Toyota Rumion MPV: ಟೊಯೋಟಾ ಕಂಪನಿಯಿಂದ 10.29 ಲಕ್ಷ ರೂ.ಗೆ ಹೊಸ ಕಾರು ಬಿಡುಗಡೆ

published on ಆಗಸ್ಟ್‌ 28, 2023 04:54 pm by tarun for ಟೊಯೋಟಾ rumion

  • 76 Views
  • ಕಾಮೆಂಟ್‌ ಅನ್ನು ಬರೆಯಿರಿ

ರೂಮಿಯಾನ್ ಕೆಲವು ಸ್ಟೈಲಿಂಗ್ ಬದಲಾವಣೆಗಳೊಂದಿಗೆ ಮತ್ತು ಸ್ವಲ್ಪ ಹೆಚ್ಚಿನ ಬೆಲೆಯೊಂದಿಗೆ ಮಾರುತಿ ಎರ್ಟಿಗಾದ ಮರುಬ್ಯಾಡ್ಜ್ ಆವೃತ್ತಿಯಾಗಿದೆ.

Toyota Rumion

  • ರೂಮಿಯನ್ ನ ಎಕ್ಸ್ ಶೋರೂಂ ಬೆಲೆಗಳು 10.29 ಲಕ್ಷ ರೂ ನಿಂದ  13.68 ಲಕ್ಷ ರೂ.ವರೆಗೆ ಇರಲಿದೆ. 
  •  S, G, ಮತ್ತು V ವೇರಿಯೆಂಟ್ ಗಳಲ್ಲಿ ಲಭ್ಯವಿದೆ; ಸಿಎನ್ಜಿ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಸನ್  ಬೇಸ್ ಮಾಡೆಲ್ ಗಳಿಂದಲೇ ಲಭ್ಯವಿದೆ.
  • ವೈಶಿಷ್ಟ್ಯಗಳ ಪಟ್ಟಿಯಲ್ಲಿ ಆಟೋಮ್ಯಾಟಿಕ್ AC, ಕ್ರೂಸ್ ಕಂಟ್ರೋಲ್, 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ನಾಲ್ಕು ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ. 
  • ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

 ಟೊಯೊಟಾ ರೂಮಿಯಾನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಮಾರುತಿ ಎರ್ಟಿಗಾದ ಮರುಬ್ಯಾಡ್ಜ್ ಆವೃತ್ತಿಯಾಗಿದ್ದು, ಸಣ್ಣ ವಿನ್ಯಾಸದ ಬದಲಾವಣೆಗಳಿಂದ ಭಿನ್ನವಾಗಿದೆ. ಇದು ಟೊಯೋಟಾ ಮತ್ತು ಮಾರುತಿ ಸುಜುಕಿ ಕಂಪೆನಿಗಳ ಸಹಭಾಗಿತ್ವದಲ್ಲಿ ಭಾರತದಲ್ಲಿ ತಯಾರಾದ ಐದನೇ ಉತ್ಪನ್ನವಾಗಿದೆ. ಈಗಾಗಲೇ ಟೊಯೊಟಾ ರೂಮಿಯಾನ್‌ಗಾಗಿ ಬುಕಿಂಗ್‌ಗಳು ಪ್ರಾರಂಭವಾಗಿದೆ ಮತ್ತು ಸೆಪ್ಟೆಂಬರ್ 8 ರಿಂದ ವಿತರಣೆಗಳು ಶುರುವಾಗಲಿದೆ. 

ವೇರಿಯಂಟ್-ವಾರು ಬೆಲೆಗಳು

Toyota Rumion

 

ವೇರಿಯಂಟ್ 

ಮಾನ್ಯುಯಲ್ 

ಆಟೋಮ್ಯಾಟಿಕ್ 

ಎಸ್

10.29 ಲಕ್ಷ ರೂ.

11.89 ಲಕ್ಷ ರೂ.

ಎಸ್ CNG

11.24 ಲಕ್ಷ ರೂ.

-

ಜಿ

11.45 ಲಕ್ಷ ರೂ.

-

ವಿ

12.18 ಲಕ್ಷ ರೂ.

13.68 ಲಕ್ಷ ರೂ.

 

CNG ಆಯ್ಕೆಯು ಬೇಸ್ ಮಾಡೆಲ್ ನಲ್ಲಿ ಮಾತ್ರ ಲಭ್ಯವಿದೆ. ಕುತೂಹಲಕಾರಿಯಾಗಿ, ಮಿಡ್-ಸ್ಪೆಕ್ ಜಿ ವೇರಿಯೆಂಟ್ ನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಸನ್ ನ ಆಯ್ಕೆಯನ್ನು ನೀಡಲಾಗಿಲ್ಲ.

ಎರ್ಟಿಗಾ ಹೆಚ್ಚು ಕೈಗೆಟುಕುವ ಆರಂಭಿಕ ಬೆಲೆಯನ್ನು ಹೊಂದಿದ್ದರೂ, ಅದರ VXI ಆವೃತ್ತಿಯು ರೂಮಿಯನ್ ನ S ಆವೃತ್ತಿದೊಂದಿಗೆ ಸಮನಾಗಿರುತ್ತದೆ.

ಎರ್ಟಿಗಾದಿಂದ ಇದರಲ್ಲೇನು ಭಿನ್ನ 

Toyota Rumion

ರೂಮಿಯಾನ್ ಮತ್ತು ಎರ್ಟಿಗಾ ವಿನ್ಯಾಸದ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಹೊಸ ಮುಂಭಾಗದ ಪ್ರೊಫೈಲ್ ಮತ್ತು ಭಿನ್ನವಾದ ಅಲಾಯ್ ವೀಲ್ ಗಳು. ಫ್ಯಾಬ್ರಿಕ್ ಸೀಟ್‌ಗಳಿಗಾಗಿ ಹೊಸ ಡ್ಯುಯಲ್-ಟೋನ್ ಶೇಡ್‌ನೊಂದಿಗೆ ಒಳಾಂಗಣವನ್ನು ಮತ್ತು ಡ್ಯಾಶ್‌ಬೋರ್ಡ್ ಟ್ರಿಮ್‌ಗಾಗಿ ವಿಭಿನ್ನ ಟೋನ್ ಶೇಡ್‌ನೊಂದಿಗೆ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಲಾಗಿದೆ. 

ವೈಶಿಷ್ಟ್ಯ ಪರಿಶೀಲನೆ

Toyota Rumion

ಟೊಯೊಟಾ ರೂಮಿಯಾನ್ ತನ್ನ ವೈಶಿಷ್ಟ್ಯಗಳ ಪಟ್ಟಿಯನ್ನು ಮಾರುತಿ ಎರ್ಟಿಗಾದೊಂದಿಗೆ ಹಂಚಿಕೊಂಡಿದೆ. ಇದು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಆಟೋಮ್ಯಾಟಿಕ್ AC, ಎಂಜಿನ್ ಪುಶ್ ಸ್ಟಾರ್ಟ್-ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಸುರಕ್ಷತೆಯ ಭಾಗವನ್ನು ಗಮನಿಸುವಾಗ, ಇದು ನಾಲ್ಕು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್‌ನೊಂದಿಗೆ ESP, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಿಂದ ಆವರಿಸಲ್ಪಡುತ್ತದೆ.

ಪವರ್ಟ್ರೇನ್ ನ ವಿವರಗಳು

Toyota Rumion

ರೂಮಿಯನ್ ಎರ್ಟಿಗಾದ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 103PS ಮತ್ತು 137Nm ನಷ್ಟು ಪವರ್ ನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮಾನ್ಯುಯಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳು ಟ್ರಾನ್ಸ್ ಮಿಸನ್ ನ ಕರ್ತವ್ಯಗಳನ್ನು ನಿರ್ವಹಿಸುತ್ತವೆ. ಪ್ರತಿ ಕೆ.ಜಿಗೆ 26.11 ಕಿಮೀ ವರೆಗೆ ಘೋಷಿಸಲಾದ ಇಂಧನ ದಕ್ಷತೆಯೊಂದಿಗೆ ಮ್ಯಾನುಯಲ್ ಶಿಫ್ಟರ್‌ನೊಂದಿಗೆ CNG ಆಯ್ಕೆಯೂ ಇದೆ.

ಪ್ರತಿಸ್ಪರ್ಧಿಗಳು

Toyota Rumion

ಟೊಯೊಟಾ ರೂಮಿಯಾನ್‌ಗೆ ನಿಜವಾದ ಪ್ರತಿಸ್ಪರ್ಧಿ ಎಂದರೆ ಅದರ ಮೂಲ ಮಾಡೆಲ್, ಮಾರುತಿ ಎರ್ಟಿಗಾ. ಆದಾಗ್ಯೂ, ಮಾರುತಿ  ಎಂಪಿವಿಯಂತೆಯೇ, ಇದನ್ನು ಕಿಯಾ ಕೆರೆನ್ಸ್, ರೆನಾಲ್ಟ್ ಟ್ರೈಬರ್, ಮತ್ತು ಮಹಿಂದ್ರಾ ಮಾರಾಜೋಗೆ ಪರ್ಯಾಯವಾಗಿ ಕಾಣಬಹುದು.

ಇನ್ನಷ್ಟು ಓದಿ : ಟೊಯೋಟಾ ರೂಮಿಯಾನ್ ನ ಆನ್ ರೋಡ್ ಬೆಲೆ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟೊಯೋಟಾ rumion

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience