ವೀಕ್ಷಿಸಿ: 2005 ರಿಂದ Maruti Swift ಬೆಲೆಯು ಹೇಗೆ ಹೆಚ್ಚಾಗಿದೆ ಎಂಬ ವಿವರ
ಮಾರುತಿ ಸ್ವಿಫ್ಟ್ ಗಾಗಿ shreyash ಮೂಲಕ ಜೂನ್ 03, 2024 01:24 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಮೂರು ಜನರೇಷನ್ ಅಪ್ಡೇಟ್ ಗಳನ್ನು ಪಡೆದಿದೆ ಮತ್ತು ಇದು ದೇಶದ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ
ಭಾರತದಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿರುವ ಮಾರುತಿ ಸ್ವಿಫ್ಟ್, 2005 ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಬಿಡುಗಡೆಯಾದಾಗಿನಿಂದ, ಇದು ಹಲವಾರು ಅಪ್ಡೇಟ್ ಮತ್ತು ಫೇಸ್‌ಲಿಫ್ಟ್‌ಗಳನ್ನು ಪಡೆದಿದೆ, ಆ ಮೂಲಕ ಅದರ ಡಿಸೈನ್ ಫೀಚರ್ ಗಳು ಪ್ರತಿ ಬಾರಿ ಉತ್ತಮಗೊಂಡಿವೆ. ಈ ಬದಲಾವಣೆಗಳ ಜೊತೆಗೆ, ಭಾರತದಲ್ಲಿನ ಸ್ವಿಫ್ಟ್ ನ ಬೆಲೆ ಕೂಡ ಪ್ರತಿ ಅಪ್‌ಡೇಟ್‌ನೊಂದಿಗೆ ಹೆಚ್ಚಾಗಿವೆ. ಬನ್ನಿ, ಕಳೆದ ಸುಮಾರು ಎರಡು ದಶಕಗಳಲ್ಲಿ ಈ ಬೆಲೆಗಳು ಹೇಗೆ ಬದಲಾಗಿವೆ ಎಂಬುದನ್ನು ನೋಡೋಣ.
2005 ರಿಂದ ಇಲ್ಲಿಯವರೆಗೆ ಬೆಲೆಗಳು
ಮಾಡೆಲ್ |
ಬೆಲೆ ಶ್ರೇಣಿ |
ಫಸ್ಟ್ ಜೆನ್ ಮಾರುತಿ ಸ್ವಿಫ್ಟ್ 2005 |
ರೂ 3.87 ಲಕ್ಷದಿಂದ ರೂ 4.85 ಲಕ್ಷ |
ಸೆಕೆಂಡ್ ಜೆನ್ ಮಾರುತಿ ಸ್ವಿಫ್ಟ್ 2011 |
ರೂ 4.22 ಲಕ್ಷದಿಂದ ರೂ 6.38 ಲಕ್ಷ |
ಸೆಕೆಂಡ್ ಜೆನ್ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ 2014 |
ರೂ 4.42 ಲಕ್ಷದಿಂದ ರೂ 6.95 ಲಕ್ಷ |
ಥರ್ಡ್ ಜೆನ್ ಮಾರುತಿ ಸ್ವಿಫ್ಟ್ 2018 |
ರೂ 4.99 ಲಕ್ಷದಿಂದ ರೂ 8.29 ಲಕ್ಷ |
ಥರ್ಡ್ ಜೆನ್ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ 2021 |
ರೂ 5.73 ಲಕ್ಷದಿಂದ ರೂ 8.41 ಲಕ್ಷ |
ಫೋರ್ಥ್ ಜೆನ್ ಮಾರುತಿ ಸ್ವಿಫ್ಟ್ 2014 (ಪ್ರಸ್ತುತ) |
ರೂ 6.49 ಲಕ್ಷದಿಂದ ರೂ 9.64 ಲಕ್ಷ (ಪರಿಚಯಾತ್ಮಕ) |
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ
ಸ್ವಿಫ್ಟ್ ಮೂರು ಜನರೇಷನ್ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ, ಇದರಲ್ಲಿ ಎರಡನೇ-ಜನ್ ಮತ್ತು ಮೂರನೇ-ಜನ್ ಮಾಡೆಲ್ ಗಳು ಫೇಸ್‌ಲಿಫ್ಟ್‌ಗಳನ್ನು ಕೂಡ ಪಡೆದಿವೆ. 2005 ರಲ್ಲಿ, ಸ್ವಿಫ್ಟ್ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಬಂದಾಗ, ಅದರ ಬೆಲೆಯು ರೂ 3.87 ಲಕ್ಷದಿಂದ ಪ್ರಾರಂಭವಾಗಿತ್ತು. ಈಗ 2024 ರಲ್ಲಿ, ಅದರ ಆರಂಭಿಕ ಬೆಲೆಯು ರೂ 2.62 ಲಕ್ಷದಷ್ಟು ಹೆಚ್ಚಾಗಿದೆ.
2005 ರಲ್ಲಿ, ಟಾಪ್-ಸ್ಪೆಕ್ ಸ್ವಿಫ್ಟ್ ಬೆಲೆಯು ರೂ.4.85 ಲಕ್ಷವಾಗಿತ್ತು. ಈಗ ಇದರ ಬೆಲೆ 9.64 ಲಕ್ಷ ರೂಪಾಯಿಯಾಗಿದ್ದು, ಒಟ್ಟು 4.79 ಲಕ್ಷ ರೂಪಾಯಿಗಳ ದೊಡ್ಡ ಏರಿಕೆಯಾಗಿದೆ. ಇಂದು, ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಹ್ಯಾಚ್‌ಬ್ಯಾಕ್ ಮಾರುತಿ ಆಲ್ಟೊ K10 ಆಗಿದೆ, ಇದರ ಬೆಲೆಯು ರೂ 3.99 ಲಕ್ಷದಿಂದ ಪ್ರಾರಂಭವಾಗುತ್ತದೆ, ಮತ್ತು ಇದು ಮಾರುತಿ ಸ್ವಿಫ್ಟ್ 2005 ರ ಆರಂಭಿಕ ಬೆಲೆಗಿಂತ ರೂ 12,000 ಹೆಚ್ಚಾಗಿದೆ.
ಇದನ್ನು ಕೂಡ ಓದಿ: ಈ 4 ಕಾರುಗಳು ಜೂನ್ 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ
2024 ಸ್ವಿಫ್ಟ್ ಫೀಚರ್ ಗಳು
ಅದರ ಇತ್ತೀಚಿನ ಜನರೇಷನ್ ಅಪ್ಡೇಟ್ ನಲ್ಲಿ, ಸ್ವಿಫ್ಟ್ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಅರ್ಕಾಮಿಸ್-ಟ್ಯೂನ್ಡ್ ಆಡಿಯೊ ಸಿಸ್ಟಮ್, ರಿಯರ್ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ AC ನಂತಹ ಫೀಚರ್ ಗಳೊಂದಿಗೆ ಬರುತ್ತದೆ. ಇದು ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕನೆಕ್ಟೆಡ್ ಕಾರ್ ಟೆಕ್ ಅನ್ನು ಕೂಡ ಪಡೆಯುತ್ತದೆ.
ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು (ಎಲ್ಲಾ ವೇರಿಯಂಟ್ ಗಳಲ್ಲಿ), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ನೀಡಲಾಗಿದೆ.
2024 ಸ್ವಿಫ್ಟ್ ಪವರ್‌ಟ್ರೇನ್
ನಾಲ್ಕನೇ ಜನರೇಷನ್ ಸ್ವಿಫ್ಟ್ ಹೊಸ Z ಸಿರೀಸ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ಅದರ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:
ಇಂಜಿನ್ |
1.2-ಲೀಟರ್ 3 ಸಿಲಿಂಡರ್ Z ಸಿರೀಸ್ ಪೆಟ್ರೋಲ್ |
ಪವರ್ |
82 PS |
ಟಾರ್ಕ್ |
112 Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT / 5-ಸ್ಪೀಡ್ AMT |
ಕ್ಲೇಮ್ ಮಾಡಿರುವ ಮೈಲೇಜ್ |
ಪ್ರತಿ ಗಂಟೆಗೆ 24.8 ಕಿ.ಮೀ (MT) / ಪ್ರತಿ ಗಂಟೆಗೆ 25.75 ಕಿ.ಮೀ (AMT) |
ಹಿಂದಿನ ಮಾಡೆಲ್ ಗಳಲ್ಲಿ ಲಭ್ಯವಿದ್ದ CNG ಆಯ್ಕೆಯು 2024 ಸ್ವಿಫ್ಟ್ ನಲ್ಲಿ ಲಭ್ಯವಿಲ್ಲ. ಆದರೆ, ಮುಂಬರುವ ತಿಂಗಳುಗಳಲ್ಲಿ ಮಾರುತಿ ಇದನ್ನು ಸೇರಿಸುವ ನಿರೀಕ್ಷೆಯಿದೆ.
ಪ್ರತಿಸ್ಪರ್ಧಿಗಳು
2024 ರ ಮಾರುತಿ ಸ್ವಿಫ್ಟ್ ಹ್ಯುಂಡೈ ಗ್ರಾಂಡ್ i10 ನಿಯೋಸ್ ಗೆ ನೇರ ಪ್ರತಿಸ್ಪರ್ಧಿಯಾಗಿದೆ, ಮತ್ತು ಅದರ ಬೆಲೆಯನ್ನು ನೋಡಿದರೆ ಅದು ರೆನಾಲ್ಟ್ ಟ್ರೈಬರ್‌ಗೆ ಮತ್ತು ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್‌ನಂತಹ ಮೈಕ್ರೋ SUVಗಳಿಗೆ ಪರ್ಯಾಯ ಆಯ್ಕೆಯಾಗಿದೆ.
ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ AMT