Tata Nexon EVಯ 40.5 ಕಿ.ವ್ಯಾ ಬ್ಯಾಟರಿ ಪ್ಯಾಕ್ ವೇರಿಯೆಂಟ್ ಸ್ಥಗಿತ
ಟಾಟಾದ ಆಲ್-ಎಲೆಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಈಗ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ, ಅವುಗಳೆಂದರೆ, 30 ಕಿ.ವ್ಯಾಟ್ (ಮಿಡಿಯಮ್ ರೇಂಜ್) ಮತ್ತು 45 ಕಿ.ವ್ಯಾಟ್ (ಲಾಂಗ್ ರೇಂಜ್)
ಟಾಟಾ ನೆಕ್ಸಾನ್ ಇವಿಯು ಬ್ಯಾಟರಿ ಪ್ಯಾಕ್ ಮತ್ತು ಫೀಚರ್‌ಗಳ ಆಪ್‌ಡೇಟ್‌ಗಳನ್ನು 2024ರ ಅಕ್ಟೋಬರ್‌ನಲ್ಲಿ ಪಡೆದುಕೊಂಡಿತು, ಇದರೊಂದಿಗೆ ಇದು 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆದುಕೊಂಡಿತು, ಇದು 489 ಕಿ.ಮೀ.ವರೆಗಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಈಗಾಗಲೇ 30 ಕಿ.ವ್ಯಾಟ್ ಮತ್ತು 40.5 ಕಿವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿತ್ತು. ಆದರೆ, ಟಾಟಾ ಈಗ 40.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ನೆಕ್ಸಾನ್ ಇವಿಯ ವೇರಿಯೆಂಟ್‌ಗಳ ಪಟ್ಟಿಯಿಂದ ತೆಗೆದುಹಾಕಿದೆ. ಈಗ ನೆಕ್ಸಾನ್ ಇವಿಯು 30 ಕಿ.ವ್ಯಾಟ್ ಮತ್ತು 45 ಕಿ.ವ್ಯಾಟ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಿದೆ. ಬೆಲೆ ವಿವರಗಳು ಇಲ್ಲಿವೆ:
ಬ್ಯಾಟರಿ ಪ್ಯಾಕ್‌ಗಳು |
ಬೆಲೆ |
30 ಕಿ.ವ್ಯಾಟ್ |
|
ಕ್ರಿಯೆಟಿವ್ ಪ್ಲಸ್ |
12.49 ಲಕ್ಷ ರೂ. |
ಫಿಯರ್‌ಲೆಸ್ |
12.29 ಲಕ್ಷ ರೂ. |
ಫಿಯರ್‌ಲೆಸ್ ಪ್ಲಸ್ |
13.79 ಲಕ್ಷ ರೂ. |
ಫಿಯರ್‌ಲೆಸ್ ಪ್ಲಸ್ ಎಸ್ |
14.29 ಲಕ್ಷ ರೂ. |
ಎಂಪವರ್ಡ್ |
14.79 ಲಕ್ಷ ರೂ. |
45 ಕಿ.ವ್ಯಾಟ್ |
|
ಕ್ರೀಯೆಟಿವ್ |
13.99 ಲಕ್ಷ ರೂ. |
ಫಿಯರ್‌ಲೆಸ್ |
14.99 ಲಕ್ಷ ರೂ. |
ಎಂಪವರ್ಡ್ |
15.99 ಲಕ್ಷ ರೂ. |
ಎಂಪವರ್ಡ್ ಪ್ಲಸ್ |
16.99 ಲಕ್ಷ ರೂ. |
(ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಆಗಿದೆ)
ಟಾಟಾ ನೆಕ್ಸಾನ್ ಇವಿ: ಲಭ್ಯವಿರುವ ಬ್ಯಾಟರಿ ಪ್ಯಾಕ್‌ಗಳು
ಸದ್ಯ ಲಭ್ಯವಿರುವ ಬ್ಯಾಟರಿ ಪ್ಯಾಕ್‌ಗಳ ವಿವರವಾದ ವಿಶೇಷಣಗಳು ಇಲ್ಲಿವೆ:
ಬ್ಯಾಟರಿ ಪ್ಯಾಕ್ |
30 ಕಿ.ವ್ಯಾಟ್ |
45 ಕಿ.ವ್ಯಾಟ್ |
ಕ್ಲೈಮ್ ಮಾಡಲಾದ ರೇಂಜ್ |
275 ಕಿ.ಮೀ. (MIDC* Part I+II) |
489 ಕಿ.ಮೀ. (MIDC* Part I+II) |
ಪವರ್ |
130 ಪಿಎಸ್ |
144 ಪಿಎಸ್ |
ಟಾರ್ಕ್ |
215 ಎನ್‌ಎಮ್ |
215 ಎನ್‌ಎಮ್ |
MIDC - ಮಾಡಿಫೈಡ್ ಇಂಡಿಯನ್ ಡ್ರೈವ್ ಸೈಕಲ್
ಹಿಂದೆ ಲಭ್ಯವಿದ್ದ 40.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್, ನೆಕ್ಸಾನ್ ಇವಿಯ 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಆವೃತ್ತಿಯಂತೆಯೇ ಅದೇ ಶಕ್ತಿ ಮತ್ತು ಟಾರ್ಕ್ ಔಟ್‌ಪುಟ್‌ಗಳನ್ನು ಹೊಂದಿತ್ತು. ಹಾಗೆಯೇ, ಇದು 390 ಕಿ.ಮೀ (MIDC ಭಾಗ I+II) ವರೆಗಿನ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತಿತ್ತು.
ಟಾಟಾ ನೆಕ್ಸಾನ್ ಇವಿ: ಫೀಚರ್‌ಗಳು ಮತ್ತು ಸುರಕ್ಷತೆ
ಟಾಟಾ ನೆಕ್ಸಾನ್ ಇವಿಯು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್,ಕನೆಕ್ಟೆಡ್ ಕಾರ್ ಟೆಕ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು, ಕ್ರೂಸ್ ಕಂಟ್ರೋಲ್ ಮತ್ತು ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿಯಂತಹ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳ ಸಮಗ್ರ ಸೂಟ್ ಅನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್ ಇವಿಯು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ISOFIX ಚೈಲ್ಡ್-ಸೀಟ್ ಮೌಂಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ. ಭಾರತ್ NCAP ನಡೆಸಿದ ಕ್ರ್ಯಾಶ್ ಪರೀಕ್ಷೆಗಳಲ್ಲಿ ಟಾಟಾ ನೆಕ್ಸಾನ್ EV ಪೂರ್ಣ 5 ಸ್ಟಾರ್‌ಗಳ ರೇಟಿಂಗ್ ಸಾಧಿಸಿದೆ ಎಂಬುವುದು ಸಮಾಧಾನಕರ ಸಂಗತಿ.
ಟಾಟಾ ನೆಕ್ಸಾನ್ EV: ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸಾನ್ ಇವಿಗೆ ನೇರ ಪ್ರತಿಸ್ಪರ್ಧಿ ಎಂದರೆ ಮಹೀಂದ್ರಾ ಎಕ್ಸ್‌ಯುವಿ400 ಇವಿ ಮಾತ್ರ. ನಿಮ್ಮ ಬಜೆಟ್ ಅನ್ನು ಹೆಚ್ಚಿಸಬಹುದಾದರೆ, ಎಮ್‌ಜಿ ಜೆಡ್‌ಎಸ್ EV ಕೂಡ ಪರಿಗಣಿಸಲು ಯೋಗ್ಯವಾಗಿದೆ. ಪರ್ಯಾಯವಾಗಿ, ಇದೇ ರೀತಿಯ ಬೆಲೆ ರೇಂಜ್‌ನಲ್ಲಿ, ನೀವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳ ICE ವೇರಿಯೆಂಟ್‌ಗಳನ್ನು ಸಹ ಪರಿಗಣಿಸಬಹುದು.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ