Tata Nexon Facelift Dark Edition ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆ, ಅವೃತ್ತಿಗಳ ಮಾಹಿತಿ ಸೋರಿಕೆ
ಟಾಟಾ ನೆಕ್ಸಾನ್ ಗಾಗಿ shreyash ಮೂಲಕ ಫೆಬ್ರವಾರಿ 23, 2024 09:27 pm ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಸೋರಿಕೆಯಾದ ವರದಿಗಳ ಪ್ರಕಾರ, ಟಾಟಾ ನೆಕ್ಸಾನ್ ಡಾರ್ಕ್ ಆವೃತ್ತಿಯು ಹೈ-ಸ್ಪೆಕ್ ಕ್ರಿಯೇಟಿವ್ ಮತ್ತು ಫಿಯರ್‌ಲೆಸ್ ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತದೆ
ಮಾಹಿತಿಗಾಗಿ Nexon EV ಡಾರ್ಕ್ ಆವೃತ್ತಿಯ ಚಿತ್ರವನ್ನು ಬಳಸಲಾಗಿದೆ
-
ಟಾಟಾವು ನೆಕ್ಸಾನ್‌ನ ಡಾರ್ಕ್ ಆವೃತ್ತಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳೊಂದಿಗೆ ನೀಡುತ್ತದೆ.
-
ಇದು ಟಾಟಾ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಕಂಡುಬರುವ ಅದೇ ಒಬೆರಾನ್ ಕಪ್ಪು ಬಾಡಿ ಕಲರ್ ಅನ್ನು ಹೊಂದಿರುತ್ತದೆ.
-
ಇದು ಅಲಾಯ್ ವೀಲ್‌ಗಳು ಮತ್ತು ಸಂಪೂರ್ಣ ಕಪ್ಪು ಇಂಟಿರೀಯರ್ ಅನ್ನು ಸಹ ಪಡೆಯುತ್ತದೆ.
-
ಇದು ಅದರ ಅನುಗುಣವಾದ ಆವೃತ್ತಿಗಳಿಗಿಂತ ಸುಮಾರು 30,000 ರೂ.ವರೆಗೆ ದುಬಾರಿಯಾಗುವ ನಿರೀಕ್ಷೆಯಿದೆ.
-
ನೆಕ್ಸಾನ್ ಇವಿ ಸಹ ಡಾರ್ಕ್ ಆವೃತ್ತಿಯನ್ನು ಪಡೆಯಲಿದೆ.
ಟಾಟಾ ನೆಕ್ಸಾನ್ 2023ರ ಸೆಪ್ಟೆಂಬರ್ ನಲ್ಲಿ ಹೊಸ ವಿನ್ಯಾಸ, ಹಲವಾರು ಹೊಸ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಒಳಗೊಂಡ ಪ್ರಮುಖ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿತ್ತು. ಆದಾಗಿಯೂ ಫೇಸ್‌ಲಿಫ್ಟ್‌ನ ಬಿಡುಗಡೆಯ ಸಮಯದಲ್ಲಿ, ಟಾಟಾವು ಅದರ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಲಭ್ಯವಿದ್ದ ಹೊಸ ನೆಕ್ಸಾನ್‌ನ ಡಾರ್ಕ್ ಆವೃತ್ತಿಯನ್ನು ಪರಿಚಯಿಸಿರಲಿಲ್ಲ. ಆದರೆ, ನವೀಕರಿಸಿದ ಟಾಟಾ ನೆಕ್ಸಾನ್ ಶೀಘ್ರದಲ್ಲೇ ಡಾರ್ಕ್ ಆವೃತ್ತಿಯನ್ನು ಪಡೆಯುತ್ತದೆ ಮತ್ತು ಆನ್‌ಲೈನ್ ವರದಿಗಳು ಅದರ ಆವೃತ್ತಿಗಳ ಪಟ್ಟಿಯನ್ನು ಸೋರಿಕೆ ಮಾಡಿವೆ.
ಸಂಪೂರ್ಣ ವೇರಿಯೆಂಟ್‌ಗಳ ವಿವರಗಳು ಸೋರಿಕೆ
ಸೋರಿಕೆಯಾದ ವಿವರಗಳ ಪ್ರಕಾರ, ಟಾಟಾ ನೆಕ್ಸಾನ್‌ನ ಡಾರ್ಕ್ ಆವೃತ್ತಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ನೀಡುತ್ತದೆ. ಶೀಘ್ರದಲ್ಲೇ ಡಾರ್ಕ್ ಆವೃತ್ತಿಯನ್ನು ಪಡೆಯಲಿರುವ ಆವೃತ್ತಿಗಳ ವಿವರ ಇಲ್ಲಿದೆ.
ಪೆಟ್ರೋಲ್
ಮಾನ್ಯುಯಲ್ |
ಆಟೋಮ್ಯಾಟಿಕ್ |
ಕ್ರಿಯೇಟಿವ್ ಡಾರ್ಕ್ |
ಕ್ರಿಯೇಟಿವ್ ಡಾರ್ಕ್ ಎಎಮ್‌ಟಿ |
ಕ್ರಿಯೇಟಿವ್ ಪ್ಲಸ್ ಡಾರ್ಕ್ |
|
ಕ್ರಿಯೇಟಿವ್ ಪ್ಲಸ್ ಎಸ್ ಡಾರ್ಕ್ |
ಕ್ರಿಯೇಟಿವ್ ಪ್ಲಸ್ ಎಸ್ ಡಾರ್ಕ್ ಡಿಸಿಟಿ |
ಫಿಯರ್‌ಲೆಸ್ ಡಾರ್ಕ್ |
|
ಫಿಯರ್‌ಲೆಸ್ ಪ್ಲಸ್ ಎಸ್ ಡಾರ್ಕ್ |
ಫಿಯರ್‌ಲೆಸ್ ಪ್ಲಸ್ ಎಸ್ ಡಾರ್ಕ್ ಡಿಸಿಟಿ |
ಡೀಸೆಲ್
ಮಾನ್ಯುಯಲ್ |
ಆಟೋಮ್ಯಾಟಿಕ್ |
|
ಕ್ರಿಯೇಟಿವ್ ಡಾರ್ಕ್ ಎಎಮ್‌ಟಿ |
ಕ್ರಿಯೇಟಿವ್ ಪ್ಲಸ್ ಡಾರ್ಕ್ |
|
ಕ್ರಿಯೇಟಿವ್ ಪ್ಲಸ್ ಎಸ್ ಡಾರ್ಕ್ |
ಕ್ರಿಯೇಟಿವ್ ಪ್ಲಸ್ ಎಸ್ ಡಾರ್ಕ್ ಎಎಮ್‌ಟಿ |
ಫಿಯರ್‌ಲೆಸ್ ಪ್ಲಸ್ ಎಸ್ ಡಾರ್ಕ್ |
ಫಿಯರ್‌ಲೆಸ್ ಪ್ಲಸ್ ಎಸ್ ಡಾರ್ಕ್ ಎಎಮ್‌ಟಿ |
ಮೇಲಿನ ಕೋಷ್ಟಕಗಳಲ್ಲಿ ನೋಡಿದಂತೆ, ಡಾರ್ಕ್ ಆವೃತ್ತಿಯು ಕ್ರಿಯೇಟಿವ್ ಮತ್ತು ಫಿಯರ್‌ಲೆಸ್ ಎಂಬ ಎರಡು ಟಾಪ್ ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ.
ಫೇಸ್‌ಲಿಫ್ಟೆಡ್ ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಡಾರ್ಕ್ ಆವೃತ್ತಿಯೊಂದಿಗೆ ನೀಡಲಾದ ಅದೇ ಒಬೆರಾನ್ ಬ್ಲ್ಯಾಕ್ ಬಾಡಿ ಕಲರ್ ಅನ್ನು ನೆಕ್ಸಾನ್ ಡಾರ್ಕ್ ಎಡಿಷನ್ ಒಳಗೊಂಡಿರುತ್ತದೆ. ಇದು ಹೊರಭಾಗದಲ್ಲಿ ಆಲಾಯ್ ವೀಲ್‌ಗಳನ್ನು ಕಪ್ಪಾಗಿಸುತ್ತದೆ, ಆದರೆ ಒಳಗೆ, ನೆಕ್ಸಾನ್ ಡಾರ್ಕ್ ಕಪ್ಪು ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಸಂಪೂರ್ಣ ಕಪ್ಪು ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ.
ಇದನ್ನು ಸಹ ಓದಿ: Tata Curvv ಮತ್ತು ಹೊಸ Nexonನಲ್ಲಿ ಹೋಲಿಕೆಯಾಗುವ 3 ಅಂಶಗಳು
ಯಾವುದೇ ವೈಶಿಷ್ಟ್ಯ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ
ಡಾರ್ಕ್ ಎಡಿಷನ್‌ನ ಪರಿಚಯದೊಂದಿಗೆ ನೆಕ್ಸಾನ್‌ನ ವೈಶಿಷ್ಟ್ಯಗಳ ಪಟ್ಟಿಗೆ ಯಾವುದೇ ಬದಲಾವಣೆಗಳನ್ನು ನಾವು ನಿರೀಕ್ಷಿಸುತ್ತಿಲ್ಲ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಟಾಟಾ ನೆಕ್ಸಾನ್‌ನ ರೆಗುಲರ್ ಆವೃತ್ತಿಯನ್ನು ಸಜ್ಜುಗೊಳಿಸಿದೆ.
ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಸೇರಿವೆ. ನೆಕ್ಸಾನ್ ಫೇಸ್‌ಲಿಫ್ಟ್ ಇತ್ತೀಚೆಗೆ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಸಂಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.
ಇದನ್ನು ಸಹ ಓದಿ: Tata Nexon ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮುಂಚೆ ಮತ್ತು ಈಗ
ಪವರ್‌ಟ್ರೇನ್ ಆಯ್ಕೆಗಳು
ಟಾಟಾ ನೆಕ್ಸಾನ್ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ, ಇದರಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (120 PS / 170 Nm) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (115 PS / 260 Nm) ಸೇರಿವೆ. ಡಾರ್ಕ್ ಎಡಿಷನ್‌ನ ಹೊಂದುವ ವೇರಿಯೆಂಟ್‌ಗಳ ಆಧಾರದ ಮೇಲೆ, ಪೆಟ್ರೋಲ್ ಎಂಜಿನ್ ಮೂರು ಗೇರ್‌ಬಾಕ್ಸ್ ಆಯ್ಕೆಗಳನ್ನು ಪಡೆಯುತ್ತದೆ - 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ AMT, ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT). ಆದರೆ ಡೀಸೆಲ್ ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಎಎಮ್‌ಟಿ.ಗೆ ಜೋಡಿಯಾಗಿ ಬರುತ್ತದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸಾನ್‌ನ ಡಾರ್ಕ್ ಆವೃತ್ತಿಯು ಅನುಗುಣವಾದ ರೆಗುಲರ್ ಆವೃತ್ತಿಗಳಿಗಿಂತ ಸುಮಾರು 30,000 ರೂ.ವರೆಗೆ ದುಬಾರಿಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಸಾಮಾನ್ಯ ನೆಕ್ಸಾನ್‌ನ ಎಕ್ಸ್ ಶೋರೂಂ ಬೆಲೆ 8.15 ಲಕ್ಷ ರೂ.ನಿಂದ ಪ್ರಾರಂಭವಾಗಿ 15.60 ಲಕ್ಷ ರೂ.ವರೆಗೆ ಇರಲಿದೆ. ಇದು ಮಾರುತಿ ಬ್ರೆಝಾ, ಹುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ300, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
Nexon EV ಫೇಸ್‌ಲಿಫ್ಟ್ ಕೂಡ ಭಾರತ್ ಮೊಬಿಲಿಟಿ ಶೋ 2024 ರಲ್ಲಿ ಪ್ರದರ್ಶಿಸಿದಂತೆ ಡಾರ್ಕ್ ಆವೃತ್ತಿಯನ್ನು ಮತ್ತೆ ಪಡೆಯುವ ಸಾಧ್ಯತೆ ಇದೆ.
ಇನ್ನಷ್ಟು ಓದಿ : ಟಾಟಾ ನೆಕ್ಸಾನ್ ಆನ್ ರೋಡ್ ಬೆಲೆ
0 out of 0 found this helpful