• English
    • Login / Register

    2018 ಹುಂಡೈ ಎಲೈಟ್ i20 CVT: ವಿಮರ್ಶೆ

    Published On ಜುಲೈ 08, 2019 By arun for ಹುಂಡೈ ಇಲೈಟ್‌ I20 2017-2020

    • 1 View
    • Write a comment

    CVT  ಯು  ಎಲೈಟ್ i20 ಯ ನಗರ ಸ್ನೇಹಿ ಸ್ವಭಾವಕ್ಕೆ  ಒತ್ತುಕೊಡುತ್ತದೆಯೇ? ಅಥವಾ ಅದರ ಹಳೆ ಗುಜ್ಲರ್ ನಿಲುವಿನ 4-ಸ್ಪೀಡ್ ಆಟೋಮ್ಯಾಟಿಕ್ ನಿಂದ ಮೇಲಕ್ಕೆ ತೆಗೆದುಕೊಡುಹೋಗುತ್ತದೆಯೇ?

    2018 Hyundai Elite i20 CVT:  Review

    ನೀವು ಒಂದು ಉತ್ತಮ ಹಾಗು ದೊಡ್ಡದಾದ ನಗರದಲ್ಲಿನ ಉಪಯೋಗಕ್ಕೆ ಬೇಕಾಗುವ ಹ್ಯಾಚ್ ಅನ್ನು ಬಯಸಿದ್ದರೆ, ನಾವು ಖಂಡಿತವಾಗಿ ಹೇಳುತ್ತೇವೆ ಎಲೈಟ್ i20 ಯು ನಿಮ್ಮ "ನೋಡಬೇಕು" ಎಂಬ ಪಟ್ಟಿಯಲ್ಲಿ ಸೇರುತ್ತದೆ. ಇತ್ತೀಚಿನ ಫೇಸ್ ಲಿಫ್ಟ್ ನೊಂದಿಗೂ ಈ ಹುಂಡೈ ನ ಮೂಲಭೂತ ಗುಣಗಳ ಬದಲಾವಣೆ ಆಗಿಲ್ಲ:  ಇದು ಒಂದು ನೋನ್ ಸೆನ್ಸ್ ಅಲ್ಲದಿರುವ, ಸದೃಢವಾಗಿರುವ, ಉತ್ತಮ ಸಲಕರಣೆಗಳಿಂದ ಕೂಡಿದಂತಹ  ಕಾರ್ ಆಗಿ ಎಲ್ಲರಿಗೂ ಮೆಚ್ಚುಗೆ ಆಗುತ್ತದೆ ಯಾರಿಗೂ ಖೇದ ಉಂಟುಮಾಡುವುದಿಲ್ಲ. ನಾವು  ಪರೀಕ್ಷಿಸುತ್ತಿರುವ ಎಲೈಟ್ 20 CVT ಯಲ್ಲಿ ಆ ನಿಲುವಿನ ಬದಲಾವಣೆ ಆಗುವುದನ್ನು ಬಯಸುವುದಿಲ್ಲ.  ನಾವು CVT  ಅಳವಡಿಕೆ  i20 ಯನ್ನು  ಈಗಿರುವುದಕ್ಕಿಂತ ಹೆಚ್ಚು ಉತ್ತಮವಾಗಿಸಿದೆಯೇ ಎಂದು ನೋಡಬೇಕಾಗಿದೆ.

    ಬಾಹ್ಯಗಳು 

    2018 Hyundai Elite i20 CVT:  Review

    ಹುಂಡೈ ಎಲೈಟ್ i20 ಯಾ ಡಿಸೈನ್ ಅನ್ನು ಈ ಹಿಂದೆ ಈ ವರುಷದಲ್ಲಿ ನವೀಕರಣ ಗೊಳಿಸಿದೆ. ಅದಷ್ಟೇ ಆದರೆ ಉತ್ತಮವಾಗಿಇರುವುಕೆ ಕೇವಲ ಟಾಪ್ ಸ್ಪೆಕ್ ಆಸ್ತಾ (O) ದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ನೀವು ಚಿತ್ರಗಳಲ್ಲಿ ನೋಡುವಂತಹುದು ಟಾಪ್ ಸ್ಪೆಕ್ ಆಟೋಮ್ಯಾಟಿಕ್ ವೇರಿಯೆಂಟ್ ಆಗಿದೆ, ಆಸ್ತಾ , ನೀವು ಅದನ್ನು ಕೊಳ್ಳಬಹುದು. ಮತ್ತು ನಾವು ಖಂಡಿತವಾಗಿ ಹೇಳಬಹುದು ಟಾಪ್ ಸ್ಪೆಕ್ ಮಾನ್ಯುಯಲ್ ನಂತೆ ಅದ್ಭುತವಾಗಿ ಕಾಣುವುದಿಲ್ಲ.

    ಅದು ಏಕೆಂದರೆ ಇದರಲ್ಲಿ ಬಹಳಷ್ಟು ವಿಚಾರಗಳು ವಿಭಿನ್ನವಾಗಿವೆ. ಮುಂಭಾಗದೊಂದಿಗೆ ಪ್ರಾರಂಭಿಸಿ , ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ ಡೇಟಿಂಗ್ ರನ್ನಿಂಗ್ ಲ್ಯಾಂಪ್ ಗಳನ್ನು ಬಿಡಲಾಗಿದೆ. ಅದರ ಬದಲು, ಸದರಾಣವಾದ ರೆಫ್ಲೆಕ್ಟರ್ ಹೆಡ್ ಲ್ಯಾಂಪ್ ಗಳು ಕೊಡಲಾಗಿದೆ, ಅವು ಈಗ ಹಳತಾಗಿ ಕಾಣತೊಡಗಿದೆ. ನಿಮಗೆ DRL ದೊರೆಯುತ್ತದೆ , ಆದರೆ ಅವು ಫಾಗ್ ಲ್ಯಾಂಪ್ ಅನ್ನು ಎದ್ದು ಕಾಣುವಂತೆ ಮಾಡುತ್ತದೆ. ಹೊಸ ಬಂಪರ್ ಗಳು  ಹಿಂದಿಗಿಂತ ಸ್ವಲ್ಪ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ನಾಮಗನಿಸುವಂತೆ ಕ್ರೋಮ್ ಇಲ್ಲದ ಡಿಸೈನ್ i20 ಯ ಶಾಂತತೆಗೆ ತಕ್ಕಂತೆ ಇದೆ.

    2018 Hyundai Elite i20 CVT:  Review

    ಕ್ರೋಮ್ ಬಗ್ಗೆ ಹೇಳಬೇಕೆಂದರೆ, ಅದು ಡೋರ್ ಹ್ಯಾಂಡಲ್ ನಲ್ಲಿ ಮಿಸ್ ಆಗಿದೆ. ಜೊತೆಗೆ ಕೀ ಲೆಸ್ ಎಂಟ್ರಿ ಗಾಗಿ ಬೇಡಿಕೆ ಇರಿಸಿದ ಸೆನ್ಸರ್ ಗಳನ್ನೂ ಸಹ ಬಿಡಲಾಗಿದೆ. ಇನ್ನಷ್ಟು ಎದ್ದು ಕಾಣುವ ವಿಚಾರಗಳೆಂದರೆ ಅದರ ಚಿಕ್ಕ ವೀಲ್ ಗಳು. Asta (O) ನಲ್ಲಿ 16-ಇಂಚು ವೀಲ್ ಗಳು ಆಕರ್ಷಕವಾಗಿ ಕಾಣುತ್ತದೆ, ಮತ್ತು ಆಸ್ತಾ ದಲ್ಲಿ  15-ಇಂಚು ವೀಲ್ ಗಳೊಂದಿಗೆ ಸಮಾದಾನ ಮಾಡಿಕೊಳ್ಳಬೇಕಿದೆ. ನಾಮಗನಿಸುವಂತೆ ಅವುಗಳಿಗೆ ಗನ್ ಮೆಟಲ್ ಗ್ರೇಯ್ ಶೇಡ್ ಫಿನಿಷ್ ಗಳನ್ನು ಕೊಡಬಾರದಿತ್ತು. ಅದರ ಕಡಿದಾದ ಬಣ್ಣ ಅದನ್ನು ನೋಡಲು ಇರುವುದಕ್ಕಿಂತ ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ.

    2018 Hyundai Elite i20 CVT:  Review

    C-ಪಿಲ್ಲರ್ ಮೇಲೆ ಇರುವ ಗ್ಲೋಸ್ ಕಪ್ಪು ಅಪ್ಪ್ಲಿಕ್ಯು , LED-ಅನುಕರಿಸುವ ಟೈಲ್ ಲ್ಯಾಂಪ್ ಮತ್ತು ಹೊಸ ರೇರ್ ಬಂಪರ್ i20 ಆಟೋಮ್ಯಾಟಿಕ್ ಮೇಲೆ ನೋಡಲು ಬಹಳ ಚೀನಾಗಿ ಕಾಣಿಸುತ್ತದೆ. ನಿಮಗೆ ಆಶ್ಚರ್ಯವುಂಟಾಗುತ್ತಿದ್ದರೆ , ಬಲಭಾಗದ ಫೆಂಡರ್ ಮೇಲೆ ಇರುವ ಚಿಕ್ಕ ಬ್ಯಾಡ್ಜ್ ಮಾತ್ರ ನಿಮಗೆ ಈ ಕಾರ್ ಆಟೋಮ್ಯಾಟಿಕ್ ಆವೃತ್ತಿ ಎಂದು ಸೂಚಿಸುತ್ತದೆ. ಅದನ್ನು ಬಿಟ್ಟು ಬೇರೆ ಸೂಚನೆಗಳು ಕಾಣುವುದಿಲ್ಲ.

    ಆಂತರಿಕಗಳು

    2018 Hyundai Elite i20 CVT:  Review

    ನೀವು ಒಮ್ಮೆ ಎಲೈಟ್  i20 CVT ಒಳಗೆ ಕುಳಿತರೆ ನಿಮಗೆ ಅದು ಚಿರಪರಿಚಿತ ಎನಿಸುತ್ತದೆ. ಚೆನ್ನಾಗಿ ಅಲಂಕರಿಸಲ್ಪಟ್ಟ ಡ್ಯಾಶ್, ಸುಲಭವಾಗಿ ತಲುಪಬಹುದಾದ ಮತ್ತು ಉಪಯೋಗಿಸಬಹುದಾದ ಕಂಟ್ರೋಲ್ ಗಳು ಮತ್ತು ಪರಿಚಿತವಾಗಿರುವ ತಂಪಾದ ನೀಲಿ ಬಕುಳಿತೆ ನಿಮಗೆ ಕ್ಯಾಬಿನ್ ನಲ್ಲಿ ಆರಾಮದಾಯಕವಾಗಿರುವಂತೆ ಅನುಭವವಾಗುತ್ತದೆ. ಆಸ್ತಾ (O) ವೇರಿಯೆಂಟ್ ನಲ್ಲಿ ಅದ್ಭುತವಾದದ್ದು ಏನು ಇಲ್ಲ ಎಂದು ಪರಿಗಣಿಸಿದರೆ , ಕೆಲವು ಮಿಸ್ ಆಗಿರುವ ವಿಷಯಗಳು ನಿಮ್ಮ ಅನುಭಾವವನ್ನು ಸ್ವಲ್ಪ ಕಡಿತ ಗೊಳಿಸುತ್ತದೆ.

    ಹುಂಡೈ ನವರು ಈ ಒಟ್ಟು ಮೂರು ವಿಷಯಗಳನ್ನು ಕೊಟ್ಟಿದ್ದಾರೆ ಕ್ಯಾಬಿನ್ ಒಳಗಿನ ಅನುಭವವನ್ನು ಶ್ರೀಮಂತವಾಗಿಸಿದ್ದರೆ ನಮಗೆ ಇಷ್ಟವಾಗುತ್ತಿತ್ತು. ಸ್ಟಿಯರಿಂಗ್ ಗೆ ಲೆಥರ್ ಸುತ್ತು, ಗ್ಲೋಸ್ ಬ್ಲಾಕ್ ಅಪ್ಪ್ಲಿಕ್ಯು ಹೊರಪದರಗಳು ಗೇರ್ ಲೀವರ್ ಗೆ, ಮತ್ತು ಆಟೋ ಅಪ್ ಕಾರ್ಯ ಡ್ರೈವರ್ ಸ ಬದಿಯ ಪವರ್  ವಿಂಡೋ ದಲ್ಲಿ ಕೊಡಲಾಗಿದೆ. ಮೊದಲ ಎರೆಡು, ಚಿಕ್ಕ ಅಳವಡಿಕೆಗಳು ಆಗಿದ್ದರೂ ಹುಂಡೈ ನ ಪ್ರೀಮಿಯಂ ಭರವಸೆಯನ್ನು ಹೆಚ್ಚಿಸುತ್ತದೆ. ಕೊನೆಯದಾಗಿ, ನಮಗೆ ಅನಿಸುವಂತೆ ಇದನ್ನು ಸ್ಟ್ಯಾಂಡರ್ಡ್ ಆಗಿ ಕೊಡಬೇಕಾಗಿತ್ತು ಬೇಸ್ ಆವೃತ್ತಿಯಲ್ಲಿ. ಫೀಚರ್ ಗಳ ಬಗ್ಗೆ ಹೇಳಬೇಕೆಂದರೆ , ನಾವು ರೇರ್ ವೈಪರ್ ಗಳನ್ನು ಪಡೆಯಬಹುದೇ, ಹುಂಡೈ?

    2018 Hyundai Elite i20 CVT:  Review

    ಈ ಮಿಸ್ ಗಳನ್ನೂ  ಸೇರಿಸಿ,ನಮಗೆ ದೂರುವಂತಹವುದು ಯಾವುದು ಇಲ್ಲ. ಕ್ವಾಲಿಟಿ ಗುಣಮಟ್ಟ ಆ ವಿಭಾಗದಲ್ಲೇ ಹೆಚ್ಚು ಮೆಚ್ಚುವಂತಿದೆ, ಮತ್ತು ಇತರ ಫೀಚರ್ ಗಳ ಪಟ್ಟಿ ನಮಗೆ ನಿರಾಸೆ ಉಂಟುಮಾಡುವುದಿಲ್ಲ. ಇದರಲ್ಲಿ 7.0-ಇಂಚು ಟಚ್ ಸ್ಕ್ರೀನ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ , ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ರೇರ್ AC ವೆಂಟ್ ಗಳು ಮತ್ತು ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳನ್ನೂ ಕೊಡಲಾಗಿದೆ. ಹಲವು ಮನಸಿಗೆ ಒಪ್ಪುವಂತಹ ಫೀಚರ್ ಗಳು ಸಹ ಕೊಡಲಾಗಿದೆ. , ವಿದ್ಯುತ್ ಅಳವಡಿಕೆಯ ಮಡಚಬಹುದಾದ ರೇರ್ ವ್ಯೂ ಮಿರರ್ ಮತ್ತು ನೀವು ಕಾರ್ ಅನ್ನು  ಸ್ವಿಚ್ ಆಫ್ ಮಾಡಿದಾಗ ಥಿಯೇಟರ್ ತರಹದ ಪರಿಣಾಮ ಉಳ್ಳ ಇನ್ಸ್ಟ್ರುಮೆಂಟ್ ಕ್ಲಸ್ಟರ್  ಕೊಡಲಾಗಿದೆ. ಇಲ್ಲಿ ಆಸ್ತಾ ವೇರಿಯೆಂಟ್ ನಲ್ಲಿ  MID ಸಹ ಕೊಡಲಾಗಿದೆ . ಅದರಲ್ಲಿ ಬೇಸಿಕ್ ಗಳಾದ ಸ್ಪೀಡ್, ಟ್ರಿಪ್ ವಿವರಗಳು, ಡಿಸ್ಟೆನ್ಸ್ ಟು ಎಂಪ್ಟಿ, ಮತ್ತು ಮೈಲೇಜ್. ಇದು ನೋಡಲು ಹುಂಡೈ ನ "ಸೂಪರ್ ವಿಷನ್  ಕ್ಲಸ್ಟರ್" ತರಹ ಅದ್ಬುತವಾಗಿಲ್ಲದಿದ್ದರೂ , ಅದು ಬೇಕಾಗಿರುವ ಕೆಲಸ ಮಾಡುತ್ತದೆ.

    2018 Hyundai Elite i20 CVT:  Review

    ವಿಶಾಲತೆ, ಇದು ಹೆಚ್ಚು ವಿಶಾಲತೆ ಹೊಂದಿದೆ ಎಂದು ಹೇಳಲಾಗದಿದ್ದರೂ, ಇದು ಆಧುನಿಕ ಸಣ್ಣ ಕುಟುಂಬಗಳಿಗೆ ಹೊಂದುವಂತಿದೆ. ಇದನ್ನು ನಾಲ್ಕು ಸೆಟರ್ ತರಹ ಉಪಯೋಗಿಸುವುದಕ್ಕೆ ಬಹಳ ಸೂಕ್ತವಾಗಿದೆ, ಐವರು ಸಹ ಕೂಡಬಹುದಾಗಿದೆ ಆದರೆ ಒತ್ತಿಕೊಂಡು ಕೂಡಬಹುದಾಗಿದೆ. ಆಟೋಮ್ಯಾಟಿಕ್ ವೇರಿಯೆಂಟ್ ನಲ್ಲಿ ಹಿಂಬದಿಯಲ್ಲಿ ಆರ್ಮ್ ರೆಸ್ಟ್ ಕೊಡಲಾಗಿಲ್ಲ , ಸೀಟ್ ಫ್ಲಾಟ್ ಆಗಿದೆ --ಹಾಗಾಗಿ ಮದ್ಯದ ಪ್ಯಾಸೆಂಜರ್ ಗೆ ಸ್ವಲ್ಪ ಅನುಕೂಲವಾಗುತ್ತದೆ ಆಸ್ತಾ (O) ಗೆ ಹೋಲಿಸಿದಾಗ. ಬೇಗನೆ ತಿಳಿಯಲು ಅಳತೆಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ

    Measurements - Front

    Legroom (min-max)

    890-1045mm

    Knee room (min-max)

    590-805mm

    Seat base length

    495mm

    Seat base width

    505mm

    Seat back height

    670mm

    Headroom (min-max)

    970-1000mm

    Cabin width

    1360mm

    Measurements - Rear

    Shoulder room

    1280mm

    Headroom

    950mm

    Seat base length

    455mm

    Seat base width

    1265mm

    Seat back height

    670mm

    Knee room (min-max)

    585-800mm

    Rear floor hump height

    50mm

    Rear floor hump width

    310mm

    2018 Hyundai Elite i20 CVT:  Review

    ಸಂದರ್ಭನುಸಾರವಾಗಿ, ಕ್ಯಾಬಿನ್ ಅದರ ಪ್ರತಿಸ್ಪರ್ದಿಯಷ್ಟು ವಿಶಾಲವಾಗಿಲ್ಲ, ಮಾರುತಿ ಸುಜುಕಿ ಬಲೆನೊ, ಹಾಗು ಇದರಲ್ಲಿ ಹೆಚ್ಚು ಮೊಣಕಾಲು ಸ್ಥಳವು ಇಲ್ಲ. ಆದರೆ ಇದರಲ್ಲಿ ಹೆಡ್ ರೂಮ್ ಸ್ವಲ್ಪ ಹೆಚ್ಚಾಗಿಯೇ ಇದೆ. ಬೂಟ್ ಸ್ಪೇಸ್,  328 ಲೀಟರ್ ಗಳಷ್ಟು ಇದ್ದು, ಅದು ಕ್ಲಾಸ್ ನ ಮುಂಚುಣಿಯಲ್ಲಿಲ್ಲ, ಆದರೂ ಅದು ಸಾಕ್ಷ್ಟು ಇದೆ . ಅದರಲ್ಲಿ ಇಬ್ಬರಿಗೆ  ಒಂದು ವಾರಕ್ಕೆ ಬೇಕಾಗುವಷ್ಟು ಲಗೇಜ್ ಇಡಲು , ಮತ್ತು ಹಲವು ಕ್ಯಾಮೆರಾ ಹಾಗು ಟ್ರೀ ಪೋಡ್ ಬ್ಯಾಗ್ ಗಳನ್ನೂ ಇರಿಸುವಷ್ಟು ಸ್ಥಳಾವಕಾಶ ಇತ್ತು.

    ಕಾರ್ಯದಕ್ಷತೆ

    2018 Hyundai Elite i20 CVT:  Review

    ಎಲೈಟ್  i20 CVT ಯಲ್ಲಿ ಹುಂಡೈ ನ ಹಲವುಬಾರಿ ಪರೀಕ್ಷಿಸಲ್ಪಟ್ಟ ಮತ್ತು ಉಪಯೋಗಿಸಲ್ಪಟ್ಟ 1.2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ. ಈ ಮೋಟಾರ್ ನ ನವೀಕರಣ ಆಶ್ಚರ್ಯಕರವಾಗಿದೆ. ಬೊನೆಟ್ ಒಳಗಿನ ಇನ್ಸುಲೇಷನ್ ಅನ್ನು ಕೊಡಲಾಗಿಲ್ಲ ಹಾಗಿದ್ದರೂ ಕ್ಯಾಬಿನ್ ನಲ್ಲಿ ನಿಶಬ್ದ ವಾತಾವರಣವಿದೆ. ಹಲವು ಬಾರಿ ನಿಮಗೆ ಎಂಜಿನ್ ನ ಕೋಲ್ಡ್ ಸ್ಟಾರ್ಟ್ ಕೇಳಿಸುತ್ತದೆ , ನೀವು ಹೆಚ್ಚು ವೇಗದಲ್ಲಿ ಹೋಗುತ್ತಿರುವಾಗ ಹಾಗೆ ಶಬ್ದ ಕೇಳಿಬರುವುದಿಲ್ಲ.

    2018 Hyundai Elite i20 CVT:  Review

    ನೀವು ಹಾಗೆ ಮಾಡಬೇಡಿ, ನೀವು ಹಾಗೆ ಮಾಡಬೇಡಿ. ಎಲೈಟ್ i20 CVT ಸರಳವಾಗಿ ಅದಕ್ಕಾಗಿ ಮಾಡಲ್ಪಟ್ಟಿಲ್ಲ. 0-100kmph ವೇಗಗತಿ ಪಡೆಯಲು ಅದು ನಿಧಾನಗತಿಯ  16.18 ಸೆಕೆಂಡ್ ಗಳನ್ನೂ ತೆಗೆದುಕೊಳ್ಳುತ್ತದೆ. ನಂಬರ್ ಗಾಲ ವಿಚಾರ ಹೇಳಬೇಕೆಂದರೆ , ಇದು 0.13 ಸೆಕೆಂಡ್ ಗಳು ಹೆಚ್ಚು ವೇಗ ಆಗಿದೆ  ನಾವು ಈ ಹಿಂದೆ ಪರೀಕ್ಷಿಸಿದಂತಹ ಟಿಯಾಗೋ  AMT ಗೆ ಹೋಲಿಸಿದಾಗ. ಹಾಡು , ಇದರಲ್ಲಿ ನಿರಾಕರಿಸುವಂತಹದಲ್ಲ --ಇದು ಹೆಚ್ಚು ವೇಗವಾಗಿಲ್ಲ ಮತ್ತು ಉತ್ತೇಜನಕಾರಿಯಾಗಿಯೂ ಇಲ್ಲ.

    2018 Hyundai Elite i20 CVT:  Review

    ಆದರೆ , ನಾವು ಮೆಚ್ಚುತ್ತೇವೆ ಇದನ್ನು! ಅದು CVT ಗೆ ಹೊಂದುವಂತೆ. ನಮಗೆ ತಿಳಿತ್ದಿದೆ ಈಗ ನೀವು ಆಶ್ಚರ್ಯ ಪಡುತ್ತಿರಬಹುದು CVT ಹೇಗೆ ಅಚ್ಚು ಮೆಚ್ಚುವಂತಾಯಿತುಎಂದು, ಅದು ನಿಮಗೆ ಸದ್ಯದಲ್ಲೇ ತಿಳಿಯಲಿದೆ. ಇದು ಒಂದು ಆತು ಸುಲಭವಾಗಿ ಬಳಸಬಹುದಾದ ನಾವು ಪರೀಕ್ಷಿಸಿದ   CVT ಕಾರ್ ಗಳಲ್ಲಿ ಒಂದು ಆಗಿದೆ. ಮತ್ತು ಅದು ಅಂದುಕೊಂಡ ಉಪಯೋಗಕ್ಕೆ ತಕ್ಕುದಾಗಿದೆ. ಅದು ನಗರದಲ್ಲಿನ ಪ್ರತಿನಿತ್ಯದ ಉಪಯೋಗಕ್ಕೆ ಅನುಗುಣವಾಗಿದೆ.

    2018 Hyundai Elite i20 CVT:  Review

    ಡ್ರೈವ್ ಮಾಡಲು ಸುಲಭವಾಗಿರುವುದು ಡೀಲ್ ಅನ್ನು ಪಕ್ಕ ಮಾಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಹಳೆ ಸಂಪ್ರದಾಯದ CVT ಯಲ್ಲಿ ನೀವು ಸ್ವಲ್ಪ ಮುಂದುವರೆಯಲು ಸಹ ಹೆಚ್ಚು ತ್ರೋಟಲ್ ಒತ್ತಬೇಕಾಗುತ್ತಿತ್ತು , ಅದಕ್ಕೆ ತದ್ವಿರುದ್ಧವಾಗಿ ನಿಮಗೆ ಎಲೈಟ್  i20 ಯಲ್ಲಿ ಅತಿ ಸುಲಭವಾಗಿ ವೇಗಗತಿ ಪಡೆಯಲು ಅನುಕೂಲ ಆಗುತ್ತದೆ. ಇದರಲ್ಲಿ ಊಹಿಸುವಂತಹುದು ಯಾವುದು ಇಲ್ಲ, ನಿಮಗೆ ಆಕ್ಸಿಲರೇಟರ್ ಒತ್ತಿದಾಗ ಅದು ಎಷ್ಟು ಮೃದುವಾಗಿ ಇದೆ ಎಂದು ಹಾಗು ಹೇಗೆ ವೇಗಗತಿ ಪಡೆಯುತ್ತದೆ ಎಂದು ತಿಳಿಯುತ್ತದೆ. ಇದರಲ್ಲಿ ಪೆಡಲ್ ನ ಸಣ್ಣ ಪುಟ್ಟ ಬದಲಾವಣೆಗಳನ್ನು ಸುಲಭವಾಗಿ ಗ್ರಹಿಸುತ್ತದೆ. ಉದಾಹರಣೆಗೆ, ನಿಮಗೆ ಸ್ವಲ್ಪ ಹೆಚ್ಚು ಪವರ್ ಬೇಕು ಎನಿಸಿದಲ್ಲಿ ಓವರ್ ಟೇಕ್ ಮಾಡಲು, ಒಟ್ಟಾರೆ ಇಲ್ಲದಿದ್ದರೂ, ಟ್ರಾನ್ಸ್ಮಿಷನ್ ನಿಮಗೆ ಬೇಕಾಗಿರುವಷ್ಟನ್ನು ಕೊಡುತ್ತದೆ.

     2018 Hyundai Elite i20 CVT:  Review

    ನಿಮಗೆ ಇದು ಪಾಲಿಷ್ ಮಾಡಿಲ್ಲದಿರುವಂತೆ ಕಾಣಿಸುತ್ತದೆಯೇ? ಹೌದು, ಇದು ಹಾಗೆ ಮಾಡುತ್ತದೆ. ಎರೆಡು ವಿಚಾರಗಳಲ್ಲಿ: ಇಳಿಜಾರುಗಳಲ್ಲಿ ಮತ್ತು ತೀಕ್ಷ್ಣವಾದ ಹೈವೇ ಓವರ್ಟೇಕ್ ಗಳಲ್ಲಿ. ನಿಜವಾಗಿಯೂ ಕಡಿದಾದ ಇಳಿಜಾರುಗಳಲ್ಲಿ ಗೇರ್ ಬಾಕ್ಸ್ ಸ್ವಲ್ಪ ತಡವರಿಸಿದಂತೆ ಆಗುತ್ತದೆ. ಹಾಗಾಗಿ ಅದು ಎಂಜಿನ್ ವೇಗಗತಿ ಹೆಚ್ಚುವಂತೆ ಮಾಡುತ್ತದೆ ಮತ್ತು ಹೆಚ್ಚು ಶಬ್ದ ಉಂಟಾಗುವಂತೆ ಮಾಡುತ್ತದೆ. ವಿಚಾರವವೆಂದರೆ ಎಲೈಟ್  i20 ಎಂಜಿನ್ ನಲ್ಲಿ ರೆಡ್ ಲೈನ್ ಲೈನ್ rpm ಗಳಲ್ಲಿ ದೊರೆಯುವಂತಹುದು ಹೆಚ್ಚು ಇಲ್ಲ. ಹಾಗಾಗಿ ಅದು ಸ್ವಲ್ಪ ಹಿನ್ನಡೆ ಉಂಟಾಗುವಂತೆ ಮಾಡುತ್ತದೆ. ಈ ವಿಚಾರಗಳು ಹೈವೇ ಗಳಲ್ಲಿಯೂ ಸಹ ಹಾಗೆಯೆ ಇವೆ. ನೀವು ನಿಮ್ಮ ಲೇನ್ ಅನ್ನು ಬಿಟ್ಟು ಆಕ್ಸಿಲರೇಟರ್ ಪೆಡಲ್ ಅನ್ನು ಹೆಚ್ಚು ಒತ್ತಿದರೆ , ನಿಮಗೆ ಹೆಚ್ಚಿನ ಪವರ್ ಗಿಂತ ಶಬ್ದವೇ ಹೆಚ್ಚು ಬರುತ್ತದೆ. ನೀವು ಮಾನ್ಯುಯಲ್ ಶಿಫ್ಟ್ ಗೆ ಬದ್ಲಗಿ ಹೆಚ್ಚು ಗೇರ್ ಬದ್ಲಿಸಬೇಕಾದ ಕೆಲಸವನ್ನು ನೀವೇ ಮಾಡಬಹುದು. ಆದರೆ,  6 ಪ್ರಿ ಸೆಟ್ ಆಗಿರುವ ರೇಶಿಯೋ ಗಳನ್ನೂ ಹೆಚ್ಚು ಉಪಯುಕ್ತವಾಗಿಸುವಂತೆ ಮಾಡುವುದು ಅಷ್ಟೇನೂ ಉತ್ತಮವಾಗಿರುವುದಿಲ್ಲ. ಅದು ಕೂಡ ಹೆಚ್ಚು ವೇಗವಾಗಿಲ್ಲ, ಹಾಗಾಗಿ ಬಾಕ್ಸ್ ಗೆ ತನ್ನ ಕೆಲಸ ಅಮಾಡಲು ಬಿಡುವುದು ಒಳ್ಳೆಯದು.

    ಈ ಕಾರ್ ಅನ್ನು ಬಳಸಬೇಕಾದ ಮಂತ್ರವೆಂದರೆ ಸಾವಧಾನವಾಗಿರುವುದು. ನೀವು ಹಾಗೆ ಮಾಡಿದಾಗ, ನಿಮಗೆ ವಿಶ್ರಾಂತಿ ದೊರೆತ ಅನುಭವವಾಗುತ್ತದೆ, ಮತ್ತು ಸಂತೋಷವಾಗಿ ಮ್ಯೂಸಿಕ್ ಕೇಳುತ್ತ ಸಾಗಬಹುದು. ನೀವು ಇತರಹದ ಅನುಕೂಲ  ಬಯಸಿದರೆ ಹಾಗೂ ಇನ್ನೇನು ಬಯಸುತ್ತಿಲ್ಲದಿದ್ದರೆ ನಿಮಗೆ ಇದಕ್ಕಿಂತ ಉತ್ತಮವಾದದು ದೊರೆಯುವುದಿಲ್ಲ. ಅದು ನಿಮಗೆ ಹೆಚ್ಚು ವ್ಯಯ ಕೂಡ ಮಾಡುವುದಿಲ್ಲ, ಸೂಕ್ಷ್ಮವಾಗಿ ಡ್ರೈವ್ ಮಾಡಿದಾಗ ಇದು ನಮಗೆ ಒಪ್ಪಬಹುದಾದಂತಹ 12.16kmpl ಕೊಟ್ಟಿತು ನಗರದಲ್ಲಿ ಮತ್ತು  15.99kmpl ಹೈವೇ ಗಳಲ್ಲಿ.

     2018 Hyundai Elite i20 CVT:  Review

    100-0kmph ನಿಂದ ಎಲೈಟ್  i20  42.98 ಮೀಟರ್ ತೆಗೆದುಕೊಂಡಿತು ಅದು  0.10  ಮೀಟರ್ ಗಳು ಕಡಿಮೆ  ಬಲೆನೊ RS (43.08 ಮೀಟರ್ ) ಗೆ ಹೋಲಿಸಿದರೆ, ಅದರಲ್ಲಿ ನಾಲ್ಕು ಡಿಸ್ಕ್ ಬ್ರೇಕ್ ಗಳನ್ನು  ಕೊಡಲಾಗಿದೆ. ಸ್ಪಷ್ಟವಾಗಿ , ಕಾರ್ಯದಕ್ಷತೆ ಒಂದು ಸಮಸ್ಯೆ ಅಲ್ಲ. ಆದರೆ, ಪೆಡಲ್ ಮೇಲಿನ ಸ್ಪರ್ಶ ನಿಮಗೆ ಮೆಚ್ಚುಗೆಯಾಗುತ್ತದೆ. ಬ್ರೇಕಿಂಗ್ ಶಕ್ತಿಯಲ್ಲಿ ಯಾವುದೇ ಸಂಶಯೇ ಇಲ್ಲ. ಕಾರ್ ಒಪ್ಪಬಹುದಾದ ದೊರದಲ್ಲಿ ನಿಲ್ಲುತ್ತದೆ. ಆದರೆ ಪೆಡಲ್ ನ ಬಳಕೆಯಲ್ಲಿ ಟ್ರಾವೆಲ್ ಮತ್ತು  ಸ್ವಲ್ಪ ಭಾವನೆ ಇದೆ. ಹುಂಡೈ ನವರು ಪ್ರಾರಂಭದಲ್ಲೇ ಇದನ್ನು ಸರಿಪಡಿಸಬಹುದಿತ್ತು.

     ರೈಡ್ ಮತ್ತು ಹ್ಯಾಂಡಲಿಂಗ್ 

    2018 Hyundai Elite i20 CVT:  Review

    ಮಾನ್ಯುಯಲ್ ಪ್ರತಿರೂಪದಂತೆ  i20 CVT ಯಲ್ಲಿ ಸರಿಯಿಲ್ಲದ ರಸ್ತೆಗಳನ್ನು ಚೆನ್ನಾಗಿ ನಿಭಾಯಿಸುತ್ತದೆ. ಸಸ್ಪೆನ್ಷನ್ ರಸ್ತೆಯ ಅಂಕು ಡೊಂಕುಗಳಲ್ಲಿ  ಮತ್ತು ಪಾಟ್ ಹೋಲ್ ಗಳಲ್ಲಿ, ಹಾಗು ಸರಿಯಿಲ್ಲದ ರಸ್ತೆಗಳಲ್ಲಿ  ಹೆಚ್ಚು ಶಬ್ದ ಮಾಡುವುದಿಲ್ಲ. ತೊರೆ ಗಳು ಸಹ ನಿಶಬ್ದವಾಗಿರುತ್ತದೆ ನೀವು ಹೈವೇ ವೇಗ ದಲ್ಲಿರಬಹುದು ಅಥವಾ ಕಡಿದಾದ ತಿರುವುಗಳನ್ನು ತೆಗೆದುಕೊಳ್ಳಬೇಕಾದರೂ ಆಗಬಹುದು. 

    ತಿರುವುಗಳ ಬಗ್ಗೆ ಹೇಳಬೇಕೆಂದರೆ, ಎಲೈಟ್ ತೀಕ್ಷ್ಣವಾದ ತಿರುವುಗಳನ್ನು ನಿಭಾಯಿಸಲು ತಡವರಿಸುವುದಿಲ್ಲ. ಸ್ಟಿಯರಿಂಗ್ ಪರಿಚಿತವಾಗಿ ಸುಲಭವಾಗಿದ್ದು ,ಅದನ್ನು ಸರಿಪಡಿಸಲು ಹೆಚ್ಚು ಪರಿಶ್ರಮಪಡಬೇಕಾಗಿಲ್ಲ. ಅದು ಹೈವೇ ಗಳಲ್ಲೂ ಸಹ ಸರಿಯಾಗಿದೆ , ನಮಗೆ ಅದಕ್ಕಿಂತ ಹೆಚ್ಚು ಬೇಕೆನಿಸುವುದಿಲ್ಲ. 

    2018 Hyundai Elite i20 CVT:  Review

    ಮತ್ತು , ಇತರ ಹಳೆಯ ಹುಂಡೈ ಗಳಂತೆ ಇದಾರೆ ಎಲೈಟ್  i20 ಹೈವೇ ವೇಗಗಳಲ್ಲಿ ಸ್ಥಿರವಾಗಿ ಇರುತ್ತದೆ. ಹೌದು, ನಿಮಗೆ ಸ್ವಲ್ಪ ಲಾಭಕಾರದ ಅಲುಗಾಡಿಕೆ ಅನುಭವವಾಗಬಹುದು ಹಿಂಬದಿಯ ಸೀಟ್ ನಲ್ಲಿ ಮೂರು ಅಂಕೆ ವೇಗಗಳಲ್ಲಿ, ಆದರೆ ಇದು ಪ್ಯಾಸೆಂಜರ್ ಗಳು ಮತ್ತು ಲಗೇಜ್ ಗಳು ಇರುವಾಗ ಸರಿಹೊಂದುತ್ತದೆ.

    ಸುರಕ್ಷತೆ 

    ಎಲೈಟ್  i20 ಆಟೋಮ್ಯಾಟಿಕ್ ಟಾಪ್ ಸ್ಪೆಕ್ ಆಸ್ತಾ  (O) ವೇರಿಯೆಂಟ್ ನಲ್ಲಿ ಲಭ್ಯವಿರದಿಲ್ಲದಿರುವುದರಿಂದ, ಇದು ಡುಯಲ್ ಏರ್ಬ್ಯಾಗ್ ಗಳು,  ಆಂಟಿ  ಲಾಕ್ ಬ್ರೇಕ್ ಗಳು EBD ಯೊಂದಿಗೆ ಇರುವುದರೊಂದಿಗೆ ಸರಿದೂಗಿಸಬೇಕಾಗುತ್ತದೆ. ಆಶ್ಚರ್ಯವಾಗುವಂತೆ,ಹುಂಡೈ ನವರು  ISOFIX  ಚೈಲ್ಡ್ ಸೀಟ್ ಮೌಂಟ್ ಗಳನ್ನು ಯಾವ ವೇರಿಯೆಂಟ್ ನಲ್ಲೂ ಕೊಟ್ಟಿಲ್ಲ, ಪೂರ್ಣವಾಗಿ ಲೋಡ್ ಆಗಿರುವ ವೇರಿಯೆಂಟ್ ನಲ್ಲೂ ಸಹ.

    ವೇರಿಯೆಂಟ್ ಗಳು 

     2018 Hyundai Elite i20 CVT:  Review

    ನಿಮಗೆ ಆಟೋಮ್ಯಾಟಿಕ್ ಎಲೈಟ್ i20 ಬೇಕಿದ್ದರೆ, ನೀವು ಎರೆಡು ವೇರಿಯೆಂಟ್ ಗಳಲ್ಲಿ ಆಯ್ಕೆ ಮಾಡಬೇಕಾಗುತ್ತದೆ: ಮ್ಯಾಗ್ನ  ಮತ್ತು ಆಸ್ತಾ. ಎರೆಡೂ ವಿಚಾರದಲ್ಲಿ ನಿಮಗೆ ಹೆಚ್ಚಿನ ಪ್ರೀಮಿಯಂ ಆದ Rs 1.05 ಲಕ್ಷ ಆಗುತ್ತದೆ ಮಾನ್ಯುಯಲ್ ಪ್ರತಿರೂಪಕ್ಕೆ ಅನುಗುಣವಾಗಿ.

    ಅಂತಿಮ ಅನಿಸಿಕೆ 

    ನಾವು ಈ ವಿಚಾರವನ್ನು ಬಿಟ್ಟುಬಿಡೋಣ,- ಇದನ್ನು ಟಾಪ್ ಸ್ಪೆಕ್ ಆಸ್ತಾ (O) ಒಂದಿಗೆ ಕೊಡಬೇಕಾಗಿತ್ತು ಎಂಬುದು. ಇಲ್ಲದಿದ್ದಲ್ಲಿ, ಹಲವು ಇರಲೇಬೇಕಾದ ಫೀಚರ್ ಗಳಾದ ರೇವೂರ್ ವೈಪರ್, ಪುಶ್ ಬಟನ್ ಸ್ಟಾರ್ಟ್ ಮತ್ತು ಕೀ ಲೆಸ್ ಎಂಟ್ರಿ ಗಳನ್ನು ಟಾಪ್ ಸ್ಪೆಕ್ ಮಾಡೆಲ್ ನಿಂದ ತರಬೇಕಾಗಿತ್ತು. ಇದರ ಬೆಲೆ ಸುಮಾರು  Rs 9 ಲಕ್ಷ ಗಿಂತಲೂ ಹೆಚ್ಚು ಆಗುತ್ತದೆ ಎಂಬ ವಿಷಯ ಪರಿಗಣಿಸಿದರೆ, ಇಂತಹ ಫೀಚರ್ ಗಳು ಇಲ್ಲದಿರುವುದು ಹುಬ್ಬೇರಿಸುವಂತೆ ಮಾಡುತ್ತದೆ. ಎರೆಡನೆ ಸಮಸ್ಯೆ ಎನ್ನಬಹುದಾದ ವಿಚಾರವೆಂದರೆ ಬೇಕಾದ್ದಕ್ಕಿಂತ ಕಡಿಮೆ ಆಗುವ ಬ್ರೇಕ್ ಪೆಡಲ್ ಅನುಭವ. ನಾವು ಹೇಳಿದಂತೆ, ಬ್ರೇಕಿಂಗ್ ನಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಅದರ ಅನುಭವದ ವಿಷ್ಯಕ್ಕೆ ಗಮನ ಹರಿಸಬೇಕಾಗಿದೆ.

    2018 Hyundai Elite i20 CVT:  Review

    ಅದನ್ನು ಬಿಟ್ಟು, ಎಲೈಟ್  i20 CVT ನಿಮಗೆ ದೂರಬಹುದಂತಹ ಯಾವುದೇ ಕಾರಣ ಕೊಡುವುದಿಲ್ಲ ಅದು ಒಂದು ಕೆಲಸ ಮಾತ್ರ ಮಾಡುತ್ತದೆ, ಈಗಾಗಲೇ ಇರುವ ಸಮರ್ಥ ಪ್ಯಾಕೇಜ್ ಗೆ ಇನ್ನಷ್ಟು ಬಲ ಕೊಡುತ್ತದೆ. ಮತ್ತು ಅದಷ್ಟನ್ನೇ ಇದು ಮಾಡಬೇಕಾಗಿದ್ದದು. ಇದು ಸಮಸ್ಯೆ ರಹಿತ ವಾಹನವಾಗಿದ್ದು ನೀವು ಶಾಂತವಾಗಿ ಇರುವಂತೆ ಮತ್ತು ಕಷ್ಟಕರವಾದ ಆಫೀಸ್ ನಿಂದ ಮನೆಗೆ ಬರುವ ಡ್ರೈವ್ ನಂತರ ನಗುತ್ತಿರುವಂತೆ ಮಾಡುತ್ತದೆ.

     

    Published by
    arun

    ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

    ಮುಂಬರುವ ಕಾರುಗಳು

    ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

    ×
    We need your ನಗರ to customize your experience