ಟಾಟಾ ತನ್ನ ಪಂಚ್ EV ಅನ್ನು ಜನವರಿ 17 ರಂದು ಬಿಡುಗಡೆ ಮಾಡಲಿದೆ
ಈಗಾಗಲೇ ಡಿಸೈನ್ ಮತ್ತು ಪ್ರಮುಖ ಫೀಚರ್ ಗಳು ಬಹಿರಂಗಗೊಂಡಿದೆ, ಆದರೆ ಪಂಚ್ EVಯ ಬ್ಯಾಟರಿ, ಕಾರ್ಯಕ್ಷಮತೆ ಮತ್ತು ರೇಂಜ್ ವಿವರಗಳು ಇನ್ನೂ ಹೊರಬಿದ್ದಿಲ್ಲ
-
ಇದರ ಬೆಲೆಯು 12 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
-
ಹೊಸ ಫೇಸಿಯವು ಅಗಲವಾದ LED DRL ಗಳು, ಲಂಬವಾಗಿ ಇರಿಸಲಾದ ಹೆಡ್‌ಲೈಟ್‌ಗಳು ಮತ್ತು ಏರೋಡೈನಾಮಿಕ್ ಅಲಾಯ್ ವೀಲ್ ಗಳನ್ನು ಒಳಗೊಂಡಿದೆ.
-
ಒಳಭಾಗದಲ್ಲಿ, ಇದು ಟಾಟಾದ ಹೊಸ ಸ್ಟೀರಿಂಗ್ ವೀಲ್, ಟಚ್ ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು 10.25-ಇಂಚಿನ ಡಿಸ್ಪ್ಲೇಗಳನ್ನು ಪಡೆದಿದೆ.
-
ಇತರ ಫೀಚರ್ ಗಳಲ್ಲಿ ವೆಂಟಿಲೆಟ್ ಆಗಿರುವ ಫ್ರಂಟ್ ಸೀಟುಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ.
ಟಾಟಾ ಪಂಚ್ EV ಯನ್ನು ಈ ವರ್ಷದ ಆರಂಭದಲ್ಲಿ ಅನಾವರಣಗೊಳಿಸಲಾಯಿತು ಮತ್ತು ಹಲವಾರು ಟೀಸರ್‌ಗಳ ನಂತರ, ಟಾಟಾ ಈಗ ಅದರ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಹೊಸ ಟಾಟಾ EV ಯನ್ನು ಜನವರಿ 17 ರಂದು ಬಿಡುಗಡೆ ಮಾಡಲಾಗುವುದು ಮತ್ತು ಪ್ರೀ-ಆರ್ಡರ್ ಬುಕಿಂಗ್‌ಗಳು ಈಗಾಗಲೇ ಶುರುವಾಗಿದೆ. ಬಿಡುಗಡೆಯ ಮೊದಲು, ಟಾಟಾ ತನ್ನ ಬ್ಯಾಟರಿ ಪ್ಯಾಕ್ ಮತ್ತು ರೇಂಜ್ ನ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಪಂಚ್ EV ಬಗ್ಗೆ ನಮಗೆ ತಿಳಿದಿರುವ ಎಲ್ಲಾ ವಿವರಗಳು ಇಲ್ಲಿದೆ.
ನೆಕ್ಸಾನ್ ನಿಂದ ಸ್ಫೂರ್ತಿ ಪಡೆದ ಡಿಸೈನ್
ಪಂಚ್ EV ಯು ಹೊಸ ನೆಕ್ಸಾನ್ EVಯ ಡಿಸೈನ್ ಅಂಶಗಳನ್ನು ಅಳವಡಿಸಿಕೊಂಡಿದೆ. ಇದರ ಫೇಸಿಯವು ಅಗಲವಾದ LED DRL ಗಳು, ಲಂಬವಾಗಿ ಇರಿಸಲಾದ LED ಹೆಡ್‌ಲೈಟ್‌ಗಳು ಮತ್ತು ದೊಡ್ಡದಾದ ಮುಂಭಾಗದ ಬಂಪರ್ ಅನ್ನು ಹೊಂದಿದೆ. ಸೈಡ್ ಪ್ರೊಫೈಲ್ ಏರೋಡೈನಾಮಿಕ್ ಅಲಾಯ್ ವೀಲ್ ಗಳನ್ನು ಪಡೆದಿದೆ; ಆದರೆ, ಹಿಂಭಾಗವು ಹೆಚ್ಚು ಕಡಿಮೆ ಅದರ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ವರ್ಷನ್ ನಂತೆಯೇ ಇದೆ.
ಆಧುನಿಕ ಕ್ಯಾಬಿನ್
ಒಳಭಾಗದಲ್ಲಿ, ಪಂಚ್ EV ಟಾಟಾದ ಹೊಸ ಸ್ಟೀರಿಂಗ್ ವೀಲ್ ನೊಂದಿಗೆ ಪ್ರಕಾಶಿಸುವ ಟಾಟಾ ಲೋಗೋವನ್ನು ಹೊಂದಿರುವ ಡ್ಯುಯಲ್-ಟೋನ್ ಕ್ಯಾಬಿನ್ ಅನ್ನು ಪಡೆದಿದೆ. ಇದು ಟಚ್- ಎನೇಬಲ್ ಆಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್, ರೀಡಿಸೈನ್ ಮಾಡಲಾದ ಡ್ಯಾಶ್‌ಬೋರ್ಡ್ ಮತ್ತು ದೊಡ್ಡ ಡಿಸ್ಪ್ಲೇಗಳನ್ನು ಕೂಡ ಹೊಂದಿದೆ.
ಫೀಚರ್ ಗಳ ಪಟ್ಟಿ
ಟಾಟಾ ಪಂಚ್ EVಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೆಟ್ ಆಗಿರುವ ಫ್ರಂಟ್ ಸೀಟುಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದುವರೆಗೆ ಬಂದಿರುವ ಟೀಸರ್‌ಗಳ ಆಧಾರದ ಮೇಲೆ, ಅದರ SUV ಸ್ವಭಾವವನ್ನು ಪ್ರದರ್ಶಿಸಲು ಡ್ರೈವ್ ಅಥವಾ ಟ್ರಾಕ್ಷನ್ ಮೋಡ್ ಗಳಂತಹ (ರೆಗ್ಯುಲರ್ ಪಂಚ್ ನಲ್ಲಿ ಇರುವಂತೆ) ಫೀಚರ್ ಗಳನ್ನು ನೀಡುವ ನಿರೀಕ್ಷೆಯಿದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EV ಲಾಂಚ್ ಆಗಲು ಇನ್ನು ಕೆಲವೇ ದಿನಗಳು ಬಾಕಿಯಿವೆ, ಯೂನಿಟ್‌ಗಳು ಡೀಲರ್‌ಶಿಪ್‌ಗಳನ್ನು ತಲುಪಿವೆ
ಸುರಕ್ಷತೆಯ ಬಗ್ಗೆ ಹೇಳಬೇಕೆಂದರೆ, ಇದು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳೊಂದಿಗೆ ಬರುತ್ತದೆ.
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
ಟಾಟಾ ತನ್ನ ಪವರ್‌ಟ್ರೇನ್‌ನ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಇದು ಎರಡು ವಿಭಿನ್ನ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯೊಂದಿಗೆ ಬರುವ ನಿರೀಕ್ಷೆಯಿದೆ. ಪಂಚ್ EV ಟಾಟಾದ ಹೊಸ Acti.ev ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು 500 ಕಿ.ಮೀ ಗಿಂತಲೂ ಹೆಚ್ಚು ರೇಂಜ್ ನೀಡುವ ಸಾಧ್ಯತೆ ಇದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ತನ್ನ ಪಂಚ್ EV ಬೆಲೆಯನ್ನು ರೂ 12 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುಮಾಡಬಹುದು. ಇದು ಸಿಟ್ರೋನ್ eC3 ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ಗೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಬರಲಿದೆ.
-
ಭಾರತದಲ್ಲಿರುವ ಎಲೆಕ್ಟ್ರಿಕ್ ಕಾರುಗಳು
ಇನ್ನಷ್ಟು ಓದಿ: ಪಂಚ್ AMT