ಈಗ ಕೆಲವು ಆಯ್ದ ಡೀಲರ್‌ಶಿಪ್‌ಗಳಲ್ಲಿ Tata Altroz Racer ಅನ್ನು ಬುಕ್ ಮಾಡಿ
ಟಾಟಾ ಆಲ್ಟ್ರೋಝ್ ಗಾಗಿ shreyash ಮೂಲಕ ಮೇ 31, 2024 02:26 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಆಲ್ಟ್ರೋಝ್ ರೇಸರ್ ರೆಗ್ಯುಲರ್ ಆಲ್ಟ್ರೋಝ್‌ನ ಸ್ಪೋರ್ಟಿಯರ್ ವರ್ಷನ್ ಆಗಿದ್ದು, ನವೀಕರಿಸಿದ ಗ್ರಿಲ್ ಮತ್ತು ಬ್ಲ್ಯಾಕ್ ಔಟ್ ಅಲಾಯ್ ವೀಲ್‌ಗಳಂತಹ ಬದಲಾವಣೆಗಳನ್ನು ಮಾಡಲಾಗಿದೆ
-
ಗ್ರಾಹಕರು ರೂ. 21,000 ವರೆಗಿನ ಟೋಕನ್ ಮೊತ್ತಕ್ಕೆ ಆಲ್ಟ್ರೋಝ್ ರೇಸರ್ ಅನ್ನು ಬುಕ್ ಮಾಡಬಹುದು.
-
ಆಲ್ಟ್ರೋಝ್ ರೇಸರ್ ಹೆಚ್ಚು ಶಕ್ತಿಶಾಲಿಯಾದ 120 PS 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.
-
ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತದೆ, ಇದರ ಜೊತೆಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಕೂಡ ಪಡೆಯುವ ಸಾಧ್ಯತೆಯಿದೆ.
-
ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಹೆಡ್ಸ್-ಅಪ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಆರು ಏರ್‌ಬ್ಯಾಗ್‌ಗಳಂತಹ ಹೊಸ ಫೀಚರ್ ಗಳನ್ನು ಪಡೆಯಲಿದೆ.
-
ಇದು ಜೂನ್ 2024 ಕ್ಕೆ ಮಾರುಕಟ್ಟೆಗೆ ಬರಲಿದ್ದು; ಬೆಲೆಯು ರೂ 10 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ.
ಟಾಟಾ ಆಲ್ಟ್ರೋಝ್ ರೇಸರ್ ಭಾರತದಲ್ಲಿ ಜೂನ್ 2024 ರಂದು ಬಿಡುಗಡೆಯಾಗಲಿದ್ದು, ಹ್ಯುಂಡೈ i20 N ಲೈನ್‌ನೊಂದಿಗೆ ಸ್ಪರ್ಧಿಸಲಿದೆ. ಗ್ರಾಹಕರು ಬಿಡುಗಡೆಗೆ ಮುಂಚೆ ಕೆಲವು ಆಯ್ದ ಟಾಟಾ ಡೀಲರ್‌ಶಿಪ್‌ಗಳಲ್ಲಿ ರೂ 21,000 ವರೆಗಿನ ಟೋಕನ್ ಮೊತ್ತವನ್ನು ನೀಡಿ ಆಲ್ಟ್ರೋಝ್ ರೇಸರ್ ಅನ್ನು ಬುಕ್ ಮಾಡಬಹುದು. ಟೋಕನ್ ಮೊತ್ತವು ಡೀಲರ್‌ಶಿಪ್‌ನಿಂದ ಡೀಲರ್‌ಶಿಪ್‌ಗೆ ಬದಲಾಗಬಹುದು. ಆಲ್ಟ್ರೋಝ್ ನ ಸ್ಪೋರ್ಟಿಯರ್ ವರ್ಷನ್ ಬೆಲೆಯನ್ನು ಟಾಟಾ ಜೂನ್ 2024 ರಲ್ಲಿ ತಿಳಿಸಲಿದೆ. ಅದರ ವಿವರಗಳು ಇಲ್ಲಿವೆ.
ಸ್ಪೋರ್ಟಿಯರ್ ಲುಕ್
ಆಲ್ಟ್ರೋಝ್ ರೇಸರ್ ಬಹುತೇಕ ಅದರ ಸ್ಟ್ಯಾಂಡರ್ಡ್ ಮಾಡೆಲ್ ನಂತೆಯೇ ಕಾಣುತ್ತದೆ ಆದರೆ ಅದನ್ನು ಸ್ಪೋರ್ಟಿಯರ್ ಆಗಿ ಮಾಡಲು ಕೆಲವು ಡಿಸೈನ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಲ್ಲಿ ಹೊಸ ಗ್ರಿಲ್ ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್ ಸೇರಿವೆ. ಇತ್ತೀಚಿನ ಟೀಸರ್‌ನಲ್ಲಿ ತೋರಿಸಿರುವಂತೆ ಇದು ಹುಡ್‌ನಿಂದ ರೂಫ್ ನ ಕೊನೆಯವರೆಗೆ ಡ್ಯುಯಲ್ ವೈಟ್ ಸ್ಟ್ರೈಪ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಇದು ಮುಂಭಾಗದ ಫೆಂಡರ್‌ಗಳಲ್ಲಿ 'ರೇಸರ್' ಬ್ಯಾಡ್ಜ್ ಅನ್ನು ಕೂಡ ಪಡೆಯಲಿದೆ.
ಒಳಭಾಗದಲ್ಲಿ, 'ರೇಸರ್' ಗ್ರಾಫಿಕ್ಸ್‌ನೊಂದಿಗೆ ಬ್ಲಾಕ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಇದು ರೆಗ್ಯುಲರ್ ವರ್ಷನ್ ಗೆ ಹೋಲಿಸಿದರೆ ವಿಭಿನ್ನವಾದ ಥೀಮ್ ಆಧಾರಿತ ಆಂಬಿಯೆಂಟ್ ಲೈಟಿಂಗ್ ಅನ್ನು ಕೂಡ ಪಡೆಯಲಿದೆ.
ಹೊಸ ಫೀಚರ್ ಗಳು
ರೆಗ್ಯುಲರ್ ವರ್ಷನ್ ಗೆ ಹೋಲಿಸಿದರೆ ಆಲ್ಟ್ರೋಝ್ ರೇಸರ್ ಇನ್ನಷ್ಟು ಹೊಸ ಫೀಚರ್ ಗಳನ್ನು ಪಡೆಯಲಿದೆ. ಇವುಗಳಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಸ 7-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಹೆಡ್‌ಸ್ ಅಪ್ ಡಿಸ್ಪ್ಲೇ ಸೇರಿವೆ. ಆಲ್ಟ್ರೋಝ್ ನ 'ರೇಸರ್' ವರ್ಷನ್ 360-ಡಿಗ್ರಿ ಕ್ಯಾಮೆರಾ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಕೂಡ ಪಡೆಯುತ್ತದೆ.
ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್
ಆಲ್ಟ್ರೊಜ್‌ನ ರೆಗ್ಯುಲರ್ ವರ್ಷನ್ ಗೆ ಹೋಲಿಸಿದರೆ, ಅದರ 'ರೇಸರ್' ವರ್ಷನ್ ಟಾಟಾ ನೆಕ್ಸಾನ್‌ನಲ್ಲಿರುವ ಹೆಚ್ಚು ಶಕ್ತಿಶಾಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಅದರ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ
ಇಂಜಿನ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
120 PS |
ಟಾರ್ಕ್ |
170 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT / 7-ಸ್ಪೀಡ್ DCT (ನಿರೀಕ್ಷಿಸಲಾಗಿದೆ) |
ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುವುದು ಮತ್ತು ಇದು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಕೂಡ ಪಡೆಯಬಹುದು.
ಟಾಟಾ ತನ್ನ ಆಲ್ಟ್ರೋಝ್ ಅನ್ನು 'i-ಟರ್ಬೊ' ಎಂದು ಹೇಳಲಾಗುವ ಟರ್ಬೊ-ಪೆಟ್ರೋಲ್ ವೇರಿಯಂಟ್ ನೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS / 140 Nm ಉತ್ಪಾದಿಸುತ್ತದೆ) ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸುತ್ತದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಆಲ್ಟ್ರೋಝ್ ರೇಸರ್ ಬೆಲೆಯು 10 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಆಲ್ಟ್ರೋಝ್ ರೇಸರ್ ಹ್ಯುಂಡೈ i20 N ಲೈನ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ: ಟಾಟಾ ಆಲ್ಟ್ರೋಝ್ ಆನ್ ರೋಡ್ ಬೆಲೆ