ನಿಮ್ಮ ಹತ್ತಿರದ Toyota ಶೋರೂಮ್ ಗಳಿಗೆ ತಲುಪಿದ Rumion MPV
ಟೊಯೋಟಾ ರೂಮಿಯನ್ ಗಾಗಿ tarun ಮೂಲಕ ಸೆಪ್ಟೆಂಬರ್ 01, 2023 04:44 pm ರಂದು ಪ್ರಕಟಿಸಲಾಗಿದೆ
- 68 Views
- ಕಾಮೆಂಟ್ ಅನ್ನು ಬರೆಯಿರಿ
ಇದನ್ನು ಮಾರುತಿ ಎರ್ಟಿಗಾ ಕಾರಿನ ಪ್ರತಿಸ್ಪರ್ಧಿ ಎಂದು ಮತ್ತೊಮ್ಮೆ ಗುರುತಿಸಲಾಗಿದ್ದರೂ, ಒಳಗೆ ಮತ್ತು ಹೊರಗೆ ಆಕರ್ಷಕ ಹೊಂದಾಣಿಕೆಗಳನ್ನು ಮಾಡಿಕೊಂಡಿರುವ ಕಾರಣ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.
- ರುಮಿಯನ್ ಕಾರು ದೇಶದಾದ್ಯಂತ ಕೆಲವು ಡೀಲರ್ ಶಿಪ್ ಗಳನ್ನು ತಲುಪಿದೆ.
- ಎರ್ಟಿಗಾಕ್ಕೆ ಹೋಲಿಸಿದರೆ ಸ್ವಲ್ಪ ಭಿನ್ನ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸಗಳನ್ನು ಹೊಂದಿದೆ.
- 7 ಇಂಚಿನ ಟಚ್ ಸ್ಕ್ರೀನ್ ಸಿಸ್ಟಂ, ಸ್ವಯಂಚಾಲಿತ ಎ.ಸಿ, ನಾಲ್ಕರ ತನಕ ಏರ್ ಬ್ಯಾಗುಗಳು ಮತ್ತು ಹಿಂದುಗಡೆಯ ಕ್ಯಾಮರಾವನ್ನು ಹೊಂದಿದೆ.
- ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ನೊಂದಿಗೆ 1.5 ಲೀಟರಿನ ಪೆಟ್ರೋಲ್ ಎಂಜಿನ್ ಜೊತೆಗೆ ಬರುತ್ತದೆ; ಸಿ.ಎನ್.ಜಿ ಸಹ ಲಭ್ಯ.
- ರೂ. 10.29 ರಿಂದ ರೂ. 13.68 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ).
ಟೊಯೊಟಾ ರುಮಿಯನ್ ಕಾರನ್ನು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಈಗಲಾಗಲೇ ಕೆಲವೊಂದು ಡೀಲರ್ ಶಿಪ್ ಗಳಿಗೆ ತಲುಪಿದೆ. ಈ ಮಾದರಿಯನ್ನು ಟಾಪ್ - ಸ್ಪೆಕ್ V ವೇರಿಯಂಟ್ ಆಗಿ ಬಿಂಬಿಸಲಾಗಿದ್ದು, ಇದರಲ್ಲಿ ಅಲೋಯ್ ವೀಲ್ ಗಳು ಮತ್ತು ಅಟೋಮ್ಯಾಟಿಕ್ ಪ್ರಾಜೆಕ್ಟರ್ ಹೆಡ್ ಲೈಟುಗಳ ಉಪಸ್ಥಿತಿಯನ್ನು ಈಗಾಗಲೇ ದೃಢೀಕರಿಸಲಾಗಿದೆ. ಈ ವಾಹನದ ಬುಕಿಂಗ್ ಈಗಲೇ ಚಾಲ್ತಿಯಲ್ಲಿದ್ದು, ಸೆಪ್ಟೆಂಬರ್ 8ರಿಂದ ವಿತರಣೆಯು ಪ್ರಾರಂಭಗೊಳ್ಳಲಿದೆ.
ರುಮಿಯನ್ ಕಾರು ಎರ್ಟಿಗಾದ ನವೀನ ಆವೃತ್ತಿ ಎನಿಸಿದ್ದು ಟೊಯೊಟಾ-ಸುಝುಕಿ ಸಹಭಾಗಿತ್ವದ ನಾಲ್ಕನೇ ನವೀನ ಆವೃತ್ತಿ ಎನಿಸಿದೆ. ಆದರೆ ಇದು ಭಿನ್ನವಾದ ಮುಂದಿನ ನೋಟ ಮತ್ತು ಅಲೋಯ್ ವೀಲ್ ಗಳ ಮೂಲಕ ಮಾರುತಿ MPV ಯಿಂದ ತನ್ನ ಭಿನ್ನತೆಯನ್ನು ಕಾಯ್ದುಕೊಂಡಿದೆ. ಒಳಾಂಗಣ ವಿನ್ಯಾಸವು ಹಿಂದಿನಂತೆಯೇ ಇದ್ದರೂ, ಹೊಸ ಡ್ಯುವಲ್ ಟೋನ್ ಸೀಟ್ ಫ್ಯಾಬ್ರಿಕ್ ಮತ್ತು ಡ್ಯಾಶ್ ಬೋರ್ಡಿಗೆ ಸ್ವಲ್ಪ ಭಿನ್ನವಾದ ವುಡನ್ ಟ್ರಿಮ್ ಪಡೆಯುವ ಮೂಲಕ ಭಿನ್ನತೆಯನ್ನು ಕಾಯ್ದುಕೊಂಡಿದೆ.
ಅಟೋ ಪ್ರೊಜೆಕ್ಟರ್ ಹೆಡ್ ಲೈಟುಗಳು, 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಅಟೋಮ್ಯಾಟಿಕ್ ಎ.ಸಿ, ಎಂಜಿನ್ ಸ್ಟಾರ್ಟ್ - ಸ್ಟಾಪ್ ಬಟನ್, ಮತ್ತು ಕ್ರೂಸ್ ಕಂಟ್ರೋಲ್ ಇತ್ಯಾದಿ ವೈಶಿಷ್ಟ್ಯಗಳನ್ನು ಈ ರುಮಿಯನ್ ಕಾರು ಹೊತ್ತು ತರಲಿದೆ. ನಾಲ್ಕು ಏರ್ ಬ್ಯಾಗುಗಳು, ಹಿಲ್ ಹೋಲ್ಡ್ ಅಸಿಸ್ಟ್ ಜೊತೆಗೆ ಇ.ಪಿ.ಎಸ್, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಗಳ ಮೂಲಕ ಸುರಕ್ಷತೆಗೆ ಒತ್ತು ನೀಡಲಾಗಿದೆ.
ಇದನ್ನು ಸಹ ಓದಿರಿ: ಟೊಯೊಟಾ ಇನೋವಾ ಹೈಕ್ರಾಸ್ ಸ್ಟ್ರಾಂಗ್ ಹೈಬ್ರಿಡ್ ಅನ್ನು ಫ್ಲೆಕ್ಸ್ ಫ್ಯೂಯೆಲ್ ಮಾದರಿಯಾಗಿ ಮಾಡಲು ಮಾಡಲಾದ 7 ಬದಲಾವಣೆಗಳು ಇಲ್ಲಿವೆ
ಇದು ಎರ್ಟಿಗಾ ಕಾರು ಹೊಂದಿರುವಂತೆಯೇ 1.5-ಲೀಟರ್ ಸಾಮರ್ಥ್ಯದ (103PS/137Nm) ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಲಭ್ಯವಿರುವ ಟ್ರಾನ್ಸ್ ಮಿಶನ್ ಆಯ್ಕೆಗಳೆಂದರೆ 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಅಟೋಮ್ಯಾಟಿಕ್. ನೀವು CNG ಪವರ್ ಟ್ರೇನ್ (88PS/121.5Nm) ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು. ಇದು 26.11 km/kg ತನಕದ ದಕ್ಷತೆಯನ್ನು ನೀಡುತ್ತದೆ ಎನ್ನಲಾಗಿದೆ.
ರುಮಿಯನ್ ಕಾರು ರೂ. 10.29 ರಿಂದ ರೂ. 13.68 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ). ಟೊಯೊಟಾ MPV ವಾಹನಕ್ಕೆ ಇರುವ ಬದಲಿ ಆಯ್ಕೆಗಳೆಂದರೆ ಕಿಯಾ ಕರೆನ್ಸ್, ಮಹೀಂದ್ರಾ ಮರಾಜೊ, ಮತ್ತು ಮಾರುತಿ ಎರ್ಟಿಗಾ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ರುಮಿಯನ್ ಕಾರಿನ ಆನ್ - ರೋಡ್ ಬೆಲೆ