Login or Register ಅತ್ಯುತ್ತಮ CarDekho experience ಗೆ
Login

Tata Punch EV ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್ Vs Mahindra XUV400 ಇಸಿ ಪ್ರೊ: ಯಾವ ಇವಿ ಖರೀದಿಸಬೇಕು?

published on ಮಾರ್ಚ್‌ 14, 2024 05:48 pm by rohit for ಟಾಟಾ ಪಂಚ್‌ ಇವಿ

ಅದೇ ಬೆಲೆಯಲ್ಲಿ, ನೀವು ಸಂಪೂರ್ಣ ಲೋಡ್ ಮಾಡಲಾದ ಎಲೆಕ್ಟ್ರಿಕ್ ಮೈಕ್ರೋ ಎಸ್‌ಯುವಿ ಅಥವಾ ಹೆಚ್ಚಿನ ಪರ್ಫಾರ್ಮೆನ್ಸ್‌ನೊಂದಿಗೆ ಸ್ವಲ್ಪ ದೊಡ್ಡ ಎಲೆಕ್ಟ್ರಿಕ್ ಎಸ್‌ಯುವಿಯ ಪ್ರವೇಶ ಮಟ್ಟದ ವೇರಿಯೆಂಟ್‌ನ ನಡುವೆ ಆಯ್ಕೆ ಮಾಡಬಹುದು

ಕಳೆದ ಎರಡು ವರ್ಷಗಳಲ್ಲಿ, ಭಾರತೀಯ EV ಮಾರುಕಟ್ಟೆಯು ಗಾತ್ರ ಮತ್ತು ಜನಪ್ರಿಯತೆ ಎರಡರಲ್ಲೂ ಬೆಳೆದಿದೆ, ಕಾರು ತಯಾರಕರು ವಿವಿಧ ಬೆಲೆ ವಿಭಾಗಗಳಲ್ಲಿ ವಿವಿಧ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುತ್ತಿದ್ದಾರೆ. ಇಂದು ಮಾರಾಟದಲ್ಲಿರುವ ಮಾಸ್‌-ಮಾರ್ಕೆಟ್‌ನ ಎಲೆಕ್ಟ್ರಿಕ್ ವಾಹನಗಳ ಹೆಚ್ಚುತ್ತಿರುವ ಸಂಖ್ಯೆಯನ್ನು ಗಮನಿಸಿದರೆ, ಕೆಲವು ಮಾದರಿಗಳ ಬೆಲೆಗಳು ವಿಭಿನ್ನ ಸೆಗ್ಮೆಂಟ್‌ಗಳಿಗೆ ಹೊಂದಿಕೊಂಡಿದ್ದರೂ ಸಹ ಅತಿಕ್ರಮಿಸುವುದು ಸಹಜ. ಈ ಸ್ಟೋರಿಯಲ್ಲಿ, ನಾವು ಟಾಪ್-ಸ್ಪೆಕ್ ಟಾಟಾ ಪಂಚ್ ಇವಿಯ ಎಂಪವರ್ಡ್ ಪ್ಲಸ್ ಎಸ್‌ ಲಾಂಗ್ ರೇಂಜ್ ಮತ್ತು ಎಂಟ್ರಿ-ಲೆವೆಲ್ ಮಹೀಂದ್ರಾ XUV400 ಇಸಿ ಪ್ರೋನ ಬೆಲೆ ಹೋಲಿಕೆಯನ್ನು ನೋಡುತ್ತಿದ್ದೇವೆ.

ಇದರ ಬೆಲೆಗಳು ಹೇಗಿವೆ ?

ಪಂಚ್ ಇವಿಯ ಎಂಪವರ್ಡ್ ಪ್ಲಸ್ ಎಸ್‌ ಲಾಂಗ್ ರೇಂಜ್

ಮಹೀಂದ್ರಾ XUV400 ಇಸಿ ಪ್ರೋ

15.49 ಲಕ್ಷ ರೂ.

15.49 ಲಕ್ಷ ರೂ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ

ಇಲ್ಲಿ ಉಲ್ಲೇಖಿಸಲಾದ ಟಾಟಾ ಪಂಚ್ ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್ ವೇರಿಯೆಂಟ್‌ನ ಬೆಲೆಯು ಹೆಚ್ಚುವರಿ AC ಫಾಸ್ಟ್ ಚಾರ್ಜರ್ ಯುನಿಟ್ ಜೊತೆಗೆ 50,000 ರೂ ವರೆಗೆ ಏರಿಕೆಯಾಗುತ್ತದೆ. ಮತ್ತೊಂದೆಡೆ, ಮಹೀಂದ್ರಾ ಎಕ್ಸ್‌ಯುವಿ400 ಇತ್ತೀಚೆಗೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಹೊಸ 'ಪ್ರೊ' ಆವೃತ್ತಿಗಳನ್ನು ಪಡೆದುಕೊಂಡಿದೆ, ಹಾಗೆಯೇ ಲೈನ್‌ಅಪ್‌ನಾದ್ಯಂತ 50,000 ರೂ.ಗಳಷ್ಟು ಕಡಿತ ಮಾಡುವುದರೊಂದಿಗೆ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

ಗಾತ್ರಗಳ ಹೋಲಿಕೆ

ಆಯಾಮಗಳು

ಟಾಟಾ ಪಂಚ್ ಇವಿ ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್

ಮಹೀಂದ್ರಾ ಎಕ್ಸ್‌ಯುವಿ400 ಇಸಿ ಪ್ರೊ

ಉದ್ದ

3857 ಮಿ.ಮೀ

4200 ಮಿ.ಮೀ

ಅಗಲ

1742 ಮಿ.ಮೀ

1821 ಮಿ.ಮೀ

ಎತ್ತರ

1633 ಮಿ.ಮೀ

1634ಮಿ.ಮೀ

ವೀಲ್‌ಬೇಸ್‌

2445 ಮಿ.ಮೀ

2600 ಮಿ.ಮೀ

ಗ್ರೌಂಡ್ ಕ್ಲಿಯರೆನ್ಸ್

190 ಮಿ.ಮೀ

N.A.

ಬೂಟ್ ಸ್ಪೇಸ್

366 ಲೀಟರ್‌

378 ಲೀಟರ್‌


  • ಮಹೀಂದ್ರಾ ಎಕ್ಸ್‌ಯುವಿ400 ಎಲ್ಲಾ ಅಂಶಗಳಲ್ಲಿ ಪಂಚ್ EV ಗಿಂತ ದೊಡ್ಡ ಕೊಡುಗೆಯಾಗಿದೆ.

  • ಪಂಚ್ EV ಮತ್ತು XUV400 ಒಂದೇ ರೀತಿಯ ಎತ್ತರವನ್ನು ಹೊಂದಿದೆ.

  • XUV400 ದೊಡ್ಡ ಬೂಟ್‌ ಸ್ಪೇಸ್‌ನೊಂದಿಗೆ ಬರುತ್ತದೆ, ಅದು ನಿಮ್ಮ ವಾರಾಂತ್ಯದ ಪ್ರವಾಸಗಳಿಗೆ ಒಂದೆರಡು ಹೆಚ್ಚು ಮೃದುವಾದ ಬ್ಯಾಗ್‌ಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಆದಾಗಿಯೂ, ಪಂಚ್ ಇವಿ ಕೆಲವು ಹೆಚ್ಚುವರಿ ಸಂಗ್ರಹಣೆಗಾಗಿ ಸಣ್ಣ "ಫ್ರಂಕ್" (ಮುಂಭಾಗದ ಡಿಕ್ಕಿ) ಆಯ್ಕೆಯನ್ನು ಸಹ ಪಡೆಯುತ್ತದೆ.

ಪವರ್‌ಟ್ರೇನ್‌ಗಳ ಕುರಿತು

ವಿಶೇಷಣಗಳು

ಟಾಟಾ ಪಂಚ್ ಇವಿ ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್

ಮಹೀಂದ್ರಾ ಎಕ್ಸ್‌ಯುವಿ400 ಇಸಿ ಪ್ರೊ

ಬ್ಯಾಟರಿ ಪ್ಯಾಕ್

35 ಕಿ.ವ್ಯಾಟ್‌

34.5 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟರ್‌ನ ಸಂಖ್ಯೆ

1

1

ಪವರ್‌

122 ಪಿಎಸ್‌

150 ಪಿಎಸ್‌

ಟಾರ್ಕ್

140 ಎನ್‌ಎಮ್‌

310 ಎನ್‌ಎಮ್‌

ಘೋಷಿಸಿರುವ ರೇಂಜ್‌

421 ಕಿ.ಮೀ

375 ಕಿ.ಮೀ

  • ಈ ಬೆಲೆಯಲ್ಲಿ, ಎರಡೂ EVಗಳು ಒಂದೇ ರೀತಿಯ ಸಾಮರ್ಥ್ಯಗಳೊಂದಿಗೆ ಬ್ಯಾಟರಿ ಪ್ಯಾಕ್‌ಗಳನ್ನು ಪಡೆಯುತ್ತವೆ, ಆದರೂ ಇದು ಪಂಚ್ EV ದೊಡ್ಡದನ್ನು ಪಡೆಯುತ್ತದೆ. ಇದು ಮಹೀಂದ್ರಾ ಎಕ್ಸ್‌ಯುವಿ400 ಗೆ ಹೋಲಿಸಿದರೆ, ಸುಮಾರು 50 ಕಿಮೀ ಯಷ್ಟು ಹೆಚ್ಚುವರಿ ದೂರವನ್ನು ಕ್ರಮಿಸಬಲ್ಲದು.

ಚಾರ್ಜಿಂಗ್‌

ಚಾರ್ಜರ್‌

ಚಾರ್ಜಿಂಗ್‌ ಸಮಯ

ಟಾಟಾ ಪಂಚ್ ಇವಿ ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್

ಮಹೀಂದ್ರಾ ಎಕ್ಸ್‌ಯುವಿ400 ಇಸಿ ಪ್ರೊ

3.3 ಕಿ.ವ್ಯಾಟ್‌ ಎಸಿ ಚಾರ್ಜರ್‌ (10-100%)

13.5 ಗಂಟೆಗಳು

13.5 ಗಂಟೆಗಳು

7.2 ಕಿ.ವ್ಯಾಟ್‌ ಎಸಿ ಫಾಸ್ಟ್ ಚಾರ್ಜರ್ (10-100%)

5 ಗಂಟೆಗಳು

6.5 ಗಂಟೆಗಳು

50 ಕಿ.ವ್ಯಾಟ್‌ ಡಿಸಿ ಫಾಸ್ಟ್ ಚಾರ್ಜರ್

56 ನಿಮಿಷಗಳು

50 ನಿಮಿಷಗಳು

  • ಪಂಚ್ ಇವಿ ಎಂಪವರ್ಡ್ ಪ್ಲಸ್ ಎಸ್‌ ಲಾಂಗ್ ರೇಂಜ್ ಮತ್ತುಎಕ್ಸ್‌ಯುವಿ400 ಇಸಿ ಪ್ರೊ ಎರಡೂ 3.3 ಕಿ.ವ್ಯಾಟ್‌ ಎಸಿ ಚಾರ್ಜರ್ ಅನ್ನು ಬಳಸಿಕೊಂಡು ಚಾರ್ಜ್ ಮಾಡಲು ಒಂದೇ ಸಮಯವನ್ನು ತೆಗೆದುಕೊಳ್ಳುತ್ತವೆ.

  • ಅದರೂ ಟಾಟಾ ಇವಿಯು ಮಹೀಂದ್ರಾ ಎಕ್ಸ್‌ಯುವಿ400ಗಿಂತ ಎಸಿ ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ತ್ವರಿತವಾಗಿ ಚಾರ್ಜ್‌ ಆಗುತ್ತದೆ.

  • 50ಕಿ.ವ್ಯಾಟ್‌ ಡಿಸಿ ಫಾಸ್ಟ್ ಚಾರ್ಜರ್ ಅನ್ನು ಬಳಸುವಾಗ ಎಕ್ಸ್‌ಯುವಿ 400 ನ ಬ್ಯಾಟರಿಯನ್ನು ಪಂಚ್ ಇವಿಗಿಂತ ವೇಗವಾಗಿ ಚಾರ್ಜ್‌ ಮಾಡಬಹುದು.

ವೈಶಿಷ್ಟ್ಯಗಳ ಪಟ್ಟಿ

ವೈಶಿಷ್ಟ್ಯಗಳು

ಟಾಟಾ ಪಂಚ್ ಇವಿ ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್

ಮಹೀಂದ್ರಾ ಎಕ್ಸ್‌ಯುವಿ400 ಇಸಿ ಪ್ರೊ

ಹೊರಭಾಗದಲ್ಲಿ

  • ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಆಟೋ-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಕಾರ್ನರಿಂಗ್ ಕಾರ್ಯದೊಂದಿಗೆ ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್‌ಗಳು

  • ಡೈನಾಮಿಕ್ ಟರ್ನ್‌ ಇಂಡಿಕೇಟರ್‌ಗಳು

  • ಶಾರ್ಕ್ ಫಿನ್ ಆಂಟೆನಾ

  • 16-ಇಂಚಿನ ಅಲಾಯ್‌ ವೀಲ್‌ಗಳು

  • ರೂಫ್‌ ರೇಲ್ಸ್‌

  • ಕವರ್‌ನೊಂದಿಗೆ 16-ಇಂಚಿನ ಸ್ಟೀಲ್‌ ಚಕ್ರಗಳು

  • ಎಲ್ಇಡಿ ಟೇಲ್‌ಲೈಟ್‌ಗಳು

  • ಒಆರ್‌ವಿಎಮ್‌ನಲ್ಲಿ ಎಲ್‌ಇಡಿ ಟರ್ನ್‌ ಇಂಡಿಕೇಟರ್‌ಗಳು

  • ಬಾಡಿ ಕಲರ್‌ನ ಡೋರ್‌ ಹ್ಯಾಂಡಲ್‌ಗಳು

  • ಕಪ್ಪು ಒಆರ್‌ವಿಎಮ್‌ಗಳು

  • ಹಿಂದಿನ ಸ್ಪಾಯ್ಲರ್

ಇಂಟಿರೀಯರ್‌

  • ಲೆಥೆರೆಟ್ ಸೀಟ್ ಅಪ್ಹೊಲ್ಸ್‌ಟೆರಿ

  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್

  • ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ಮುಂಭಾಗ ಮತ್ತು ಹಿಂಭಾಗದ ಆರ್ಮ್‌ರೆಸ್ಟ್‌ಗಳು

  • ಲೆದರ್‌ನಿಂದ ಸುತ್ತಿದ ಸ್ಟೀರಿಂಗ್ ವೀಲ್‌

  • ಡ್ಯುಯಲ್-ಟೋನ್ ಇಂಟಿರೀಯರ್‌ಗಳು

  • ಸ್ಟೋರೇಜ್‌ನೊಂದಿಗೆ ಮುಂಭಾಗದ ಆರ್ಮ್ ರೆಸ್ಟ್

  • ಸ್ಮಾರ್ಟ್‌ಫೋನ್‌ ಹೋಲ್ಡರ್‌ನೊಂದಿಗೆ ಹಿಂದಿನ ಯುಎಸ್‌ಬಿ ಟೈಪ್-ಸಿ ಪೋರ್ಟ್

  • ಮುಂಭಾಗದ ಯುಎಸ್‌ಬಿ ಪೋರ್ಟ್

  • 12V ಆಕ್ಸಸ್ಸರಿ ಸಾಕೆಟ್

  • ಎಲ್ಲಾ ನಾಲ್ಕು ಬಾಗಿಲುಗಳಲ್ಲಿ ಬಾಟಲ್ ಹೋಲ್ಡರ್

ಕಂಫರ್ಟ್‌ ಮತ್ತು ಅನುಕೂಲತೆ

  • ಆಟೋಮ್ಯಾಟಿಕ್ ಎಸಿ

  • ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು

  • ಎಲ್ಲಾ ನಾಲ್ಕು ಪವರ್‌ ವಿಂಡೋಗಳು

  • ವೈರ್‌ಲೆಸ್ ಫೋನ್ ಚಾರ್ಜರ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

  • ಮಲ್ಟಿ ಡ್ರೈವ್ ಮೋಡ್‌ಗಳು(ಸಿಟಿ/ಸ್ಪೋರ್ಟ್/ಇಕೋ)

  • ಕ್ರೂಸ್‌ ಕಂಟ್ರೋಲ್

  • ಎಲೆಕ್ಟ್ರಿಕ್‌ನಿಂದ ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಮ್‌ಗಳು

  • ಮಳೆ-ಸಂವೇದಿ ವೈಪರ್‌ಗಳು

  • ಆಟೋ-ಡಿಮ್ಮಿಂಗ್‌ ಐಆರ್‌ವಿಎಮ್‌

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ಏರ್ ಪ್ಯೂರಿಫೈಯರ್

  • 60:40 ಸ್ಪ್ಲಿಟ್‌ ಮಾಡಬಹುದಾದ ಎರಡನೇ ಸಾಲು

  • ಹಿಂಭಾಗದ ವೆಂಟ್‌ಗಳೊಂದಿಗೆ ಡ್ಯುಯಲ್-ಜೋನ್ ಎಸಿ

  • ಎರಡನೇ ಸಾಲಿನ ಪ್ರಯಾಣಿಕರಿಗೆ ಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳು

  • ಎತ್ತರ-ಹೊಂದಾಣಿಕೆ ಮಾಡಬಹುದಾದ ಮುಂದಿನ ಸಾಲಿನ ಸೀಟ್‌ಬೆಲ್ಟ್‌ಗಳು

  • ಡ್ರೈವ್ ಮೋಡ್‌ಗಳು (ಫನ್‌ ಮತ್ತು ಸ್ಪೀಡ್‌)

  • ಕೀಲಿ ರಹಿತ ಪ್ರವೇಶ

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • ಎಲೆಕ್ಟ್ರಿಕ್‌ನಿಂದ ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಮ್‌ಗಳು

  • ಎಲ್ಲಾ ನಾಲ್ಕು ಪವರ್‌ ವಿಂಡೋಗಳು

  • ಸೆಂಟ್ರಲ್‌ ಲಾಕಿಂಗ್‌

  • ಬೂಟ್‌ ಲ್ಯಾಂಪ್‌

ಇನ್ಫೋಟೈನ್ಮೆಂಟ್

  • 10.25-ಇಂಚಿನ ಟಚ್‌ಸ್ಕ್ರೀನ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

  • ಕನೆಕ್ಟೆಡ್‌ ಕಾರ್‌ ಟೆಕ್‌

  • 6-ಸ್ಪೀಕರ್ ಮ್ಯೂಸಿಕ್‌ ಸಿಸ್ಟಮ್‌

  • ಆರ್ಕೇಡ್.ಇವಿ ಮೋಡ್

  • ಕನೆಕ್ಟೆಡ್‌ ಕಾರ್‌ ಟೆಕ್‌

ಸುರಕ್ಷತೆ

  • ಡಿಫಾಗರ್‌ನೊಂದಿಗೆ ಹಿಂದಿನ ವೈಪರ್ ಮತ್ತು ವಾಷರ್

  • 6 ಏರ್‌ಬ್ಯಾಗ್‌ಗಳು

  • ಎಲ್ಲಾ ಡಿಸ್ಕ್ ಬ್ರೇಕ್‌ಗಳು

  • ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್

  • ISOFIX ಚೈಲ್ಡ್ ಸೀಟ್ ಆಂಕರ್‌ಗಳು

  • 360 ಡಿಗ್ರಿ ಕ್ಯಾಮೆರಾ

  • ಹಿಂದಿನ ಪಾರ್ಕಿಂಗ್ ಸೆನ್ಸಾರ್‌ಗಳು

  • ಟಯರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಮ್‌

  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್

  • ಟಯರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಮ್‌

  • ಎಲ್ಲಾ ಡಿಸ್ಕ್ ಬ್ರೇಕ್‌ಗಳು

  • ISOFIX ಚೈಲ್ಡ್ ಸೀಟ್ ಆಂಕರ್‌ಗಳು

  • ಹಿಂದಿನ ಪಾರ್ಕಿಂಗ್ ಸೆನ್ಸಾರ್‌ಗಳು

  • ಅದೇ ಬೆಲೆಯಲ್ಲಿ, ಟಾಟಾ ಪಂಚ್ ಇವಿ ಎಂಪವರ್ಡ್ ಪ್ಲಸ್ ಎಸ್‌ ಲಾಂಗ್ ರೇಂಜ್, ಎಕ್ಸ್‌ಯುವಿ400 ಇಸಿಪ್ರೊಗಿಂತ ಉತ್ತಮವಾದ ಸುಸಜ್ಜಿತ ಕೊಡುಗೆಯಾಗಿದೆ, ಮೊದಲನೆಯದು ಟಾಪ್-ಎಂಡ್‌ ವೇರಿಯೆಂಟ್‌ ಆಗಿದೆ.

  • ಪೂರ್ಣವಾಗಿ ಲೋಡ್ ಆಗಿರುವ ಪಂಚ್ ಇವಿಯ ಪ್ರೀಮಿಯಂ ವೈಶಿಷ್ಟ್ಯಗಳಾದ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇ ಗಳು (ಒಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ), ಮತ್ತು ಲೆಥೆರೆಟ್ ಅಪ್ಹೊಲ್ಸ್‌ಟೆರಿಯನ್ನು ಪಡೆಯುತ್ತದೆ.

  • ಮತ್ತೊಂದೆಡೆ, ಎಕ್ಸ್‌ಯುವಿ400 ಇಸಿ ಪ್ರೊ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಡ್ಯುಯಲ್-ಝೋನ್ ಎಸಿ, ಕೀಲೆಸ್ ಎಂಟ್ರಿ ಮತ್ತು ಎಲ್ಲಾ ನಾಲ್ಕು ಪವರ್ ವಿಂಡೋಗಳಂತಹ ಕೆಲವು ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಮಾತ್ರ ತುಂಬಿರುತ್ತದೆ.

  • ಸುರಕ್ಷತೆಯ ವಿಷಯದಲ್ಲಿ, 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂತಹ ತಂತ್ರಜ್ಞಾನದೊಂದಿಗೆ ಪಂಚ್ ಇವಿ ಸ್ವಲ್ಪ ಮುಂದಿದೆ.

  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಸೇರಿದಂತೆ ಕೆಲವು ಬೇಸಿಕ್‌ ವೈಶಿಷ್ಟ್ಯಗಳೊಂದಿಗೆ ಎಕ್ಸ್‌ಯುವಿ400 ಇಸಿ ಪ್ರೊನ ಸುರಕ್ಷತಾ ಪ್ಯಾಕೇಜ್‌ ಅನ್ನು ಮಹೀಂದ್ರಾ ನೀಡುತ್ತಿದೆ.

ಅಂತಿಮ ಮಾತು

ಪಂಚ್ ಇವಿ ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್ ಬೆಲೆಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ ಎಂಬುದು ಸ್ಪಷ್ಟವಾಗಿದೆ. ಹೆಚ್ಚಿನ ರೇಂಜ್‌, ಸ್ಪೀಡ್‌ ಚಾರ್ಜಿಂಗ್ ಆಯ್ಕೆ ಮತ್ತು ಬೃಹತ್ತಾದ ಪ್ರೀಮಿಯಂ ಸೌಕರ್ಯಗಳ ಪಟ್ಟಿ - ಬೇಸ್-ಸ್ಪೆಕ್ XUV400 ಗಿಂತ ಇದು ಉತ್ತಮ ಪ್ಯಾಕೇಜ್ ಅನ್ನು ಮಾಡುತ್ತದೆ.

ಆದಾಗ್ಯೂ, ನೀವು ಹೆಚ್ಚು ರೋಡ್‌ ಪ್ರೆಸೆನ್ಸ್‌ ಮತ್ತು ನಿಜವಾದ EV ಡ್ರೈವ್ ಅನುಭವವನ್ನು ಹೆಚ್ಚಿನ ರೇಂಜ್‌ನ ಮೇಲೆ ತ್ವರಿತ ವೇಗವರ್ಧನೆಯೊಂದಿಗೆ ಬಯಸಿದರೆ, ಎಕ್ಸ್‌ಯುವಿ400 ಇಸಿ ಪ್ರೊ ನಿಮಗೆ ಹೆಚ್ಚು ಸೂಕ್ತವಾಗಿದೆ. ಇದರ ದೊಡ್ಡ ಆಯಾಮಗಳು, ಹೆಚ್ಚು ವಿಶಾಲವಾದ ಕ್ಯಾಬಿನ್‌ಗೆ ಕಾರಣವಾಗುತ್ತವೆ, ಇದು ಫ್ಯಾಮಿಲಿ ಕಾರ್ ಆಗಿ ಸ್ವಲ್ಪ ಹೆಚ್ಚು ಸೂಕ್ತವಾಗಿದೆ. ವಾರಾಂತ್ಯದ ಕುಟುಂಬ ಪ್ರವಾಸಕ್ಕಾಗಿ ಒಂದೆರಡು ಹೆಚ್ಚುವರಿ ಸಾಫ್ಟ್ ಬ್ಯಾಗ್‌ಗಳನ್ನು ಪ್ಯಾಕ್ ಮಾಡಲು ಸಹಾಯ ಮಾಡುವ ಆಫರ್‌ನಲ್ಲಿರುವ ಬೂಟ್ ಸ್ಪೇಸ್‌ಗೆ ಬಂದಾಗ XUV400 ಮೇಲುಗೈ ಹೊಂದಿದೆ ಎಂಬುದನ್ನು ಮರೆಯಬಾರದು.

ಹಾಗಾದರೆ, ಈ ಎರಡು ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಯಾವುದನ್ನು ನೀವು ಆರಿಸುತ್ತೀರಿ ಮತ್ತು ಏಕೆ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಹೆಚ್ಚು ಓದಿ: ಪಂಚ್ ಇವಿ ಆಟೋಮ್ಯಾಟಿಕ್‌

r
ಅವರಿಂದ ಪ್ರಕಟಿಸಲಾಗಿದೆ

rohit

  • 27 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಪಂಚ್‌ EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ