Choose your suitable option for better User experience.
  • English
  • Login / Register

ಮಾರುತಿ ಸುಜುಕಿ Alto K10 AMT ಪರಿಣಿತರ ವಿಮರ್ಶೆ

Published On ಮೇ 17, 2019 By arun for ಮಾರುತಿ ಆಲ್ಟೊ ಕೆ10 2014-2020

ಮಾರುತಿ ಭಾರತದಲ್ಲಿ ಒಂದು ಮನೆಮಾತಾಗಿರುವ ಕಂಪನಿ , ದೂರದ ಪ್ರದೇಶಗಳಲ್ಲಿ ಮಾರುತಿ ಎಂದರೆ ಕಾರ್ ಎಂದೇ ಪರಿಗಣಿಸಲಾಗುತ್ತದೆ. ಜೆರಾಕ್ಸ್ ಎಂಬುದು ಫೋಟೋ ಕಾಪಿ ಗೆ ಸರಿಸಮಾನವಾದ ಪದದಂತೆ . ಮಾರುತಿ ೮೦೦ ಸತತವಾಗಿ ಅತಿ ಹೆಚ್ಚು ಮಾರಾಟವಾಗುವ ಕೆಲವೊಮ್ಮೆ ಮಾರುತಿಯ ಎಲ್ಲ ಕಾರುಗಳೂ ಕೂಡಿರುವ ಸಂಖ್ಯೆ ಗಿಂತ ಹೆಚ್ಚಾಗಿ ಮಾರಾಟವಾಗುವ ಕಾರ್ ಆಗಿದೆ. ಎಲ್ಲ ಜನಗಳೂ ಒಂದಲ್ಲ ಒಂದು ರೀತಿಯಲ್ಲಿ ಮಾರುತಿ ಯೊಂದಿಗಿನ ಸಂಬಂಧ ಹೊಂದಿರುತ್ತಾರೆ . ಇದನ್ನು ಕೊಂಡುಕೊಂಡಿರಬಹುದು, ಇದರಲ್ಲಿ ಡ್ರೈವಿಂಗ್ ಕಲಿತಿರಬಹುದು , ನೆರೆಯವರು ಹೊಂದಿರಬಹುದು, ಅಥವಾ ಕ್ರಿಕೆಟ್ ಆಡುತ್ತಿರಬೇಕಾದರೆ ವಿಂಡ್ಸ್ಕ್ರೀನ್ ಗೆ ಹೊಡೆದಿರಬಹುದು. ಅದು ಎಲ್ಲ ಕಡೆ ಇರುತಿತ್ತು . ಆಲ್ಟೊ ಮಾರುತಿ ೮೦೦ ಗೆ ಒಂದು ಉತ್ತಮ ಹಿಂಬಾಲಕವಾಗಿದೆ, ಹೆಚ್ಚಿನ ಉಪಯುಕ್ತತೆಯನ್ನು ಸೆಪ್ಟೆಂಬರ್ ೨೦೦೦ ರಿಂದ ಪೂರೈಸುತ್ತಿದೆ. ಭಾರತದ ಹೆಚ್ಚು ಪ್ರಖ್ಯಾತಿ ಪಡೆದ ಕಾರ್ ನ ಮಾರ್ಗವನ್ನು ಮುಂದುವರಿಸುವುದು ಒಂದು ಒಳ್ಳೆಯ ಕೆಲಸ. ಅದನ್ನು ಆಲ್ಟೊ ಉತ್ಸಾಹದಿಂದ ಮಾಡಿದೆ ಮತ್ತು ಭಾರತದ ಹೆಚ್ಚಿನ ಮಾರಾಟವಾಗುವ ಕಾರ್ ಆಗಿದೆ.

ಆಲ್ಟೊ ಮಾರುತಿಯ ಏರುಪೇರುಗಳಲ್ಲಿ ಸ್ಥಿರವಾಗಿ ನಿಂತಿದೆ ಮತ್ತು ಮಾರಾಟದ ಶೇರ್ ಅನ್ನು ನಿಭಾಯಿಸಿದೆ. ಆಲ್ಟೊ ನ ಮುಂದುವರೆದ ಅವತರಣಿಕೆಯಾದ  A -Star ಅನ್ನು ಬಿಡುಗಡೆ ಮಾಡಲಾಯಿತು ಹಾಗು ಹಿಂತೆಗೆದುಕೊಳ್ಳಲಾಯಿತು ಕೂಡ ಮತ್ತು ಆಲ್ಟೊ ವನ್ನು ಮುಂದುವರೆಸಲಾಯಿತು ಕೂಡ. MSIL ಚಿಂತಕರು ಆಲ್ಟೊ ವನ್ನು ಹಿಂತೆಗೆಯುದುಕೊಳ್ಳದೆ ಮುಂದುವರೆಸಲು ನಿದ್ರಾಡಿಸಿದರು ಅದು ಒಳ್ಳೆಯದಾಯಿತು ಕೂಡ. ಅಷ್ಟೇನೂ ಶಕ್ತಿಯುತವಲ್ಲದ ೮೦೦ಚ್ಚ್ ಯೊಂದಿಗಿನ ಎಂಜಿನ್ ಆಲ್ಟೊ ಒಂದು ಕಡಿಮೆ ಬೆಳೆಯ ಉಪಯೋಗಕಾರಿ ಕಾರ್ ಆಗಿದೆ. ೧. ೧ ಲೀಟರ್ ಆಲ್ಟೊ ಒಂದು ವಿಶೇಷ ಕಾರ್, ಇದರಲ್ಲಿ  ವ್ಯಾಗನ್ R ನಲ್ಲಿ ಬಳಸಲಾದ ಎಂಜಿನ್ ಅನ್ನು ಬಳಸಲಾಗಿದೆ. , ಇದನ್ನು ಕಡಿಮೆ ಮಾರಾಟ ಮಾಡುತ್ತಿದ್ದುದರಿಂದ ಹಿಂತೆಗೆದುಕೊಳ್ಳಲಾಯಿತು ಮತ್ತು ಆಲ್ಟೊ K10 ನಂದ ೨೦೧೦ ದಲ್ಲಿ ಬದಲಾಯಿಸಲಾಯಿತು. ಇದರಲ್ಲೂ ಸಹ ವ್ಯಾಗನ್ R ನ ಎಂಜಿನ್ ಬಳಸಲಾಯಿತು.

Maruti Suzuki Alto K10 AMT - Expert Review

ಹಳೆಯ ಆಲ್ಟೊ ಕಡೆಗೂ ೨೦೧೨ ರಲ್ಲಿ ಗುಡ್ ಬೈ ಹೇಳಿತು, ಮತ್ತು ಆಲ್ಟೊ ೮೦೦ ಗೆ ದಾರಿ ಮಾಡಿಕೊಟ್ಟಿತು. ಮತ್ತು ನಮಗೆ ತಿಳಿದಿರುವಂತೆ ಆಲ್ಟೊ K10ಅನ್ನು ೨೦೧೪ ರಲ್ಲಿ ತರಲಾಯಿತು. ನನ್ನ ನಂಬಿಕೆಯಂತೆ ಆ ದೇಶದಲ್ಲಿ ಯಾವುದಾದರೂ ಉತ್ಪಾದಕರು ಡ್ರೈವಿಂಗ್ ಆಯ್ಕೆ ಯಲ್ಲಿ ಬದಲಾವಣೆ ತರುವಂತವರಾದರೆ ಅದು ಮಾರುತಿ ಮಾತ್ರ. ಇವೆಲ್ಲ ಮಾರುತಿ ಯಾ ಬಗ್ಗೆ ಹೆಚ್ಚು ವಿವರಗಳನ್ನು ಕೊಡುತ್ತದೆ ಎಂದು ಭಾವಿಸುತ್ತೇನೆ. ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು ಅದು AT ಯೊಂದಿಗಿನ ಕರುಗಳ ಅವಶ್ಯಕತೆಯನ್ನು ತೋರಿಸುತ್ತದೆ. ಸಾದಾರಣ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನೂ ಉಪಯೋಗಿಸುವುದು ಬೆಲೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮತುತಿ ಸುಜುಕಿ ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅನ್ನು ಸೆಲೆರಿಯೊ ದಲ್ಲಿ ತಂದಿತು. ಇದು ಹೊಸ ಮಾಡೆಲ್. ಭಾರತದ ಮಾರುಕಟ್ಟೆಗೆ ಅನ್ವಯಿಸುವಂತೆ ಮಾರುತಿ ಹೆಚ್ಚು ಸಮಯವನ್ನು ತೆಗೆದುಕೊಳ್ಳದೆ  ಆಲ್ಟೊ K10ನಲ್ಲೂ ಸಹ ಬಿಡುಗಡೆ ಮಾಡಿತು. ಮತ್ತು ಇದರ ಹೆಸರನ್ನು K10 AGS ಎಂದಿತು. ಆಟೋ ಗೇರ್ ಶಿಫ್ಟ್ ಅಥವಾ AMT .ಮತ್ತು ಇದು ಅತೀ ಕಡಿಮೆ ಬೆಲೆಯ  ಆಟೋಮ್ಯಾಟಿಕ್ ಕಾರ್ ಆಗಿದೆ. ಕಡಿಮೆ ಬೆಳೆಯ ಮಟ್ಟಿಯನ್ನು ಟಾಟಾ ನಾನೋ ೨೦೧೫ ರಲ್ಲಿ ತೆಗೆದುಕೊಂಡಿತು .  ಆಲ್ಟೊ K10 ಹೇಗಿದೆ? ತಿಳಿದುಕೊಳ್ಳೋಣ.

ಬಾಹ್ಯ

Maruti Suzuki Alto K10 AMT - Expert Review

ಆಲ್ಟೊ K10 ಆಲ್ಟೊ ೮೦೦ ವೇದಿಕೆಯ ಮೇಲೆ ತರಲಾಗಿದೆ. K10 ನೋಡಿದಾಗ ನಿಮಗೆ ಹೊಂದಾಣಿಕೆಗಳು ಗೋಚರವಾಗುತ್ತದೆ. K10 ಹೊರಪದರಗಳು ಇದನ್ನು ಆಲ್ಟೊ ೮೦೦ ನ  ಸಹೋದರದಂತೆ ಸೂಚಿಸುತ್ತದೆ. ಡೋರ್ ಗಳು ಹಾಗು ವಿಂಡೋ ಗಳು ಒಂದೇ ರೀತಿಯಲ್ಲಿ ಇದೆ. K10 ವಿಭಿನ್ನವಾಗಿರುವಂತೆ ಕಾಣುವ ಅಂಶವೆಂದರೆ ವಿಶಿಷ್ಟವಾದ ಹೆಡ್ ಲೈಟ್ ನಿಂದ ಹಿಡಿದು ಟೈಲ್ ಲೈಟ್ ನ ತನಕ ಸಾಗುವ ಗೆರೆ.  ಹೊಸ  ಆಲ್ಟೊ K10 ಹೊರ ಹೋಗುವ ಕಾರ್ ಗಿಂತ ಎತ್ತರವಾಗಿದೆ ಎಂದೆನಿಸುತ್ತದೆ. ಅಲಾಯ್ ವೀಲ್ ಗಳು ಇಲ್ಲ, ವೀಲ್ ಕ್ಯಾಪ್ ಮಾತ್ರ ಇದೆ. ಮುಂಬಾಗದಲ್ಲಿ ದೊಡ್ಡದಾದ ಕ್ರೋಮ್ ಸ್ಟ್ರಿಪ್ ಇದ್ದು ಅದನ್ನು ಚಿಕ್ಕದಾದ ಗ್ರಿಲ್ ಮೇಲೆ ಅಳವಡಿಸಲಾಗಿದೆ ಮತ್ತು ಅದು  ಆಕರ್ಷಕವಾಗಿದೆ.  ಫ್ರಂಟ್ ಗ್ರಿಲ್ ಪಕ್ಕದಲ್ಲಿ ದೊಡ್ಡದಾದ ಹಿಂಬದಿಯ ಪದರ್ಶಕ ಲೆನ್ಸ್ ಗಳನ್ನೂ ಒಳಗೊಂಡ ಹೆಡ್ ಲ್ಯಾಂಪ್ ಇದೆ. ಅದು ನಿಮಗೆ ವೆರ್ನಾ ಫ್ಲ್ಯೂಡಿಕ್ ನಂತೆ ಕಾಣಬಹುದು ಕೂಡ. ಆದರೂ ಇದಕ್ಕೆ ಚಪ್ಪಟೆಯಾದ ತಳ ಇದೆ. ನಿಮಗೆ ಬಾನೆಟ್, ಗ್ರಿಲ್ ಸೇರಿ ಉತ್ತಮವಾಗಿ ಕಾಣುತ್ತದೆ. ಮುಂಭಾಗದ ಮದ್ಯದಲ್ಲಿ ದೊಡ್ಡದಾದ ಪಟ್ಟಿಗಳು ಏರ್ ಡ್ಯಾಮ್ ಗಳು ಇದೆ. ಮತ್ತು ದುಂಡಾದ  ಫಾಗ್ ಲ್ಯಾಂಪ್ ಗಳಿಗೆ ಹೌಸಿಂಗ್ ಕೊಡಲಾಗಿದೆ. VX ವೇರಿಯೆಂಟ್ ಇತ್ತು ಇದರಲ್ಲಿ ಫಾಗ್ ಲ್ಯಾಂಪ್, ಬಾಡಿ ಕಲರ್ ಮಿರರ್, ಮತ್ತು ಬಾಡಿ ಕಲರ್ ಡೋರ್ ಹ್ಯಾಂಡಲ್ ಇರ್ಲಿಲ್ಲ. ಇವೆಲ್ಲವೂ VXi (O  )ದಲ್ಲಿ ಇದೆ. ನಿಮಗೆ ಇವೆಲ್ಲ ಡೀಲರ್ ನ ಬಳಿ ಹೆಚ್ಚಿನ ಬೆಲೆ ಕೊಡುವುದರೊಂದಿಗೆ ಲಭ್ಯವಿದೆ.

Maruti Suzuki Alto K10 AMT - Expert Review

ಹಿಂಬದಿಯಲ್ಲಿ K10 ನಲ್ಲಿ ದೊಡ್ಡದಾದ ಟೈಲ್ ಲ್ಯಾಂಪ್ ಗಳು ಇವೆ, ಹೈ ಮೌಂಟ್ ಸ್ಟಾಪ್ ಲ್ಯಾಂಪ್ ಗಳು ಸಹ ಇವೆ, ಸ್ವಚ್ಛವಾದ ಟೈಲ್ ಗೇಟ್ ಇದೆ. ಒಂದು ಅಷ್ಟೇನೂ ಹಿಡಿಸದ ವಿಷಯವೆಂದರೆ ಅದು ಬೂಟ್ ನ ಲಾಕ್ . ಏಕೆಂದರೆ ಬೂಟ್ ಓಪನ್ ಮಾಡಲು ಹ್ಯಾಂಡಲ್ ಇಲ್ಲ. ಬೂಟ್ ಅನ್ಲಾಕ್ ಮಾಡಲು ಚಿಕ್ಕ ರೆಸೆಸ್ ಇದ್ದು ಅದನ್ನು ಉಪಯೋಗಿಸಿ ಬೂಟ್ ತೆರೆಯಬಹುದು. ಹಿಂಬದಿಯ ಬಂಪರ್ ಸಹ ಸಾಧಾರಣವಾಗಿದೆ, ಎಗ್ಸಾಸ್ಟ್ ಪೈಪ್ ಹೊರಗೆ ಕಾಣುವಂತೆ ಇಲ್ಲ.

Maruti Suzuki Alto K10 AMT - Expert Review

ಒಟ್ಟಿನಲ್ಲಿ ಆಲ್ಟೊ K10 ಕ್ಲೀನ್ ಪ್ಯಾಕೇಜ್ ತರಹ ಕಾಣುತ್ತದೆ. ಇದರ ಡಿಸೈನ್ ಅಗ್ರೆಸ್ಸಿವ್ ಆಗಿ ಕಾಣಿಸುತ್ತದೆ, ಆದರೆ ಹುಂಡೈ Eon ನಷ್ಟು ಇಲ್ಲ. ಇದರಲ್ಲಿ ಸಾದಾರಣ ನಿಲುವು ಇದೆ. ಆದರೂ ವೀಲ್ ಗಳು ಅತೀ ಸಾಧಾರಣವಾಗಿದ್ದು ಅಷ್ಟೇನೂ ಚೆನ್ನಾಗಿಲ್ಲ, ನೈಸರ್ಗಿಕ್ ವಿನ್ಯಾಸ ಮಾಸ್ ಮಾರ್ಕೆಟ್ ಗಾಗಿ ಇದನ್ನು ಡಿಸೈನ್ ೧೦೧ ಎಂದು ಮಾರುತಿ ಹೇಳುತ್ತದೆ.

 Maruti Suzuki Alto K10 AMT - Expert Review

 ಆಲ್ಟೊ K10 ಉಪಯುಕ್ತತೆಯಲ್ಲಿ ಅದೂ AMT ಯಲ್ಲಿ ಅಷ್ಟೇನೂ ಮುಂದುವರೆದಿಲ್ಲ. ಗೇರ್ ಲೀವರ್ ಅಳವಡಿಕೆಗೆ ಸಾಕಷ್ಟು ಜಾಗವನ್ನು ಉಪಯೋಗಿಸಲಾಗಿದೆ .  AMT ಅವತರಣಿಕೆಯಲ್ಲಿ ನಿಮಗೆ ಒಂದು ಸಣ್ಣ ಶೆಲ್ಫ್ ಅನ್ನು AMT ಮುಂದೆ ಅಳವಡಿಸಲಾಗಿದೆ. ಡೋರ್ ಬಿನ್ ಹಾಗು ಬಾಟಲಿ ಹೋಲ್ಡರ್ ಅನ್ನು ಹ್ಯಾಂಡ್ ಬ್ರೇಕ್ ಹಿಂದೆ ಕೊಡಲಾಗಿದೆ. ಇದರ ಗ್ಲೋವ್ ಬಾಕ್ಸ್ ನ ಪಕ್ಕ ಬ್ಯಾಗ್ ಹೋಲ್ಡರ್ ಸಹ ಇದೆ ಮತ್ತು ಸೆಂಟರ್ ಕನ್ಸೋಲ್ ನಲ್ಲಿ ಕಾಯಿನ್ ಗಳು ,ಟಿಕೆಟ್ ಗಳನ್ನೂ ಇಡಲು ಅನುಕೂಲ ಮಾಡಿಕೊಡಲಾಗಿದೆ. ಹಿಂಬದಿಯ ಪ್ಯಾಸೆಂಜರ್ ಗಳಿಗೆ ಸ್ಟೋರೇಜ್ ಅನುಕೂಲತೆ ಇಲ್ಲ. ಪಾರ್ಸೆಲ್ ಟ್ರೈ ನಲ್ಲಿ ಕೆಲವು ನಿಯತ ಕಾಲಿಕೆ ಗಳನ್ನೂ ಇಡಬಹುದು., ಹೆಚ್ಚೇನು ಇಲ್ಲ.

Maruti Suzuki Alto K10 AMT - Expert Review

ಸೀಟ್ ಗಾಲ ವಿಚಾರಕ್ಕೆ ಬಂದಾಗ , ಸೀಟ್ ನ ಪೊಸಿಷನ್ ಸ್ವಲ್ಪ ಕೆಳಗೆ ಇದೆ ಎನಿಸುತ್ತದೆ. ಇದು ಕುಳಿತು ಕೊಳ್ಳಲು ಹಾಗು ಎದ್ದು ಹೋಗಲು ಶ್ರಮದಾಯಕವಾಗಬಹುದು, ವಿಶೇಷವಾಗಿ ವಯಸ್ಸಾದವರಿಗೆ. ಟಾಟಾ ನಾನೋ ದಲ್ಲಿಯಷ್ಟು ಸುಲಭವಾಗಿ ಇದರಲ್ಲಿ ಒಳಗೆ ಹೋಗಲು ಆಗುವುದಿಲ್ಲ. ಮುಂದಿನ ಸೀಟ್ ಗಳಿಗೆ ಬೆನ್ನು ಮತ್ತು ಭುಜ ಗಾಲ ಸಪೋರ್ಟ್ ಚೆನ್ನಾಗಿದೆ. ತೊಡೆ ಮತ್ತು ಸೊಂಟದ ಸಪೋರ್ಟ್ ಸ್ವಲ್ಪ ಚೆನ್ನಾಗಿರಬೇಕಾಗಿತ್ತು ಎಂದೆನಿಸುತ್ತದೆ. ಇಂಟಿಗ್ರೇಟೆಡ್ ಹೆಡ್ ರೆಸ್ಟ್ ಗಳು ಕತ್ತಿನ ಭಾಗಕ್ಕೆ ಅಷ್ಟೇನೂ ಆರಾಮದಾಯಕವಾಗಿಲ್ಲ . ಸೀಟ್ ಗಳ  ಗುಣ ಮಟ್ಟ ಚೆನ್ನಾಗಿದ್ದು ಕುಳಿತುಕೊಳ್ಳಲು ಆರಾಮದಾಯಕವಾಗಿದೆ.

ಹಿಂದಿನ ಸೀಟ್ ಗೆ ಇದೆ ರೀತಿ ಹೇಳಲು ಸಾಧ್ಯವಿಲ್ಲ, ಅಲ್ಪ ಪ್ರಯಾಣಕ್ಕೆ ಹೊಂದುತ್ತದೆ, ದೂರ ಪ್ರಯಾಣಕ್ಕಲ್ಲ . ಸೀಟ್ ನ ಹಿಂಬದಿಯನ್ನು ತೆಳ್ಳಗೆ ಮಾಡಿ ಕಾಲುಗಳನ್ನಿರಿಸುವ ಜಾಗ ವನ್ನು ಹೆಚ್ಚಿಸಲಾಗಿದೆ. ಇದು ನನಗೆ ಹಿಂದಿನ ಸೀಟ್ ನಲ್ಲಿ ಕುಳಿಯುತುಕೊಳ್ಳಲು ಅನುಕೂಲವಾಯಿತು . ನಾನು ಆರು ಅಡಿ ಎತ್ತರವಿರುವುದರಿಂದ ಮುಂದಿನ ಸೀಟ್ ಅನ್ನು ಸ್ವಲ್ಪ ಮುಂದೆ ತಳ್ಳಿದರೆ ಸರಿಯಾಗಿ ಕುಳಿತುಕೊಳ್ಳಲು ಅನುಕೂಲವಾಗುತ್ತದೆ. ಕಾರು ಎತ್ತರವಾಗಿರುವುದರಿಂದ ಅನುಕೂಲ ಆಗುತ್ತದೆ.  ನಿಮ್ಮ ತಲೆ ಭಾಗಕ್ಕೆ ಕಾಲು ಗಾಲ ಬಾಗಕ್ಕಿಂತಲೂ  ಹೆಚ್ಚಿನ ಆರಾಮದಾಯಕ ವಾಗಿರುತ್ತದೆ.  ಹಿಂದಿನ ಸೀಟ್ ಇಬ್ಬರು ಹಿರಿಯರು ಹಾಗು ಒಬ್ಬರು ಕಿರಿಯರಿಗೆ ಕುಳಿತುಕೊಳ್ಳಲು ಆರಾಮದಾಯಕ, ಹೆಚ್ಚು ಜಾಗ ಅವಶ್ಯಕತೆ ಇರುವವರಿಗೆ  ಅನಾನುಕೂಲ.

ಆಲ್ಟೊ K10 ನ ಅಂತರಿಕಗಳನ್ನು ಪ್ರಾರಂಭಿಕ  ಗುಣಮಟ್ಟ ಎನ್ನಬಹುದು . ಆಡಿಯೋ ಗುಣಮಟ್ಟ ಅಷ್ಟೇನೂ ಚೆನ್ನಾಗಿಲ್ಲ. ಮುಂದಿನ ಪವರ್ ವಿಂಡೋ ಗಳು ಡೋರ್ ಪ್ಯಾಡ್ ಗೆ ಹೊಂದಿಕೊಳ್ಳುವಂತಿದೆ. ಬೂಟ್ ಜಾಗ ೧೭೭ ಲೀಟರ್ ಇದ್ದು ಕಡಿಮೆ ಎನಿಸುತ್ತದೆ. ನಿಮಗೆ ಬೆಲೆಗೆ ತಕ್ಕ ಅನುಕೂಲ ಸಿಗುತ್ತದೆ.

ಆಂತರಿಕ

Maruti Suzuki Alto K10 AMT - Expert Review

ಆಂತರಿಕ ಗುಣಮಟ್ಟ ಬಹಳಷ್ಟು ಬೆಳೆದಿದೆ  ಎಂದು ಮೊದಲು ಹೇಳಬಯಸುತ್ತೇವೆ. ಇದು ಕಡಿಮೆ ಬೆಲೆಯದ್ದೆಲ್ಲಾ ಕಡಿಮೆ ಗುಣಮಟ್ಟದ್ದು ಎಂದು ಎನಿಸುವಂತೆ ಮಾಡುವುದಿಲ್ಲ. ಗ್ರೇ ಬಣ್ಣದ ಇಂಟೀರಿಯರ್ ಅನ್ನು ತೆಗೆದು ಡುಯಲ್ ಟೋನ್ ಇಂಟೀರಿಯರ್ ಮಾಡಲಾಗಿದೆ. ಅದು ಗ್ರೇ ಬಣ್ಣದಂತೆ ಚೆನ್ನಾಗಿ ಕಾಣಿಸುತ್ತದೆ. ಡ್ಯಾಶ್ ಬೋರ್ಡ್ ನ ಮೇಲ್ಬಾಗ ಕಪ್ಪು ಬಣ್ಣದ್ದಾಗಿದ್ದರೆ ಮಂದವಾದ ಸಿಲ್ವರ್ ಬಣ್ಣವನ್ನು ಹೇರಳವಾಗಿ ಬಳಸಲಾಗಿದೆ ಮತ್ತು ಕಪ್ಪು ಬಣ್ಣದ ಸೆಂಟರ್ ಕನ್ಸೋಲ್ ಸುತ್ತ ಮುತ್ತ , ಸ್ವಿಚ್ ಗಾಲ ಸುತ್ತ ಕೂಡ ಬಳಸಲಾಗಿದೆ.

Maruti Suzuki Alto K10 AMT - Expert Review

ಮ್ಯೂಸಿಕ್ ಸಿಸ್ಟಮ್, CD , ರೇಡಿಯೋ , USB , AUX  ಸಪೋರ್ಟ್ ಮಾಡುತ್ತದೆ. ಬ್ಲೂಟೂತ್ ಇರುವುದಿಲ್ಲ ಆಯ್ಕೆಯಾಗಿಯೂ ಸಹ ಇರುವುದಿಲ್ಲ. USB , AUX  ಗಳನ್ನೂ ಪ್ಲಾಪ್ ನ ಹಿಂದೆ ಅಳವಡಿಸಲಾಗಿದೆ ಅದು ಬಟನ್ ತರಹ ಕಾಣಿಸುತ್ತದೆ. ಸ್ಟಿಯರಿಂಗ್ ನಾವು ಅಂದುಕೊಂಡದ್ದಕ್ಕಿಂತ ಸಣ್ಣಗೆ ಕಾಣಿಸುತ್ತದೆ ಹಾಗು ಅದು ಅಷ್ಟೇನೂ ನಿರ್ಲಕ್ಷಿಸುವಂತಿಲ್ಲ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಹಳ ಚೆನ್ನಾಗಿದೆ ಮತ್ತು ಅದರಲ್ಲಿ ಆರೆಂಜ್ ಬ್ಯಾಕ್ ಲೈಟ್ ಹಾಗು ಟ್ಯಾಕೋಮೀಟರ್  , ಸ್ಪೀಡೋಮೀಟರ್,ಡಿಜಿಟಲ್  ಓಡೋ  ಮೀಟರ್ , ಮತ್ತು ಟ್ರೆಪ್ ಮೀಟರ್ ಸಹ ಇದೆ.  ಎಲ್ಲ ಮಾರುತಿ ಕಾರುಗಳಲ್ಲಿರುವಂತೆ  AC  ಬಹಳ ಚೆನ್ನಾಗಿದೆ. ನನಗೆ ಹೊಂದುವಂತೆ ಚಳಿ ತಡೆಯಲು ಉಷ್ಣತೆ ಹೆಚ್ಚು ಮಾಡಿದೆ ಕೂಡ.  ೧ ಮತ್ತು ೨ ನೇ ಸ್ಪೀಡ್ ಕ್ಯಾಬಿನ್ ತಂಪಾಗಿಡಲು ಸಾಕಾಗುತ್ತದೆ. ಬೇಸಿಗೆಯಲ್ಲೂ ಕೂಡ ೪ ಸ್ಪೀಡ್ AC ಅವಶ್ಯಕತೆ ಕಾಣಿಸುವುದಿಲ್ಲ ಎಂದೆನಿಸುತ್ತದೆ. ೩ ಮತ್ತು ೪ ಸ್ಪೀಡ್ ನಲ್ಲಿ ಬ್ಲಾವೆರ್ ಹೆಚ್ಚಿಗೆ ಶಬ್ದ ಮಾಡುತ್ತದೆ.

Maruti Suzuki Alto K10 AMT - Expert Review

Maruti Suzuki Alto K10 AMT - Expert Review

ಕಾರ್ಯ ದಕ್ಷತೆ

Maruti Suzuki Alto K10 AMT - Expert Review

ಇದು ಹೆಚ್ಚು ವೇಗವಾಗಿದೆಯೇ? ಹೌದು , ನಿಮಗೆ ಓಡಿಸಬೇಕಾದರೆ ಇಕಟ್ಟಿನಿಂದ ಕೂಡಿದೆ ಎಂದೆನಿಸುತ್ತದೆಯೇ ? ಇರಬಹುದು. ನಾನು ಹಾಗೆ ಆಲ್ಟೊ K10 ಕಾರ್ಯ ದಕ್ಷತೆಯ ಬಗ್ಗೆ ಹೇಳುತ್ತೇನೆ. ಇದರ K10 ಬಿ ಯೂನಿಟ್ ಅನ್ನು ವ್ಯಾಗನ್ R ನಿಂದ ತರಲಾಗಿದೆ. ೧ ಲೀಟರ್ ಮತ್ತು ೩ ಸಿಲಿಂಡರ್ ನದ್ದು, ಇದು 68PS ಪವರ್ ಅಣು ಕೊಡುತ್ತದೆ ಮತ್ತು 90Nm ಟಾರ್ಕ್ ಅನ್ನು ಕೊಡುತ್ತದೆ. ಇದು ಹೆಚ್ಚು ಶಬ್ದ ಮಾಡುವುದಿಲ್ಲ. ಎಲ್ಲಿಯವರೆಗೆ ಹೆಚ್ಚು ಬಾರಾ ಆಗುವುದಿಲ್ಲವೋ ಅಲ್ಲಿಯವರೆಗೆ . ಕಾರು ಹೆಚ್ಚು ಬರವಾಗಿಲ್ಲ. ಪವರ್ ಮತ್ತು ವೆಯಿಟ್ ಗೆ ಹೋಲಿಸಿದರೆ  ಬಿ ವಿಭಾಗದಲ್ಲಿನ ಕಾರುಗಳಿಗೆ ಸರಿದೂಗುತ್ತದೆ. 90Nm  ಟಾರ್ಕ್ ೩೫೦೦ RPM ನಲ್ಲಿ ಸಿಗುತ್ತದೆ. ಮತ್ತು ಹೆಚ್ಚಿನ ಪವರ್ ೬೦೦೦RPM  ನಲ್ಲಿ ಸಿಗುತ್ತದೆ. ಇದರ ಅರ್ಥ ನೀವು ವೇಗ ಹೆಚ್ಚಿಸಲು ಹೆಚ್ಚಿಗೆ ಆಕ್ಸಿಲರೇಟರ್ ಪೆಡಲ್ ಒತ್ತಬೇಕಾಗುತ್ತದೆ.

Maruti Suzuki Alto K10 AMT - Expert Review

ಈ ಎಂಜಿನ್ ಹಾಗು ಗೇರ್ ಬಾಕ್ಸ್ ಸೆಲೆರಿಯೊ ದ್ಲಲೂ ಸಹ ಇದೆ. ಸೆಲೆರಿಯೊ ಗೆ ಹೋಲಿಸಿದಾಗ ಇದರಲ್ಲಿ ಗೇರ್ ಬಾಕ್ಸ್ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎನಿಸುತ್ತದೆ. ಎಲ್ಲ AMT ಗಳಂತೆ ಗೇರ್ ಶಿಫ್ಟ್ ಸ್ವಲ್ಪ ಪರಿಶ್ರಮದಾಯಕ . ಹೆಚ್ಚು ಮತ್ತು ಕಡಿಮೆ ಗೇರ್ ಸೆಲೆಕ್ಟ್ ಮಾಡಲು ಕೆಳಗಿನ ಗೇರ್ ಗಳಿಗೆ ಹೋಗಲು ಸ್ವಲ್ಪ ಹಿಂಜರಿಯುತ್ತದೆ.ಹೆಚ್ಚಿನ ಗೇರ್ ಗಳಿಗೆ ಸಿಲಿಕಿದ್ದು ಕೆಳಗಿನ ಗೇರ್ ಗಳಿಗೆ ಬರಲು ಸ್ವಲ್ಪ ತಡೆದಂತಾಗುತ್ತದೆ. ಮತ್ತು ಆದಷ್ಟೂ ಬೇಗ ಸರಿಹೊಂದಿಕೊಂಡು ಹೆಂಡಿನ ಗೇರ್ ಗೆ ಬರುತ್ತದೆ ಕೂಡ. ಗೇರ್ ಲೀವರ್ ಅನ್ನು M  ಗೆ ಹಾಕಿದರೆ ನಿಮಗೆ ಅನುಕೂಲವಾಗುತ್ತದೆ.  ನೀವು DSG  ಗೇರ್ ಬಾಕ್ಸ್ ಗೆ ಹೊಂದಿಕೊಂಡಿದ್ದಾರೆ ಇದು ನಿಮಗೆ ಕಷ್ಟಕರ ಎನಿಸಬಹುದು .  DSG ಗೆ ವಿರುದ್ಧ ವಾದ ಅನುಭವ ಆಗಬಹುದು . ಮಾನ್ಯುಯಲ್ ನಲ್ಲೂ  ಸಹ ಗಾಡಿಯು ಆರಾಮದಾಯಕವಾಗಿ ಹೆಚ್ಚಿನ RPM ಗಳಲ್ಲಿ ಡೌನ್ ಶಿಫ್ಟ್ ಗೆ ಹೋಗುತ್ತದೆ. ಆದರೆ ಹಾಗಾಗಲು ರೇವ್ ಸ್ಪೀಡ್ ಕೆಂಪು ಬಣ್ಣದ ಗುರುತಿನ ವರೆಗೆ ಹೋಗಬೇಕಾಗುತ್ತದೆ.

Maruti Suzuki Alto K10 AMT - Expert Review

ಓವರ್ಟೇಕ್ ಮಾಡಲು ಇಂಜಿನ್ ಗೆ ಹೆಚ್ಚು ಪರಿಶ್ರಮ ಪಡೆಯಬೇಕಾಗುತ್ತದೆ ಮತ್ತು ಅದಕ್ಕೆ ಮುಂದಾಲೋಚನೆ ಸಹ ಅಗತ್ಯ ವಾಗಿರುತ್ತದೆ ಕೂಡ.  ನೀವು ಮಿಂಚಿನಂತೆ ಲೇನ್ ಬದಲಿಸಲು ಸಾಧ್ಯವಿಲ್ಲ . ಏಕೆಂದರೆ ಕಾರು ಹೆಚ್ಚಿನ ಪವರ್ ಪಡೆಯಲು ಸಮಯ ತೆಗೆದುಕೊಳ್ಳುತ್ತದೆ. ಬ್ರೇಕ್ ಸಹ ಸಾಹಸಕಾರವಾದ ಪ್ರಯತ್ನ ಮಾಡಲು ಸಹಕಾರಿಯಾಗಿರುವುದಿಲ್ಲ, ಸುರಕ್ಷತೆ ಸಲಕರಣೆಗಳೂ ಸಹ ಇಲ್ಲ. ಬ್ರಾಕೆ ನ ಗುಣಮಟ್ಟ ಇಂಜಿನ್ ನ ಪವರ್ ಗೆ ಸರಿಹೊಂದುವುದಿಲ್ಲ. ಏಕೆಂದರೆ ಬ್ರೇಕ್ ನ ಅಳತೆ ಚಿಕ್ಕದಾಗಿದೆ ಮತ್ತು ಟೈರ್ ಸಹ ಚಿಕ್ಕದು. ABS  ಇಲ್ಲದಿರುವುದರಿಂದ ಬ್ರೇಕ್ ಡ್ರ್ಯಾಗ್ ಮಾಡಿದಂತಾಗುತ್ತದೆ, ಕಾರು ನೇರವಾಗಿ ಓಡುವುದಿಲ್ಲ . ಇದರ ಅರ್ಥ ಪವರ್ ಅನ್ನು ನಿಯಮಿತವಾಗಿ ಬಳಸಬೇಕಾಗುತ್ತದೆ.

Maruti Suzuki Alto K10 AMT - Expert Review

ಆಲ್ಟೊ ಗೆ ಎತ್ತರದ ನಿಲುವು ಇದೆ. ಆದುದರಂದ ಬಾಡಿ ರೊಲ್ ಆಗುವಂತೆ ಮಾಡುವ ಸಾಧ್ಯತೆ ಇದೆ. ಕಾರು ಹೈ ವೆ ಯಲ್ಲಿನ ವೇಗದ ತಿರುವುಗಳಿಗೆ ಅನುಕೂಲಕರವಾಗಿಲ್ಲ . ಮಾಲ್ ಗಳ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತಿರುಗಿಸಲು ಅನುಕೂಲವಾಗಿದೆ. ಸ್ಟಿಯರಿಂಗ್ ಚೆನ್ನಾಗಿದೆ. ಇದು ಸ್ವಲ್ಪ ಕಡಿಮೆ ಬಾರವಿದ್ದು ಹೈ ವೆ ಗಳಿಗೆ ಹೊಂದಿಕೊಳ್ಳುತ್ತದೆ. ಇದು 100kph ನಲ್ಲಿ ಹೋಗಲು ಸಹಕಾರಿಯಾಗಿಲ್ಲದಿದ್ದರೂ u-ಟರ್ನ್  ತೆಗೆದುಕೊಳ್ಳಲು ಮತ್ತು ಪಾರ್ಕಿಂಗ್ ಮಾಡಲು ಅನುಕೂಲಕರವಾಗಿದೆ.

ಅಂತಿಮ ಅನಿಸಿಕೆ

Maruti Suzuki Alto K10 AMT - Expert Review

ಆಲ್ಟೊ  K10 AGS  ಒಂದು ಕಡಿಮೆ ಬೆಲೆಯ ವಾಹನ. ಒಪ್ಪಿಕೊಳ್ಳಬಹುದಾದ ಕಾರ್ಯ ದಕ್ಷತೆ , ಡಿಸೆಂಟ್ ಆಗಿರುವ ಬೂಟ್, ನಿಖರವಾದ ಸ್ಟಿಯರಿಂಗ್, ಹೆಚ್ಚು ಮೈಲೇಜ್, ಇದನ್ನು ಒಂದು ಆಲ್ರೌಂಡರ್ ಮಾಡುತ್ತದೆ. AGS ನಲ್ಲಿ ಸುರಕ್ಷತೆ ಉಪಕರಣಗಳನ್ನು ಅಳವಡಿಸಬಹುದಿತ್ತು . ಮಾರುತಿ ನಿಮಗೆ ಡ್ರೈವರ್ ಏರ್ಬ್ಯಾಗ್ ಅಥವಾ AMT ಆಯ್ಕೆ ಕೊಡುತ್ತದೆ. ಇದು ನನಗೆ ಸರಿಯೆನಿಸುವುದಿಲ್ಲ. ಸ್ವಲ್ಪ ಮಟ್ಟಿಗಾದರೂ ಸುರಕ್ಷತೆಗಳು ಇರಬೇಕಾಗಿತ್ತು. ಒಟ್ಟಿನಲ್ಲಿ ಆಲ್ಟೊ ಗೆ ವ್ಯಾಪಕವಾದ ಸರ್ವಿಸ್ ನೆಟ್ವರ್ಕ್ ಇರುವುದು ದೊಡ್ಡ ಅನುಕೂಲ. ಹಾಗಾಗಿ Alto K10 ನಗರಗಳ ಚಿಕ್ಕಕುಟುಂಬಗಳಿಗೆ ಒಂದು ಉತ್ತಮ  ಆಯ್ಕೆ ಆಗಿದೆ.

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

×
We need your ನಗರ to customize your experience