Choose your suitable option for better User experience.
  • English
  • Login / Register

Mahindra XUV 3XO ವರ್ಸಸ್‌ Tata Nexon - 360-ಡಿಗ್ರಿ ಕ್ಯಾಮೆರಾದ ಹೋಲಿಕೆ

published on ಮೇ 31, 2024 06:45 am by ansh for ಟಾಟಾ ನೆಕ್ಸಾನ್‌

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಲವು ಕ್ಯಾಮೆರಾಗಳಿಂದ ವೀಡಿಯೊ ಫೀಡ್ ಅನ್ನು ಎರಡೂ ಕಾರುಗಳಲ್ಲಿ 10.25-ಇಂಚಿನ ಸ್ಕ್ರೀನ್‌ನ ಮೇಲೆ ಪ್ರದರ್ಶಿಸಲಾಗುತ್ತದೆ, ಆದರೆ ಒಂದು ಸ್ಪಷ್ಟವಾಗಿ ಇತರಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ

Mahindra XUV 3XO vs Tata Nexon: 360-degree Cameras Compared

ಮಹೀಂದ್ರಾ XUV 3XO ಮಾರುಕಟ್ಟೆಗೆ ಲಗ್ಗೆ ಇಟ್ಟ ಇತ್ತೀಚಿನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ ಮತ್ತು ಈ ಸೆಗ್ಮೆಂಟ್‌ನಲ್ಲಿ ಇದರ ನೇರ ಪ್ರತಿಸ್ಪರ್ಧಿ ಎಂದರೆ ಅದು ಟಾಟಾ ನೆಕ್ಸಾನ್ ಆಗಿದೆ. ಈ ಎರಡೂ ಭಾರತೀಯ ಮೂಲದ ಕಾರುಗಳನ್ನು ಹಲವು ವಿಧಗಳಲ್ಲಿ ಹೋಲಿಸಬಹುದಾದರೂ, ನಾವು ಎರಡು ಮೊಡೆಲ್‌ಗಳನ್ನು ಹೊಂದಿದ್ದಾಗ, ಎರಡರ 360-ಡಿಗ್ರಿ ಕ್ಯಾಮೆರಾ ವೈಶಿಷ್ಟ್ಯದಲ್ಲಿ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ನಾವು ಈ ವೈಶಿಷ್ಟ್ಯವನ್ನು ಹೋಲಿಕೆ ಮಾಡಿದ್ದೇವೆ. ಇಲ್ಲಿ ನಾವು ತಿಳಿದ ಅಂಶಗಳನ್ನು ಕೆಳಗೆ ಗಮನಿಸೋಣ ಬನ್ನಿ:   

A post shared by CarDekho India (@cardekhoindia)

ಹೇಗಿದೆ ಇದರ ಫೀಡ್‌ ?

Mahindra XUV 3XO ORVM Camera

XUV 3XO ನಲ್ಲಿ, 3D ಮೋಡ್‌ನಲ್ಲಿರುವಾಗ 360-ಡಿಗ್ರಿ ಕ್ಯಾಮೆರಾ ಸೆಟಪ್‌ನ ಫೀಡ್ ಸ್ವಲ್ಪ ನಿಧಾನಗತಿಯಲ್ಲಿರುತ್ತದೆ ಮತ್ತು ನೀವು ಕಾರನ್ನು ಚಲಿಸುವಾಗ ಕ್ಯಾಮೆರಾದ ಆಂಗಲ್‌ ಕೂಡ ಅಷ್ಟೇನೂ ಉತ್ತಮ ಎನಿಸುವುದಿಲ್ಲ. ಅಲ್ಲದೆ, ಮಹೀಂದ್ರಾ ಎಸ್‌ಯುವಿಯಲ್ಲಿನ ಕ್ಯಾಮೆರಾ ಫೀಡ್ ಅನ್ನು ಅರ್ಧದಷ್ಟು ಸ್ಕ್ರೀನ್‌ನ ಮೇಲೆ ಮಾತ್ರ ಪ್ರದರ್ಶಿಸಲಾಗುತ್ತದೆ, ಇದು ಈ ವೈಶಿಷ್ಟ್ಯವನ್ನು ಬಳಸುವಾಗ ವಿವರಗಳನ್ನು ಗುರುತಿಸಲು ಕಷ್ಟವಾಗುತ್ತದೆ. ಇದರೊಂದಿಗೆ, 3D ಫಿಗರ್ ಸಹ ಪಾರದರ್ಶಕವಾಗಿರುತ್ತದೆ, ಇದು ಕಾರಿನ ಅಡಿಯಲ್ಲಿ ಇರಬಹುದಾದ ವಸ್ತುಗಳನ್ನು ಗುರುತಿಸಲು ಸಹಕಾರಿಯಾಗಿದೆ. 

Tata Nexon 360-degree Camera Feed

ಟಾಟಾ ನೆಕ್ಸಾನ್‌ನಲ್ಲಿ ಕ್ಯಾಮೆರಾಗಳಿಂದ ವೀಡಿಯೊ ಫೀಡ್ ಹೆಚ್ಚು ನಯವಾಗಿದೆ ಮತ್ತು ವಿಳಂಬವಾಗುವುದಿಲ್ಲ. 3D ಮೊಡೆಲ್‌ ಯಾವುದೇ ಫ್ರೇಮ್ ಡ್ರಾಪ್ ಇಲ್ಲದೆ ವೇಗವಾಗಿ ಚಲಿಸುತ್ತದೆ ಮತ್ತು ಇದು ಸಂಪೂರ್ಣ 10.25-ಇಂಚಿನ ಸ್ಕ್ರೀನ್‌ಅನ್ನು ಆವರಿಸುತ್ತದೆ, ಇದು ವಿವರಗಳನ್ನು ಗುರುತಿಸುವುದನ್ನು ಹೆಚ್ಚು ಸುಲಭಗೊಳಿಸುತ್ತದೆ.

ಇದನ್ನು ಸಹ ಓದಿ: Mahindra XUV 3XO AX7 ವರ್ಸಸ್‌ Volkswagen Taigun Highline: ಯಾವ ಎಸ್‌ಯುವಿ ಖರೀದಿಸಬೇಕು?

ಈ ಪರೀಕ್ಷೆಯ ನಂತರ, ಟಾಟಾ ನೆಕ್ಸಾನ್‌ನಲ್ಲಿ ಈ ವೈಶಿಷ್ಟ್ಯದ ಅನುಷ್ಠಾನವು ಉತ್ತಮವಾಗಿದೆ ಎಂದು ನಾವು ಖಚಿತವಾಗಿ ಹೇಳಬಹುದು ಮತ್ತು ಇದರಲ್ಲಿ 3XOವು ಸುಧಾರಿಸಬೇಕಾದದ್ದು ಹಲವು ಅಂಶಗಳಿವೆ.

ಇತರ ಸುರಕ್ಷತಾ ವೈಶಿಷ್ಟ್ಯಗಳು

Tata Nexon Airbag

360-ಡಿಗ್ರಿ ಕ್ಯಾಮೆರಾವನ್ನು ಹೊರತುಪಡಿಸಿ, ಎರಡೂ ಕಾರುಗಳು ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರುಗಳು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ನೀಡುತ್ತವೆ.

Mahindra XUV 3XO ADAS Features

ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಲೆವೆಲ್ 2 ಎಡಿಎಎಸ್ ವೈಶಿಷ್ಟ್ಯಗಳ ಸಂಪೂರ್ಣ ಸೂಟ್‌ನೊಂದಿಗೆ ಮಹೀಂದ್ರಾ 3XO ಮುನ್ನಡೆ ಸಾಧಿಸುತ್ತದೆ. 

ಸದ್ಯಕ್ಕೆ, ಎಲ್ಲಾ NCAP ನಿಂದ ಟಾಟಾ ನೆಕ್ಸಾನ್‌ ಅನ್ನು ಮಾತ್ರ ಕ್ರ್ಯಾಶ್ ಟೆಸ್ಟ್ ಮಾಡಲಾಗಿದೆ ಮತ್ತು ಇದು ಗ್ಲೋಬಲ್ NCAP ಮತ್ತು ಭಾರತ್ NCAP ಎರಡರಿಂದಲೂ 5-ಸ್ಟಾರ್‌ಗಳ ಪರಿಪೂರ್ಣ ಸ್ಕೋರ್ ಅನ್ನು ಪಡೆದಿದೆ.  ಎಕ್ಸ್‌ಯುವಿ 3XO ಅನ್ನು ಇನ್ನೂ ಪರೀಕ್ಷಿಸಲಾಗಿಲ್ಲ, ಆದರೆ ಪೂರ್ವ-ಫೇಸ್‌ಲಿಫ್ಟ್ ಎಕ್ಸ್‌ಯುವಿ300 2020 ರಲ್ಲಿ ಗ್ಲೋಬಲ್ NCAP ಎರಡರಿಂದಲೂ 5 ಸ್ಟಾರ್‌ಗಳನ್ನು ಗಳಿಸಿದೆ ಮತ್ತು ಮುಂದಿನ ದಿನಗಳಲ್ಲಿ ಭಾರತ್ NCAP ನಿಂದ ಪರೀಕ್ಷಿಸಿದಾಗ ಇದು ಭರವಸೆಯ ಫಲಿತಾಂಶವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ.

ಬೆಲೆಗಳು

Mahindra XUV 3XO
Tata Nexon

ಎಕ್ಸ್ ಶೋ ರೂಂ ಬೆಲೆಗಳು

ಟಾಟಾ ನೆಕ್ಸಾನ್‌

ಮಹಿಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ*

8 ಲಕ್ಷದಿಂದ 15.80 ಲಕ್ಷ ರೂ.

7.49 ಲಕ್ಷದಿಂದ 15.49 ಲಕ್ಷ ರೂ.

*ಮಹೀಂದ್ರಾ XUV 3XO ನ ಪರಿಚಯಾತ್ಮಕ ಬೆಲೆಗಳಾಗಿವೆ

ಈ ಎರಡೂ ಕಾರುಗಳು ಸ್ಪರ್ಧಾತ್ಮಕವಾದ ಬೆಲೆಯನ್ನು ಹೊಂದಿವೆ ಮತ್ತು ಇದೀಗ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಅದರ ಪರಿಚಯಾತ್ಮಕ ಬೆಲೆಗಳಿಂದ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ. ಇವೆರಡೂ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ನೀಡುತ್ತವೆ, ಪ್ರತಿಯೊಂದೂ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಹೊಂದಿದೆ. ಈ ಕಾರುಗಳು ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಮತ್ತು ಮಾರುತಿ ಬ್ರೆಝಾಗೆ ಸ್ಪರ್ಧೆಯನ್ನು ಒಡ್ಡುತ್ತದೆ.

ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಎಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ನೆಕ್ಸಾನ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience