ ಪ್ರತಿಸ್ಪರ್ಧಿಗಳೆಂದರೆ ಕಿಯಾ ಸೋನೆಟ್ ಎಕ್ಸ್-ಲೈನ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ರೆಡ್ ಎಡಿಷನ್‌. ಟಾಟಾ-ಹ್ಯುಂಡೈ ಸಬ್-4ಮೀ ಎಸ್‌ಯುವಿಗಳಿಗೆ ಮಾರುಕಟ್ಟೆಯಲ್ಲಿ ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ರೆನಾಲ್ಟ್ ಕೈಗರ್ ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ಒವರ್ ಗಳು ಸ್ಪರ್ಧೆಯನ್ನು ಒಡ್ಡುತ್ತವೆ.   

ಈ ಕುರಿತು ಇನ್ನಷ್ಟು ಓದಿ: ಟಾಟಾ ನೆಕ್ಸಾನ್‌ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ನೆಕ್ಸ್ಂನ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience