ಹೆಚ್ಚುತ್ತಿರುವ ಡಿಮ್ಯಾಂಡ್: ತಾತ್ಕಾಲಿಕವಾಗಿ ರುಮಿಯಾನ್ ಸಿಎನ್‌ಜಿಯ ಬುಕಿಂಗ್ ಸ್ಥಗಿತಗೊಳಿಸಿದ ಟೊಯೊಟಾ
ಟೊಯೋಟಾ ರೂಮಿಯನ್ ಗಾಗಿ rohit ಮೂಲಕ ಸೆಪ್ಟೆಂಬರ್ 26, 2023 02:17 pm ರಂದು ಪ್ರಕಟಿಸಲಾಗಿದೆ
- 82 Views
- ಕಾಮೆಂಟ್ ಅನ್ನು ಬರೆಯಿರಿ
"ಅತ್ಯಧಿಕ ಬೇಡಿಕೆ" ಯನ್ನು ಪಡೆದುಕೊಳ್ಳುತ್ತಿರುವ ಎಸ್‌ಯುವಿಯ ವೇಟಿಂಗ್ ಸಮಯವನ್ನು ನಿಯಂತ್ರಿಸಲು ರುಮಿಯಾನ್ ಸಿಎನ್‌ಜಿಯ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಟೊಯೊಟಾ ಹೇಳಿದೆ.
- ಟೊಯೊಟಾ ಆಗಸ್ಟ್ 2023 ರಲ್ಲಿ ಭಾರತದಲ್ಲಿ ಮಾರುತಿ ಎರ್ಟಿಗಾ ಆಧಾರಿತ ರುಮಿಯಾನ್ ಅನ್ನು ಪರಿಚಯಿಸಿತು.
- ಎಂಪಿವಿಯು S, G ಮತ್ತು V ಎಂಬ ಮೂರು ವಿಶಾಲ ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.
- ಟೊಯೊಟಾ ರುಮಿಯಾನ್ 88PS 1.5-ಲೀಟರ್ ಪೆಟ್ರೋಲ್+ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ದೊರೆಯಲಿದೆ.
- ಇದರ ಫೀಚರ್‌ಗಳಲ್ಲಿ ಮ್ಯಾನ್ಯುವಲ್ ಎಸಿ, ಕೀಲೆಸ್ ಎಂಟ್ರಿ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಸೇರಿವೆ.
- ಪೆಟ್ರೋಲ್ ವೇರಿಯಂಟ್‌ಗಳ ಬುಕಿಂಗ್‌ಗಳನ್ನು ಈಗಲೂ ಸ್ವೀಕರಿಸಲಾಗುತ್ತಿದೆ
ಮಾರುತಿ ಎರ್ಟಿಗಾ ಆಧಾರಿತ ಟೊಯೊಟಾ ರುಮಿಯಾನ್ ಎಂಪಿವಿಯನ್ನು ಆಗಸ್ಟ್ 2023 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ವಾಹನವು S, G ಮತ್ತು V ಎಂಬ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಈ ಎಂಪಿವಿ ಕಾರು ಎರ್ಟಿಗಾದಲ್ಲಿರುವಂತಹುದೇ ಎಂಜಿನ್ ಆಯ್ಕೆಗಳ ಜೊತೆಗೆ ಇದು ಐಚ್ಛಿಕ ಸಿಎನ್‌ಜಿ ಕಿಟ್ ಅನ್ನು ಸಹ ಒಳಗೊಂಡಿದೆ. ಹೆಚ್ಚಿನ ಬೇಡಿಕೆಯ ಕಾರಣದಿಂದಾಗಿ, ಕಂಪನಿಯು ಈಗ ಕೆಲವು ಸಮಯದವರೆಗೆ ರುಮಿಯಾನ್‌ನ ಸಿಎನ್‌ಜಿ ವೇರಿಯಂಟ್ ನ ಬುಕಿಂಗ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಆದರೆ, ಅದರ ಪೆಟ್ರೋಲ್ ವೇರಿಯಂಟ್‌ಗಳ ಬುಕಿಂಗ್ ಅನ್ನು ಸ್ವೀಕರಿಸಲಾಗುತ್ತಿದೆ.
ಟೊಯೊಟಾ ಏನು ಹೇಳುತ್ತದೆ?
“ನಾವು ಈ ವರ್ಷದ ಆಗಸ್ಟ್‌ನಲ್ಲಿ ಹೊಸ ಟೊಯೊಟಾ ರುಮಿಯಾನ್ ಕಾರನ್ನು ಬಿಡುಗಡೆ ಮಾಡಿದಾಗಿನಿಂದ, ಬಿ-ಎಂಪಿವಿ ವಿಭಾಗದಲ್ಲಿ ಟೊಯೊಟಾ ವಾಹನಕ್ಕಾಗಿ ಕಾಯುತ್ತಿರುವ ಗ್ರಾಹಕರಿಂದ ನಮಗೆ ಅಗಾಧ ಪ್ರತಿಕ್ರಿಯೆ ದೊರಕಿದೆ. ಹೊಸ ಟೊಯೊಟಾದ ಬುಕಿಂಗ್ ಅಂಕಿಅಂಶಗಳು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿವೆ. ರುಮಿಯಾನ್ ನಮ್ಮ ನಿರೀಕ್ಷೆಗಳನ್ನು ಮೀರಿ ಬೇಡಿಕೆಯನ್ನು ಪಡೆದಿದೆ, ಇದರ ಪರಿಣಾಮವಾಗಿ ಎಲ್ಲಾ ವೇರಿಯಂಟ್‌ಗಳ (ವಿಶೇಷವಾಗಿ ಸಿಎನ್‌ಜಿ ಆಯ್ಕೆ) ಡೆಲಿವರಿಗೆ ಹೆಚ್ಚಿನ ಸಮಯ ಅಗತ್ಯವಾಗಿದೆ. ದೀರ್ಘ ವೇಟಿಂಗ್ ಅವಧಿಯಿಂದಾಗಿ, ಸಿಎನ್‌ಜಿ ವೇರಿಯಂಟ್‌ಗಳ ಬುಕಿಂಗ್ ಅನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗಿದೆ. ಆದರೆ, ನಾವು ಟೊಯೊಟಾ ರುಮಿಯಾನ್ ಎಂಪಿವಿಯ ಪೆಟ್ರೋಲ್ ವೇರಿಯಂಟ್‌ನ ಬುಕಿಂಗ್ ಸ್ವೀಕರಿಸುವುದನ್ನು ಮುಂದುವರಿಸುತ್ತೇವೆ.”
ರುಮಿಯಾನ್ ಸಿಎನ್‌ಜಿ ವೇರಿಯಂಟ್ ಕುರಿತು
ಟೊಯೊಟಾ ರುಮಿಯಾನ್ ಸಿಎನ್‌ಜಿಯನ್ನು ಕೇವಲ ಬೇಸ್-ಸ್ಪೆಕ್ S ವೇರಿಯಂಟ್‌ನಲ್ಲಿ ನೀಡುತ್ತದೆ, ಆದರೆ ಎರ್ಟಿಗಾದಲ್ಲಿ ಸಿಎನ್‌ಜಿ ಆಯ್ಕೆಯನ್ನು ಎರಡು ವೇರಿಯಂಟ್‌ಗಳಲ್ಲಿ ನೀಡಲಾಗುತ್ತದೆ. ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು, ಫುಲ್ ವ್ಹೀಲ್ ಕವರ್‌ಗಳು, ಮ್ಯಾನ್ಯುವಲ್ ಎಸಿ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಮತ್ತು ಕೀಲೆಸ್ ಎಂಟ್ರಿಯಂತಹ ಫೀಚರ್‌ಗಳನ್ನು ರುಮಿಯಾನ್ S ಸಿಎನ್‌ಜಿ ಹೊಂದಿದೆ.
ಪ್ರಯಾಣಿಕರ ಸುರಕ್ಷತೆಗಾಗಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್ (ಸೀಟುಗಳ ಎರಡನೇ ಸಾಲಿಗೆ ಮಾತ್ರ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಹಿಲ್-ಹೋಲ್ಡ್ ಅಸಿಸ್ಟ್‌ನಂತಹ ಫೀಚರ್‌ಗಳನ್ನು ಹೊಂದಿದೆ. ರುಮಿಯಾನ್ ಸಿಎನ್‌ಜಿ ಎಂಪಿವಿ ಬೆಲೆ 11.24 ಲಕ್ಷ ರೂಪಾಯಿಗಳಾಗಿದೆ. ಇದು ಮಾರುತಿ ಎರ್ಟಿಗಾ ಸಿಎನ್‌ಜಿ ಅನ್ನು ಹೊರತುಪಡಿಸಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ.
ಇದನ್ನೂ ಓದಿ: ಟೊಯೊಟಾ ಕ್ಯಾಮ್ರಿ vs ಫಾರ್ಚುನರ್ ಲೆಜೆಂಡರ್: ಎರಡು ಕಾರುಗಳ ನಡುವಿನ ವ್ಯತ್ಯಾಸಗಳು ಮತ್ತು ಹೋಲಿಕೆಗಳು
ಪವರ್‌ಟ್ರೇನ್
ಟೊಯೊಟಾ ರುಮಿಯಾನ್ S ಸಿಎನ್‌ಜಿ ಸಾಮಾನ್ಯ ವೇರಿಯಂಟ್‌ಗಳಲ್ಲಿರುವಂತಹುದೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಆದರೆ ಈ ಎಂಜಿನ್ ಹಸಿರು ಇಂಧನದೊಂದಿಗೆ 88PS ಮತ್ತು 121.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಕೇವಲ 5-ಸ್ಪೀಡ್ MT ಗೇರ್‌ಬಾಕ್ಸ್ ಅನ್ನು ಎಂಜಿನ್‌ನೊಂದಿಗೆ ನೀಡಲಾಗಿದೆ. ಅದರ ಸಿಎನ್‌ಜಿ ಆವೃತ್ತಿಯು ಪ್ರತಿ ಕಿಲೋಗ್ರಾಂಗೆ 26.11km ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸಾಮಾನ್ಯ ಪೆಟ್ರೋಲ್ ವೇರಿಯಂಟ್‌ಗಳಲ್ಲಿ, ಇದು 103PS ಮತ್ತು 137Nm ಅನ್ನು ಉತ್ಪಾದಿಸುತ್ತದೆ ಮತ್ತು ಐಚ್ಛಿಕ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಸಹ ಪಡೆಯುತ್ತದೆ.
ಇದೇ ರೀತಿಯ ಹಿಂದಿನ ಘಟನೆಗಳು
ಟೊಯೊಟಾ ತನ್ನ ಎಂಪಿವಿಗಳ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಇದೇ ಮೊದಲಲ್ಲ. ಆಗಸ್ಟ್ 2022 ರಲ್ಲಿ, ಟೊಯೊಟಾ ಡೀಸೆಲ್-ಚಾಲಿತ ಇನ್ನೋವಾ ಕ್ರಿಸ್ಟಾ ಮಾಡೆಲ್‌ನ ಆರ್ಡರ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತ್ತು ಮತ್ತು 2023 ರ ಆರಂಭದಲ್ಲಿ ಕ್ರಿಸ್ಟಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಮತ್ತೆ ಬುಕಿಂಗ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು.
ಇದನ್ನೂ ಓದಿ: "ಟೊಯೊಟಾ ಫ್ರಾಂಕ್ಸ್" ರೀಬ್ಯಾಡ್ಜ್ ಆವೃತ್ತಿ 2024 ರಲ್ಲಿ ಲಭ್ಯವಾಗುವ ನಿರೀಕ್ಷೆ !
ಮತ್ತಷ್ಟು ಓದಿ: ರುಮಿಯಾನ್ ಆನ್ ರೋಡ್ ಬೆಲೆ