Login or Register ಅತ್ಯುತ್ತಮ CarDekho experience ಗೆ
Login

ಈ ಬಾರಿಯ ಹಬ್ಬಗಳ ಸೊಬಗು ಹೆಚ್ಚಿಸಲು ಬರಲಿವೆ ಐದು ಹೊಸ ಎಸ್‌ಯುವಿ ಗಳು

ಆಗಸ್ಟ್‌ 16, 2023 04:26 pm rohit ಮೂಲಕ ಮಾರ್ಪಡಿಸಲಾಗಿದೆ
27 Views

ಹೊಸ ಬಿಡುಗಡೆಗಳ ಭಾಗವಾಗಿ, ಈ ಹಬ್ಬಗಳ ಸಮಯದಲ್ಲಿ, ಟಾಟಾ ಹೋಂಡಾ ಮತ್ತು ಇತರವುಗಳಿಂದ ಹೊಚ್ಚ ಹೊಸ ಕಾರುಗಳನ್ನು ನಿರೀಕ್ಷಿಸಿ

ಹಬ್ಬಗಳ ಸಮಯವು ಅತ್ಯಂತ ಉಲ್ಲಾಸದಾಯಕ, ಅದರಲ್ಲೂ ನೀವು ಕಾರು ಪ್ರಿಯರಾಗಿದ್ದರೆ, ಈ ಸಂತೋಷವು ದುಪ್ಪಟ್ಟುಗೊಳ್ಳುತ್ತದೆ. ಈ ವರ್ಷದಲ್ಲೂ, ಅಂದರೆ 2023ರ ಮುಂಬರುವ ತಿಂಗಳುಗಳಲ್ಲಿ SUV ವರ್ಗಕ್ಕೆ ಸೇರಿದ ಅನೇಕ ಹೊಸ ಕಾರುಗಳ ಬಿಡುಗಡೆಯಾಗಲಿದೆ. ಈ ಹಬ್ಬಗಳ ಸಮಯದಲ್ಲಿ ಬಿಡುಗಡೆಯಾಲು ಸಿದ್ಧವಿರುವ ಟಾಪ್ ಐದು SUVಗಳು ಯಾವುವು ಎಂಬುದನ್ನು ಪರಿಶೀಲಿಸೋಣ:

ಹೋಂಡಾ ಎಲಿವೇಟ್

ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೋಂಡಾ ಎಲಿವೇಟ್ ಕಾರು ತಯಾರಕರ ಪ್ರವೇಶ ಹಂತದ ಕಾರು ಆಗಿದೆ. ಇದು ಹೋಂಡಾ ಸಿಟಿಯ ಆಧಾರವಾಗಿದ್ದು ಭಾರತದಲ್ಲಿ ಕೆಲವು ತಿಂಗಳ ಹಿಂದೆ ಪಾದಾರ್ಪಣೆ ಮಾಡಿದೆ. ಹೋಂಡಾ ಈಗಾಗಲೇ ತನ್ನ SUVಯ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ರೂ 5,000 ಕ್ಕೆ ಬುಕಿಂಗ್ ಅನ್ನೂ ಪ್ರಾರಂಭಿಸಿದೆ. ಇದು ರೂ 11 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯ ನಿರೀಕ್ಷೆಯೊಂದಿಗೆ ಸೆಪ್ಟೆಂಬರ್‌ನಲ್ಲಿ ಮಾರಾಟಕ್ಕೆ ಬರಲಿದೆ.

ಇದು ಕಾಂಪ್ಯಾಕ್ಟ್ ಸೆಡಾನ್‌ನ ಅದೇ 6-ಸ್ಪೀಡ್ ಮ್ಯಾನುವಲ್ ಮತ್ತು CVT ಟ್ರಾನ್ಸ್‌ಮಿಷನ್‌ ಆಯ್ಕೆಗಳೊಂದಿಗೆ 1.5-ಲೀಟರ್ ಪೆಟ್ರೋಲ್ ಪವರ್‌ಟ್ರೇನ್ (121PS/145Nm) ಅನ್ನು ಪಡೆದಿದೆ. ಎಲಿವೇಟ್‌ನ EV ಉತ್ಪನ್ನವು ಕಾರ್ಯಗತಿಯಲ್ಲಿದ್ದು ಇದನ್ನು 2026 ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೋಂಡಾ ದೃಢಪಡಿಸಿದೆ. ಪ್ರಮುಖ ಫೀಚರ್‌ಗಳು 10.25-ಇಂಚು ಟಚ್‌ಸ್ಕ್ರೀನ್, ಸಿಂಗಲ್-ಪೇನ್ ಸನ್‌ರೂಫ್, ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಸುರಕ್ಷತಾ ತಂತ್ರಜ್ಞಾನವು, ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು ಮತ್ತು ಎರಡು ಕ್ಯಾಮರಾಗಳನ್ನು (ಒಂದು ಎಡಬದಿಯ ORVM ಮೇಲೆ ಮತ್ತು ಇನ್ನೊಂದು ಹಿಂಭಾಗದ ಪಾರ್ಕಿಂಗ್ ಯೂನಿಟ್‌ನಲ್ಲಿ) ಒಳಗೊಂಡಿದೆ.

ಸಿಟ್ರಾನ್ C3 ಏರ್‌ಕ್ರಾಸ್

ಭಾರತದ ಲೈನ್‌ಅಪ್‌ನಲ್ಲಿ, ನಾಲ್ಕನೇ ಮಾಡೆಲ್ ಆಗಿರುವ C5 ಏರ್‌ಕ್ರಾಸ್ ನಂತರ ಸಿಟ್ರಾನ್ C3 ಏರ್‌ಕ್ರಾಸ್, ಫ್ರೆಂಚ್ ಮಾರ್ಕ್‌ ನಂತರದ ಎರಡನೇ SUV ಆಗಿದೆ. ಇದು C3 ಕ್ರಾಸ್‌ಓವರ್‌ ಹ್ಯಾಚ್‌ಬ್ಯಾಕ್ ಆಧಾರಿತವಾಗಿದ್ದು ತುಸು ಉದ್ದವಾಗಿದೆ ಮತ್ತು ಇದನ್ನು 5- ಮತ್ತು 7-ಸೀಟರ್ ಲೇಔಟ್‌ ಎರಡರಲ್ಲಿಯೂ ಮಾರಾಟ ಮಾಡಲಾಗುತ್ತದೆ. ಇದರ ಬುಕಿಂಗ್‌ಗಳು ಸೆಪ್ಟೆಂಬರ್‌ನಲ್ಲಿ ತೆರೆದುಕೊಳ್ಳಲಿದ್ದು,ರೂ 11 ಲಕ್ಷ ಆರಂಭಿಕ ಬೆಲೆಯ ನಿರೀಕ್ಷೆಯೊಂದಿಗೆ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ.

C3 ಏರ್‌ಕ್ರಾಸ್ 1.2-ಲೀಟರ್ ಪೆಟ್ರೋಲ್ ಇಂಜಿನ್ ನ್ನು C3 ಇಂದ ಪಡೆದಿದ್ದು 110PS ಅನ್ನು 190Nm ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಜೋಡಿಸಲಾಗಿದ್ದು, ಆಟೋಮ್ಯಾಟಿಕ್ ನಂತರ ಬರಲಿದೆ.ಇದು ಪ್ರವೇಶಹಂತದ ಸಾಧನಗಳನ್ನು ಪಡೆದಿದ್ದರೂ, 10-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್, 7-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಮ್ಯಾನುವಲ್ ACಯಂಥ ಅವಶ್ಯಕ ಫೀಚರ್‌ಗಳನ್ನು ಪಡೆದಿದೆ.ಇದರ ಸುರಕ್ಷತಾ ಕಿಟ್ ಎರಡು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.

ಇದನ್ನೂ ಓದಿ: ಫ್ಯಾನ್ಸಿಯಾದ ವಿಹಂಗಮ ಸನ್‌ರೂಫ್ ಬಯಸುತ್ತೀರಾ? 20 ಲಕ್ಷದ ಕೆಳಗಿನ ಈ 10 ಕಾರುಗಳು ಪಡೆಯಲಿವೆ ಈ ಫೀಚರ್

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್

ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಅತ್ಯಂತ ಪರಿಷ್ಕೃತ ಟಾಟಾ ನೆಕ್ಸಾನ್ ಅನ್ನು ನೋಡಲಿದ್ದೇವೆ. ಇದರ ಪರೀಕ್ಷೆ ಮಾಡುವ ವೇಳೆಯಲ್ಲಿ ಅನೇಕ ಬಾರಿ ಇದನ್ನು ಸ್ಪೈ ಮಾಡಲಾಗಿದ್ದು, ಇತ್ತೀಚಿನ ಸ್ಪೈ ಶಾಟ್‌ಗಳು ಕೂಡಾ ಉತ್ಪಾದನೆ ಸಿದ್ಧವಿರುವುದರ ಸುಳಿವು ನೀಡಿದೆ. ಈ ನವೀಕೃತ ಟಾಟಾ ನೆಕ್ಸಾನ್ ಬೆಲೆಯು ರೂ 8 ಲಕ್ಷದಿಂದ (ಎಕ್ಸ್-ಶೋರೂಂ)‌ ಪ್ರಾರಂಭವಾಗುವ ನಿರೀಕ್ಷೆ ಇದೆ.

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (ಸಬ್-4m SUVಯ ಎರಡನೇ ಪ್ರಮುಖ ಮಧ್ಯಂತರ ಅಪ್‌ಡೇಟ್) ಒಳಗೆ ಮತ್ತು ಹೊರಗೆ ಹೊಸ ಡಿಸೈನ್ ಅನ್ನು ಪಡೆದಿದ್ದು, ಇದನ್ನು ಹೆಚ್ಚು ಸ್ಫುಟವಾಗಿ ಮತ್ತು ದುಬಾರಿಯಾಗಿಸಿದೆ. ಇದು ಪ್ರಸ್ತುತ ಇರುವ ಮಾಡೆಲ್‌ನ 1.5-ಲೀಟರ್ ಡೀಸೆಲ್ ಇಂಜಿನ್ ಮಾತ್ರವಲ್ಲದೇ ಹೊಸ 1.2-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ ಅನ್ನೂ ಪಡೆದಿದೆ. ಇದು ಮ್ಯಾನುವಲ್, AMT ಮತ್ತು DCT ಆಯ್ಕೆಗಳನ್ನು ಪಡೆಯುವ ಸಾಧ್ಯತೆ ಇದೆ. ಪಟ್ಟಿಯಲ್ಲಿರುವ ಫೀಚರ್‌ಗಳೆಂದರೆ 10.25-ಇಂಚು ಟಚ್‌ಸ್ಕ್ರೀನ್, ವಾತಾಯನದ ಮುಂಭಾಗದ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ. ಟಾಟಾ ಇದಕ್ಕೆ 360-ಡಿಗ್ರಿ ಕ್ಯಾಮರಾ, ಆರರ ತನಕದ ಏರ್‌ಬ್ಯಾಗ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳನ್ನು ನೀಡಿರುವ ಸಾದ್ಯತೆ ಇದೆ.

ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್

ಚಿತ್ರದ ಮೂಲ

ಅಪ್‌ಡೇಟ್ ಮಾಡಲಾದ ಇಂಟರ್ನಲ್ ಕಂಬಶನ್ ಇಂಜಿನ್‌ (ICE) ಹೊಂದಿರುವ ಟಾಟಾ ನೆಕ್ಸಾನ್‌ನೊಂದಿಗೆ ಕಾರು ತಯಾರಕರು ಇದರ EV ಪ್ರತಿರೂಪಕ್ಕಾಗಿ ಸಮಗ್ರ ಮೇಕ್ ಓವರ್ ಅನ್ನು ಹೊರತರಲಿದ್ದಾರೆ. ಹೊಸ ನೆಕ್ಸಾನ್ EV ಹೊಸ ನೆಕ್ಸಾನ್ ಬೆಲೆ ಸೂ 15 ಲಕ್ಷಕ್ಕೆ (ಎಕ್ಸ್-ಶೋರೂಂ) ಏರುವಾಗ ಮಾರಾಟಕ್ಕೆ ಬರಬಹುದೆಂಬುದು ನಮ್ಮ ನಿರೀಕ್ಷೆಯಾಗಿದೆ.

ಪ್ರಸ್ತುತ ಇರುವ ಮಾಡೆಲ್‌ಗಳಲ್ಲಿ ಕಾಣುವಂತೆ ಇದು ಸಂಪೂರ್ಣ ಇಲೆಕ್ಟ್ರಿಕ್ ಎಂಬುದನ್ನು ಸೂಚಿಸಲು ಕೆಲವು ನಿರ್ದಿಷ್ಟ ಬದಲವಾಣೆಗಳ ಜೊತೆಗೆ ಇದು ICE ಆವೃತ್ತಿಯ ಕಾಸ್ಮೆಟಿಕ್ ಪರಿಷ್ಕಾರಗಳನ್ನು ಪಡೆದಿದೆ. ಅಪ್‌ಡೇಟ್‌ ಮಾಡಲಾದ ನೆಕ್ಸಾನ್ EVಯನ್ನು ಟಾಟಾ ಮೊದಲಿನ ಎರಡು ಆವೃತ್ತಿಗಳಲ್ಲೇ ನೀಡಬಹುದೆಂಬುದು ನಮ್ಮ ಅನಿಸಿಕೆ, ಅವುಗಳು : ಪ್ರೈಮ್ (30.2kWh ಬ್ಯಾಟರಿ ಪ್ಯಾಕ್; 312km ರೇಂಜ್) ಮತ್ತು Max (40.5kWh ಬ್ಯಾಟರಿ ಪ್ಯಾಕ್; 453km ರೇಂಜ್). ಇದು 10.25 ಇಂಚು ಟಚ್‌ಸ್ಕ್ರೀನ್, ಬ್ಯಾಟರಿ ಮರುಪೂರಣಕ್ಕಾಗಿ ಪ್ಯಾಡಲ್ ಶಿಫ್ಟರ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್ ಮುಂತಾದ ಫೀಚರ್‌ಗಳನ್ನು ಪಡೆದಿದೆ. ಆರರ ತನಕದ ಏರ್‌ಬ್ಯಾಗ್‌ಗಳು ಮತ್ತು ಸುರಕ್ಷತಾ 360-ಡಿಗ್ರಿ ಕ್ಯಾಮರಾ ಮತ್ತು ಮೊದಲಿದ್ದಂತಹ ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ಸುರಕ್ಷತೆಯು ವರ್ಧಿಸಿದೆ.

ಇದನ್ನೂ ಓದಿ: 1 ಲಕ್ಷಕ್ಕೂ ಮೀರಿದೆ, ನೆಕ್ಸಾನ್ EV, ಟಿಯಾಗೋ EV ಮತ್ತು ಟಿಗಾರ್ EV ಸೇರಿದಂತೆ ಟಾಟಾ EVಗಳ ಮಾರಾಟ

5-ಡೋರ್ ಫೋರ್ಸ್ ಗುರ್ಖಾ

ದೀರ್ಘ ಸಮಯದಿಂದ ಆಗಮನಕ್ಕಾಗಿ ಕಾಯುತ್ತಿರುವ ಇನ್ನೊಂದು SUV ಈ 5-ಡೋರ್ ಫೋರ್ಸ್ ಗುರ್ಖಾ. ಇದರ ಪರೀಕ್ಷೆ 2022ರ ಪ್ರಾರಂಭದಲ್ಲೇ ನಡೆದಿದ್ದು, ಇದನ್ನು ಟ್ರಯಲ್‌ನಲ್ಲಿರುವಾಗ ಅನೇಕ ಬಾರಿ ಗುರುತಿಸಲಾಗಿದೆ. ಇದು ಈ ಹಬ್ಬದ ಸಂದರ್ಭದಲ್ಲಿ ಮಾರಾಟಕ್ಕೆ ಬರಬಹುದು ಮತ್ತು ಬೆಲೆಗಳು ರೂ 16 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.

ಇತ್ತೀಚಿನ ನೋಟಗಳು ಇದರ 5-ಡೋರ್ ಆವೃತ್ತಿಗಳು 3-ಸಾಲಿನ ಕಾನ್ಫಿಗರೇಷನ್‌ನೊಂದಿಗೆ ಎರಡನೇ ಮತ್ತು ಮೂರನೇ ಸಾಲಿನಲ್ಲಿ ಕ್ರಮವಾಗಿ ಬೆಂಚ್ ಸೀಟುಗಳು ಕ್ಯಾಪ್ಟನ್ ಸೀಟುಗಳು ಇರುವುದನ್ನು ಸೂಚಿಸಿವೆ. ಇತರ ಅಪ್‌ಡೇಟ್‌ಗಳೆಂದರೆ, ಪರಿಷ್ಕೃತ ಲೈಟಿಂಗ್ ಸೆಟಪ್ ಮತ್ತು ದೊಡ್ಡದಾದ 18-ಇಂಚು ಅಲಾಯ್ ವ್ಹೀಲ್‌ಗಳು. ಈ 5-ಡೋರ್ ಗುರ್ಖಾ, 3-ಡೋರ್ ಮಾಡೆಲ್‌ನಲ್ಲಿರುವ ಅದೇ 2.6-ಲೀಟರ್ ಡೀಸೆಲ್ ಇಂಜಿನ್ (90PS/250Nm) ಅನ್ನು ಪಡೆಯಲಿದ್ದು, ತುಸು ಉನ್ನತ ದರ್ಜೆಯದ್ದಾಗಿರಬಹುದು. ಇದು ಮೊದಲಿನ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ವ್ಹೀಲ್ ಡ್ರೈವ್‌ಟ್ರೇನ್ ಅನ್ನು ಸ್ಟಾಂಡರ್ಡ್ ಆಗಿ ಪಡೆಯಲಿದೆ. ನಿರೀಕ್ಷಿತ ಸಾಧನಗಳೆಂದರೆ, 7-ಇಂಚು ಟಚ್‌ಸ್ಕ್ರೀನ್, ಮೊದಲನೇ ಮತ್ತು ಎರಡನೇ ಸಾಲಿನ ಪವರ್‌ವಿಂಡೋಗಳು ಮತ್ತು ಮ್ಯಾನುವಲ್ AC. ಫೋರ್ಸ್ ಇದಕ್ಕೆ, ಎರಡು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ನೀಡಿರುವ ಸಾಧ್ಯತೆ ಇದೆ.

ಇವುಗಳು ಈ ಹಬ್ಬದ ಸಂದರ್ಭದಲ್ಲಿ ನಾವು ಆಗಮನಕ್ಕಾಗಿ ನಿರೀಕ್ಷಿಸುವ SUVಗಳಾಗಿವೆ. ನೀವು ಯಾವುದನ್ನು ಬಯಸುತ್ತೀರಿ ಮತ್ತು ಯಾಕೆ ಎಂಬುದನ್ನು ಕಮೆಂಟ್‌ಗಳ ಮೂಲಕ ನಮಗೆ ತಳಿಸಿ.

ಇದನ್ನೂ ಓದಿ: ಇಲ್ಲಿವೆ ನಿಮ್ಮ ಜೇಬಿಗೂ ಹಗುರವಾಗಿರುವ ಮತ್ತು 10 ಅತ್ಯಂತ ಸುಸಜ್ಜಿತ CNG ಕಾರುಗಳು

Share via

Write your Comment on Honda ಇಲೆವಟ್

explore similar ಕಾರುಗಳು

ಹೊಂಡಾ ಇಲೆವಟ್

4.4468 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್16.92 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ