Login or Register ಅತ್ಯುತ್ತಮ CarDekho experience ಗೆ
Login

Tata Punch EV ಸ್ಮಾರ್ಟ್ ಪ್ಲಸ್ ವರ್ಸಸ್ Tata Tiago EV XZ ಪ್ಲಸ್ ಟೆಕ್ ಲಕ್ಸ್ ಲಾಂಗ್ ರೇಂಜ್: ನೀವು ಯಾವ EV ಖರೀದಿಸಬೇಕು?

published on ಫೆಬ್ರವಾರಿ 23, 2024 04:35 pm by shreyash for ಟಾಟಾ ಪಂಚ್‌ ಇವಿ

ಇಲ್ಲಿ ನೀಡಿರುವ ಎರಡೂ EVಗಳು ಒಂದೇ ರೀತಿಯ ಬ್ಯಾಟರಿ ಪ್ಯಾಕ್ ಗಾತ್ರಗಳನ್ನು ಹೊಂದಿದ್ದು, 315 ಕಿಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತವೆ.

ಟಾಟಾ ಇತ್ತೀಚಿಗೆ ಅದರ ಎರಡು ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳ ಮೇಲೆ ಬೆಲೆ ಕಡಿತವನ್ನು ನೀಡಿದೆ, ಅದರಲ್ಲಿ ಒಂದು ಟಾಟಾ ಟಿಯಾಗೊ EV ಆಗಿದೆ. ಬೆಲೆ ಕಡಿತ ಮಾಡಿದ ನಂತರ, ಟಿಯಾಗೋ EV ಯ XZ ಪ್ಲಸ್ ಲಕ್ಸ್ ಲಾಂಗ್-ರೇಂಜ್ (LR) ವರ್ಷನ್ ನ ಬೆಲೆಯು ಈಗ ಟಾಟಾ ಪಂಚ್ EV ಸ್ಮಾರ್ಟ್ ಪ್ಲಸ್ ಮೀಡಿಯಂ-ರೇಂಜ್ (MR) ವೇರಿಯಂಟ್ ಬೆಲೆಯ ಹತ್ತಿರದಲ್ಲಿದೆ. ಟಾಟಾ ಪ್ರಕಾರ, ಬ್ಯಾಟರಿ ಪ್ಯಾಕ್ ವೆಚ್ಚ ಕಡಿಮೆಯಾದ ಕಾರಣ ಬೆಲೆ ಕಡಿತವನ್ನು ಮಾಡಲಾಗಿದೆ. ಇದರ ಜೊತೆಗೆ, ಕಂಪನಿಯು ಪಂಚ್ EV ಅನ್ನು ಪ್ರಾರಂಭಿಸುವಾಗ ಬ್ಯಾಟರಿ ಪ್ಯಾಕ್ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಬೆಲೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಅಂತಹ ಯಾವುದೇ ಬೆಲೆ ಪರಿಷ್ಕರಣೆಗಳನ್ನು ಪಂಚ್ EV ಪಡೆಯುವ ಸಾಧ್ಯತೆಯಿಲ್ಲ.

ಪಂಚ್ EV ಯ ಬೇಸ್ ಗಿಂತ ಒಂದು ಹಂತ ಮೇಲಿರುವ ಸ್ಮಾರ್ಟ್ ಪ್ಲಸ್ ವೇರಿಯಂಟ್ ನ ಸ್ಪೆಸಿಫಿಕೇಷನ್ ಗಳನ್ನು ಇಲ್ಲಿ ಟಾಟಾ ಟಿಯಾಗೊ EV XZ ಪ್ಲಸ್ ಟೆಕ್ ಲಕ್ಸ್ ಲಾಂಗ್ ರೇಂಜ್ ವೇರಿಯಂಟ್ ಗೆ ಹೋಲಿಸಲಾಗಿದೆ, ವಿವರಗಳು ಇಲ್ಲಿವೆ. ನಾವು ವಿವರಗಳನ್ನು ನೋಡುವ ಮೊದಲು, ಈ EV ಗಳ ಬೆಲೆಗಳನ್ನು ನೋಡೋಣ.

ಬೆಲೆಗಳು

ಟಾಟಾ ಪಂಚ್ EV ಸ್ಮಾರ್ಟ್ ಪ್ಲಸ್ (ಮೀಡಿಯಂ-ರೇಂಜ್)

ಟಾಟಾ ಟಿಯಾಗೋ EV XZ ಪ್ಲಸ್ ಲಕ್ಸ್ (ಲಾಂಗ್-ರೇಂಜ್)

ರೂ. 11.49 ಲಕ್ಷ

ರೂ. 11.39 ಲಕ್ಷ

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ

15,000 ರೂಪಾಯಿಗಳ ಇತ್ತೀಚಿನ ಬೆಲೆ ಕಡಿತದ ನಂತರ, ಟಾಟಾ ಟಿಯಾಗೋ EV XZ ಪ್ಲಸ್ ಲಕ್ಸ್ ಲಾಂಗ್-ರೇಂಜ್ ವೇರಿಯಂಟ್ ಈಗ ಪಂಚ್ EV ಯ ಬೇಸ್ ಗಿಂತ ಒಂದು ಹಂತ ಮೇಲಿರುವ ಸ್ಮಾರ್ಟ್ ಪ್ಲಸ್ ವೇರಿಯಂಟ್ ಗಿಂತ 10,000 ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಡೈಮೆನ್ಷನ್ ಗಳು

ಟಾಟಾ ಪಂಚ್ EV

ಟಾಟಾ ಟಿಯಾಗೋ EV

ಉದ್ದ

3857 ಮಿ.ಮೀ

3769 ಮಿ.ಮೀ

ಅಗಲ

1742 ಮಿ.ಮೀ

1677 ಮಿ.ಮೀ

ಎತ್ತರ

1633 ಮಿ.ಮೀ

1536 ಮಿ.ಮೀ

ವೀಲ್ ಬೇಸ್

2445 ಮಿ.ಮೀ

2400 ಮಿ.ಮೀ

ಗ್ರೌಂಡ್ ಕ್ಲಿಯರೆನ್ಸ್

190 ಮಿ.ಮೀ

165 ಮಿ.ಮೀ

ಬೂಟ್ ಸ್ಪೇಸ್

366 ಲೀಟರ್

240 ಲೀಟರ್

  • ಮೈಕ್ರೋ SUVಯಾಗಿರುವ ಟಾಟಾ ಪಂಚ್, ಟಾಟಾ ಟಿಯಾಗೊ EVಗಿಂತ ಉದ್ದ, ಅಗಲ ಮತ್ತು ಎತ್ತರವಾಗಿದೆ.

  • ಪಂಚ್ EVಯು ಟಿಯಾಗೋ EV ಗಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒದಗಿಸುವುದರ ಜೊತೆಗೆ ನಿಮ್ಮ ಕೆಲವು ಸಾಫ್ಟ್ ಬ್ಯಾಗ್‌ಗಳನ್ನು ಇಡಲು ದೊಡ್ಡದಾದ ಬೂಟ್ (+126 ಲೀಟರ್) ಅನ್ನು ಕೂಡ ಹೊಂದಿದೆ.

ಇದನ್ನು ಕೂಡ ಓದಿ: Tata Nexon EV ಕ್ರಿಯೇಟಿವ್ ಪ್ಲಸ್ Vs Tata Punch EV ಎಂಪವರ್ಡ್ ಪ್ಲಸ್: ನೀವು ಯಾವ EV ಖರೀದಿಸಬೇಕು?

ಪವರ್‌ಟ್ರೈನ್ ಗಳು

ಸ್ಪೆಸಿಫಿಕೇಷನ್ ಗಳು

ಟಾಟಾ ಪಂಚ್ EV ಸ್ಮಾರ್ಟ್ ಪ್ಲಸ್ (ಮೀಡಿಯಂ-ರೇಂಜ್)

ಟಾಟಾ ಟಿಯಾಗೋ EV XZ ಪ್ಲಸ್ ಲಕ್ಸ್ (ಲಾಂಗ್-ರೇಂಜ್)

ಬ್ಯಾಟರಿ ಪ್ಯಾಕ್

25 kWh

24 kWh

ಪವರ್

82 PS

75 PS

ಟಾರ್ಕ್

114 Nm

114 Nm

ಕ್ಲೇಮ್ ಮಾಡಲಾಗಿರುವ ರೇಂಜ್ (MIDC)

315 ಕಿ.ಮೀ

315 ಕಿ.ಮೀ

  • ಇಲ್ಲಿ ನೀಡಿರುವ ಎರಡೂ EVಗಳು ಬಹುತೇಕ ಒಂದೇ ಗಾತ್ರದ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು, 315 ಕಿಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತವೆ.

  • ಟಿಯಾಗೋ LR ಗಿಂತ ಪಂಚ್ EV MR ಹೆಚ್ಚು ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. EVಗಳ ಈ ಎರಡೂ ವೇರಿಯಂಟ್ ಗಳ ಟಾರ್ಕ್ ಔಟ್‌ಪುಟ್ ಒಂದೇ ಆಗಿದೆ.

ಚಾರ್ಜಿಂಗ್

ಚಾರ್ಜರ್

ಚಾರ್ಜಿಂಗ್ ಸಮಯ

ಟಾಟಾ ಪಂಚ್ EV ಸ್ಮಾರ್ಟ್ ಪ್ಲಸ್ (ಮೀಡಿಯಂ-ರೇಂಜ್)

ಟಾಟಾ ಟಿಯಾಗೋ EV XZ ಪ್ಲಸ್ ಲಕ್ಸ್ (ಲಾಂಗ್-ರೇಂಜ್)

3.3 kW AC ಚಾರ್ಜರ್ (10-100 ಶೇಕಡಾ)

9.4 ಗಂಟೆಗಳು

8.7 ಗಂಟೆಗಳು

50 kW DC ಫಾಸ್ಟ್ ಚಾರ್ಜರ್ (10-80 ಶೇಕಡಾ)

56 ನಿಮಿಷಗಳು

58 ನಿಮಿಷಗಳು

  • ಇಲ್ಲಿರುವ ಎರಡೂ EVಗಳು ತಮ್ಮ ಕ್ಯಾಪಾಸಿಟಿಗಳಲ್ಲಿ ಕೇವಲ 1 kWh ವ್ಯತ್ಯಾಸದೊಂದಿಗೆ ಒಂದೇ ರೀತಿಯ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದರೂ ಕೂಡ, ಎರಡು EVಗಳ ಚಾರ್ಜಿಂಗ್ ಸಮಯದ ಮೂಲಕ ಇದು ಹೆಚ್ಚು ಸ್ಪಷ್ಟವಾಗುತ್ತದೆ.

  • ಎರಡೂ EVಗಳು 50 kW DC ಸ್ಪೀಡ್ ಚಾರ್ಜಿಂಗ್ ಅನ್ನು ಕೂಡ ಸಪೋರ್ಟ್ ಮಾಡುತ್ತದೆ ಮತ್ತು ಒಂದು ಗಂಟೆಯೊಳಗೆ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

  • ಟಾಟಾ ತನ್ನ ಪಂಚ್ EV ಯ ಮೀಡಿಯಂ ರೇಂಜ್ ವೇರಿಯಂಟ್ ಗಳೊಂದಿಗೆ 7.2 KW AC ಚಾರ್ಜರ್‌ನ ಆಯ್ಕೆಯನ್ನು ಒದಗಿಸುವುದಿಲ್ಲ. ಆದರೆ, ಟಿಯಾಗೋ EV ಲಾಂಗ್ ರೇಂಜ್ ವೇರಿಯಂಟ್ ನಲ್ಲಿ ಹೆಚ್ಚುವರಿ ರೂ 50,000 ಪಾವತಿ ಮಾಡುವ ಮೂಲಕ ಈ ಚಾರ್ಜರ್‌ ಅನ್ನು ಪಡೆಯಬಹುದು.

ಫೀಚರ್ ಗಳು

ಫೀಚರ್ ಗಳು

ಟಾಟಾ ಪಂಚ್ EV ಸ್ಮಾರ್ಟ್ ಪ್ಲಸ್ (ಮೀಡಿಯಂ-ರೇಂಜ್)

ಟಾಟಾ ಟಿಯಾಗೋ EV XZ ಪ್ಲಸ್ ಲಕ್ಸ್ (ಲಾಂಗ್-ರೇಂಜ್)

ಹೊರಭಾಗ

  • LED DRL ಗಳೊಂದಿಗೆ LED ಹೆಡ್‌ಲೈಟ್‌ಗಳು

  • ಸ್ಟೈಲಿಶ್ ಆಗಿ ಕವರ್ ಮಾಡಿರುವ 15-ಇಂಚಿನ ಅಲೊಯ್ ವೀಲ್ಸ್

  • LED DRL ಗಳೊಂದಿಗೆ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಫಾಗ್ ಲ್ಯಾಂಪ್ ಗಳು

  • ಸ್ಟೈಲಿಶ್ ಆಗಿ ಕವರ್ ಮಾಡಿರುವ 14-ಇಂಚಿನ ಸ್ಟೀಲ್ ವೀಲ್ಸ್

ಒಳಭಾಗ

  • ಡ್ಯುಯಲ್-ಟೋನ್ ಬ್ಲಾಕ್ ಮತ್ತು ಗ್ರೇ ಡ್ಯಾಶ್‌ಬೋರ್ಡ್

  • ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟು

  • ಅಡ್ಜಸ್ಟ್ ಮಾಡಬಹುದಾದ ಮುಂಭಾಗ ಮತ್ತು ಹಿಂಭಾಗದ ಹೆಡ್‌ರೆಸ್ಟ್‌ಗಳು

  • ಡ್ಯುಯಲ್-ಟೋನ್ ಬ್ಲಾಕ್ ಮತ್ತು ಗ್ರೇ ಡ್ಯಾಶ್‌ಬೋರ್ಡ್

  • ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ

  • ಲೆಥೆರೆಟ್ ಸುತ್ತಿದ ಸ್ಟೀರಿಂಗ್ ವೀಲ್

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಹೆಡ್‌ರೆಸ್ಟ್‌ಗಳು

ಸೌಕರ್ಯ ಮತ್ತು ಅನುಕೂಲತೆ

  • ಟಚ್ ಕಂಟ್ರೋಲ್ ಗಳೊಂದಿಗೆ ಆಟೋಮ್ಯಾಟಿಕ್ AC

  • ಏರ್ ಪ್ಯೂರಿಫೈಯರ್

  • ರೀಜನರೇಟಿವ್ ಬ್ರೇಕಿಂಗ್ ಮೋಡ್‌ಗಳಿಗಾಗಿ ಪ್ಯಾಡಲ್ ಶಿಫ್ಟರ್

  • ಎಲ್ಲಾ ನಾಲ್ಕು ಪವರ್ ವಿಂಡೋಗಳು

  • ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ ಗಳು

  • ಡ್ರೈವ್ ಮೋಡ್‌ಗಳು (ಸಿಟಿ ಮತ್ತು ಸ್ಪೋರ್ಟ್)

  • ಡೇ/ನೈಟ್ IRVM

  • ಕೂಲ್ಡ್ ಗ್ಲೋವ್‌ಬಾಕ್ಸ್

  • ಆಟೋಮ್ಯಾಟಿಕ್ AC

  • ಎಲ್ಲಾ ನಾಲ್ಕು ಪವರ್ ವಿಂಡೋಗಳು

  • ಮಲ್ಟಿಮೋಡ್ ರೀಜನರೇಟಿವ್ ಬ್ರೇಕಿಂಗ್

  • ಡ್ರೈವ್ ಮೋಡ್‌ಗಳು (ಸಿಟಿ ಮತ್ತು ಸ್ಪೋರ್ಟ್)

  • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಗಳು

  • ಕ್ರೂಸ್ ಕಂಟ್ರೋಲ್

  • ಆಟೋ ಹೆಡ್‌ಲೈಟ್‌ಗಳು

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ರೈನ್ ಸೆನ್ಸಾರ್ ವೈಪರ್‌ಗಳು

  • ಹಿಂಭಾಗದ ವೈಪರ್ ಮತ್ತು ಡಿಫಾಗರ್

  • ಆಟೋ ಡಿಮ್ಮಿಂಗ್ IRVM

  • ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾದ ಆಟೋ-ಫೋಲ್ಡ್ ORVMS

  • ಕೂಲ್ಡ್ ಗ್ಲೋವ್‌ಬಾಕ್ಸ್

ಇನ್ಫೋಟೈನ್ಮೆಂಟ್

  • 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

  • ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ

  • ಸೆಮಿ-ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ

  • 6-ಸ್ಪೀಕರ್ ಸೌಂಡ್ ಸಿಸ್ಟಮ್

  • 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

  • ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ

  • ಸೆಮಿ-ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ

  • 8-ಸ್ಪೀಕರ್ ಸೌಂಡ್ ಸಿಸ್ಟಮ್

ಸುರಕ್ಷತೆ

  • 6 ಏರ್‌ಬ್ಯಾಗ್‌ಗಳು

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • ಹಿಲ್ ಹೋಲ್ಡ್ ಅಸಿಸ್ಟ್

  • EBD ಜೊತೆಗೆ ABS

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ISOFIX ಚೈಲ್ಡ್ ಸೀಟ್ ಆಂಕರೇಜ್ ಗಳು

  • ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ

  • ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

  • EBD ಜೊತೆಗೆ ABS

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ

  • ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ISOFIX ಚೈಲ್ಡ್ ಸೀಟ್ ಆಂಕರೇಜ್ ಗಳು

  • ಪಂಚ್ EV ಸ್ಮಾರ್ಟ್ ಪ್ಲಸ್ ಬೇಸ್ ಗಿಂತ ಒಂದು ಹಂತ ಮೇಲಿರುವ ವೇರಿಯಂಟ್ ಆಗಿದ್ದರೂ ಕೂಡ, LED DRL ಗಳೊಂದಿಗೆ LED ಹೆಡ್‌ಲೈಟ್‌ಗಳು, ಆಟೋ AC ಮತ್ತು ಆರು ಏರ್‌ಬ್ಯಾಗ್‌ಗಳಂತಹ ಫೀಚರ್ ಗಳನ್ನು ಇದು ಪಡೆಯುತ್ತದೆ.

  • ಪಂಚ್ EV ಸ್ಮಾರ್ಟ್ ಪ್ಲಸ್ ವೇರಿಯಂಟ್ ಗೆ ಹೋಲಿಸಿದರೆ ಟಾಟಾ ಟಿಯಾಗೊ EV XZ ಪ್ಲಸ್ ಲಕ್ಸ್ ವರ್ಷನ್ ಮುಂಭಾಗದ ಫಾಗ್ ಲೈಟ್ ಗಳು, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು, 8-ಸ್ಪೀಕರ್ ಸೌಂಡ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ರಿಯರ್ ವೈಪರ್ ಮತ್ತು ವಾಷರ್, ಮತ್ತು ರಿಯರ್ ಡಿಫಾಗರ್ ನಂತಹ ಹೆಚ್ಚುವರಿ ಫೀಚರ್ ಗಳೊಂದಿಗೆ ಬರುತ್ತದೆ.

  • ಪಂಚ್ EV ಮತ್ತು ಟಿಯಾಗೋ EV ಎರಡೂ ಕಾರುಗಳು ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ನೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋಮ್ಯಾಟಿಕ್ AC, ಕೂಲ್ಡ್ ಗ್ಲೋವ್‌ಬಾಕ್ಸ್, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಮಲ್ಟಿಮೋಡ್ ರೀಜನರೇಟಿವ್ ಬ್ರೇಕಿಂಗ್ ಅನ್ನು ಪಡೆಯುತ್ತದೆ.

  • ಕೆಳಮಟ್ಟದ ಮಾಡೆಲ್ ಆಗಿದ್ದರೂ ಕೂಡ, ಪಂಚ್ EV ಟಿಯಾಗೋ EV ಗಿಂತ ಕೆಲವು ಹೆಚ್ಚಿನ ಸುರಕ್ಷತಾ ಫೀಚರ್ ಗಳನ್ನು ಪಡೆಯುತ್ತದೆ, ಉದಾಹರಣೆಗೆ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್. ಆದರೆ ಟಿಯಾಗೋ EV ಕೇವಲ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಪಡೆಯುತ್ತದೆ.

ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಡಾರ್ಕ್ ವರ್ಷನ್ ಶೀಘ್ರದಲ್ಲೇ ಹಿಂತಿರುಗಲಿದೆ, ವೇರಿಯಂಟ್ ಗಳು ಲೀಕ್ ಆಗಿವೆ

ನೀವು ಅನುಕೂಲ ನೀಡುವ ಫೀಚರ್ ಗಳನ್ನು ನೋಡುತ್ತಿದ್ದರೆ, ಟಿಯಾಗೋ EV ಸೂಕ್ತವಾದ ಆಯ್ಕೆಯಾಗಿದೆ ಮತ್ತು ನೀಡುವ ಬೆಲೆಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಆದರೆ, ನೀವು ಹೆಚ್ಚಿನ ಜಾಗ, ಸುರಕ್ಷತಾ ಫೀಚರ್ ಗಳು ಮತ್ತು ಹೆಚ್ಚುವರಿ ಗ್ರೌಂಡ್ ಕ್ಲಿಯರೆನ್ಸ್‌ಗೆ ಆದ್ಯತೆ ನೀಡುವುದಾದರೆ, ಪಂಚ್ EV ನಿಮಗೆ ಉತ್ತಮ ಆಯ್ಕೆಯಾಗಿದೆ.

ಹಾಗಾದರೆ, ಈ ಎರಡು ಎಲೆಕ್ಟ್ರಿಕ್ ಕಾರುಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ ಮತ್ತು ಏಕೆ? ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ನಲ್ಲಿ ತಿಳಿಸಿ.

ಇನ್ನಷ್ಟು ಓದಿ: ಪಂಚ್ EV ಆಟೋಮ್ಯಾಟಿಕ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 24 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಪಂಚ್‌ EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ