Tata Punch EV ಲಾಂಗ್ ರೇಂಜ್ ಪರ್ಫಾರ್ಮೆನ್ಸ್ ಟೆಸ್ಟ್: ಆನ್ ರೋಡ್ ನಲ್ಲಿ ಹೇಗಿದೆ ಎಲ್ಲಾ ಮೂರು ಡ್ರೈವ್ ಮೋಡ್‌ಗಳ ಕಾರ್ಯಕ್ಷಮತೆ
ಟಾಟಾ ಪಂಚ್ ಇವಿ ಗಾಗಿ samarth ಮೂಲಕ ಆಗಸ್ಟ್ 02, 2024 06:49 pm ರಂದು ಪ್ರಕಟಿಸಲಾಗಿದೆ
- 55 Views
- ಕಾಮೆಂಟ್ ಅನ್ನು ಬರೆಯಿರಿ
ಪಂಚ್ EV ಲಾಂಗ್ ರೇಂಜ್ ವೇರಿಯಂಟ್ ಮೂರು ಡ್ರೈವ್ ಮೋಡ್‌ಗಳನ್ನು ನೀಡುತ್ತದೆ: ಇಕೋ, ಸಿಟಿ ಮತ್ತು ಸ್ಪೋರ್ಟ್. ನಮ್ಮ ಆಕ್ಸಿಲರೇಷನ್ ಪರೀಕ್ಷೆಗಳು ಇಕೋ ಮತ್ತು ಸಿಟಿ ಮೋಡ್ ಗಳ ನಡುವೆ ಸಣ್ಣ ವ್ಯತ್ಯಾಸಗಳನ್ನು ತೋರಿಸಿವೆ
ಟಾಟಾ ಪಂಚ್ EV ಅನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ಇದರಲ್ಲಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಿವೆ: 25 kWh (ಮೀಡಿಯಂ ರೇಂಜ್) ಮತ್ತು 35 kWh (ಲಾಂಗ್ ರೇಂಜ್). ಲಾಂಗ್ ರೇಂಜ್ ವರ್ಷನ್ ಅನ್ನು ಮೂರು ಡ್ರೈವ್ ಮೋಡ್‌ಗಳಲ್ಲಿ ನೀಡಲಾಗಿದೆ: ಇಕೋ, ಸಿಟಿ ಮತ್ತು ಸ್ಪೋರ್ಟ್. ಇತ್ತೀಚಿಗೆ, ವಿಭಿನ್ನ ಡ್ರೈವಿಂಗ್ ಮೋಡ್‌ಗಳಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ನಾವು ಪಂಚ್ EV ಲಾಂಗ್ ರೇಂಜ್ ಅನ್ನು ಟೆಸ್ಟ್ ಮಾಡಿದ್ದೇವೆ. ನಮ್ಮ ಟೆಸ್ಟ್ ಫಲಿತಾಂಶಗಳು ಇಲ್ಲಿದೆ.
ಪವರ್‌ಟ್ರೇನ್
ನಾವು ಲಾಂಗ್ ರೇಂಜ್ ವೇರಿಯಂಟ್ ಅನ್ನು ಟೆಸ್ಟ್ ಮಾಡಿರುವುದರಿಂದ, ಅದರ ಪವರ್‌ಟ್ರೇನ್
ಸ್ಪೆಸಿಫಿಕೇಷನ್ ಗಳನ್ನು ನೋಡೋಣ:
ಟಾಟಾ ಪಂಚ್ EV ವೇರಿಯಂಟ್ ಗಳು |
ಲಾಂಗ್ ರೇಂಜ್ |
ಬ್ಯಾಟರಿ ಪ್ಯಾಕ್ |
35 kWh |
ಒಟ್ಟು ವಿದ್ಯುತ್ ಮೋಟರ್ ಸಂಖ್ಯೆ |
1 |
ಪವರ್ |
122 PS |
ಟಾರ್ಕ್ |
190 Nm |
ಕ್ಲೇಮ್ ಮಾಡಿರುವ ರೇಂಜ್ (MIDC) |
421 ಕಿ.ಮೀ |
ಈ ವರ್ಷನ್ 9.5 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ತಲುಪುತ್ತದೆ ಮತ್ತು 140 ಕಿಮೀ (ಸೀಮಿತ) ಗರಿಷ್ಠ ವೇಗವನ್ನು ತಲುಪುತ್ತದೆ ಎಂದು ಟಾಟಾ ಹೇಳುತ್ತದೆ.
ಆಕ್ಸಿಲರೇಷನ್ ಟೆಸ್ಟ್
ಟೆಸ್ಟ್ |
ಟಾಟಾ ಪಂಚ್ EV LR |
0-100 ಕಿ.ಮೀ ಪ್ರತಿ ಗಂಟೆ |
9.05 ಸೆಕೆಂಡುಗಳು (ಸ್ಪೋರ್ಟ್ ಮೋಡ್‌ನಲ್ಲಿ) |
ಕ್ವಾರ್ಟರ್ ಮೈಲಿ ಟೆಸ್ಟ್ |
132.24 ಕಿಮೀ ಪ್ರತಿ ಗಂಟೆ 16.74 ಸೆಕೆಂಡ್ ನಲ್ಲಿ |
ಕಿಕ್‌ಡೌನ್ (20-80 ಕಿಮೀ ಪ್ರತಿ ಗಂಟೆ) |
4.94 ಸೆಕೆಂಡುಗಳು |
ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಪಂಚ್ EV ಕೇವಲ 9.05 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ಪ್ರತಿ ಗಂಟೆ ವೇಗವನ್ನು ತಲುಪಿತು, ಇದು ಕ್ಲೈಮ್ ಮಾಡಿದ ಸಮಯಕ್ಕಿಂತ ವೇಗವಾಗಿದೆ. ಕ್ವಾರ್ಟರ್ ಮೈಲಿ ಟೆಸ್ಟ್ ಸ್ವಲ್ಪ ಸಮಯ ತೆಗೆದುಕೊಂಡಿತು, ಆದರೆ ಕಿಕ್‌ಡೌನ್‌ನಲ್ಲಿ ಕಾರು ಕೇವಲ 5 ಸೆಕೆಂಡುಗಳಲ್ಲಿ 20 ರಿಂದ 80 ಕಿಮೀ ವೇಗವನ್ನು ಪಡೆದುಕೊಂಡಿತು.
ಬನ್ನಿ, ಈಗ ಪಂಚ್ EV ವಿವಿಧ ಡ್ರೈವ್ ಮೋಡ್‌ಗಳಲ್ಲಿ 0-100 ಕಿ.ಮೀ ಪ್ರತಿ ಗಂಟೆ ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೋಡೋಣ.
ಡ್ರೈವ್ ಮೋಡ್ |
ತೆಗೆದುಕೊಂಡ ಸಮಯ (0-100 ಕಿಮೀ ಪ್ರತಿ ಗಂಟೆ) |
ಸ್ಪೋರ್ಟ್ |
9.05 ಸೆಕೆಂಡುಗಳು |
ಸಿಟಿ |
13.10 ಸೆಕೆಂಡುಗಳು |
ಇಕೋ |
13.31 ಸೆಕೆಂಡುಗಳು |
ಸ್ಪೋರ್ಟ್ ಮೋಡ್‌ಗೆ ಹೋಲಿಸಿದರೆ ಸಿಟಿ ಮತ್ತು ಇಕೋ ಮೋಡ್‌ಗಳಲ್ಲಿ, EV ಕ್ರಮವಾಗಿ 4.05 ಮತ್ತು 4.26 ಸೆಕೆಂಡುಗಳಷ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರರ್ಥ EV ಯಲ್ಲಿನ ಅತ್ಯಂತ ವೇಗದ ಮೋಡ್‌ಗೆ ಹೋಲಿಸಿದರೆ ದೊಡ್ಡ ವ್ಯತ್ಯಾಸವಿದೆ, ಮತ್ತು 'ಸಿಟಿ' ಮತ್ತು 'ಇಕೋ' ಮೋಡ್‌ಗಳಲ್ಲಿನ ಸಮಯದ ನಡುವೆ ಕೇವಲ ಸಣ್ಣ ಅಂತರವಿದೆ.
ಹಕ್ಕು ನಿರಾಕರಣೆ: ಡ್ರೈವರ್, ರಸ್ತೆಯ ಸ್ಥಿತಿ ಮತ್ತು ವಾಹನ ಮತ್ತು ಬ್ಯಾಟರಿಯ ಸ್ಥಿತಿಯನ್ನು ಆಧರಿಸಿ EVಯ ಆನ್ ರೋಡ್ ಪರ್ಫಾರ್ಮೆನ್ಸ್ ಬದಲಾಗಬಹುದು.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ EV ಲಾಂಗ್ ರೇಂಜ್ ವಿರುದ್ಧ ಟಾಟಾ ಪಂಚ್ EV ಲಾಂಗ್ ರೇಂಜ್: ರಿಯಲ್ ವರ್ಲ್ಡ್ ಪರ್ಫಾರ್ಮೆನ್ಸ್ ಟೆಸ್ಟ್
ಬ್ರೇಕಿಂಗ್ ಟೆಸ್ಟ್
ಟೆಸ್ಟ್ ಗಳು |
ತೆಗೆದುಕೊಂಡ ದೂರ |
100-0 ಕಿ.ಮೀ ಪ್ರತಿ ಗಂಟೆ |
44.66ಮೀ (ಒದ್ದೆಯಾದ ರಸ್ತೆಯಲ್ಲಿ) |
80-0 ಕಿ.ಮೀ ಪ್ರತಿ ಗಂಟೆ |
27.52ಮೀ (ಒದ್ದೆಯಾದ ರಸ್ತೆಯಲ್ಲಿ) |
ಪಂಚ್ EV ಯ ಲಾಂಗ್ ರೇಂಜ್ ವರ್ಷನ್ ಅನ್ನು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು 16-ಇಂಚಿನ ಅಲೊಯ್ ವೀಲ್ ಗಳೊಂದಿಗೆ ನೀಡಲಾಗುತ್ತದೆ. ನಾವು ಒದ್ದೆಯಾದ ರಸ್ತೆಗಳಲ್ಲಿ ಅದರ ಬ್ರೇಕ್‌ಗಳನ್ನು ಪರೀಕ್ಷಿಸಿದಾಗ, 100 ಕಿಮೀ ವೇಗದಲ್ಲಿ ನಿಲ್ಲಿಸಲು 44.66 ಮೀಟರ್ ಮತ್ತು 80 ಕಿಮೀ ವೇಗದಲ್ಲಿ ನಿಲ್ಲಿಸಲು 27.52 ಮೀಟರ್ ತೆಗೆದುಕೊಂಡಿತು.
ಗಮನಿಸಿ: ಪಂಚ್ EV ಯ ಬ್ರೇಕಿಂಗ್ ಟೆಸ್ಟ್ ಅನ್ನು ಒದ್ದೆಯಾದ ರಸ್ತೆಯಲ್ಲಿ ಮಾಡಲಾಗಿದೆ, ಹಾಗಾಗಿ ಬ್ರೇಕಿಂಗ್ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರಿರಬಹುದು.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಪಂಚ್ EV ಬೆಲೆಯು 10.98 ಲಕ್ಷದಿಂದ ಪ್ರಾರಂಭವಾಗಿ 15.48 ಲಕ್ಷದವರೆಗೆ (ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಇದೆ. ಇದು ಸಿಟ್ರೊಯೆನ್ eC3 ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು MG ಕಾಮೆಟ್ EV, ಟಾಟಾ ಟಿಯಾಗೊ EV ಮತ್ತು ಟಾಟಾ ಟಿಗೊರ್ EV ಗೆ ಪ್ರೀಮಿಯಂ ಬೆಲೆಯ ಪರ್ಯಾಯ ಆಯ್ಕೆಯಾಗಿದೆ.
ಇತ್ತೀಚಿನ ನಿರಂತರ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಟಾಟಾ ಪಂಚ್ EV ಆಟೋಮ್ಯಾಟಿಕ್