ವೊಲ್ಕ್ಸ್ ವಾಗನ್ ಪೋಲೊ 1.5 TDI ಪರಿಣಿತರ ವಿಮರ್ಶೆ
Published On ಮೇ 20, 2019 By abhishek for ವೋಕ್ಸ್ವ್ಯಾಗನ್ ಪೋಲೊ 2015-2019
- 1 View
- Write a comment
ವೊಲ್ಕ್ಸ್ ವಾಗನ್ ನ ಪ್ರಖ್ಯಾತ ಹ್ಯಾಚ್ ಬ್ಯಾಕ್ ನವೀಕರಣ ಗೊಂಡಿದೆ ಹಾಗು ಅತಿ ಮುಖ್ಯವಾಗಿ ಚೆನ್ನಾಗಿ ಕಾರ್ಯ ನಿರ್ವಹಿಸುವ ಡೀಸೆಲ್ ಎಂಜಿನ್ ಅವಶ್ಯಕವಾಗಿತ್ತು ಕೂಡ. ನಾವು ನಿಮಗೆ ಈ ಹ್ಯಾಚ್ ಬ್ಯಾಕ್ ಹೇಗೆ ಅತ್ಯುತ್ತಮವಾಗಿದೆ ಎಂದು ವಿವರಿಸುತ್ತೇವೆ.
ಪರಿಚಯ
ಓದು ಓಲೆಯ ಹೇಳಿಕೆಯೊಂದಿಗೆ ಪ್ರಾರಂಭಿಸುತ್ತೇನೆ . ಹೇಳುತ್ತಾರೆ " ಚಿಕ್ಕ ಚಿಕ್ಕ ವಿಷಯಗಳೊಂದಿಗೆ ದೊಡ್ಡ ವಿಷಯವು ಮಾಡಲ್ಪಡುತ್ತದೆ ". ಮತ್ತು ಇದೇ ವಿಷ್ಯದಲ್ಲಿ ಪೊಲ್ಪ್ ದ ಸಮಸ್ಯೆಗಳು ಒಟ್ಟುಗೂಡಿರುವುದು. ಇದು ಹೆಚ್ಚು ಅನುಕೂಲತೆಗಳ, ಅದ್ಭುತವಾದ ಸ್ಟೈಲಿಂಗ್, ಆಂತರಿಕ ಗುಣಮಟ್ಟ ಮತ್ತು ಒಳ್ಳೆಯ ರೈಡ್ ಹ್ಯಾಂಡಲಿಂಗ್ ಪ್ಯಾಕೇಜ್ ಬಗ್ಗೆ ಪ್ರಾಮಾಣಿಕರಿಸಿದ್ದರೂ, ಇದರಲ್ಲಿ ಪವರ್ ಟ್ರೈನ್ ನಲ್ಲಿ ಕಡಿಮೆ ಪವರ್ ಇದ್ದು ೩-ಸಿಲಿಂಡರ್ ಎಂಜಿನ್ ನಿಂದ ಹೀಗೆ ಹಿಂದುಳಿದಿತ್ತು. ಮತ್ತು ಇವು ಹೆಚ್ಚು ಮಾರಾಟವಾಗುವಂತಹ ಡೀಸೆಲ್ ಎಂಜಿನ್ ವೇರಿಯೆಂಟ್ ನಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು. ಹಾಗಾಗಿ ಒಟ್ಟು ಪ್ಯಾಕೇಜ್ ಚೆನ್ನಾಗಿತ್ತು, ಆದರೆ ಎಂಜಿನ್ ಇದಕ್ಕೆ ಅನುಗುಣವಾಗಿ ಇರಲಿಲ್ಲ. ವೊಲ್ಕ್ಸ್ ವಾಗನ್ ಇದನ್ನು ಕಂಡುಕೊಂಡಿತು ಮತ್ತು ಕೆಲವು ಬದಲಾವಣೆಗಳನ್ನು ತಂದಿತು ಅದನ್ನು GT ಆವೃತ್ತಿಯಲ್ಲಿ ಅಳವಡಿಸಿತು. ಮೊದಲಿಗೆ ಸ್ವಲ್ಪ ಚೆನ್ನಾಗಿ ಟ್ಯೂನ್ ಆಗಿರುವಂತಹ ವೆಂಟೋ ಎಂಜಿನ್ ನಂತರ ಈಗ 1.2 TDI ಯೂನಿಟ್ ಅನ್ನು 1.5 litre ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸುವುದರೊಂದಿಗೆ ನಮಗೆ ಸಂತೋಷ ಉಂಟುಮಾಡಿದೆ. ಒಳ್ಳೆಯ ದಿನಗಳಂತೆ ಇವೆಯೇ? ನಾವು ನೋಡೋಣ.
ಡಿಸೈನ್
ಪೋಲೊ ಒಂದು ಈಗಾಗಲೇ ಅದ್ಭುತವಾಗಿ ಕಾಣುವ ಕಾರ್. ಹಾಗಾಗಿ ವೊಲ್ಕ್ಸ್ ವಾಗನ್ ಡಿಸೈನ್ ವಿಚಾರದಲ್ಲಿ ಹೆಚ್ಚೇನು ಮಾಡುವ ಅವಶ್ಯಕತೆ ಇಲ್ಲ. ನಮಗೆ ಈ ಕಾರ್ ರಸ್ಟಿ ಆರೆಂಜ್ ಬಣ್ಣದಲ್ಲಿ ದೊರೆಯುತ್ತದೆ ಮತ್ತು ಇದು ಪೋಲೊ ಗೆ ಹೆಚ್ಚು ಜೊಂಡಿಕೊಳ್ಳುತ್ತದೆ ಕೂಡ.
ಬದಲಾವಣೆಗಳ ಬಗ್ಗೆ ಹೇಳುವುದಾದರೆ , ನೀವು ನವೀಕರಣಗೊಂಡ ಮುಂದಿನ ಗ್ರಿಲ್, ಹೊಸ ಬಂಪರ್ ಇಂಟಿಗ್ರೇಟೆಡ್ ಫಾಗ್ ಲ್ಯಾಂಪ್ ನೊಂದಿಗೆ, ಮತ್ತು ಕಾರ್ನೆರಿಂಗ್ ಲೈಟ್ ಗಳು ರಸ್ತೆಯ ಬದಿಗಳನ್ನು ಬೆಳಗಿಸುತ್ತದೆ. ಪಕ್ಕಗಳಲ್ಲಿ ನೀವು ನೋಡಬಹುದಾದ ವಿಚಾರವೆಂದರೆ ೧೦-ಸ್ಪೋಕ್ ಅಲಾಯ್ ವೀಲ್ ಸ್ವಲ್ಪ ಭಿನ್ನವಾಗಿ ಕಾಣುತ್ತದೆ.
ಹಿಂಬದಿಯಲ್ಲಿ ಮತ್ತೆ ಡಿಸೈನ್ ಮಾಡಲಾದಂತಹ ಬಂಪರ್ ಗಳು ಸ್ಪೋರ್ಟ್ ರೆಫ್ಲೆಕ್ಟರ್ ಗಳು ಎರೆದುವು ಬದಿಯಲ್ಲಿ ಮತ್ತು ಇಂಟಿಗ್ರೇಟೆಡ್ ಲೈಸನ್ಸ್ ಪ್ಲೇಟ್ ಕ್ಯಾರಿಯರ್, ಹೊರಗಡೆಯ ಬದಲಾವಣೆಗಳು ಅಸ್ಟೇನು ಇಲ್ಲದಿದ್ದರೂ ಚಿಕ್ಕ ಚಿಕ್ಕ ವಿಷಯಗಳು ಪೋಲೊ ವನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ.
ಅಂತರಿಕಗಳು ಮತ್ತು ಅನುಕೂಲತೆಗಳು
ಹೊಸ ಪೋಲೊ ಪ್ರಖರವಾದ ಅಂತರಿಕಗಳಿಗೆ ಖ್ಯಾತಿಯಾಗಿಲ್ಲ . ಬಹಳಷ್ಟು ಜೆರ್ಮನ್ ಕಾರುಗಳಂತೆ ಇದರಲ್ಲಿ ಹೆಚ್ಚು ದಕ್ಷತೆಗೆ ಮತ್ತು ಗುಣಮಟ್ಟಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ ಆಂತರಿಕ ಸೌಂದರ್ಯಕ್ಕಲ್ಲ . ಹೊಸ ಮಾಡೆಲ್ ಗೆ ಸ್ವಲ ಬದಲಾವಣೆಗಳನ್ನು ಒಳಗೊಂಡ ಆಂತರಿಕಗಳನ್ನು ಕೊಡಲಾಗಿದೆ ಮತ್ತು ಇವು ಕ್ಯಾಬಿನ್ ಅನ್ನು ಹೆಚ್ಚು ಆಹದಾಕಾರವಾಗಿಯೂ ಹಾಗು ವಿಶೇಷವಾಗಿಯೂ ಕಾಣುವಂತೆ ಮಾಡುತ್ತದೆ.
ಡ್ಯಾಶ್ ಬೋರ್ಡ್ ಈಗ ಟೂ ಟೋನ್ ಬಿಜ್ ಬ್ಲಾಕ್ ಜೋಡಿ ಹಾಗು ಸಿಲ್ವರ್ ಇನ್ಸರ್ಟ್ ಗಳು ಇದರ ಲೇ ಔಟ್ ಗೆ ಹೆಚ್ಚು ಬಣ್ಣವನ್ನು ಕೊಡುತ್ತದೆ. ಮಿಕ್ಕ ವಿಷಯಗಳು ಹಾಗೆ ಉಳಿದಿವೆ. ಚಪ್ಪಟೆಯ ಕೆಳಬಾಗ ಹೊಂದಿರುವ ಸ್ಟಿಯರಿಂಗ್ ವೀಲ್ ಚೆನ್ನಾಗಿ ಕಾಣುವುದಲ್ಲದೆ ಒಳ್ಳೆಯ ಹಿಡಿತ ಕೂಡ ಹೊಂದಿದೆ ಮತ್ತು ಇದು ನಿಮ್ಮನ್ನು ಹೆಚ್ಚು ಆಕರ್ಷಿಸುತ್ತದೆ. ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಎರೆದುವು ಬದಿಯಲ್ಲಿದ್ದು ನಿಮಗೆ ಆಡಿಯೋ, ವಾಯ್ಸ್ ಕಾಲಿಂಗ್, ಮಲ್ಟಿ ಇನ್ಫಾರ್ಮಶನ್ ಡಿಸ್ಪ್ಲೇ ಬಳಸುವುದಕ್ಕೆ ಅನುಕೂಲವಾಗಿದೆ.
ಸೀಟ್ ಗಳಲ್ಲಿ ಬದಲಾವಣೆಗಳಿಲ್ಲ , ಇದರ ಫ್ಯಾಬ್ರಿಕ್ ಹೊಸದಾಗಿದ್ದರೂ ಲೈಟ್ ಬಿಜ್ ಶೇಡ್ ಕೊಲೆ ಆಗುವುದಕ್ಕೆ ದಾರಿಯಾಗುತ್ತದೆ. ನೀವು ಫೋಟೋ ದಲ್ಲಿ ನೋಡಿದಂತೆ ಸೀಟ್ ಗಳು ಈಗಾಗಲೇ ಕಲೆಯಿಂದ ಕೂಡಿದೆ. ಇದರ ಹೊರತಾಗಿ ಆರಾಮದಾಯಕದ ಬಗ್ಗೆ ಯಾವುದೇ ವಿಡಂಬನೆಯಿಲ್ಲ. ಬಹಳಷ್ಟು ಸಪೋರ್ಟ್ ಗಳಿಂದ ಕೂಡಿದ್ದು ಇದು ಎರ್ಗೊನೊಮಿಕ್ ಆಗಿಯೂ ಸಹ ಇದೆ.
ಹಿಂಬದಿಯ ಸೀಟ್ ಆರಾಮದಾಯಕವಾಗಿದೆ ಕೂಡ, ಆದರೆ, ಅದು ಮಧ್ಯಮ ಎತ್ತರದ ವ್ಯಕ್ತಿಗಳು ಮುಂಡುಗಡೆಯ ಸೀಟ್ ನಲ್ಲಿ ಇರುವವರೆಗೆ ಮಾತ್ರ. ಮುಂಬದಿಯಲ್ಲಿ ಆರು ಅಡಿ ವ್ಯಕ್ತಿಗಳೇನಾದರೂ ಇದ್ದಾರೆ ಹಿಂಬದಿಯ ಸೀಟ್ ನ ಪ್ಯಾಸೆಂಜರ್ ಗಳಿಗೆ ಲೇತ್ಗ್ ರೂಮ್ ಚಿಕ್ಕದಾಗಿಸಿಬಿಡುತ್ತದೆ.
ನಾವು ಹೇಳುವುದು, ಲೆಗ್ ರೂಮ್ ಸಾಕಷ್ಟು ಇದೆ ಆದರೂ ಇನ್ನೂ ಸ್ವಲ್ಪ ಜಾಸ್ತಿ ಇದ್ದಿದ್ದರೆ ಚೆನ್ನಾಗಿರುತಿತ್ತು. ಬೂಟ್ ಸ್ಪೇಸ್ ಚೆನ್ನಾಗಿದ್ದು 294 litres ಇದೆ ಮತ್ತು ಇತರ ಸ್ಪರ್ಧಾತ್ಮಕ ಕಾರುಗಳಿಗಿಂತ ಚೆನ್ನಾಗಿದೆ.
ಸಲಕರಣೆಗಳ ಬಗ್ಗೆ ಹೇಳಬೇಕೆಂದರೆ ಪೋಲೊ ಬಹಳ ಮುಂದುವರೆದಿದೆ. ಹಿಂದೆ ಆಟೋ ರೋಲ್ ಅಪ್ ಮಿರರ್ ಇರಲಿಲ್ಲ. ಈಗ ನಿಮಗೆ ಏರ್ಬ್ಯಾಗ್ ಸ್ಟ್ಯಾಂಡರ್ಡ ಸಲಕರಣೆಯಾಗಿ ದೊರೆಯುತ್ತದೆ, ಎಲ್ಲಾ ವೇರಿಯೆಂಟ್ ಗಳಲ್ಲಿ. ಕ್ಲೈಮೇಟ್ ಕಂಟ್ರೋಲ್, ಬ್ಲೂಟೂತ್, ಮತ್ತು ವಾಯ್ಸ್ ಕಮಾಂಡ್, ಪಾರ್ಕಿಂಗ್ ಸೆನ್ಸರ್ ಗಳು ಹಾಗು ಮುಂತಾದವು ಇದೆ. ಹೊಸ ಪೋಲೊ ದಲ್ಲಿ ಬಹಳಷ್ಟು ಉತ್ತಮ ಸಲಕರಣೆಗಳು ಇವೆ. ನಿಮಗೆ ಹೆಚ್ಚುವರಿ ವಿಷಯಗಳು ಬೇಕೆನಿಸಿದರೆ ಅವು ಉತ್ತಮ ಸೀಟ್ ಕವರ್ ಗಳು ಆಗಿರುತ್ತವೆ.
ಎಂಜಿನ್ ಮತ್ತು ಕಾರ್ಯ ದಕ್ಷತೆ
ನನಗೆ ಇನ್ನು ನೆನಪಿರುವಹಾಗೆ ೩ ಸಿಲಿಂಡರ್ ಎಂಜಿನ್ ಹೊಂದಿರುವ ಕ್ರಾಸ್ ಪೋಲೊ ಡ್ರೈವ್ ಮಾಡಿದಾಗ ಅದು ನಗರಗಳಲ್ಲಿ ಸಾಧಾರಣವಾಗಿತ್ತು . ಆದರೆ ಅದೇ ಕಾರನ್ನು ಹೈ ವೆ ಗಳಲ್ಲಿ ಓವರ್ಟೇಕ್ ಮಾಡುವಾಗ ಹೆಚ್ಚು ಪರಿಶ್ರಮ ಪಡಬೇಕಾಗಿತ್ತು. ಹಾಗು ಎಂಜಿನ್ ಸ್ವಲ್ಪ ತಡವರಿಸುತ್ತಿತ್ತು ಕೂಡ. ಡ್ರೈವಬಿಲಿಟಿ ಯು ಮಾಧ್ಯಮಿಕವಾಗಿರುವಾಗ ಒಟ್ಟು ಕಾರ್ಯ ದಕ್ಷತೆ ಪೋಲೊ ಡಾ ಘನತೆಗೆ ತಕ್ಕಂತೆ ಇರಲಿಲ್ಲ. ಹಾಗಾಗಿ ನಾವು ಹೊಸ ಪೋಲೊ ಒಳಗೆ ಕೂತಾಗ ಮೊದಲು ಅದನ್ನು ಪರೀಕ್ಷೆ ಮಾಡಿದೆವು. ಈಗ ಹೆಚ್ಚುವರಿ ಸಿಲಿಂಡರ್ ಹೊಂದಿರುವುದಲ್ಲದೆ 90 PS ಪವರ್ ಮತ್ತು 230 Nm ಟಾರ್ಕ್ (ಹಳೆ ಡೀಸೆಲ್ 75PS ಮತ್ತು 180Nm ಕೊಡುತ್ತಿತ್ತು)ಕೊಡುತ್ತಿದೆ. ಹೆಚ್ಚು ವೇಗಗತಿ ಪಡೆದು ಓವರ್ಟೇಕ್ ಮಾಡಲು ಸಹ ಅನುಕೂಲವಾಗಿತ್ತು. ಡ್ರೈವಬಿಲಿಟಿ ಯು ಚೆನ್ನಾಗಿದ್ದು ನಾವು ಮೊದಲನೇ ಗೇರ್ ನಿಂದ ೪ನೇ ಗೇರ್ ಗೆ ತ್ವರಿತವಾಗಿ ಮುಂದುವರೆದರೂ ಇದರ ಎಂಜಿನ್ ಯಾವುದೇ ಸಮಸ್ಯೆಗಳಿಲ್ಲದೆ ಚೆನ್ನಾಗಿ ನಿಭಾಯಿಸಿತು .
ಗೇರ್ ಗಳನ್ನೂ ಬದಲಿಸುತ್ತಾ ಮುಂದೆ ಸಾಗಿದಾಗ ಪವರ್ ಡೆಲಿವೆರಿಯು ನೀರವಾಗಿದ್ದು ಟರ್ಬೊ ಕೆಲಸ ಮಾಡುತ್ತಿದೆ ಎಂದು ಗೊತ್ತಾಗದಿರಬಹುದು, ಸ್ಪೀಡೋಮೀಟರ್ ನೋಡಿದಾಗ ನಿಮಗೆ ಇದು ಎಷ್ಟು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ನೋಡಬಹುದು. ೫-ಸ್ಪೀಡ್ ಗೇರ್ ಬಾಕ್ಸ್ ಉಪಯೋಗಿಸಲು ಅಷ್ಟೇನು ಚೆನ್ನಾಗಿ ಕಾಣುವುದಿಲ್ಲ , ಆದರೂ ಹೆಚ್ಚು ಟಾರ್ಕ್ ಇರುವುದರಿಂದ ಹೆಚ್ಚು ಗೇರ್ ಶಿಫ್ಟ್ ಅಗತ್ಯ ಬರುವುದಿಲ್ಲ. ದೂರದ ಪ್ರಯಾಣಗಳಲ್ಲಿ ಸ್ವಲ್ಪ ಪರಿಶ್ರಮದಾಯಕವಾಗಿರಬಹುದು ಕ್ಲಚ್ ಪೆಡಲ್ ಪ್ಲೇ ಇದಕ್ಕೆ ಕಾರಣವಾಗುವುದು ಮತ್ತು ನಿಮ್ಮ ಉತ್ಸಾಹ ಕಡಿಮೆ ಮಾಡಬಹುದು ಕೂಡ. ಆದರೆ ದಿನ ನಿತ್ಯದ ಪ್ರಯಾಣಕ್ಕೆ ಇದು ಅಷ್ಟೇನು ಪ್ರಭಾವ ಬೀರುವುದಿಲ್ಲ. ಐಡಲಿಂಗ್ ನಲ್ಲಿ ಸ್ವಲ್ಪ ಹೆಚ್ಚು ಶಬ್ದ ಮಾಡುತ್ತದೆ ಎನಿಸಬಹುದು , ನಂತರ ಸರಿ ಹೋಗುತ್ತದೆ ಕೂಡ. ಒಟ್ಟಿನಲ್ಲಿ ಹೊಸ ಎಂಜಿನ್ ಪೋಲೊ ಗೆ ನ್ಯಾಯ ಒದಗಿಸುತ್ತದೆ ಮತ್ತು ನಾವು ಅದನ್ನು ಮೆಚ್ಚಿದೆವು ಕೂಡ.
ಹ್ಯಾಂಡಲಿಂಗ್ ಮತ್ತು ರೈಡ್ ಕ್ವಾಲಿಟಿ
ಪೋಲೊ ಸದಾ ಒಂದು ಒಳ್ಳೆಯ ಸಸ್ಪೆನ್ಷನ್ ಗೆ ಪ್ರಸಿದ್ದಿ ಪಡೆದಿದೆ ಮತ್ತು ಹೊಸ ಪೋಲೊ ಇದಕ್ಕೆ ಹೊರತಲ್ಲ. ಇದು ರಸ್ತೆಯ ಅಂಕು ಡೊಂಕು ಗಳಲ್ನ್ನು ನಿಭಾಯಿಸುತ್ತದೆ ಮತ್ತು ಕಾನೂನು ಬಹಿದ ರಸ್ತೆ ಉಬ್ಬು ಗಳನ್ನೂ ಕೂಡ ನಿಭಾಯಿಸುತ್ತದೆ, ಕಾಂಕ್ರೀಟ್ ನ ನುಣುಪಾದ ಉಬ್ಬುಗಳು ಸ್ವಲ್ಪ ಪರಿಶ್ರಮ ಕೊಡುತ್ತದೆ ಕೂಡ. ಯೂರೋಪಿನ ಪೋಲೊ ಹೆಚ್ಚು ಕಠಿಣ ಸಸ್ಪೆನ್ಷನ್ ಹೊಂದಿದ್ದರೂ, ಭಾರತದ ಆವೃತ್ತಿಯನ್ನು ಇಲ್ಲಿನ ರಸ್ತೆಗೆ ಅನುಗುಣವಾಗಿ ಮಾಡಲಾಗಿದೆ.
ಇದನ್ನು ಓಡಿಸಿ ನೋಡಿದಾಗ ನಿಮಗೆ ಒಂದು ತರಹದ ಅಂಡರ್ ಸ್ಪೀರ್ ಮತ್ತು ಸ್ವಲ್ಪ ಬಾಡಿ ರೋಲ್ ನ ಅನುಭವವಾಗುತ್ತದೆ. ಅಪೊಲೊ ಡಾ 185 ಸೆಕ್ಷನ್ ಹೊಂದಿರುವ ಟೈರ್ ಗಳು ಚೆನ್ನಾಗಿದ್ದು ಟ್ರಾಕ್ಷನ್ ಇಟ್ಟುಕೊಳ್ಳಲು ಪರಿಶ್ರಮ ಪಡುತ್ತದೆ. ಬ್ರೇಕಿಂಗ್ ಕೂಡ ಬಲವಾಗಿದೆ, ನೀವು ಪೆಡಲ್ ಒತ್ತಿದಾಗ ABS ಶೀಘ್ರವಾಗಿ ಕಾರ್ಯತತ್ಪರವಾಗುತ್ತದೆ. ಮಳೆಯಲ್ಲಿ ಓಡಿಸುವಾಗಲೂ ಅಸ್ಟೇನು ಪರಿಶ್ರಮದಾಯಕಆಗಿರಲಿಲ್ಲ ದಾರಿಯುದ್ದಕ್ಕೂ ಪೋಲೊ ಒಂದು ಉತ್ತಮ ನಿಲುವನ್ನು ಕಾಪಾಡಿಕೊಂಡಿತ್ತು
ಮೈಲೇಜ್
ಕಾರ್ಯದಕ್ಷತೆಯಲ್ಲಿ ಸ್ವಲ್ಪ ಕಡಿಮೆ ಇದ್ದರೂ ಕೂಡ ಮೂರು ಸಿಲಿಂಡರ್ ಎಂಜಿನ್ ಮೈಲೇಜ್ ನಲ್ಲಿ ಚೆನ್ನಾಗಿತ್ತು. ಒಂದು ಒಳ್ಳೆಯ ವಿಷಯವೆಂದರೆ , ಹೊಸ ಎಂಜಿನ್ ಕೂಡ ಅಸ್ಟೇ ಮೈಲೇಜ್ ಕೊಡುವಂತಹದಾಗಿದ್ದು ಹೆಚ್ಚು ಪವರ್ ಮತ್ತು ಟಾರ್ಕ್ ಅನ್ನೂ ಸಹ ಕೊಡುತ್ತದೆ. ಇರುವ 1.5 TDI ಯೂನಿಟ್ ನೊಂದಿಗೆ ಪೋಲೊ 13.4 kmpl ಕೊಡುತ್ತದೆ ಮತ್ತು ಹೈ ವೆ ಗಳಲ್ಲಿ ಇದು 16.1 kmpl ಹೆಚ್ಚಾಯಿತು ಕೂಡ, ಇವು ಪೋಲೊ ದ ಉತ್ತಮ ಅಂಕಿ ಅಂಶಗಳೆಂದು ಪರಿಗಣಿಸಬಹುದು.
ಅಂತಿಮ ಅನಿಸಿಕೆ
ಪೋಲೊ ಗೆ ಒಂದು ಉತ್ತಮ ಎಂಜಿನ್ ದೊರೆತಿದ್ದು ಅದು ಅವಶ್ಯಕವಾಗಿತ್ತು ಕೂಡ, ಮತ್ತು ಹೆಚ್ಚು ಫೀಚರ್ ಗಳು ಸಹ ಇದೆ. ಇದು ಪರಿಪೂರ್ಣವಲ್ಲದಿರುವುದಕ್ಕೆ ಪೂರಕವಾಗಿ ಹಿಂಬದಿಯ ಸೀಟ್ ನಲ್ಲಿ ಕಡಿಮೆ ಲೆಗ್ ರೂಮ್ ಇದೆ. ಅಷ್ಟೇನು ಪ್ರಖರವಲ್ಲದ ಹೆಡ್ ಲೈಟ್ ಗಳು , ಕಲೆ ಗಳನ್ನೂ ಆಕರ್ಷಿಸುವ ಸೀಟ್ ಗಳು ಸಹ ಇವೆ. ಆದರೆ ಇದರಲ್ಲಿ ಮೆಚ್ಚುವಂತಹ ವಿಷಯಗಳಾದ ಅದ್ಭುತವಾದ ಸ್ಟೈಲಿಂಗ್, ಸಾಲಿಡ್ ಬಿಲ್ಡ್ ಕ್ವಾಲಿಟಿ, ಬಹಳಷ್ಟು ಫೀಚರ್ ಗಳು, ಮತ್ತು ಕಾರ್ಯದಕ್ಷತೆ ಹಾಗು ಮೈಲೇಜ್ ನ ಹೊಂದಾಣಿಕೆಗಳು ಸಹ ಇವೆ. ಹೊಸ ಪೋಲೊ 1.5 TDI ಬೆಲೆಯು Trendline ವೇರಿಯೆಂಟ್ ಗೆ Rs. 6.27 lakh ದಿಂದ ಪ್ರಾರಂಭ ವಾಗಿ Highline ಗೆ Rs. 7.37 lakh (ಎಕ್ಸ್ ಶೋ ರೂಮ್ ದೆಹಲಿ ) ಇದ್ದು , ಇವು ಹೊರ ಹೋಗುತ್ತಿರುವ ಕಾರಿನ ಬೆಲೆಗೆ ಸರಿಸಮನಾದ ಎಂದು ತೋರುತ್ತದೆ, ಜೊತೆಗೆ ಬಹಳಷ್ಟು ಮೌಲ್ಯಗಳನ್ನು ಸೇರಿಸಲಾಗಿದೆ. ಪೋಲೊ ಒಂದು ಒಳ್ಳೆಯ ಕಾರ್ ಆಗಿದ್ದು ಈಗ ಇನ್ನೂ ಚೆನ್ನಾಗಿರುವ ಎಂಜಿನ್ ಹಾಗು ನಿಮಗೆ ಬೇಕಾಗಿರುವ ಫೀಚರ್ ಗಳೊಂದಿಗೆ ಬರುತ್ತದೆ. ಇದು ಒಂದು ಅಂದುಕೊಂಡಂತಿರಬೇಕಾದ ಮತ್ತು ಹಾಗೆ ಆಗಿರುವ ಕಾರ್ ಆಗಿದೆ.