ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ
Published On ಮೇ 14, 2019 By alan richard for ಹೋಂಡಾ ಡವೋಆರ್-ವಿ 2017-2020
- 1 View
- Write a comment
ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?
ಟೆಸ್ಟ್ ಮಾಡಲ್ಪಟ್ಟಿರುವ ಕಾರು : ಹೋಂಡಾ WR-V ಡೀಸೆಲ್ ಮಾನ್ಯುಯಲ್ ಮತ್ತು WR-V ಪೆಟ್ರೋಲ್ ಮಾನ್ಯುಯಲ್ (VX ವೇರಿಯೆಂಟ್ )
ಎಂಜಿನ್ : 1.5-ಲೀಟರ್ ಡೀಸೆಲ್ ಮಾನ್ಯುಯಲ್, 100PS/200Nm | 1.2-ಲೀಟರ್ ಪೆಟ್ರೋಲ್ ಮಾನ್ಯುಯಲ್, 90PS/110Nm
ARAI ಸರ್ಟಿಫೈಡ್ ಫ್ಯುಯೆಲ್ ಎಕಾನಮಿ : 25.5kmpl | 17.5kmpl
ರೋಡ್ ಟೆಸ್ಟ್ ಫ್ಯುಯೆಲ್ ಎಕಾನಮಿ :15.34kmpl (ನಗರ) / 25.88kmpl (ಹೈವೇ) | 13.29 (ನಗರ ) / 18.06 (ಹೈವೇ )
ಪರ
-
ವಿಶಾಲವಾದ ಮತ್ತು ಹೆಚ್ಚು ಗಾಳಿ ಸಂಚಾರ ಇರುವ ಕ್ಯಾಬಿನ್ ನಾಲ್ಕು ವಯಸ್ಕರು ಕೂರಲು ಅನುಕೂಲವಾಗಿದೆ
-
ಉತ್ತಮ ರೆಸ್ಪಾನ್ಸ್ ಕೊಡುವ ಡೀಸೆಲ್ ಎಂಜಿನ್ ನಗರಗಳಲ್ಲಿನ ಡ್ರೈವಿಂಗ್ ಗೆ ಸಹ ಅನುಕೂಲವಾಗಿದೆ.
-
ಉತ್ತಮವಾಗಿ ಡಿಸೈನ್ ಮಾಡಲ್ಪಟ್ಟ ಬಾಟಲ್ ಸ್ಟೋರೇಜ್ ಮತ್ತು ಇತರ ಚಿಕ್ಕ ವಸ್ತುಗಳನ್ನು ಇಡಲು ಅನುಕೂಲ
-
ದೊಡ್ಡ ಬೂಟ್ ಸ್ಪೇಸ್
ವಿರುದ್ಧ
ಮೆತ್ತನೆಯ ಸೀಟ್ ಗಳು ಮತ್ತು ಸರಿಹೊಂದಿಸಲು ಆಗದಂತಹ ಹೆಡ್ ರೆಸ್ಟ್ ಗಳು ಹಿಂಬದಿಯ ಸೀಟ್ ನಲ್ಲಿ ಆರಾಮದಾಯಕತೆಯನ್ನು ಕಡಿಮೆಗೊಳಿಸುತ್ತದೆ.
ಸಸ್ಪೆನ್ಷನ್ ಮೃದು ಮತ್ತು ಹೆಚ್ಚು ವೇಗದಲ್ಲಿ ಬೌನ್ಸಿ ಆಗಿದೆ
ಕ್ಯಾಬಿನ್ ಅಸ್ಟೇನು ಪ್ರೀಮಿಯಂ ಆಗಿ ಕಾಣುವುದಿಲ್ಲ ಕಠಿಣ ಪ್ಲಾಸ್ಟಿಕ್ ಗುಣಮಟ್ಟ ಇರುವುದರಿಂದ
ಇನ್ಫೋಟೈನ್ಮೆಂಟ್ ಸಿಸ್ಟಮ್ ಗೆ ಹೆಚ್ಚು ರೆಸ್ಪೋನಿಸಿವೆ ಹಾಗು ನಿರಂತರ ಇಂಟರ್ಫೇಸ್ ಬೇಕಾಗುತ್ತದೆ
ಎದ್ದು ತೋರುವ ಫೀಚರ್ ಗಳು
WR-V: ಸನ್ ರೂಫ್ ಟಾಪ್ ಎಂಡ್ ಮಾಡೆಲ್ ನಲ್ಲಿ.
ಬಾಹ್ಯ
ಕೆಲವು ಸಮಯ ಕ್ರಾಸ್ಒವರ್ ಹ್ಯಾಚ್ ಬ್ಯಾಕ್ ಗಳ ಸಮಸ್ಯೆಯೆಂದರೆ, ಮಾರ್ಪಾಡುಗಳು ಮಾಡಿದ ನಂತರವೂ ಅವು ತಮ್ಮ ಮೂಲ ಅವೃತ್ತ್ತಿಯಂತೆ ಕಾಣುತ್ತವೆ. ಧನ್ಯವಾದಗಳೊಂದಿಗೆ, ಹೋಂಡಾ WR-V ಈ ವಿಷಯದಲ್ಲಿ ವಿನಾಯತಿ ಪಡೆಯುತ್ತದೆ . ಇದು ಜಾಜ್ ನ್ ವೇದಿಕೆ ಮೇಲೆ ನಿರ್ಮಾಣ ಆಗಿದ್ದರೂ WR-V ಅದರ ಮೂಲ ಹ್ಯಾಚ್ ಗಿಂತ ಭಿನ್ನವಾಗಿ ಕಾಣುತ್ತದೆ. ಒಂದು ಪರಿಣಾಮಕಾರಿ ಹಾಗು ಗಮನಿಸಬೇಕಾದ ವಿಷಯವೆಂದರೆ ಬಾನೆಟ್ ಡಿಸೈನ್ ಅನ್ನು ನೂತನ ಶೈಲಿಯಲ್ಲಿ ನಿರ್ಮಾಣ ಮಾಡಿದ್ದು ಅದು WR-V ಗೆ ಒಂದು ವಿಶಿಷ್ಟವಾದ ಆಕರ್ಷಕತೆ ಕೊಡುತ್ತದೆ. ಇದು ಜಾಜ್ ಗಿಂತ ಭಿನ್ನವಾಗಿ ಕಾಣುವುದಲ್ಲದೆ ಅದರ ನಿಲುವನ್ನು ಒಂದು ಆಹ್ಲಾದಕರ ನೋಟದಿಂದ ಮಾರ್ಪಾಡಾಗಿ ಒಂದು ಧೃಡವಾದ ನಿಲುವನ್ನು ಹೊಂದಿರುವ ಕಾರ್ ಆಗಿ ಪರಿವರ್ತಿಸುತ್ತದೆ ಮತ್ತು ಅದನ್ನು ಹೆಚ್ಚು ಕ್ರೋಮ್ ಬಳಕೆ ಇರುವ ಗ್ರಿಲ್ ಹೈಲೈಟ್ ಮಾಡುತ್ತದೆ. ಇದರಲ್ಲಿ ಒಂದು ಉತ್ತಮವಾದ ಹೆಚ್ಚಾಗಿಲ್ಲದ ವಿಷಯವೆಂದರೆ ಬದಿಗಳ ಕ್ಲಾಡ್ಡಿಂಗ್ ಕಾರಿನ ಸುತ್ತಲೂ ಇದ್ದು ಮುಂಭಾಗದ ಬಂಪರ್ ಹಾಗು ಹಿಂಬಾಗದ ಬಂಪರ್ ವರೆಗೂ ವ್ಯಾಪಿಸಿದ್ದು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಬದಿಗಳಲ್ಲಿ ನೋಡಿದಾಗ WR-V ಯ ಜಾಜ್ ನ ಜೊತೆಯ ಸಂಬಂಧ ಎದ್ದು ಕಾಣುತ್ತದೆ. ಹಿಂಬದಿಯಲ್ಲು ಸಹ ಹಲವು ಮಾರ್ಪಾಡು ಮಾಡಲಾಗಿದ್ದು ಹೊಸ ಟೈಲ್ ಲೈಟ್ ಅಡ್ಡವಾಗಿ ಬೆಳೆದು ಬೂಟ್ ಲಿಡ್ ನಲ್ಲಿ ವ್ಯಾಪಿಸಿದೆ. ಬಂಪರ್ ಅನ್ನು ಸಹ ಹೊಸದಾಗಿ ಡಿಸೈನ್ ಮಾಡಲಾಗಿದೆ.
ಈ ಮಾರ್ಪಾಡುಗಳೊಂದಿಗೆ ಇದರ ಅಳತೆಗಳೂ ಸಹ ಬದಲಾಗಿವೆ WR-V ಯು ಈಗ 44mm ಹೆಚ್ಚು ಉದ್ದ ಮತ್ತು 57mm ಹೆಚ್ಚು ಎತ್ತರ ಇದೆ ಜಾಜ್ ಗೆ ಹೋಲಿಸಿದಾಗ, ಪರಿಷ್ಕೃತವಾದ ಸಸ್ಪೆನ್ಷನ್ ಮತ್ತು ಉದ್ದನೆಯ ಮುಂಭಾಗದ ಓವರ್ ಹ್ಯಾಂಗ ಇದಕ್ಕೆ ಪೂರಕವಾಗಿದೆ. ಇದರ ವೀಲ್ ಬೇಸ್ ಸಹ 25mm ನಷ್ಟು ಹೆಚ್ಚಾಗಿದೆ ಮತ್ತು ಗ್ರೌಂಡ್ ಕ್ಲಿಯರೆನ್ಸ್ 188mm ಇದೆ, ಹಾಗು ಜಾಜ್ ನಲ್ಲಿ ಇದು 165mm ಇತ್ತು. ಇದರ ನೋಟವು ದೃವೀಕರಣಗೊಳಿಸುವಂತಿದ್ದರೂ ಒಂದು ಹೇಳಬಹುದಾದ ವಿಷಯವೆಂದರೆ ಹೋಂಡಾ ಡಾ ದೀಐಜ್ನೆರ್ ಗಳು ಒಂದು ಕ್ರಾಸ್ಒವರ್ ಮಾಡಿ ಅದು ಅದರ ಮೂಲ ಹ್ಯಾಚ್ ನಂತೆ ಕಾಣದಿರುವಂತೆ ಮಾಡಲು ಯಶಸ್ವಿಯಾಗಿದ್ದಾರೆ.
ಆoತರಿಕಗಳು
ನೀವು WR-V ಯಾ ಒಳಗೆ ಹೋದಾಗ ಮೊದಲು ಅನುಭವವಾಗುವುದು ಇದು ಆಕರ್ಷಕವಾಗಿದೆ ಎಂದು, ಕಪ್ಪು/ಗ್ರೇ ಅಂತರಿಕಗಳ್ಲಲೂ ಸಹ. ಡ್ಯಾಶ್ ಬೋರ್ಡ್ ನಲ್ಲಿ ದೊಡ್ಡ ಸೆಂಟ್ರಲ್ ಇನ್ಫೋಟೈನ್ಮೆಂಟ್ ಕನ್ಸೋಲ್ ಅಳವಡಿಸಲಾಗಿದ್ದು ಏರ್ ಕಾನ್ ಕಂಟ್ರೋಲ್ ಗಳು ಮದ್ಯದಲ್ಲಿವೆ. ಸ್ಟಿಯರಿಂಗ್ ವೀಲ್ ಚೆನ್ನಾಗಿದೆ ಮತ್ತು ಹಿಡಿತ ಕೂಡ ಚೆನ್ನಾಗಿದೆ ಮತ್ತು ಆಡಿಯೋ ಕಂಟ್ರೋಲ್ ಎರೆದುವು ಬದಿಯಲ್ಲಿದೆ ಮತ್ತು ಬ್ಲೂಟೂತ್ ಫೋನ್ ಕಂಟ್ರೋಲ್ ಸಹ ಇದೆ. ಪ್ಲಾಸ್ಟಿಕ್ ನ ಗುಣಮಟ್ಟ ಇನ್ನು ಸ್ವಲ್ಪ ಚೆನ್ನಾಗಿರಬಹುದಿತ್ತು ಮತ್ತು ಇನ್ನು ಸ್ವಲ್ಪ ಮೃದುವಾಗಿರಬಹುದಿತ್ತು ಎಂದು ನಮಗೆ ಅನಿಸಿತು ಜೊತೆಗೆ ಮೃದು ಹೊರಮೈ ಉಳ್ಳ ಪ್ಲಾಸ್ಟಿಕ್ ಕ್ಯಾಬಿನ್ ನಲ್ಲಿ ಇರಬಹುದಿತ್ತು. ( ಹೆಚ್ಚು ಐಷಾರಾಮಿ ಕ್ಯಾಬಿನ್ ಈ ಸೆಗ್ಮೆಂಟ್ ನಲ್ಲಿ? ನಮ್ಮ WR-V vs i20 ಆಕ್ಟಿವ್ ವಿಮರ್ಶೆ ಓದಿ)
ಮುಂದಿನ ಸೀಟ್ ಗಳು ಆರಾಮದಾಯಕವಾಗಿವೆ ಹಾಗು ಬೆಂಬಲಿಸುತ್ತದೆ ಮೃದುವಾದ ಕುಷನಿಂಗ್ ಇದ್ದರೂ ಸಹ. ಟಿಲ್ಟ್ ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅಳವಡಿಕೆ ಹಾಗು ಮಧ್ಯಭಾಗದಲ್ಲಿ ಅಳವಡಿಸಲಾಗಿರುವ ಆರ್ಮ್ ರೆಸ್ಟ್ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ಬಂಗಿಯನ್ನು ಹೊಂದಲು ಸಹಾಯವಾಗುತ್ತದೆ. ಪ್ಯಾಸೆಂಜರ್ ಗಳಿಗೂ ಸಹ ಆರಾಮದಾಯಕವಾಗಿ ಕುಳಿತುಕೊಳ್ಳುವಂತೆ ಮಾಡಿಕೊಡುತ್ತದೆ. ಈ ಕಾರ್ ನಲ್ಲಿ ವಿಶಾಲವಾದ ಮೊಣಕಾಲು ಇರಿಸುವ ಜಾಗ ಇದ್ದು ಹೋಂಡಾ ದ 'ಮ್ಯಾನ್ ಮ್ಯಾಕ್ಸಿಮಮ್ ' ತತ್ವವು ಚೆನ್ನಾಗಿ ಹೊಂದುತ್ತದೆ ಹಾಗು ನಮ್ಮ ತುಷಾರ್ ,ಆರು ಅಡಿ ಎತ್ತರದ ವ್ಯಕ್ತಿ ಹಿಂಬದಿಯ ಸೀಟ್ ನಲ್ಲಿ ಆರಾಮಾಗಿ ಕುಳಿತುಕೊಂಡರು, ಸಾಮಾನ್ಯವಾಗಿ ಇತರಹದ ಅನುಕೂಲ ಸಿಗುತ್ತಿರಲಿಲ್ಲ, ಒಬ್ಬ ಪ್ಯಾಸೆಂಜರ್ ಆಗಿ. ಇದರ ಸ್ಪೇಸ್ ಚೆನ್ನಾಗಿದ್ದು ಹಿಂಬದಿಯ ಸೀಟ್ ಜಾಜ್ ಗಿಂತಲೂ ಮೃದುವಾಗಿದೆ ಮತ್ತು ಹೆಚ್ಚು ಬೆಬ್ಬಳಿತವಾಗಿಲ್ಲ ಏಕೆಂದರೆ ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಗಳು ಹಿಂಬದಿಯಲ್ಲಿ ಇಲ್ಲ.
ವಾಸ್ತವದಲ್ಲಿ ಕೂಡ ಇದರಲ್ಲಿ ಬಹಳಷ್ಟು ಒಳ್ಳೆ ವಿಷಯಗಳು ಇವೆ, ಬಾಟಲ್ ಗಳಿಗಾಗಿ ಸ್ಟೋರೇಜ್ ಸ್ಪೇಸ್ ಎಲ್ಲ ನಾಲ್ಕು ಡೋರ್ ಗಳಲ್ಲಿ, ಮತ್ತು ಇದರಲ್ಲಿ ಡ್ರೈವರ್ ಹತ್ತಿರ ಸುದಾರವಾತ್ ಕಪ್ ಹೋಲ್ಡರ್ ಇದೆ ಮತ್ತು ಸ್ಟಿಯರಿಂಗ್ ವೀಲ್ ನ ಬಲಬದಿಯಲ್ಲಿ AC ವೆಂಟ್ ಇದ್ದು ಬಿಸಿ ಕಾಫಿವನ್ನು ತಣ್ಣಗೆ ಮಾಡಲು ಅನುಕೂಲವಾಗುತ್ತದೆ. ಒಂದು ಸ್ಪೇಸ್ ಜಾಸ್ತಿ ಇದೆ ಎಂಬ ಭಾವನೆಯನ್ನು ಹೆಚ್ಚು ಗೊಳಿಸುವ ವಿಷಯವೆಂದರೆ ದೊಡ್ಡ ವಿಂಡೋ ಜಾಗ, ಅದು ನಿಮಗೆ ಬಹಳ ಜಾಗ ಇರುವ ಕ್ಯಾಬಿನ್ ನ ಒಳಕ್ಕೆ ಹೋದ ಅನುಭವ ಕೊಡುತ್ತದೆ. ಇದರಲ್ಲಿ ಒಂದು ಹಿನ್ನಡತೆ ಇದೆ ಮತ್ತು ಹಿಂಬದಿಯಲ್ಲಿ ಏರ್ ಕಾನ್ ವೆಂಟ್ ಗಳು ಇಲ್ಲದಿರುವುದರಿಂದ ದೊಡ್ಡ ವೈನೌ ಗಳು ಗ್ರೀನ್ಹೌಸ್ ಪರಿಣಾಮ ಕೊಡುತ್ತದೆ ಹೆಚ್ಚು ಬಿಸಿಲಿನ ವಾತಾವರಣದಲ್ಲಿ ಮತ್ತು WR-V ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ತಂಪಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. WR-V ನಲ್ಲಿ ಜಾಜ್ ನಲ್ಲಿ ಇದಂತಹ ಮ್ಯಾಜಿಕ್ ಸೀಟ್ ಗಳು ಮಿಸ್ ಆಗಿವೆ,ಅವು ಇದ್ದಿದ್ದರೆ ಹಿಂಬದಿ ಬೆಂಚ್ ಸೀಟ್ ಗಳನ್ನೂ ಪೂರ್ಣವಾಗಿ ಮಡಚಬಹುದಿತ್ತು ಹಾಗು ಬೂಟ್ ಸ್ಪೇಸ್ ಅನ್ನು ಅಧಿಕಗೊಳಿಸಬಹುದಿತ್ತು. ಇದು ಹೇಳಿದನಂತರ, ಇದರಲ್ಲಿ ದೊಡ್ಡದಾದ 363 ಲೀಟರ್ ಬೂಟ್ ಇದೆ, ಹೌದು ಇದು ಜಾಜ್ ಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಇದೆ.
ಟೆಕ್ನಲಾಜಿ
ಕ್ರಾಸ್ಒವರ್ ಮಾರ್ಕೆಟ್ ನಲ್ಲಿ ಹೆಚ್ಚು ಸ್ಪರ್ಧೆಯಿರುವುದರಿಂದ, ನೀವು ಖಂಡಿತವಾಗಿ ಹೇಳಬಹುದು ಟಾಪ್ ಎಂಡ್ ಮಾಡೆಲ್ ಗಳಲ್ಲಿ ಹೆಚ್ಚುಹೆಚ್ಚಾದ ಫೀಚರ್ ಗಳನ್ನೂ ಕೊಡಲಾಗುತ್ತದೆ ಎಂದು. ಈ ವಿಷ್ಯದಲ್ಲಿ WR-V ವಿಭಿನ್ನವಾಗಿಲ್ಲ, ನಾವು ಟೆಸ್ಟ್ ಮಾಡಿದ ಟಾಪ್ ಎಂಡ್ VX ಡೀಸೆಲ್ ನಲ್ಲಿ ಈ ತರಹದ ವಿಷಯಗಳು ಹೆಚ್ಚಾಗಿಯೇ ಇದ್ದವು. ಕೀ ಲೆಸ್ ಎಂಟ್ರಿ ಇಂದ ಪ್ರಾರಂಭವಾಗಿ ಪುಶ್ ಬಟನ್ ಸ್ಟಾರ್ಟ್ ಮತ್ತು ರೇರ್ ವ್ಯೂ ಕ್ಯಾಮೆರಾ ಇಂದ ಹಿಡಿದು ಟಚ್ ಸೆನ್ಸಿಟಿವ್ ಕ್ಲೈಮೇಟ್ ಕಂಟ್ರೋಲ್ ಗಳು, ಸನ್ ರೂಫ್ ಹಾಗು ಸಿರೂಇಸೆ ಕಂಟ್ರೋಲ್ ಸಹ ಇದೆ. ಪೆಟ್ರೋಲ್ VX ನಲ್ಲಿ ಪುಶ್ ಸ್ಟಾರ್ಟ್, ಕೀ ಲೆಸ್ ಸ್ಮಾರ್ಟ್ ರಿಮೋಟ್ ಮತ್ತು ಕ್ರೂಸ್ ಕಂಟ್ರೋಲ್ ಮಿಸ್ ಆಗಿದೆ. ಹಾಗು AC ಕಂಟ್ರೋಲ್ ಉಪಯೋಗಿಸಲು ಸ್ವಲ್ಪ ಕಷ್ಟಕರವಾಗಿರುತ್ತದೆ ಏಕೆಂದರೆ ಟಚ್ ಕಂಟ್ರೋಲ್ ಗಳು ತುಂಬಾ ಸೂಕ್ಷ್ಮವಾಗಿದ್ದು ನಿಖರವಾದ ಸೂಚನೆಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಮಿಕ್ಕೆಲ್ಲ ವಿಷಯಗಳು ಯೋಚಿಸಿ ಅಳವಡಿಸಲಾಗಿದೆ ಎಂದು ತೋರುತ್ತದೆ ಮತ್ತು ಇದರಲ್ಲಿರುವ 12v ಚಾರ್ಜಿನ್ಗ್ ಸಾಕೆಟ್ ಗಳು ಎಲ್ಲರ ಚಾರ್ಜಿನ್ಗ್ ಅವಶ್ಯಕತೆಗಳನ್ನು ಪೂರೈಸುತ್ತದೆ, ದೂರದ ಪ್ರಯಾಣಗಳಲ್ಲಿ. ಇವೆಲ್ಲ ನೀವು ಕೊಳ್ಳಲು ನಿರ್ದಾರ ಮಾಡಿದ್ದರೆ ನಿಮಗೆ ಹೆಚ್ಚು ಸಂತೋಷ ಉಂಟುಮಾಡುತ್ತದೆ.
ನಂತರ ಇದರಲ್ಲಿ 7-inch ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದ್ದು ,ಅದು ಡ್ಯಾಶ್ ಬೋರ್ಡ್ ನ ಮಧ್ಯಬಾಗದಲ್ಲಿದೆ. ಇದು ಒಂದು ಹಿನ್ನಡತೆಯಾಗಿದೆ, ಎಳೆಯುವ ಹಾಗು ಗೊಂದಲ ಭರಿತ ಇಂಟರ್ಫೇಸ್ ಒಂದು ಅದ್ಭುತವಾದ ಅನುಭವವನ್ನು ಮಿಸ್ ಮಾಡುತ್ತದೆ, ನಾನು ಒಳಕ್ಕೆ ಹೋದಾಗ ಈ ಅನುಭವ ಆಗಿತ್ತು. ನಾವು ಸುಮಾರು ೨೦ ನಿಮಿಷಗಳನ್ನು ತೆಗೆದುಕೊಂಡೆವು ಈಕ್ವಾಲೀಸ್ರ್ ಸೆಟ್ಟಿಂಗ್ ಗಳನ್ನೂ ಸರಿಹೊಂದಿಸಲು ನಂತರ ಬಿಟ್ಟುಬಿಟ್ಟೆವು. ನಮಗೆ ಗೊತ್ತು ಒಬ್ಬ ವೃತ್ತಿಪರ ವ್ಯಕ್ತಿಗೆ ಇದರ ತರ್ಕ ಇಷ್ಟವಾಗಬಹುದು, ಆದರೆ ಡ್ರೈವ್ ಮಾಡುವಾಗ ನಿಮಗೆ ಒಂದು ಸರಳವಾಗಿ ಉಪಯೋಗಿಸಬಹುದಾದ ಇಂಟರ್ಫೇಸ್ ಬೇಕು ಎಂದೆನಿಸುತ್ತದೆ. ಇದರಲ್ಲಿ ಸರಳವಾಗಿ ಉಪಯೋಗಿಸಲ್ಪಡಬಹುದಾದ, ಮತ್ತು ಕಾರ್ಯತತ್ಪರವಾದ ಆಪಲ್ ಕಾರ್ ಪ್ಲೇ ಅಥವಾ ಆಂಡ್ರಾಯ್ಡ್ ಆಟೋ ವಿಷಯಗಳ ಇಂಟರ್ಫೇಸ್ ಕೊರತೆ ಇದೆ
ಡ್ರೈವ್
ಡೀಸೆಲ್
ಒಮ್ಮೆ ನೀವು ಸ್ಟಾರ್ಟ್ ಬಟನ್ ಒತ್ತಿದರೆ 1.5- ಡೀಸೆಲ್ ಎಂಜಿನ್ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವೇಗಗತಿ ಪಡೆಯುತ್ತದೆ. ಮತ್ತು ಕ್ಯಾಬಿನ್ ಒಳಗೆ ಸ್ವಲ್ಪವೇ ಶಬ್ದ ಕೇಳಿಬರುತ್ತದೆ ಐಡಲಿಂಗ್ ಮಾಡುವಾಗ. ಇದು ಒಂದು ಅತಿ ಉತ್ತಮವಾದ ಡೀಸೆಲ್ ಆಗಿದೆ ನಗರಗಳಲ್ಲಿನ ಉಪಯೋಗಕ್ಕಾಗಿ ನಯವಾದ ಹಾಗು ಹಗುರವಾದ ಪವರ್ ಕೊಡುವುದರಿಂದ. ಹೈವೇ ಗಳಲ್ಲಿ ಓವರ್ಟೇಕ್ ಮಾಡಲು ಮೊದಲೇ ಆಲೋಚಿಸಿರಬೇಕಾಗುತ್ತದೆ. ಒಟ್ಟಾರೆ ನೀವು WR-V ಯನ್ನು ಶಾಂತ ಮನಸ್ಸಿನಿಂದ ಡ್ರೈವ್ ಮಾಡಬೇಕು. ಏಕೆಂದರೆ ಇದರ ಸ್ಪೆಕ್ ಗಳು ನಿಮಗೆ ಇದು ಹೆಚ್ಚು ಶಕ್ತಿಯುತವಾಗಿದೆ ಎಂದು ನೋಡಿಸಿದರೂ ಹೆಚ್ಚು ವೇಗಗಳಲ್ಲಿ ಅಸ್ಟೇನು ಪರಾಣಿಮಕಾರಿಯಾಗಿರುವುದಿಲ್ಲ. ಟೆಸ್ಟ್ ಮಾಡುವಾಗಲೂ ಸಹ ನಮ್ಮ ಅತಿವೇಗ ವಾದ 0-100 ಕ್ಕೆ ಬೇಕಾದ ಸಮಯ 12.43s ಸುಮಾರು 4,000 rpm ವ್ಯಾಪ್ತಿಯಲ್ಲಿ ದೊರೆಯಿತು, ಆ ಸಮಯದಲ್ಲಿ ಟಾರ್ಕ್ ಸ್ಟಾಲ್ ಆಗುವ ಹಾಗಿತ್ತು , 5,000 rpm ನ ರೆಡ್ ಲೈನ್ ನಲ್ಲಿರುವಂತಿರಲಿಲ್ಲ. ಇದು ಒಂದು ನೇರವಾದ ಡೀಸೆಲ್ ಎಂಜಿನ್ ಈ ಸೆಗ್ಮೆಂಟ್ ನಲ್ಲಿ ಹಾಗು ನನ್ನಮಟ್ಟಿಗೆ ಇದು ಕಾರ್ ನ ಹೈಲೈಟ್ ಆಗಿದೆ.
ನೀವು ಈ ರೀತಿಯ ಮೃದುತ್ವವನ್ನು ಕಾಪಾಡಿಕೊಂಡರೆ, ಹೋಂಡಾ ನಿಮಗೆ ಪ್ರಭಾವಭರಿತ ಮೈಲೇಜ್ ಅಂಕೆ ಗಳನ್ನೂ ಕೊಡುತ್ತದೆ. ಹೈವೇ ಗಳಲ್ಲಿ 25.88kmpl ಹೀಗಿರುತ್ತದೆ? ಜೊತೆಗೆ ಇದರ 40 ಲೀಟರ್ ಇಂಧನ ಟ್ಯಾಂಕ್ ಸೇರಿ WR-V ಯು ಒಂದುಬಾರಿಗೆ 1000 km ದೂರ ಕ್ರಮಿಸಬಹುದು. ನಮ್ಮ ನಗರಗಳಲ್ಲಿನ ಮೈಲೇಜ್ ಕ್ರಮಿಸುವಲ್ಲಿ ಒಟ್ಟಾರೆ ಫಲಿತಂಶ ಅಂದುಕೊಂಡದ್ದಕ್ಕಿಂತ ಕಡಿಮೆ ಇತ್ತು. , ಆದರೂ 15.34kmpl ನಲ್ಲಿ ದೂರುವಂತಹ ವಿಷಯಗಳು ಇರುವುದಿಲ್ಲ. ಸಂಶಯವಿಲ್ಲದೆ ಆರನೇ ಗೇರ್ ಇರುವುದು ಹೈವೇ ಗಳಲ್ಲಿನ ಹೆಚ್ಚಿನ ಮೈಲೇಜ್ ಅಂಕೆಗಳಿಗೆ ಕಾರಣವಾಗಿದೆ.
ಪೆಟ್ರೋಲ್
ನಗರಗಳಲ್ಲಿ, 1.2-ಲೀಟರ್ ಪಟ್ರೋಲ್ ಎಂಜಿನ್ ಸ್ವಲ್ಪ ಒಪ್ಪುವಂತೆ ಕಾಣುತ್ತದೆ. ನಯವಾಗಿ ಡ್ರೈವ್ ಮಾಡಿದರೆ ಇದು ಮೃದುವಾದ ಫ್ಯಾಷನ್ ನಿಂದ ಪ್ರತಿಕ್ರಿಯಿಸುತ್ತದೆ. ಇದರಲ್ಲುವು ಸಹ ಪೇಪರ್ ನಲ್ಲಿ ಕಾಣುವ 90PS ಹೆಚ್ಚು ಗೇರ್ ಹಾಗು ಹೆಚ್ಚು ಮೈಲೇಜ್ ಬರುವ ಟೆಕ್ನಲಾಜಿ ಮದ್ಯ ಕಳೆದುಹೋಗುತ್ತದೆ. ನೀವು ವೇಗಗತಿ ಹೆಚ್ಚಿಸಲು ಪ್ರಯತ್ನಿಸಿದಾಗ ನಿಮಗೆ ನಿಧಾನಗತಿಯ ವೇಗ ಏರಿಕೆ 90PS ಎಲ್ಲಿಹೋಯಿತು ಎನ್ನುವಂತೆ ಮಾಡುತ್ತದೆ. ಹೈವೇ ಗಳಲ್ಲಿ ಓವರ್ಟೇಕ್ ಮಾಡುವಾಗ ನೀವು ಮುಂಚೆಯೇ ಯೋಜನೆ ಮಾಡಿರಬೇಕಾಗುತ್ತದೆ. ನೀವು ತ್ರೋಟಲ್ ಅನ್ನು ಪೂರ್ಣವಾಗಿ ಅಂಚಿನವರೆಗೂ ಒತ್ತಬೇಕಾಗುತ್ತದೆ ಹಾಗು ಹಾಗು ಪೆಟ್ರೋಲ್ ಎಂಜಿನ್ ವೇಗಗತಿ ಪಡೆಯಲು ಕಾಯುತ್ತಿರಬೇಕಾಗುತ್ತದೆ. ನೀವು ನಿಧಾನವಾಗಿ ಹೋಗುತ್ತಿರುವ ದ್ವಿಚಕ್ರ ವಾಹನವನ್ನಾಗಲಿ ಅಥವಾ ಆಟೋ ವನ್ನಾಗಲಿ ಓವರ್ಟೇಕ್ ಮಾಡಲು ಹೆಚ್ಚು ಹೆಚ್ಚಾಗಿ ತ್ರೋಟಲ್ ಒತ್ತಬೇಕಾಗುತ್ತದೆ ಹಾಗು ಗೇರ್ ಬದಲಾಯಿಸಬೇಕಾಗುತ್ತದೆ. ನೀವು ಊಹಿಸಬಹುದಾಗಿರುವಂತೆ ಮೈಲೇಜ್ ಅಂಕೆ ಗಳು ಪ್ರಭಾವಬೀರುವಂತೆ ಇರುತ್ತದೆ. ಸಂಖ್ಯೆಗಳಾದ 17.34kmpl ಹೈವೇ ಯಲ್ಲಿ ಮತ್ತು 13.12kmpl ಗಳು ಸಮಂಜಸವಾಗಿರುತ್ತದೆ. ಹಾಗಾಗಿ ನೀವು ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಅನ್ನು ಕೊಂಡರೆ ಅವು ನಿಮ್ಮ ಬಳಕೆಗೆ ತಕ್ಕಂತೆ ಇರಬೇಕು ಮತ್ತು ಯಾವುದೇ ಎಂಜಿನ್ ಆಯ್ಕೆ ಮಾಡಿದರೂ ನಿಮಗೆ ತಕ್ಕುದಾಗಿಇರಬೇಕು.
ರೈಡ್ ಮತ್ತು ಹ್ಯಾಂಡಲಿಂಗ್
ಇದು ಅದೇ ತರಹದ ವಿಷಯವಾಗಿದೆ ಸಸ್ಪೆನ್ಷನ್ ಅದ್ಭುತವಾಗಿ ನಿರ್ವಹಿಸುತ್ತದೆ ನಗರಗಳಲ್ಲಿನ ವೇಗಗತಿಗಳಲ್ಲಿ ಮತ್ತು ಹೆಚ್ಚಾಗಿ ಪಾಟ್ ಹೋಲ್ ಇರುವ ರಸ್ತೆಗಳಲ್ಲಿ. ರಸ್ತೆಯ ಎಲ್ಲ ಅಂಕುಡೊಂಕುಗಳನ್ನು ನಿರ್ವಹಿಸುತ್ತದೆ. ಚಿಕ್ಕ ಹಾಗು ದೊಡ್ಡ ಅಂಕುಡೊಂನುಗಳನ್ನು ಮತ್ತು ದೊಡ್ಡ ಸ್ಪೀಡ್ ಬ್ರೇಕರ್ ಗಳನ್ನೂ ಯಾವುದೇ ತಡ್ ಎಂಬ ಶಬ್ದ ಬರದಂತೆ ನಿಭಾಯಿಸುತ್ತದೆ. ಅಂತಹ ಮೃದುವಾದ ಸಂಯೋಜನೆಯೊಂದಿಗೆ ಸ್ವಲ್ಪ ಬಾಡಿ ರೋಲ್ ಸಹ ಇದೆ ಮತ್ತು ಅದನ್ನು ಸ್ವಾಗತಿಸಬಹುದು ಕೂಡ. ಆದರೆ ಸ್ಪೀಡ್ ಹೆಚ್ಚಾದಂತೆ ಹೆಚ್ಚು ಬೌನ್ಸ್ ಆಗುವುದು ಮತ್ತು ಬದಿಗಳಲ್ಲಿ ಎಳೆದಂತೆ ಆಗುವುದು ದೂರದ ಪ್ರಯಾಣಗಳಲ್ಲಿ ಪ್ಯಾಸೆಂಜರ್ ಗಳಿಗೆ ಅಹಿತಕರ ಅನುಭವಗಳಿಗೆ ಕಾರಣವಾಗಬಹುದು.
ಎಂಜಿನ್ ನ ಶಾಂತಿಯುತವಾದ ಕಾರ್ಯ ನಿರ್ವಹಿಸುವಿಕೆ ಇತರ ಕಂಟ್ರೋಲ್ ಗಳ ಮೇಲೂ ಪರಿಣಾಮಬೀರಿದೆ, ಸೂಕ್ಷ್ಮ ವಾದ ಕ್ಲಚ್ ಬಳಕೆ ಮತ್ತು ಸ್ಟಿಯರಿಂಗ್ ಹೆಚ್ಚು ಟ್ರಾಫಿಕ್ ಇರುವಾಗ ಪರಿಶ್ರಮದಾಯಕವಲ್ಲದ ಡ್ರೈವ್ ಗೆ ಅನುಕೂಲಮಾಡುತ್ತದೆ. ಆದರೆ ಬ್ರೇಕ್ ಗಳು ಸ್ವಲ್ಪ ಬಳಸುವಿಕೆಗೆ ಒಗ್ಗಬೇಕಾಗುತ್ತದೆ ಹೆಚ್ಚುಒತ್ತುವುದಕ್ಕೆ ಕಷ್ಟವಾಗಬಹುದು. ಹೆಚ್ಚು ಭಯಪಡಬೇಕಾದ ಅವಶ್ಯಕತೆ ಇಲ್ಲ, ಏಕೆಂದರೆ ಇದರಲ್ಲಿ ABS ಇದ್ದು ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಬಹಳ ಸಹಕಾರಿಯಾಗಿದೆ. ಇವೆಲ್ಲವೂ ಒಂದು ವಿಷಯವನ್ನು ತೋರಿಸುತ್ತದೆ ಅದೆಂದರೆ ಇದು ಅತ್ಯವಸರದಲ್ಲಿ ಉಪಯೋಗಿಸಬಹುದಾದ ಕಾರ್ ಅಲ್ಲ, ಶಾಂತವಾಗಿ ಪ್ರಾರಂಭಿಸಿ ತದನಂತರ WR-V ನಿಜವಾದ ಶಕ್ತಿಯನ್ನು ಬಳಸುವುದು ಉತ್ತಮ.
ಸುರಕ್ಷತೆ
ಹೋಂಡಾ WR-V ಯಲ್ಲಿ ಫೀಚರ್ ಗಳಾದ ಡುಯಲ್ ಏರ್ಬ್ಯಾಗ್ ಗಳು, ABS ಮತ್ತು EBD ಯನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಇದರ ಜೊತೆ ಇದರಲ್ಲಿ ಹೆಚ್ಚಿನ ಫೀಚರ್ ಗಳಾದ 'ಇಂಟಲಿಜೆಂಟ್ ಪೆಡಲ್ ಗಳು' ಅಥವಾ ಬ್ರೇಕ್ ಓವರ್ ರೈಡ್ ಸಿಸ್ಟಮ್ ಇದ್ದು ಅವು ಆಕ್ಸಿಲರೇಟರ್ ಹಾಗು ಬ್ರೇಕ್ ಅನ್ನು ಒಮ್ಮೆಲೇ ಒತ್ತಿದಾಗ ಆಕ್ಸಿಲರೇಟರ್ ಅನ್ನು ಓವರ್ ರೈಡ್ ಮಾಡಿ ನಿಲ್ಲಿಸಲು ಸಹಾಯವಾಗುತ್ತದೆ. ಟಾಪ್ ಎಂಡ್ ಪೆಟ್ರೋಲ್ ಮತ್ತು ಡೀಸೆಲ್ VX ವೇರಿಯೆಂತ್ ಗಳಲ್ಲಿ ರಿವರ್ಸ ಪಾರ್ಕಿಂಗ್ ಕ್ಯಾಮೆರಾ ಸಹ ಇದೆ.
ವೇರಿಯೆಂಟ್ ಗಳು
WR-V ಯ ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ತಲಾ ಎರೆಡು ವೇರಿಯೆಂಟ್ ಗಳು ಇವೆ. ಒಂದು ‘S’ ವೇರಿಯೆಂಟ್ ಹಾಗು ಇನ್ನೊಂದು ‘VX’ ವೇರಿಯೆಂಟ್ ಮತ್ತು ಇದು ಟಾಪ್ ವೇರಿಯೆಂಟ್ ಆಗಿದ್ದು ನಾವು ಟೆಸ್ಟ್ ಡ್ರೈವ್ ಗಾಗಿ ಇದನ್ನೇ ಬಳಸಿದ್ದೆವು. ಟಾಪ್ ಎಂಡ್ ವೇರಿಯೆಂಟ್ ನಲ್ಲಿ 7-inch ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ, 16-inch ಅಲಾಯ್ ವೀಲ್ ಗಳು, ಕ್ಲೈಮೇಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಮತ್ತು ತಾಂತ್ರಿಕ ಅಳವಡಿಕೆಯ ಸನ್ ರೂಫ್. ಡೀಸೆಲ್ ನ ಟಾಪ್ ಎಂಡ್ ಸಹ ಪುಶ್ ಟು ಸ್ಟಾರ್ಟ್ ಬಟನ್ ಜೊತೆಗೆ ಹೋಂಡಾ ಸ್ಮಾರ್ಟ್ ಕೀ ಸಿಸ್ಟಮ್ ( ಹೋಂಡಾ ದ ಇಂಟಲಿಜೆಂಟ್ ಕೀಲೆಸ್ ಎಂಟ್ರಿ ಟೆಕ್ನಲಾಜಿ) ಮತ್ತು ಕ್ರೂಸ್ ಕಂಟ್ರೋಲ್ ದೊರೆಯುತ್ತದೆ, ಇವು ಪೆಟ್ರೋಲ್ VX ಮಾಡೆಲ್ ನಲ್ಲಿ ಮಿಸ್ ಆಗಿದೆ.
ಅಂತಿಮ ಅನಿಸಿಕೆ
ಒಟ್ಟಿನಲ್ಲಿ WR-V ಯು ಪ್ರಾರಂಭದಲ್ಲೇ ಜಾಜ್ ಗಿಂತ ವಿಭಿನ್ನವಾಗಿದೆ ಏನು ತೋರ್ಪಡಿಸುತ್ತದೆ.ಆಂತರಿಕಗಳಲ್ಲಿ ಸ್ವಲ್ಪ ಹಿನ್ನಡತೆ ಇದೆ ಎಂದು ಅನ್ನಿಸುತ್ತದೆ, ಇದರಂತೆ ಇರುವ i20 ಗೆ ಹೋಲಿಸಿದರೆ, ಆದರೆ ಕಠಿಣವಾದ ಪ್ಲಾಸ್ಟಿಕ್ ಹೊರತುಪಡಿಸಿ ಆಂತರಿಕಗಳ ಲೇಔಟ್ ನೋಡಲು ಸುಂದರವಾಗಿದೆ. ಕೊಟ್ಟಿರುವ ಆಂತರಿಕ ಸ್ಪೇಸ್ ಕೂಡ ಬಹಳವಾಗಿದೆ, ಮೊಣಕಾಲಿಗೆ ಅನುಕೂಲವಾಗುವಂತಹ ಸೀಟ್ ಗಳು, ಹಾಗು ದೊಡ್ಡ ಬೂಟ್ ಇದಕ್ಕೆ ಪೂರಕವಾಗಿದೆ. ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ರೀ ಟ್ಯೂನ್ ಆಗಿರುವ ಸಸ್ಪೆನ್ಷನ್ ಹೋಂಡಾ ದ ಕಠಿಣ ರಸ್ತೆಗಳಿಗೆ ಒಗ್ಗುವಂತೆ ಮಾಡಿದೆ
ಪೆಟ್ರೋಲ್ ಸಹ ಮುಖಬೆಲೆಗೆ ತಕ್ಕುದಾದ ಕಾರ್ಯ ನಿರ್ವಹಿಸುತ್ತದೆ ಮತ್ತು ನಗರಗಳಲ್ಲಿನ ಬಳಕೆಗೆ ಸೂಕ್ತವಾಗಿದೆ. ಯಾರಾದರೂ ಹೆಚ್ಚು ದೂರ ಕ್ರಮಿಸಲು ಬಳಸುವಂತಿದ್ದರೆ ಅವರಿಗೆ ಡೀಸೆಲ್ ಸೂಕ್ತವಾಗಿರುತ್ತದೆ. ಆದರೆ ಯಾರಾದರೂ ಹೆಚ್ಚು ದೂರ ಹಾಗು ಹೆಚ್ಚು ಪ್ಯಾಸೆಂಜರ್ ಗಳೊಂದಿಗೆ ಹೋಗುವುದಕ್ಕೆ ಬಳಸುವಹಾಗಿದ್ದಾರೆ, ಇದರಲ್ಲಿರುವ ಜಾಜ್ ನ ಮುಂದುವರೆದ ಬ್ಯಾಕ್ ಸೀಟ್ ಮತ್ತು ಸಸ್ಪೆನ್ಷನ್ ಇದನ್ನು ಉತ್ತಮ ಹೋಂಡಾ ಆಗಿ ಮಾಡುತ್ತದೆ. ಆದರೆ WR-V ಯು ಕಠಿಣ ರಸ್ತೆಯ ಪರಿಸ್ಥಿತಿಗಳಿಗೆ ಒಗ್ಗುವ ಹಾಗು ನಗರಗಳಲ್ಲಿನ ಬಳಕೆ ಸ್ನೇಹಿಯಾಗಿರುವಂತೆ ಬಯಸುವ ಗ್ರಾಹಕರಿಗೆ ಹಾಗು ನಗರಗಳಲ್ಲಿ ಹೆಚ್ಚು ಬಳಕೆ ಹಾಗು ಯಾವಾಗಲೋ ಒಂದುಬಾರಿ ಕುಟುಂಬದೊಂದಿಗೆ ದೂರದ ಪ್ರಯಾಣ ಮಾಡಬಯಸುವವರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ .