• English
    • Login / Register

    Tata Sierra ಡ್ಯಾಶ್‌ಬೋರ್ಡ್ ವಿನ್ಯಾಸದ ಪೇಟೆಂಟ್ ಚಿತ್ರ ಆನ್‌ಲೈನ್‌ನಲ್ಲಿ ವೈರಲ್‌

    ಏಪ್ರಿಲ್ 03, 2025 07:37 pm ರಂದು kartik ಮೂಲಕ ಪ್ರಕಟಿಸಲಾಗಿದೆ

    • 14 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹಾಗೆಯೇ, ಅತಿದೊಡ್ಡ ಆಶ್ಚರ್ಯವೆಂದರೆ, ಡ್ಯಾಶ್‌ಬೋರ್ಡ್ ವಿನ್ಯಾಸ ಪೇಟೆಂಟ್‌ನಲ್ಲಿ ಮೂರನೇ ಸ್ಕ್ರೀನ್‌ ಇಲ್ಲ, ಇದು ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಪರಿಕಲ್ಪನೆಯಲ್ಲಿ ಕಂಡುಬಂದಿತ್ತು

    Tata Sierra Dashboard Design Patent Image Surfaces Online

    • ಪೇಟೆಂಟ್ ಕನಿಷ್ಠ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪ್ರದರ್ಶಿಸುತ್ತದೆ.

    • ಡ್ಯಾಶ್‌ಬೋರ್ಡ್ ಒಂದೇ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ, ಇದು ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್‌ನ ಮೊಡೆಲ್‌ಗಿಂತ ಭಿನ್ನವಾಗಿದೆ.

    • ಸಿಯೆರಾದಲ್ಲಿರುವ ಫೀಚರ್‌ಗಳು ವೈರ್‌ಲೆಸ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್ ಜೋನ್ ಆಟೋ ಎಸಿಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

    • ಎಂಜಿನ್ ಆಯ್ಕೆಗಳಲ್ಲಿ 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಸೇರಿರಬಹುದು ಎಂದು ನಿರೀಕ್ಷಿಸಲಾಗಿದೆ.

    ಉತ್ಪಾದನೆಗೆ ಸಿದ್ಧವಾದ ಟಾಟಾ ಸಿಯೆರಾದ ಡ್ಯಾಶ್‌ಬೋರ್ಡ್‌ಗೆ ಇತ್ತೀಚೆಗೆ ಪೇಟೆಂಟ್ ಸಲ್ಲಿಸಲಾಗಿದ್ದು, ಅದರ ಚಿತ್ರ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ಈ ಮೊಡೆಲ್‌ಅನ್ನು ಈ ಹಿಂದೆ 2025 ರ ಆಟೋ ಎಕ್ಸ್‌ಪೋದಲ್ಲಿ ಒಂದು ಕಾನ್ಸೆಪ್ಟ್‌ ಆಗಿ ಪ್ರದರ್ಶಿಸಲಾಗಿತ್ತು, ಅಲ್ಲಿ ನಾವು ಇಂಟೀರಿಯರ್‌ಅನ್ನು ಇಣುಕಿ ನೋಡಿದಾಗ ಸಿಯೆರಾ ಪಡೆಯಬಹುದಾದ ಕೆಲವು ಫೀಚರ್‌ಗಳನ್ನು ಗ್ರಹಿಸಲು ಸಾಧ್ಯವಾಯಿತು. ಆದರೂ, ಕಾನ್ಸೆಪ್ಟ್‌ ಮತ್ತು ಪೇಟೆಂಟ್ ಪಡೆದ ಮೊಡೆಲ್‌ನ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ, ಅದು ಮೂರನೇ (ಪ್ರಯಾಣಿಕರ ಬದಿಯ) ಸ್ಕ್ರೀನ್‌ ಮಿಸ್ಸಿಂಗ್‌. ಪೇಟೆಂಟ್‌ನಲ್ಲಿ ಇತರ ಕೆಲವು ಫಿಚರ್‌ಗಳು ಸಹ ಗೋಚರಿಸಿದ್ದು, ಅವುಗಳನ್ನು ಈ ಸುದ್ದಿಯಲ್ಲಿ ಕೆಳಗೆ ನೀಡಲಾಗಿದೆ:

    ಏನನ್ನು ಗಮನಿಸಬಹುದು ?

    Tata Sierra Dashboard Design Patent Image Surfaces Online

    ಡ್ಯಾಶ್‌ಬೋರ್ಡ್ ವಿನ್ಯಾಸವು ಸಿಂಪಲ್‌ ಆಗಿ ಕಾಣುತ್ತದೆ ಮತ್ತು ಸ್ಪೋರ್ಟ್ಸ್ ನಯವಾದ AC ವೆಂಟ್‌ಗಳನ್ನು ಹೊಂದಿದೆ. ಟಾಟಾ ಸಿಯೆರಾದ 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಅದರ ಇತರ ಸ್ಟೇಬಲ್‌ಮೇಟ್‌ಗಳಾದ ಹ್ಯಾರಿಯರ್-ಸಫಾರಿ ಜೋಡಿ ಮತ್ತು ಕರ್ವ್‌ಗಳಿಂದ ಎರವಲು ಪಡೆಯಲಾಗಿದೆ. ಇದು ಒಂದೇ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ ಅನ್ನು ಪಡೆಯುತ್ತದೆ, ಇದು ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್‌ಗಿಂತ ಭಿನ್ನವಾಗಿದೆ. ಪ್ರಯಾಣಿಕರ ಬದಿಯ ಸ್ಕ್ರೀನ್‌ಗಳನ್ನು ಟಾಪ್‌ ವೇರಿಯೆಂಟ್‌ಗಳಲ್ಲಿ ನೀಡುವ ಸಾಧ್ಯತೆಯಿದೆ. ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಒಂದು ಹೌಸಿಂಗ್ ಕೂಡ ಇದೆ (ಇತರ ಟಾಟಾ ಕಾರುಗಳಂತೆ ಆದೇ ಗಾತ್ರದಲ್ಲಿರಬಹುದು). ಸ್ಟೀರಿಂಗ್ ವೀಲ್‌ನ ಬಲಭಾಗದಲ್ಲಿ ಪುಶ್ ಸ್ಟಾರ್ಟ್-ಸ್ಟಾಪ್ ಬಟನ್ ಗೋಚರಿಸುತ್ತದೆ, ಜೊತೆಗೆ ಅದರ ಕೆಳಗೆ ರೋಟೇಟರ್ ನಾಬ್ ಇರುತ್ತದೆ.

    ಟಾಟಾ ಸಿಯೆರಾ ಫೀಚರ್‌ಗಳು ಮತ್ತು ಸುರಕ್ಷತೆ

    Tata Sierra

    ಟಾಟಾ ಸಿಯೆರಾ ಕಾರಿನಲ್ಲಿರುವ ನಿಖರವಾದ ಫೀಚರ್‌ಗಳನ್ನು ಟಾಟಾ ದೃಢಪಡಿಸದಿದ್ದರೂ, ಇದು ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಆಟೋ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

    ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಇದು ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಲೆವೆಲ್-2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ನೊಂದಿಗೆ ಬರುವ ನಿರೀಕ್ಷೆಯಿದೆ.

    ಇದನ್ನೂ ಸಹ ಓದಿ: ಡೀಲರ್‌ಶಿಪ್‌ಗಳ ಸ್ಟಾಕ್‌ಯಾರ್ಡ್‌ಗೆ ಬಂದಿಳಿದ Tata Curvv ಡಾರ್ಕ್ ಎಡಿಷನ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ

    ಟಾಟಾ ಸಿಯೆರಾ ಪವರ್‌ಟ್ರೈನ್

    ಟಾಟಾ ಸಿಯೆರಾ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ, ಅವುಗಳ ವಿಶೇಷಣಗಳು ಈ ಕೆಳಗಿನಂತಿವೆ:

    ಎಂಜಿನ್‌

    1.5-ಲೀಟರ್‌ ಟರ್ಬೋ ಪೆಟ್ರೋಲ್‌

    1.5-ಲೀಟರ್ ಡೀಸೆಲ್ ಎಂಜಿನ್

    ಪವರ್‌

    170 ಪಿಎಸ್‌

    118 ಪಿಎಸ್‌

    ಟಾರ್ಕ್‌

    280 ಎನ್‌ಎಮ್‌

    260 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ DCT*

    6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ DCT*

    *DCT= ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Tata Sierra Side

    ಟಾಟಾ ಸಿಯೆರಾ ಕಾರಿನ ಬೆಲೆ 10.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗಳಿಗೆ ಪ್ರತಿಸ್ಪರ್ಧಿಯಾಗಲಿದೆ. 

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Tata ಸಿಯೆರಾ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience