Login or Register ಅತ್ಯುತ್ತಮ CarDekho experience ಗೆ
Login

ನೀವು ಈ ಮಾರುತಿ ಸುಝುಕಿ ಜಿಮ್ನಿ ರೈನೋ ಆವೃತ್ತಿಯನ್ನು ಖರೀದಿಸುತ್ತೀರಾ?

ಮಾರುತಿ ಜಿಮ್ನಿ ಗಾಗಿ tarun ಮೂಲಕ ಜೂನ್ 26, 2023 02:33 pm ರಂದು ಪ್ರಕಟಿಸಲಾಗಿದೆ

ಈ ರೈನೋ ಆವೃತ್ತಿಯನ್ನು ಮಲೇಷಿಯಾದಲ್ಲಿ ಎಸ್‌ಯುವಿಯ ಮೂರು-ಬಾಗಿಲಿನ ಆವೃತ್ತಿಯೊಂದಿಗೆ ಪರಿಚಯಿಸಲಾಗಿದ್ದು, ಇದು ಕೇವಲ 30 ಯೂನಿಟ್‌ಗಳಿಗೆ ಸೀಮಿತವಾಗಿದೆ

  • ಮಾರುತಿ ಜಿಮ್ನಿ ರೈನೋ ಆವೃತ್ತಿಯು ಕೇವಲ ತನ್ನ ನೋಟದಲ್ಲಿ ಬದಲಾವಣೆಯನ್ನು ಹೊಂದಿದ್ದು, ಫೀಚರ್‌ಗಳು ಮತ್ತು ಪವರ್‌ಟ್ರೇನ್‌ಗಳಲ್ಲಿ ಯಾವುದೇ ವ್ಯತ್ಯಾಸವನ್ನು ಹೊಂದಿಲ್ಲ.

  • ಪ್ರಮುಖವಾಗಿ ಇದು ವಿಂಟೇಜ್ ಮೆಶ್ ಗ್ರಿಲ್, ಹೆಚ್ಚು ಕ್ಲಾಡಿಂಗ್, ಡೆಕಾಲ್‌ಗಳು ಮತ್ತು ‘ರೈನೋ’ ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ.

  • ಇದರ ಸಂಪೂರ್ಣ-ಕಪ್ಪು ಇಂಟೀರಿಯರ್ ಬದಲಾಗದೇ ಉಳಿದಿದ್ದು ಹೆಚ್ಚು ಪ್ರೀಮಿಯಂ ಫೂಟ್ ಮ್ಯಾಟ್‌ಗಳನ್ನು ಉಳಿಸಿಕೊಂಡಿದೆ.

  • ಇಂಡಿಯಾ ಸ್ಪೆಕ್ ಮಾಡೆಲ್‌ನಲ್ಲಿ ಕಂಡುಬರುವಂತೆ, 4WD ಜೊತೆಗೆ ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಇದು ಪಡೆದಿದೆ.

  • ಇತರ ಸೀಮಿತ ಆವೃತ್ತಿಗಳೊಂದಿಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದು ಬಿಡುಗಡೆಯಾಗಲಿದೆ.

ಮಾರುತಿ ಸುಝುಕಿ ಜಿಮ್ನಿ ಜಗತ್ತಿನಾದ್ಯಂತ ಹಲವಾರು ಮಾರುಕಟ್ಟೆಗಳಲ್ಲಿ ಲಭ್ಯವಿದೆ, ಆದರೆ ಕೇವಲ ಮೂರು-ಬಾಗಿಲಿನ ಆವೃತ್ತಿಯಲ್ಲಿ ಮಾತ್ರ. ಈ ಜಿಮ್ನಿಯು ಉತ್ತಮ ರೈನೋ ಆವೃತ್ತಿಯೊಂದಿಗೆ ಮಲೇಷಿಯಾದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಸಂಪೂರ್ಣ ಕಾಸ್ಮೆಟಿಕ್ ಎನಿಸುವ ಬದಲಾವಣೆಗಳನ್ನು ಇದು ಪಡೆದಿದೆ, ಆದರೆ ಅದರ ವಿಭಿನ್ನ ನೋಟವು ಸಾಕಷ್ಟು ಆಕರ್ಷಕವೆನಿಸುತ್ತದೆ. ಈ ‘ರೈನೋ’ ಆವೃತ್ತಿ ಮತ್ತು ಹಳೆಯ ಗ್ರ್ಯಾಂಡ್ ವಿಟಾರಾವನ್ನು ಒಳಗೊಂಡಿರುವ ಸುಝುಕಿಯ ಆಫ್-ರೋಡಿಂಗ್ ಕ್ಲಬ್‌ನೊಂದಿಗೆ ಸಂಬಂಧ ಹೊಂದಿದೆ.

ಎಕ್ಸ್‌ಟೀರಿಯರ್ ವಿನ್ಯಾಸದ ಬದಲಾವಣೆಗಳು

ಮುಂಭಾಗದಲ್ಲಿ, ಈ ಜಿಮ್ನಿ ರೈನೋ ಲೋಗೋ ಬದಲಿಗೆ ‘ಸುಝುಕಿ’ ಅಕ್ಷರಗಳೊಂದಿಗೆ, ಹಳೆಯ ಶೈಲಿಯ ಗ್ರಿಲ್‌ಗಳನ್ನು ಹೊಂದಲಿದೆ. ಮೆಶ್ ಗ್ರಿಲ್ ಅನ್ನು ಸುತ್ತುವರಿದಿರುವ ಡಾರ್ಕ್ ಕ್ರೋಮ್ ಪ್ಯಾನಲ್ ರೌಂಡ್ ಹೆಡ್‌ಲೈಟ್‌ಗಳನ್ನು ಹೊಂದಿದೆ. ಮುಂಭಾಗದ ಬಂಪರ್ ಅನ್ನು ಹೊಸ ಮತ್ತು ಗಟ್ಟಿಮುಟ್ಟಾದ ಕ್ಲಾಡಿಂಗ್‌ನೊಂದಿಗೆ ಸ್ವಲ್ಪ ಮಟ್ಟಿಗೆ ಟ್ವೀಕ್ ಮಾಡಲಾಗಿದೆ.

ಪಾರ್ಶ್ವದಲ್ಲಿಯೂ ಕಂಡುಬರುವ ವಿಶೇಷವಾದ ಡೆಕಲ್‌ಗಳನ್ನು ನೀವು ಬಾನೆಟ್‌ನಲ್ಲೂ ಪಡೆಯುತ್ತೀರಿ. ಆಫ್-ರೋಡಿಂಗ್‌ಗೆ ಹೆಚ್ಚು ಸಮರ್ಥವಾಗಿಸಲು ಪಾರ್ಶ್ವದಲ್ಲಿ ಕ್ಲಾಡಿಂಗ್‌ನೊಂದಿಗೆ ಹೆಚ್ಚುವರಿ ರಕ್ಷಣೆಯನ್ನು ನೀಡಲಾಗಿದೆ.

ಇದರ ಹಿಂಭಾಗದ ಪ್ರೊಫೈಲ್ ಬದಲಾಗದೇ ಉಳಿದಿದ್ದು, ಬೂಟ್‌ನಲ್ಲಿನ ‘ರೈನೋ’ ಲೋಗೋ ಮತ್ತು ಬಿಡಿ ಚಕ್ರಕ್ಕೆ (ಸ್ಪೇರ್ ವ್ಹೀಲ್) ಒಂದೇ ರೀತಿಯ ಹೊದಿಕೆಯನ್ನು ಪಡೆದಿದೆ.

ಇದನ್ನೂ ಓದಿ: ಮಾರುತಿ ಜಿಮ್ನಿಗಾಗಿ ಈಗಾಗಲೇ 6 ತಿಂಗಳಿಗಿಂತ ಅಧಿಕ ಕಾಲ ಕಾಯುವಿಕೆ ನಡೆದಿದೆ

ಕೆಲವು ಇಂಟೀರಿಯರ್ ಬದಲಾವಣೆಗಳು

ಇಂಟೀರಿಯರ್ ವಿನ್ಯಾಸವು ಯಾವುದೇ ಬದಲಾವಣೆಯನ್ನು ಪಡೆದಿಲ್ಲ ಮತ್ತು ಪ್ರೀಮಿಯಂ ಫೂಟ್ ಮ್ಯಾಟ್‌ಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಯಾವುದೇ ಅಪ್‌ಗ್ರೇಟೆಡ್ ಫೀಚರ್‌ಗಳಿಲ್ಲದೇ ಇದು ಸಂಪೂರ್ಣ-ಕಪ್ಪು ಥೀಮ್ ಅನ್ನು ಪಡೆಯುತ್ತದೆ. ಮಲೇಷಿಯಾದಲ್ಲಿನ ಜಿಮ್ನಿ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಪಡೆದರೆ, ಇಂಡಿಯಾ-ಸ್ಪೆಕ್ ಐದು-ಬಾಗಿಲಿನ ಮಾಡೆಲ್ ಟಾಪ್-ಸ್ಪೆಕ್‌ನಲ್ಲಿ ಹೆಚ್ಚು ಪ್ರೀಮಿಯಂ ಆಗಿರುವ 9-ಇಂಚಿನ ಯೂನಿಟ್ ಅನ್ನು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಆ್ಯಪಲ್ ಕಾರ್‌ಪ್ಲೇ ಅನ್ನು ಪಡೆಯುತ್ತದೆ.

ಪವರ್‌ಟ್ರೇನ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಜಿಮ್ನಿ, ಭಾರತ ಮತ್ತು ಮಲೇಷಿಯಾದಲ್ಲಿ ಒಂದೇ ರೀತಿಯ 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು 4x4 ಪ್ರಮಾಣಿತವಾಗಿ ಪಡೆಯುತ್ತದೆ. ಭಾರತದಲ್ಲಿ ನೀವು 5-ಸ್ಪೀಡ್ ಮ್ಯಾನ್ಯುವಲ್ ಮತ್ತು 4-ಸ್ಪೀಡ್ AT ಆಯ್ಕೆಯನ್ನು ಪಡೆಯಬಹುದು, ಆದರೆ ಮಲೇಷಿಯಾದಲ್ಲಿ ಮೂರು ಬಾಗಿಲಿನ ಆವೃತ್ತಿಯು ಕೇವಲ 4-ಸ್ಪೀಡ್ AT ಆಯ್ಕೆಯನ್ನು ಮಾತ್ರ ಪಡೆಯುತ್ತಿದೆ.

ಇದನ್ನೂ ಓದಿ: ನಿಮ್ಮ ಮಾರುತಿ ಜಿಮ್ನಿಯನ್ನು ನೀವು ಹೇಗೆ ವೈಯಕ್ತೀಕರಿಸಬಹುದು ಎಂಬುದು ಇಲ್ಲಿದೆ

ಭಾರತಕ್ಕೆ ಪಾದಾರ್ಪಣೆ ಮಾಡುತ್ತಿದೆಯೇ?

ಇದರ ಕುರಿತು ಬಹಳ ಬೇಗ ಊಹಿಸುತ್ತಿದ್ದೇವೆ ಎನಿಸಿದರೂ, ಭವಿಷ್ಯದಲ್ಲಿ ನಾವು ಭಾರತದಲ್ಲಿ ಜಿಮ್ನಿಯ ಅಂತಹುದೇ ಅಥವಾ ಸೀಮಿತ ಆವೃತ್ತಿಯನ್ನು ನೋಡಬಹುದು. ಈ ರೈನೋ ಆವೃತ್ತಿಯು ಕಲೆಕ್ಟರ್‌ಸ್ ಆವೃತ್ತಿಯಾಗಲಿದ್ದು, ಇದು ಕೇವಲ 30 ಯೂನಿಟ್‌ಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನು ಹೆಚ್ಚು ಆಕರ್ಷಕಗೊಳಿಸಲು ಐದು-ಬಾಗಿಲಿನ ಜಿಮ್ನಿಗಾಗಿ ನಾವು ಕೆಲವು ವಿಶೇಷ ಆವೃತ್ತಿಗಳನ್ನು ಮುಂಬರುವ ವರ್ಷಗಳಲ್ಲಿ ನಿರೀಕ್ಷಿಸುತ್ತಿದ್ದೇವೆ. ಇದು ಪ್ರಸ್ತುತ ಭಾರತದಲ್ಲಿ ರೂ. 12.74 ಲಕ್ಷದಿಂದ ರೂ. 14.89 ಲಕ್ಷಗಳವರೆಗೆ ಬೆಲೆಯನ್ನು ಹೊಂದಿದೆ. (ಎಕ್ಸ್-ಶೋರೂಮ್).

ಇನ್ನಷ್ಟು ಇಲ್ಲಿ ಓದಿ : ಜಿಮ್ನಿ ಆನ್ ರೋಡ್ ಬೆಲೆ

Share via

Write your Comment on Maruti ಜಿಮ್ನಿ

explore ಇನ್ನಷ್ಟು on ಮಾರುತಿ ಜಿಮ್ನಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.2.84 - 3.12 ಸಿಆರ್*
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.50 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ