ಟೊಯೋಟಾ ಯಾರ ೀಸ್ ಹೆಚ್ಚು ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ, ಈಗ ರೂ 8.65 ಲಕ್ಷ ದಿಂದ ಪ್ರಾರಂಭವಾಗುತ್ತದೆ
ಟೊಯೋಟಾ ಯಾರಿಸ್ ಗಾಗಿ sonny ಮೂಲಕ ಸೆಪ್ಟೆಂಬರ್ 06, 2019 02:16 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಯಾರೀಸ್ ಹೊಸ ವೇರಿಯೆಂಟ್ ಗಳನ್ನು ಪಡೆಯಲಿದೆ ಮತ್ತು ಈ ವಿಭಾಗದ ಮೊದಲಾಗಿ ಡುಯಲ್ ಟೋನ್ ಹೊರಮೈ ಆಯ್ಕೆ ಹೊಂದಿದೆ.
- ಟೊಯೋಟಾ ಯಾರೀಸ್ ನಲ್ಲಿ ಹೊಸ ವೇರಿಯೆಂಟ್ ಗಳನ್ನು J, G ಮತ್ತು V ಟ್ರಿಮ್ ಗಳಿಗೆ ಕೊಡಲಾಗಿದೆ
- ಹೊಸ ಎಂಟ್ರಿ ಸ್ಪೆಕ್ ವೇರಿಯೆಂಟ್ ಗಳು 3 ಏರ್ಬ್ಯಾಗ್ ಗಳೊಂದಿಗೆ ಮಾತ್ರ ದೊರೆಯಲಿದೆ, ಹಿಂದಿನ ಮಾಡೆಲ್ ನಲ್ಲಿ 7 ಏರ್ಬ್ಯಾಗ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿತ್ತು.
- ಯಾರೀಸ್ ಈಗಲೂ ಕೇವಲ ಪೆಟ್ರೋಲ್ ನಲ್ಲಿ ದೊರೆಯುವ ಸೆಡಾನ್ ಆಗಿದೆ ಜೊತೆಗೆ ಆಯ್ಕೆ ಆಗಿ 6- ಸ್ಪೀಡ್ ಮಾನ್ಯುಯಲ್ ಹಾಗು 7- ಸ್ಪೀಡ್ CVT ದೊರೆಯಲಿದೆ
- ಯಾರೀಸ್ ನಲ್ಲಿ ಡುಯಲ್ ಟೋನ್ ಹೊರಮೈ ಮತ್ತು ಹೊಸ ಡೈಮಂಡ್ ಕಟ್ ಅಲಾಯ್ ಗಳು ದೊರೆಯಲಿದೆ.
- ಟೊಯೋಟಾ ಯಾರೀಸ್ ನ ಬೆಲೆ ಪಟ್ಟಿ ಈಗ ರೂ 8.65 ಲಕ್ಷ ದಿಂದ ರೂ 14.07 ಲಕ್ಷ ವರೆಗೂ ಇದೆ (ಎಕ್ಸ್ ಶೋ ರೂಮ್ ಭಾರತಾದ್ಯಂತ )
ಟೊಯೋಟಾ ದವರು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಕೆಳೆದ ಹಲವು ತಿಂಗಳಿನಿಂದ ಸ್ಪರ್ಧಾತ್ಮಕ ಮಾರಾಟ ಸಂಖ್ಯೆಗಳನ್ನು ಧಾಖಲಿಸಲು ಕಷ್ಟಪಡುತ್ತಿದೆ. ಈಗ, ಯಾರೀಸ್ ಅನ್ನು ನವೀಕರಣಗಳೊಂದಿಗೆ ಮರುಹೊಂದಿಸಲಾದ ವೇರಿಯೆಂಟ್ ಆಗಿ ಮಾಡಿ ಹೆಚ್ಚು ಸೌಂದರ್ಯಕಗಳನ್ನು ಕೊಡಲಾಗಿದೆ ಮತ್ತು ಕಡಿಮೆ ಆರಂಭಿಕ ಬೆಲೆ ರೂ 8.65 ಲಕ್ಷ (ಎಕ್ಸ್ ಶೋ ರೂಮ್ ಭಾರತಾದ್ಯಂತ ).
ಅದರಲ್ಲಿ ಈಗಲೂ ಸಹ 1.5-ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು ಅದು 107PS ಪವರ್ ಹಾಗು 140Nm ಟಾರ್ಕ್ ಕೊಡುತ್ತದೆ. ಅದನ್ನು 6- ಸ್ಪೀಡ್ ಮಾನ್ಯುಯಲ್
ಅಥವಾ 7- ಸ್ಪೀಡ್ CVT ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಪಡೆಯಬಹುದಾಗಿದೆ. ಟೊಯೋಟಾ ಯಾರೀಸ್ ನಲ್ಲಿ ಮೂರು ವೇರಿಯೆಂಟ್ ಗಳು ದೊರೆಯುತ್ತದೆ ಈಗ ಇರುವ ನಾಲ್ಕು ವೇರಿಯೆಂಟ್ ಗಳ ಸಾಲಿನೊಂದಿಗೆ.
ಪೂರ್ಣವಾದ ಬೆಲೆ ಪಟ್ಟಿ (ಎಕ್ಸ್ ಶೋ ರೂಮ್ , ಭಾರತಾದ್ಯಂತ ) ಯೊಂದಿಗಿನ ಯಾರೀಸ್ ನ ವೇರಿಯೆಂಟ್ ಪಟ್ಟಿ ಕೊಡಲಾಗಿದೆ:
|
ಪೆಟ್ರೋಲ್ -MT |
ಪೆಟ್ರೋಲ್ -CVT |
J Optional |
Rs 8.65 lakh |
Rs 9.35 lakh |
J |
Rs 9.29 lakh |
Rs 9.99 lakh |
G Optional |
Rs 9.63 lakh |
Rs 10.83 lakh |
G |
Rs 10.44 lakh |
Rs 11.64 lakh |
V |
Rs 11.63 lakh |
Rs 12.83 lakh |
V Optional |
Rs 11.97 lakh |
Rs 13.17 lakh |
VX |
Rs 12.85 lakh |
Rs 14.07 lakh |
-
ಯಾರೀಸ್ ನ ಆರಂಭಿಕ ಬೆಲೆ ರೂ 8.65 ಲಕ್ಷ ಆಗಿದೆ ರೂ 9.29 ಇಂದ ಕಡಿತ ಗೊಂಡು. ಒಟ್ಟಾರೆ ಕಡಿತ ರೂ 64,000.
-
ಹೊಸ J & G ಆಯ್ಕೆ ವೇರಿಯೆಂಟ್ ಗಳು ಹೆಚ್ಚು ಕೈಗೆಟಕುವತಿದೆ ಸಾಮಾನ್ಯ J & G ವೇರಿಯೆಂಟ್ ಗಳಿಗಿಂತ.
-
ಸಲಕರಣೆಗಳಾಗಿ 3 ಏರ್ಬ್ಯಾಗ್ ( ಡ್ರೈವರ್, ಮುಂಬದಿಯ ಪ್ಯಾಸೆಂಜರ್ ಮತ್ತು ಡ್ರೈವರ್ ಮೊಣಕಾಲು) ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ 7 ರ ಬದಲು, ಬೆಲೆ ಕಡಿತ ಗೊಳಿಸಲು
-
ಯಾರೀಸ್ ನ ಅಗ್ರ ವೇರಿಯೆಂಟ್ ಗಳು ಸುರಕ್ಷತೆ ಫೀಚರ್ ಗಳಾದ ಪಾರ್ಕಿಂಗ್ ಸೆನ್ಸಾರ್, 7 ರ ವರೆಗೂ ಏರ್ಬ್ಯಾಗ್ ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್, ರೇವೆರ್ಸ್ ಕ್ಯಾಮೆರಾ ಮತ್ತು ಮುಂಬದಿ ಹಾಗು ಹಿಂಬದಿ ಫಾಗ್ ಲ್ಯಾಂಪ್ ಗಳನ್ನು ಕೊಡಲಾಗಿದೆ.
-
ಹೊಸ ಡುಯಲ್ ಟೋನ್ ಹೊರಮೈ ಬಣ್ಣದ ಆಯ್ಕೆ , ಗ್ಲೋಸ್ ಬ್ಲಾಕ್ ಫ್ರಂಟ್ ಗ್ರಿಲ್, ಮತ್ತು ORVM ಗಳು, ಮತ್ತು ಹೊಸ ಡೈಮಂಡ್ ಕಟ್ ಅಲಾಯ್ ವೀಲ್ ಗಳು ಕೇವಲ ಹೊಸ V ಆಯ್ಕೆ ಟ್ರಿಮ್ ಒಂದಿಗೆ ದೊರೆಯುತ್ತದೆ.
-
ಡುಯಲ್ ಟೋನ್ ಯಾರೀಸ್ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ: ವೈಲ್ಡ್ ಫೈರ್ ರೆಡ್, ಗ್ರೇಯ್ ಮೆಟಾಲಿಕ್, ಸೂಪರ್ ವೈಟ್ ಮತ್ತು ಸಿಲ್ವರ್ ಮೆಟಾಲಿಕ್
-
V ಆಯ್ಕೆ ವೇರಿಯೆಂಟ್ ಲೆಥರ್ ಹೊರಪದರಗಳೊಂದಿಗೆ ಮತ್ತು ಲೆಥರ್ ಸುತ್ತು ಇರುವ ಸ್ಟಿಯರಿಂಗ್ ವೀಲ್, ಮತ್ತು ಗೇರ್ ಕ್ನೋಬ್ ಕೊಡಲಾಗಿದೆ, ಅವು ಹಿಂದೆ ಕೇವಲ ಟಾಪ್ ಸ್ಪೆಕ್ VX ವೇರಿಯೆಂಟ್ ನಲ್ಲಿ ಸಿಗುತ್ತಿತ್ತು.
-
J ಆಯ್ಕೆ ಗೆ ತದ್ವಿರುದ್ಧವಾಗಿ G ಆಯ್ಕೆ ವೇರಿಯೆಂಟ್ ಗಳು, ಮತ್ತು V ಆಯ್ಕೆಗಳು ಸಾಮಾನ್ಯ V- ಗ್ರೇಡ್ ಟ್ರಿಮ್ ಗಿಂತಲೂ ಹೆಚ್ಚು ಬೆಲೆ ಹೊಂದಿದೆ, ಅದು VX ವೇರಿಯೆಂಟ್ ವರೆಗಿನ ಬೆಲೆ ಅಂತರವನ್ನು ಕಡಿಮೆ ಮಾಡಿದೆ.
-
ಯಾರೀಸ್ ನಲ್ಲಿ ಹೆಚ್ಚು ಫೀಚರ್ ಗಳಾದ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ರೋಡ್ ಮೌಂಟೆಡ್ AC ವೆಂಟ್ ಗಳು ರೇರ್ ಪ್ಯಾಸೆಂಜರ್ ಗಳಿಗಾಗಿ, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮತ್ತು ಕ್ರೂಸ್ ಕಂಟ್ರೋಲ್ ಕೊಡಲಾಗಿದೆ.
-
J ಮತ್ತು G ಆಯ್ಕೆ ವೇರಿಯೆಂಟ್ ಗಳಲ್ಲಿ ಹೊಸ ಅಸ್ಸೇಸ್ಸೋರಿ ಪ್ಯಾಕೇಜ್ ಗಳಾಗಿ ನಾಲ್ಕು ಸ್ಪ್ಲಿಟ್ರ್ ಗಳು, ರೇರ್ ಬಂಪರ್ ಸ್ಪೋಇಲೆರ್ , ಬೂಟ್ ಲೀಡ್ ಗಾರ್ನಿಶ್, ಸೈಡ್ ಮೌಲ್ಡಿಂಗ್, ಸೆಂಟರ್ ಕನ್ಸೋಲ್ ಬಾಕ್ಸ್, ಮೂಡ್ ಲೈಟಿಂಗ್, ಲೆಥರ್ ಸೀಟ್ ಕವರ್ ಗಳನ್ನು ಕೊಡಲಾಗಿದೆ.
-
ಯಾರೀಸ್ ನ ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ಇನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕೊಡಲಾಗಿಲ್ಲ ಆದರೆ ಅವುಗಳು ಹೆಚ್ಚಿನ ಬೆಲೆಯೊಂದಿಗೆ J ಮತ್ತು G ಆಯ್ಕೆ ವೇರಿಯೆಂಟ್ ಗಳಲ್ಲಿ ಲಭ್ಯವಿದೆ.
-
ಕಡಿತಗೊಳಿಸಲಾದ ಬೆಲೆ ಜೊತೆಗೆ ಹೊಸ ಆಯ್ಕೆಗಳಾಗಿ ವೇರಿಯೆಂಟ್ ಗಳು ಟೊಯೋಟಾ ಯಾರೀಸ್ ಗೆ ಪ್ರತಿಸ್ಪರ್ದಿಗಳಾದ ಹೋಂಡಾ ಸಿಟಿ, ಹುಂಡೈ ವೆರ್ನಾ, ಸ್ಕೊಡಾ ರಾಪಿಡ್,
-
ವೊಲ್ಕ್ಸ್ವಾಗನ್ ವೆಂಟೋ ಮತ್ತು ಮಾರುತಿ ಸಿಯಾಜ್ ಗಳೊಂದಿಗೆ ಸ್ಪರ್ದಿಸಲು ಹೆಚ್ಚು ಸಹಕಾರಿಯಾಗಿರುತ್ತದೆ. ಪ್ರತಿಸ್ಪರ್ದಿಗಳ ಪೆಟ್ರೋಲ್ ವೇರಿಯೆಂಟ್ ಗಳೊಂದಿಗೆ ಬೆಲೆ ವಿಚಾರದಲ್ಲಿ ಹೋಲಿಕೆಯನ್ನು ಪಟ್ಟಿ ಮಾಡಲಾಗಿದೆ:
ಟೊಯೋಟಾ ಯಾರೀಸ್ |
ಹೋಂಡಾ ಸಿಟಿ |
ಹುಂಡೈ ವೆರ್ನಾ |
ಮಾರುತಿ ಸಿಯಾಜ್ |
ಸ್ಕೊಡಾ ರಾಪಿಡ್ |
ವೊಲ್ಕ್ಸ್ವಾಗನ್ ವೆಂಟೋ |
Rs 8.65 lakh to Rs 14.07 lakh |
Rs 9.81 lakh to Rs 14.16 lakh |
Rs 8.18 lakh to Rs 12.88 lakh |
Rs 8.2 lakh to Rs 10.99 lakh |
Rs 6.99 lakh to Rs 12.44 lakh |
Rs 8.65 lakh to Rs 12.99 lakh |
0 out of 0 found this helpful