ವೊಲ್ಕ್ಸ್ ವ್ಯಾಗನ್ ಪೋಲೊ GT TDI: ಪರಿಣಿತರ ವಿಮರ್ಶೆ
Published On ಮೇ 09, 2019 By akshit for ವೋಕ್ಸ್ವ್ಯಾಗನ್ ಪೋಲೊ 2015-2019
- 0 Views
- Write a comment
ವೊಲ್ಕ್ಸ್ ವ್ಯಾಗನ್ ಪೋಲೊ ದ ಮದ್ಯ ಜೀವನದ ನವೀಕರಣ ಗೊಂಡ ಮಾಡೆಲ್ ಅನ್ನು ಹಿಂದಿನ ವರ್ಷ ಹೊರತಂದಿತ್ತು . ಕಾಸ್ಮೆಟಿಕ್ ಬದಲಾವಣೆಗಳು ಸ್ವಲ್ಪ ಕಡೆಯಿಮೆ ಎನಿಸಿದರೂ ಬಾನೆಟ್ ಒಳಗಡೆ ಮಾಡಿರುವ ಬದಲಾವಣೆಗಳು ಇದು ಸುದ್ದಿಯಲ್ಲಿರುವಂತೆ ಮಾಡಿತು. ಮೂರು ಸಿಲಿಂಡರ್ ನ ಮತ್ತು ಹೆಚ್ಚು ಪರಿಷ್ಕೃತವಾಗಿಲ್ಲದ ಎಂಜಿನ್ ಅನ್ನು ಹೊಸ ಮತ್ತು ಒಂದು ಹೆಚ್ಚು ಸಿಲಿಂಡರ್ ಹೊಂದಿರುವ ಎಂಜಿನ್ ಅನ್ನು ಅಳವಡಿಸಿತು.
ಈ ಹೊಸ 1.5 ಲೀಟರ್ ೪ ಸಿಲಿಂಡರ್ ಗಳ ಯೂನಿಟ್ ಜೆರ್ಮನಿಯ ಕಾರ್ ಮೇಕರ್ ಗೆ ಒಂದೇ ಕಲ್ಲಿನಿಂದ ಎರೆಡು ಹಕ್ಕಿ ಹೊಡೆದಹಾಗೆ ಆಯಿತು. ಹೇಗೆ? ಮೊದಲಿಗೆ ಇದು 1.2 ಲೀಟರ್ ಡೀಸೆಲ್ ಎಂಜಿನ್ , ಇದರಲ್ಲಿ ಹಳೆಯದರ ತರಹ ಪರಿಷ್ಕರಣ ಗೊಂಡಿಲ್ಲದಂತಹ ಮತ್ತು ಕಡಿಮೆ ಶಕ್ತಿ ಹೊಂದಿದ್ದಂತಹ ಹಳೆಯ ಎಂಜಿನ್ ಅನ್ನು ಹೊರಗೆ ಕಳಿಸಿತು. ಎರಡನೆಯದಾಗಿ ಇದು ಇದರ ಸಹೋದರ ಕಾರ್ ಆದ ವೆಂಟೋ ದಲ್ಲಿ ಅಳವಡಲಾಗಿದ್ದ ಹೆಚ್ಚು ಚೆನ್ನಾಗಿ ಹೋಗುವ ಮತ್ತು ಹೆಚ್ಚು ದೊಡ್ಡ 1.6- ಎಂಜಿನ್ ಹೊಂದಿದ್ದ GT ಆವೃತ್ತಿ ಗೆ ಒಂದು ಅಗ್ಗದ ಪರ್ಯಾಯ ವಾಯಿತು.
ನಾವು ನವೀಕರಣ ಗೊಂಡ ಪೋಲೊ ವನ್ನು ಕೆಲವು ತಿಂಗಳ ಹಿಂದೆ ಟೆಸ್ಟ್ ಡ್ರೈವ್ ಮಾಡಿದೆವು, ಅದು ಒಳ್ಳೆ ಅಭಿಪ್ರಾಯ ಮೂಡಿಸುವಂತಿತ್ತು. ಹಳೆಯ ೩ ಸಿಲಿಂಡರ್ ಎಂಜಿನ್ ಇದ್ದಾಗ ಓವರ್ಟೇಕ್ ಮಾಡಲು ಶ್ರಮ ಪಡಬೇಕಾಗಿತ್ತು ಮತ್ತು ಎಂಜಿನ್ ಹೆಚ್ಚು ಶಬ್ದ ಮಾಡುತಿತ್ತು ಕೂಡ. ಹೊಸ ಎಂಜಿನ್ ಬಳಕಯಲ್ಲಿ ಈ ರೀತಿಯ ಸಮಸ್ಯೆ ಇಲ್ಲವಾಗಿದೆ.
ಡಿಸೈನ್
ಇದರ ಹಿಂದಿನ ಆವೃತ್ತಿಯಂತೆ GT TDI ನಲ್ಲಿನ ಬದಲಾವಣೆಗಳು ಅಷ್ಟೇನು ಆಕರ್ಷಕವಾಗಿಲ್ಲ. ಇದರಲ್ಲಿ ಹಿಂದಿನಂತೆಯೇ ಇರುವ ಬಂಪರ್ ಬಳಸಲಾಗಿದೆ. ಡಬಲ್ ಬ್ಯಾರೆಲ್ ಹೆಡ್ ಲ್ಯಾಂಪ್ ಗಳು, ಪುನಃ ಡಿಸೈನ್ ಮಾಡಿರುವ ಫಾಗ್ ಲ್ಯಾಂಪ್ ಗಳು, ಕ್ರೋಮ್ ಹೌನ್ಸಿಂಗ್ ನೊಂದಿಗೆ ಮತ್ತು ತೆಳ್ಳಗಿನ ಕ್ರೋಮ್ ಪಟ್ಟಿ ಮುಂದಿನ ಗ್ರಿಲ್ ಮೇಲೆ ಇದೆ.
'GT Moniker ' ಅನ್ನು ಎಡಗಡೆಯಿಂದ ಸ್ಥಳತರಿಸಿ ಮುಂದಿನ ಗ್ರಿಲ್ ನ ಇನ್ನೊಂದು ಭಾಗದಲ್ಲಿ ಇರಿಸಲಾಗಿದೆ. ಸೈಡ್ ಪ್ರೊಫೈಲ್ ಅನ್ನು ಬದಲಾಯಿಸಲಾಗಿಲ್ಲ, ಆಲ್ಟ್ ಬ್ಲಾಕ್ ಗ್ಲೋಸಿ ಮಿರರ್ ಹೊರತಾಗಿ. ಹಿಂದಿನ ಭಾಗದಲ್ಲಿ ಎರೆಡು ಮುಖ್ಯ ಬದಲಾವಣೆಯನ್ನು ಮಾಡಲಾಗಿದೆ, ಬ್ಲಾಕ್ ಕೆ ಸ್ಪೋಇಲೆರ್ ಮತ್ತು ನವೀಕರಣ ಗೊಂಡ ಬಂಪರ್ ಎರೆಡು ರೆಫ್ಲೆಕ್ಟರ್ ನೊಂದಿಗೆ.
೧೫ ಇಂಚು ಯೆಸ್ತ್ರಡ ಅಲಾಯ್ ವೀಲ್ ಅನ್ನು ಮುಂದುವರೆಸಲಾಗಿದೆ, ಫೇಸ್ ಲಿಫ್ಟ್ ನ ಹಿಂದಿನದರಂತೆ .. ಇದು ಹೊಸ ಮಾಡೆಲ್ ನ ಸ್ಟ್ಯಾಂಡರ್ಡ್ ಆವೃತ್ತಿ ಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ.
ಒಟ್ಟಿನಲ್ಲಿ ಪೋಲೊ ಒಂದು ನೋಡಲು ಸುಂದರವಾದ ಕಾರ್ ಆಗಿದೆ, ಮತ್ತು ಹೆಚ್ಚು ಸಲಕರಣೆಗಳಿಂದ ಕೂಡಿದೆ. ಆದರೂ ಹೆಚ್ಚು ಹಣ ಕೊಡಬೇಕಾಗಿರುವ ವಿಷಯ GT ಅನ್ನು ನಿರಾಶಾದಾಯಕವಾಗಿ ಮಾಡುತ್ತದೆ. ಇದರಲ್ಲಿ ಹೆಚ್ಚು ವೇಗಶಾಲಿ ಎಂಬ ವೈಶಿಷ್ಟ್ಯತೆ ಇಲ್ಲದಿರುವುದು ಗಮನಕ್ಕೆ ಬರುತ್ತದೆ.
ಅಂತರಿಕಗಳು
ಇತರ ಜರ್ಮನ್ ಕೊಡುಗೆಗಳಂತೆ GT ಯಾ ಕ್ಯಾಬಿನ್ ಆಂತರಿಕ ವೈಶಿಷ್ಟತೆಗಳಿಗಿಂತ ಕಾರ್ಯತತ್ಪರತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆ. ಇದರ ಗುಣಮಟ್ಟ ಚೆನ್ನಾಗಿದ್ದು ಇದರ ಅಳವಡಿಕೆಗಳು ಸರಳವೂ ಹಾಗು ನೇರವೂ ಆಗಿದೆ. ಹಿಂದಿನ ಡುಯಲ್ ಟೋನ್ ಸಿಬಣ್ಣದ ಥೀಮ್ ನವೀಕರಣ ಗೊಂಡ ಮಾಡೆಲ್ ನಲ್ಲಿ ಹೆಚ್ಚು ಕಪ್ಪು ಬಣ್ಣವನ್ನು ಬಳಸಲಾಗಿದೆ. ಬ್ಲಾಕ್ ಬೇಲಿಗೆ ಡ್ಯಾಶ್ಬೋರ್ಡ್ ನಿಂದ ಮದ್ಯದ ಸಿಲ್ವರ್ ಕನ್ಸೋಲ್ ಟ್ರಿಮ್ ವರೆಗೂ ಎಲ್ಲವೂ ಕಪ್ಪು ಬಣ್ಣದಲ್ಲಿ ಬರುತ್ತದೆ. ಕಪ್ಪು ಬಣ್ಣವನ್ನು ಹೆಚ್ಚಾಗಿ ಬಳಸಲಾಗಿದೆ ಎನ್ನಬಹುದು. ಚಪ್ಪಟೆ ತಳ ವುಳ್ಳ ಸ್ಟಿಯರಿಂಗ್ ವೀಲ್ ಒಂದು ಒಳ್ಳೆಯ ಮತ್ತು ಆಶ್ಚರ್ಯಕರ ಬೆಳವಣಿಗೆ. ಇದು ಸ್ಪರ್ಧಾತ್ಮಕ ನೋಟಕ್ಕೆ ಪೂರಕವಾಗಿದೆ. ಗೇರ್ ಕ್ನೋಬ್, ಹ್ಯಾಂಡ್ ಬ್ರಾಕೆ ಲೀವರ್ ಮೇಲೆ ಇರುವ ಉತ್ತಮ ಲೆಥರ್ ಫಿನಿಷ್ ಆಕರ್ಷಕವಾಗಿದ್ದು , ಹೈ ಎಂಡ್ ಕಾರ್ ಎಂಬ ಭಾವನೆ ಬರುತ್ತದೆ. ಅಲ್ಯೂಮಿನಿಯಂ ಪೆಡಲ್ ಗಳು, ಡೋರ್ ಸಿಲ್ ಪ್ಲೇಟ್ ಗಳು, GT ಬ್ಯಾಡ್ಜ್ ಗಳು ಥೀಮ್ ಗೆ ಅನುಗುಣವಾಗಿದೆ ಮತ್ತು ಕ್ಯಾಬಿನ್ ಉತ್ತಮ ಅನುಭವ ಕೊಡುತ್ತದೆ.
ಎಂಜಿನ್ ಮತ್ತು ಕಾರ್ಯ ದಕ್ಷತೆ
ಮೇಲೆ ಹೇಳಿದಂತೆ GT ತಡಿ ಹೊಸ ಪೋಲೊ ನ ಎಂಜಿನ್ ಒಂದಿಗೆ ಬರುತ್ತದೆ ಹಾಗು GT ಹೆಚ್ಚು ಕಾರ್ಯದಕ್ಷತೆಗಾಗಿ ಮಾಡಲಾಗಿದ್ದು ಅದು ವೈಶಷ್ಟ್ಯತೆ ಹೊಂದಿದೆ. ಅದಕ್ಕಾಗಿ ವೊಲ್ಕ್ಸ್ ವ್ಯಾಗನ್ ಎಂಜಿನ್ ಅನ್ನು 15 PS ಹೆಚ್ಚಿನ ಪವರ್ ಹಾಗು 20 Nm ಟಾರ್ಕ್ ಕೊಡುವಂತೆ ಮಾಡಿದೆ. ಪರಿಣಾಮವಾಗಿ 1.6-ಲೀಟರ್ ನ ಹಳೆ ಎಂಜಿನ್ ನಂತೆಯೇ ಇದೆ.
ಇದರ ಪವರ್ ಡೆಲಿವರಿ ನೀರವಾಗಿದ್ದು ಇದು ಹಿಂದಿನಷ್ಟು ಜೆರ್ಕಿ ಹಾಗು ಕ್ರೇಜಿ ಯಾಗಿ ಇಲ್ಲ. ಉಪಯುಕ್ತ ಪವರ್ ಕಡಿಮೆಯೆಂದರೆ 1,600 rpm ನಲ್ಲಿ ಹಾಗು ಟರ್ಬೊ ವು 2,000 rpm ನಲ್ಲಿ ಹೆಚ್ಚು ದಕ್ಷತೆಯಾಗಿ ಕೆಲಸ ಮಾಡುತ್ತದೆ. ಎಂಜಿನ್ 4,500 rpm ನಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಮತ್ತು ಇದರ ಕಾರ್ಯತತ್ಪರತೆ 5,500rpm ನಲ್ಲಿ ಅದ್ಭುತವಾಗಿದೆ.
ಇದರ ಎಂಜಿನ್ ದೊಡ್ಡದಾಜಿ ಇದ್ದು ವ್ಯಾಪಕವಾದ ಪವರ್ ಬಂದ್ ಹೊಂದಿದೆ. ನಗರಗಳಲ್ಲಿನ ಕಡಿಮೆ rpm ನಲ್ಲಿ ಡ್ರೈವ್ ಮಾಡುವುದಕ್ಕೆ ಪರಿಶ್ರಮದಾಯಕವಾಗಿರುವುದಿಲ್ಲ ಮತ್ತು ಪಾರ್ಟ್ ಥರೋತ್ತಲೇ ಇನ್ಪುಟ್ ಗಳು ಶೀಘ್ರವಾಗಿ ವೇಗಗತಿ ಪಡೆಯುವುದಕ್ಕೆ ಸಹಕಾರಿಯಾಗಿದೆ. ಇದರ ಎಂಜಿನ್ ಇಡ್ಲಿನ್ಗ್ ನಲ್ಲಿ ಹೆಚ್ಚು ಶಬ್ದ ಹೊರಸೂಸುತ್ತದೆ. ವೇಗ ಪಡೆದ ನಂತರ ಸರಿಯಾಗುತ್ತದೆ.
ಇದರ ೫-ಸ್ಪೀಡ್ ಗೇರ್ ಬಾಕ್ಸ್ ಅನ್ನು ಉಳಿಸಿಕೊಳ್ಳಲಾಗಿದೆ ಹಾಗು ಇದು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ ಕೂಡ ಮತ್ತು DSG ಗೇರ್ ಬಾಕ್ಸ್ ಇದ್ದಿದ್ದರೆ GT TSI ನಂತೆ ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು.
ಇವೆಲ್ಲ ಹೇಳಿದ ನಂತರ ನಾವು ಹೇಳುವುದೇನೆಂದರೆ , ಟೆಸ್ಟ್ ಮಾಡುವಾಗ 1.6- ಲೀಟರ್ ಯೂನಿಟ್ ಅನ್ನು ನಾವು ಹೆಚ್ಚಾಗಿ ಮಿಸ್ ಮಾಡಿಕೊಡಿದ್ದೆವು ಎಂದು.
ಹ್ಯಾಂಡಲಿಂಗ್ ಮತ್ತು ರೈಡ್ ಕ್ವಾಲಿಟಿ
ಯಾರೆಯಾಗಲಿ ಹೆಚ್ಚು ಹಣ ಖರ್ಚು ಮಾಡಿ ಕಾರ್ ಕೊಂಡಾಗ ಹೆಚ್ಚು ಮನೋರಂಜೀತ ಪ್ರಯಾಣವನ್ನು ಬಯಸುತ್ತಾರೆ, GT ಯು ನಿರಾಶೆಯುಂಟುಮಾಡುವುದಿಲ್ಲ. ರೋಡ್ ಗ್ರಿಪ್ ಮತ್ತು ಸ್ಟೆಬಿಲಿಟಿ ಬಂಡೆಯಂತೆ ಸದೃಢವಾಗಿದೆ, ನಿಜವಾದ ಜರ್ಮನ್ ನಂತೆ. ಇದು 150 kph ವೇಗ ದಾಟಿದ ನಂತರವೂ ಶಾಂತವಾಗಿ ಮತ್ತು ಸೌಕರ್ಯಯುತವಾಗಿಯೂ ಸಾಗುತ್ತದೆ, ಇಂದಿನ ಇತರ ಎಂಟ್ರಿ ಲೆವೆಲ್ ಸೆಡಾನ್ ಗಳಿಗಿಂತ ಉತ್ತಮವಾಗಿದೆ.
ಪೋಲೊ ಒಂದು ಅವಶ್ಯಕವಾಗಿ ಹೆಚ್ಚು ಪರಿಶ್ರಮ ಪಡುವ ಕಾರ್ ಆಗಿದೆ, GT ಅದಕ್ಕೆ ಭಿನ್ನವಲ್ಲ. ಬಹಳಷ್ಟು ತಿರುವುಗಳಲ್ಲಿ ಪ್ರಯತ್ನಿಸಿ, ಇದು ಹೆಚ್ಚು ಉತ್ಸುಕವಾಗಿ ಚಲಿಸುತ್ತದೆ. ಸ್ಟಿಯರಿಂಗ್ ವೀಲ್ ಹೆಚ್ಚು ಸಂವಹನ ಪೂರಕವಾಗಿದೆ, ಮತ್ತು ಪ್ರತಿ ತಿರುವುಗಳೂ ಧನಾತ್ಮಕ ಅನುಭವ ಕೊಡುತ್ತದೆ.
ಇದರ ಸಸ್ಪನ್ಷನ್ ಅನ್ನು ಇತರ ಪೋಲೊ ಗಳಿಂದ ಮುಂದುವರೆಸಲಾಗಿದೆ, ಇದು ತಿಂಬ ಮೃದು ಮತ್ತು ಕಠಿಣದ ಮದ್ಯೆ ಇರುತ್ತದೆ. ಮತ್ತೆ ತಯಾರಾದ ಮತ್ತು ಸ್ವಲ್ಪ ಹೆಚ್ಚು ಕಠಿಣ ಸಸ್ಪೆನ್ಷನ್ ಚೆನ್ನಾಗಿರುತ್ತಿತ್ತು., ಆದರೂ ಇದರಲ್ಲೇನು ಸಮಸ್ಯೆಗಳು ಇಲ್ಲ. ಇದು ರಸ್ತೆಯ ಅಂಕು ಡೊಂಕುಗಳನ್ನು ಸಾವರಿಸುತ್ತದೆ. ಇದನ್ನು ರಸ್ತೆ ಯಾ ಎಲ್ಲ ಸ್ಥಿತಿಗಳನ್ನು ಪರಿಗಣಿಸಿ ಮಾಡಲಾಗಿದೆ. ಇದು ಒಂದು ವರ .
ಅಂತಿಮ ಅನಿಸಿಕೆ:
ಸ್ಟ್ಯಾಂಡರ್ಡ್ ಪೋಲೊ TDI ದಲ್ಲಿ ಹೊಸ ೪-ಸಿಲಿಂಡರ್ ಎಂಜಿನ್ ಇದ್ದು ಹಳೆಯದು ಮತ್ತು ಅಷ್ಟೇನು ಶಕ್ತಿಯಿಲ್ಲದ ೩-ಸಿಲಿಂಡರ್ ಯೂನಿಟ್ ಗಿಂತ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಇವೆರಡರ ಕಾರ್ಯ ದಕ್ಷತೆಯ ಅಂತರ ಬಹಳಷ್ಟು ಕಡಿಮೆ ಇದೆ. ಅರ್ಧ ಲಕ್ಷ ಕ್ಕಿಂತ ಹೆಚ್ಚಿನ ಹಣವನ್ನು ವ್ಯಯ ಮಾಡಿ GT TDI ಕೊಳ್ಳುವುದು ಹೆಚ್ಚು ಅನುಕೂಲವಿಲ್ಲದಿರಬಹುದು. ಆದರೆ ನೀವು ಒಮ್ಮೆ ಸ್ಟಿಯರಿಂಗ್ ವೀಲ್ ನ ಹಿಂದೆ ಕುಳಿತರೆ ನೀವು ಇವೆಲ್ಲವನ್ನು ಮರೆತುಬಿಡುವಿರಿ. ಇಷ್ಟು ಪರಿಣಾಮಕಾರಿ ಕಾರ್ಯ ದಕ್ಷತೆ ಮೆಚ್ಚಬೇಕೆಗಿರುವಂತಹುದು.