Login or Register ಅತ್ಯುತ್ತಮ CarDekho experience ಗೆ
Login

ಇಲ್ಲಿವೆ 2023ರ 2ನೇ ತ್ರೈಮಾಸಿಕದಲ್ಲಿ ಪಾದಾರ್ಪಣೆ ಮಾಡಬಹುದಾದ ಟಾಪ್ 10 ಕಾರುಗಳು

published on ಏಪ್ರಿಲ್ 13, 2023 04:57 pm by tarun for ಮಾರುತಿ ಜಿಮ್ನಿ

ಈ ಪಟ್ಟಿಯು ಅತ್ಯಾಕರ್ಷಕ ಹೊಸ ಮಾಡೆಲ್‌ಗಳು, ಪ್ರಮುಖ ನವೀಕರಣಗಳು ಮತ್ತು ಇನ್ನೂ ಹೆಚ್ಚಿನವುಗಳಿಂದ ತುಂಬಿದೆ!

2023ರ ಎರಡನೇ ತ್ರೈಮಾಸಿಕವು ಭಾರತೀಯ ವಾಹನ ಉದ್ಯಮಕ್ಕೆ ಅತ್ಯಾಕರ್ಷಕ ಸಮಯವಾಗಿದೆ! ನಾವು ಅನೇಕ ಹೊಸ SUVಗಳು, ಇಲೆಕ್ಟ್ರಿಕ್ ವಾಹನ, ಹೊಸ ಆವೃತ್ತಿಗಳು ಮತ್ತು ನವೀಕರಣಗಳನ್ನು ಪಟ್ಟಿಯಲ್ಲಿ ಹೊಂದಿದ್ದೇವೆ. ಹೆಚ್ಚಿನ ಎಲ್ಲಾ ತಯಾರಕರು ಏಪ್ರಿಲ್ ಮತ್ತು ಜುಲೈನಲ್ಲಿ ಪಾದಾರ್ಪಣೆಗೆ ಅಥವಾ ಬಿಡುಗಡೆಗೆ ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಬರಲಿರುವ ಮಾಡೆಲ್‌ಗಳ ನಮ್ಮ ಅಗ್ರ ಆಯ್ಕೆಗಳು ಇಲ್ಲಿವೆ:

ಮಾರುತಿ ಫ್ರಾಂಕ್ಸ್

ಬಿಡುಗಡೆ ದಿನಾಂಕ: ಏಪ್ರಿಲ್ ಅಂತ್ಯ

ನಿರೀಕ್ಷಿತ ಬೆಲೆ: ರೂ 8 ಲಕ್ಷದಿಂದ ಪ್ರಾರಂಭ

ಮಾರುತಿಯ ಹೊಚ್ಚ ಹೊಸ SUV ಕ್ರಾಸ್ಓವರ್ ಈ ತಿಂಗಳ ಕೊನೆಯಲ್ಲಿ ಬರಲು ಸಿದ್ಧವಾಗಿದೆ. ಫ್ರಾಂಕ್ಸ್ 1.2-ಲೀಟರ್ ಪೆಟ್ರೋಲ್ ಮತ್ತು1-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ಗಳನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳೆರಡರ ಜೊತೆಗೆ ಪಡೆದಿದೆ. ಫೀಚರ್‌ಗಳ ಪಟ್ಟಿಯಲ್ಲಿ 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಹೆಡ್ಸ್-ಅಪ್ ಡಿಸ್‌ಪ್ಲೇ, ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮರಾವನ್ನು ಹೊಂದಿದೆ. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಾದ ಹ್ಯುಂಡೈ i20 ಮತ್ತು ಟಾಟಾ ಆಲ್ಟ್ರೋಝ್ ಮಾತ್ರವಲ್ಲದೇ ಸಬ್‌ಕಾಂಪ್ಯಾಕ್ಟ್ SUVಗಳಿಗೂ ಪ್ರತಿಸ್ಪರ್ಧಿಯಾಗಿದೆ.

MG ಕಾಮೆಟ್ EV

ಅನಾವರಣ ದಿನಾಂಕ: ಏಪ್ರಿಲ್-ಅಂತ್ಯ

ನಿರೀಕ್ಷಿತ ಬೆಲೆ: ರೂ 10 ಲಕ್ಷದಿಂದ ಪ್ರಾರಂಭ

ಕಾಮೆಟ್ EV ಭಾರತಕ್ಕೆ MGಯ ಐದನೇ ಕಾರು ಆಗಿದ್ದು ಏಪ್ರಿಲ್‌ನಲ್ಲಿ ಇದು ಅನಾವರಣಗೊಳ್ಳಲಿದೆ. ಟಿಯಾಗೋ EV ಮತ್ತು ಸಿಟ್ರನ್ eC3 ಪ್ರತಿಸ್ಪರ್ಧಿಯಾಗಿರುವ ಇದು ಸಣ್ಣ 2-ಡೋರ್‌ನ ಕಾರು ಆಗಿದ್ದು ಇದರಲ್ಲಿ ನಾಲ್ಕು ಜನ ಕುಳಿತುಕೊಳ್ಳಬಹುದಾಗಿದೆ. ಈ ಕಾಮೆಟ್ EV 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರುವ ನಿರೀಕ್ಷೆ ಇದ್ದು 300 ಕಿಲೋಮೀಟರ್‌ ತನಕದ ಕ್ಲೈಮ್ ಮಾಡಲಾದ ರೇಂಜ್ ಹೊಂದಿದೆ. ಫೀಚರ್‌ಗಳ ಪಟ್ಟಿಯಲ್ಲಿ, ಇದು ಟಚ್‌ಸ್ಕ್ರೀನ್ ಸಿಸ್ಟಮ್‌ನಲ್ಲಿ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳನ್ನು, ಇದರೊಂದಿಗೆ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ AC, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಪಡೆದಿದೆ.

ಸಿಟ್ರಾನ್ ಕಾಂಪ್ಯಾಕ್ಟ್ SUV (C3 ಏರ್‌ಕ್ರಾಸ್)

ಅನಾವರಣ ದಿನಾಂಕ- ಏಪ್ರಿಲ್ 27

ನಿರೀಕ್ಷಿತ ಬೆಲೆ- ರೂ 9 ಲಕ್ಷದಿಂದ ಪ್ರಾರಂಭ

ಸಿಟ್ರಾನ್ ತನ್ನ ಹೊಸ SUVಯನ್ನು ಈ ತಿಂಗಳ ಕೊನೆಯಲ್ಲಿ ಬಹಿರಂಗಪಡಿಸಲಿದ್ದು, ಇದು ಕಾಂಪ್ಯಾಕ್ಟ್ SUVಗಳಾದ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಮೂರು-ಸಾಲಿನ SUV ಆಗಿರಲಿದ್ದು, C3 ಹ್ಯಾಚ್‌ಬ್ಯಾಕ್‌ನ ವಿಸ್ತರಿಸಿದ ಆವೃತ್ತಿಯಂತೆ 110PS 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಹೊಂದಿರಲಿದೆ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಯನ್ನು ಹೊಂದಿರುವ ಸಾಧ್ಯತೆ ಇದೆ. ಈ ಸಿಟ್ರಾನ್ ಕಾಂಪ್ಯಾಕ್ಟ್ SUVಯ ಫೀಚರ್‌ಗಳು10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋಮ್ಯಾಟಿಕ್ AC, ಡಿಜಿಟಲ್ ಸ್ಪೀಡೋಮೀಟರ್, ಆರರ ತನಕ ಏರ್‌ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಒಳಗೊಂಡಿರಬಹುದು.

ಮಾರುತಿ ಜಿಮ್ನಿ

ಬಿಡುಗಡೆ ಅವಧಿ- ಮೇ

ನಿರೀಕ್ಷಿತ ಬೆಲೆ- ರೂ 10 ಲಕ್ಷದಿಂದ ಪ್ರಾರಂಭ

ಮಾರುತಿಯ ಬಹುನಿರೀಕ್ಷಿತ ಆಫ್‌-ರೋಡರ್, ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಿ ಕಡೆಗೂ ಈ ಬೇಸಿಗೆಯಲ್ಲಿ ಮಾರಾಟಕ್ಕೆ ಬರಲಿದೆ. ಇದು 103PS 1.5-ಲೀಟರ್ ಪೆಟ್ರೋಲ್ ಇಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳ ಆಯ್ಕೆಯೊಂದಿಗೆ ಬರುತ್ತದೆ. ಈ ಜಿಮ್ನಿಯು ಕಡಿಮೆ ರೇಂಜ್‌ನ ಗೇರ್‌ಬಾಕ್ಸ್‌ನೊಂದಿಗೆ 4WD ಅನ್ನು ಸ್ಟಾಂಡರ್ಡ್ ಆಗಿ ಪಡೆಯುತ್ತದೆ. ಫೀಚರ್‌ಗಳ ಪಟ್ಟಿಯಲ್ಲಿ, ಒಂಭತ್ತು-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರ್ಯೂಸ್ ಕಂಟ್ರೋಲ್, ಆಟೋಮ್ಯಾಟಿಕ್ AC, ಆರರ ತನಕ ಏರ್‌ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಒಳಗೊಂಡಿದೆ.

ಹೋಂಡಾ ಕಾಂಪ್ಯಾಕ್ಟ್ SUV

ಅನಾವರಣ ಅವಧಿ- ಮೇ

ನಿರೀಕ್ಷಿತ ಬೆಲೆ - ರೂ 11 ಲಕ್ಷದಿಂದ ಪ್ರಾರಂಭ

ಕಡೆಗೂ, ಕಾಂಪ್ಯಾಕ್ಟ್ SUV ಯಲ್ಲಿ ಹೋಂಡಾ ಪ್ರವೇಶಿಸುತ್ತಿದ್ದು ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಇತರವುಗಳನ್ನು ಮೀರಿಸಲಿದೆ. ಈ ಹೋಂಡಾ SUV ಆಕರ್ಷಕ ನೋಟಕ್ಕಾಗಿ ದಪ್ಪವಾದ ಬಾಡಿ ಕ್ಲಾಡ್‌ನೊಂದಿಗೆ ನೇರವಾದ ನಿಲುವನ್ನು ಹೊಂದಿರುತ್ತದೆ. ಇದು ಸಿಟಿಯ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯೊಂದಿಗೆ ಬಳಸಬಹುದೆಂಬುದು ನಮ್ಮ ನಿರೀಕ್ಷೆ. ಫೀಚರ್‌ಗಳು, ಇಲೆಕ್ಟ್ರಿಕ್ ಸನ್‌ರೂಫ್, ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ವಾತಾಯನದ ಫ್ರಂಟ್ ಸೀಟುಗಳು, ವೈರ್‌ಲೆಸ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು ಮತ್ತು ರಾಡಾರ್ ಆಧಾರಿತ ADAS ಅನ್ನು ಒಳಗೊಂಡಿದೆ.

ಹೊಚ್ಚ ಹೊಸ ಹ್ಯುಂಡೈ SUV

ಅನಾವರಣ ಅವಧಿ- ಮೇ

ನಿರೀಕ್ಷಿತ ಬೆಲೆ- ರೂ 6 ಲಕ್ಷದಿಂದ ಪ್ರಾರಂಭ

ಹ್ಯುಂಡೈ ತನ್ನ ಹೊಚ್ಚ ಹೊಸ SUV ಅನ್ನು ಭಾರತಕ್ಕೆ ತರಲಿದ್ದು, ಇದು ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಬಹುದೆಂದು ನಾವು ನಿರೀಕ್ಷಿಸುತ್ತೇವೆ. ಈ ಮೈಕ್ರೋ SUV ಗ್ರ್ಯಾಂಡ್ i10 ನಿಯೋಸ್‌ನ 83PS 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು 100PS 1-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್‌ನೊಂದಿಗೆ ಪಡೆದಿರಬಹುದಾದ ಸಾಧ್ಯತೆ ಇದೆ. ಇತರ ಹ್ಯುಂಡೈಗಳಂತೆಯೇ ಈ ಹೊಸ SUV ದೊಡ್ಡದಾದ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರ್ಯೂಸ್ ಕಂಟ್ರೋಲ್, ಆರರ ತನಕ ಏರ್‌ಬ್ಯಾಗ್‌ಗಳು, ಸನ್‌ರೂಫ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾದೊಂದಿಗೆ ಫೀಚರ್‌ಭರಿತವಾಗಿರುವ ಸಂಭವವಿದೆ.

ನವೀಕೃತ ಕಿಯಾ ಸೆಲ್ಟೋಸ್

ಅನಾವರಣ ಅವಧಿ-ಜೂನ್

ನಿರೀಕ್ಷಿತ ಬೆಲೆ- ರೂ 10 ಲಕ್ಷದಿಂದ ಪ್ರಾರಂಭ

ಈ ವರ್ಷದ ದ್ವಿತೀಯಾರ್ಧದ ಮೊದಲು ಕಿಯಾ ನವೀಕೃತ ಸೆಲ್ಟೋಸ್ ಅನ್ನು ಅನಾವರ್ಣಗೊಳಿಸಬಹುದು. ಈ ನವೀಕೃತ ಕಾಂಪ್ಯಾಕ್ಟ್ SUV ಹೊಸ ಗ್ರಿಲ್, ವಿಭಿನ್ನ ಅಲಾಯ್ ವ್ಹೀಲ್‌ಗಳು, ಹೊಸ ಹೆಡ್‌ಲ್ಯಾಂಪ್‌ಗಳು ಹಾಗೂ ಟೈಲ್‌ಲೈಟ್‌ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ತುದಿಗಳೊಂದಿಗೆ ಹೊಸತಾದ ಎಕ್ಸ್‌ಟೀರಿಯರ್ ಡಿಸೈನ್ ಅನ್ನು ಪಡೆದಿರುತ್ತದೆ. ಗ್ಲೋಬಲ್ ಮಾಡೆಲ್‌ನಲ್ಲಿ ಕಾಣುವಂತೆ ಅನೇಕ ಹೊಸ ಫೀಚರ್ ಸೇರ್ಪಡೆಗಳೊಂದಿಗೆ ಕ್ಯಾಬಿನ್ ಕೂಡಾ ತುಸು ಬದಲಾವಣೆಗಳನ್ನು ಪಡೆದಿದೆ. ಮುಖ್ಯವಾಗಿ, ರಾಡಾರ್ ಆಧಾರಿತ ADAS (ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ನೊಂದಿಗೆ ಸುರಕ್ಷತೆಯು ಸುಧಾರಿಸಿರಬಹುದು. ಈ ನವೀಕೃತ ಸೆಲ್ಟೋಸ್ ವರ್ನಾದ 160PS 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಪ್ರಸ್ತುತ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳ ಜೊತೆಗೆ ಪಡೆದಿದೆ.

ಟಾಟಾ ಆಲ್ಟ್ರೋಝ್ CNG

ನಿರೀಕ್ಷಿತ ಬಿಡುಗಡೆ-ಜೂನ್

ನಿರೀಕ್ಷಿತ ಬೆಲೆ- ರೂ 8.5 ಲಕ್ಷದಿಂದ ಪ್ರಾರಂಭ

ಟಾಟಾ ಆಟೋ ಎಕ್ಸ್‌ಪೋ 2023ರಲ್ಲಿ ಆಲ್ಟ್ರೋಝ್ CNG ಯನ್ನು ಅನಾವರಣಗೊಳಿಸಿದ್ದು, ಇದು ಬ್ರ್ಯಾಂಡ್‌ನ ಮಾರುಕಟ್ಟೆಯಲ್ಲಿ ಮೊದಲ ಡ್ಯುಯಲ್-ಸಿಲಿಂಡರ್ ಟ್ಯಾಂಕ್ ಸೆಟಪ್‌ನೊಂದಿಗೆ ಪಾದಾರ್ಪಣೆ ಮಾಡಿದೆ. ಒಂದು ದೊಡ್ಡ CNG ಟ್ಯಾಂಕ್‌ಗೆ ಬದಲಾಗಿ ಎರಡು ಸಣ್ಣವುಗಳನ್ನು ಬಳಸಿರುವುದು ಬೂಟ್ ಸ್ಥಳಾವಕಾಶವನ್ನು ಹೆಚ್ಚಿಸಿದೆ. ಈ ಆಲ್ಟ್ರೋಝ್ CNG 1.2-ಲೀಟರ್ ಪೆಟ್ರೋಲ್ -CNG ಇಂಜಿನ್ ಅನ್ನು ಹೊಂದಿದ್ದು ಗ್ಯಾಸ್‌ನಲ್ಲಿ ಓಡುವಾಗ 77PS ಅನ್ನು ನೀಡುತ್ತದೆ. ಇದರ ಇಂಧನ ದಕ್ಷತೆಯು 25 km/kg ಗಿಂತಲೂ ಹೆಚ್ಚಿರಬಹುದೆಂದು ನಮ್ಮ ನಿರೀಕ್ಷೆಯಾಗಿದೆ. ಫೀಚರ್‌ಗಳ ಬಗ್ಗೆ ಹೇಳುವುದಾದರೆ, ಈ CNG ವೇರಿಯೆಂಟ್‌ಗಳು ಏಳು ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರ್ಯೂಸ್ ಕಂಟ್ರೋಲ್, ಆಟೋ AC, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಹೊಂದಿದೆ.

ಟಾಟಾ ಪಂಚ್ CNG

ನಿರೀಕ್ಷಿತ ಬಿಡುಗಡೆ - ಜೂನ್

ನಿರೀಕ್ಷಿತ ಬೆಲೆ – ರೂ 7.5 ಲಕ್ಷದಿಂದ ಪ್ರಾರಂಭ

CNG-ಚಾಲಿತ ಆವೃತ್ತಿಯ ಪಂಚ್ ಆಲ್ಟ್ರೋಝ್ CNG ಜೊತೆಗೆ ಪಾದಾರ್ಪಣೆಗೊಂಡಿದ್ದು ಇದರೊಂದಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದೇ ಡ್ಯುಯಲ್ CNG ಸಿಲಿಂಡರ್ ಸೆಟಪ್ ಅನ್ನು ಅದೇ 1.2-ಲೀಟರ್ ಇಂಜಿನ್‌ನೊಂದಿಗೆ ಬಳಸುತ್ತಿದ್ದು ಸುಮಾರು 25 km/kg ಕ್ಲೈಮ್ ಮಾಡಲಾದ ಇಂಧನ ದಕ್ಷತೆಯನ್ನು ನೀಡುವ ನಿರೀಕ್ಷೆ ಹೊಂದಿದೆ. ಮಿಡ್-ಸ್ಪೆಕ್ ಮತ್ತು ಟಾಪ್-ಎಂಡ್ ವೇರಿಯೆಂಟ್‌ಗಳಲ್ಲಿ ನಾವು ಸಂಕುಚಿತ ಅನಿಲವನ್ನು ನಿರೀಕ್ಷಿಸುತ್ತಿರುವ ಕಾರಣ ಇದರ ಫೀಚರ್ ಪಟ್ಟಿಯು ಆಲ್ಟ್ರೋಝ್ CNGಯಂತೆ ಇರಬಹುದಾಗಿದೆ.

ಟಾಟಾ ಆಲ್ಟ್ರೋಝ್ ರೇಸರ್

ನಿರೀಕ್ಷಿತ ಬಿಡುಗಡೆ- ಜೂನ್

ನಿರೀಕ್ಷಿತ ಬೆಲೆ- ರೂ 10 ಲಕ್ಷ

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಆಕರ್ಷಕ ನೋಟದ ಅಲ್ಟ್ರೋಝ್ ರೇಸರ್ ಅನ್ನೂ ಈ ಬೇಸಗೆಯಲ್ಲಿ ನಿರೀಕ್ಷಿಸಬಹುದು. ಇದು ನೋಟದಲ್ಲಿ ಅನೇಕ ನವೀಕರಣಗಳನ್ನು ಪಡೆದುಕೊಂಡಿದ್ದು ಇವುಗಳು ಬ್ಲ್ಯಾಕ್ ವ್ಹೀಲ್‌ಗಳು, ಸಂಪೂರ್ಣ ಬ್ಲ್ಯಾಕ್ ರೂಫ್ ಮತ್ತು ಹುಡ್‌ ಮೇಲೆ ರೇಸಿಂಗ್ ಸ್ಟ್ರಿಪ್‌ಗಳು ಮತ್ತು ಸಂಪೂರ್ಣ ಬ್ಲ್ಯಾಕ್ ಇಂಟೀರಿಯರ್ ಥೀಮ್‌ ಅನ್ನು ಒಳಗೊಂಡಿದೆ. ಈ ರೇಸರ್, ನೆಕ್ಸಾನ್‌ನ 120PS 1.2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು ಇದು ಸಾಮಾನ್ಯ ಆಲ್ಟ್ರೋಝ್ ಟರ್ಬೋ ವೇರಿಯಂಟ್‌ಗಳಿಗಿಂತ 10PS ನಷ್ಟು ಹೆಚ್ಚು ಶಕ್ತಿಯುತವಾಗಿದೆ. ಈ ಆವೃತ್ತಿಯು ಸನ್‌ರೂಫ್, ಏಳು-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ದೊಡ್ಡದಾದ 10.25-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್‌ನೊಂದಿಗೆ ಆಲ್ಟ್ರೋಝ್‌ನ ಫೀಚರ್‌ಭರಿತ ಆವೃತ್ತಿಯಾಗಿದೆ.

ಈ ಕಾರುಗಳೊಂದಿಗೆ ಅನೇಕ ಐಷಾರಾಮಿ ಮತ್ತು ಪ್ರೀಮಿಯಂ ಮಾಡೆಲ್‌ಗಳೂ ಮುಂಬರುವ ತ್ರೈಮಾಸಿಕದಲ್ಲಿ ಪಾದಾರ್ಪಣೆಗೊಳ್ಳಲಿದೆ. ಮರ್ಸಿಡೀಸ್ AMG GT63 S E ಪರ್ಫಾರ್ಮೆನ್ಸ್, ಲ್ಯಾಂಬೋಗಿನಿ ಉರ್ಸ್, ನವೀಕೃತ ಮರ್ಸಿಡೀಸ್ ಬೆನ್ಝ್ GLC, BMW M2, ಮತ್ತು ನವೀಕೃತ Z4 ಫೇಸ್‌ಲಿಫ್ಟ್ ಮುಂಬರುವ ತಿಂಗಳಲ್ಲಿ ಬಿಡುಗಡೆಯಾಗಬೇಕಿದೆ.

t
ಅವರಿಂದ ಪ್ರಕಟಿಸಲಾಗಿದೆ

tarun

  • 14 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಜಿಮ್ನಿ

Read Full News

explore similar ಕಾರುಗಳು

ಮಾರುತಿ ಫ್ರಾಂಕ್ಸ್‌

ಪೆಟ್ರೋಲ್21.79 ಕೆಎಂಪಿಎಲ್
ಸಿಎನ್‌ಜಿ28.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ