• English
  • Login / Register

Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿಸಬೇಕು?

ಟಾಟಾ ಪಂಚ್‌ ಇವಿ ಗಾಗಿ sonny ಮೂಲಕ ಜನವರಿ 23, 2024 04:14 pm ರಂದು ಪ್ರಕಟಿಸಲಾಗಿದೆ

  • 181 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಪ್ ವೆರಿಯಂಟ್ ಪಂಚ್ EV ಯ ಬೆಲೆಯು ಎಂಟ್ರಿ ಲೆವೆಲ್ ನೆಕ್ಸಾನ್ EV ಯ ಬೆಲೆಯಷ್ಟೇ ಇದೆ, ಆದರೆ ಯಾವುದು ನಿಮಗೆ ಸೂಕ್ತವಾಗಿದೆ? ಬನ್ನಿ ನೋಡೋಣ.

Tata Punch EV vs Tata Nexon EV

ಭಾರತದಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ SUV ಗಳ ಆಯ್ಕೆಯ ಮಾರುಕಟ್ಟೆಯು ಈಗ ಟಾಟಾ ಪಂಚ್ EV ಯ ಬಿಡುಗಡೆಯೊಂದಿಗೆ ಇನ್ನಷ್ಟು ಹೆಚ್ಚಾಗಿದೆ. ಇದು ದೇಶದಲ್ಲಿ ಪ್ರಸ್ತುತ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ನೆಕ್ಸಾನ್ EV ಗಿಂತ ಕೆಳಗಿನ ಮಟ್ಟದಲ್ಲಿ ಇದೆ. ನೀವು ರೂ 15 ಲಕ್ಷ ಬೆಲೆಯ ಬಜೆಟ್ ನಲ್ಲಿ ಹೊಸ ಎಲೆಕ್ಟ್ರಿಕ್ SUV ಅನ್ನು ಖರೀದಿಸಲು ಬಯಸಿದರೆ (ಎಕ್ಸ್-ಶೋರೂಮ್), ನೀವು ಪಂಚ್ EV ಮತ್ತು ಎಂಟ್ರಿ ಲೆವೆಲ್ ನೆಕ್ಸಾನ್ EV ಯ ಟಾಪ್-ಲೆವೆಲ್ ವೇರಿಯಂಟ್ ಅನ್ನು ಪರಿಗಣಿಸಬಹುದು. ಇವೆರಡರಲ್ಲಿ ನಿಮಗೆ ಯಾವುದು ಸೂಕ್ತವಾಗಿದೆ ಎಂದು ತಿಳಿಯಲು, ಮೊದಲಿಗೆ ಸ್ಪೆಸಿಫಿಕೇಷನ್ಸ್ ಅನ್ನು ನೋಡೋಣ.

 ಡೈಮೆನ್ಷನ್ಸ್

 

ಪಂಚ್ ಇವಿ ಎಂಪವರ್ಡ್+ S LR

 ನೆಕ್ಸಾನ್ EV ಕ್ರಿಯೇಟಿವ್+ MR

 ಉದ್ದ

3857 ಮಿ.ಮೀ

 3994 ಮಿ.ಮೀ

ಅಗಲ

 1741 ಮಿ.ಮೀ

 1811 ಮಿ.ಮೀ

 ಎತ್ತರ

 1633 ಮಿ.ಮೀ

 1616 ಮಿ.ಮೀ

 ವೀಲ್ ಬೇಸ್

 2445 ಮಿ.ಮೀ

 2498 ಮಿ.ಮೀ

 ಗ್ರೌಂಡ್ ಕ್ಲಿಯರೆನ್ಸ್

 190 ಮಿ.ಮೀ

 205 ಮಿ.ಮೀ

 ಬೂಟ್ ಸ್ಪೇಸ್

 366 ಲೀಟರ್ + 14 ಲೀಟರ್ (ಫ್ರಂಕ್)

 350 ಲೀಟರ್

Tata Nexon EV

 ನೆಕ್ಸಾನ್ EV ಪಂಚ್ EV ಗಿಂತ ಒಂದು ಸೆಗ್ಮೆಂಟ್ ಮೇಲಿದೆ ಮತ್ತು ಹಾಗಾಗಿ ಹೆಚ್ಚು ಕ್ಯಾಬಿನ್ ಜಾಗದೊಂದಿಗೆ ಉದ್ದ ಮತ್ತು ಅಗಲವಾಗಿದೆ. ಹಾಗೆಯೆ, ಪಂಚ್ EV ಹೆಚ್ಚು ಲಗೇಜ್ ಇಡಲು ಸ್ಥಳವನ್ನು ಹೊಂದಿದೆ, ಜೊತೆಗೆ ಬಾನೆಟ್ ಅಡಿಯಲ್ಲಿ ಮುಂಭಾಗದ ಲಗೇಜ್ ಜಾಗವನ್ನು ಕೂಡ ಹೊಂದಿದೆ (ಇದು ಟಾಟಾ EV ಗಳಲ್ಲಿ ಮೊಟ್ಟ ಮೊದಲು). ಅಲ್ಲದೆ, ನೆಕ್ಸಾನ್ EV ಯ ಬೇಸ್ ವೇರಿಯಂಟ್ ಸ್ವಲ್ಪ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

 

 ಎಲೆಕ್ಟ್ರಿಕ್ ಪವರ್‌ಟ್ರೇನ್ ಗಳು

 

ಪಂಚ್ ಇವಿ ಎಂಪವರ್ಡ್+ S LR

ನೆಕ್ಸಾನ್ EV ಕ್ರಿಯೇಟಿವ್+ MR

 ಬ್ಯಾಟರಿ ಸೈಜ್

35kWh

30kWh

 ಪವರ್ ಮತ್ತು ಟಾರ್ಕ್

122 PS/ 190Nm

129 PS/ 215 Nm

 ಕ್ಲೇಮ್ ಮಾಡಲಾಗಿರುವ ರೇಂಜ್ (MIDC)

 421 ಕಿ.ಮೀ

 325 ಕಿ.ಮೀ

 ಚಾರ್ಜಿಂಗ್ ಸಮಯ (3.3kW ಬಳಸಿ 10-100%)

 13.5 ಗಂಟೆಗಳು

 10.5 ಗಂಟೆಗಳು

 ಚಾರ್ಜಿಂಗ್ ಸಮಯ (7.2kW ಬಳಸಿ 10-100%)

 5 ಗಂಟೆಗಳು 

4.3 ಗಂಟೆಗಳು

Tata Punch EV charging

 ಇದೇ ಬೆಲೆಯಲ್ಲಿ, ನೀವು ಪಂಚ್ EV ಅನ್ನು ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಪಡೆಯಬಹುದು. ಅದು ಎಂಟ್ರಿ ಲೆವೆಲ್ ನೆಕ್ಸಾನ್ EV ಗಿಂತ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ. ಆದರೆ, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ SUV ಸ್ವಲ್ಪ ಹೆಚ್ಚು ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ. ಇದಲ್ಲದೆ, ನೆಕ್ಸಾನ್ EV MR ನಲ್ಲಿ ಸಣ್ಣ ಬ್ಯಾಟರಿ ಪ್ಯಾಕ್ ಇರುವ ಕಾರಣ ಚಾರ್ಜ್ ಸಮಯ ವೇಗವಾಗಿದೆ. ಎರಡೂ EVಗಳಿಗೆ ಒಂದು ಗಂಟೆಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ 50kW DC ಫಾಸ್ಟ್ ಚಾರ್ಜರ್‌ ಅನ್ನು ಕೂಡ ಬಳಸಬಹುದು.

 ಫೀಚರ್ ಗಳು

 

ಪಂಚ್ ಇವಿ ಎಂಪವರ್ಡ್+ S LR

ನೆಕ್ಸಾನ್ EV ಕ್ರಿಯೇಟಿವ್+ MR

 

ಹೊರಭಾಗ

DRL ಗಳೊಂದಿಗೆ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

LED ಟೈಲ್‌ಲ್ಯಾಂಪ್‌ಗಳು 

ಕಾರ್ನೆರಿಂಗ್ ನೊಂದಿಗೆ LED ಫ್ರಂಟ್ ಫಾಗ್ ಲ್ಯಾಂಪ್‌ಗಳು

ಫ್ರಂಟ್ ಲ್ಯಾಂಪ್‌ ಗಳಿಗಾಗಿ ಸೀಕ್ವೆನ್ಸ್ ಅನಿಮೇಷನ್

16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್

ರೂಫ್ ರೈಲ್ಸ್

ಶಾರ್ಕ್ ಫಿನ್ ಆಂಟೆನಾ

DRL ಗಳೊಂದಿಗೆ LED ಹೆಡ್‌ಲ್ಯಾಂಪ್‌ಗಳು

LED ಕನೆಕ್ಟ್ ಆಗಿರುವ ಟೈಲ್‌ಲ್ಯಾಂಪ್‌ಗಳು

16-ಇಂಚಿನ ಸ್ಟೀಲ್ ವೀಲ್ಸ್

 

ಒಳಭಾಗ

ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ

ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

ಮುಂಭಾಗ ಮತ್ತು ಹಿಂಭಾಗದ ಆರ್ಮ್ ರೆಸ್ಟ್

ಬಿಲ್ಟ್ ಇನ್ ಡಿಸ್ಪ್ಲೇಯೊಂದಿಗೆ ಡ್ರೈವ್ ಸೆಲೆಕ್ಟರ್‌ಗಾಗಿ ಜ್ಯುವೆಲ್ಡ್ ರೋಟರಿ ಡಯಲ್

ಕ್ಯಾಬಿನ್ ಮೂಡ್ ಲೈಟಿಂಗ್

 ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ

ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

ಆರಾಮ ಮತ್ತು ಅನುಕೂಲತೆ

 ರಿಯರ್ ವೆಂಟ್ ನೊಂದಿಗೆ ಆಟೋ AC

ಫ್ರಂಟ್ ವೆಂಟಿಲೇಟೆಡ್ ಸೀಟ್ ಗಳು

ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್

ಆಟೋ ಹೆಡ್‌ಲ್ಯಾಂಪ್‌ಗಳು

ರೈನ್ ಸೆನ್ಸಿಂಗ್ ವೈಪರ್‌ಗಳು

ಆಟೋ ಫೋಲ್ಡ್ ORVM

ಏರ್ ಪ್ಯೂರಿಫೈಯರ್

ಮಲ್ಟಿ-ಡ್ರೈವ್ ಮೋಡ್‌ಗಳು

ಕ್ರೂಸ್ ಕಂಟ್ರೋಲ್

USB ಚಾರ್ಜ್ ಪೋರ್ಟ್‌ಗಳು

ಸನ್‌ರೂಫ್‌

ಆಟೋ AC

ಪುಶ್-ಬಟನ್ ಸ್ಟಾರ್ಟ್ ನೊಂದಿಗೆ ಸ್ಮಾರ್ಟ್ ಕೀ

ಎಲ್ಲಾ 4 ಪವರ್ ವಿಂಡೋಗಳು

ಫ್ರಂಟ್ USB ಚಾರ್ಜ್ ಪೋರ್ಟ್‌ಗಳು

12V ಫ್ರಂಟ್ ಪವರ್ ಔಟ್ಲೆಟ್

 ಇನ್ಫೋಟೈನ್ಮೆಂಟ್

 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್

ನ್ಯಾವಿಗೇಷನ್ ವ್ಯೂನೊಂದಿಗೆ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

4-ಸ್ಪೀಕರ್‌ಗಳು +2 ಟ್ವೀಟರ್‌ಗಳು

 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್

ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

4-ಸ್ಪೀಕರ್‌ಗಳು

7-ಇಂಚಿನ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್

 ಸುರಕ್ಷತೆ

6 ಏರ್ ಬ್ಯಾಗ್‌ಗಳು

360 ಡಿಗ್ರಿ ಕ್ಯಾಮೆರಾ

ISOFIX

ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್

ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಟೈರ್ ಪ್ರೆಷರ್ಮಾನಿಟರಿಂಗ್ ಸಿಸ್ಟಮ್

ರಿಯರ್ ವೈಪರ್ ಮತ್ತು ಡಿಫಾಗರ್

ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್

6 ಏರ್ ಬ್ಯಾಗ್‌ಗಳು

ರಿಯರ್ ಪಾರ್ಕಿಂಗ್ ಕ್ಯಾಮೆರಾ

ISOFIX

ಟ್ರಾಕ್ಷನ್ ಕಂಟ್ರೋಲ್

ESP

ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

Tata Punch EV cabin
Tata Nexon EV cabin

 ಪಂಚ್ EV ಅನ್ನು ಅದರ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ವರ್ಷನ್ ಗೆ ಹೋಲಿಸಿದರೆ ಬಹಳಷ್ಟು ಫೀಚರ್ ಅಪ್ಡೇಟ್ ಗಳನ್ನು ಪಡೆಯುತ್ತದೆ, ಅವುಗಳಲ್ಲಿ ಹೆಚ್ಚಿನವುಗಳನ್ನು ಅದರ ಟಾಪ್ ವೇರಿಯಂಟ್ ನೊಂದಿಗೆ ನೀಡಲಾಗುತ್ತದೆ. ಟಾಪ್-ಸ್ಪೆಕ್ ಪಂಚ್ EV ಮತ್ತು ಬೇಸ್ ವೆರಿಯಂಟ್ ನೆಕ್ಸಾನ್ EV ಎರಡೂ ಆರು ಏರ್‌ಬ್ಯಾಗ್‌ಗಳು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, TPMS, LED ಲೈಟಿಂಗ್ ಮತ್ತು ಆಟೋ AC ಅನ್ನು ಪಡೆಯುತ್ತವೆ. ಆದರೆ, ದೊಡ್ಡ ಸೆಂಟ್ರಲ್ ಡಿಸ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಪಂಚ್ ಎಂಪವರ್ಡ್ ಪ್ಲಸ್ S ನೆಕ್ಸಾನ್ EV ಕ್ರಿಯೇಟಿವ್ ಪ್ಲಸ್‌ಗಿಂತ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.

 

ಬೆಲೆಗಳು

 ಪಂಚ್ ಇವಿ ಎಂಪವರ್ಡ್+ S LR

 ನೆಕ್ಸಾನ್ EV ಕ್ರಿಯೇಟಿವ್+ MR

 ವ್ಯತ್ಯಾಸ

 ರೂ 14.99 ಲಕ್ಷ (ಪರಿಚಯಾತ್ಮಕ)

 ರೂ 14.79 ಲಕ್ಷ 

 ರೂ. 20,000

 ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಬೆಲೆಯಾಗಿದೆ

 ಎಂಟ್ರಿ ಲೆವೆಲ್ ಟಾಟಾ ನೆಕ್ಸಾನ್ EV ಟಾಪ್-ಸ್ಪೆಕ್ ಪಂಚ್ EV ಗಿಂತ ಸ್ವಲ್ಪ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ ಮತ್ತು ಇದರ ಒಳಭಾಗವು ಹೆಚ್ಚು ವಿಶಾಲವಾಗಿದೆ. ಈ ಕಾರಣದಿಂದಾಗಿ ಇದು ಒಟ್ಟಾರೆಯಾಗಿ ಒಂದು ಒಳ್ಳೆಯ ಫ್ಯಾಮಿಲಿ ಕಾರ್ ಆಗಿದೆ. ಆದರೆ, ನೀವು ಹೆಚ್ಚಿನ ರೇಂಜ್ ಮತ್ತು ಪ್ರೀಮಿಯಂ ಸೌಕರ್ಯಗಳನ್ನು ಹುಡುಕುತ್ತಿದ್ದರೆ, ಪಂಚ್ EV ನಿಮಗೆ ಉತ್ತಮ ಆಯ್ಕೆಯಾಗಿದೆ.

 ಇನ್ನಷ್ಟು ಓದಿ: ಟಾಟಾ ಪಂಚ್ EV ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಪಂಚ್‌ EV

1 ಕಾಮೆಂಟ್
1
S
satish
Jan 23, 2024, 9:43:30 AM

must buy Punch higher variant rather than Nexon no much difference in space however you will get long run

Read More...
    ಪ್ರತ್ಯುತ್ತರ
    Write a Reply
    Read Full News

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience