• English
  • Login / Register

Force Gurkha 5-door ನಲ್ಲಿ ಲಭ್ಯವಿಲ್ಲದ 10 ಗೇಮ್-ಚೇಂಜಿಂಗ್ ಫೀಚರ್‌ಗಳನ್ನು ನೀಡುತ್ತಿರುವ Mahindra Thar 5-ಡೋರ್

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ dipan ಮೂಲಕ ಜುಲೈ 17, 2024 05:35 pm ರಂದು ಪ್ರಕಟಿಸಲಾಗಿದೆ

  • 76 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾ ಥಾರ್ 5-ಡೋರ್ ಫೋರ್ಸ್ ಗೂರ್ಖಾ 5-ಡೋರ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ

10 Things The Mahindra Thar 5-Door Is Expected To Get Over The Force Gurkha 5-door

ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಕಳೆದ ಹಲವಾರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಶಕ್ತಿಶಾಲಿ ಆಫ್-ರೋಡ್ ವಾಹನಗಳಾಗಿವೆ. ಫೋರ್ಸ್ ಗೂರ್ಖಾವನ್ನು ಕೆಲವು ತಿಂಗಳ ಹಿಂದೆ 5-ಡೋರ್ ವರ್ಷನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ಅದರ ನೇರ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರಾ ಥಾರ್ 5-ಡೋರ್ ಆಗಸ್ಟ್ 15 ರಂದು ಲಾಂಚ್ ಅಗಲಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಉದ್ದವಾದ ಥಾರ್ ಬಿಡುಗಡೆಗೆ ಸುಮಾರು ಒಂದು ತಿಂಗಳ ಸಮಯವಿದ್ದರೂ, ಹಲವಾರು ಸ್ಪೈ ಶಾಟ್‌ಗಳು ಈಗಾಗಲೇ ಅದರ ಕೆಲವು ಪ್ರಮುಖ ಫೀಚರ್ ಗಳ ಬಗ್ಗೆ ಸುಳಿವು ನೀಡಿವೆ. ಈ ಲೇಖನದಲ್ಲಿ, ಈಗಿರುವ ಫೋರ್ಸ್ ಗೂರ್ಖಾ 5-ಡೋರ್‌ನೊಂದಿಗೆ ಹೋಲಿಸಿದರೆ 5-ಡೋರ್ ಥಾರ್ ನೀಡಬಹುದು ಎಂದು ನಿರೀಕ್ಷಿಸಲಾದ 10 ಫೀಚರ್ ಗಳ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ:

 ADAS

Mahindra Thar 5-door cabin spied

5-ಡೋರ್ ಥಾರ್‌ನ ನಮ್ಮ ಒಂದು ಸ್ಪೈ ಶಾಟ್‌ಗಳಲ್ಲಿ ಇದು ಮಹೀಂದ್ರಾ XUV700 ಯಲ್ಲಿರುವ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿರಬಹುದು ಎಂಬ ಸುಳಿವನ್ನು ನೀಡಿದೆ. ಕಡಿಮೆ ಬೆಲೆಯ ಮಹೀಂದ್ರಾ XUV 3XO ಸಬ್-4m SUV ಯಲ್ಲಿ ಕೂಡ ADAS ಅನ್ನು ನೀಡಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. 

 ಪನೋರಮಿಕ್ ಸನ್‌ರೂಫ್

Mahindra Thar 5-door sunroof

ಇತ್ತೀಚಿನ ವರ್ಷಗಳಲ್ಲಿ ಹೊಸ ಕಾರು ಖರೀದಿದಾರರಲ್ಲಿ ಸನ್‌ರೂಫ್ ಫೀಚರ್ ಹೆಚ್ಚು ಜನಪ್ರಿಯವಾಗಿದೆ. ಅಪ್ಡೇಟ್ ಆಗಿರುವ ಫೋರ್ಸ್ ಗೂರ್ಖಾ ಉದ್ದವಾದ ವೀಲ್‌ಬೇಸ್ ಮತ್ತು ಕೆಲವು ಹೊಸ ಫೀಚರ್ ಗಳನ್ನು ಪಡೆದಿದೆ, ಆದರೆ ಸನ್‌ರೂಫ್ ಅನ್ನು ಇಲ್ಲಿ ನೀಡಲಾಗಿಲ್ಲ. ಆದರೆ, ಪ್ರೊಡಕ್ಷನ್-ಸ್ಪೆಕ್ ಮಹೀಂದ್ರ ಥಾರ್ 5-ಡೋರ್‌ನ ಇತ್ತೀಚೆಗೆ ಲೀಕ್ ಆಗಿರುವ ಚಿತ್ರವು SUVಯಲ್ಲಿ ಪನೋರಮಿಕ್ ಸನ್‌ರೂಫ್ ಇರುವುದನ್ನು ಖಚಿತಪಡಿಸಿದೆ.

 ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಮ್

Mahindra XUV400 10.25-inch infotainment system

 ಈಗಿರುವ ಫೋರ್ಸ್ ಗೂರ್ಖಾ 5-ಡೋರ್ ಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡಲಾಗಿದೆ. ಆದರೆ, ಥಾರ್ 5-ಡೋರ್ ಅಪ್ಡೇಟ್ ಆಗಿರುವ ಮಹೀಂದ್ರಾ XUV400 EV ಯಲ್ಲಿ ನೀಡಲಾಗಿರುವ ದೊಡ್ಡದಾದ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯಲಿದೆ ಎಂದು ಸ್ಪೈ ಶಾಟ್‌ಗಳು ತೋರಿಸಿವೆ. ಇದರ ಜೊತೆಗೆ, ಈ ದೊಡ್ಡ ಯೂನಿಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಕೂಡ ಸಪೋರ್ಟ್ ಮಾಡುತ್ತದೆ.

 ಇದನ್ನು ಕೂಡ ಓದಿ: ಮಹೀಂದ್ರ ಥಾರ್ 5-ಡೋರ್ ಚಿತ್ರಗಳು ಆನ್‌ಲೈನ್‌ನಲ್ಲಿ ಲೀಕ್

 ಸಂಪೂರ್ಣ ಡಿಜಿಟಲ್ ಆಗಿರುವ ಡ್ರೈವರ್ ಡಿಸ್ಪ್ಲೇ

Mahindra XUV400 driver's display

 ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ, ಉದ್ದವಾದ ಥಾರ್ ಮಹೀಂದ್ರಾ XUV400 EV ಯಲ್ಲಿರುವ 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಕೂಡ ಪಡೆಯಲಿದೆ. ಗೂರ್ಖಾ 5-ಡೋರ್ ಇಲ್ಲಿ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ.

 ವೈರ್‌ಲೆಸ್ ಫೋನ್ ಚಾರ್ಜಿಂಗ್

Mahindra XUV700 wireless phone charging pad

 ಹೆಚ್ಚು ಜನರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ, ಅವುಗಳನ್ನು ನಿರಂತರವಾಗಿ ಚಾರ್ಜ್ ಮಾಡುವ ಅಗತ್ಯ ಕೂಡ ಹೆಚ್ಚಾಗಿದೆ. ಇದರಿಂದಾಗಿ ಪ್ರಯಾಣ ಮಾಡುವಾಗ ಹೆಚ್ಚಿನ ಜನರು ಚಾರ್ಜಿಂಗ್ ಕೇಬಲ್‌ಗಳನ್ನು ತಮ್ಮ ಜೊತೆ ತೆಗೆದುಕೊಂಡು ಹೋಗುತ್ತಾರೆ. ಮಹೀಂದ್ರ ಥಾರ್ 5-ಡೋರ್ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ವೈರ್‌ಗಳು ಮತ್ತು ಕೇಬಲ್‌ಗಳ ಬಳಕೆಯನ್ನು ತೆಗೆದುಹಾಕಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

 360-ಡಿಗ್ರಿ ಕ್ಯಾಮೆರಾ

Mahindra Thar 5-door spied

 ಮಹೀಂದ್ರ ಥಾರ್ 5-ಡೋರ್ ನ ಇತ್ತೀಚೆಗೆ ಲೀಕ್ ಆದ ಫೋಟೋಗಳು ORVM ನಲ್ಲಿ ಮೌಂಟ್ ಮಾಡಲಾದ ಕ್ಯಾಮೆರಾವನ್ನು ತೋರಿಸುತ್ತವೆ, ಇದು ಪ್ರೊಡಕ್ಷನ್-ಸ್ಪೆಕ್ ಮಾಡೆಲ್‌ನಲ್ಲಿ 360-ಡಿಗ್ರಿ ಕ್ಯಾಮೆರಾ ಇರುವ ಸುಳಿವನ್ನು ನೀಡುತ್ತದೆ. ಫೋರ್ಸ್ ಗೂರ್ಖಾದಲ್ಲಿ ಯಾವುದೇ ಕ್ಯಾಮೆರಾವನ್ನು ನೀಡಲಾಗಿಲ್ಲ.

 ಡ್ಯುಯಲ್-ಝೋನ್ AC

 ಮಹೀಂದ್ರ ಥಾರ್ 5-ಡೋರ್, XUV700 ನಲ್ಲಿರುವ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದುವ ನಿರೀಕ್ಷೆಯಿದೆ. ಇಲ್ಲಿ, ಗೂರ್ಖಾ ಕೇವಲ ಮಾನ್ಯುಯಲ್ AC ಯನ್ನು ಹೊಂದಿದೆ.

 6 ಏರ್‌ಬ್ಯಾಗ್ ಗಳು

 ಫೋರ್ಸ್ ಇತ್ತೀಚೆಗೆ ಗೂರ್ಖಾಗೆ ಅಪ್ಡೇಟ್ ನೀಡಿದ್ದರೂ ಕೂಡ ಅದರ ಸುರಕ್ಷತಾ ಫೀಚರ್ ಗಳನ್ನು ಸುಧಾರಿಸಲಿಲ್ಲ. 5-ಡೋರ್ ಗೂರ್ಖಾ ಸರ್ಕಾರವು ಕಡ್ಡಾಯಗೊಳಿಸಿದ ಅವಶ್ಯಕತೆಗಳನ್ನು ಪೂರೈಸಲು ಕೇವಲ 2 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಮತ್ತೊಂದೆಡೆ, 5-ಡೋರ್ ಥಾರ್ ಸ್ಟ್ಯಾಂಡರ್ಡ್ ಆಗಿ ಒಟ್ಟು 6 ಏರ್‌ಬ್ಯಾಗ್‌ಗಳನ್ನು ಪಡೆಯುವ ಸಾಧ್ಯತೆಯಿದೆ.

 ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್

The Thar, in its current 3-door avatar, gets a more powerful diesel engine than the Gurkha. Moreover, it also gets a turbo-petrol engine and also an option of an automatic gearbox. These powertrains will also likely make it to the production-spec Thar 5-door, which will thus have a more potent powertrain setup than its Force competitor.

ಈಗಿರುವ ಥಾರ್ 3-ಡೋರ್ ವರ್ಷನ್, ಗೂರ್ಖಾಗಿಂತ ಹೆಚ್ಚು ಶಕ್ತಿಶಾಲಿ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ. ಇದರ ಜೊತೆಗೆ, ಇದು ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಕೂಡ ಪಡೆಯುತ್ತದೆ. ಈ ಎಂಜಿನ್‌ಗಳನ್ನು ಪ್ರೊಡಕ್ಷನ್-ಸ್ಪೆಕ್ ಥಾರ್ 5-ಡೋರ್ ನಲ್ಲಿ ಕೂಡ ಬಳಸುವ ಸಾಧ್ಯತೆಯಿದೆ, ಹಾಗಾಗಿ ಥಾರ್ ತನ್ನ ಫೋರ್ಸ್ ಪ್ರತಿಸ್ಪರ್ಧಿಗೆ ಹೋಲಿಸಿದರೆ ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್ ಸೆಟಪ್ ಅನ್ನು ನೀಡುತ್ತದೆ.

Also Read: Could The Force Gurkha Get An Automatic Option Soon?

ಇದನ್ನು ಕೂಡ ಓದಿ: ಫೋರ್ಸ್ ಗೂರ್ಖಾ ಶೀಘ್ರದಲ್ಲೇ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುವ ಸಾಧ್ಯತೆ?

 ರಿಯರ್ ಡಿಸ್ಕ್ ಬ್ರೇಕ್ ಗಳು

5 door Mahindra Thar rear

 ಮಹೀಂದ್ರ ಥಾರ್ 5-ಡೋರ್ ರಿಯರ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಂತೆ ಉತ್ತಮ ಸುರಕ್ಷತಾ ಫೀಚರ್ ಗಳನ್ನು ಪಡೆಯಲಿದೆ (ಹಿಂದಿನ ಟೆಸ್ಟ್ ಮಾಡೆಲ್ ಗಳಲ್ಲಿ ಕೂಡ ನೋಡಲಾಗಿದೆ), ಇದು ಬ್ರೇಕಿಂಗ್ ಪರ್ಫಾರ್ಮೆನ್ಸ್ ಅನ್ನು ಸುಧಾರಿಸಲು ಸಹಾಯ ಮಾಡಬಹುದು. ಅಪ್ಡೇಟ್ ಆಗಿರುವ ಗೂರ್ಖಾ ಮುಂಭಾಗದ ವೀಲ್ ಗಳಲ್ಲಿ ಮಾತ್ರ ಡಿಸ್ಕ್ ಬ್ರೇಕ್ ಅನ್ನು ಪಡೆಯುತ್ತದೆ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ನೀಡಲಾಗಿದೆ.

 ಈ ಕ್ಷಣದಲ್ಲಿ, ಮಹೀಂದ್ರ ಥಾರ್ 5-ಡೋರ್ ಫೋರ್ಸ್ ಗೂರ್ಖಾ 5-ಡೋರ್‌ಗೆ ಹೋಲಿಸಿದರೆ ಉತ್ತಮವಾಗಿ ಕಾಣುತ್ತದೆ, ಆದರೆ ಅಂತಿಮ ನಿರ್ಧಾರವು ಆಗಸ್ಟ್ 15 ರಂದು ಲಾಂಚ್ ಆದ ನಂತರವಷ್ಟೇ ಮಾಡಬಹುದಾಗಿದೆ. ಮಹೀಂದ್ರ ಥಾರ್ 5-ಡೋರ್ ಬೆಲೆಯು 15 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಇದು ಫೋರ್ಸ್ ಗೂರ್ಖಾ 5-ಡೋರ್ ಗೆ ನೇರ ಪ್ರತಿಸ್ಪರ್ಧಿಯಾಗಿದೆ (ಬೆಲೆ ರೂ. 18 ಲಕ್ಷ), ಮತ್ತು ಮಾರುತಿ ಜಿಮ್ನಿಗೆ ಹೋಲಿಸಿದರೆ ದೊಡ್ಡ ಗಾತ್ರದ ಪರ್ಯಾಯ ಆಯ್ಕೆಯಾಗಿದೆ (ಬೆಲೆಯು ರೂ. 12.74 - 14.95 ಲಕ್ಷ).

 ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ

 ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: ಮಹೀಂದ್ರ ಥಾರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌ ROXX

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience