Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಪಂಚ್ ಇವಿ Vs ಟಾಟಾ ಟಿಯಾಗೊ ಇವಿ Vs ಟಾಟಾ ಟಿಗೊರ್ ಇವಿ Vs ಟಾಟಾ ನೆಕ್ಸಾನ್ ಇವಿ: ವಿಶೇಷತೆಗಳ ಹೋಲಿಕೆ

published on ಜನವರಿ 19, 2024 05:27 pm by rohit for ಟಾಟಾ ಪಂಚ್‌ ಇವಿ

ಟಾಟಾದ ಆಲ್-ಎಲೆಕ್ಟ್ರಿಕ್ ಲೈನ್‌ಅಪ್‌ನಲ್ಲಿ ಪಂಚ್ EV ಅನ್ನು ಟಿಯಾಗೊ EV ಮತ್ತು ನೆಕ್ಸಾನ್ EV ಗಳ ನಡುವೆ ಇರಿಸಲಾಗಿದೆ. ಇವೆರಡಕ್ಕೂ ಪರ್ಯಾಯ ಆಯ್ಕೆಯಾಗಿ ಹೊರಹೊಮ್ಮಲು ಬೇಕಾಗುವಷ್ಟು ಫೀಚರ್ ಗಳು ಮತ್ತು ಎಲೆಕ್ಟ್ರಿಕ್ ಪವರ್ ಇದರಲ್ಲಿ ಇದೆಯೇ? ಬನ್ನಿ ನೋಡೋಣ

ಟಾಟಾ ಪಂಚ್ EV ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ, ಇದರ ಬೆಲೆಗಳು ರೂ 10.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ). ಆಲ್-ಎಲೆಕ್ಟ್ರಿಕ್ ಪಂಚ್‌ನ ಸಂಪೂರ್ಣ ಸ್ಪೆಸಿಫಿಕೇಷನ್ ಗಳು ಮತ್ತು ಫೀಚರ್ ಗಳ ಪಟ್ಟಿಯನ್ನು ಈಗ ನಾವು ಪಡೆದಿದ್ದೇವೆ. ಈಗ ಇದರ ಬೆಲೆಗಳು ಸೇರಿದಂತೆ ಎಲ್ಲಾ ಅಗತ್ಯ ವಿವರಗಳು ಹೊರಬಂದಿರುವ ಕಾರಣ, ಅದು ಟಾಟಾದ ಇತರ ಎಲೆಟ್ರಿಕ್ ಕಾರುಗಳ ಹೋಲಿಕೆಯಲ್ಲಿ ಹೇಗಿದೆ ಎಂಬುದನ್ನು ನೋಡೋಣ:

ಡೈಮೆನ್ಶನ್ ಗಳು

ಟಾಟಾ ಪಂಚ್ EV

ಟಾಟಾ ಟಿಯಾಗೊ EV

ಟಾಟಾ ಟಿಗೋರ್ EV

ಟಾಟಾ ನೆಕ್ಸಾನ್ EV

ಉದ್ದ

3857 ಮಿ.ಮೀ

3769 ಮಿ.ಮೀ

3993 ಮಿ.ಮೀ

3994 ಮಿ.ಮೀ

ಅಗಲ

1742 ಮಿ.ಮೀ

1677 ಮಿ.ಮೀ

1677 ಮಿ.ಮೀ

1811 ಮಿ.ಮೀ

ಎತ್ತರ

1633 ಮಿ.ಮೀ

1536 ಮಿ.ಮೀ

1532 ಮಿ.ಮೀ

1616 ಮಿ.ಮೀ

ವೀಲ್ ಬೇಸ್

2445 ಮಿ.ಮೀ

2400 ಮಿ.ಮೀ

2450 ಮಿ.ಮೀ

2498 ಮಿ.ಮೀ

ಗ್ರೌಂಡ್ ಕ್ಲಿಯರೆನ್ಸ್ (ಲೋಡ್ ಇಲ್ಲದೇ)

190ಮಿ.ಮೀ

165 ಮಿ.ಮೀ

172 ಮಿ.ಮೀ

190 ಮಿಮೀ (ಲಾಂಗ್ ರೇಂಜ್)/ 205 ಮಿಮೀ (ಮೀಡಿಯಂ ರೇಂಜ್)

ಬೂಟ್ ಸ್ಪೇಸ್

366 ಲೀಟರ್ (+14 ಲೀಟರ್ ಫ್ರಂಕ್* ಸ್ಟೋರೇಜ್)

240 ಲೀಟರ್

316 ಲೀಟರ್

350 ಲೀಟರ್

*ಫ್ರಂಕ್ - ಫ್ರಂಟ್ ಟ್ರಂಕ್

  • ಇಲ್ಲಿ ನೀಡಿರುವ ಟಾಟಾ EV ಗಳಲ್ಲಿ, ನೆಕ್ಸಾನ್ EV ಅತಿ ಉದ್ದ ಮತ್ತು ಅಗಲವಾಗಿದ್ದು, ಅದರ ಜೊತೆಗೆ ಉದ್ದವಾದ ವೀಲ್‌ಬೇಸ್ ಅನ್ನು ಕೂಡ ಹೊಂದಿದೆ. ಇದು ಅತಿ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ, ಆದರೆ ಕೆಳಮಟ್ಟದ ವೇರಿಯಂಟ್ ಗಳಲ್ಲಿ ಮಾತ್ರ.

  • ಟಾಟಾದ ಹೊಸ Acti.EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಪಂಚ್ EV ದೊಡ್ಡ ಬೂಟ್ ಜೊತೆಗೆ 'ಫ್ರಂಕ್' ಅನ್ನು ಕೂಡ ನೀಡುತ್ತದೆ. ಆದ್ದರಿಂದ, ಸ್ಟೋರೇಜ್ ನಿಮ್ಮ ಆದ್ಯತೆಯಾಗಿದ್ದರೆ, ಪಂಚ್ EV ಯನ್ನು ನೀವು ಆಯ್ಕೆಮಾಡಬಹುದು.

ಇದನ್ನು ಕೂಡ ಓದಿ: ಟಾಟಾ ಪಂಚ್ EVಯು 9 ಎಕ್ಸ್ಟೀರಿಯರ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ

ಎಲೆಕ್ಟ್ರಿಕ್ ಪವರ್‌ಟ್ರೇನ್ ಗಳು

ಸ್ಪೆಸಿಫಿಕೇಷನ್

ಟಾಟಾ ಪಂಚ್ EV

ಟಾಟಾ ಟಿಯಾಗೊ EV

ಟಾಟಾ ಟಿಗೋರ್ EV

ಟಾಟಾ ನೆಕ್ಸಾನ್ EV

ಬ್ಯಾಟರಿ ಪ್ಯಾಕ್‌ಗಳು

25 kWh (ಮೀಡಿಯಂ ರೇಂಜ್)/ 35 kWh (ಲಾಂಗ್ ರೇಂಜ್)

19.2 kWh (ಮೀಡಿಯಂ ರೇಂಜ್)/ 24 kWh (ಲಾಂಗ್ ರೇಂಜ್)

26 kWh

30 kWh (ಮೀಡಿಯಂ ರೇಂಜ್)/ 40.5 kWh (ಲಾಂಗ್ ರೇಂಜ್)

ಎಲೆಕ್ಟ್ರಿಕ್ ಮೋಟಾರ್ ಪವರ್ ಔಟ್ಪುಟ್

82 PS/ 122 PS

61 PS/ 75 PS

75 PS

129 PS/ 144 PS

ಎಲೆಕ್ಟ್ರಿಕ್ ಮೋಟಾರ್ ಟಾರ್ಕ್ ಔಟ್ಪುಟ್

114 Nm/ 190 Nm

110 Nm/ 114 Nm

170 Nm

215 Nm

ಕ್ಲೇಮ್ ಮಾಡಿರುವ ರೇಂಜ್ (MIDC ಸೈಕಲ್)

315 ಕಿಮೀ/ 421 ಕಿಮೀ

250 ಕಿಮೀ/ 315 ಕಿಮೀ

315 ಕಿಮೀ

325 ಕಿಮೀ/ 465 ಕಿಮೀ

  • ಇಲ್ಲಿ ನೀಡಿರುವ ಎಲ್ಲಾ ಟಾಟಾ EV ಗಳಲ್ಲಿ, ಟಿಗೋರ್ EV ಮಾತ್ರ ಒಂದು ಬ್ಯಾಟರಿ ಪ್ಯಾಕ್ ಆಫರ್ ಅನ್ನು ನೀಡುತ್ತದೆ.

  • ಟಾಟಾ ಪಂಚ್ EV ಯ ಬ್ಯಾಟರಿ ಪ್ಯಾಕ್‌ಗಳು ಮತ್ತು ಪರ್ಫಾರ್ಮೆನ್ಸ್, ಟಿಯಾಗೊ EV ಮತ್ತು ನೆಕ್ಸಾನ್ EVಯ ಮಧ್ಯದಲ್ಲಿದೆ.

  • ಪ್ರತಿ ಟಾಟಾ EVಯು 300 ಕಿಮೀ ರೇಂಜ್ ನ ಭರವಸೆಯನ್ನು ನೀಡುವ ಒಂದು ವೇರಿಯಂಟ್ ಅನ್ನು ನೀಡುತ್ತದೆ, ಆದರೆ ಪಂಚ್ EV ಮತ್ತು ನೆಕ್ಸಾನ್ EV ಗಳು 400 ಕಿ.ಮೀ ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್ ನೀಡುವ ದೊಡ್ಡ ಬ್ಯಾಟರಿ ಪ್ಯಾಕ್‌ಗಳನ್ನು ನೀಡುತ್ತಿವೆ, ಇದು ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ಮಾಡೆಲ್ ಗಳಿಗೆ ಹೆಚ್ಚು ಸೂಕ್ತವಾದ ಬದಲಿಯಾಗಿದೆ.

ಚಾರ್ಜಿಂಗ್ ಸಮಯಗಳು

ಚಾರ್ಜಿಂಗ್ ಸ್ಪೀಡ್ (10-100%)

ಟಾಟಾ ಪಂಚ್ EV

ಟಾಟಾ ಟಿಯಾಗೊ EV

ಟಾಟಾ ಟಿಗೋರ್ EV

ಟಾಟಾ ನೆಕ್ಸಾನ್ EV

15A ಪ್ಲಗ್ ಪಾಯಿಂಟ್

ಅಂದಾಜು 9.4 ಗಂಟೆಗಳು / 13.5 ಗಂಟೆಗಳು

6.9 ಗಂಟೆಗಳು / 8.7 ಗಂಟೆಗಳು

9.4 ಗಂಟೆಗಳು

10.5 ಗಂಟೆಗಳು / 15 ಗಂಟೆಗಳು

3.3 kW AC ವಾಲ್‌ಬಾಕ್ಸ್ ಚಾರ್ಜರ್

ಇನ್ನೂ ಘೋಷಿಸಲಾಗಿಲ್ಲ

6.9 ಗಂಟೆಗಳು / 8.7 ಗಂಟೆಗಳು

9.4 ಗಂಟೆಗಳು

10.5 ಗಂಟೆಗಳು / 15 ಗಂಟೆಗಳು

7.2 kW AC ಚಾರ್ಜರ್

ಅಂದಾಜು 3.6 ಗಂಟೆಗಳು/ ಅಂದಾಜು 5 ಗಂಟೆಗಳು

2.6 ಗಂಟೆಗಳು / 3.6 ಗಂಟೆಗಳು

ಅನ್ವಯವಾಗುವುದಿಲ್ಲ

4.3 ಗಂಟೆಗಳು / 6 ಗಂಟೆಗಳು

50 kW DC ಫಾಸ್ಟ್ ಚಾರ್ಜರ್ (10 ರಿಂದ 80 ಪರ್ಸೆಂಟ್)

ಅಂದಾಜು 56 ನಿಮಿಷಗಳು

58 ನಿಮಿಷಗಳು

59 ನಿಮಿಷಗಳು

56 ನಿಮಿಷಗಳು

  • ಟಿಗೋರ್ EV ಎಲೆಕ್ಟ್ರಿಕ್ ಸೆಡಾನ್ ಅನ್ನು ಹೊರತುಪಡಿಸಿ ಎಲ್ಲಾ ಮಾಡೆಲ್ ಗಳಿಗೆ 7.2kW ಫಾಸ್ಟ್ AC ಚಾರ್ಜರ್ ಆಯ್ಕೆಯನ್ನು ನೀಡಲಾಗಿದೆ.

  • ಇದರ ಜೊತೆಗೆ, ಮೇಲೆ ತಿಳಿಸಲಾದ ಎಲ್ಲಾ ಟಾಟಾ EVಗಳನ್ನು ಒಂದು ಗಂಟೆಯೊಳಗೆ 50 kW DC ಫಾಸ್ಟ್ ಚಾರ್ಜರ್ ಬಳಸಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

ಫೀಚರ್ ಹೈಲೈಟ್ ಗಳು

  • ಆಟೋ LED ಹೆಡ್ ಲೈಟ್ ಗಳು

  • LED RL ಸ್ಟ್ರಿಪ್

  • ಕಾರ್ನರಿಂಗ್ ಫಂಕ್ಷನ್ ನೊಂದಿಗೆ LED ಫ್ರಂಟ್ ಫಾಗ್ ಲ್ಯಾಂಪ್ ಗಳು

  • 16-ಇಂಚಿನ ಅಲಾಯ್ ವೀಲ್ಸ್

  • 10.25-ಇಂಚಿನ ಟಚ್‌ಸ್ಕ್ರೀನ್

  • Arcade.ev (ಗೇಮಿಂಗ್) ಮೋಡ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು

  • ವೈರ್‌ಲೆಸ್ ಫೋನ್ ಚಾರ್ಜಿಂಗ್

  • AQI ಡಿಸ್ಪ್ಲೇಯೊಂದಿಗೆ ಏರ್ ಪ್ಯೂರಿಫೈಯರ್

  • ಆಂಬಿಯೆಂಟ್ ಲೈಟಿಂಗ್

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಸನ್ರೂಫ್

  • ರೈನ್ ಸೆನ್ಸಿಂಗ್ ವೈಪರ್‌ಗಳು

  • ಕ್ರೂಸ್ ಕಂಟ್ರೋಲ್

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • 6 ಏರ್ ಬ್ಯಾಗ್ ಗಳು

  • 360 ಡಿಗ್ರಿ ಕ್ಯಾಮೆರಾ

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ರೈನ್ ಸೆನ್ಸಿಂಗ್ ವೈಪರ್‌ಗಳು

  • ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಆಟೋ-ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲೈಟ್ ಗಳು

  • ಕವರ್‌ಗಳೊಂದಿಗೆ 14-ಇಂಚಿನ ಚಕ್ರಗಳು

  • ಲೆಥೆರೆಟ್ ಅಪ್ಹೋಲಿಸ್ಟ್ರೀ

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • ಕ್ರೂಸ್ ಕಂಟ್ರೋಲ್

  • ● ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಆಟೋ AC ಮತ್ತು ಎಲೆಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮಾಡಬಹುದಾದ ORVMಗಳು

  • ಆಟೋ AC

  • 7-ಇಂಚಿನ ಟಚ್‌ಸ್ಕ್ರೀನ್

  • ಕನೆಕ್ಟೆಡ್ ಕಾರ್ ಟೆಕ್ನೋಲೊಜಿ

  • 8-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್

  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ಬ್ಯಾಕ್ ಕ್ಯಾಮೆರಾ

  • ರೈನ್ ಸೆನ್ಸಿಂಗ್ ವೈಪರ್‌ಗಳು

  • LED DRL ಗಳೊಂದಿಗೆ ಆಟೋ-ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲೈಟ್ ಗಳು
  • LED ಟೈಲ್‌ಲೈಟ್‌ಗಳು

  • ಕವರ್‌ಗಳೊಂದಿಗೆ 14-ಇಂಚಿನ ವೀಲ್ಸ್

  • ಲೆಥೆರೆಟ್ ಅಪ್ಹೋಲಿಸ್ಟ್ರೀ

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಹಿಂಭಾಗದ ಆರ್ಮ್ ರೆಸ್ಟ್

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • ಆಟೋ ಫೋಲ್ಡಿಂಗ್ ಮತ್ತು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVMಗಳು

  • ಆಟೋ ಎಸಿ

  • ಕ್ರೂಸ್ ಕಂಟ್ರೋಲ್

  • 7-ಇಂಚಿನ ಟಚ್‌ಸ್ಕ್ರೀನ್

  • ಕನೆಕ್ಟೆಡ್ ಕಾರ್ ಟೆಕ್ನೋಲೊಜಿ

  • 8-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್

  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ಬ್ಯಾಕ್ ಕ್ಯಾಮೆರಾ

  • ರೈನ್ ಸೆನ್ಸಿಂಗ್ ವೈಪರ್‌ಗಳು

  • ಆಟೋ LED ಪ್ರೊಜೆಕ್ಟರ್ ಹೆಡ್ ಲೈಟ್ ಗಳು
  • LED DRL ಸ್ಟ್ರಿಪ್

  • ಕಾರ್ನರಿಂಗ್ ಫಂಕ್ಷನ್ ದೊಂದಿಗೆ ಲೆಡ್ ಫ್ರಂಟ್ ಫಾಗ್ ಲ್ಯಾಂಪ್ ಗಳು

  • 16-ಇಂಚಿನ ಅಲಾಯ್ ವೀಲ್ಸ್

  • 12.3-ಇಂಚಿನ ಟಚ್‌ಸ್ಕ್ರೀನ್

  • ಕನೆಕ್ಟೆಡ್ ಕಾರ್ ಟೆಕ್ನೋಲೊಜಿ

  • Arcade.ev (ಗೇಮಿಂಗ್) ಮೋಡ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು

  • ವೈರ್‌ಲೆಸ್ ಫೋನ್ ಚಾರ್ಜಿಂಗ್

  • AQI ಡಿಸ್ಪ್ಲೇಯೊಂದಿಗೆ ಏರ್ ಪ್ಯೂರಿಫೈಯರ್

  • ಸನ್ರೂಫ್

  • 9-ಸ್ಪೀಕರ್ JBL ಮ್ಯೂಸಿಕ್ ಸಿಸ್ಟಮ್

  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಕ್ರೂಸ್ ಕಂಟ್ರೋಲ್

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • 6 ಏರ್‌ಬ್ಯಾಗ್‌ಗಳು

  • 360 ಡಿಗ್ರಿ ಕ್ಯಾಮೆರಾ

  • ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳು

  • ರೈನ್ ಸೆನ್ಸಿಂಗ್ ವೈಪರ್‌ಗಳು

  • ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಟಾಟಾ ತನ್ನ ನೆಕ್ಸಾನ್ EVಯಲ್ಲಿ ಇರುವ ಅನೇಕ ಫೀಚರ್ ಗಳನ್ನು ಪಂಚ್ EVಗೆ ಲೋಡ್ ಮಾಡಿದೆ.

  • ಪಂಚ್ EV ಮತ್ತು ನೆಕ್ಸಾನ್ EV ಯಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಆರು ಏರ್‌ಬ್ಯಾಗ್‌ಗಳು ಸೇರಿದಂತೆ ಬಹಳಷ್ಟು ಸಾಮ್ಯತೆಗಳನ್ನು ಹೊಂದಿದ್ದರೂ, ನೆಕ್ಸಾನ್ EV ಅದರದೇ ಆದ ಪ್ರಯೋಜನಗಳನ್ನು ಹೊಂದಿದೆ. ಇವುಗಳಲ್ಲಿ 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಸೇರಿವೆ.

  • ಪಂಚ್ EV ಮತ್ತು ನೆಕ್ಸಾನ್ EVಗಳು ಟಾಟಾದ ಹೊಸ ಕೊಡುಗೆಗಳಾಗಿರುವುದರಿಂದ, ಅವುಗಳಿಗೆ ಟಾಟಾದ ಇತ್ತೀಚಿನ ಡಿಸೈನ್ ಅನ್ನು ನೀಡಲಾಗಿದೆ, ಇದರಲ್ಲಿ ಬಾನೆಟ್ ಉದ್ದಕ್ಕೂ ಪೂರ್ಣ LED ಲೈಟ್ ಬಾರ್ ಮತ್ತು ಆಟೋ-LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಒಳಗೊಂಡಿದೆ.

  • ಟಿಯಾಗೊ EV ಮತ್ತು ಟಿಗೋರ್ EV ಯಲ್ಲಿ ಇನ್ನು ಕೂಡ ಡ್ಯುಯಲ್ ಏರ್‌ಬ್ಯಾಗ್‌ಗಳು ಮಾತ್ರ ಇವೆ, ಅದರ ಜೊತೆಗೆ ಕವರ್‌ಗಳೊಂದಿಗೆ ಚಿಕ್ಕದಾದ 14-ಇಂಚಿನ ವೀಲ್ಸ್ ಮತ್ತು 7-ಇಂಚಿನ ಟಚ್‌ಸ್ಕ್ರೀನ್ ಅನ್ನು ಮಾತ್ರ ಹೊಂದಿವೆ.

ಸಂಬಂಧಿಸಿದ ಲೇಖನ: ಟಾಟಾ ಪಂಚ್ EV ವೇರಿಯಂಟ್-ವಾರು ಫೀಚರ್ ಗಳ ವಿವರಗಳು ಇಲ್ಲಿದೆ

ಬೆಲೆಗಳು

ಟಾಟಾ ಪಂಚ್ EV (ಪರಿಚಯಾತ್ಮಕ)

ಟಾಟಾ ಟಿಯಾಗೊ EV

ಟಾಟಾ ಟಿಗೋರ್ EV

ಟಾಟಾ ನೆಕ್ಸಾನ್ EV

ರೇಂಜ್

ರೂ. 10.99 ಲಕ್ಷದಿಂದ ರೂ. 15.49 ಲಕ್ಷದವರೆಗೆ

ರೂ. 8.69 ಲಕ್ಷದಿಂದ ರೂ. 12.04 ಲಕ್ಷದವರೆಗೆ

ರೂ. 12.49 ಲಕ್ಷದಿಂದ ರೂ. 13.75 ಲಕ್ಷದವರೆಗೆ

ರೂ. 14.74 ಲಕ್ಷದಿಂದ ರೂ. 19.94 ಲಕ್ಷದವರೆಗೆ

ಟಿಯಾಗೊ EV ಟಾಟಾದ ಆಲ್-ಎಲೆಕ್ಟ್ರಿಕ್ ಪೋರ್ಟ್‌ಫೋಲಿಯೊದಲ್ಲಿ ಅತ್ಯಂತ ಕೈಗೆಟುಕುವ EV ಆಗಿದ್ದು, ಇದು ರೂ 10 ಲಕ್ಷದೊಳಗಿನ ಬೆಲೆಯಲ್ಲಿ ಪ್ರಾರಂಭವಾಗುತ್ತದೆ ಮತ್ತು, ರೂ 19.94 ಲಕ್ಷ ಬೆಲೆಯೊಂದಿಗೆ ನೆಕ್ಸಾನ್ EVಯು ಪ್ರಸ್ತುತ ಮಾರಾಟದಲ್ಲಿರುವ ಎಲ್ಲಾ ಟಾಟಾ EV ಗಳಲ್ಲಿ ಅತ್ಯಂತ ದುಬಾರಿ ವೇರಿಯಂಟ್ ಅನ್ನು ಹೊಂದಿದೆ. ಆದ್ದರಿಂದ ಪಂಚ್ EV, ಟಿಯಾಗೊ EV ಮತ್ತು ಟಾಟಾ ನೆಕ್ಸಾನ್ EVಗಳ ನಡುವೆ SUV ಸ್ಟೈಲಿಂಗ್‌ನಲ್ಲಿ ಹ್ಯಾಚ್‌ಬ್ಯಾಕ್‌ ಪ್ರಯೋಜನಗಳನ್ನು ಹೊಂದಿರುವ ಅತ್ಯುತ್ತಮ ಎಲೆಕ್ಟ್ರಿಕ್ ಕೊಡುಗೆಯಾಗಿ ಹೊರಹೊಮ್ಮುತ್ತದೆ.

ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ದೆಹಲಿ

ಇನ್ನಷ್ಟು ಓದಿ: ಪಂಚ್ EV ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 154 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಪಂಚ್‌ EV

Read Full News

explore similar ಕಾರುಗಳು

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ