Maruti Jimny ವರ್ಸಸ್‌ Mahindra Thar; ಯಾವ ಎಸ್‌ಯುವಿ ಕಡಿಮೆ ವೈಟಿಂಗ್‌ ಪಿರೇಡ್‌ನ ಹೊಂದಿದೆ ?

modified on ಏಪ್ರಿಲ್ 17, 2024 12:08 pm by shreyash for ಮಹೀಂದ್ರ ಥಾರ್‌

  • 45 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾ ಥಾರ್‌ಗೆ ಹೋಲಿಸಿದರೆ, ಕೆಲವು ನಗರಗಳಲ್ಲಿ ಮಾರುತಿ ಜಿಮ್ನಿಯು ಬಹಳ ಬೇಗನೆ ಡೆಲಿವೆರಿಯನ್ನು ಪಡೆಯಬಹುದು

Mahindra Thar and Maruti Jimny

ನೀವು ಈ ಏಪ್ರಿಲ್‌ನಲ್ಲಿ ಮಾಸ್-ಮಾರ್ಕೆಟ್ ಆಫ್‌ರೋಡ್ ಎಸ್‌ಯುವಿಯನ್ನು ಬುಕ್ ಮಾಡಲು ಯೋಜಿಸುತ್ತಿದ್ದರೆ, ನೀವು ಮಹೀಂದ್ರಾ ಥಾರ್ ಅಥವಾ ಮಾರುತಿ ಜಿಮ್ನಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ನಿಮ್ಮ ಸ್ಥಳ ಮತ್ತು ಆಯ್ಕೆಯ ಆವೃತ್ತಿಯನ್ನು ಅವಲಂಬಿಸಿ, ವಿಶೇಷವಾಗಿ ಮಹೀಂದ್ರ ಥಾರ್‌ಗಾಗಿ ನೀವು ಹೆಚ್ಚಿನ ವೈಟಿಂಗ್‌ ಪಿರೇಡ್‌ ಅನ್ನು ಎದುರಿಸಬಹುದು. ಈ ಸುದ್ದಿಯಲ್ಲಿ, ನಾವು ಭಾರತದ ಟಾಪ್‌ 20 ನಗರಗಳಲ್ಲಿ ಎರಡು ಆಫ್ ರೋಡ್ ಎಸ್‌ಯುವಿಗಳ ವೈಟಿಂಗ್‌ ಪಿರೇಡ್‌ ಅನ್ನು ಹೋಲಿಸಿದ್ದೇವೆ.

ವೈಟಿಂಗ್‌ ಪಿರೇಡ್‌ ಟೇಬಲ್‌

ನಗರ 

ಮಹೀಂದ್ರಾ ಥಾರ್‌

ಮಾರುತಿ ಜಿಮ್ನಿ

ನವದೆಹಲಿ

3 ತಿಂಗಳು

1 ತಿಂಗಳು

ಬೆಂಗಳೂರು

4 ತಿಂಗಳು

1-2 ತಿಂಗಳು

ಮುಂಬೈ

2-4 ತಿಂಗಳು

2-3 ತಿಂಗಳು

ಹೈದರಾಬಾದ್

3 ತಿಂಗಳು

1 ತಿಂಗಳು

ಪುಣೆ

4 ತಿಂಗಳು

2 ತಿಂಗಳು

ಚೆನ್ನೈ

4 ತಿಂಗಳು

2 ತಿಂಗಳು

ಜೈಪುರ

2-4 ತಿಂಗಳು

0.5 ತಿಂಗಳು

ಅಹಮದಾಬಾದ್

4 ತಿಂಗಳು

ಕಾಯಬೇಕಾಗಿಲ್ಲ

ಗುರುಗ್ರಾಮ್

4 ತಿಂಗಳು

1 ತಿಂಗಳು

ಲಕ್ನೋ

2-4 ತಿಂಗಳು

2 ತಿಂಗಳು

ಕೋಲ್ಕತ್ತಾ

2-4 ತಿಂಗಳು

1-1.5 ತಿಂಗಳು

ಥಾಣೆ

2-4 ತಿಂಗಳು

2 ತಿಂಗಳು

ಸೂರತ್

4 ತಿಂಗಳು

ಕಾಯಬೇಕಾಗಿಲ್ಲ

ಗಾಜಿಯಾಬಾದ್

4 ತಿಂಗಳು

2-2.5 ತಿಂಗಳು

ಚಂಡೀಗಢ

4 ತಿಂಗಳು

2 ತಿಂಗಳು

ಕೊಯಮತ್ತೂರು

3 ತಿಂಗಳು

2-2.5 ತಿಂಗಳು

ಪಾಟ್ನಾ

4 ತಿಂಗಳು

2-2.5 ತಿಂಗಳು

ಫರಿದಾಬಾದ್

2-4 ತಿಂಗಳು

2 ತಿಂಗಳು

ಇಂದೋರ್

3-3.5 ತಿಂಗಳು

0.5 ತಿಂಗಳು

ನೋಯ್ಡಾ

2-4 ತಿಂಗಳು

1-2 ತಿಂಗಳು

ಗಮನಿಸಬೇಕಾದ ಪ್ರಮುಖ ಅಂಶಗಳು

Mahindra Thar 4X2

  •  2024ರ ಏಪ್ರಿಲ್‌ನಲ್ಲಿ ಮಹೀಂದ್ರಾ ಥಾರ್ ನ ಡೆಲಿವರಿ ಪಡೆಯಬೇಕಾದರೆ ಸರಾಸರಿ 4 ತಿಂಗಳವರೆಗೆ ಕಾಯಬೇಕು. ಆದರೆ, ಮುಂಬೈ, ಜೈಪುರ, ಲಕ್ನೋ, ಕೋಲ್ಕತ್ತಾ, ಥಾಣೆ, ಫರಿದಾಬಾದ್ ಮತ್ತು ನೋಯ್ಡಾದಂತಹ ನಗರಗಳಲ್ಲಿ ಖರೀದಿದಾರರು ಕೇವಲ 2 ತಿಂಗಳ ಒಳಗೆ ಥಾರ್‌ ಅನ್ನು ತಮ್ಮ ಮನೆಗೆ ಕೊಂಡೊಯ್ಯಬಹುದು.  

  • 3-ಡೋರ್ ಥಾರ್‌ಗೆ ಹೋಲಿಸಿದರೆ, ಮಾರುತಿ ಜಿಮ್ನಿಯನ್ನು ನಮ್ಮ ಮನೆಗೆ ಕೊಂಡೊಯ್ಯಲು ಸರಾಸರಿ 1.5 ತಿಂಗಳವರೆಗೆ ಕಾಯಬೇಕಾಗುತ್ತದೆ. ಜೈಪುರ ಮತ್ತು ಇಂದೋರ್‌ನಲ್ಲಿ ಈ ಎಸ್‌ಯುವಿಯನ್ನು ಬುಕ್ ಮಾಡುವ ಗ್ರಾಹಕರು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಡೆಲಿವರಿ ಪಡೆಯಬಹುದು. ಅಹಮದಾಬಾದ್ ಮತ್ತು ಸೂರತ್‌ನಲ್ಲಿ, ಮಾರುತಿ ಜಿಮ್ನಿಗಾಗಿ ಕಾಯಬೇಕಾಗಿಯೇ ಇಲ್ಲ. 

Maruti Jimny

  • ಹಾಗೆಯೇ, ನೀವು ಗಾಜಿಯಾಬಾದ್, ಕೊಯಮತ್ತೂರು ಮತ್ತು ಪಾಟ್ನಾದಲ್ಲಿ ವಾಸಿಸುತ್ತಿದ್ದರೆ ಮಾರುತಿ ಜಿಮ್ನಿಯು ನಿಮ್ಮ ಕೈ ಸೇರಲು 2 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

  • ಒಂದು ವೇಳೆ ನೀವು ಹೆಚ್ಚು ಪ್ರಾಯೋಗಿಕ ಆಫ್-ರೋಡ್ ಎಸ್‌ಯುವಿಯನ್ನು ಖರೀದಿಸಲು ಇಚ್ಚಿಸುವುದಾದರೆ, ಹೆಚ್ಚಿನ ಬೆಲೆಯಲ್ಲಿ, ನೀವು ಆಗಸ್ಟ್ 15 ರಂದು ಮಹೀಂದ್ರ ಥಾರ್ 5-ಡೋರ್ ಬಿಡುಗಡೆಗಾಗಿ ಕಾಯಬಹುದು.

ಗಮನಿಸಿ: ಪ್ರತಿ ಮೊಡೆಲ್‌ನ ಮೇಲೆ ತಿಳಿಸಲಾದ ವೈಟಿಂಗ್‌ ಪಿರೇಡ್‌ ರಾಜ್ಯ, ನಗರ ಮತ್ತು ಆಯ್ಕೆ ಮಾಡಿದ ಆವೃತ್ತಿ ಅಥವಾ ಬಣ್ಣವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

ಪವರ್‌ಟ್ರೇನ್‌ಗಳು

ಮಹೀಂದ್ರ ಥಾರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಆದರೆ ಮಾರುತಿ ಜಿಮ್ನಿ ಒಂದೇ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ. ಅವರ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

ವಿಶೇಷಣಗಳು

ಮಹೀಂದ್ರಾ ಥಾರ್

ಮಾರುತಿ ಜಿಮ್ನಿ

ಇಂಜಿನ್

1.5-ಲೀಟರ್ ಡೀಸೆಲ್

2-ಲೀಟರ್ ಟರ್ಬೊ-ಪೆಟ್ರೋಲ್

2.2-ಲೀಟರ್ ಡೀಸೆಲ್

1.5-ಲೀಟರ್ ಪೆಟ್ರೋಲ್

ಪವರ್‌

118 ಪಿಎಸ್‌

152 ಪಿಎಸ್‌

132 ಪಿಎಸ್‌

105 ಪಿಎಸ್‌

ಟಾರ್ಕ್

300 ಎನ್‌ಎಮ್‌

320 ಎನ್‌ಎಮ್‌ ವರೆಗೆ

300 ಎನ್‌ಎಮ್‌

134 ಎನ್‌ಎಮ್‌

ಡ್ರೈವ್ ಟೈಪ್‌

RWD

RWD / 4WD

4WD

4WD

ಟ್ರಾನ್ಸ್‌ಮಿಷನ್‌

6-ಸ್ಪೀಡ್‌ ಮ್ಯಾನುಯಲ್‌ 

6-ಸ್ಪೀಡ್‌ ಮ್ಯಾನುಯಲ್‌ / 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್‌ ಮ್ಯಾನುಯಲ್‌ / 6-ಸ್ಪೀಡ್ ಆಟೋಮ್ಯಾಟಿಕ್‌

5-ಸ್ಪೀಡ್‌ ಮ್ಯಾನುಯಲ್‌ / 4-ಸ್ಪೀಡ್ ಆಟೋಮ್ಯಾಟಿಕ್‌

ಬೆಲೆಗಳು

ಮಹೀಂದ್ರಾ ಥಾರ್

11.25 ಲಕ್ಷದಿಂದ 17.60 ಲಕ್ಷ ರೂ.

12.74 ಲಕ್ಷದಿಂದ 14.95 ಲಕ್ಷ ರೂ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ

ಈ ಎರಡೂ ಆಫ್‌ರೋಡ್ ಎಸ್‌ಯುವಿಗಳು ಫೋರ್ಸ್ ಗೂರ್ಖಾಗೆ ಪ್ರತಿಸ್ಪರ್ಧಿಯಾಗಿವೆ, ಇದು 2024 ರ ಮಧ್ಯದ ವೇಳೆಗೆ ಫೇಸ್‌ಲಿಫ್ಟ್ ಮತ್ತು ಹೊಸ 5-ಡೋರ್ ಆವೃತ್ತಿಯನ್ನು ಪಡೆಯಲಿದೆ. ಈ ಎರಡೂ ಎಸ್‌ಯುವಿಗಳನ್ನು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕೆಲವು ಮೊನೊಕೊಕ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಒರಟಾದ ಪರ್ಯಾಯವಾಗಿ ಪರಿಗಣಿಸಬಹುದು.

ಇನ್ನಷ್ಟು ಓದಿ : ಮಹೀಂದ್ರಾ ಥಾರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಥಾರ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience