• English
  • Login / Register

Toyota Hyryder ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ ಬಿಡುಗಡೆ, ಹೊಸ ಆಕ್ಸಸ್ಸರಿಗಳ ಸೇರ್ಪಡೆ

ಟೊಯೋಟಾ hyryder ಗಾಗಿ dipan ಮೂಲಕ ಅಕ್ಟೋಬರ್ 11, 2024 06:21 pm ರಂದು ಪ್ರಕಟಿಸಲಾಗಿದೆ

  • 65 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಲಿಮಿಟೆಡ್‌ ಸಂಖ್ಯೆಯ ಸ್ಪೇಷಲ್‌ ಎಡಿಷನ್‌ ಹೈರಿಡರ್‌ನ ಜಿ ಮತ್ತು ವಿ ವೇರಿಯೆಂಟ್‌ಗಳಿಗೆ 13 ಆಕ್ಸಸ್ಸರಿಗಳನ್ನು ಸೇರಿಸುತ್ತದೆ

Toyota Hyryder Festival Limited Edition Launched

  • ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ  50,817 ರೂ. ಮೌಲ್ಯದ ಬಿಡಿಭಾಗಗಳನ್ನು ಸೇರಿಸುತ್ತದೆ.

  • ಈ ಲಿಮಿಟೆಡ್‌ ಸಂಖ್ಯೆಯ ಎಡಿಷನ್‌ 2024 ರ ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲಭ್ಯವಿರುತ್ತದೆ.

  • ಹೊರಭಾಗದ ಆಕ್ಸಸ್ಸರಿಗಳಲ್ಲಿ ಮಡ್‌ಫ್ಲ್ಯಾಪ್, ಬಾಡಿ ಕ್ಲಾಡಿಂಗ್ ಮತ್ತು ಕ್ರೋಮ್ ಡೋರ್ ಹ್ಯಾಂಡಲ್‌ಗಳು ಸೇರಿವೆ.

  • ಇಂಟಿರಿಯರ್‌ನ ಆಕ್ಸಸ್ಸರಿಗಳಲ್ಲಿ ಡ್ಯಾಶ್‌ಕ್ಯಾಮ್, 3D ಮ್ಯಾಟ್ಸ್ ಮತ್ತು ಲೆಗ್‌ರೂಮ್ ಲ್ಯಾಂಪ್ ಸೇರಿವೆ.

  • ಇದು  ಜಿ ಮತ್ತು ವಿ ವೇರಿಯೆಂಟ್‌ನ ಮೈಲ್ಡ್‌-ಹೈಬ್ರಿಡ್ ಮತ್ತು ಸ್ಟ್ರಾಂಗ್‌-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ.

 ಭಾರತದಲ್ಲಿ ಸೀಮಿತ ಸಂಖ್ಯೆಯ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿಯ ಟಾಪ್‌-ಸ್ಪೆಕ್ ಜಿ ಮತ್ತು ವಿ ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ರೂ 50,817 ಮೌಲ್ಯದ 13 ಆಕ್ಸಸ್ಸರಿ ರೇಂಜ್‌ ಅನ್ನು ನೀಡುತ್ತದೆ. ಹಾಗೆಯೇ, ಈ ಲಿಮಿಟೆಡ್‌ ಎಡಿಷನ್‌ ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲಭ್ಯವಿರುತ್ತದೆ. ಅರ್ಬನ್ ಕ್ರೂಸರ್ ಹೈರೈಡರ್‌ನ ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ನೊಂದಿಗೆ ಒದಗಿಸಲಾದ ಎಲ್ಲಾ ಆಕ್ಸಸ್ಸರಿಗಳನ್ನು ನಾವು ನೋಡೋಣ:

Toyota Hyryder festival Limited Edition

ಆಕ್ಸಸ್ಸರಿಗಳ ಹೆಸರು

ಎಕ್ಸ್‌ಟಿರಿಯರ್‌

ಮಡ್ ಫ್ಲಾಪ್

ಸ್ಟೇನ್‌ಲೆಸ್‌ ಸ್ಟೀಲ್ ಇನ್ಸರ್ಟ್ಸನೊಂದಿಗೆ ಡೋರ್ ವೈಸರ್

ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಾರ್ನಿಶ್‌

ಹೆಡ್‌ಲೈಟ್‌ ಗಾರ್ನಿಶ್‌

ಹುಡ್ ಲಾಂಛನ

ಬಾಡಿ ಕ್ಲಾಡಿಂಗ್

ಫೆಂಡರ್ ಗಾರ್ನಿಶ್‌

ಬೂಟ್ ಡೋರ್ ಗಾರ್ನಿಶ್‌

ಕ್ರೋಮ್ ಡೋರ್ ಹ್ಯಾಂಡಲ್‌ಗಳು

ಇಂಟಿರಿಯರ್‌

ಎಲ್ಲಾ ಹವಾಮಾನಕ್ಕಾಗುವ 3D ಮ್ಯಾಟ್ಸ್

ಲೆಗ್‌ರೂಮ್‌ ಲ್ಯಾಂಪ್‌

ಡ್ಯಾಶ್‌ಕ್ಯಾಮ್‌

ಒಟ್ಟು ಬೆಲೆ=  50,817 ರೂ.

ಇದನ್ನೂ ಓದಿ: ಈ ಹಬ್ಬದ ಸಂಭ್ರಮದಲ್ಲಿ ಮಾರುತಿ ನೆಕ್ಸಾ ಕಾರುಗಳ ಮೇಲೆ 2 ಲಕ್ಷ ರೂ.ಗಿಂತ ಹೆಚ್ಚಿನ ಡಿಸ್ಕೌಂಟ್‌

ಟೊಯೋಟಾ ಹೈರಿಡರ್ ಜಿ ಮತ್ತು ವಿ ವೇರಿಯೆಂಟ್‌ಗಳ ಕುರಿತು:

Toyota Hyryder engine

ಜಿ ವೇರಿಯೆಂಟ್‌ ಟಾಪ್‌ ವೇರಿಯೆಂಟ್‌ಗಿಂತ ಒಂದು-ಕೆಳಗಿನ ವೇರಿಯೆಂಟ್‌ ಆಗಿದೆ, ಆದರೆ V ಟೊಯೋಟಾ ಹೈರಿಡರ್‌ನ ಶ್ರೇಣಿಯಲ್ಲಿ ಸಂಪೂರ್ಣವಾಗಿ ಲೋಡ್ ಮಾಡಲಾದ ವೇರಿಯೆಂಟ್‌ ಆಗಿದೆ. ಈ ಎರಡು ವೇರಿಯೆಂಟ್‌ಗಳು ಮೈಲ್ಡ್‌-ಹೈಬ್ರಿಡ್ ಮತ್ತು ಸ್ಟ್ರಾಂಗ್‌ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತವೆ. ಜಿ ವೇರಿಯೆಂಟ್‌ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ.

ಎಂಜಿನ್‌

1.5-ಲೀಟರ್‌ ಮೈಲ್ಡ್‌ ಹೈಬ್ರೀಡ್‌ 

1.5-ಸ್ಟ್ರಾಂಗ್‌ ಹೈಬ್ರೀಡ್‌

1.5-ಲೀಟರ್‌ ಪೆಟ್ರೋಲ್‌- ಸಿಎನ್‌ಜಿ

ಪವರ್‌

103 ಪಿಎಸ್‌

116 ಪಿಎಸ್‌(combined)

88 ಪಿಎಸ್‌

ಟಾರ್ಕ್‌

137 ಎನ್‌ಎಮ್‌

141 ಎನ್‌ಎಮ್‌ (ಹೈಬ್ರೀಡ್‌)

121.5 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್ ಮ್ಯಾನುವಲ್‌ / 6-ಸ್ಪೀಡ್ ಆಟೋಮ್ಯಾಟಿಕ್‌

ಇ-ಸಿವಿಟಿ (ಸಿಂಗಲ್-ಸ್ಪೀಡ್ ಗೇರ್‌ಬಾಕ್ಸ್‌)

5-ಸ್ಪೀಡ್‌ ಮ್ಯಾನುವಲ್‌

ಡ್ರೈವ್‌ಟ್ರೈನ್‌

ಫ್ರಂಟ್‌ ವೀಲ್‌ ಡ್ರೈವ್‌/ ಆಲ್‌ ವೀಲ್‌ ಡ್ರೈವ್‌ (ಮ್ಯಾನುವಲ್‌ ಮಾತ್ರ)

ಫ್ರಂಟ್‌ ವೀಲ್‌ ಡ್ರೈವ್‌

ಫ್ರಂಟ್‌ ವೀಲ್‌ ಡ್ರೈವ್‌

Toyota Hyryder interior

ಫೀಚರ್‌ಗಳ ವಿಷಯದಲ್ಲಿ, ಈ ವೇರಿಯೆಂಟ್‌ಗಳು 9-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡ್ರೈವರ್ ಡಿಸ್‌ಪ್ಲೇ, 6-ಸ್ಪೀಕರ್ ಅರ್ಕಾಮಿಸ್ ಸೌಂಡ್ ಸಿಸ್ಟಮ್, ಹಿಂಬದಿಯ ದ್ವಾರಗಳೊಂದಿಗೆ ಆಟೋ AC ಮತ್ತು ಪನರೋಮಿಕ್‌ ಸನ್‌ರೂಫ್ ಅನ್ನು ಹೊಂದಿವೆ. ಹೆಡ್-ಅಪ್ ಡಿಸ್‌ಪ್ಲೇ (HUD), ಪ್ಯಾಡಲ್ ಶಿಫ್ಟರ್‌ಗಳು (ಎಟಿಗೆ ಮಾತ್ರ), ವೈರ್‌ಲೆಸ್ ಫೋನ್ ಚಾರ್ಜರ್, ಗಾಳಿ ಇರುವ ಮುಂಭಾಗದ ಸೀಟುಗಳು ಮತ್ತು ಕೀಲೆಸ್ ಪ್ರವೇಶವನ್ನು ಸಹ ಒದಗಿಸಲಾಗಿದೆ.

was this article helpful ?

Write your Comment on Toyota hyryder

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience