Tata Punch EV ಮತ್ತೊಮ್ಮೆ ಪತ್ತೆ, ಸರಣಿ ಉತ್ಪಾದನೆ ಪ್ರಾರಂಭಗೊಳ್ಳುವ ನಿರೀಕ್ಷೆ
ಟಾಟಾ ಪಂಚ್ ಇವಿ ಗಾಗಿ rohit ಮೂಲಕ ಜನವರಿ 03, 2024 12:46 pm ರಂದು ಪ್ರಕಟಿಸಲಾಗಿದೆ
- 77 Views
- ಕಾಮೆಂಟ್ ಅನ್ನು ಬರೆಯಿರಿ
ಪರೀಕ್ಷಾರ್ಥ ಕಾರು LED ಲೈಟಿಂಗ್ ಮತ್ತು ಅಲಾಯ್ ವ್ಹೀಲ್‌ಗಳಿಂದ ಸುಸಜ್ಜಿತವಾಗಿದ್ದು, ಇದರ ಸರಣಿ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆ ಮೂಡಿಸುತ್ತದೆ
- ಸಂಪೂರ್ಣ-ಇಲೆಕ್ಟ್ರಿಕ್ ಪಂಚ್ ಟಾಟಾದ ಮುಂದಿನ ದೊಡ್ಡ ಇವಿ ಬಿಡುಗಡೆಯಾಗಲಿದೆ.
- ಹೊಸ ನೆಕ್ಸಾನ್‌ನಂತಹ LED DRLಗಳು ಟರ್ನ್ ಇಂಡಿಕೇಟರ್‌ಗಳಾಗಿ ಮತ್ತು ಮರುವಿನ್ಯಾಸಗೊಂಡ ಗ್ರಿಲ್ ಅನ್ನು ಪಡೆಯಲಿದೆ.
- ಕ್ಯಾಬಿನ್ ದೊಡ್ಡದಾದ ಟಚ್‌ಸ್ಕ್ರೀನ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿರುತ್ತದೆ.
- ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ ಮತ್ತು ಆರರ ತನಕ ಏರ್‌ಬ್ಯಾಗ್ ಹೊಂದಿರುವ ನಿರೀಕ್ಷೆ.
- ಟಾಟಾ ಇದಕ್ಕೆ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ನೀಡಲಿದೆ; 500 km ತನಕ ಕ್ಲೈಮ್ ಮಾಡಲಾದ ರೇಂಜ್ ಹೊಂದಿರುವ ನಿರೀಕ್ಷೆ ಇದೆ.
- ರೂ 12 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ 2024ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಟಾಟಾ ಪಂಚ್ ಇವಿಯ ಸ್ಪೈ ಶಾಟ್‌ಗಳು ಇಂಟರ್‌ನೆಟ್‌ನಲ್ಲಿ ಹರಿದಾಡಲು ಪ್ರಾರಂಭವಾಗಿ ತಿಂಗಳುಗಳೇ ಕಳೆದವು. ನಾವೀಗ ಮತ್ತೊಮ್ಮೆ ಪಂಚ್ ಇವಿಯ ಸಂಪೂರ್ಣ ಮರೆಮಾಚಿದ ಪರೀಕ್ಷಾರ್ಥ ಕಾರಿನ ಕೆಲವು ಚಿತ್ರಗಳನ್ನು ಸೆರೆಹಿಡಿದಿದ್ದೇವೆ, ಇದು ಸುಸಜ್ಜಿತ ವೇರಿಯೆಂಟ್‌ನಂತೆ ಕಂಡುಬಂದಿದೆ ಹಾಗೂ ಶೀಘ್ರದಲ್ಲೇ ಇದರ ಸರಣಿ ಉತ್ಪಾದನೆಯನ್ನು ಸೂಚಿಸುತ್ತದೆ
ಗಮನಿಸಲಾದ ವಿವರಗಳು
ಇತ್ತೀಚಿನ ಪರೀಕ್ಷಾರ್ಥ ಕಾರು ಅತ್ಯಂತ ಸುಸಜ್ಜಿತವಾಗಿದ್ದು, ಸಂಪೂರ್ಣ ಇಲೆಕ್ಟ್ರಿಕ್ ಟಾಟಾ ಪಂಚ್‌ನ ಉತ್ಪಾದನೆಗೆ ಹತ್ತಿರದ ಮಾಡೆಲ್‌ನಂತೆ ಕಾಣುತ್ತದೆ. ಇದು ಹೊಸ ಅಲಾಯ್ ವ್ಹೀಲ್‌ಗಳು, ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ನವೀಕೃತ ಸ್ಪ್ಲಿಟ್ LED ಹೆಡ್‌ಲೈಟ್‌ಗಳೊಂದಿಗೆ ಸುಸಜ್ಜಿತವಾಗಿರುವ ಈ ಕಾರು ನೆಕ್ಸಾನ್‌ನಲ್ಲಿರುವಂತೆಯೇ ಟರ್ನ್ ಇಂಡಿಕೇಟರ್ ಆಗಿ ಡಬಲ್ ಅಪ್ ಆಗುತ್ತದೆ. ಈ ಎಲ್ಲಾ ಅಪ್‌ಡೇಟ್‌ಗಳು ಸ್ಟಾಂಡರ್ಡ್ ICE-ಪವರ್ ಚಾಲಿತ ಪಂಚ್‌ನಲ್ಲೂ ಇರಲಿವೆ.
ಈ ಸ್ಪೈ ಶಾಟ್‌ಗಳ ಇನ್ನೊಂದು ಪ್ರಮುಖ ಅಂಶವೆಂದರೆ, ದೊಡ್ಡದಾದ ಟಚ್‌ಸ್ಕ್ರೀನ್ ಯೂನಿಟ್ (ಪ್ರಾಯಶಃ ಹೊಸ ನೆಕ್ಸಾನ್‌ನಲ್ಲಿರುವ 10.25-ಇಂಚು ಡಿಸ್‌ಪ್ಲೇ) ಮತ್ತು ಟಾಟಾ ಲೋಗೋ ಅನ್ನು ಬೆಳಗುವ ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಒದಗಿಸಿರುವುದು.
ಆಫರ್‌ನಲ್ಲಿ ಬೇರೆ ಏನನ್ನು ನಿರೀಕ್ಷಿಸಬಹುದು?
ಅಲ್ಲದೇ ಟಾಟಾ ಇದಕ್ಕೆ ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಪ್ಯಾಡಲ್ ಶಿಫ್ಟರ್‌ಗಳು (ಬ್ಯಾಟರಿ ಪುನರುತ್ಪಾದನೆಗಾಗಿ), 360-ಡಿಗ್ರಿ ಕ್ಯಾಮರಾ, ಆಟೋ ಕ್ಲೈಮೇಟ್ ಕಂಟ್ರೋಲ್, 6ರ ತನಕ ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ರಿಯರ್ ವ್ಯೂ ಕ್ಯಾಮರಾ ಅನ್ನೂ ನೀಡಿದೆ.
ಇದನ್ನೂ ಪರಿಶೀಲಿಸಿ: ಸ್ಮಾರ್ಟ್‌ಫೋನ್ ಜೈಂಟ್ ಶಿಯೋಮಿ ಬಹಿರಂಗಪಡಿಸಲಿದೆ ತನ್ನ ಮೊದಲ ಇವಿ! ಭೇಟಿ ನೀಡಿ ಶಿಯೋಮಿ SU7
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
ಪಂಚ್ ಇವಿ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿರಲಿದ್ದು, ಇದರ ಕ್ಲೈಮ್ ಮಾಡಲಾದ ರೇಂಜ್ 500 km ಇರಬಹುದು ಎಂದು ಹೇಳಲಾಗಿದೆ. ಇದರ ಇಲೆಕ್ಟ್ರಿಕ್ ಮೋಟರ್ ಬಗ್ಗೆ ಎರಡು ಮಾತಿಲ್ಲವಾದರೂ, ತನ್ನ ಸುಧಾರಿತ ರೇಂಜ್‌ಗೆ ಪೂರಕವಾಗಿ ಇದು ಹೆಚ್ಚು ಪರಿಣಾಕಾರಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬಿಡುಗಡೆ ಯಾವಾಗ?
ಈ ಟಾಟಾ ಪಂಚ್ ಇವಿ 2024ರ ಮೊದಲಾರ್ಧದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ. ಟಾಟಾ ಇದಕ್ಕೆ ರೂ 12 ಲಕ್ಷದಿಂದ (ಎಕ್ಸ್-ಶೋರೂಂ) ಬೆಲೆ ನಿಗದಿಪಡಿಸಲಿದೆ. ಸಿಟ್ರಾನ್ eC3 ಇದಕ್ಕೆ ನೇರ ಪ್ರತಿಸ್ಪರ್ಧಿಯಾದರೆ, MG ಕಾಮೆಟ್ EV ಮತ್ತು ಟಾಟಾ ಟಿಯಾಗೋ ಇವಿ ಗೆ ಇದು ಪರ್ಯಾಯವಾಗಲಿದೆ.
ಇನ್ನಷ್ಟು ಓದಿ : ಪಂಚ್ AMT
0 out of 0 found this helpful