ಟಾಟಾ ಪಂಚ್ EV ನಾಳೆ ಮಾರುಕಟ್ಟೆಗೆ ಬರಲಿದೆ, ಇದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ವಿವರಗಳು ಇಲ್ಲಿದೆ
ಟಾಟಾ ಪಂಚ್ EVಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದರ ಕ್ಲೈಮ್ ಮಾಡಿರುವ ರೇಂಜ್ 400 ಕಿ.ಮೀ. ಎಂದು ನಿರೀಕ್ಷಿಸಲಾಗಿದೆ
-
ಟಾಟಾ ಪಂಚ್ EVಗಾಗಿ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ.
-
ಪಂಚ್ EV ಮತ್ತು ಟಾಟಾ ನೆಕ್ಸಾನ್ EVಯ ಮುಂಭಾಗದ ಡಿಸೈನ್ ಒಂದೇ ರೀತಿಯಾಗಿ ಇದೆ.
-
ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್ ಗಳನ್ನು ಪಡೆದಿದೆ.
-
ಪಂಚ್ EV ಹೊಸ Acti.EV ಪ್ಲಾಟ್‌ಫಾರ್ಮ್ ಮೇಲೆ ಆಧರಿಸಿರುವ ಮೊದಲ ಟಾಟಾ EV ಆಗಿರುತ್ತದೆ.
-
ಇದರ ಬೆಲೆ ರೂ 12 ಲಕ್ಷದಿಂದ ಶುರುವಾಗುವ (ಎಕ್ಸ್ ಶೋರೂಂ) ನಿರೀಕ್ಷೆಯಿದೆ.
ಟಾಟಾ ತನ್ನ ಪಂಚ್ EVಯನ್ನು ಅನಾವರಣಗೊಳಿಸಿದ ಕೆಲವೇ ದಿನಗಳ ನಂತರ, ಈ ಎಲೆಕ್ಟ್ರಿಕ್ ಮೈಕ್ರೋ SUV ಯ ಬೆಲೆಗಳನ್ನು ನಾಳೆ ಬಹಿರಂಗಪಡಿಸಲು ಸಿದ್ಧವಾಗಿದೆ. ಟಾಟಾ ಈಗಾಗಲೇ ಇದರ ಹೊಸ ಫೀಚರ್ ಗಳು ಮತ್ತು ವೇರಿಯಂಟ್ ಗಳ ಕುರಿತು ವಿವರಗಳನ್ನು ನೀಡಿದೆ, ಮತ್ತು ಇತ್ತೀಚೆಗೆ ನಾವು ಈ ಮೈಕ್ರೋ ಎಲೆಕ್ಟ್ರಿಕ್ SUV ಯ ಬ್ಯಾಟರಿ ಮತ್ತು ಪವರ್‌ಟ್ರೇನ್ ಸ್ಪೆಸಿಫಿಕೇಷನ್ ಗಳ ಬಗ್ಗೆ ಕೂಡ ಮಾಹಿತಿಯನ್ನು ಪಡೆದುಕೊಂಡಿದ್ದೇವೆ.
ಹೊಸದಾದ ಹೊರಭಾಗದ ಡಿಸೈನ್
ಟಾಟಾ ಪಂಚ್ EVಯು ರೆಗ್ಯುಲರ್ ಪಂಚ್‌ಗಿಂತ ಭಿನ್ನವಾದ ವಿಶಿಷ್ಟ ಶೈಲಿಯನ್ನು ಹೊಂದಿದೆ. ಇದರ ಡಿಸೈನ್ ಟಾಟಾ ನೆಕ್ಸಾನ್ EVಯಿಂದ ಸ್ಫೂರ್ತಿಯನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಇದು ಬಾನೆಟ್ ನಷ್ಟು ಅಗಲವಾದ ಕನೆಕ್ಟೆಡ್ LED DRL ಗಳು, ಲಂಬವಾಗಿ ಇರಿಸಲಾದ LED ಹೆಡ್‌ಲೈಟ್‌ಗಳು ಮತ್ತು ದಪ್ಪ ಬಂಪರ್ ಅನ್ನು ಪಡೆದಿದೆ. ಪ್ರೊಫೈಲ್ ಕುರಿತು ಹೇಳುವುದಾದರೆ, ಪಂಚ್ EV ಹೊಸ ಏರೋಡೈನಾಮಿಕಲಿ-ಸ್ಟೈಲ್ಡ್ ಅಲಾಯ್ ವೀಲ್ ಗಳನ್ನು ಪಡೆದಿದೆ. ಆದರೆ ಎಲೆಕ್ಟ್ರಿಕ್ ಮೈಕ್ರೋ SUV ಯ ಹಿಂಭಾಗವು, ಹೊಸ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊರತುಪಡಿಸಿ ಅದರ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ವರ್ಷನ್ ನ ಪ್ರತಿರೂಪದಂತೆಯೇ ಕಾಣುತ್ತದೆ.
ಇದನ್ನು ಕೂಡ ಓದಿ: 2024 ಮಹೀಂದ್ರಾ XUV400 ಪ್ರೊ ವರ್ಸಸ್ ಟಾಟಾ ನೆಕ್ಸಾನ್ EV: ಯಾವುದರ ಕ್ಯಾಬಿನ್ ಸುಂದರವಾಗಿದೆ?
-
ನಿಮ್ಮ ಬಾಕಿ ಇರುವ ಚಲನ್ ಪರಿಶೀಲಿಸಿ
-
ಉಪಯೋಗಿಸಿದ ಕಾರಿನ ಮೌಲ್ಯಮಾಪನ
ಅಪ್ಡೇಟ್ ಆಗಿರುವ ಕ್ಯಾಬಿನ್
ಟಾಟಾ ತನ್ನ ರೆಗ್ಯುಲರ್ ICE ಮಾಡೆಲ್ ಗೆ ಹೋಲಿಕೆ ಮಾಡಿದರೆ ಪಂಚ್ EVಯ ಕ್ಯಾಬಿನ್ ಅನ್ನು ಅಪ್ಡೇಟ್ ಮಾಡಿದೆ ಮತ್ತು ಬದಲಾವಣೆಗಳಲ್ಲಿ ಟಚ್-ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ನೊಂದಿಗೆ ಹೊಸ ಸೆಂಟರ್ ಕನ್ಸೋಲ್ ಮತ್ತು ಪ್ರಕಾಶಿಸುವ ಟಾಟಾ ಲೋಗೋದೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿವೆ. ಪಂಚ್ EVಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸಿಂಗಲ್ ಪೇನ್ ಸನ್‌ರೂಫ್ ಅನ್ನು ಕೂಡ ಪಡೆಯುತ್ತದೆ.
ಪ್ಯಾಸೆಂಜರ್ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಳನ್ನು ನೀಡಲಾಗಿದೆ.
ಇದನ್ನು ಕೂಡ ಓದಿ: 2024 ಮಹೀಂದ್ರಾ XUV700 6-ಸೀಟರ್ ವೇರಿಯಂಟ್ ಗಳು ಮತ್ತು ಹೆಚ್ಚಿನ ಫೀಚರ್ ಗಳನ್ನು ಪಡೆಯಲಿದೆ, ಬೆಲೆಗಳು ಈಗ ರೂ 13.99 ಲಕ್ಷದಿಂದ ಪ್ರಾರಂಭವಾಗುತ್ತವೆ
ಬ್ಯಾಟರಿ ಪ್ಯಾಕ್ ಮತ್ತು ಪವರ್‌ಟ್ರೇನ್
ಇತ್ತೀಚೆಗೆ ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಟಾಟಾ ಪಂಚ್ EVಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇವುಗಳನ್ನು ಟೇಬಲ್ ನಲ್ಲಿ ಕೆಳಗೆ ವಿವರಿಸಲಾಗಿದೆ:
ಪ್ರತಿ ಬ್ಯಾಟರಿ ಪ್ಯಾಕ್‌ನ ಡ್ರೈವಿಂಗ್ ರೇಂಜ್ ವಿವರಗಳು ಇನ್ನೂ ಹೊರಬಂದಿಲ್ಲ, ಆದರೆ ಇದು 400 ಕಿಮೀ ವರೆಗಿನ ಡ್ರೈವಿಂಗ್ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಪಂಚ್ EV ಬೆಲೆಯು 12 ಲಕ್ಷ ರೂಪಾಯಿಗಳಿಂದ ಶುರುವಾಗುವ (ಎಕ್ಸ್ ಶೋರೂಂ) ನಿರೀಕ್ಷೆಯಿದೆ. ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ಗೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಿರುವ ಪಂಚ್ EV, ಸಿಟ್ರೋನ್ eC3ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ: ಟಾಟಾ ಪಂಚ್ AMT