ವಾವ್.. ಭಾರತದಲ್ಲಿ 50,000 ಮಾರಾಟದ ಮೈಲಿಗಲ್ಲು ದಾಟಿದ Volkswagen Virtus
2024ರ ಮೇ ತಿಂಗಳವರೆಗೆ ವರ್ಟಸ್ ತನ್ನ ಸೆಗ್ಮೆಂಟ್‌ನಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ, ತಿಂಗಳಿಗೆ ಸರಾಸರಿ 1,700 ಕ್ಕಿಂತ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ
-
ವೋಕ್ಸ್‌ವ್ಯಾಗನ್ ವೆಂಟೊಗೆ ಬದಲಿಯಾಗಿ ವೋಕ್ಸ್‌ವ್ಯಾಗನ್ ವರ್ಟಸ್ ಅನ್ನು 2022ರ ಜೂನ್‌ನಲ್ಲಿ ಬಿಡುಗಡೆ ಮಾಡಲಾಯಿತು.
-
ಕಳೆದ ಐದು ತಿಂಗಳಿನಿಂದ, ಇದು ಪ್ರತಿ ತಿಂಗಳು 1,500 ಕಾರುಗಳ ಮಾರಾಟವನ್ನು ದಾಟಿದೆ.
-
ವರ್ಟಸ್ ಎರಡು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರುತ್ತದೆ.
-
ಇದು ಗ್ಲೋಬಲ್ NCAPನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.
-
ಭಾರತದಾದ್ಯಂತ ಇದರ ಎಕ್ಸ್‌ಶೋರೂಮ್ ಬೆಲೆಗಳು 11.56 ಲಕ್ಷ ರೂ.ನಿಂದ 19.41 ಲಕ್ಷ ರೂ.ವರೆಗೆ ಇರಲಿದೆ.
ಫೋಕ್ಸ್‌ವ್ಯಾಗನ್ ವರ್ಟಸ್ ಮಾರುಕಟ್ಟೆಗೆ ಬಂದು ಎರಡು ವರ್ಷ ಪೂರೈಸಿದ್ದು, ಇದು ಈಗ ಭಾರತದಲ್ಲಿ 50,000 ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ. ವರ್ಟಸ್ ಜರ್ಮನ್ ಮೂಲದ ಕಾರು ತಯಾರಕರ ಇಂಡಿಯಾ 2.0 ಯೋಜನೆಯ ಅಡಿಯಲ್ಲಿ ತಯಾರಾದ ಎರಡನೇ ಕಾರು ಆಗಿದೆ, ಇತ್ತೀಚಿನ ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ಒಂದಾಗಿದೆ. ಅದರ ಇತರ ಕೆಲವು ಸಾಧನೆಗಳನ್ನು ನಾವು ತಿಳಿಯೋಣ:
ವೋಕ್ಸ್‌ವ್ಯಾಗನ್ ವರ್ಟಸ್: ಇತರೆ ಮಹತ್ವದ ಸಾಧನೆಗಳು
2024ರ ಮೇ ತಿಂಗಳವರೆಗೆ ವರ್ಟಸ್ ತನ್ನ ಸೆಗ್ಮೆಂಟ್‌ನಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ, ತಿಂಗಳಿಗೆ ಸರಾಸರಿ 1,700 ಕ್ಕಿಂತ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ.
ಇದು ಮಾತ್ರವಲ್ಲದೆ, ಫಿನಾನ್ಶಿಯಲ್ ಇಯರ್-25 ರ ಎರಡನೇ ತ್ರೈಮಾಸಿಕದಲ್ಲಿ ವರ್ಟಸ್ ಮತ್ತು ಟೈಗುನ್ ಒಟ್ಟಾರೆಯಾಗಿ 1 ಲಕ್ಷ ಮಾರಾಟವನ್ನು ಮೀರಿದೆ. ಬಿಡುಗಡೆಯಾದಾಗಿನಿಂದ, ಎರಡೂ ಕಾರುಗಳು ಭಾರತದಲ್ಲಿನ ಕಾರು ತಯಾರಕರ ಒಟ್ಟು ಮಾರಾಟದಲ್ಲಿ ಸುಮಾರು 18.5 ಪ್ರತಿಶತದಷ್ಟು ಕೊಡುಗೆಯನ್ನು ನೀಡಿವೆ.
ಇದನ್ನೂ ಓದಿ: ಹೊಸ ಲಿಮಿಟೆಡ್ ಎಡಿಷನ್‌ಅನ್ನು ಪಡೆಯಲಿರುವ Toyota Urban Cruiser Taisor, ಏನಿದರ ವಿಶೇಷತೆ ?
ವೋಕ್ಸ್‌ವ್ಯಾಗನ್ ವರ್ಟಸ್ ಜನಪ್ರಿಯತೆಗೆ ಕಾರಣಗಳು
ವರ್ಟಸ್‌ನ ಜನಪ್ರಿಯತೆಗೆ ಒಂದು ಪ್ರಮುಖ ಕಾರಣವೆಂದರೆ ಅದು ಈ ಸೆಗ್ಮೆಂಟ್‌ನಲ್ಲಿ ಎರಡು ಅತ್ಯಂತ ಶಕ್ತಿಶಾಲಿ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ ಆಯ್ಕೆಗಳು |
1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ |
1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ |
ಪವರ್ |
115 ಪಿಎಸ್ |
150 ಪಿಎಸ್ |
ಟಾರ್ಕ್ |
178 ಎನ್‌ಎಮ್ |
250 ಎನ್‌ಎಮ್ |
ಟ್ರಾನ್ಸ್‌ಮಿಷನ್* |
6-ಸ್ಪೀಡ್ MT, 6-ಸ್ಪೀಡ್ AT |
6-ಸ್ಪೀಡ್ MT, 7-ಸ್ಪೀಡ್ DCT |
*MT = ಮ್ಯಾನುಯಲ್ ಟ್ರಾನ್ಸ್‌ಮಿಷನ್, AT = ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್, DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ವೋಕ್ಸ್‌ವ್ಯಾಗನ್ ಅನೇಕ ಪ್ರೀಮಿಯಂ ಅಂಶಗಳೊಂದಿಗೆ ಇದನ್ನು ಸಜ್ಜುಗೊಳಿಸಿದೆ. ಹೈಲೈಟ್ಸ್‌ಗಳು 10.1-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಒಳಗೊಂಡಿವೆ. ಇದು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸಹ ಹೊಂದಿದೆ.
ಇದನ್ನು 2023ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್-ಟೆಸ್ಟ್ ಮಾಡಿಸಿದ್ದು, ಅಲ್ಲಿ ಇದು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತು. ಈ ಸೆಡಾನ್‌ನಲ್ಲಿರುವ ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು (ಎಲ್ಲಾ ವೇರಿಯೆಂಟ್‌ಗಳಲ್ಲಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.
ವೋಕ್ಸ್‌ವ್ಯಾಗನ್ ವರ್ಟಸ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ವೂಕ್ಸ್‌ವ್ಯಾಗನ್ ವರ್ಟಸ್‌ನ ಎಕ್ಸ್‌ಶೋರೂಮ್ ಬೆಲೆಗಳು 11.56 ಲಕ್ಷ ರೂ.ನಿಂದ 19.41 ಲಕ್ಷ ರೂ.ವರೆಗೆ ಇರಲಿದೆ. ಇದು ಸ್ಕೋಡಾ ಸ್ಲಾವಿಯಾ, ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ವೋಕ್ಸ್‌ವ್ಯಾಗನ್ ವರ್ಟಸ್ ಆನ್‌ರೋಡ್ ಬೆಲೆ