- + 8ಬಣ್ಣಗಳು
- + 27ಚಿತ್ರಗಳು
- ವೀಡಿಯೋಸ್
ಟೊಯೋಟಾ ಟೈಸರ್
ಟೊಯೋಟಾ ಟೈಸರ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 998 ಸಿಸಿ - 1197 ಸಿಸಿ |
ಪವರ್ | 76.43 - 98.69 ಬಿಹೆಚ್ ಪಿ |
ಟಾರ್ಕ್ | 98.5 Nm - 147.6 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
ಮೈಲೇಜ್ | 20 ಗೆ 22.8 ಕೆಎಂಪಿಎಲ್ |
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಪಾರ್ಕಿಂಗ್ ಸೆನ್ಸಾರ್‌ಗಳು
- advanced internet ಫೆಅತುರ್ಸ್
- ರಿಯರ್ ಏಸಿ ವೆಂಟ್ಸ್
- wireless charger
- ಕ್ರುಯಸ್ ಕಂಟ್ರೋಲ್
- 360 degree camera
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಟೈಸರ್ ಇತ್ತೀಚಿನ ಅಪ್ಡೇಟ್
ಟೊಯೊಟಾ ಟೈಸರ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಟೊಯೊಟಾ ಟೈಸರ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಟೊಯೊಟಾ ಸ್ಟಾರ್ಲೆಟ್ ಕ್ರಾಸ್ ಎಂಬ ಹೆಸರಿನಲ್ಲಿ ದೊಡ್ಡ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ.
ಟೊಯೊಟಾ ಟೈಸರ್‌ನ ಬೆಲೆ ಎಷ್ಟು?
ಟೊಯೊಟಾ ಟೈಸರ್‌ನ ಎಕ್ಸ್ ಶೋರೂಮ್ ಬೆಲೆ 7.74 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ. ಇದು ಮಾರುತಿ ಫ್ರಾಂಕ್ಸ್‌ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ, ವಿಶೇಷವಾಗಿ ಇದರ ಮಿಡಲ್ ವೇರಿಯೆಂಟ್‌ಗಳಲ್ಲಿ. ಆದರೆ, ಟಾಪ್-ಸ್ಪೆಕ್ ವೇರಿಯೆಂಟ್‌ಗಳು ಒಂದೇ ಬೆಲೆಯನ್ನು ಹೊಂದಿವೆ.
ಟೊಯೊಟಾ ಟೈಸರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಟೊಯೋಟಾ ಟೈಸರ್ E, S, S+, G, ಮತ್ತು V ಎಂಬ ಐದು ವೇರಿಯೆಂಟ್‌ಗಳಲ್ಲಿ ಬರುತ್ತದೆ.
ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ?
ಕಡಿಮೆ ಬಜೆಟ್‌ನಲ್ಲಿ ಉತ್ತಮ ಕಾರನ್ನು ಹುಡುಕುವವರಿಗೆ ಇದರ ಬೇಸ್ ಇ ವೇರಿಯೆಂಟ್ ಉತ್ತಮ ಆಯ್ಕೆಯಾಗಿದೆ. ಇದು ಅನೇಕ ಅಗತ್ಯ ಫೀಚರ್‌ಗಳನ್ನು ಪಡೆಯುತ್ತದೆ ಮತ್ತು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಅದಕ್ಕೆ ಮತ್ತಷ್ಟು ಆಕ್ಸಸ್ಸರಿಗಳನ್ನು ಸೇರಿಸಬಹುದು. ನೀವು ಸಿಎನ್‌ಜಿಯೊಂದಿಗೆ ಟೈಸರ್ ಅನ್ನು ಬಯಸಿದರೆ ಇದು ಏಕೈಕ ವೇರಿಯೆಂಟ್ ಆಗಿದೆ. ನೀವು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಬಯಸಿದರೆ S+ ವೇರಿಯೆಂಟ್ ಅನ್ನು ಶಿಫಾರಸು ಮಾಡುತ್ತೇವೆ. ನೀವು ಹೆಚ್ಚು ಪರ್ಫಾರ್ಮೆನ್ಸ್-ಆಧಾರಿತ ಮತ್ತು ಹೆಚ್ಚಿನ ಫೀಚರ್‌ಗಳನ್ನು ಹೊಂದಿರುವ ಪೆಟ್ರೋಲ್ ಮ್ಯಾನುಯಲ್ ಅನ್ನು ಹುಡುಕುತ್ತಿದ್ದರೆ G ವೇರಿಯೆಂಟ್ ಅನ್ನು ಆಯ್ದುಕೊಳ್ಳಬಹುದು.
ಟೊಯೊಟಾ ಟೈಸರ್ ಯಾವ ಫೀಚರ್ ಅನ್ನು ಪಡೆಯುತ್ತದೆ?
ಎಲ್‌ಇಡಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ಪ್ಲೇ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್(ಆಟೋಮ್ಯಾಟಿಕ್ ವೇರಿಯೆಂಟ್‌ಗಳಲ್ಲಿ), ಹಿಂಭಾಗದ AC ವೆಂಟ್‌ಗಳು, ಹಿಂಭಾಗದ ವೈಪರ್ ಮತ್ತು ವಾಷರ್, ಮತ್ತು ಆಟೋ ಡಿಮ್ ಆಗುವ ಒಳಭಾಗದಲ್ಲಿರುವ ರಿಯರ್‌ವ್ಯೂ ಮಿರರ್ ಮತ್ತು ಟಾಪ್ ವೇರಿಯೆಂಟ್‌ಗಳಲ್ಲಿ 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಈ ಎಲ್ಲಾ ಪ್ರಮುಖ ಫೀಚರ್‌ಗಳನ್ನು ಟೈಸರ್ ಹೊಂದಿದೆ. ಆದರೆ, ಪ್ರಸ್ತುತ ಬೇಡಿಕೆಯಿರುವ ಸನ್‌ರೂಫ್ ಅಥವಾ ವೆಂಟಿಲೇಟೆಡ್ ಸೀಟ್‌ಗಳನ್ನು ಇದು ಹೊಂದಿಲ್ಲ. ನೀವು ಟೈಸರ್‌ನ ಇಂಟಿರಿಯರ್ ಮತ್ತು ಎಕ್ಸ್‌ಟಿರಿಯರ್‌ಗೆ ಸ್ವಲ್ಪ ವಿಭಿನ್ನವಾದ ಲುಕ್ ಅನ್ನು ನೀಡಲು ಬಯಸಿದರೆ ಟೊಯೊಟಾವು ಇದಕ್ಕೆ ಕೆಲವು ಎಕ್ಸಸ್ಸರಿಗಳನ್ನು ಸಹ ನೀಡುತ್ತದೆ.
ಇದು ಎಷ್ಟು ವಿಶಾಲವಾಗಿದೆ?
ಉತ್ತಮವಾದ ಸ್ಥಳಾವಕಾಶವನ್ನು ಹೊಂದಿರುವುದರಿಂದ ಟೈಸರ್‌ನಲ್ಲಿ ಐದು ವಯಸ್ಕರನ್ನು ಆರಾಮವಾಗಿ ಕುಳಿತುಕೊಳ್ಳಬಹುದು. ಇದರ ಇಳಿಜಾರಿನ ರೂಫ್‌ಲೈನ್ 6 ಅಡಿ ಅಥವಾ ಎತ್ತರವಿರುವವರಿಗೆ ಹಿಂಭಾಗದ ಹೆಡ್‌ರೂಮ್ ಕಡಿಮೆ ಅನಿಸಬಹುದು. ಬೂಟ್ ಸ್ಪೇಸ್ 308 ಲೀಟರ್ ಆಗಿದೆ, ಇದು ದಿನನಿತ್ಯದ ಬಳಕೆಗೆ ಉತ್ತಮವಾಗಿದೆ ಆದರೆ ನೀವು ಹೆಚ್ಚಿನ ಲಗೇಜ್‌ಗಳನ್ನು ಸಾಗಿಸಿದರೆ ಸ್ವಲ್ಪ ಬಿಗಿಯಾಗಿರಬಹುದು. ಖುಷಿಯ ಸಂಗತಿಯೆಂದರೆ, ಸೀಟ್‌ಗಳನ್ನು 60:40 ಅನುಪಾತದಲ್ಲಿ ವಿಭಜಿಸಬಹುದು, ಇದು ಹಿಂದಿನ ಪ್ರಯಾಣಿಕರು ಕುಳಿತುಕೊಳ್ಳುವಾಗಲೂ ಹೆಚ್ಚುವರಿ ಲಗೇಜ್ ಅನ್ನು ಸಾಗಿಸಲು ನೀವು ಬಯಸಿದರೆ ಸಹಾಯ ಮಾಡುತ್ತದೆ.
ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಟೈಸರ್ ಫ್ರಾಂಕ್ಸ್‌ನಂತೆಯೇ ಎಂಜಿನ್ ಆಯ್ಕೆಗಳನ್ನು ಹೊಂದಿದೆ:
-
1.2-ಲೀಟರ್ ಪೆಟ್ರೋಲ್ ಎಂಜಿನ್ (90 ಪಿಎಸ್/113 ಎನ್‌ಎಮ್), ಇದು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ ಮತ್ತು E, S, ಮತ್ತು S+ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
-
ಹೊಸತಾದ ಮತ್ತು ಫಾಸ್ಟ್ ಆಗಿರುವ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100ಪಿಎಸ್/148 ಎನ್‌ಎಮ್), ಇದು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಬರುತ್ತದೆ
-
ಹೆಚ್ಚು ಮೈಲೇಜ್ ನೀಡುವ 1.2-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್ (77ಪಿಎಸ್/98.5ಎನ್‌ಎಮ್) 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದ್ದು, ಮತ್ತು ಇದು G ಮತ್ತು V ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ.
ಟೊಯೊಟಾ ಟೈಸರ್‌ನ ಮೈಲೇಜ್ ಎಷ್ಟು?
ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಗೇರ್‌ಬಾಕ್ಸ್ ಅನ್ನು ಅವಲಂಬಿಸಿರುತ್ತದೆ:
-
ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುವ 1.2-ಲೀಟರ್ ಪೆಟ್ರೋಲ್-ಸಿಎನ್‌ಜಿ ಅತ್ಯುತ್ತಮ ಮೈಲೇಜ್ ಹೊಂದಿದೆ ಎಂದು ಕ್ಲೈಮ್ ಮಾಡಲಾಗಿದ್ದು, ಪ್ರತಿ ಕೆ.ಜಿ.ಗೆ 28.5 ಕಿಮೀ.ವರೆಗೆ ಸಾಗುತ್ತದೆ.
-
ಎಎಮ್‌ಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ರೆಗುಲರ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಪ್ರತಿ ಲೀ.ಗೆ 22.8 ಕಿ.ಮೀ.ಮೈಲೇಜ್ ಹೊಂದಿದೆ ಎಂದು ಕ್ಲೈಮ್ ಮಾಡಲಾಗಿದೆ. ಇದು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಇದೇ ಎಂಜಿನ್‌ಗಿಂತ ಸ್ವಲ್ಪ ಉತ್ತಮವಾಗಿದೆ, ಮ್ಯಾನುಯಲ್ ಪ್ರತಿ ಲೀ.ಗೆ 21.7 ಕಿ.ಮೀ.ವರೆಗೆ ಸಾಗಬಲ್ಲದು.
-
1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆವೃತ್ತಿಯು ಪ್ರತಿ ಲೀ.ಗೆ 21.1 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ, ಆದರೆ 1.0-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿ ಪ್ರತಿ ಲೀ.ಗೆ 19.8 ಕಿ.ಮೀ.ನಷ್ಟು ಮೈಲೇಜ್ ಹೊಂದಿರುವ ಕನಿಷ್ಠ ಇಂಧನ ದಕ್ಷತೆಯನ್ನು ಹೊಂದಿದೆ.
ಟೊಯೊಟಾ ಟೈಸರ್ ಎಷ್ಟು ಸುರಕ್ಷಿತ?
ಟೈಸರ್ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ (ಎಲ್ಲಾ ಆವೃತ್ತಿಗಲ್ಲಿ) ಮತ್ತು ಟಾಪ್ ವೇರಿಯೆಂಟ್‌ಗಳಲ್ಲಿ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಭಾರತ್ ಎನ್‌ಸಿಎಪಿಯಲ್ಲಿ ಇದರ ಕ್ರ್ಯಾಶ್-ಟೆಸ್ಟ್ ಇನ್ನೂ ಆಗಿಲ್ಲ.
ಟೈಸರ್‌ನಲ್ಲಿ ಯಾವ ಬಣ್ಣಗಳ ಆಯ್ಕೆಗಳು ಲಭ್ಯವಿದೆ?
ಟೈಸರ್ ಐದು ಸಿಂಗಲ್ ಬಣ್ಣಗಳಲ್ಲಿ (ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಸ್ಪೋರ್ಟಿನ್ ರೆಡ್, ಗೇಮಿಂಗ್ ಗ್ರೇ, ಲುಸೆಂಟ್ ಆರೆಂಜ್) ಮತ್ತು ಕಪ್ಪು ರೂಫ್‌ನೊಂದಿಗೆ ಮೂರು ಡ್ಯುಯಲ್-ಟೋನ್ (ಸ್ಪೋರ್ಟಿನ್ ರೆಡ್, ಎಂಟೈಸಿಂಗ್ ಸಿಲ್ವರ್, ಕೆಫೆ ವೈಟ್) ಆಯ್ಕೆಗಳಲ್ಲಿ ಲಭ್ಯವಿದೆ. ಲ್ಯೂಸೆಂಟ್ ಆರೆಂಜ್ ಬಣ್ಣವನ್ನು ಟೈಸರ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ನೀಡಲಾಗಿದ್ದು ಮತ್ತು ಅತ್ಯಾಧುನಿಕ ನೋಟಕ್ಕಾಗಿ ಕಪ್ಪು ರೂಫ್‌ನೊಂದಿಗೆ ಎಂಟೈಸಿಂಗ್ ಸಿಲ್ವರ್ ಬಣ್ಣವನ್ನು ನಾವು ಶಿಫಾರಸು ಮಾಡುತ್ತೇವೆ. ಟೈಸರ್ ನೀಲಿ, ಕಪ್ಪು ಅಥವಾ ಕಂದು ಬಣ್ಣದಲ್ಲಿ ಬರುವುದಿಲ್ಲ, ಇದು ಫ್ರಾಂಕ್ಸ್‌ನಲ್ಲಿ ಲಭ್ಯವಿದೆ.
ಟೊಯೊಟಾ ಟೈಸರ್ ಅನ್ನು ಖರೀದಿಸಬಹುದೇ ?
ಈ ಕಾರಿನಲ್ಲಿ ನೀವು ತಪ್ಪನ್ನು ಹುಡುಕುವುದು ಸ್ವಲ್ಪ ಕಷ್ಟ. ಟೈಸರ್ ವಿಶಾಲವಾಗಿದೆ, ಫೀಚರ್‌ಗಳೊಂದಿಗೆ ಲೋಡ್ ಆಗಿದೆ ಮತ್ತು ಸುಗಮವಾದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಫ್ರಾಂಕ್ಸ್ ಮತ್ತು ಟೈಸರ್‌ನ ಲೋವರ್ ವೇರಿಯೆಂಟ್‌ಗಳ ನಡುವಿನ ಬೆಲೆ ವ್ಯತ್ಯಾಸವು ಕಡಿಮೆ ಇದೆ, ಆದ್ದರಿಂದ ನಿಮಗೆ ಇಷ್ಟವಾಗುವ ನೋಟ, ಬ್ರ್ಯಾಂಡ್ ಮತ್ತು ಸರ್ವೀಸ್ ಸೆಂಟರ್ ಎಷ್ಟು ಹತ್ತಿರದಲ್ಲಿದೆ ಎಂಬುದನ್ನು ಗಮನಿಸಿಕೊಂಡು ಆಯ್ಕೆ ಮಾಡಬಹುದು.
ನನಗೆ ಪ್ರತಿಸ್ಪರ್ಧಿಗಳು ಯಾವುವು ?
ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ಹೊರತುಪಡಿಸಿ, ನೀವು ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಕಿಯಾ ಸೋನೆಟ್, ರೆನಾಲ್ಟ್ ಕಿಗರ್ ಮತ್ತು ಮುಂಬರುವ ಸ್ಕೋಡಾ ಕೈಲಾಕ್‌ನಂತ ಆಯ್ಕೆಗಳನ್ನು ಪರಿಗಣಿಸಬಹುದು.
ಟೈಸರ್ ಇ(ಬೇಸ್ ಮಾಡೆಲ್)1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.7 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹7.74 ಲಕ್ಷ* | ||