- + 23ಚಿತ್ ರಗಳು
- + 5ಬಣ್ಣಗಳು
ಟೊಯೋಟಾ ರೂಮಿಯನ್
change carಟೊಯೋಟಾ ರೂಮಿಯನ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1462 cc |
ಪವರ್ | 86.63 - 101.64 ಬಿಹೆಚ್ ಪಿ |
torque | 121.5 Nm - 136.8 Nm |
ಆಸನ ಸಾಮರ್ಥ್ಯ | 7 |
ಟ್ರಾನ್ಸ ್ಮಿಷನ್ | ಆಟೋಮ್ಯಾಟಿಕ್ / ಮ್ಯಾನುಯಲ್ |
ಫ್ಯುಯೆಲ್ | ಪೆಟ್ರೋಲ್ / ಸಿಎನ್ಜಿ |
- touchscreen
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ರಿಯರ್ ಏಸಿ ವೆಂಟ್ಸ್
- ಹಿಂಭಾಗ seat armrest
- tumble fold ಸೀಟುಗಳು
- ಪಾರ್ಕಿಂಗ್ ಸೆನ್ಸಾರ್‌ಗಳು
- ಕ್ರುಯಸ್ ಕಂಟ್ರೋಲ್
- ಹಿಂಭಾಗದ ಕ್ಯಾಮೆರಾ
- key ವಿಶೇಷಣಗಳು
- top ವೈಶಿಷ್ಟ್ಯಗಳು
ರೂಮಿಯನ್ ಇತ್ತೀಚಿನ ಅಪ್ಡೇಟ್
ಟೊಯೋಟಾ ರೂಮಿಯಾನ್ ಕುರಿತ ಇತ್ತೀಚಿನ ಆಪ್‌ಡೇಟ್ ಯಾವುದು?
ಟೊಯೊಟಾ ರೂಮಿಯಾನ್‌ನ ಲಿಮಿಟೆಡ್-ರನ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ, ಇದು ಎಲ್ಲಾ ವೇರಿಯೆಂಟ್‌ಗಳಿಗೆ 20,608 ರೂ ಮೌಲ್ಯದ ಕಾಂಪ್ಲಿಮೆಂಟರಿ ಆಕ್ಸಸ್ಸರಿಗಳನ್ನು ನೀಡುತ್ತದೆ. ಆದರೆ, ಇದು ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲಭ್ಯವಿದೆ.
ಟೊಯೊಟಾ ರೂಮಿಯಾನ್‌ನ ಬೆಲೆ ಎಷ್ಟು?
ಟೊಯೊಟಾ ರೂಮಿಯನ್‌ನ ಬೇಸ್-ಸ್ಪೆಕ್ ಎಸ್ ವೇರಿಯೆಂಟ್‌ನ ಬೆಲೆ 10.44 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಸ್ಪೆಕ್ ವಿ ವೇರಿಯೆಂಟ್‌ನ ಬೆಲೆ 13.73 ಲಕ್ಷ ರೂ.ವರೆಗೆ ಇದೆ.
ಟೊಯೋಟಾ ರೂಮಿಯಾನ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ರೂಮಿಯಾನ್ S, G, ಮತ್ತು V ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸಿಎನ್‌ಜಿ ಆಯ್ಕೆಯನ್ನು ಎಂಟ್ರಿ-ಲೆವೆಲ್ ಆದ S ವೇರಿಯೆಂಟ್‌ನೊಂದಿಗೆ ನೀಡಲಾಗುತ್ತದೆ.
ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಯಾವುದು ?
ರೂಮಿಯಾನ್‌ನ ಮಿಡ್-ಸ್ಪೆಕ್ ಜಿ ವೇರಿಯೆಂಟ್ ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಆಗಿದೆ. 11.60 ಲಕ್ಷ ರೂ.ನಿಂದ ಇದರ ಬೆಲೆಗಳು ಪ್ರಾರಂಭವಾಗುತ್ತಿದ್ದು, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್ ಎಸಿ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಕೆಲವು ಕನೆಕ್ಟೆಡ್ ಕಾರ್ ಫೀಚರ್‌ಗಳಂತಹ ಸೌಲಭ್ಯಗಳನ್ನು ನೀಡುತ್ತದೆ. ಸುರಕ್ಷತೆಯ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ. G ವೇರಿಯೆಂಟ್ ಅನ್ನು ಮ್ಯಾನುಯಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಹೊಂದಬಹುದು.
ರುಮಿಯಾನ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಟೊಯೊಟಾ ರೂಮಿಯಾನ್‌ನ ಫೀಚರ್‌ನ ಹೈಲೈಟ್‌ಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಒಳಗೊಂಡಿದೆ. ಇದು ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ ಮತ್ತು ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ.
ಇದು ಎಷ್ಟು ವಿಶಾಲವಾಗಿದೆ?
ಎರಡನೇ ಸಾಲಿನ ಮಧ್ಯದ ಪ್ರಯಾಣಿಕರಿಗೆ ಹೆಡ್‌ರೆಸ್ಟ್ ಇಲ್ಲ ಎಂಬುವುದನ್ನು ಹೊರತುಪಡಿಸಿ, ರೂಮಿಯನ್ ಇಬ್ಬರು ಅಥವಾ ಮೂವರು ಪ್ರಯಾಣಿಕರಿಗೆ ಆರಾಮದಾಯಕ ಆಸನವನ್ನು ನೀಡುತ್ತದೆ. ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದೆ, ಮತ್ತು ಆಸನಗಳು ತುಂಬಾ ಬೆಂಬಲವನ್ನು ನೀಡುತ್ತವೆ. ಮೂರನೇ ಸಾಲಿನ ಬಗ್ಗೆ ಹೇಳುವುದಾದರೆ, ಪ್ರವೇಶ ಮತ್ತು ಹೊರಹೋಗುವಿಕೆ ಅನುಕೂಲಕರವಾಗಿಲ್ಲ, ಆದರೆ ಒಮ್ಮೆ ನೀವು ಅದರ ಒಳಗೆ ಹೋದ ಮೇಲೆ ಅದು ಉಪಯುಕ್ತ ಮತ್ತು ಆರಾಮದಾಯಕವಾಗಿದೆ. ಆದರೆ, ಕೊನೆಯ ಸಾಲಿನಲ್ಲಿ ತೊಡೆಯ ಸಪೋರ್ಟ್‌ನಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ.
ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ರೂಮಿಯಾನ್ 1.5-ಲೀಟರ್ ಪೆಟ್ರೋಲ್ ಎಂಜಿನ್ (103 ಪಿಎಸ್/137 ಎನ್‌ಎಮ್) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಕಡಿಮೆ ಔಟ್‌ಪುಟ್‌ನೊಂದಿಗೆ (88 ಪಿಎಸ್ ಮತ್ತು 121.5 ಎನ್‌ಎಮ್) ಸಿಎನ್‌ಜಿ ವೇರಿಯೆಂಟ್ ಅನ್ನು 5-ಸ್ಪೀಡ್ ಅಟೋಮ್ಯಾಟಿಕ್ ಮ್ಯಾನುವಲ್‌ನೊಂದಿಗೆ ಜೋಡಿಸಲಾಗಿದೆ.
ಟೊಯೊಟಾ ರೂಮಿಯಾನ್‌ನ ಮೈಲೇಜ್ ಎಷ್ಟು?
ರೂಮಿಯಾನ್‌ನ ಕ್ಲೈಮ್ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:
-
ಪೆಟ್ರೋಲ್ ಮ್ಯಾನುವಲ್: ಪ್ರತಿ ಲೀ.ಗೆ 20.51 ಕಿ.ಮೀ
-
ಪೆಟ್ರೋಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 20.11 ಕಿ.ಮೀ
-
ಸಿಎನ್‌ಜಿ: ಪ್ರತಿ ಕೆ.ಜಿ.ಗೆ 26.11 ಕಿ.ಮೀ
ಟೊಯೋಟಾ ರೂಮಿಯಾನ್ ಎಷ್ಟು ಸುರಕ್ಷಿತವಾಗಿದೆ?
ರೂಮಿಯಾನ್‌ನಲ್ಲಿನ ಪ್ರಮಾಣಿತ ಸುರಕ್ಷತಾ ಫೀಚರ್‌ಗಳು ಎರಡು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ISOFIX ಮೌಂಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಒಳಗೊಂಡಿದೆ. ಟಾಪ್-ಸ್ಪೆಕ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳು, ಮುಂಭಾಗದ ಫಾಗ್ ಲ್ಯಾಂಪ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಪ್ರೀಮಿಯಂ ಫೀಚರ್‌ಗಳನ್ನು ಸೇರಿಸುತ್ತವೆ.
ಸುರಕ್ಷತಾ ಸ್ಕೋರ್‌ಗೆ ಸಂಬಂಧಿಸಿದಂತೆ, BNCAP ಇದನ್ನು ಇನ್ನೂ ಕ್ರ್ಯಾಶ್ ಪರೀಕ್ಷೆ ಮಾಡಿಲ್ಲ, ಆದರೆ ಅದರ ಮಾರುತಿ ಆವೃತ್ತಿಯು 2019 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ 3 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.
ಎಷ್ಟು ಬಣ್ಣಗಳ ಆಯ್ಕೆಗಳಿವೆ?
ಇದು ಸ್ಪಂಕಿ ಬ್ಲೂ, ರಸ್ಟಿಕ್ ಬ್ರೌನ್, ಐಕಾನಿಕ್ ಗ್ರೇ, ಕೆಫೆ ವೈಟ್ ಮತ್ತು ಎಂಟೈಸಿಂಗ್ ಸಿಲ್ವರ್ ಎಂಬ ಐದು ಮೊನೊಟೋನ್ ಬಣ್ಣಗಳಲ್ಲಿ ಬರುತ್ತದೆ.
ನಾವು ವಿಶೇಷವಾಗಿ, ರೂಮಿಯನ್‌ನ ರಸ್ಟಿಕ್ ಬ್ರೌನ್ ಬಣ್ಣವನ್ನು ಇಷ್ಟಪಡುತ್ತೇವೆ.
ನೀವು ಟೊಯೋಟಾ ರೂಮಿಯನ್ ಖರೀದಿಸಬಹುದೇ ?
ಟೊಯೊಟಾ ರೂಮಿಯಾನ್ ಒಂದು ಸುಂದರ ಎಮ್‌ಪಿವಿಯಾಗಿರುವುದರಿಂದ, ಜಾಗ ಮತ್ತು ಪ್ರಾಯೋಗಿಕತೆಯ ವಿಷಯವಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಇದು ಆರಾಮದಾಯಕ ಆಸನ ಅನುಭವವನ್ನು ನೀಡುತ್ತದೆ, ಮತ್ತು ಒಪ್ಶನಲ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಉತ್ತಮ ಮತ್ತು ಮೃದುವಾದ ಡ್ರೈವಿಬಿಲಿಟಿಯನ್ನು ನೀಡುತ್ತದೆ, ಮತ್ತು ಇದರ ವಿಶ್ವಾಸಾರ್ಹತೆಯು ಇದನ್ನು ಜನಸಂದಣಿಯಿಂದ ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ನೀವು ನಿಮ್ಮ ಕುಟುಂಬಕ್ಕೆ 15 ಲಕ್ಷ ರೂ.ಗಳಲ್ಲಿ ಆರಾಮದಾಯಕವಾದ 7-ಸೀಟರ್ ಎಮ್‌ಪಿವಿಯನ್ನು ಹುಡುಕುತ್ತಿದ್ದರೆ, ಟೊಯೋಟಾ ರೂಮಿಯನ್‌ಗಿಂತ ಹೆಚ್ಚಿನದನ್ನು ಹುಡುಕಬೇಡಿ.
ಟೊಯೊಟಾ ಎರ್ಟಿಗಾಗೆ ಪರ್ಯಾಯಗಳು ಯಾವುವು?
ಟೊಯೊಟಾ ರೂಮಿಯಾನ್ ಮಾರುತಿ ಎರ್ಟಿಗಾ ಮತ್ತು ಕಿಯಾ ಕ್ಯಾರೆನ್ಸ್‌ಗಳೊಂದಿಗೆ ಸ್ಪರ್ಧಿಸುತ್ತದೆ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾ, ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊದಂತಹ ದೊಡ್ಡ ಎಂಪಿವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
ರೂಮಿಯನ್ ಎಸ್(ಬೇಸ್ ಮಾಡೆಲ್) ಅಗ್ರ ಮಾರಾಟ 1462 cc, ಮ್ಯಾನುಯಲ್, ಪೆಟ್ರೋಲ್, 20.51 ಕೆಎಂಪಿಎಲ್2 months waiting | Rs.10.44 ಲಕ್ಷ* | ||
ರೂಮಿಯನ್ ಎಸ್ ಸಿಎನ್ಜಿ ಅಗ್ರ ಮಾರಾಟ 1462 cc, ಮ್ಯಾನುಯಲ್, ಸಿಎನ್‌ಜಿ, 26.11 ಕಿಮೀ / ಕೆಜಿ2 months waiting | Rs.11.39 ಲಕ್ಷ* | ||