Login or Register ಅತ್ಯುತ್ತಮ CarDekho experience ಗೆ
Login

ವರ್ಟಸ್ ಜಿಟಿಗೆ ಮ್ಯಾನುಯಲ್ ಆಯ್ಕೆಯನ್ನು ಸೇರಿಸಲಿರುವ ಫೋಕ್ಸ್‌ವ್ಯಾಗನ್

published on ಏಪ್ರಿಲ್ 19, 2023 05:05 pm by ansh for ವೋಕ್ಸ್ವ್ಯಾಗನ್ ವಿಟರ್ಸ್

ಸೆಡಾನ್ ಹೊಸ ಬಣ್ಣದ ಆಯ್ಕೆಗಳನ್ನು ಸಹ ಪಡೆಯಲಿದೆ, ಅದರ ಪರ್ಫಾರ್ಮೆನ್ಸ್ ಲೈನ್ ಜಿಟಿ ಪ್ಲಸ್ ವೇರಿಯಂಟ್ ಮುಂಬರುವ ತಿಂಗಳುಗಳಲ್ಲಿ ಅಗ್ಗವಾಗಲಿದೆ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಜಿಟಿ ಪ್ಲಸ್ ಟ್ರಿಮ್ ಆರಂಭದಿಂದಲೂ ಡಿಎಸ್‌ಜಿ ಆಟೋಗೆ ಸೀಮಿತವಾಗಿದೆ.
  • ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಜಿಟಿ ಪ್ಲಸ್ ಟ್ರಿಮ್ "ಡೀಪ್ ಬ್ಲ್ಯಾಕ್ ಪರ್ಲ್" ಬಣ್ಣದ ಆಯ್ಕೆಯನ್ನು ಸಹ ಪಡೆಯುತ್ತದೆ.
  • ವರ್ಟಸ್‌ನ ಎಲ್ಲಾ ಇತರ ವೇರಿಯಂಟ್‌ಗಳಿಗೆ ಹೊಸ 'ಲಾವಾ ಬ್ಲೂ ಮೆಟಾಲಿಕ್' ಬಣ್ಣದ ಆಯ್ಕೆಯನ್ನು ಕೂಡ ನೀಡಲಾಗುವುದು.
  • ಪ್ರಸ್ತುತ, ವರ್ಟಸ್ ಬೆಲೆ 11.48 ಲಕ್ಷ ರೂ.ದಿಂದ 18.57 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇದೆ.

ಇತ್ತಿಚೆಗೆ ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಕಾರುಗಳ ಶ್ರೇಣಿಯನ್ನು ನವೀಕರಿಸುವ ಯೋಜನೆಯನ್ನು ಹಂಚಿಕೊಂಡಿದೆ. ಈ ಹೊಸ ಬದಲಾವಣೆಗಳಲ್ಲಿ, ವರ್ಟಸ್ ಹೊಸ ವೇರಿಯಂಟ್ ಮತ್ತು ಎರಡು ಹೊಸ ಬಣ್ಣದ ಆಯ್ಕೆಗಳು ಸೇರಿವೆ ಎಂದು ಕಂಪನಿಯು ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ವಿವರಗಳ ಬಗ್ಗೆ ತಿಳಿದುಕೊಳ್ಳೋಣ:

ವರ್ಟಸ್ ಕಾರಿನ ಟಾಪ್ ಪರ್ಫಾರ್ಮೆನ್ಸ್ ಲೈನ್ ಜಿಟಿ+ ವೇರಿಯಂಟ್ ಶೀಘ್ರದಲ್ಲೇ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯಲಿದೆ. ಈ ವೇರಿಯಂಟ್‌ಗೆ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (150 PS) ಅನ್ನು ನೀಡಲಾಗಿದ್ದು, ಶೀಘ್ರದಲ್ಲೇ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯು ಲಭ್ಯವಾಗುತ್ತದೆ. ಈ ಸೇರ್ಪಡೆಯಿಂದ, ಈ ವಾಹನದ ಟಾಪ್-ಸ್ಪೆಕ್ ಮೊದಲಿಗಿಂತ ಹೆಚ್ಚು ಅಗ್ಗವಾಗುತ್ತದೆ ಮತ್ತು ಡ್ರೈವಿಂಗ್ ಉತ್ಸಾಹಿಗಳಿಗೆ ಹೆಚ್ಚು ಇಷ್ಟವಾಗುತ್ತದೆ.

ನೂತನ ಬಣ್ಣಗಳು

ಹೊಸ ವೇರಿಯಂಟ್ ಜೊತೆಗೆ, ಎರಡು ಹೊಸ ಬಣ್ಣ ಆಯ್ಕೆಗಳಾದ ಡೀಪ್ ಬ್ಲ್ಯಾಕ್ ಪರ್ಲ್ ಮತ್ತು ಲಾವಾ ಬ್ಲೂ ಮೆಟಾಲಿಕ್ ಅನ್ನು ಸಹ ವರ್ಟಸ್ ಕಾರಿನಲ್ಲಿ ಸೇರಿಸಲಾಗುವುದು. ಡೀಪ್ ಬ್ಲ್ಯಾಕ್ ಪರ್ಲ್ ಕಲರ್ ಆಯ್ಕೆಯು ಟಾಪ್-ಸ್ಪೆಕ್ ಜಿಟಿ+ ವೇರಿಯಂಟ್‌‌ನಲ್ಲಿ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ, ಆದರೆ ಲಾವಾ ಬ್ಲೂ ಮೆಟಾಲಿಕ್ ಬಣ್ಣದ ಆಯ್ಕೆಯು ಅದರ ಎಲ್ಲಾ ವೇರಿಯಂಟ್‌ನಲ್ಲಿ ಲಭ್ಯವಿರುತ್ತದೆ. ಇತ್ತೀಚೆಗೆ ಸ್ಕೋಡಾ ಸ್ಲಾವಿಯಾ ಸೆಡಾನ್‌ನಲ್ಲಿ ಲಾವಾ ಬ್ಲೂ ಮೆಟಾಲಿಕ್ ಬಣ್ಣದ ಆಯ್ಕೆ ಕೂಡ ಸೇರಿಸಲಾಗಿದೆ. ಈ ಹೊಸ ವೇರಿಯಂಟ್ ಮತ್ತು ಹೊಸ ಬಣ್ಣದ ಆಯ್ಕೆಗಳು ಜೂನ್ 2023 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ.

ವೈಶಿಷ್ಟ್ಯಗಳು

ಜಿಟಿ ಪ್ಲಸ್ ಟ್ರಿಮ್‌ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ರಿಯರ್ ಕ್ಯಾಮರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಲ್ಲಾ ವೈಶಿಷ್ಟ್ಯಗಳು ಜಿಟಿ ಪ್ಲಸ್ ಮ್ಯಾನುವಲ್ ವೇರಿಯಂಟ್‌ನಲ್ಲೂ ಕೂಡ ಲಭ್ಯವಿರುತ್ತವೆ.

ಇದನ್ನೂ ಓದಿ: ಶೀಘ್ರದಲ್ಲೇ ಹೊಸ ಟೈಗನ್ ಜಿಟಿ ವೇರಿಯಂಟ್‌ಗಳು ಮತ್ತು ವಿಶೇಷ ಆವೃತ್ತಿಗಳನ್ನು ಒದಗಿಸಲಿರುವ ಫೋಕ್ಸ್‌ವ್ಯಾಗನ್

ಸೀಟ್ ಬೆಲ್ಟ್ ರಿಮೈಂಡರ್ ವೈಶಿಷ್ಟ್ಯವನ್ನು ಏಪ್ರಿಲ್ ನಿಂದ ಎಲ್ಲಾ ಪ್ರಯಾಣಿಕರಿಗೆ ಪ್ರಮಾಣಿತಗೊಳಿಸಲಾಗಿದೆ. ಇದರ ಹೊರತಾಗಿ ಈ ವಾಹನದ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪವರ್‌ಟ್ರೇನ್

"ಪರ್ಫಾರ್ಮೆನ್ಸ್ ಲೈನ್" ಜಿಟಿ ವೇರಿಯಂಟ್‌ಗಳು ಕಾರು ತಯಾರಕರ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಅದರ ಸಾಮರ್ಥ್ಯ 150PS ಮತ್ತು 250Nm ಆಗಿದೆ. ಮೇಲೆ ತಿಳಿಸಿದಂತೆ, ಇದು ಶೀಘ್ರದಲ್ಲೇ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಯನ್ನು ಪಡೆಯುತ್ತದೆ. ಕಾಂಪ್ಯಾಕ್ಟ್ ಸೆಡಾನ್‌ನ ಇತರ ವೇರಿಯಂಟ್‌ಗಳು 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, ಅದರ ಸಾಮರ್ಥ್ಯ 115PS ಮತ್ತು 178Nm ಆಗಿದೆ. ಈ ಎಂಜಿನ್‌ನೊಂದಿಗೆ, ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಪಡೆಯುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಜಿಟಿ ಪ್ಲಸ್ ಮ್ಯಾನುವಲ್ ವೇರಿಯಂಟ್ ಅದರ ಆಟೋಮ್ಯಾಟಿಕ್ ವೇರಿಯಂಟ್‌ಗಿಂತ 1.5 ಲಕ್ಷ ರೂಪಾಯಿಗಳಷ್ಟು ಅಗ್ಗವಾಗಬಹುದು ಎಂದು ಅಂದಾಜಿಸಲಾಗಿದೆ. ವರ್ಟಸ್‌ನ ಪ್ರಸ್ತುತ ಬೆಲೆ 11.48 ಲಕ್ಷ ರೂ.ದಿಂದ 18.57 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇದೆ ಮತ್ತು ಇದು ಹೋಂಡಾ ಸಿಟಿ, ಹುಂಡೈ ವೆರ್ನಾ ಮತ್ತು ಸ್ಕೋಡಾ ಸ್ಲಾವಿಯಾಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: ಫೋಕ್ಸ್‌ವ್ಯಾಗನ್ ವರ್ಟಸ್ ಆನ್ ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ವೋಕ್ಸ್ವ್ಯಾಗನ್ ವಿಟರ್ಸ್

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ