ಅಕ್ಟೋಬರ್‌ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಎಸ್‌ಯುವಿಯೇತರ ಕಾರುಗಳ ಪಟ್ಟಿ

published on ನವೆಂಬರ್ 15, 2023 10:50 pm by sonny for ಮಾರುತಿ ಸ್ವಿಫ್ಟ್

  • 101 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಪಟ್ಟಿಯಿಂದ ಎಸ್‌ಯುವಿ ಬಾಡಿ ಟೈಪ್‌ಗಳನ್ನು ತೆಗೆದುಹಾಕುವ ಮೂಲಕ, ಹ್ಯಾಚ್‌ಬ್ಯಾಕ್‌ಗಳು ಮತ್ತು ಎಂಪಿವಿಗಳಿಗಿರುವ ನಿಜವಾದ ಬೇಡಿಕೆಯನ್ನು ನಾವು ನೋಡಬಹುದು.

Swift, Dzire, Grand i10, Innova Hycross

ಎಸ್‌ಯುವಿಗಳು, ಅಥವಾ ಎಸ್‌ಯುವಿ ತರಹದ ಬಾಡಿ ಟೈಪ್‌ಗಳನ್ನು ಹೊಂದಿರುವ ಕಾರುಗಳು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದು, ತಿಂಗಳಿನಲ್ಲಿ ಒಟ್ಟು ಮಾರಾಟವಾಗುವ ಕಾರುಗಳಲ್ಲಿ ಅರ್ಧದಷ್ಟು ಎಸ್‌ಯುವಿಗಳೇ ಆಗಿವೆ. ಆದಾಗಿಯೂ, ನಾವು ಎಸ್‌ಯುವಿ ಎಂದು ವರ್ಗೀಕರಿಸಲಾದ ಯಾವುದೇ ವಾಹನವನ್ನು ಹೊರತುಪಡಿಸಿದರೆ, ಒಂದು ತಿಂಗಳಲ್ಲಿ ಹೆಚ್ಚು ಮಾರಾಟವಾದ ಮೊಡೆಲ್‌ಗಳ ಪಟ್ಟಿಯ ಮೊದಲ ಅರ್ಧವು ಯಾವ ಮೊಡೆಲ್‌ಗಳು ಹೆಚ್ಚು ಜನಪ್ರಿಯವಾಗಿವೆ ಎಂಬುದರ ಕುರಿತು ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ನೀಡುತ್ತದೆ. 2023ರ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿಯೇತರ ಕಾರುಗಳ ಅಂಕಿ-ಅಂಶವನ್ನು ವಿವರವಾಗಿ ನೋಡೋಣ:

 

ಮೊಡೆಲ್‌ಗಳು

ಅಕ್ಟೋಬರ್ 2023

ಅಕ್ಟೋಬರ್  2022

ಸೆಪ್ಟೆಂಬರ್ 2023

ಮಾರುತಿ ವ್ಯಾಗನ್ ಆರ್‌

22,080

17,945

16,250

ಮಾರುತಿ ಸ್ವಿಫ್ಟ್

20,598

17,231

14,703

ಮಾರುತಿ ಬಲೆನೊ 

16,594

17,149

18,417

ಮಾರುತಿ ಡಿಜೈರ್‌ 

14,699

12,321

13,880

ಮಾರುತಿ ಎರ್ಟಿಗಾ 

14,209

10,494

13,528

ಮಾರುತಿ ಇಕೊ 

12,975

8,861

11,147

ಮಾರುತಿ ಆಲ್ಟೊ ಕೆ10

11,200

21,260

7,791

ಟೊಯೋಟಾ ಇನ್ನೋವಾ 

8,183

3,739

8,900

ಹುಂಡೈ i20

7,212

7,814

6,481

ಹುಂಡೈ ಗ್ರಾಂಡ್  i10

6,552

8,855

5,223

ಟಾಟಾ ಅಲ್ಟ್ರಾಜ್ 

5,984

4,770

6,684

ಟಾಟಾ ಟಿಯಾಗೋ

5,356

7,187

6,789

ಕಿಯಾ ಕಾರೆನ್ಸ್‌

5,355

5,479

4,330

ಟೊಯೋಟಾ ಗ್ಲಾಂಝಾ

4,724

3,767

4,727

ಮಾರುತಿ XL6

4,367

2,484

4,511

ಇದರ ಪ್ರಮುಖ ಸಾರಾಂಶಗಳು

  •  ಮಾರುತಿಯು ಭಾರತದಲ್ಲಿ ಅತ್ಯಂತ ವೈವಿಧ್ಯಮಯ ಮತ್ತು ಹಲವು ರೇಂಜ್‌ನ ಕಾರುಗಳನ್ನು ಹೊಂದಿರುವುದರಿಂದ, ಮಾರಾಟದ ಪಟ್ಟಿಯಲ್ಲಿ ಮೊದಲ ಎಲ್ಲಾ ಎಳು ಸ್ಥಾನವನ್ನು ಪಡೆಯುವ ಮೂಲಕ ಈ ಬ್ರಾಂಡ್ ಪ್ರಾಬಲ್ಯ ಸಾಧಿಸಿರುವುದು ಆಶ್ಚರ್ಯವೇನಲ್ಲ. ಎಸ್‌ಯುವಿಗಳನ್ನು ಪಟ್ಟಿಯಿಂದ ತೆಗೆದುಹಾಕುವುದರೊಂದಿಗೆ, ಅಗ್ರ ಮಾಸಿಕ ಮಾರಾಟಗಾರರ ಪಟ್ಟಿಗೆ ಸೇರಿಸಲಾದ ಏಕೈಕ ಮಾದರಿಯೆಂದರೆ ಎರ್ಟಿಗಾ ಎಂಪಿವಿಯ ಪ್ರೀಮಿಯಂ ಆವೃತ್ತಿಯಾದ ಮಾರುತಿ XL6.

  • ಪಟ್ಟಿಯಿಂದ SUV ಗಳನ್ನು ತೆಗೆದುಹಾಕುವ ಮೂಲಕ, ಇದೀಗ ಭಾರತದಲ್ಲಿನ ಮುಂದಿನ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಟೊಯೋಟಾ ತನ್ನ ಎಂಪಿವಿ (ಮಲ್ಟಿ ಪರ್ಪಸ್‌ ವೆಹಿಕಲ್‌) ಇನ್ನೋವಾಗಾಗಿ ಎಂಟನೇ ಸ್ಥಾನದಲ್ಲಿದೆ. ಇದು ಎಸ್‌ಯುವಿ ತರಹದ ಗುಣಲಕ್ಷಣಗಳನ್ನು ಹೊಂದಿದ್ದರೂ, ಇದು ಇನ್ನೂ ಎಂಪಿವಿ ಎಂದೇ ಪರಿಗಣಿಸಲಾಗಿದೆ. ಈ ಅಂಕಿಅಂಶವು ಟೊಯೋಟಾ ಇನ್ನೋವಾ ಹೈಕ್ರಾಸ್ (ಪೆಟ್ರೋಲ್ ಮತ್ತು ಹೈಬ್ರಿಡ್) ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾ (ಡೀಸೆಲ್-ಮಾತ್ರ) ಎರಡರ ಮಾರಾಟವನ್ನು ಒಳಗೊಂಡಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

  • 2023 ರ ಆಕ್ಟೋಬರ್‌ನ ಮುಂದಿನ ಉತ್ತಮವಾಗಿ ಮಾರಾಟವಾದ ಮೊಡೆಲ್‌ ಎಂದರೆ ಅದು SUV ಅಲ್ಲ, 7,212 ಕಾರುಗಳೊಂದಿಗೆ ಹುಂಡೈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ i20. ಇದರ ನೇರ ಪ್ರತಿಸ್ಪರ್ಧಿಯಾದ ಮಾರುತಿ ಬಲೆನೊ, ಇದೇ ಅವಧಿಯಲ್ಲಿ i20 ಗಿಂತ ಎರಡು ಪಟ್ಟು ಹೆಚ್ಚು ಮಾರಾಟವನ್ನು ಕಂಡಿದೆ. ಈ ಕಾರುಗಳ ಮತ್ತೊಂದು ನೇರ ಸ್ಪರ್ಧಿಯಾಗಿರುವ ಟಾಟಾ ಆಲ್ಟ್ರೋಜ್ ಕಳೆದ ತಿಂಗಳಿನಲ್ಲಿ 6,000 ಗಿಂತಲೂ ಕಡಿಮೆ ಕಾರುಗಳ ಮಾರಾಟ ಕಾಣುವ ಮೂಲಕ ಈ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ.

  • 6,500 ಕ್ಕೂ ಹೆಚ್ಚು ಕಾರು ಮಾರಾಟವಾಗುವುದರೊಂದಿಗೆ, ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಹ್ಯಾಚ್‌ಬ್ಯಾಕ್ ಹಿಂದಿನ ತಿಂಗಳ 10 ನೇ ಅತ್ಯುತ್ತಮ ಮಾರಾಟವಾದ ಕಾರು ಆಗಿದೆ (ಈ ಪಟ್ಟಿಯು ಎಸ್‌ಯುವಿಗಳನ್ನು ಒಳಗೊಂಡಿಲ್ಲ). ಹೋಲಿಕೆ ಮಾಡುವುದಾದರೆ, ಇದರ ಪ್ರತಿಸ್ಪರ್ಧಿಯಾಗಿರುವ ಮಾರುತಿ ಸ್ವಿಫ್ಟ್ ಕಳೆದ ತಿಂಗಳಿನಲ್ಲಿ ನಿಯೋಸ್‌ನ ಸಂಖ್ಯೆಗಿಂತ 3 ಪಟ್ಟು ಹೆಚ್ಚು ಮಾರಾಟವನ್ನು ಕಂಡಿತ್ತು.

  • ಇದರ ನಂತರ ಟಾಟಾ ಟಿಯಾಗೊ 2023 ರ ಅಕ್ಟೋಬರ್ ನಲ್ಲಿ ಮುಂದಿನ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದ್ದು, 5,000 ಕ್ಕಿಂತ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ. ಈ ಅಂಕಿಅಂಶಗಳು ಟಿಯಾಗೋ ಇವಿಯ ಮಾರಾಟವನ್ನು ಸಹ ಒಳಗೊಂಡಿರಬಹುದು.

  • ಕಳೆದ ತಿಂಗಳಿನಲ್ಲಿ 5,000 ದ ಮಾರಾಟದ ಗಡಿ ದಾಟಿದ ಕೊನೆಯ ಮತ್ತು ಎಸ್‌ಯುವಿಯಲ್ಲದ ಮೊಡೆಲ್‌ ಎಂದರೆ ಅದು ಕಿಯಾ ಕ್ಯಾರೆನ್ಸ್ ಆಗಿತ್ತು. ಇದು ಮಾರುತಿ ಎರ್ಟಿಗಾದಂತಹ ಎಂಪಿವಿಗೆ ಪ್ರೀಮಿಯಂ ಪರ್ಯಾಯವಾಗಿದ್ದು, ಹಾಗೆಯೇ ಮಾರುತಿ XL6 ಅನ್ನು ಸಹ ಮಾರಾಟದಲ್ಲಿ ಹಿಂದಿಕ್ಕಿದೆ.

  • ಈ ಪಟ್ಟಿಯಲ್ಲಿರುವ ಕೊನೆಯ ಹ್ಯಾಚ್‌ಬ್ಯಾಕ್ ಎಂದರೆ ಅದು ಟೊಯೋಟಾ ಗ್ಲಾಂಝಾ ಆಗಿದೆ, ಇದು ಮೂಲತಃ ಅದೇ ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್‌ಗಳೊಂದಿಗೆ ಮಾರುತಿ ಬಲೆನೊದ ಮರುಬ್ಯಾಡ್ಜ್ ಆವೃತ್ತಿಯಾಗಿದೆ.

 2023 ರ ಅಕ್ಟೋಬರ್‌ನಲ್ಲಿ ಅತ್ಯುತ್ತಮವಾಗಿ ಮಾರಾಟವಾದ ಮೊಡೆಲ್‌ಗಳನ್ನು ನೋಡುವಾಗ ನಾವು ಈ ಪಟ್ಟಿಗೆ SUV ಗಳನ್ನು ಸೇರಿಸಿದಾಗ, 15 ನೇ ಅತ್ಯಂತ ಜನಪ್ರಿಯ ಮಾಡೆಲ್‌ ಸಹ 11,000 ಕ್ಕಿಂತ ಹೆಚ್ಚಿನ  ಬೇಡಿಕೆಯನ್ನು ಕಂಡಿದೆ. ಆದಾಗಿಯೂ, ಭಾರತೀಯ ಕಾರು ಖರೀದಿದಾರರಲ್ಲಿ SUV ಬಾಡಿ ಟೈಪ್‌ನ ಆದ್ಯತೆಗಳನ್ನು ಎತ್ತಿ ತೋರಿಸಲು 10,000 ಯುನಿಟ್ ಮಾರಾಟದ ದಾಖಲೆಯ ಸಮೀಪಕ್ಕೆ ಬರಲು ಬೇರೆ ಯಾವುದೇ ಈ ಮೊಡೆಲ್‌ಗಳಿಗೆ ಸಾಧ್ಯವಾಗಲಿಲ್ಲ.

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಆಟೋಮ್ಯಾಟಿಕ್‌

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಸ್ವಿಫ್ಟ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience