Login or Register ಅತ್ಯುತ್ತಮ CarDekho experience ಗೆ
Login

ದೀಪಾವಳಿಯ ಸಂದರ್ಭದಲ್ಲಿ ಈ 7 ಎಸ್‌ಯುವಿಗಳ ಮೇಲೆ ಅತ್ಯಧಿಕ ರಿಯಾಯಿತಿ..!

published on ನವೆಂಬರ್ 09, 2023 07:40 pm by rohit for ಮಹೀಂದ್ರ ಎಕ್ಸ್‌ಯುವಿ 400 ಇವಿ

ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಅತ್ಯಧಿಕ ಪ್ರಯೋಜನ ಲಭಿಸುತ್ತಿದ್ದು, ಮಹೀಂದ್ರಾ XUV400 ವಾಹನದ ಮೇಲೆ 3.5 ಲಕ್ಷ ರೂ.ನಷ್ಟು ರಿಯಾಯಿತಿಯನ್ನು ನೀಡಿದರೆ, ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ ಕಾರಿನಲ್ಲಿ ರೂ. 2 ಲಕ್ಷದಷ್ಟು ಒಟ್ಟು ರಿಯಾಯಿತಿ ದೊರೆಯುತ್ತಿದೆ

ಒಂದು ವೇಳೆ ಈ ದೀಪಾವಳಿಯ ಸಮಯದಲ್ಲಿ ಸಾಕಷ್ಟು ರಿಯಾಯಿತಿಯೊಂದಿಗೆ ಹೊಸ SUVಯನ್ನು ಖರೀದಿಸಲು ನೀವು ಕಾಯುತ್ತಿದ್ದರೆ ಈ ಆಯ್ಕೆಯು ನಿಮಗೆ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ದೊರೆಯದೆ ಇರಬಹುದು. ಆದರೆ ಬೇರೆ ಬೇರೆ ಗಾತ್ರಗಳು ಮತ್ತು ಬೆಲೆಗಳಲ್ಲಿ ದೊರೆಯುತ್ತಿರುವ ಅನೇಕ SUV ಗಳು ಈ ಹಬ್ಬದ ಋತುವಿನಲ್ಲಿ ಸಾಕಷ್ಟು ರಿಯಾಯಿತಿಯೊಂದಿಗೆ ಲಭಿಸಲಿವೆ. ಒಂದು ವೇಳೆ ಈ ದೀಪಾವಳಿಯ ಸಂದರ್ಭದಲ್ಲಿ ಹೊಸ SUV ಯನ್ನು ಖರೀದಿಸುವ ಯೋಜನೆಯನ್ನು ನೀವು ಹೊಂದಿದ್ದರೆ, ಈ ಶುಭ ಸಂದರ್ಭದಲ್ಲಿ ಅತ್ಯಧಿಕ ರಿಯಾಯಿತಿಗಳನ್ನು ನೀಡುತ್ತಿರುವ 7 SUV ಗಳ ಪಟ್ಟಿಯು ಇಲ್ಲಿದೆ:

ಮಹೀಂದ್ರಾ XUV400

  • ಮಹೀಂದ್ರಾ XUV400 ಕಾರಿನ ಸುರಕ್ಷತಾ ಸೌಲಭ್ಯಗಳನ್ನು 2023ರ ಆಗಸ್ಟ್‌ ತಿಂಗಳಿನಲ್ಲಿ ಪರಿಷ್ಕರಿಸಲಾಗಿದ್ದು ಇದರ ಪರಿಣಾಮವಾಗಿ ಬೆಲೆಯಲ್ಲಿ ರೂ. 20,000ದಷ್ಟು ಹೆಚ್ಚಳ ಉಂಟಾಗಿತ್ತು. ಪರಿಷ್ಕರಣೆಗೆ ಮೊದಲ ಮಾದರಿಯ ಹಳೆಯ ಕಾರುಗಳನ್ನು ರೂ. 3.5 ಲಕ್ಷದಷ್ಟು ಗರಿಷ್ಠ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದ್ದು, ಪರಿಷ್ಕೃತ ವಾಹನವು ರೂ. 3 ಲಕ್ಷದಷ್ಟು ರಿಯಾಯಿತಿಯನ್ನು ಮಾತ್ರವೇ ಪಡೆಯಲಿದೆ.
  • ಈ ಉಳಿತಾಯಗಳು ದೀರ್ಘ ಶ್ರೇಣಿಯ EL ವೇರಿಯಂಟ್‌ ಗಳಿಗೆ ಸಂಬಂಧಿಸಿದ್ದು, ಆರಂಭಿಕ ಹಂತದ ವೇರಿಯಂಟ್‌ ಗಳಲ್ಲಿ ಕೇವಲ ರೂ. 1.5 ಲಕ್ಷದಷ್ಟು ರಿಯಾಯಿತಿ ದೊರೆಯಲಿದೆ.
  • ಈ ಪ್ರಯೋಜನಗಳ ಅಂಗವಾಗಿ ಮಹೀಂದ್ರಾ ಸಂಸ್ಥೆಯು ಉಚಿತ ವಿಮೆ ಮತ್ತು 5 ವರ್ಷಗಳಿಗೆ ಸಮನಾದ ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಹ ನೀಡುತ್ತಿದೆ.
  • ಈ ಎಲೆಕ್ಟ್ರಿಕ್‌ SUVಯು ರೂ. 15.99 ರಿಂದ ರೂ. 19.39 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್

  • ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಈ ದೀಪಾವಳಿಯ ಸಂದರ್ಭದಲ್ಲಿ ರೂ. 2 ಲಕ್ಷದಷ್ಟು ನಗದು ರಿಯಾಯಿತಿಯನ್ನು ಪಡೆಯಲಿದೆ.

  • ಕಳೆದ ಕೆಲವು ತಿಂಗಳುಗಳಿಂದ ಹ್ಯುಂಡೈ ಸಂಸ್ಥೆಯ ಈ ಎಲೆಕ್ಟ್ರಿಕ್‌ SUVಯು ರೂ. ಒಂದು ಲಕ್ಷಕ್ಕಿಂತಲೂ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದ್ದು, ಸೆಪ್ಟೆಂಬರ್‌ ತಿಂಗಳಿನಿಂದ ಇದು ರೂ. 2 ಲಕ್ಷಕ್ಕೆ ತಲುಪಿದೆ.

  • ರೂ. 23.84 ರಿಂದ ರೂ. 24.03 ಲಕ್ಷದ ವರೆಗಿನ ಬೆಲೆಯಲ್ಲಿ ಈ ವಾಹನವು ಲಭ್ಯ.

ಇದನ್ನು ಸಹ ಓದಿರಿ: 490Km ತನಕದ ಶ್ರೇಣಿಯನ್ನು ಹೊಂದಿರುವ ಎರಡನೇ ತಲೆಮಾರಿನ ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ ಕಾರಿನ ಅನಾವರಣ

ಸಿಟ್ರನ್ C5 ಏರ್‌ ಕ್ರಾಸ್‌

  • ಸಿಟ್ರನ್ C5‌ ಏರ್‌ ಕ್ರಾಸ್ ಕಾರನ್ನು ಖರೀದಿಸಲು ಎದುರು ನೋಡುತ್ತಿರುವ ಗ್ರಾಹಕರು ಈ ನವೆಂಬರ್‌ ತಿಂಗಳಿನಲ್ಲಿ ರೂ. 2 ಲಕ್ಷದಷ್ಟು ರಿಯಾಯಿತಿಯನ್ನು ಪಡೆಯಬಹುದು.
  • ಈ SUVಯು 2023ರ ಆರಂಭದಿಂದಲೇ ರೂ. ಒಂದು ಲಕ್ಷಕ್ಕೂ ಹೆಚ್ಚಿನ ಉಳಿತಾಯವನ್ನು ಗ್ರಾಹಕರಿಗೆ ನೀಡುತ್ತಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಇದು ರೂ. 2 ಲಕ್ಷಕ್ಕೆ ತಲುಪಿದೆ.
  • C5 ಏರ್‌ ಕ್ರಾಸ್‌ ಕಾರುಗಳಿಗೆ ಯಾವುದೇ ಹೆಚ್ಚುವರಿ ಕೊಡುಗೆಗಳು ಅಥವಾ ಪ್ರಯೋಜನಗಳು ದೊರೆಯುತ್ತವೆಯೇ ಎಂಬುದನ್ನು ನೋಡಲು ನಿಮ್ಮ ಸಮೀಪದ ಸಿಟ್ರನ್‌ ಡೀಲರ್‌ ಶಿಪ್‌ ಅನ್ನು ಸಂಪರ್ಕಿಸಬಹುದು.
  • ಸಿಟ್ರನ್ ಸಂಸ್ಥೆಯು ಈ ಪ್ರೀಮಿಯಂ SUV ಯನ್ನು ಈಗ ರೂ. 36.91 ರಿಂದ ರೂ. 37.67 ಲಕ್ಷದ ವರೆಗಿನ ಬೆಲೆಯಲ್ಲಿ ಮಾರುತ್ತಿದೆ.

  1. ಫಾಕ್ಸ್‌ ವ್ಯಾಗನ್‌ ಟೈಗುನ್

  • ಫಾಕ್ಸ್‌ ವ್ಯಾಗನ್‌ ಟೈಗುನ್ ವಾಹನದಲ್ಲಿ ಆಸಕ್ತರಾಗಿರುವ ಗ್ರಾಹಕರು ಈ ನವೆಂಬರ್‌ ತಿಂಗಳಿನಲ್ಲಿ ರೂ. 1.85 ಲಕ್ಷದಷ್ಟು ರಿಯಾಯಿತಿಯನ್ನು ಪಡೆಯಬಹುದು.
  • ಈ ಪ್ರೀಮಿಯಂ ಮಿಡ್‌ ಸೈಜ್‌ SUVಯ ಟೆಸ್ಟ್‌ ಡ್ರೈವಿಂಗ್‌ ಮತ್ತು ಬುಕಿಂಗ್‌ ಮಾಡಿದರೆ ಇನ್ನೂ ಹೆಚ್ಚಿನ ಪ್ರಯೋಜನಗಳು ದೊರೆಯಲಿವೆ.
  • ಫಾಕ್ಸ್‌ ವ್ಯಾಗನ್‌ ಸಂಸ್ಥೆಯು ತನ್ನ ಈ ಮುಂಚೂಣಿ ವಾಹನವನ್ನು ರೂ. 35.17 ಲಕ್ಷದಲ್ಲಿ ಮಾರುತ್ತಿದೆ.

  1. MG ಗ್ಲೋಸ್ಟರ್

  • MG ಗ್ಲೋಸ್ಟರ್ ಕಾರಿನಲ್ಲಿ ರೂ. 1.75 ಲಕ್ಷದ ತನಕದ ಪ್ರಯೋಜನಗಳನ್ನು ಪಡೆಯಬಹುದು.
  • ಈ ಫುಲ್‌ ಸೈಜ್ SUVಯು ಡೀಸೆಲ್‌ ಪವರ್‌ ಟ್ರೇನ್‌ ಗಳಲ್ಲಿ ಮಾತ್ರವೇ ಲಭ್ಯವಿದ್ದು, ಬ್ಲ್ಯಾಕ್ಡ್‌ ಔಟ್‌ ಸ್ಟೋರ್ಮ್‌ ಆವೃತ್ತಿ ಸೇರಿದಂತೆ ಎರಡು ವೇರಿಯಂಟ್‌ ಗಳಲ್ಲಿ ದೊರೆಯುತ್ತದೆ.
  • MG ಸಂಸ್ಥೆಯು ಗ್ಲೋಸ್ಟರ್ ಅನ್ನು ರೂ. 38.80 ರಿಂದ ರೂ. 43.87 ಲಕ್ಷದ ವರೆಗಿನ ಬೆಲೆಯಲ್ಲಿ ಮಾರುತ್ತಿದೆ.

ಇದನ್ನು ಸಹ ನೋಡಿರಿ: ಕಾರ್‌ ದೇಖೊ ಮೂಲಕ ನಿಮ್ಮ ಬಾಕಿ ಇರುವ ಚಲನ್‌ ಗಳನ್ನು ಪಾವತಿಸಿರಿ

  1. MG ಆಸ್ಟರ್‌

  • ಈ ದೀಪಾವಳಿಯ ಸಂದರ್ಭದಲ್ಲಿ MG ಆಸ್ಟರ್ ಕಾರನ್ನು ಖರೀದಿಸಲು ನೀವು ನಿರ್ಧರಿಸಿದರೆ ನೀವು ರೂ. 1.75 ಲಕ್ಷದ ತನಕದ ರಿಯಾಯಿತಿಗಳನ್ನು ಪಡೆಯಬಹುದು.
  • ಈ ಕಾಂಪ್ಯಾಕ್ಟ್ SUV‌ ಯು ಎರಡು ಪೆಟ್ರೋಲ್‌ ಎಂಜಿನ್‌ ಆಯ್ಕೆಗಳಲ್ಲಿ ಮತ್ತು ಬ್ಲ್ಯಾಕ್ಡ್‌ ಔಟ್‌ ಬ್ಲ್ಯಾಕ್‌ ಸ್ಟಾರ್ಮ್‌ ಆವೃತ್ತಿಯೊಂದಿಗೆ ಐದು ವೇರಿಯಂಟ್‌ ಗಳಲ್ಲಿ ಲಭ್ಯ.
  • ಈ ವಾಹನವು ರೂ. 10.82 ರಿಂದ ರೂ. 18.69 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ.

ಇದನ್ನು ಸಹ ಓದಿರಿ: ನೀವು ಈಗಾಗಲೇ ಬುಕ್‌ ಮಾಡಿದರೆ ಈ 5 SUV ಗಳನ್ನು ಈ ದೀಪಾವಳಿ ವೇಳೆ ಮನೆಗೆ ಕೊಂಡೊಯ್ಯಬಹುದು!

  1. ಸ್ಕೋಡಾ ಕುಶಾಕ್

  • ಸ್ಕೋಡಾ ಕುಶಕ್ ಕಾರಿನಲ್ಲಿ ರೂ. 1.5 ಲಕ್ಷದ ತನಕದ ಪ್ರಯೋಜನಗಳನ್ನು ಪಡೆಯಬಹುದು.
  • ಅಕ್ಟೋಬರ್‌ ತಿಂಗಳ ಆರಂಭದಲ್ಲಿಯೇ, ಹಬ್ಬದ ಕೊಡುಗೆಯ ಅಂಗವಾಗಿ ಸ್ಕೋಡಾ ಸಂಸ್ಥೆಯು ಈ SUV ಯ ಬೆಲೆಯನ್ನು ರೂ. 70,000 ದಷ್ಟು ಕಡಿತಗೊಳಿಸಿದೆ.
  • ಈ ದೀಪಾವಳಿಯಲ್ಲಿ ನೀಡಲಾಗುವ ಪ್ರಯೋಜನಗಳ ಅಂಗವಾಗಿ 4-ವರ್ಷ/60,000km ನಷ್ಟು ಉಚಿತ ಪ್ರಮಾಣಿತ ನಿರ್ವಹಣೆ ಪ್ಯಾಕೇಜ್‌ ಅನ್ನು ಸಹ ನೀಡಲಾಗುತ್ತದೆ.

ಗಮನಿಸಿ: ನಿಮ್ಮ ಸ್ಥಳ ಮತ್ತು ಆರಿಸಿಕೊಂಡ ವೇರಿಯಂಟ್‌ ಅನ್ನು ಆಧರಿಸಿ ಎಲ್ಲಾ ಪ್ರಯೋಜನಗಳು ಮತ್ತು ಕೊಡುಗೆಗಳು ಬದಲಾಗಬಹುದು. ನಿಮ್ಮ ನೆಚ್ಚಿನ ಬ್ರಾಂಡ್‌ ಮತ್ತು ಮಾದರಿಯ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ಸಮೀಪದ ಡೀಲರ್‌ ಶಿಪ್‌ ಅನ್ನು ಸಂಪರ್ಕಿಸಲು ನಾವು ವಿನಂತಿಸುತ್ತೇವೆ.

ಇದನ್ನು ಸಹ ನೋಡಿರಿ: ಅಕ್ಟೋಬರ್‌ 2023ರಲ್ಲಿ ಗರಿಷ್ಠ ಮಾರಾಟ ಸಾಧಿಸಿದ 10 ಕಾರುಗಳು: ಮಾರುತಿ, ಹ್ಯುಂಡೈ, ಟಾಟಾ, ಮಹೀಂದ್ರಾ ಇತ್ಯಾದಿ

ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಈ ದೀಪಾವಳಿಯಲ್ಲಿ ಪಡೆಯುವ SUV ಯಾವುದು? ಈ ಮಾದರಿಯನ್ನು ಮೇಲೆ ಉಲ್ಲೇಖಿಸಲಾಗಿದೆಯೇ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ XUV400 EV ಅಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 45 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ XUV400 EV

Read Full News

explore similar ಕಾರುಗಳು

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.60.97 - 65.97 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.53 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ