• English
    • Login / Register

    Tata Tiago, Tiago EV ಮತ್ತು Tigorಗೆ ವೇರಿಯೆಂಟ್‌ ಮತ್ತು ವೇರಿಯೆಂಟ್‌ಗಳ ಸೇರ್ಪಡೆ, ಬೆಲೆಗಳಲ್ಲಿ ರೂ 30,000 ವರೆಗೆ ಏರಿಕೆ

    ಟಾಟಾ ಟಿಯಾಗೋ ಗಾಗಿ dipan ಮೂಲಕ ಜನವರಿ 14, 2025 11:31 am ರಂದು ಮಾರ್ಪಡಿಸಲಾಗಿದೆ

    • 35 Views
    • ಕಾಮೆಂಟ್‌ ಅನ್ನು ಬರೆಯಿರಿ

    ಆರಂಭಿಕ ಹಂತದ ಟಾಟಾ ಕಾರುಗಳು ದೊಡ್ಡದಾದ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್, ಆಪ್‌ಡೇಟ್‌ ಮಾಡಲಾದ ಡ್ರೈವರ್ ಡಿಸ್‌ಪ್ಲೇ ಮತ್ತು ಮೊಡೆಲ್‌ ವರ್ಷದ ಪರಿಷ್ಕರಣೆಗಳ ಭಾಗವಾಗಿ ಹೊಸ ವೇರಿಯೆಂಟ್‌ಗಳನ್ನು ಪಡೆಯುತ್ತವೆ

    Model year updates introduced to Tata Tiago, Tiago EV and Tigor

    2025 ಬಂದಿದೆ ಮತ್ತು ಹಲವು ಕಾರು ತಯಾರಕರು ತಮ್ಮ ಅಸ್ತಿತ್ವದಲ್ಲಿರುವ ಮೊಡೆಲ್‌ಗಳನ್ನು ಆಪ್‌ಡೇಟ್‌ ಮಾಡಲು ಪ್ರಾರಂಭಿಸಿದ್ದಾರೆ. ಹುಂಡೈ ಇತ್ತೀಚೆಗೆ ತನ್ನ ಕೆಲವು ಕಾರುಗಳನ್ನು ನವೀಕರಿಸಿದ ನಂತರ, ಟಾಟಾ ಟಿಯಾಗೊ, ಟಾಟಾ ಟಿಯಾಗೊ ಇವಿ ಮತ್ತು ಟಾಟಾ ಟಿಗೋರ್‌ಗಳಿಗೆ ಮೊಡೆಲ್‌ ಇಯರ್‌ನ ಆಪ್‌ಡೇಟ್‌ಗಳನ್ನು ಪರಿಚಯಿಸುವ ತಂಡಕ್ಕೆ ಈಗ ಟಾಟಾ ಸೇರಿಕೊಂಡಿದೆ. ಈ ಆಪ್‌ಡೇಟ್‌ಗಳು ಹೊಸ ಫೀಚರ್‌ಗಳನ್ನು ತಂದಿದ್ದು, ಆಯಾ ಕಾರುಗಳ ರೇಂಜ್‌ನಲ್ಲಿ ಪೂರ್ಣ ಬೆಲೆ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿವೆ. ಈ ಬದಲಾವಣೆಗಳನ್ನು ವಿವರವಾಗಿ ನೋಡೋಣ: 

    ಟಾಟಾ ಟಿಯಾಗೋ

    2025 Tata Tiago

    ಮೊದಲೇ ಹೇಳಿದಂತೆ, ಟಾಟಾ ಟಿಯಾಗೊಗೆ ಕೆಲವು ಫೀಚರ್‌ ಆಪ್‌ಡೇಟ್‌ಗಳನ್ನು ನೀಡಲಾಗಿದ್ದು, ಅದು ಈಗ ಅದನ್ನು ಹೆಚ್ಚು ಆಧುನಿಕ ಪರ್ಯಾಯವನ್ನಾಗಿ ಮಾಡಿದೆ. ಎಲ್ಲಾ ಫೀಚರ್‌ಗಳ ಪಟ್ಟಿ ಇಲ್ಲಿದೆ:

    • ಎಲ್ಇಡಿ ಹೆಡ್‌ಲೈಟ್‌ಗಳು

    • ಶಾರ್ಕ್ ಫಿನ್ ಆಂಟೆನಾ

    • ಫ್ರೀ-ಸ್ಟ್ಯಾಂಡಿಂಗ್ 10.25-ಇಂಚಿನ ಟಚ್‌ಸ್ಕ್ರೀನ್

    • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

    • ಆಪ್‌ಡೇಟ್‌ ಮಾಡಲಾದ ಡ್ರೈವರ್ ಡಿಸ್ಪ್ಲೇ

    • ಪ್ರಕಾಶಮಾನವಾದ ಟಾಟಾ ಲೋಗೋದೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್

    • ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ

    • ಹೊಸ ಫ್ಯಾಬ್ರಿಕ್ ಸೀಟ್ ಕವರ್‌

    • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

    ಫೀಚರ್‌ಗಳ ಜೊತೆಗೆ, ಟಾಟಾ ಟಿಯಾಗೊದ ಬೆಲೆ ಮತ್ತು ವೇರಿಯೆಂಟ್‌ನ ಪಟ್ಟಿಯನ್ನು ಸಹ ಪರಿಷ್ಕರಿಸಿದೆ, ಅದರ ವಿವರಗಳು ಈ ಕೆಳಗಿನಂತಿವೆ:

    ವೇರಿಯೆಂಟ್‌

    ಹಳೆಯ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    ಎಕ್ಸ್‌ಇ

    5 ಲಕ್ಷ ರೂ.

    5 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸ್‌ಎಮ್‌

    5.70 ಲಕ್ಷ ರೂ.

    5.70 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸ್‌ಟಿಒ

    5.85 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಟಿ

    6 ಲಕ್ಷ ರೂ.

    6.30 ಲಕ್ಷ ರೂ.

    30,000 ರೂ.

    ಎಕ್ಸ್‌ಟಿ ರಿಧಮ್‌

    6.40 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಟಿ ಎನ್‌ಎರ್‌ಜಿ

    6.50 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಜೆಡ್‌

    ̲

    6.90 ಲಕ್ಷ ರೂ.

    ಹೊಸ ವೇರಿಯೆಂಟ್‌

    ಎಕ್ಸ್‌ಜೆಡ್‌ ಎನ್‌ಆರ್‌ಜಿ

    7 ಲಕ್ಷ ರೂ.

    7.20 ಲಕ್ಷ ರೂ.

    20,000 ರೂ.

    ಎಕ್ಸ್‌ಜೆಡ್‌ ಪ್ಲಸ್‌

    7 ಲಕ್ಷ ರೂ.

    7.30 ಲಕ್ಷ ರೂ.

    30,000 ರೂ.

    ಎಕ್ಸ್‌ಜೆಡ್‌ಒ ಪ್ಲಸ್‌

    6.80 ಲಕ್ಷ ರೂ.

    ಸ್ಥಗಿತಗೊಂಡಿದೆ

    ಟಾಟಾ ಕಂಪನಿಯು ಎಎಮ್‌ಟಿ ವೇರಿಯೆಂಟ್‌ಗಳ ಪರಿಷ್ಕೃತ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಕೆಲವು ಮಿಡ್-ಸ್ಪೆಕ್ ಮತ್ತು ಹೈಯರ್-ಸ್ಪೆಕ್ ಟಿಯಾಗೊ ವೇರಿಯೆಂಟ್‌ಗಳ ಬೆಲೆ 30,000 ರೂ.ಗಳವರೆಗೆ ಏರಿಕೆಯಾಗಿದೆ, ಆದರೆ ಬೇಸ್-ಸ್ಪೆಕ್ ವೇರಿಯೆಂಟ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ. ಕೆಲವು ಮಿಡ್‌-ಸ್ಪೆಕ್ ಮತ್ತು ಸಂಪೂರ್ಣವಾಗಿ ಲೋಡ್ ಮಾಡಲಾದ ಎಕ್ಸ್‌ಜೆಡ್‌ಒ ಪ್ಲಸ್ ವೇರಿಯೆಂಟ್‌ಗಳನ್ನು ಸಹ ತೆಗೆದುಹಾಕಲಾಗಿದೆ.

    ಟಿಯಾಗೊದ ಸಿಎನ್‌ಜಿ ವೇರಿಯೆಂಟ್‌ಗಳ ಬೆಲೆಗಳನ್ನು ಸಹ ಪರಿಷ್ಕರಿಸಲಾಗಿದೆ, ವಿವರಗಳು ಇಲ್ಲಿವೆ:

    ವೇರಿಯೆಂಟ್‌

    ಹಳೆಯ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    ಎಕ್ಸ್‌ಇ ಸಿಎನ್‌ಜಿ

    6 ಲಕ್ಷ ರೂ.

    6 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸ್‌ಎಮ್‌ ಸಿಎನ್‌ಜಿ

    6.70 ಲಕ್ಷ ರೂ.

    6.70 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸ್‌ಟಿ ಸಿಎನ್‌ಜಿ

    7 ಲಕ್ಷ ರೂ.

    7.30 ಲಕ್ಷ ರೂ.

    30,000 ರೂ.

    ಎಕ್ಸ್‌ಟಿ ರಿಧಮ್‌ ಸಿಎನ್‌ಜಿ

    7.40 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಟಿ ಎನ್‌ಎರ್‌ಜಿ ಸಿಎನ್‌ಜಿ

    7.50 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಜೆಡ್‌ ಸಿಎನ್‌ಜಿ

    ̲

    7.90 ಲಕ್ಷ ರೂ.

    ಹೊಸ ವೇರಿಯೆಂಟ್‌

    ಎಕ್ಸ್‌ಜೆಡ್‌ ಪ್ಲಸ್‌ ಸಿಎನ್‌ಜಿ

    8 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಜೆಡ್‌ ಎನ್‌ಆರ್‌ಜಿ ಸಿಎನ್‌ಜಿ

    8 ಲಕ್ಷ ರೂ.

    8.20 ಲಕ್ಷ ರೂ.

    20,000 ರೂ.

    ರೆಗ್ಯುಲರ್‌ ಪೆಟ್ರೋಲ್ ಚಾಲಿತ ಟಿಯಾಗೊದಂತೆ, ಆರಂಭಿಕ ಹಂತದ ವೇರಿಯೆಂಟ್‌ಗಳ ಬೆಲೆಗಳು ಬದಲಾಗಿಲ್ಲ, ಆದರೆ ಮಿಡ್‌-ವೇರಿಯೆಂಟ್‌ ಎಕ್ಸ್‌ಟಿ ಸಿಎನ್‌ಜಿ ಮತ್ತು ಟಾಪ್‌-ಸ್ಪೆಕ್ ಎಕ್ಸ್‌ಜೆಡ್‌ ಎನ್‌ಆರ್‌ಜಿ ಸಿಎನ್‌ಜಿ ಬೆಲೆಗಳು 30,000 ರೂ.ಗಳವರೆಗೆ ಏರಿಕೆಯಾಗಿವೆ. ಕೆಲವು ಮಿಡ್-ಸ್ಪೆಕ್ ಮತ್ತು ಹೈಯರ್-ಸ್ಪೆಕ್ ವೇರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಾಗಿದ್ದರೂ, ಹೊಸ ಮಿಡ್-ಸ್ಪೆಕ್ ಎಕ್ಸ್‌ಜೆಡ್‌ ಸಿಎನ್‌ಜಿ ವೇರಿಯೆಂಟ್‌ ಅನ್ನು ವೇರಿಯೆಂಟ್‌ಗಳ ಪಟ್ಟಿಗೆ ಸೇರಿಸಲಾಯಿತು. ಫೀಚರ್‌ಗಳ ಆಪ್‌ಡೇಟ್‌ ಬಗ್ಗೆ ಹೇಳುವುದಾದರೆ, ಅವು ರೆಗ್ಯುಲರ್‌ ಟಿಯಾಗೊದಂತೆಯೇ ಇರುತ್ತವೆ.

    ಟಾಟಾ ಟಿಯಾಗೋ ಇವಿ

    2025 Tata Tiago EV

    ಟಿಯಾಗೊದ ಇಂಧನ ಚಾಲಿತ ಎಂಜಿನ್ (ICE) ಆವೃತ್ತಿಯಂತೆ, ಟಾಟಾ ಟಿಯಾಗೊ ಇವಿ ಕೂಡ ಕೆಲವು ಫೀಚರ್‌ಗಳ ಆಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ಆ ಫೀಚರ್‌ಗಳು ಇಲ್ಲಿವೆ:

    • ಎಲ್‌ಇಡಿ ಹೆಡ್‌ಲೈಟ್‌ಗಳು

    • ಮರುವಿನ್ಯಾಸಗೊಳಿಸಲಾದ ಗ್ರಿಲ್

    • ಹೊಸ 14-ಇಂಚಿನ ಏರೋಡೈನಾಮಿಕ್‌ ಆಗಿ ವಿನ್ಯಾಸಗೊಳಿಸಲಾದ ಅಲಾಯ್‌ ವೀಲ್‌ಗಳು

    • ಮುಂಭಾಗದ ಬಾಗಿಲುಗಳಲ್ಲಿ EV ಬ್ಯಾಡ್ಜ್

    • ಶಾರ್ಕ್ ಫಿನ್ ಆಂಟೆನಾ

    • ಫ್ರೀ-ಸ್ಟ್ಯಾಂಡಿಂಗ್ 10.25-ಇಂಚಿನ ಟಚ್‌ಸ್ಕ್ರೀನ್

    • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

    • ಆಪ್‌ಡೇಟ್‌ ಮಾಡಲಾದ ಡ್ರೈವರ್‌ ಡಿಸ್‌ಪ್ಲೇ

    • ಪ್ರಕಾಶಮಾನವಾದ ಟಾಟಾ ಲೋಗೋದೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್

    • ಹೊಸ ಕಪ್ಪು ಮತ್ತು ಬೂದು ಬಣ್ಣದ ಕ್ಯಾಬಿನ್ ಥೀಮ್

    • HD ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ

    • ಹೊಸ ಫ್ಯಾಬ್ರಿಕ್ ಸೀಟ್ ಕವರ್‌

    • ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC)

    ಟಿಯಾಗೊ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯು ಸಹ ಕೆಲವು ಬೆಲೆ ಏರಿಕೆಗಳನ್ನು ಕಂಡಿದೆ, ಅದರ ವಿವರಗಳು ಈ ಕೆಳಗಿನಂತಿವೆ:

    ವೇರಿಯೆಂಟ್‌

    ಹಳೆಯ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    ಎಕ್ಸ್‌ಇ ಎಮ್‌ಆರ್‌

    8 ಲಕ್ಷ ರೂ.

    8 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸ್‌ಟಿ ಎಮ್‌ಆರ್‌

    9 ಲಕ್ಷ ರೂ.

    9 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸ್‌ಟಿ ಎಲ್‌ಆರ್‌

    10 ಲಕ್ಷ ರೂ.

    10.14 ಲಕ್ಷ ರೂ.

    14,000 ರೂ.

    ಎಕ್ಸ್‌ಜೆಡ್‌ ಪ್ಲಸ್‌

    10.49 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಜೆಡ್‌ ಪ್ಲಸ್‌ ಟೆಕ್‌ ಲಕ್ಷುರಿ ಎಲ್‌ ಆರ್‌

    11 ಲಕ್ಷ ರೂ.

    11.14 ಲಕ್ಷ ರೂ.

    14,000 ರೂ.

    ಎಂಟ್ರಿ-ಲೆವೆಲ್‌ ವೇರಿಯೆಂಟ್‌ಗಳ ಬೆಲೆ ಹಿಂದಿನಂತೆಯೇ ಇದೆ, ಆದರೆ ಮಿಡ್‌-ಸ್ಪೆಕ್ ಎಕ್ಸ್‌ಟಿ ಎಲ್‌ಆರ್‌ ಎಲ್‌ಆರ್‌ ಮತ್ತು ಉನ್ನತ-ಸ್ಪೆಕ್ ಎಕ್ಸ್‌ಜೆಡ್‌ ಪ್ಲಸ್ ಟೆಕ್ ಲಕ್ಷುರಿ ಎಲ್‌ಆರ್‌ ಬೆಲೆಯಲ್ಲಿ 14,000 ರೂ.ವರೆಗೆ ಹೆಚ್ಚಳವಾಗಿದೆ. ಮೊಡೆಲ್‌ ಇಯರ್‌ನ ಆಪ್‌ಡೇಟ್‌ನೊಂದಿಗೆ ಟಾಪ್‌-ಸ್ಪೆಕ್ ಎಕ್ಸ್‌ಜೆಡ್‌ ಪ್ಲಸ್ ವೇರಿಯೆಂಟ್‌ ಅನ್ನು ಸ್ಥಗಿತಗೊಳಿಸಲಾಗಿದೆ. 

    ಇದನ್ನೂ ಓದಿ: 2025ರಲ್ಲಿ ಹೊಸ ವೇರಿಯೆಂಟ್‌ ಮತ್ತು ಫೀಚರ್‌ಗಳನ್ನು ಪಡೆಯಲಿರುವ Hyundai Grand i10 Nios, Venue, ಮತ್ತು Verna

    ಟಾಟಾ ಟಿಗೋರ್‌

    2025 Tata Tigor

    ಟಾಟಾ ಟಿಗೋರ್ ತನ್ನ MY 2025 ಆಪ್‌ಡೇಟ್‌ನೊಂದಿಗೆ, ಇದೇ ರೀತಿಯ ಫೀಚರ್‌ ಅನ್ನು ಸೇರ್ಪಡೆಗೊಳಿಸಿದೆ. ವಿವರಗಳು ಇಲ್ಲಿವೆ:

    • ಎಲ್ಇಡಿ ಹೆಡ್‌ಲೈಟ್‌ಗಳು

    • ಶಾರ್ಕ್ ಫಿನ್ ಆಂಟೆನಾ

    • 360-ಡಿಗ್ರಿ ಕ್ಯಾಮೆರಾ

    • ಫ್ರೀ-ಸ್ಟ್ಯಾಂಡಿಂಗ್ 10.25-ಇಂಚಿನ ಟಚ್‌ಸ್ಕ್ರೀನ್

    • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

    • ಆಪ್‌ಡೇಟ್‌ ಮಾಡಲಾದ ಡ್ರೈವರ್ ಡಿಸ್‌ಪ್ಲೇ

    • ಪ್ರಕಾಶಮಾನವಾದ ಟಾಟಾ ಲೋಗೋದೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್

    • HD ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ

    • ಹೊಸ ಫ್ಯಾಬ್ರಿಕ್ ಸೀಟ್ ಕವರ್‌

    • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

    ಇದರ ಜೊತೆಗೆ, ಬೆಲೆಗಳನ್ನು ಸಹ ಹೆಚ್ಚಿಸಲಾಗಿದೆ ಮತ್ತು ವೇರಿಯೆಂಟ್‌ ಅನ್ನು ಮರುರೂಪಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ:

    ವೇರಿಯೆಂಟ್‌

    ಹಳೆಯ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    ಎಕ್ಸ್‌ಇ

    6 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಎಮ್‌

    6.60 ಲಕ್ಷ ರೂ.

    6 ಲಕ್ಷ ರೂ.

    (-  60,000 ರೂ.)

    ಎಕ್ಸ್‌ಟಿ

    6.70 ಲಕ್ಷ ರೂ.

    ಹೊಸ ವೇರಿಯೆಂಟ್‌

    ಎಕ್ಸ್‌ಜೆಡ್‌

    7.10 ಲಕ್ಷ ರೂ.

    7.30 ಲಕ್ಷ ರೂ.

    +  20,000 ರೂ.

    ಎಕ್ಸ್‌ಜೆಡ್‌ ಪ್ಲಸ್‌

    7.80 ಲಕ್ಷ ರೂ.

    7.90 ಲಕ್ಷ ರೂ.

    +  10,000 ರೂ.

    ಎಕ್ಸ್‌ಜೆಡ್‌ ಪ್ಲಸ್‌ ಲಕ್ಷುರಿ

    8.50 ಲಕ್ಷ ರೂ.

    ಹೊಸ ವೇರಿಯೆಂಟ್‌

    6 ಲಕ್ಷ ರೂ. ಬೆಲೆಯ ಬೇಸ್-ಸ್ಪೆಕ್ ಎಕ್ಸಇ ವೇರಿಯೆಂಟ್‌ಅನ್ನು ಸ್ಥಗಿತಗೊಳಿಸಲಾಗಿದೆ, ಬೇಸ್‌ಗಿಂತ ಒಂದು ಮೇಲಿರುವ ಎಕ್ಸ್‌ಟಿ ವೇರಿಯೆಂಟ್‌ ಬೆಲೆಗಳನ್ನು 60,000 ರೂ.ಗಳಷ್ಟು ಕಡಿಮೆ ಮಾಡಲಾಗಿದೆ ಮತ್ತು ಈಗ ಅದರ ಬೆಲೆ 6 ಲಕ್ಷ ರೂ.ಗಳಷ್ಟಿದೆ. ಇದರರ್ಥ ಬೆಲೆಗಳು ಒಂದೇ ಆಗಿರುವ ಆರಂಭಿಕ ಹಂತದ ಟಿಗೋರ್ ವೇರಿಯೆಂಟ್‌ ಇಗ ಮೊದಲಿಗಿಂತ ಹೆಚ್ಚಿನ ಫೀಚರ್‌ಗಳನ್ನು ಹೊಂದಿರಬಹುದು. ಟಿಗೋರ್ ಹೊಸ ಪೂರ್ಣವಾಗಿ ಲೋಡ್ ಮಾಡಲಾದ ಎಕ್ಸ್‌ಜೆಡ್‌ ಪ್ಲಸ್ ಲಕ್ಸ್ ವೇರಿಯೆಂಟ್‌ನೊಂದಿಗೆ ಬರುತ್ತದೆ, ಇದು ಟಾಪ್-ಸ್ಪೆಕ್‌ಗಿಂತ ಹಿಂದಿನ ಎಕ್ಸ್‌ಜೆಡ್‌ ಪ್ಲಸ್ ಟ್ರಿಮ್‌ಗಿಂತ 70,000 ರೂ.ಗಳಷ್ಟು ದುಬಾರಿಯಾಗಿದೆ.

    ಸಿಎನ್‌ಜಿ ವೇರಿಯೆಂಟ್‌ಗಳಿಗೂ ಅದೇ ಫೀಚರ್‌ಗಳು ದೊರೆಯುತ್ತವೆ, ಆದರೆ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಅವುಗಳ ವಿವರಗಳು ಇಲ್ಲಿವೆ:

    ವೇರಿಯೆಂಟ್‌

    ಹಳೆಯ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    ಎಕ್ಸ್‌ಎಮ್‌ ಸಿಎನ್‌ಜಿ

    7.60 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಕ್ಸ್‌ಟಿ ಸಿಎನ್‌ಜಿ

    7.70 ಲಕ್ಷ ರೂ.

    ಹೊಸ ವೇರಿಯೆಂಟ್‌

    ಎಕ್ಸ್‌ಜೆಡ್‌ ಸಿಎನ್‌ಜಿ

    8.10 ಲಕ್ಷ ರೂ.

    8.30 ಲಕ್ಷ ರೂ.

    20,000

    ಎಕ್ಸ್‌ಜೆಡ್‌ ಪ್ಲಸ್‌ ಸಿಎನ್‌ಜಿ

    8.80 ಲಕ್ಷ ರೂ.

    8.90 ಲಕ್ಷ ರೂ.

    10,000

    ಎಕ್ಸ್‌ಜೆಡ್‌ ಪ್ಲಸ್‌ ಲಕ್ಷುರಿ ಸಿಎನ್‌ಜಿ

    9.50 ಲಕ್ಷ ರೂ.

    ಹೊಸ ವೇರಿಯೆಂಟ್‌

    ಹಿಂದಿನ ಎಕ್ಸ್‌ಎಮ್‌ ಸಿಎನ್‌ಜಿ ವೇರಿಯೆಂಟ್‌ ಅನ್ನು ಹೊಸ ಎಕ್ಸ್‌ಟಿ ಸಿಎನ್‌ಜಿ ಟ್ರಿಮ್‌ನಿಂದ ಬದಲಾಯಿಸಲಾಗಿರುವುದರಿಂದ, ಟಿಗೋರ್‌ನಲ್ಲಿ ಸಿಎನ್‌ಜಿ ಪವರ್‌ಟ್ರೇನ್‌ನ ಆಯ್ಕೆಯು 10,000 ರೂ.ಗಳಷ್ಟು ದುಬಾರಿಯಾಗಿದೆ. ಇತರ ವೇರಿಯೆಂಟ್‌ಗಳ ಬೆಲೆಗಳನ್ನು 20,000 ರೂ.ಗಳವರೆಗೆ ಹೆಚ್ಚಿಸಲಾಗಿದೆ, ಆದರೆ ಹೊಸ ಟಾಪ್-ಸ್ಪೆಕ್ ಎಕ್ಸ್‌ಜೆಡ್‌ ಪ್ಲಸ್ ಲಕ್ಸ್ ಸಿಎನ್‌ಜಿ ವೇರಿಯೆಂಟ್‌ ಅನ್ನು ವೇರಿಯೆಂಟ್‌ನ ಪಟ್ಟಿಯಲ್ಲಿ ಪರಿಚಯಿಸಲಾಗಿದೆ.

    ಮೊಡೆಲ್‌ ಇಯರ್‌ನ ಆಪ್‌ಡೇಟ್‌ನ ನಂತರ ನಂತರ ಟಿಯಾಗೊ, ಟಿಗೋರ್ ಮತ್ತು ಟಿಗೋರ್ ಇವಿಗಳಲ್ಲಿನ ಪವರ್‌ಟ್ರೇನ್ ಆಯ್ಕೆಗಳು ಬದಲಾಗಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಟಿಯಾಗೊ ಮತ್ತು ಟಿಗೋರ್‌ನ ICE ಆವೃತ್ತಿಯ ವಿವರಗಳು ಈ ಕೆಳಗಿನಂತಿವೆ:

    ಟಾಟಾ ಟಿಯಾಗೊ ಮತ್ತು ಟಿಗೋರ್

    ಎಂಜಿನ್‌

    1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

    1.2-ಲೀಟರ್ ಪೆಟ್ರೋಲ್ + ಸಿಎನ್‌ಜಿ

    ಪವರ್‌

    86 ಪಿಎಸ್‌

    73.5 ಪಿಎಸ್‌

    ಟಾರ್ಕ್‌

    113 ಎನ್‌ಎಮ್‌

    95 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    5-ಸ್ಪೀಡ್ ಮ್ಯಾನ್ಯುವಲ್‌, 5-ಸ್ಪೀಡ್ ಎಎಮ್‌ಟಿ*

    *ಎಎಮ್‌ಟಿ = ಆಟೋಮೇಟೆಡ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್

    ಟಾಟಾ ಟಿಯಾಗೊ ಇವಿಯ ಎಲೆಕ್ಟ್ರಿಕ್ ಪವರ್‌ಟ್ರೇನ್ ವಿಶೇಷಣಗಳು ಇಲ್ಲಿವೆ:

    ಬ್ಯಾಟರಿ ಪ್ಯಾಕ್‌

    19.2 ಕಿ.ವ್ಯಾಟ್‌

    24 ಕಿ,ವ್ಯಾಟ್‌

    ಎಲೆಕ್ಟ್ರಿಕ್ ಮೋಟಾರುಗಳ ಸಂಖ್ಯೆ

    1

    1

    ಪವರ್‌

    61 ಪಿಎಸ್‌

    75 ಪಿಎಸ್‌

    ಟಾರ್ಕ್‌

    110 ಎನ್‌ಎಮ್‌

    114 ಎನ್‌ಎಮ್‌

    ಕ್ಲೈಮ್ ಮಾಡಲಾದ ರೇಂಜ್‌ (MIDC 1+2)

    221 ಕಿ.ಮೀ.

    275 ಕಿ.ಮೀ.

    ಟಾಟಾ ಟಿಯಾಗೊ ಕಾರು ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ ಆರ್ ಮತ್ತು ಸಿಟ್ರೊಯೆನ್ ಸಿ3 ಕಾರುಗಳಿಗೆ ಪೈಪೋಟಿ ನೀಡಿದರೆ, ಟಾಟಾ ಟಿಯಾಗೊ ಇವಿ ಕಾರು ಸಿಟ್ರೊಯೆನ್ ಇಸಿ3 ಮತ್ತು ಎಂಜಿ ಕಾಮೆಟ್ ಇವಿ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಮತ್ತೊಂದೆಡೆ, ಟಿಗೋರ್ ಸೆಡಾನ್‌ ಸೆಗ್ಮೆಂಟ್‌ನಲ್ಲಿ ಹೋಂಡಾ ಅಮೇಜ್, ಮಾರುತಿ ಡಿಜೈರ್ ಮತ್ತು ಹುಂಡೈ ಔರಾ ಕಾರುಗಳೊಂದಿಗೆ ಪೈಪೋಟಿ ನಡೆಸುತ್ತದೆ.

    ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on Tata ಟಿಯಾಗೋ

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience