• ಸಿಟ್ರೊನ್ ಸಿ5 ಏರ್‌ಕ್ರಾಸ್‌ ಮುಂಭಾಗ left side image
1/1
  • Citroen C5 Aircross
    + 37ಚಿತ್ರಗಳು
  • Citroen C5 Aircross
  • Citroen C5 Aircross
    + 6ಬಣ್ಣಗಳು
  • Citroen C5 Aircross

ಸಿಟ್ರೊನ್ ಸಿ5 ಏರ್‌ಕ್ರಾಸ್‌

with ಫ್ರಂಟ್‌ ವೀಲ್‌ option. ಸಿಟ್ರೊನ್ ಸಿ5 ಏರ್‌ಕ್ರಾಸ್‌ Price starts from ₹ 36.91 ಲಕ್ಷ & top model price goes upto ₹ 37.67 ಲಕ್ಷ. This model is available with 1997 cc engine option. This car is available in ಡೀಸಲ್ option with ಆಟೋಮ್ಯಾಟಿಕ್‌ transmission. It's . This model has 6 safety airbags. This model is available in 7 colours.
change car
90 ವಿರ್ಮಶೆಗಳುrate & win ₹ 1000
Rs.36.91 - 37.67 ಲಕ್ಷ*
Get On-Road ಬೆಲೆ
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಸಿಟ್ರೊನ್ ಸಿ5 ಏರ್‌ಕ್ರಾಸ್‌ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸಿ5 ಏರ್‌ಕ್ರಾಸ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಸಿಟ್ರೊಯೆನ್ C5 ಏರ್‌ಕ್ರಾಸ್‌ನ ಹೊಸ ಎಂಟ್ರಿ ಲೆವೆಲ್‌ನ ಫೀಲ್ ವೇರಿಯೆಂಟ್‌ನೊಂದಿಗೆ  ನೀಡಲಾದ ವೈಶಿಷ್ಟ್ಯಗಳ ಪಟ್ಟಿಯನ್ನು ನಾವು ವಿವರಿಸಿದ್ದೇವೆ.

ಬೆಲೆ: ದೆಹಲಿಯಲ್ಲಿ ಸಿಟ್ರೊಯೆನ್ ನ ಈ ಎಸ್‌ಯುವಿಯ ಎಕ್ಸ್ ಶೋ ರೂಂ ಬೆಲೆ  36.91 ಲಕ್ಷ ರೂ.ನಿಂದ ಪ್ರಾರಂಭವಾಗಿ  37.67 ಲಕ್ಷ ರೂ. ವರೆಗೆ ಇದೆ. 

ವೇರಿಯೆಂಟ್‌ಗಳು: ಗ್ರಾಹಕರು ಈಗ C5 ಏರ್‌ಕ್ರಾಸ್ ಅನ್ನು ಫೀಲ್ ಮತ್ತು ಶೈನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಸಬಹುದು.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತು ಪ್ರಯಾಣಿಸಬಹುದು. 

ಬೂಟ್ ಸ್ಪೇಸ್: C5 ಏರ್‌ಕ್ರಾಸ್ 580 ಲೀಟರ್‌ಗಳ ಬೂಟ್ ಸ್ಪೇಸ್ ಅನ್ನು ಹೊಂದಿದೆ, ಆದರೆ, ಎರಡನೇ ಸಾಲಿನ ಸೀಟನ್ನು ಮಡಚುವ ಮೂಲಕ ಇದನ್ನು 1,630 ಲೀಟರ್‌ಗಳಿಗೆ ಹೆಚ್ಚಿಸಬಹುದು.

ಎಂಜಿನ್ ಮತ್ತು ಗೇರ್‌ ಬಾಕ್ಸ್‌: ಸಿಟ್ರೊಯೆನ್ C5 ಏರ್‌ಕ್ರಾಸ್ 2-ಲೀಟರ್ ಡೀಸೆಲ್ ಎಂಜಿನ್‌  (177PS/400Nm) ಹೊಂದಿದ್ದು, ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ನೊಂದಿಗೆ ಜೋಡಿಸಲ್ಪಟ್ಟಿದೆ.

ವೈಶಿಷ್ಟ್ಯಗಳು: ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ.

ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ, C5 ಏರ್‌ಕ್ರಾಸ್ ಆರು ಏರ್‌ಬ್ಯಾಗ್‌ಗಳು, ಡ್ರೈವರ್ ಡ್ರೌಸಿನೆಸ್‌ (ನಿದ್ರೆ) ಡಿಟೆಕ್ಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಅಸಿಸ್ಟ್, ಪಾರ್ಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಬ್ಲೈಂಡ್-ಸ್ಪಾಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: C5 ಏರ್‌ಕ್ರಾಸ್ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ವೋಕ್ಸ್‌ವ್ಯಾಗನ್ ಟಿಗುವಾನ್‌ನೊಂದಿಗೆ ತನ್ನ ಸ್ಪರ್ಧೆಯನ್ನು ಮುಂದುವರೆಸುತ್ತದೆ.

ಮತ್ತಷ್ಟು ಓದು
ಸಿ5 ಏರ್‌ಕ್ರಾಸ್‌ ಫೀಲ್(Base Model)1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್Rs.36.91 ಲಕ್ಷ*
ಸಿ5 ಏರ್‌ಕ್ರಾಸ್‌ ಫೀಲ್ ಡುಯಲ್ ಟೋನ್1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್Rs.36.91 ಲಕ್ಷ*
ಸಿ5 ಏರ್‌ಕ್ರಾಸ್‌ ಶೈನ್‌ ಡುಯಲ್ ಟೋನ್(Top Model)1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್Rs.37.67 ಲಕ್ಷ*
ಸಿ5 ಏರ್‌ಕ್ರಾಸ್‌ ಶೈನ್‌
ಅಗ್ರ ಮಾರಾಟ
1997 cc, ಆಟೋಮ್ಯಾಟಿಕ್‌, ಡೀಸಲ್, 17.5 ಕೆಎಂಪಿಎಲ್
Rs.37.67 ಲಕ್ಷ*

ಸಿಟ್ರೊನ್ ಸಿ5 ಏರ್‌ಕ್ರಾಸ್‌ ಇದೇ ಕಾರುಗಳೊಂದಿಗೆ ಹೋಲಿಕೆ

ಸಿಟ್ರೊನ್ ಸಿ5 ಏರ್‌ಕ್ರಾಸ್‌ ವಿಮರ್ಶೆ

C5 ಏರ್‌ಕ್ರಾಸ್‌ ಭಾರತದಲ್ಲಿ ಮಾರಾಟವಾದ ಎರಡು ವರ್ಷಗಳ ನಂತರ ಮಿಡ್-ಲೈಫ್ ನವೀಕರಣವನ್ನು ನೀಡಲಾಗಿದೆ ಮತ್ತು ಅದರ ಈ ಹಿಂದಿನ ಆವೃತ್ತಿಗಿಂತ ಸುಧಾರಿತ ಆವೃತ್ತಿಯೂ ಸುಮಾರು 3 ಲಕ್ಷ  ರೂ. ವರೆಗೆ ದುಬಾರಿಯಾಗಿದೆ. ಆದರೆ ಈ ಫ್ರೆಂಚ್ ಮೂಲದ ಎಸ್‌ಯುವಿಯಲ್ಲಿ ಅಷ್ಟೊಂದು ಹಣವನ್ನು ವ್ಯಹಿಸುವುದು ಸಮಂಜಸವೇ?

ಸಿಟ್ರೋನ್‌ ಸಿ 5 ಏರ್‌ಕ್ರಾಸ್ ಭಾರತದಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಇದ್ದಾಗ, ಕಾರು ತಯಾರಕರು ಎಸ್‌ಯುವಿಗೆ ಮಿಡ್-ಲೈಫ್ ಆಪ್‌ಡೇಟ್‌ ನೀಡುವ ಸಮಯ ಎಂದು ನಿರ್ಧರಿಸಿದ್ದಾರೆ. ಈಗ, ಫೇಸ್‌ಲಿಫ್ಟ್‌ನೊಂದಿಗೆ, ಎಸ್‌ಯುವಿಯ ಬೆಲೆಯು ಸುಮಾರು 3 ಲಕ್ಷ ರೂ.ಗಳಷ್ಟು ಹೆಚ್ಚಾಗಿದೆ (ಮತ್ತು  ಸಂಪೂರ್ಣ ಲೋಡ್ ಆಗಿರುವ ಶೈನ್ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ). ಎಂಜಿ ಗ್ಲೋಸ್ಟರ್ ಮತ್ತು ಟೊಯೋಟಾ ಫಾರ್ಚೂನರ್‌ನಂತಹ ದೈತ್ಯರನ್ನು ಹೊಂದಿರುವ ಈ ಸೆಗ್ಮೆಂಟ್‌ನಲ್ಲಿ,  ಇದು ಅಂತಹದೇ ವೈಶಿಷ್ಟ್ಯಗಳನ್ನು ಹೊಂದಿದೆ.

ಆದರೆ ಅಪ್‌ಗ್ರೇಡ್ ಮತ್ತು ಹೆಚ್ಚುವರಿ ಪ್ರೀಮಿಯಂ ನೀವು ಕೊಡುವ ಹಣಕ್ಕೆ ಯೋಗ್ಯವಾಗಿದೆಯೇ ಅಥವಾ ನೀವು ಈ ಫ್ರೆಂಚ್ ಮಾಡೆಲ್‌ನಿಂದ ದೂರವಿರಬೇಕೇ? ಈ ಬಗ್ಗೆ ತಿಳಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಎಕ್ಸ್‌ಟೀರಿಯರ್

Citroën C5 Aircross front

ಸಿಟ್ರೋನ್‌ ಸಿ5 ಏರ್‌ಕ್ರಾಸ್ ಯಾವಾಗಲೂ ಎಲ್ಲರ ಗಮನವನ್ನು ಸೆಳೆಯುವ ಎಸ್‌ಯುವಿ ಆಗಿದ್ದು, ಅದರ ಚಮತ್ಕಾರಿ ಮತ್ತು ಭಾರತಕ್ಕಾಗಿನ ವಿಶೇಷ ಮಾಡೆಲ್‌ನಲ್ಲಿ ನೀವು ಹಿಂದೆಂದೂ ನೋಡಿರದ ವಿನ್ಯಾಸ ಸೂಚನೆಗಳನ್ನು ಗಮನಿಸಬಹುದು. ಈಗ ಫೇಸ್‌ಲಿಫ್ಟ್‌ನೊಂದಿಗೆ, ಸಿಟ್ರೊಯೆನ್ ಕೆಲವು ಸಣ್ಣ ಅಲಂಕಾರಿಕ ಟಚ್‌ಗಳನ್ನು ನೀಡುವ ಮೂಲಕ ಎಸ್‌ಯುವಿಯ ಸೌಂದರ್ಯವನ್ನು ಮಾತ್ರ ಸುಧಾರಿಸಿದೆ, ಮುಖ್ಯವಾಗಿ ಇದು ಮುಂಭಾಗದ ಫ್ಯಾಸಿಯಾಗೆ ಸಂಬಂಧಿಸಿದೆ.

Citroën C5 Aircross front close-up

2022 ಸಿಟ್ರೋನ್‌ ಸಿ5 ಏರ್‌ಕ್ರಾಸ್ ಹೆಚ್ಚು ಸಾಂಪ್ರದಾಯಿಕವಾಗಿ ಕಾಣುವ ಸೆಟಪ್‌ಗಾಗಿ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ದೂರ ಮಾಡಿದೆ, ಇದು ಡಬಲ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ನಂತರ, ಎಲ್‌ಇಡಿ ಡಿಆರ್‌ಎಲ್‌ ಗಳನ್ನು ಸಂಪರ್ಕಿಸುವ ಎರಡು ಕ್ರೋಮ್-ಸ್ಟಡ್ಡ್ ಲೈನ್‌ಗಳು ಮತ್ತು ಮಧ್ಯದಲ್ಲಿ ಡಬಲ್ ಚೆವ್ರಾನ್ ಲೋಗೋ ಮತ್ತು ಗ್ರಿಲ್‌ಗಾಗಿ ಗ್ಲಾಸ್ ಬ್ಲ್ಯಾಕ್ ಫಿನಿಶ್ ವರೆಗೆ ಚಲಿಸುತ್ತವೆ. ಕೆಳಗೆ, ಇದು ಹೊಸ ಸ್ಕಿಡ್ ಪ್ಲೇಟ್ ಮತ್ತು ದೊಡ್ಡ ಏರ್ ಡ್ಯಾಮ್‌ಗಳೊಂದಿಗೆ ಸ್ವಲ್ಪಮಟ್ಟಿಗೆ ಸುಧಾರಿಸಿದ ಬಂಪರ್ ಅನ್ನು ಪಡೆಯುತ್ತದೆ.

Citroën C5 Aircross side

ಕಾರಿನ ಪ್ರೊಫೈಲ್‌ನ ಗಮನಿಸುವಾಗ, ಹೊಸದಾಗಿ ವಿನ್ಯಾಸಗೊಳಿಸಲಾದ 18-ಇಂಚಿನ ಡ್ಯುಯಲ್-ಟೋನ್ ಆಲಾಯ್‌ ವೀಲ್‌ಗಳನ್ನು ಹೊರತು ಪಡಿಸಿ, ಈ ಎಸ್‌ಯುವಿಯು ನೋಟವು, ತನ್ನ ಫೇಸ್‌ಲಿಫ್ಟ್‌ನ ಹಿಂದಿನ ಆವೃತ್ತಿಯಂತೆ ಕಾಣುತ್ತದೆ. ಆಲಾಯ್‌ ವೀಲ್‌ಗಳು ಹಳೆಯ ಸೆಟ್‌ಗಿಂತ ಹೆಚ್ಚು ಆಕರ್ಷಕವಾಗಿ ಆಗಿ ಕಾಣುತ್ತದೆ. ಅದರ ಹೊರತಾಗಿ, C5 ಏರ್‌ಕ್ರಾಸ್ ಟ್ರೆಪೆಜಾಯ್ಡಲ್ ಅಂಶ (ನಿರ್ದಿಷ್ಟ ರೀತಿಯ ಚತುರ್ಭುಜ), ರೂಫ್‌ ರೈಲ್ಸ್‌ ಮತ್ತು C-ಆಕಾರದ ಕ್ರೋಮ್ ವಿಂಡೋ ಬೆಲ್ಟ್‌ಲೈನ್‌ನೊಂದಿಗೆ ದಪ್ಪನಾದ ಕಪ್ಪು ಬಾಡಿ ಕ್ಲಾಡಿಂಗ್‌ ಹೊಂದುವುದನ್ನು ಮುಂದುವರೆಸಿದೆ.

Citroën C5 Aircross rear

ಹಿಂಭಾಗದಲ್ಲಿ ಈ ಎಸ್‌ಯುವಿ ಇನ್ನೂ ಹಳೆಯ ಸಿಟ್ರೊಯೆನ್ ಲೋಗೋ ಮತ್ತು 'C5 ಏರ್‌ಕ್ರಾಸ್' ಬ್ಯಾಡ್ಜಿಂಗ್ ಅನ್ನು ನೀಡುವುದರ ಹೊರತಾಗಿ ಯಾವುದೆ ಹೊಸ ಅಂಶಗಳ ಸೇರ್ಪಡೆ ಇಲ್ಲ. ಹೊಸ ಎಲ್‌ಇಡಿ ಅಂಶಗಳೊಂದಿಗೆ ನವೀಕರಿಸಿದ ಟೈಲ್‌ಲೈಟ್‌ಗಳ ರೂಪದಲ್ಲಿ ಮಾತ್ರ ಗಮನಾರ್ಹ ಬದಲಾವಣೆಯು ಬರುತ್ತದೆ. ಸಿಟ್ರೊಯೆನ್ C5 ಏರ್‌ಕ್ರಾಸ್ ಅನ್ನು ನಾಲ್ಕು ಸಿಂಗಲ್‌ ಶೇಡ್‌ನಲ್ಲಿ (ಪರ್ಲ್ ನೇರಾ ಬ್ಲ್ಯಾಕ್, ಪರ್ಲ್ ವೈಟ್, ಎಕ್ಲಿಪ್ಸ್ ಬ್ಲೂ ಮತ್ತು ಕ್ಯುಮುಲಸ್ ಗ್ರೇ) ಮತ್ತು ಮೂರು ಡ್ಯುಯಲ್-ಟೋನ್ (ಕಪ್ಪು ಛಾವಣಿಯೊಂದಿಗೆ) ಕೊನೆಯ ಮೂರು ಬಣ್ಣದೊಂದಿಗೆ ಪಡೆಯಬಹುದು.

ಇಂಟೀರಿಯರ್

Citroën C5 Aircross cabin

ಸಿಟ್ರೊಯೆನ್ ತನ್ನ C5 ಏರ್‌ಕ್ರಾಸ್‌ನ ಒಳಭಾಗಕ್ಕೆ ಹೆಚ್ಚಿನ ಆಪ್‌ಡೇಟ್‌ಗಳನ್ನು ನೀಡಿದೆ. ಮೊದಲ ಗಮನಾರ್ಹ ವ್ಯತ್ಯಾಸವೆಂದರೆ ಸುಧಾರಿಸಿದ ಡ್ಯಾಶ್‌ಬೋರ್ಡ್ ಆಗಿದೆ, ಇದು ಈಗ ಫ್ರೀ-ಫ್ಲೋಟಿಂಗ್‌ 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌ನ ಪರಿಚಯಿಸಿದೆ. ಡಿಸ್‌ಪ್ಲೇಯನ್ನು ಸಂಯೋಜಿಸಲು, ಕಾರು ತಯಾರಕರಿಗೆ ಸೆಂಟ್ರಲ್‌ AC ವೆಂಟ್‌ಗಳು ದೊಡ್ಡ ಸವಾಲಾಗಿತ್ತು. ಆದರೆ ಅವುಗಳನ್ನು ಈಗ ಇನ್ಫೋಟೈನ್‌ಮೆಂಟ್ ಘಟಕದ ಕೆಳಗೆ ಅಡ್ಡಲಾಗಿ ಜೋಡಿಸಲಾಗಿದೆ. ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್‌ನ ಮೇಲೆ ಕೆಲವು ಬಟನ್‌ಗಳು ಸ್ಪರ್ಶದ ಭಾವನೆಯನ್ನು ನೀಡುತ್ತವೆ.

Citroën C5 Aircross centre console

ಸುಧಾರಿತ ಡ್ರೈವ್ ಶಿಫ್ಟರ್ ಅನ್ನು ಡ್ರೈವರ್ ಸೈಡ್ ಹತ್ತಿರ ಇರಿಸುವ ಮೂಲಕ ಸಿಟ್ರೊಯೆನ್ ಪ್ರಿ-ಫೇಸ್‌ಲಿಫ್ಟ್ ಮಾಡೆಲ್ ಹೊಂದಿದ್ದ ದಕ್ಷತಾಶಾಸ್ತ್ರದ ಸಮಸ್ಯೆಗಳಲ್ಲಿ ಒಂದನ್ನು ಸರಿಪಡಿಸಿದ್ದರೂ (ಅದರ ಕ್ಯಾಬಿನ್ ಎಡಭಾಗದ ಡ್ರೈವ್  ಮಾಡುವ ದೇಶಕ್ಕೆ ಕಡೆಗೆ ಹೆಚ್ಚು ಆಧಾರಿತವಾಗಿತ್ತು), ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸ್ವಿಚ್ ಅದೇ ಸ್ಥಳದಲ್ಲಿ ಮುಂದುವರಿಯುತ್ತದೆ. ಇದಲ್ಲದೆ, SUV ಯ ಕ್ಯಾಬಿನ್ ಇನ್ನೂ ಸಾಕಷ್ಟು ಪ್ರಾಯೋಗಿಕವಾಗಿದೆ ಏಕೆಂದರೆ ಇದು ಹಲವು ಕಪ್ ಹೋಲ್ಡರ್‌ಗಳು, ಆಳವಾದ ಸ್ಟೋರೇಜ್‌ ಹೊಂದಿರುವ ಮುಂಭಾಗದ ಮಧ್ಯಭಾಗದ ಆರ್ಮ್‌ರೆಸ್ಟ್, ಎರಡು ಯುಎಸ್‌ಬಿ ಸಾಕೆಟ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಸಣ್ಣ-ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಒಂದು ಕಂಪಾರ್ಟ್‌ಮೆಂಟ್‌ನ್ನು ಹೊಂದಿದೆ.

Citroën C5 Aircross dashboard

ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ಮತ್ತು ಡೋರ್ ಪ್ಯಾಡ್‌ಗಳಾದ್ಯಂತ ಸಾಫ್ಟ್-ಟಚ್ ಮೆಟೀರಿಯಲ್ ಅನ್ನು ಒಳಗೊಂಡಿರುವಾಗ ಕ್ಯಾಬಿನ್ ಅದರ ಸಂಪೂರ್ಣ-ಕಪ್ಪು ಥೀಮ್‌ನೊಂದಿಗೆ ಮುಂದುವರಿಯುತ್ತದೆ. ಇದು ಈಗ ಡ್ಯಾಶ್‌ಬೋರ್ಡ್ ಮತ್ತು ಡೋರ್ ಹ್ಯಾಂಡಲ್‌ಗಳಲ್ಲಿ ಕಾಂಟ್ರಾಸ್ಟ್ ಬ್ಲೂ ಸ್ಟಿಚಿಂಗ್ ಅನ್ನು ಪಡೆಯುತ್ತದೆ, ಇದು SUV ಯ ಕಪ್ಪು-ಥೀಮ್‌ನ ಇಂಟೀರಿಯರ್‌ಗೆ ಪೂರಕವಾಗಿದೆ, ಇವೆಲ್ಲವೂ ಕ್ಯಾಬಿನ್‌ಗೆ ಹೆಚ್ಚು ಪ್ರೀಮಿಯಂ ಮತ್ತು ಲಕ್ಸುರಿ ಅನುಭವವನ್ನು ನೀಡುತ್ತದೆ. ಹಿಂದಿನ ಸ್ಕ್ವಾರಿಶ್ ಮಾದರಿಯು ಆಪ್ಹೊಲ್ಸಟೆರಿಯಿಂದ ಹೋಗಿದ್ದರೂ, ಸೈಡ್ ಎಸಿ ವೆಂಟ್‌ಗಳು ಇನ್ನೂ ಬದಲಾಗದೆ ಎರಡು ಚೌಕಗಳಾಗಿ ವಿಭಜಿಸಲ್ಪಟ್ಟಿವೆ ಮತ್ತು ಸ್ಟೀರಿಂಗ್ ಚಕ್ರವೂ ಸಹ.

ಆಸನಗಳ ಕುರಿತು ಹೇಳುವುದಾದರೆ, ಆಪ್ಹೊಲ್ಸಟೆರಿಯು ಇಂದಿಗೂ C5 ಏರ್‌ಕ್ರಾಸ್‌ನ ಪ್ರಬಲ ಅಂಶಗಳಲ್ಲಿ ಒಂದಾಗಿದೆ. ಸಿಟ್ರೊಯೆನ್ ಹೇಳುವಂತೆ ಇದು ಆಸನಗಳನ್ನು 15 ಪ್ರತಿಶತದಷ್ಟು ಮೃದುಗೊಳಿಸಿದೆ ಮತ್ತು ಹಿತಕರವಾದ ಆಸನ ಸೌಕರ್ಯವನ್ನು ನೀಡುತ್ತದೆ. 

Citroën C5 Aircross front seats

ಮುಂಭಾಗ ಮತ್ತು ಹಿಂಭಾಗದ ಆಸನಗಳೆರಡೂ ಚೆನ್ನಾಗಿ ಬಲವರ್ಧಿತವಾಗಿವೆ ಮತ್ತು ಕುಳಿತುಕೊಳ್ಳಲು ಆರಾಮದಾಯಕವಾಗಿಸುತ್ತದೆ. ಚಾಲಕ ಸೀಟಿನಲ್ಲಿರುವ ಪವರ್-ಹೊಂದಾಣಿಕೆ ಸೌಕರ್ಯದ ಸಹಾಯದಿಂದ ಸೂಕ್ತವಾದ ಚಾಲನಾ ಸ್ಥಾನವನ್ನು ಕಂಡುಹಿಡಿಯುವುದು ತುಂಬಾ ಸುಲಭ, ಆದರೆ ಇದು ಪ್ರಯಾಣಿಕರ ಸೀಟ್‌ನಲ್ಲಿ ಇರುವುದಿಲ್ಲ. ಪ್ರಿ-ಫೇಸ್‌ಲಿಫ್ಟ್‌ಗೆ ಹೋಲಿಸಿದರೆ, ಹೊಸ C5 ಏರ್‌ಕ್ರಾಸ್ ಸಾಕಷ್ಟು ಹೆಡ್‌ರೂಮ್ ಮತ್ತು ಭುಜದ ಹತ್ತಿರ ವಿಶಾಲವಾದ ಜಾಗ ಹೊಂದಿದೆ ಮತ್ತು  ಮೊಣಕಾಲು ಇಡಲು ಯೋಗ್ಯವಾದ ಸ್ಥಳವನ್ನು ನೀಡುತ್ತದೆ. ಹಿಂದಿನ ಸಾಲು ಪ್ರತ್ಯೇಕೆ ಮೂರು ಸ್ಲೈಡಿಂಗ್ ಸೀಟ್‌ಗಳನ್ನು ಪಡೆಯುತ್ತದೆ, ಅದು ಹಿಂದಿನಂತೆ ಒರಗುತ್ತದೆ ಮತ್ತು ಮಡಚಿಕೊಳ್ಳುತ್ತದೆ. ಆದ್ದರಿಂದ ಎರಡನೇ ಸಾಲಿನಲ್ಲಿ ಸಮಾನ ದೇಹದ ತೂಕದ ಮೂವರು ವಯಸ್ಕರು ಒಟ್ಟಿಗೆ ಕುಳಿತು ದೀರ್ಘ ಪ್ರಯಾಣಗಳನ್ನು ಕೈಗೊಳ್ಳುವುದು ಸವಾಲಾಗಿರುವುದಿಲ್ಲ.

ಉನ್ನತ ಟೆಕ್ನಾಲಾಜಿಗಳ ಸೋಜಿಗ

Citroën C5 Aircross touchscreen

ಫೇಸ್‌ಲಿಫ್ಟ್‌ನೊಂದಿಗೆ ಒಂದು ದೊಡ್ಡ ಅಪ್‌ಡೇಟ್ ಹೊಸ 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌ನ ರೂಪದಲ್ಲಿ ಬಂದಿದೆ. ಪ್ರದರ್ಶನವು ಸಾಕಷ್ಟು ಗರಿಗರಿಯಾಗಿದ್ದರೂ ಮತ್ತು ಓದಲು ಸುಲಭವಾದ ಫಾಂಟ್‌ಗಳನ್ನು ಹೊಂದಿದ್ದರೂ, ವಿನಂತಿಸಿದ ಕೆಲಸವನ್ನು ಲೋಡ್ ಮಾಡಲು ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಇನ್ಫೋಟೈನ್‌ಮೆಂಟ್‌ನಲ್ಲಿನ ಮತ್ತೊಂದು ಮಿಸ್ ಎಂದರೆ ಹೋಮ್‌ ಸ್ಕ್ರೀನ್‌ನ ಕೊರತೆ, ಆದರೆ ಸಿಟ್ರೊಯೆನ್ ಹೆಚ್ಚು ಉಪಯುಕ್ತ ಕಾರ್ಯಗಳಿಗಾಗಿ AC ದ್ವಾರಗಳ ಕೆಳಗೆ ಕೆಲವು ಸ್ಪರ್ಶ-ಸಕ್ರಿಯ ಶಾರ್ಟ್‌ಕಟ್ ಕೀಗಳನ್ನು ಒದಗಿಸಿದೆ. ಅದೃಷ್ಟವಶಾತ್, ಟಚ್‌ಸ್ಕ್ರೀನ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಬೆಂಬಲದೊಂದಿಗೆ ಬರುತ್ತದೆ. ಆದರೂ ವೈರ್‌ಲೆಸ್ ನ್ನು ಹೊಂದಿಲ್ಲ.

Citroën C5 Aircross panoramic sunroofCitroën C5 Aircross wireless phone charger

ಫೇಸ್‌ಲಿಫ್ಟೆಡ್ C5 ಏರ್‌ಕ್ರಾಸ್ ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಚಾಲಿತ ಟೈಲ್‌ಗೇಟ್‌ನಂತಹ ವೈಶಿಷ್ಟ್ಯಗಳನ್ನು ತನ್ನ ಪಟ್ಟಿಯಲ್ಲಿ ಸೇರಿಸಿದೆ. ಪಟ್ಟಿಯಲ್ಲಿ ಇತರ ಸೌಕರ್ಯಗಳಾದ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಆಟೋ-ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳು, ಕ್ರೂಸ್ ಕಂಟ್ರೋಲ್, ಚಾಲಿತ ಡ್ರೈವರ್ ಸೀಟ್ ಮತ್ತು ಆರು-ಸ್ಪೀಕರ್‌ನ ಮ್ಯೂಸಿಕ್ ಸಿಸ್ಟಮ್ ಅನ್ನು ಒಳಗೊಂಡಿದೆ. ಆದಾಗಿಯೂ, ಸಿಟ್ರೊಯೆನ್ ಇನ್ನೂ ಮುಂಭಾಗದಲ್ಲಿ ವೇಂಟಿಲೇಟೆಡ್‌ ಸೀಟ್‌ಗಳು, ಕನೆಕ್ಟೆಡ್‌ ಕಾರ್ ಟೆಕ್, ಡ್ರೈವರ್ ಸೀಟ್‌ಗಾಗಿ ಮೆಮೊರಿ ಕಾರ್ಯ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಲಕ್ಸುರಿ ಸೌಕರ್ಯಗಳನ್ನು ನೀಡುವುದಿಲ್ಲ.

ಸುರಕ್ಷತೆ

Citroën C5 Aircross electric parking brake

C5 ಏರ್‌ಕ್ರಾಸ್‌ ಸುರಕ್ಷತಾ ವಿಭಾಗವನ್ನು ಗಮನಿಸುವಾಗ ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಸ್ಟಾರ್ಟ್ ಮತ್ತು ಡಿಸೆಂಟ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್‌ನಂತಹ ಅಗತ್ಯ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನವೀಕರಣದೊಂದಿಗೆ, ಸಿಟ್ರೊಯೆನ್ SUV ಅನ್ನು ಡ್ರೈವರ್ ಡ್ರೌಸಿನೆಸ್‌ ಡಿಟೆಕ್ಷನ್ ಮತ್ತು ರಿವರ್ಸಿಂಗ್ ಮತ್ತು ಫ್ರಂಟ್ ಕ್ಯಾಮೆರಾಗಳೊಂದಿಗೆ ಸಜ್ಜುಗೊಳಿಸಿದೆ.

ಬೂಟ್‌ನ ಸಾಮರ್ಥ್ಯ

Citroën C5 Aircross boot spaceCitroën C5 Aircross boot space with second row folded down

ಮಿಡ್-ಲೈಫ್ ಅಪ್‌ಡೇಟ್‌ನೊಂದಿಗೆ ಸ್ವಲ್ಪವೂ ಬದಲಾಗದಿರುವುದು SUV ಯ ಬೂಟ್ ಸ್ಪೇಸ್ ಸಾಮರ್ಥ್ಯ. C5 ಏರ್‌ಕ್ರಾಸ್ ಇನ್ನೂ ಅದೇ 580-ಲೀಟರ್ ಲೋಡ್-ಕ್ಯಾರಿಂಗ್ ಸ್ಪೇಸ್ ಅನ್ನು ಸ್ಟ್ಯಾಂಡರ್ಡ್‌ನಂತೆ ಹೊಂದಿದೆ. ಹಾಗೆಯೇ ಇದರ ಎರಡನೇ ಸಾಲಿನ ಸೀಟನ್ನು ಮುಂದಕ್ಕೆ ಜಾರಿಸಿದಾಗ 720 ಲೀಟರ್‌ ಮತ್ತು ಅದನ್ನು ಮಡಿಸಿದಾಗ 1,630 ಲೀಟರ್‌ವರೆಗೆ ಬೂಟ್ ಸ್ಪೇಸ್ ನ್ನು ಪಡೆಯಬಹುದು  ಏರುತ್ತದೆ. ನಿಮ್ಮ ಇಡೀ ಕುಟುಂಬದ ವಾರಾಂತ್ಯದ ಪ್ರವಾಸಕ್ಕೆ ಬೇಕಾಗುವ ಲಗೇಜುಗಳನ್ನು ಇಡಲು ಇದು ಸಾಕಷ್ಟು ಹೆಚ್ಚು.

ಕಾರ್ಯಕ್ಷಮತೆ

Citroën C5 Aircross diesel engine

ಮಿಡ್-ಲೈಫ್ ಅಪ್‌ಡೇಟ್‌ನೊಂದಿಗೆ ಸಹ, ಸಿಟ್ರೊಯೆನ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ ಕೇವಲ 2-ಲೀಟರ್ ಡೀಸೆಲ್ ಎಂಜಿನ್‌ನ್ನು ಮಾತ್ರ ನೀಡುತ್ತದೆ. ಅದರೆ ಜೀಪ್ ಕಂಪಾಸ್, ಫೊಕ್ಸ್‌ವ್ಯಾಗನ್‌ ಟೈಗುನ್‌ ಮತ್ತು ಹುಂಡೈ ಟಕ್ಸನ್ ನಂತಹ ಇದರ ಸ್ಪರ್ಧಿಗಳು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮತ್ತು 4x4 ಡ್ರೈವ್‌ಟ್ರೇನ್ ಅನ್ನು ಸಹ ನೀಡುತ್ತದೆ. ಇದು 177PS ಮತ್ತು 400Nm ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಎಂಟು-ವೇಗದ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಹಾಗೆಯೇ ಇದು ಫ್ರಂಟ್‌ ವೀಲ್‌ ಡ್ರೈವ್‌ ಆಗಿರುವುದರಿಂದ ಶಕ್ತಿಯನ್ನು  ಮುಂಭಾಗದ ಚಕ್ರಗಳಿಗೆ ಕಳುಹಿಸುತ್ತದೆ.

Citroen C5 Aircross in action

ಪವರ್ ಡೆಲಿವರಿಯು ಅತ್ಯಂತ ರೇಖೀಯ ಶೈಲಿಯಲ್ಲಿ ನಡೆಯುತ್ತದೆ ಮತ್ತು ಎಂಜಿನ್ ನಯವಾಗಿರುತ್ತದೆ. ಆದರೆ ಸ್ವಲ್ಪ ಸೌಂಡ್‌ ಮಾಡುತ್ತದೆ, ವಿಶೇಷವಾಗಿ ಹೆಚ್ಚಿನ ಸ್ಪೀಡ್‌ನಲ್ಲಿ ಸಾಗುವಾಗ ನೀವು ಎಂಜಿನ್‌ನ ಸೌಂಡ್‌ ಕೇಳುವ ಅನುಭವವಾಗುತ್ತದೆ. ನಗರದಲ್ಲಿ C5 ನ್ನು ಚಾಲನೆ ಮಾಡುವುದು ಸುಲಭ. ಸ್ಟೀರಿಂಗ್ ಭಾರವಾಗಿರುತ್ತದೆ, ಆದರೂ ಟ್ರಾಫಿಕ್‌ನಲ್ಲಿ ಸಮಸ್ಯೆ ಇರುವುದಿಲ್ಲ.

Citroen C5 Aircross in action

ಹೆದ್ದಾರಿಯ ಪ್ರಯಾಣದ ಸಮಯದಲ್ಲೂ, C5 ಏರ್‌ಕ್ರಾಸ್‌ನ ಪವರ್‌ಟ್ರೇನ್‌ಗಳನ್ನು ನೀವು ನಿಜವಾಗಿಯೂ ಪ್ರಶಂಸಿಸುತ್ತೀರಿ.  ಹೆಚ್ಚು ಪ್ರಯತ್ನವಿಲ್ಲದೆ ಮೂರು-ಅಂಕಿಯ ವೇಗವನ್ನು ನೀವು ಎಸ್‌ಯುವಿಯಲ್ಲಿ ಹೊಡೆಯಬಹುದು, ಇದು ಆರಾಮದಾಯಕ ಮೈಲಿ-ಮಂಚರ್ ಆಗಿರುತ್ತದೆ.  ಇದರ ಗೇರ್‌ಶಿಫ್ಟ್‌ಗಳು ಸಹ ಸಮಯೋಚಿತವಾಗಿವೆ, ಈ ಎಸ್‌ಯುವಿಯನ್ನು ಅನಗತ್ಯ ಗೇರ್‌ಗೆ ಜಾರುವುದನ್ನು ತಡೆಯುತ್ತದೆ, ಆದ್ದರಿಂದ ಪ್ಯಾಡಲ್ ಶಿಫ್ಟರ್‌ಗಳ ಅಗತ್ಯವನ್ನು ಬಹುತೇಕ ತೆಗೆದುಹಾಕುತ್ತದೆ. ಸಿಟ್ರೊಯೆನ್ ಇದನ್ನು ಡ್ರೈವ್ ಮೋಡ್‌ಗಳು (ಇಕೋ ಮತ್ತು ಸ್ಪೋರ್ಟ್ಸ್‌) ಮತ್ತು ಎಳೆತ ನಿಯಂತ್ರಣ (ಸ್ಟ್ಯಾಂಡರ್ಡ್‌, ಸ್ನೋ, ಆಲ್‌ ಟೆರೈನ್‌-ಮಡ್‌, ತೇವ ಮತ್ತು ಹುಲ್ಲು ಮತ್ತು ಮರಳು) ಸಹ ಹೊಂದಿದೆ ಆದರೆ ನಾವು ಅವುಗಳನ್ನು ಹೆಚ್ಚು ಪ್ರಯೋಗಿಸಲು ಆಗಲಿಲ್ಲ.

ರೈಡ್ ಅಂಡ್ ಹ್ಯಾಂಡಲಿಂಗ್

Citroen C5 Aircross at corner

C5 ಏರ್‌ಕ್ರಾಸ್‌ನ ಉತ್ತಮ ಅಂಶವು ಅದರ ಪ್ರಗತಿಶೀಲ ಹೈಡ್ರಾಲಿಕ್ ಸಸ್ಪೆನ್ಶನ್ ಸೆಟಪ್ ಆಗಿ ಉಳಿದಿದೆ. ಅದು ಅದರ ಕರ್ತವ್ಯಗಳನ್ನು ಅತ್ಯುತ್ತಮವಾಗಿ ಮಾಡುತ್ತದೆ, ಹೆಚ್ಚಿನ ಏರಿಳಿತಗಳು ಅಥವಾ ರಸ್ತೆಯಲ್ಲಿನ ಅಪೂರ್ಣ ಪ್ಯಾಚ್‌ಗಳಿಂದ ಪ್ರಯಾಣಿಕರನ್ನು ರಕ್ಷಿಸುತ್ತದೆ. ಆದಾಗಿಯೂ, ಕಡಿಮೆ ವೇಗದಲ್ಲಿ ನೀವು ಕ್ಯಾಬಿನ್‌ನಲ್ಲಿ ಸ್ವಲ್ಪ ವೈಬ್ರೇಷನ್‌ನ್ನು ಅನುಭವಿಸುತ್ತೀರಿ.

Citroen C5 Aircross in action

ಸಿಟ್ರೋನ್‌ನ ಕ್ಯಾಬಿನ್ ಶಬ್ದದಿಂದ ಮುಕ್ತವಾಗಿದೆ ಮತ್ತು ಎರಡು ಲ್ಯಾಮಿನೇಟೆಡ್ ಮುಂಭಾಗದ ಕಿಟಕಿಗಳನ್ನು ಒದಗಿಸುವ ಮೂಲಕ SUV ಯ NVH (ನೊಯ್ಸ್‌, ವೈಬ್ರೇಷನ್‌ ಮತ್ತು ಹರ್ಸ್‌ನೆಸ್‌) ಮಟ್ಟಗಳಿಗೆ ಬಂದಾಗ ಅದರ  ಕರ್ತವ್ಯವನ್ನು ಉತ್ತಮವಾಗಿ ನಿಭಾಯಿಸಿದೆ. ಹೆದ್ದಾರಿಯಲ್ಲಿಯೂ ಸಹ, C5 ಏರ್‌ಕ್ರಾಸ್ ಮನೆಯಲ್ಲಿರುವ ಅನುಭವವನ್ನು ನೀಡುತ್ತದೆ ಮತ್ತು ಅದರ ಸ್ಟೀರಿಂಗ್ ವೀಲ್ ಉತ್ತಮ, ತೂಕದ ಭಾವನೆಯನ್ನು ನೀಡುತ್ತದೆ, ಹೆಚ್ಚಿನ ವೇಗಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ವರ್ಡಿಕ್ಟ್

Citroen C5 Aircross

ಸಿಟ್ರೋನ್‌ C5 ಏರ್‌ಕ್ರಾಸ್ ಫೇಸ್‌ಲಿಫ್ಟ್‌ನೊಂದಿಗೆ, ಯಾವಾಗಲೂ ಒಂದು ಉತ್ತಮವಾದ ಫ್ಯಾಮಿಲಿ ಎಸ್‌ಯುವಿ ಎಂಬ ಟ್ಯಾಗ್‌ನ್ನು ಹಾಗೆ ಇದರಲ್ಲಿಯೂ ಉಳಿಸಿಕೊಂಡಿದೆ. ಇದು ಸೌಕರ್ಯ, ಸವಾರಿ ಗುಣಮಟ್ಟ, ಲಗೇಜ್ ಸ್ಥಳದಂತಹ ಎಲ್ಲಾ ವಿಭಾಗಗಳಲ್ಲಿ ಉತ್ತಮವಾಗಿದೆ. ಹಾಗೆಯೇ ತನ್ನ ಸ್ಪರ್ಧಿಗಳಿಗೆ ಹೋಲಿಸಿದರೆ, ಮೂರು ವಯಸ್ಕರನ್ನು ಹಿಂಭಾಗದಲ್ಲಿ ಆರಾಮವಾಗಿ ಕೂರಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ.

ಇದರ ಪ್ರತಿಸ್ಪರ್ಧಿಗಳು ಏನನ್ನು ವಿಶೇಷವಾಗಿ ನೀಡುತ್ತವೆ ಎಂಬುದನ್ನು ನಾವು ಪರಿಗಣಿಸಿದಾಗ ಮಾತ್ರ ಇದರ ನ್ಯೂನತೆಗಳಾದ ಪೆಟ್ರೋಲ್ ಎಂಜಿನ್ ಮತ್ತು 4x4 ಆಯ್ಕೆಯ ಕೊರತೆ, ಕೆಲವು ವಾಹ್ ವೈಶಿಷ್ಟ್ಯಗಳನ್ನು ಮಿಸ್‌ ಆಗಿರುವುದು ಮತ್ತು ಇದರ ದುಬಾರಿ ಬೆಲೆಯನ್ನು ಗಮನಿಸಬಹುದು. ಉತ್ಸಾಹಭರಿತ ಅಥವಾ ಮೋಜಿನ-ಡ್ರೈವ್ ಅನುಭವಕ್ಕೆ ಬಂದಾಗ ಇದು ಅತ್ಯಂತ ಸಮರ್ಥವಾದ ಎಸ್‌ಯುವಿ ಅಲ್ಲ. ನಾವು ಹೇಳಿರುವಂತೆ, ನೀವು ಮಧ್ಯಮ ಗಾತ್ರದ ಎಸ್‌ಯುವಿಗಾಗಿ ವಿಶಿಷ್ಟವಾದ ಯುರೋಪಿನ ನೋಟ, ಶಕ್ತಿಯುತ ಡೀಸೆಲ್ ಮೋಟಾರ್ ಮತ್ತು ಸೌಕರ್ಯವನ್ನು ನಿಮ್ಮ ಗರಿಷ್ಠ ಆದ್ಯತೆಯಾಗಿ ಹುಡುಕುತ್ತಿದ್ದರೆ, C5 ಏರ್‌ಕ್ರಾಸ್‌  ನಿಮಗೆ ಸರಿಯಾದ ಆಯ್ಕೆಯಾಗಿರಬಹುದು.

ಸಿಟ್ರೊನ್ ಸಿ5 ಏರ್‌ಕ್ರಾಸ್‌

ನಾವು ಇಷ್ಟಪಡುವ ವಿಷಯಗಳು

  • ಚಮತ್ಕಾರಿ ಶೈಲಿಯು ಅದನ್ನು ಎದ್ದು ಕಾಣುವಂತೆ ಮಾಡುತ್ತದೆ
  • ಒಳಗೆ ಮತ್ತು ಹೊರಗೆ ಪ್ರೀಮಿಯಂ ಆಗಿ ಕಾಣುತ್ತದೆ ಮತ್ತು ಅನುಭವವಾಗುತ್ತದೆ
  • ಈ ವಿಭಾಗದಲ್ಲಿ ಬಹಳಷ್ಟು ಆರಾಮದಾಯಕ ಎಸ್‌ಯುವಿ
  • ಸ್ಮೂತ್ ಗೇರ್ ಬಾಕ್ಸ್ ಮತ್ತು ಶಕ್ತಿಯುತ ಡೀಸೆಲ್ ಎಂಜಿನ್
  • 10-ಇಂಚಿನ ಟಚ್‌ಸ್ಕ್ರೀನ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ನವೀಕರಿಸಿದ ವೈಶಿಷ್ಟ್ಯಗಳನ್ನು ಪಡೆಯುತ್ತದೆ

ನಾವು ಇಷ್ಟಪಡದ ವಿಷಯಗಳು

  • ಪೆಟ್ರೋಲ್ ಎಂಜಿನ್ ಅಥವಾ 4x4 ಆಯ್ಕೆ ಇಲ್ಲ
  • ಇದರ ಬೆಲೆ ಸ್ವಲ್ಪ ದುಬಾರಿಯಾಗಿದೆ
  • ಈ ಸೆಗ್ಮೆಂಟ್‌ನಲ್ಲಿ ಕಾಮನ್‌ ಆಗಿರುವ ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸೌಕರ್ಯಗಳು ಇದರಲ್ಲಿ ಮಿಸ್‌ ಆಗಿದೆ.

ಒಂದೇ ರೀತಿಯ ಕಾರುಗಳೊಂದಿಗೆ ಸಿ5 ಏರ್‌ಕ್ರಾಸ್‌ ಅನ್ನು ಹೋಲಿಕೆ ಮಾಡಿ

Car Nameಸಿಟ್ರೊನ್ ಸಿ5 ಏರ್‌ಕ್ರಾಸ್‌ಬಿವೈಡಿ atto 3ಪ್ರವೈಗ್ ಡಿಫೈಮರ್ಸಿಡಿಸ್ ಅ ವರ್ಗ ಲಿಮೌಸಿನ್
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌
Rating
90 ವಿರ್ಮಶೆಗಳು
99 ವಿರ್ಮಶೆಗಳು
13 ವಿರ್ಮಶೆಗಳು
102 ವಿರ್ಮಶೆಗಳು
ಇಂಜಿನ್1997 cc --1332 cc - 1950 cc
ಇಂಧನಡೀಸಲ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಡೀಸಲ್ / ಪೆಟ್ರೋಲ್
ಹಳೆಯ ಶೋರೂಮ್ ಬೆಲೆ36.91 - 37.67 ಲಕ್ಷ33.99 - 34.49 ಲಕ್ಷ39.50 ಲಕ್ಷ43.80 - 46.30 ಲಕ್ಷ
ಗಾಳಿಚೀಲಗಳು6767
Power174.33 ಬಿಹೆಚ್ ಪಿ201.15 ಬಿಹೆಚ್ ಪಿ402 ಬಿಹೆಚ್ ಪಿ160.92 ಬಿಹೆಚ್ ಪಿ
ಮೈಲೇಜ್17.5 ಕೆಎಂಪಿಎಲ್521 km500 km -

ಸಿಟ್ರೊನ್ ಸಿ5 ಏರ್‌ಕ್ರಾಸ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಸಿಟ್ರೊನ್ ಸಿ5 ಏರ್‌ಕ್ರಾಸ್‌ ಬಳಕೆದಾರರ ವಿಮರ್ಶೆಗಳು

4.1/5
ಆಧಾರಿತ90 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (90)
  • Looks (29)
  • Comfort (55)
  • Mileage (12)
  • Engine (30)
  • Interior (30)
  • Space (15)
  • Price (23)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Citroen C5 Aircross Bold Design And Unrivaled Comfort

    The C5 Aircross stands out from the crowd with its eye-catching design and dynamic interior, which e...ಮತ್ತಷ್ಟು ಓದು

    ಇವರಿಂದ anusha
    On: Apr 17, 2024 | 33 Views
  • Redefining Comfort And Versatility

    The Citroen C5 Aircross is one SUV that stands out in the segment with its unrivaled level of comfor...ಮತ್ತಷ್ಟು ಓದು

    ಇವರಿಂದ akshay
    On: Apr 10, 2024 | 48 Views
  • Citroen C5 Aircross Stylish SUV

    The advanced Citroen C5 Aircross SUV provides a smooth driving experience, sumptuous innards, and ex...ಮತ್ತಷ್ಟು ಓದು

    ಇವರಿಂದ kran
    On: Apr 04, 2024 | 62 Views
  • Comfortable Rides

    With its strong and particular plan, the C5 Aircross stands apart from the group. Its solid extents,...ಮತ್ತಷ್ಟು ಓದು

    ಇವರಿಂದ siddharth
    On: Apr 01, 2024 | 49 Views
  • Citroen C5 Aircross French Elegance, Unmatched Comfort

    The Citroen C5 Aircross offers Advanced luxury and the zenith of French goddess. The C5 Aircross has...ಮತ್ತಷ್ಟು ಓದು

    ಇವರಿಂದ karthik
    On: Mar 29, 2024 | 68 Views
  • ಎಲ್ಲಾ ಸಿ5 ಏರ್‌ಕ್ರಾಸ್‌ ವಿರ್ಮಶೆಗಳು ವೀಕ್ಷಿಸಿ

ಸಿಟ್ರೊನ್ ಸಿ5 ಏರ್‌ಕ್ರಾಸ್‌ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 17.5 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಆಟೋಮ್ಯಾಟಿಕ್‌17.5 ಕೆಎಂಪಿಎಲ್

ಸಿಟ್ರೊನ್ ಸಿ5 ಏರ್‌ಕ್ರಾಸ್‌ ಬಣ್ಣಗಳು

  • cumulus ಬೂದು with ಕಪ್ಪು roof
    cumulus ಬೂದು with ಕಪ್ಪು roof
  • ಮುತ್ತು ಬಿಳಿ with ಕಪ್ಪು roof
    ಮುತ್ತು ಬಿಳಿ with ಕಪ್ಪು roof
  • eclipse ನೀಲಿ with ಕಪ್ಪು roof
    eclipse ನೀಲಿ with ಕಪ್ಪು roof
  • ಪರ್ಲ್ ವೈಟ್
    ಪರ್ಲ್ ವೈಟ್
  • cumulus ಬೂದು
    cumulus ಬೂದು
  • perla nera ಕಪ್ಪು
    perla nera ಕಪ್ಪು
  • eclipse ನೀಲಿ
    eclipse ನೀಲಿ

ಸಿಟ್ರೊನ್ ಸಿ5 ಏರ್‌ಕ್ರಾಸ್‌ ಚಿತ್ರಗಳು

  • Citroen C5 Aircross Front Left Side Image
  • Citroen C5 Aircross Rear Left View Image
  • Citroen C5 Aircross Front View Image
  • Citroen C5 Aircross Grille Image
  • Citroen C5 Aircross Headlight Image
  • Citroen C5 Aircross Taillight Image
  • Citroen C5 Aircross Wheel Image
  • Citroen C5 Aircross Rear Wiper Image
space Image

ಸಿಟ್ರೊನ್ ಸಿ5 ಏರ್‌ಕ್ರಾಸ್‌ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the number of Airbags in Citroen C5 Aircross?

Devyani asked on 16 Apr 2024

The Citroen C5 Aircross is equipped with 6 airbags.

By CarDekho Experts on 16 Apr 2024

What is the boot space of Citroen C5 Aircross?

Anmol asked on 10 Apr 2024

The Citroen C5 Aircross has boot space of 580 Litres.

By CarDekho Experts on 10 Apr 2024

What is the maximum power of Citroen C5 Aircross?

Anmol asked on 10 Apr 2024

The Citroen C5 Aircross has max power of 174.33bhp@3750rpm.

By CarDekho Experts on 10 Apr 2024

What are the available features in Citroen C5 Aircross?

Vikas asked on 24 Mar 2024

The Citroen C5 Aircross features a 10-inche touchscreen infotainment system, Wir...

ಮತ್ತಷ್ಟು ಓದು
By CarDekho Experts on 24 Mar 2024

What is the seating capacity of Citroen C5 Aircross?

Vikas asked on 10 Mar 2024

The Citroen C5 Aircross is a 5 Seater SUV.

By CarDekho Experts on 10 Mar 2024
space Image
ಸಿಟ್ರೊನ್ ಸಿ5 ಏರ್‌ಕ್ರಾಸ್‌ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ಭಾರತ ರಲ್ಲಿ ಸಿ5 ಏರ್‌ಕ್ರಾಸ್‌ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 46.37 - 47.32 ಲಕ್ಷ
ಮುಂಬೈRs. 44.53 - 45.44 ಲಕ್ಷ
ತಳ್ಳುRs. 44.53 - 45.44 ಲಕ್ಷ
ಹೈದರಾಬಾದ್Rs. 45.64 - 46.57 ಲಕ್ಷ
ಚೆನ್ನೈRs. 46.38 - 47.33 ಲಕ್ಷ
ಅಹ್ಮದಾಬಾದ್Rs. 41.21 - 42.05 ಲಕ್ಷ
ಲಕ್ನೋRs. 42.65 - 43.52 ಲಕ್ಷ
ಜೈಪುರRs. 43.97 - 44.87 ಲಕ್ಷ
ಚಂಡೀಗಡ್Rs. 41.91 - 42.76 ಲಕ್ಷ
ಘಜಿಯಾಬಾದ್Rs. 42.65 - 43.52 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಸಿಟ್ರೊನ್ ಕಾರುಗಳು

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಸಂಪರ್ಕ dealer
view ಏಪ್ರಿಲ್ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience