• English
  • Login / Register

2024ರ ಜುಲೈನಲ್ಲಿ Maruti Arenaದ ಆಫರ್‌ಗಳ ಭಾಗ 2 – 63,500 ರೂ.ವರೆಗಿನ ಡಿಸ್ಕೌಂಟ್‌ಗಳು

ಮಾರುತಿ ಆಲ್ಟೊ ಕೆ10 ಗಾಗಿ yashika ಮೂಲಕ ಜುಲೈ 22, 2024 06:44 pm ರಂದು ಮಾರ್ಪಡಿಸಲಾಗಿದೆ

  • 269 Views
  • ಕಾಮೆಂಟ್‌ ಅನ್ನು ಬರೆಯಿರಿ

ಪರಿಷ್ಕೃತ ಆಫರ್‌ಗಳು ಈಗ 2024ರ ಜುಲೈನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ

Maruti Celerio, Maruti Dzire, Maruti S-Presso

  • ಮಾರುತಿ ವ್ಯಾಗನ್ ಆರ್ 63,500 ರೂ.ಗಳ ಅತ್ಯಧಿಕ ರಿಯಾಯಿತಿಗಳನ್ನು ನೀಡುತ್ತದೆ.

  • ಮಾರುತಿಯು ಆಲ್ಟೊ ಕೆ10 ಅನ್ನು 63,100 ರೂ.ವರೆಗೆ ಡಿಸ್ಕೌಂಟ್‌ ಅನ್ನು ಹೊಂದಿದೆ.

  • ಗ್ರಾಹಕರು 7 ವರ್ಷಕ್ಕಿಂತ ಕಡಿಮೆ ಹಳೆಯದಾದ ಕಾರನ್ನು ಎಕ್ಸ್‌ಚೇಂಜ್‌ ಮಾಡಿದರೆ ವ್ಯಾಗನ್ ಆರ್ ಮತ್ತು ಹಳೆಯ ಸ್ವಿಫ್ಟ್‌ನಲ್ಲಿ ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ ಅನ್ನು ಪಡೆಯಬಹುದು.

  • ಹೊಸ ಸ್ವಿಫ್ಟ್ ಒಟ್ಟು ರೂ 17,100 ವರೆಗಿನ ರಿಯಾಯಿತಿಗಳೊಂದಿಗೆ ಲಭ್ಯವಿದೆ.

ಮಾರುತಿ ಈಗ ತನ್ನ ಅರೆನಾ ಕಾರುಗಳಿಗಾಗಿ ಪರಿಷ್ಕೃತ ಆಫರ್‌ಗಳನ್ನು ಹೊರತಂದಿದೆ, ಎರ್ಟಿಗಾವನ್ನು ಹೊರತುಪಡಿಸಿ, ಉಳಿದ ಎಲ್ಲಾ ಮೊಡೆಲ್‌ಗಳ ಮೇಲಿರುವ ಆಫರ್‌ಗಳು 2024ರ ಜುಲೈ ಅಂತ್ಯದವರೆಗೆ ಮಾನ್ಯವಾಗಿರುತ್ತದೆ. ಮೊದಲಿನಂತೆ, ಹೊಸ ಆಫರ್‌ಗಳು ಕ್ಯಾಶ್‌ ಡಿಸ್ಕೌಂಟ್‌ಗಳು ಮತ್ತು ಎಕ್ಸ್‌ಚೇಂಜ್‌ ಬೋನಸ್‌ಗಳಂತಹ ವಿವಿಧ ಪ್ರಯೋಜನಗಳನ್ನು ಒಳಗೊಂಡಿವೆ. ಜುಲೈ 31ರವರೆಗೆ ಮಾನ್ಯವಾಗಿರುವ ಮಾಡೆಲ್-ವಾರ ಆಪ್‌ಡೇಟೆಡ್‌ ಆಫರ್‌ಗಳ ತ್ವರಿತ ನೋಟ ಇಲ್ಲಿದೆ:

ಆಲ್ಟೋ ಕೆ10

Maruti Alto K10

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

  45,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

3,100 ರೂ.ವರೆಗೆ

ಒಟ್ಟು ಲಾಭಗಳು

  63,100 ರೂ.ವರೆಗೆ

  • ಮೇಲೆ ತಿಳಿಸಲಾದ ರಿಯಾಯಿತಿಗಳು ಹ್ಯಾಚ್‌ಬ್ಯಾಕ್‌ನ ಸಂಪೂರ್ಣ ಲೋಡ್ ಆಗಿರುವ Vxi+ AMT ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. 

  • ನೀವು Vxi AMT ಆವೃತ್ತಿಯನ್ನು ಆರಿಸಿದರೆ, ಕ್ಯಾಶ್‌ ಡಿಸ್ಕೌಂಟ್‌ಗಳು 2,000 ರೂ.ನಷ್ಟು ಕಡಿಮೆಯಾಗುತ್ತದೆ, ಆದರೆ ಇತರ ಕೊಡುಗೆಗಳು ಬದಲಾಗದೆ ಉಳಿಯುತ್ತವೆ.

  • ಮ್ಯಾನುಯಲ್‌ ಮತ್ತು ಸಿಎನ್‌ಜಿ ಆವೃತ್ತಿಗಳು ಕ್ರಮವಾಗಿ 40,000 ಮತ್ತು 30,000 ರವರೆಗೆ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ಎಲ್ಲಾ ಆವೃತ್ತಿಗಳು ಒಂದೇ ರೀತಿಯ ಎಕ್ಸ್‌ಚೇಂಜ್‌ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಪಡೆಯುತ್ತವೆ.

  • ಮಾರುತಿ ಆಲ್ಟೊ ಕೆ10ನ ಬೆಲೆಗಳು 3.99 ಲಕ್ಷ ರೂ.ನಿಂದ 5.96 ಲಕ್ಷ ರೂ.ಗಳ ನಡುವೆ ಇದೆ.

ಎಸ್‌-ಪ್ರೆಸ್ಸೊ

Maruti S-Presso

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

3,100 ರೂ.ವರೆಗೆ

ಒಟ್ಟು ಲಾಭಗಳು

58,100 ರೂ.ವರೆಗೆ

  • ಟೇಬಲ್‌ನಲ್ಲಿ ಉಲ್ಲೇಖಿಸಲಾದ ಆಫರ್‌ಗಳು ಮಾರುತಿ ಎಸ್-ಪ್ರೆಸ್ಸೊದ ಎಎಮ್‌ಟಿ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.

  • ಮ್ಯಾನುಯಲ್ ಮತ್ತು ಸಿಎನ್‌ಜಿ ಆವೃತ್ತಿಗಳು ತಲಾ 35,000 ರೂ.ವರೆಗೆ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ನೀವು ಲೋವರ್‌-ಸ್ಪೆಕ್ Std ಮತ್ತು Lxi ಆವೃತ್ತಿಗಳನ್ನು ಆರಿಸಿದರೆ, ಕ್ಯಾಶ್‌ ಡಿಸ್ಕೌಂಟ್‌ 33,000 ರೂ.ವರೆಗೆ ಇಳಿಯುತ್ತದೆ, ಆದರೆ ಇತರ ಪ್ರಯೋಜನಗಳ ಮೇಲೆ ಪರಿಣಾಮ ಬೀರುವುದಿಲ್ಲ.

  • ಮಾರುತಿ ಹ್ಯಾಚ್‌ಬ್ಯಾಕ್‌ನ ಬೆಲೆಗಳು 4.26 ಲಕ್ಷ ರೂ.ನಿಂದ 6.12 ಲಕ್ಷ ರೂ.ವರೆಗೆ ಇರುತ್ತದೆ.

ವ್ಯಾಗನ್‌ ಆರ್‌

Maruti Wagon R

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ (< 7 ವರ್ಷಗಳು)

5,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

3,500 ರೂ.ವರೆಗೆ

ಒಟ್ಟು ಲಾಭಗಳು

63,500 ರೂ.ವರೆಗೆ

  •  ಮಾರುತಿಯು ವ್ಯಾಗನ್ ಆರ್‌ನ ಎಎಮ್‌ಟಿ ಟ್ರಾನ್ಸ್‌ಮಿಷನ್‌ ಇರುವ ಎರಡು ಎಂಜಿನ್ ಆಯ್ಕೆಗಳಲ್ಲಿ ಈ ಆಫರ್‌ ಅನ್ನು ನೀಡುತ್ತಿದೆ. ಮ್ಯಾನುಯಲ್‌ ಮತ್ತು ಸಿಎನ್‌ಜಿ ಆವೃತ್ತಿಗಳು ಕ್ರಮವಾಗಿ 35,000 ಮತ್ತು 30,000 ರವರೆಗೆ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ಗಳನ್ನು ಪಡೆಯುತ್ತವೆ.

  • ಎಲ್ಲಾ ಆವೃತ್ತಿಗಳು ಒಂದೇ ರೀತಿಯ ಎಕ್ಸ್‌ಚೇಂಜ್‌ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಪಡೆಯುತ್ತವೆ.

  • ನೀವು ಎಕ್ಸ್ಚೇಂಜ್ ಮಾಡಲು 7 ವರ್ಷಕ್ಕಿಂತ ಕಡಿಮೆ ಹಳೆಯದಾದ ಕಾರನ್ನು ಹೊಂದಿದ್ದರೆ, ಮಾರುತಿಯು 5,000 ರೂ.ವರೆಗಿನ ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ ಅನ್ನು ನೀಡುತ್ತಿದೆ.

  • ಮಾರುತಿ ವ್ಯಾಗನ್ ಆರ್‌ನ ಬೆಲೆಯು 5.54 ಲಕ್ಷ ರೂ.ನಿಂದ 7.37 ಲಕ್ಷ ರೂ.ಗಳ ವರೆಗೆ ಇರುತ್ತದೆ. 

ಸೆಲೆರಿಯೊ

Maruti Celerio

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

  3,100 ರೂ.ವರೆಗೆ

ಒಟ್ಟು ಲಾಭಗಳು

58,100 ರೂ.ವರೆಗೆ

  • ಮೇಲೆ ತಿಳಿಸಿದ ಆಫರ್‌ಗಳು ಮಾರುತಿ ಸೆಲೆರಿಯೊದ ಟಾಪ್‌-ಸ್ಪೆಕ್ Zxi ಮತ್ತು Zxi+ AMT ಆವೃತ್ತಿಗಳಿಗೆ ಅನ್ವಯಿಸುತ್ತವೆ.

  • ಆಟೋಮ್ಯಾಟಿಕ್‌ ಮತ್ತು ಸಿಎನ್‌ಜಿ ಆವೃತ್ತಿಗಳು ತಲಾ  35,000 ರೂ.ವರೆಗೆ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ನೀವು ಮಿಡ್-ಸ್ಪೆಕ್ Vxi  ಎಎಮ್‌ಟಿ ಆವೃತ್ತಿಯನ್ನು ಆರಿಸಿದರೆ, ಕ್ಯಾಶ್‌ ಡಿಸ್ಕೌಂಟ್‌  2,000 ರೂ.ನಷ್ಟು ಕಡಿಮೆಯಾಗುತ್ತದೆ, ಆದರೆ ಇತರ ಉಳಿತಾಯಗಳು ಬದಲಾಗದೆ ಉಳಿಯುತ್ತವೆ.

  • ಕಾರ್ಪೊರೇಟ್ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳು ಎಲ್ಲಾ ಆವೃತ್ತಿಗಳಿಗೆ ಒಂದೇ ಆಗಿರುತ್ತವೆ.

  • ಮಾರುತಿ ಸೆಲೆರಿಯೊದ ಬೆಲೆಗಳು 5.37 ಲಕ್ಷ ರೂ.ನಿಂದ 7.09 ಲಕ್ಷ ರೂ.ಗಳ ನಡುವೆ ಇರುತ್ತವೆ.

ಈಕೋ

Maruti Eeco

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

  20,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

2,100 ರೂ.ವರೆಗೆ

ಒಟ್ಟು ಲಾಭಗಳು

37,100 ರೂ.ವರೆಗೆ

  • ಮಾರುತಿಯ ಪ್ಯಾಸೆಂಜರ್‌ ಕಾರು ಅಂತಲೇ ಫೇಮಸ್ಸ್‌ ಆಗಿರುವ ಇಕೋ ತನ್ನ ಪೆಟ್ರೋಲ್ ಆವೃತ್ತಿಗಳಲ್ಲಿ ಈ ಪ್ರಯೋಜನಗಳನ್ನು ಪಡೆಯುತ್ತದೆ.

  • ಸಿಎನ್‌ಜಿ ಆವೃತ್ತಿಗಳು 10,000 ರೂಪಾಯಿಗಳ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತವೆ.

  • ಎಲ್ಲಾ ಆವೃತ್ತಿಗಳು ಒಂದೇ ರೀತಿಯ ಎಕ್ಸ್‌ಚೇಂಜ್‌ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಪಡೆಯುತ್ತವೆ.

  • ಮಾರುತಿ ಇಕೋದ ಬೆಲೆಗಳು 5.32 ಲಕ್ಷ ರೂ.ನಿಂದ 6.58 ಲಕ್ಷ ರೂ.ವರೆಗೆ ಇದೆ.

ಹಳೆ-ತಲೆಮಾರಿನ ಸ್ವಿಫ್ಟ್‌

Old-generation Maruti Swift

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

20,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ (< 7 ವರ್ಷಗಳು)

  5,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

2,100 ರೂ.ವರೆಗೆ

ಒಟ್ಟು ಲಾಭಗಳು

42,100 ರೂ.ವರೆಗೆ

  • ಮಾರುತಿ ತನ್ನ ಬಾಕಿ ಇರುವ ಸ್ಟಾಕ್ ಅನ್ನು ತೆರವುಗೊಳಿಸುವವರೆಗೆ ಹಳೆಯ-ಜನ್ ಸ್ವಿಫ್ಟ್‌ನಲ್ಲಿಯೂ ಆಫರ್‌ಗಳನ್ನು ನೀಡುತ್ತಿದೆ.

  • ಇದರ ಎಎಮ್‌ಟಿ ಆವೃತ್ತಿಗಳು 20,000 ರೂ.ವರೆಗೆ ಕ್ಯಾಶ್‌ ಡಿಸ್ಕೌಂಟ್‌ಅನ್ನು ಪಡೆಯುತ್ತವೆ, ಮ್ಯಾನುಯಲ್‌ ಆವೃತ್ತಿಗಳು 15,000 ರೂ.ವರೆಗೆ ಕಡಿಮೆ ಡಿಸ್ಕೌಂಟ್‌ಅನ್ನು ಪಡೆಯುತ್ತವೆ ಮತ್ತು ಸಿಎನ್‌ಜಿ ಆವೃತ್ತಿಗಳು ಯಾವುದೇ ಕ್ಯಾಶ್‌ ಡಿಸ್ಕೌಂಟ್‌ ಅನ್ನು ನೀಡುವುದಿಲ್ಲ.

  • ಎಲ್ಲಾ ಆವೃತ್ತಿಗಳು 15,000 ರೂ.ವರೆಗೆ ಎಕ್ಸ್‌ಚೇಂಜ್‌ ಬೋನಸ್ ಅನ್ನು ಪಡೆಯುತ್ತವೆ ಮತ್ತು ಎಕ್ಸ್‌ಚೇಂಜ್‌ ಮಾಡುವ ಕಾರ್ 7 ವರ್ಷಕ್ಕಿಂತ ಕಡಿಮೆ ಹಳೆಯದಾಗಿದ್ದರೆ, ನೀವು ರೂ 5,000 ವರೆಗಿನ ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ ಅನ್ನು ಸಹ ಪಡೆಯಬಹುದು.

  • ಕಾರ್ಪೊರೇಟ್ ಡಿಸ್ಕೌಂಟ್‌ಗಳು ಎಲ್ಲಾ ಆವೃತ್ತಿಗಳಿಗೆ ಒಂದೇ ಆಗಿರುತ್ತದೆ.

  • 18,400 ಹೆಚ್ಚುವರಿ ಬೆಲೆಗೆ ಸ್ವಿಫ್ಟ್‌ನ ಸ್ಪೇಷಲ್‌ ಎಡಿಷನ್‌ ಸಹ ಲಭ್ಯವಿದೆ.

  • ಹಳೆಯ-ಜೆನ್ ಮಾರುತಿ ಸ್ವಿಫ್ಟ್‌ನ ಕೊನೆಯ ದಾಖಲಾದ ಬೆಲೆ  6.24 ಲಕ್ಷ ರೂ.ನಿಂದ 9.14 ಲಕ್ಷ ರೂ.ವರೆಗೆ ಇತ್ತು.

2024ರ ಸ್ವಿಫ್ಟ್‌

Swift 2024

ಆಫರ್‌ಗಳು

ಮೊತ್ತ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

  2,100 ರೂ.

ಒಟ್ಟು ಲಾಭಗಳು

17,100 ರೂ.

  • ಹೊಸ ಮಾರುತಿ ಸ್ವಿಫ್ಟ್ ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಹೊರತುಪಡಿಸಿ ಬೇರೆ ಯಾವುದೇ ಡೀಲ್‌ಗಳನ್ನು ನೀಡುವುದಿಲ್ಲ.

  • ಗ್ರಾಹಕರು ಅದರ ಮ್ಯಾನುಯಲ್‌ ಮತ್ತು ಎಎಮ್‌ಟಿ ಆವೃತ್ತಿಗಳೆರಡರಲ್ಲೂ 15,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಮತ್ತು 2,100 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಅನ್ನು ಜೊತೆಗೆ ಪಡೆಯಬಹುದು.

  • ಇದರ ಬೆಲೆ 6.49 ಲಕ್ಷ ರೂ.ನಿಂದ 9.60 ಲಕ್ಷ ರೂ.ಗಳ ವರೆಗೆ ಇದೆ.

ಡಿಜೈರ್‌

Maruti Dzire

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

  15,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಒಟ್ಟು ಲಾಭಗಳು

30,000 ರೂ.ವರೆಗೆ

  • ಸಬ್-4ಎಮ್‌ ಸೆಡಾನ್‌ನ ಸಿಎನ್‌ಜಿ ಆವೃತ್ತಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಆವೃತ್ತಿಗಳಲ್ಲಿ ಈ ಆಫರ್‌ಗಳನ್ನು ನೀಡಲಾಗುತ್ತದೆ.

  • ಸಿಎನ್‌ಜಿ ಆವೃತ್ತಿಗಳು ಯಾವುದೇ ರೀತಿಯ ಡಿಸ್ಕೌಂಟ್‌ ಅನ್ನು ಪಡೆಯುವುದಿಲ್ಲ.

  • ಮಾರುತಿ ಡಿಜೈರ್‌ನ ಬೆಲೆ 6.57 ಲಕ್ಷ ರೂ.ನಿಂದ 9.39 ಲಕ್ಷ ರೂ.ವರೆಗೆ ಇದೆ.

ಬ್ರೆಝಾ

Maruti Brezza

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

27,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಒಟ್ಟು ಲಾಭಗಳು

42,000 ರೂ.ವರೆಗೆ

  • ಸಬ್-4ಎಮ್‌ ಎಸ್‌ಯುವಿಯು Lxi ಅದರ ಅರ್ಬಾನೋ ಎಡಿಷನ್‌ನಲ್ಲಿ 27,000 ವರೆಗಿನ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ಲಭ್ಯವಿದೆ. ಆದರೆ ಇದರ  VXi ಅರ್ಬಾನೊ ಎಡಿಷನ್‌ನಲ್ಲಿ ಕ್ಯಾಶ್‌ ಡಿಸ್ಕೌಂಟ್‌ 15,000 ರೂ.ಗೆ ಮತ್ತು ಅದರ Zxi ಮತ್ತು Zxi + ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ ಆವೃತ್ತಿಗಳಲ್ಲಿ 10,000 ರೂ.ಗೆ ಇಳಿಯುತ್ತದೆ.

  • ಎಕ್ಸ್‌ಚೇಂಜ್‌ ಬೋನಸ್ ಎಲ್ಲಾ ಆವೃತ್ತಿಗಳಿಗೆ ಒಂದೇ ಆಗಿರುತ್ತದೆ.

  • ಸಿಎನ್‌ಜಿ ಆವೃತ್ತಿಗಳು ಯಾವುದೇ ರೀತಿಯ ಆಫರ್‌ಗಳನ್ನು ಪಡೆಯುವುದಿಲ್ಲ.

  • ಮಾರುತಿ ಬ್ರೆಝಾದ ಬೆಲೆಗಳು 8.34 ಲಕ್ಷ ರೂ.ನಿಂದ 14.14 ಲಕ್ಷ ರೂಪಾಯಿಗಳಷ್ಟಿದೆ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ

ಗಮನಿಸಿ: ನಿಮ್ಮ ಸ್ಥಳ ಮತ್ತು ಆಯ್ಕೆ ಮಾಡಿದ ಆವೃತ್ತಿಗಳ ಆಧಾರದ ಮೇಲೆ ಈ ಆಫರ್‌ಗಳು ಭಿನ್ನವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ಮಾರುತಿ ಅರೆನಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಆಲ್ಟೊ ಕೆ10 ಆನ್‌ರೋಡ್‌ ಬೆಲೆ 

was this article helpful ?

Write your Comment on Maruti ಆಲ್ಟೊ ಕೆ10

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience